ಶೀರ್ಷಿಕೆ : ತಹ ತಹ..... 95 ಮತಾಂಧರ ಅಶ್ವಮೇಧದ ಕುದುರೆ ತಡೆಯುವ ಮಂತ್ರ; ಕಾಂಗ್ರೆಸ್ ಬೆಂಬಲಿಸುವ ತಂತ್ರ..
ಲಿಂಕ್ : ತಹ ತಹ..... 95 ಮತಾಂಧರ ಅಶ್ವಮೇಧದ ಕುದುರೆ ತಡೆಯುವ ಮಂತ್ರ; ಕಾಂಗ್ರೆಸ್ ಬೆಂಬಲಿಸುವ ತಂತ್ರ..
ತಹ ತಹ..... 95 ಮತಾಂಧರ ಅಶ್ವಮೇಧದ ಕುದುರೆ ತಡೆಯುವ ಮಂತ್ರ; ಕಾಂಗ್ರೆಸ್ ಬೆಂಬಲಿಸುವ ತಂತ್ರ..
ಬೆಳಗಾವಿ ಅಧಿವೇಶನದಲ್ಲಿ ಈನಮ್ಮಮಂತ್ರಿಮಹೋದಯ ಶಾಸಕರುಗಳು ಹತ್ತೇದಿನಇದ್ದುತಿಂದುಂಡ ಖರ್ಚುಏಳೂಕಾಲು ಕೋಟಿಎಂಬುದನ್ನು ಕೇಂದ್ರವಾಗಿಟ್ಟುಕೊಂಡು ಪ್ರಜಾಪ್ರಭುತ್ವದ ಪ್ರಸ್ತುತ ಪರಿಸ್ಥಿತಿಯನ್ನು ವಿಶ್ಲೇಷಿಸಿ “ಪ್ರಭುಗಳ ಭೋಜನ ಹಾಗೂ ಪ್ರಜೆಗಳ ನಿರ್ಲಿಪ್ತನ” ಎನ್ನುವ ಲೇಖನ ಬರೆದಿದ್ದೆ.
ಈಲೇಖನಓದಿಯಾರಿಗೆಎಷ್ಟುತಲ್ಲಣವಾಯ್ತೋ ಗೊತ್ತಿಲ್ಲ. ಆದರೆಹಿರಿಯರಂಗಕರ್ಮಿಗಳಾದ ರಂಗಸಂಪದ ಲೋಕೇಶರು ಮಾತ್ರ ಭಾರೀ ತಳಮಳದಿಂದ ಪೋನಾಯಿಸಿದರು. ‘ಚುನಾವಣೆಗಳು ಮುಂದಿರುವಾಗ ಕಾಂಗ್ರೆಸ್ ಸರಕಾರವನ್ನು ಬೈದುಬರೆಯುವುದು ಸೂಕ್ತವಲ್ಲ’ ಎಂದರು. ಹಾಗಂತಲೋಕೇಶರವರು ಕಾಂಗ್ರೆಸ್ ಪಕ್ಷದವರೂ ಅಲ್ಲಾ, ಕಾಂಗ್ರೆಸ್ ಸಪೋರ್ಟರ್ ಕೂಡಾಅಲ್ಲವೇಅಲ್ಲ. 'ಕೋಮುವಾದಿ ದೇಶಭಕ್ತರು ಸಂಘಟಿತರಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಕಾಂಗ್ರೆಸ್ಸನ್ನು ಟೀಕಿಸುವುದೆಂದರೆ ಕೋಮುಶಕ್ತಿಗಳಿಗೆ ಬಲತುಂಬಿದಂತೆ' ಎಂಬುದುಅವರಆತಂಕಕ್ಕೆ ಕಾರಣವಾಗಿತ್ತು. ಅವರಮಾತಲ್ಲೂ ಒಂದುರೀತಿಯತರ್ಕಇದ್ದೇಇದೆ. ದೊಡ್ಡದೊಂದು ಸಾಂಕ್ರಾಮಿಕ ವ್ಯಾಧಿಯನ್ನು ತಡೆಗಟ್ಟಲು ಚಿಕ್ಕಪುಟ್ಟಅಲರ್ಜಿಗಳನ್ನು ಸಹಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಇದುಲೊಕೇಶರವರೊಬ್ಬರ ತಹತಹಅಲ್ಲಾ... ಬಹುತೇಕ ಪ್ರಗತಿಪರ ವ್ಯಕ್ತಿಗಳು ಹಾಗೂ ಸಂಘಟನೆಗಳ ಸಧ್ಯದತಳಮಳವಾಗಿದೆ.
ಯಾಕೆಂದರೆ...ಇಡೀದೇಶದಲ್ಲಿ ಮನುವಾದಿ ಕೋಮುಶಕ್ತಿಗಳು ತಮ್ಮವಿಕ್ಷಿಪ್ತ ವಿನಾಶಕಾರಿ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿವೆ. ಹುಸಿದೇಶಭಕ್ತಿ ಹಾಗೂಅಚ್ಚೆದಿನ್ಭ್ರಮೆಗಳಲ್ಲಿ ಜನರನ್ನು ಮರುಳುಮಾಡುತ್ತಲೇ ಕೇಂದ್ರಸರಕಾರದಆಡಳಿತವನ್ನೇ ವಶಪಡಿಸಿಕೊಂಡಿವೆ. ಒಂದೊಂದೇ ರಾಜ್ಯಗಳ ಅಧಿಕಾರವನ್ನು ಆಪೋಷಣಪಡೆದುಕೊಳ್ಳುತ್ತಿವೆ. ಕರ್ನಾಟಕದಲ್ಲೂ ಅದೇಮೋದಿಮೇನಿಯಾವನ್ನು ಹುಟ್ಟುಹಾಕಿರಾಜ್ಯಾಡಳಿತ ಪಡೆಯಲುಶತಾಯಗತಾಯಪ್ರಯತ್ನಿಸುತ್ತಿವೆ.
ಪ್ರಸ್ತುತ ಕರ್ನಾಟಕದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಸರಕಾರಏನೆಲ್ಲಾ ಜನಪರಕೆಲಸಗಳನ್ನು ಮಾಡಿದರೂ ಅವುಗಳನ್ನೆಲ್ಲಾ ಮರೆಸಿಮತೀಯಉನ್ಮಾದದ ವಿಷವನ್ನು ಜನರಲ್ಲಿ ತುಂಬಿಚುನಾವಣೆ ಗೆಲ್ಲುವುದು ಬಿಜೆಪಿಪಕ್ಷದಗುರಿಯಾಗಿದೆ. ವಾಸ್ತವಕ್ಕಿಂತಾ ಅವಾಸ್ತವ ಸುಳ್ಳುಗಳನ್ನೇ ಸತ್ಯವೆಂದು ನಂಬಿಸುವ ಕೈಂಕರ್ಯ ಮನುವಾದಿಗಳಿಗೆ ರಕ್ತಗತವಾಗಿ ಅವರವೈದಿಕಪರಂಪರೆಯಿಂದಾ ಬಳುವಳಿಯಾಗಿ ಬಂದಿದೆ.
ಕಳ್ಳರುಸುಳ್ಳರು ಲಂಚಬಾಕರು ಭ್ರಷ್ಟರು ಎಂದುಕಾಂಗ್ರೆಸ್ಸನ್ನು ಆಡಿಕೊಳ್ಳಬಹುದು. ಆದರೆಅವೆಲ್ಲಕ್ಕಿಂತಲೂ ಅಪಾಯಕಾರಿಯಾದದ್ದು ಈಮತೀಯತೆಯ ಉನ್ಮಾದಹಾಗೂಮನುವಾದಿತನ. ಕಾಂಗ್ರೆಸ್ ಸರಕಾರವನ್ನು ಜನಹೋರಾಟಗಳ ಮೂಲಕಮಣಿಸಬಹುದು. ಆದರೆಈಸಂಘಪರಿವಾರದ ಪ್ಯಾಸಿಸ್ಟ್ ಸರಕಾರವನ್ನು ಹೋರಾಟಪ್ರತಿಭಟನೆಗಳಿಂದ ಮಣಿಸುವುದು ಕಷ್ಟಸಾಧ್ಯ. ಕಾಂಗ್ರೆಸ್ಸಿಗರು ‘ಜಾತಿರಾಜಕೀಯಮಾಡಿದ್ದಾರೆ... ಅಲ್ಪಸಂಖ್ಯಾತರನ್ನು ಓಲೈಸಿದ್ದಾರೆ’ ಎನ್ನುವುದು ಎಷ್ಟುಸತ್ಯವೋಅಷ್ಟೇಸತ್ಯಈಸಂಘಿಗಳು ಜಾತಿಗಳನ್ನು ಒಡೆದಿರುವುದು ಹಾಗೂಹಿಂದುತ್ವದ ಹೆಸರಲ್ಲಿ ಅಲ್ಪಸಂಖ್ಯಾತರ ವಿರುದ್ಧ ಮತಾಂಧತೆಯನ್ನು ಕೆರಳಿಸಿರುವುದು. ಚುನಾವಣೆ ಗೆಲ್ಲುವುದು ಹಾಗೂಅಧಿಕಾರವನ್ನು ಪಡೆದುದೇಶವಾಳುವುದು ಮಾತ್ರಕಾಂಗ್ರೆಸ್ಸಿನ ಗುರಿಯಾಗಿದೆ. ಆದರೆಇದರೊಂದಿಗೆ ಇಡೀದೇಶದಲ್ಲಿ ಏಕಭಾಷೆ,ಏಕ ಸಂಸ್ಕೃತಿಯನ್ನು ಜಾರಿಗೊಳಿಸಿ ವೈದಿಕಶಾಹಿ ವರ್ಣವ್ಯವಸ್ಥೆಯನ್ನು ಅನುಷ್ಟಾನಗೊಳಿಸುವುದು ಸಂಘಪರಿವಾರದ ಹಿಡನ್ಅಜೆಂಡಾಆಗಿದೆ. ಭಾರತದಸಂವಿಧಾನದ ಚೌಕಟ್ಟಿನೊಳಗೆ ಕಾಂಗ್ರೆಸ್ ತನ್ನಆಡಳಿತವನ್ನು ಸಾಧ್ಯವಾದಷ್ಟೂ ನಡೆಸುತ್ತಲೇ ಬಂದಿದ್ದರೆ, ಈಸಂಘಪರಿವಾರದ ಕೃಪಾಪೋಷಿತ ಬಿಜೆಪಿಯು ಸಂವಿಧಾನವನ್ನು ನಿಧಾನವಾಗಿ ನಿರಾಕರಿಸುತ್ತಾ ಅಂತಿಮವಾಗಿ ಮನುಸ್ಮೃತಿಯನ್ನೇ ಈದೇಶದಸಂವಿಧಾನವನ್ನಾಗಿಸುವ ಒಳಹುನ್ನಾರವನ್ನು ಹೊಂದಿದೆ.
ಆದ್ದರಿಂದ.. ಈದೇಶವನ್ನು ಮನುವಾದಿಗಳಿಂದ ರಕ್ಷಿಸಲು, ಈದೇಶದಜನರನ್ನು ಮತಾಂಧರಕಪಿಮುಷ್ಟಿಯಿಂದ ಕಾಪಾಡಲು, ಈದೇಶವನ್ನು ಧರ್ಮನಿರಪೇಕ್ಷಿತವಾಗಿ ಕಟ್ಟಲುನಮಗೆಪರ್ಯಾಯಜನಶಕ್ತಿಯ ಅಗತ್ಯವಿದೆ. ಆದರೆಮನುವಾದಿಗಳನ್ನು ಎದುರಿಸುವ ಸಶಕ್ತ ಪರ್ಯಾಯಗಳಲ್ಲಿ ಅನಿವಾರ್ಯವಾಗಿ ಕಾಂಗ್ರೆಸ್ ಒಂದೇಈಗಿನಆಯ್ಕೆಯಾಗಿದೆ. ದೇಶಾದ್ಯಂತ ಈಗಲೂಕಾಂಗ್ರೆಸ್ಸಿಗೆ ಮಾನ್ಯತೆ ಇದೆ. ಕಾಂಗ್ರೆಸ್ ಮಾತ್ರಬೇರೆಲ್ಲಾ ಬಿಜೇಪಿಯೇತರ ಪ್ರಾದೇಶಿಕ ಪಕ್ಷಹಾಗೂಸಂಘಟನೆಗಳನ್ನು ಒಟ್ಟುಗೂಡಿಸಿಕೊಂಡು ಹೋಗುವಸಾಧ್ಯತೆಗಳಿವೆಯೆಂದು ಬಹುತೇಕಪ್ರಗತಿಪರರು ನಂಬಿದ್ದಾರೆ. ಅನೇಕಾನೇಕ ಪ್ರಗತಿಪರ ಪ್ರಜ್ಞಾವಂತರು ಇಂದುಕಾಂಗ್ರೆಸ್ಸನ್ನು ಬೆಂಬಲಿಸುತ್ತಿರುವುದು ಅದರಮೇಲಿನಪ್ರೀತಿಯಿಂದ ಅಲ್ಲವೇ ಅಲ್ಲ. ಸಂಘಪರಿವಾರದ ಪ್ಯಾಸಿಸ್ಟ್ ಆಡಳಿತದಅಪಾಯಗಳಅರಿವಿದ್ದದ್ದರಿಂದ ಅನಿವಾರ್ಯವಾಗಿ ಕಾಂಗ್ರೆಸ್ ಸಪೋರ್ಟಮಾಡಬೇಕಾಗಿ ಬಂದಿದೆ.
ಕಾಂಗ್ರೆಸ್ ತನ್ನಸ್ವಯಂಕೃತ ಅಪರಾಧಗಳಿಂದಾಗಿ ತನ್ನಶಕ್ತಿಹಾಗೂಸಾಮರ್ಥ್ಯವನ್ನು ಎರಡು ದಶಕಗಳಿಂದ ಕಳೆದುಕೊಳ್ಳುತ್ತಾ ಬಂದಿದೆ. ಕೋಮುವಾದಿಗಳು ಬಾಲಬಿಚ್ಚಿದಾಗೆಲ್ಲಾ ನಿರ್ದಾಕ್ಷಿಣ್ಯವಾಗಿ ಕಾನೂನುಕ್ರಮತೆಗೆದುಕೊಂಡು ಸಂಘಪರಿವಾರದ ಚೇಲಾಗಳಬಾಲಗಳನ್ನು ಕತ್ತರಿಸುತ್ತಾ ಬಂದಿದ್ದರೆ ಆಜನವಿರೋಧಿ ಶಕ್ತಿಗಳು ಇಷ್ಟೊಂದು ಹೆಚ್ಚಿಕೊಳ್ಳುತ್ತಿರಲಿಲ್ಲಾ. ಬಾಬರಿಮಸೀದಿದ್ವಂಸವಾದಾಗ, ಗುಜರಾತಲ್ಲಿ ಮಾರಣಹೋಮನಡೆದಾಗ, ಮಹಾರಾಷ್ಟ್ರದಲ್ಲಿ ಶಿವಸೇನೆ ಉಪದ್ರವ ಕೊಟ್ಟಾಗ, ಅದರರೂವಾರಿಗಳನ್ನೆಲ್ಲಾ ಸಾಮೂಹಿಕವಾಗಿ ಶಿಕ್ಷಿಸಿ ಜನರಿಗೆಅವರಉನ್ಮಾದರಾಜಕಾರಣವನ್ನು ತಿಳಿಸಿದ್ದರೆ ಇವತ್ತುಸಂಘಿಗಳು ಸಿಂಹಾಸನವೇರಲು ಸಾಧ್ಯವೇ ಇರುತ್ತಿರಲಿಲ್ಲ.
ಆಗಿದ್ದೆಲ್ಲಾ ಆಗಿಹೋಗಿದೆ. ಈಗಹೇಗೆಈಮನುವಾದಿಗಳ ಅಶ್ವಮೇಧದ ಯಾಗದಕುದುರೆಯನ್ನು ಕಟ್ಟಿಹಾಕುವುದು ಎಂಬುದರತ್ತ ಪ್ರತಿತಂತ್ರಗಾರಿಕೆ ಹೆಣೆಯಬೇಕಿದೆ. ಕರ್ನಾಟಕದಲ್ಲಿ ಒಂದುಪ್ರಾದೇಶಿಕ ಪಕ್ಷದಿಂದ ಇಲ್ಲವೇಎಡಪಕ್ಷಗಳಿಂದ ಕೊಬ್ಬಿನಿಂತ ಮತಾಂಧ ಕುದುರೆಯನ್ನು ಕಟ್ಟಿಹಾಕುವುದು ಸಾಧ್ಯವಿಲ್ಲ. ಹಾಗಾಗಿಇರುವುದರಲ್ಲೇ ಒಂದಿಷ್ಟು ಜನಪರವಾಗಿ ಕೆಲಸಮಾಡಿರುವೆ ಎಂದುಹೇಳಿಕೊಳ್ಳುವ ಹಾಲಿಕಾಂಗ್ರೆಸ್ ಸರಕಾರಕ್ಕೆ ಕಾಂಗ್ರೆಸ್ಸೇತರ ಪ್ರಜ್ಞಾವಂತರು ಬೇರೆ ದಾರಿಯಿಲ್ಲದೇ ಬೆಂಬಲಿಸುತ್ತಿದ್ದಾರೆ. ಕೋಮುವಾದಿ ಮುಖವಾಡಿತ ಸರಕಾರಕ್ಕಿಂತ ಜ್ಯಾತ್ಯಾತೀತ ಮುಖವಾಡದ ಕಾಂಗ್ರೆಸ್ ಅಂತವರೆಲ್ಲರ ಅನಿವಾರ್ಯ ಆಯ್ಕೆಯಾಗಿದೆ.
ಈಗಂಬೀರವಾದ ವಿಚಾರದಲೇಖನದಲ್ಲಿ ಒಂದುಜೋಕ್ನೆನಪಾಗುತ್ತಿದೆ. ಒಬ್ಬಅಂಗಡಿಗೆ ಹೋಗಿಒಂದುಪ್ಯಾಕ್ಸಿಗರೇಟ್ ಕೊಡಲುಕೇಳುತ್ತಾನೆ. ಅಂಗಡಿಯಾತ ಗಿರಾಕಿಯನ್ನು ರೇಗಿಸಲು ‘ಏಡ್ಸಿನಸಿಗರೇಟ್ ಪ್ಯಾಕ್ಇದೆಕೊಡ್ಲಾ’ ಎಂದುಕೇಳುತ್ತಾನೆ. ಆಗ ವಿಪರೀತ ಆತಂಕಗೊಂಡ ಗಿರಾಕಿ" ಹೇಅದಲ್ಲಾರೀ...ನಂಗೆಆಕ್ಯಾನ್ಸರಿನದ್ದು ಸಿಗರೇಟ್ ಕೊಡಿ" ಎನ್ನುತ್ತಾನೆ. ಆತನಿಗೆಏಡ್ಸಿಗಿಂತಾ ಕ್ಯಾನ್ಸರ್ ತರುವಸಿಗರೇಟೆ ಪರ್ಯಾಯಆಯ್ಕೆಯಾಗಿದೆ. ಈಗಯಾರನ್ನಾದ್ರೂ ಕ್ಯಾನ್ಸರ್ ಮತ್ತುಏಡ್ಸರೋಗದಲ್ಲಿ ಯಾವುದನ್ನು ಆಯ್ಕೆಮಾಡಿಕೊಳ್ಳುವಿರಿ ಎಂದುಕೇಳಿದರೆ ಕ್ಯಾನ್ಸರ್ರೇ ಇರಲಿಯಾಕೆಂದರೆ ಬೇರೆಪರ್ಯಾಯಆಯ್ಕೆಗಳಿಲ್ಲವಲ್ಲಾ?
ಕ್ಯಾನ್ಸರ್ ಬಂದರೆಸಂಬಂಧಿಸಿದ ದೇಹದ ಸೀಮಿತ ಭಾಗವನ್ನು ತೆಗೆದುಹಾಕಿಜೀವವನ್ನು ಉಳಿಸಿಕೊಳ್ಳುವ ಸಾಧ್ಯತೆಗಳಿವೆ. ಆದರೆಏಡ್ಸ್ಬಂದರೆದಿನದಿಂದ ದಿನಕ್ಕೆ ಪ್ರತಿರೊಧದ ಶಕ್ತಿಯೇ ಕಡಿಮೆಯಾಗುತ್ತಾ ಹೋಗಿಇತರೆಲ್ಲಾ ರೋಗಗಳೂಅಟಕಾಯಿಸಿಕೊಂಡು ದೇಹರೋಗಗಳತವರಾಗಿಅವಸಾನಹೊಂದುತ್ತದೆ ಇಲ್ಲಿ ದೇಹಎಂಬುದನ್ನು ದೇಶಎಂದುಕೊಂಡರೆ ಸಾಕು..ಉಳಿದದ್ದೆಲ್ಲಾ ತಾನೇ ತಾನಾಗಿ ಅರ್ಥವಾಗುತ್ತದೆ. ಹಾಗೆಯೇಈಗಮತೀಯವಾದಿಗಳನ್ನು ವಿರೋಧಿಸುವವರಿಗೆ ಕಾಂಗ್ರೆಸ್ ಅನಿವಾರ್ಯದ ಆಯ್ಕೆಯಾಗಿದೆ. ಬೇರೆಪರ್ಯಾಯಗಳಿದ್ದರೂ ಅವುಗಳಿಗೆ ಸಂಘಿಗಳಅಶ್ವವನ್ನು ಕಟ್ಟಿಹಾಕುವಜನಬಲಹಾಗೂಹಣಬಲವಿಲ್ಲವಾಗಿದೆ.. ಹೀಗಾಗಿಕಾಂಗ್ರೆಸ್ಸನ್ನು ಬೆಂಬಲಿಸುವವರು ಕಾಂಗ್ರೆಸ್ಸಿಗರೇ ಆಗಬೇಕೆಂದೇನಿಲ್ಲ. ಮತಾಂಧಸಂಘಪರಿವಾರವನ್ನು ವಿರೋಧಿಸುವವರು ಕಾಂಗ್ರೆಸ್ ಸೇರಬೇಕೆಂದೂ ಇಲ್ಲಾ.. ಅಗೋಚರ ರಕ್ತಬೀಜಾಸುರ ರಕ್ಕಸನನ್ನು ಮಟ್ಟಹಾಕಲು ಪರಿಚಿತದೆವ್ವವನ್ನು ಬೆಂಬಲಿಸುವುದು ಪ್ರಸ್ತುತ ತಂತ್ರಗಾರಿಕೆಯಾಗಿದೆ. ಯಾಕೆಂದರೆ ಈಅನುಭವೀದೆವ್ವಕ್ಕೆ ಮಾತ್ರರಕ್ಕಸನರಹಸ್ಯಗಳು ಗೊತ್ತಿವೆ ಎಂಬುದುಹಲವಾರುಪ್ರಗತಿಪರರ ನಂಬಿಕೆಯಾಗಿದೆ. ಇವರನಂಬಿಕೆದಿಟವಾಗಲಿ... ಕೋಮುರಕ್ಕಸ ಹತನಾಗಲಿ... ಸಂವಿಧಾನವನ್ನು ಗೌರವಿಸುವ, ಜನರನ್ನು ಬೇಧಭಾವತೋರದೇಸಂರಕ್ಷಿಸುವ ಸರಕಾರಆಡಳಿತ ಮಾಡಲಿ ಎಂಬುದೇ ಬಹುಜನರ ಆಶಯವಾಗಿದೆ.
-±À²PÁAvÀ AiÀÄqÀºÀ½î
ಹೀಗಾಗಿ ಲೇಖನಗಳು ತಹ ತಹ..... 95 ಮತಾಂಧರ ಅಶ್ವಮೇಧದ ಕುದುರೆ ತಡೆಯುವ ಮಂತ್ರ; ಕಾಂಗ್ರೆಸ್ ಬೆಂಬಲಿಸುವ ತಂತ್ರ..
ಎಲ್ಲಾ ಲೇಖನಗಳು ಆಗಿದೆ ತಹ ತಹ..... 95 ಮತಾಂಧರ ಅಶ್ವಮೇಧದ ಕುದುರೆ ತಡೆಯುವ ಮಂತ್ರ; ಕಾಂಗ್ರೆಸ್ ಬೆಂಬಲಿಸುವ ತಂತ್ರ.. ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ತಹ ತಹ..... 95 ಮತಾಂಧರ ಅಶ್ವಮೇಧದ ಕುದುರೆ ತಡೆಯುವ ಮಂತ್ರ; ಕಾಂಗ್ರೆಸ್ ಬೆಂಬಲಿಸುವ ತಂತ್ರ.. ಲಿಂಕ್ ವಿಳಾಸ https://dekalungi.blogspot.com/2017/06/95.html
0 Response to "ತಹ ತಹ..... 95 ಮತಾಂಧರ ಅಶ್ವಮೇಧದ ಕುದುರೆ ತಡೆಯುವ ಮಂತ್ರ; ಕಾಂಗ್ರೆಸ್ ಬೆಂಬಲಿಸುವ ತಂತ್ರ.."
ಕಾಮೆಂಟ್ ಪೋಸ್ಟ್ ಮಾಡಿ