ಶೀರ್ಷಿಕೆ : ರಾಜ್ಯಮಟ್ಟದ ಯುವ ಸಮ್ಮೇಳನ : ಪಾಲ್ಗೊಳ್ಳಲು ಅರ್ಜಿ ಆಹ್ವಾನ
ಲಿಂಕ್ : ರಾಜ್ಯಮಟ್ಟದ ಯುವ ಸಮ್ಮೇಳನ : ಪಾಲ್ಗೊಳ್ಳಲು ಅರ್ಜಿ ಆಹ್ವಾನ
ರಾಜ್ಯಮಟ್ಟದ ಯುವ ಸಮ್ಮೇಳನ : ಪಾಲ್ಗೊಳ್ಳಲು ಅರ್ಜಿ ಆಹ್ವಾನ
ಕೊಪ್ಪಳ, ಮೇ. 09 (ಕರ್ನಾಟಕ ವಾರ್ತೆ): ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ 2015-16ನೇ ಸಾಲಿನ ರಾಜ್ಯಮಟ್ಟದ ಯುವ ಸಮ್ಮೇಳನ, ಕಾರ್ಯಾಗಾರ ಹಾಗೂ ತರಬೇತಿ ಕಾರ್ಯಕ್ರಮ ಮೇ. 23 ರಿಂದ 25 ರವರೆಗೆ ಮೂರು ದಿನಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆ ಕುಕ್ಕೆಸುಬ್ರಹ್ಮಣ್ಯದ ವಲ್ಲೀಶ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದು, ಆಸಕ್ತರು ಪಾಲ್ಗೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ರಾಜ್ಯಮಟ್ಟದ ಯುವ ಸಮ್ಮೇಳನ, ಕಾರ್ಯಾಗಾರ ಹಾಗೂ ತರಬೇತಿ ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲೆಯಿಂದ ಯುವ ಸಂಘಗಳ ವತಿಯಿಂದ 5ಜನ ಯುವಕರು ಹಾಗೂ 5ಜನ ಯುವತಿಯರು ಪಾಲ್ಗೊಳ್ಳಬಹುದು. ಅಲ್ಲದೇ ಎನ್.ಎಸ್.ಎಸ್/ ಎನ್.ಸಿ.ಸಿ/ ರೋವರ್ಸ್ ಅಂಡ್ ರೇಂಜರ್ಸ್‍ನ 5ಜನ ಯುವಕರು ಹಾಗೂ 5ಜನ ಯುವತಿ ಪ್ರತಿನಿಧಿಗಳು, ನೆಹರು ಯುವ ಕೇಂದ್ರ ಓರ್ವ ಯುವಕ ಹಾಗೂ ಯುವತಿ ಸ್ವಯಂ ಸೇವಕರು, ಓರ್ವ ಯುವಕ ಹಾಗೂ ಯುವತಿ ಯುವ ಪರಿವರ್ತಕರು ಮತ್ತು 3ಜನ ಯುವಕ ಹಾಗೂ 3ಜನ ಯುವತಿ ಜನಪದ ಕಲಾವಿದರು ಭಾಗವಹಿಸಲು ಅವಕಾಶವಿದ್ದು, ಪ್ರತಿನಿಧಿಗಳಿಗೆ ಇಲಾಖೆಯಿಂದ ಸಾಮಾನ್ಯ ವಸತಿ ಊಟೋಪಹಾರದ ವ್ಯವಸ್ಥೆ ಕಲ್ಪಿಸಲಾಗುವುದು. ಸಮಾರೂಪ ಸಮಾರಂಭದ ನಂತರ ಪ್ರಯಾಣ ಭತ್ಯೆ ಪಾವತಿಸಲಾಗುವುದು.
ಭಾಗವಹಿಸುವ ಆಸಕ್ತರು ಮೇ. 15 ರೊಳಗಾಗಿ ಪ್ರವೇಶ ಅರ್ಜಿಯನ್ನು ಪಡೆದು ಭರ್ತಿ ಮಾಡಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಖುದ್ದಾಗಿ ಅಥವಾ ಯುವ ಸಮಾಲೋಚಕ ಭೀಮೇಶ ಕುರಿ-9845858494 ಕ್ಕೆ ಸಂಪರ್ಕಿಸಬಹುದು ಎಂದು ಕೊಪ್ಪಳ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ರಾಜ್ಯಮಟ್ಟದ ಯುವ ಸಮ್ಮೇಳನ : ಪಾಲ್ಗೊಳ್ಳಲು ಅರ್ಜಿ ಆಹ್ವಾನ
ಎಲ್ಲಾ ಲೇಖನಗಳು ಆಗಿದೆ ರಾಜ್ಯಮಟ್ಟದ ಯುವ ಸಮ್ಮೇಳನ : ಪಾಲ್ಗೊಳ್ಳಲು ಅರ್ಜಿ ಆಹ್ವಾನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ರಾಜ್ಯಮಟ್ಟದ ಯುವ ಸಮ್ಮೇಳನ : ಪಾಲ್ಗೊಳ್ಳಲು ಅರ್ಜಿ ಆಹ್ವಾನ ಲಿಂಕ್ ವಿಳಾಸ https://dekalungi.blogspot.com/2017/05/blog-post_58.html
0 Response to "ರಾಜ್ಯಮಟ್ಟದ ಯುವ ಸಮ್ಮೇಳನ : ಪಾಲ್ಗೊಳ್ಳಲು ಅರ್ಜಿ ಆಹ್ವಾನ"
ಕಾಮೆಂಟ್ ಪೋಸ್ಟ್ ಮಾಡಿ