ಶೀರ್ಷಿಕೆ : ಜಿ.ಪಂ. ಅಧ್ಯಕ್ಷರಿಂದ ವಿಕಲಚೇತನರಿಗೆ ತ್ರಿಚಕ್ರ ಮೋಟಾರು ವಾಹನ ವಿತರಣೆ
ಲಿಂಕ್ : ಜಿ.ಪಂ. ಅಧ್ಯಕ್ಷರಿಂದ ವಿಕಲಚೇತನರಿಗೆ ತ್ರಿಚಕ್ರ ಮೋಟಾರು ವಾಹನ ವಿತರಣೆ
ಜಿ.ಪಂ. ಅಧ್ಯಕ್ಷರಿಂದ ವಿಕಲಚೇತನರಿಗೆ ತ್ರಿಚಕ್ರ ಮೋಟಾರು ವಾಹನ ವಿತರಣೆ
ಕೊಪ್ಪಳ ಮೇ. 09 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಪಂಚಾಯತಿಯ 2016-17 ನೇ ಸಾಲಿನಲ್ಲಿ ವಿಕಲಚೇತನರಿಗೆ ಮೀಸಲಿರಿಸಿದ ಅನುದಾನದಡಿ ಜಿಲ್ಲೆಯ 12 ವಿಕಲಚೇತನರಿಗೆ ಜಿ.ಪಂ. ಅಧ್ಯಕ್ಷ ಶೇಖರಪ್ಪ ನಾಗರಳ್ಳಿ ಹಾಗೂ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಜಿಲ್ಲಾಡಳಿತ ಭವನದ ಜಿ.ಪಂ. ಕಚೇರಿ ಆವರಣದಲ್ಲಿ ಮಂಗಳವಾರದಂದು ವಿತರಣೆ ಮಾಡಿದರು.
ಜಿಲ್ಲಾ ಪಂಚಾಯತಿಯ 2016-17 ನೇ ಸಾಲಿನಲ್ಲಿ ವಿಕಲಚೇತನರಿಗಾಗಿ ಮೀಸಲಿರಿಸಿದ ಅನುದಾನದಡಿ ಪ್ರತಿ ತ್ರಿಚಕ್ರ ಮೋಟಾರು ವಾಹನಕ್ಕೆ ರೂ. 68500 ಗಳಂತೆ ಒಟ್ಟು 8.22 ಲಕ್ಷ ರೂ. ಅನುದಾನವನ್ನು ವಿನಿಯೋಗಿಸಿ ಜಿಲ್ಲೆಯ 12 ವಿಕಲಚೇತನ ಫಲಾನುಭವಿಗಳಿಗೆ ತ್ರಿಚಕ್ರ ಮೋಟಾರು ವಾಹನ ವಿತರಣೆ ಮಾಡಲಾಯಿತು. ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಜಿ.ಪಂ. ಸದಸ್ಯರುಗಳಾದ ಶಾಂತಾ ರಮೇಶ ನಾಯಕ್, ಭೀಮಣ್ಣ ಅಗಸಿಮುಂದಿನ, ಅಮರೇಶ್ ಗೋನಾಳ, ಗವಿಸಿದ್ದಪ್ಪ ಕರಡಿ, ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಎಂ. ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಹೀಗಾಗಿ ಲೇಖನಗಳು ಜಿ.ಪಂ. ಅಧ್ಯಕ್ಷರಿಂದ ವಿಕಲಚೇತನರಿಗೆ ತ್ರಿಚಕ್ರ ಮೋಟಾರು ವಾಹನ ವಿತರಣೆ
ಎಲ್ಲಾ ಲೇಖನಗಳು ಆಗಿದೆ ಜಿ.ಪಂ. ಅಧ್ಯಕ್ಷರಿಂದ ವಿಕಲಚೇತನರಿಗೆ ತ್ರಿಚಕ್ರ ಮೋಟಾರು ವಾಹನ ವಿತರಣೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಜಿ.ಪಂ. ಅಧ್ಯಕ್ಷರಿಂದ ವಿಕಲಚೇತನರಿಗೆ ತ್ರಿಚಕ್ರ ಮೋಟಾರು ವಾಹನ ವಿತರಣೆ ಲಿಂಕ್ ವಿಳಾಸ https://dekalungi.blogspot.com/2017/05/blog-post_67.html
0 Response to "ಜಿ.ಪಂ. ಅಧ್ಯಕ್ಷರಿಂದ ವಿಕಲಚೇತನರಿಗೆ ತ್ರಿಚಕ್ರ ಮೋಟಾರು ವಾಹನ ವಿತರಣೆ"
ಕಾಮೆಂಟ್ ಪೋಸ್ಟ್ ಮಾಡಿ