News Date: 24--04--2019

News Date: 24--04--2019 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು News Date: 24--04--2019, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : News Date: 24--04--2019
ಲಿಂಕ್ : News Date: 24--04--2019

ಓದಿ


News Date: 24--04--2019

ಗುಲಬರ್ಗಾ (ಮೀಸಲು) ಲೋಕಸಭಾ ಕ್ಷೇತ್ರದ ಚುನಾವಣೆ
*************************************************
11.84 ಲಕ್ಷ ಮತದಾರರಿಂದ ಮತ ಚಲಾವಣೆ
***************************************
ಗುಲಬರ್ಗಾ,ಏ.24.(ಕ.ವಾ.)-ಗುಲಬರ್ಗಾ (ಮೀಸಲು) ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 23ರಂದು ಜರುಗಿದ ಚುನಾವಣೆಯಲ್ಲಿ 6,09,411 ಪುರುಷರು, 5,74,824 ಮಹಿಳೆಯರು ಹಾಗೂ 06 ಇತರೆ ಮತದಾರರು ಸೇರಿದಂತೆ ಒಟ್ಟು 11,84,241 ಮತದಾರರು ಮತ ಚಲಾಯಿಸಿದ್ದು, ಒಟ್ಟಾರೆ ಶೇ. 60.88ರಷ್ಟು ಮತದಾನವಾಗಿದೆ ಎಂದು ಕಲಬುರಗಿ ಜಿಲ್ಲಾ ಚುನಾವಣಾಧಿಕಾರಿ ಆರ್. ವೆಂಕಟೇಶಕುಮಾರ ಅವರು ತಿಳಿಸಿದ್ದಾರೆ.
ಗುಲಬರ್ಗಾ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಫಜಲಪುರ, ಜೇವರ್ಗಿ, ಗುರುಮಿಠಕಲ್, ಚಿತ್ತಾಪುರ, ಸೇಡಂ, ಗುಲಬರ್ಗಾ ಗ್ರಾಮೀಣ, ಗುಲಬರ್ಗಾ ದಕ್ಷಿಣ ಹಾಗೂ ಗುಲಬರ್ಗಾ ಉತ್ತರ ವಿಧಾನಸಭಾ ಕ್ಷೇತ್ರಗಳು ಬರಲಿದ್ದು, ಒಟ್ಟು 19,45,291 ಜನರು ಮತ ಚಲಾಯಿಸುವ ಹಕ್ಕು ಹೊಂದಿದ್ದರು. ಇದರಲ್ಲಿ 9,80,105 ಪುರುಷರು ಮತ್ತು 9,64,845 ಮಹಿಳೆಯರು ಹಾಗೂ 341 ಇತರರು ಸೇರಿದ್ದಾರೆ.
34-ಅಫಜಲಪುರ: ಈ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,22,677 ಮತದಾರರು ಇದ್ದು, ಈ ಪೈಕಿ 1,39,268 ಮತದಾರರು ಮತ ಚಲಾಯಿಸಿದ್ದಾರೆ. ಮತ ಚಲಾಯಿಸಿದರಲ್ಲಿ ಪುರುಷರು-73,888, ಮಹಿಳೆಯರು-65,380 ಸೇರಿದ್ದು, ಒಟ್ಟಾರೆ ಶೇ. 62.54 ರಷ್ಟು ಮತದಾನವಾಗಿದೆ.
35-ಜೇವರ್ಗಿ: ಈ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,36,230 ಮತದಾರರು ಇದ್ದು, ಈ ಪೈಕಿ 1,46,165 ಮತದಾರರು ಮತ ಚಲಾಯಿಸಿದ್ದಾರೆ. ಮತ ಚಲಾಯಿಸಿದವರಲ್ಲಿ ಪುರುಷರು 76,582, ಮಹಿಳೆಯರು-69,582 ಹಾಗೂ ಇತರೆ-01 ಸೇರಿದ್ದು, ಒಟ್ಟಾರೆ ಶೇ. 61.87 ರಷ್ಟು ಮತದಾನವಾಗಿದೆ.
39-ಗುರುಮಿಠಕಲ್: ಈ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,45,251 ಮತದಾರರು ಇದ್ದು, ಈ ಪೈಕಿ 1,47,778 ಮತದಾರರು ಮತ ಚಲಾಯಿಸಿದ್ದಾರೆ. ಮತ ಚಲಾಯಿಸಿದವರಲ್ಲಿ ಪುರುಷರು-73,714, ಮಹಿಳೆಯರು-74,062 ಮತ್ತು ಇತರೆ-02 ಸೇರಿದ್ದಾರೆ. ಒಟ್ಟಾರೆ ಶೇ.60.26 ರಷ್ಟು ಮತದಾನವಾಗಿದೆ.
40-ಚಿತ್ತಾಪುರ(ಎಸ್‍ಸಿ): ಈ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,30,641 ಮತದಾರರು ಇದ್ದು, ಈ ಪೈಕಿ 1,41,032 ಮತದಾರರು ಮತ ಚಲಾಯಿಸಿದ್ದಾರೆ. ಮತ ಚಲಾಯಿಸಿದವರಲ್ಲಿ ಪುರುಷರು 72,024, ಮಹಿಳೆಯರು 69,008 ಸೇರಿದ್ದು, ಒಟ್ಟಾರೆ ಶೇ. 61.15 ರಷ್ಟು ಮತದಾನವಾಗಿದೆ.
41-ಸೇಡಂ: ಈ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,16,353 ಮತದಾರರು ಇದ್ದು, ಈ ಪೈಕಿ 1,47,844 ಮತದಾರರು ಮತ ಚಲಾಯಿಸಿದ್ದಾರೆ. ಮತ ಚಲಾಯಿಸಿದವರಲ್ಲಿ ಪುರುಷರು-74,910, ಮಹಿಳೆಯರು-72,934 ಸೇರಿದ್ದು, ಒಟ್ಟಾರೆ ಶೇ. 68.33 ರಷ್ಟು ಮತದಾನವಾಗಿದೆ.
43-ಗುಲಬರ್ಗಾ ಗ್ರಾಮೀಣ (ಎಸ್‍ಸಿ): ಈ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,52,949 ಮತದಾರರು ಇದ್ದು, ಈ ಪೈಕಿ 1,53,856 ಮತದಾರರು ಮತ ಚಲಾಯಿಸಿದ್ದಾರೆ. ಮತ ಚಲಾಯಿಸಿದವರಲ್ಲಿ ಪುರುಷರು 80,134, ಮಹಿಳೆಯರು-73,721 ಹಾಗೂ ಇತರೆ-01 ಸೇರಿದ್ದಾರೆ. ಒಟ್ಟಾರೆ ಶೇ. 60.82 ರಷ್ಟು ಮತದಾನವಾಗಿದೆ.
44-ಗುಲಬರ್ಗಾ ದಕ್ಷಿಣ: ಈ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,65,175 ಮತದಾರರು ಇದ್ದು, ಈ ಪೈಕಿ 1,51,269 ಮತದಾರರು ಮತ ಚಲಾಯಿಸಿದ್ದಾರೆ. ಮತ ಚಲಾಯಿಸಿದವರಲ್ಲಿ ಪುರುಷರು-76,979, ಮಹಿಳೆಯರು-74,289 ಹಾಗೂ ಇತರೆ-01 ಸೇರಿದ್ದು, ಒಟ್ಟಾರೆ ಶೇ. 57.04 ರಷ್ಟು ಮತದಾನವಾಗಿದೆ.
45-ಗುಲಬರ್ಗಾ ಉತ್ತರ: ಈ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,76,015 ಮತದಾರರು ಇದ್ದು, ಈ ಪೈಕಿ 1,57,029 ಮತದಾರರು ಮತ ಚಲಾಯಿಸಿದ್ದಾರೆ, ಮತ ಚಲಾಯಿಸಿದವರಲ್ಲಿ ಪುರುಷರು-81,180, ಮಹಿಳೆಯರು-75,848 ಹಾಗೂ ಇತರೆ-01 ಸೇರಿದ್ದು, ಶೇ. 56.89 ರಷ್ಟು ಮತದಾನವಾಗಿದೆ.
ಏಪ್ರಿಲ್ 25 ರಂದು
****************
ವಿಶ್ವ ಮಲೇರಿಯಾ ದಿನಾಚರಣೆ ಅಂಗವಾಗಿ ಜಾಥಾಕ್ಕೆ ಚಾಲನೆ
*****************************************************
ಕಲಬುರಗಿ,ಏ.24.(ಕ.ವಾ.).-ವಿಶ್ವ ಮಲೇರಿಯಾ ದಿನಾಚರಣೆ ಅಂಗವಾಗಿ ಗುರುವಾರ ಏಪ್ರಿಲ್ 25 ರಂದು ಬೆಳಿಗ್ಗೆ 9 ಗಂಟೆಗೆ ಕಲಬುರಗಿ ಜಿಲ್ಲಾ ಆಸ್ಪತ್ರೆಯಲ್ಲಿ ಏರ್ಪಡಿಸಲಾಗಿದ್ದ ಜಾಥಾಕ್ಕೆ ಕಲಬುರಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ರಾಜಾ ಪಿ. ಅವರು ಚಾಲನೆ ನೀಡುವರು.
ಕಲಬುರಗಿ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಜ್ಞ ಡಾ. ಶಿವಾನಂದ ಸುರಗಾಳಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಂ.ಕೆ. ಪಾಟೀಲ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಏಪ್ರಿಲ್ 25ರಿಂದ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ (ಸಿವಿಲ್) ಹುದ್ದೆಗೆ ಮೌಖಿಕ ಸಂದರ್ಶನ
ಕಲಬುರಗಿ,ಏ.24.(ಕ.ವಾ.). 2018-19ನೇ ಸಾಲಿನ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ (ಸಿವಿಲ್) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ (ಸಿವಿಲ್) ಹುದ್ದೆಗಳಿಗೆ 1:2 ಅನುಪಾತದಲ್ಲಿ ಅರ್ಹ ಅಭ್ಯರ್ಥಿಗಳಿಗೆ ಮೌಖಿಕ ಸಂದರ್ಶನವನ್ನು ಇದೇ ಏಪ್ರಿಲ್ 25 ರಿಂದ ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ಕಾರ್ಲಟನ್ ಭವನದಲ್ಲಿನ ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ನೇಮಕಾತಿ ಕಚೇರಿಯಲ್ಲಿ ನಡೆಯಲಿದೆ ಎಂದು ಕಲಬುರಗಿ ಈಶಾನ್ಯ ವಲಯದ ಪೊಲೀಸ್ ಮಹಾ ನಿರೀಕ್ಷಕರಾದ ಮನೀಷ ಕರ್ಬೀಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೌಖಿಕ ಸಂದರ್ಶನಕ್ಕೆ ಸಂಬಂಧಿಸಿದಂತೆ ಈಗಾಗಲೇ ಅರ್ಹ ಅಭ್ಯರ್ಥಿಗಳಿಗೆ ಕರೆ ಪತ್ರವನ್ನು ಕಳುಹಿಸಲಾಗಿದೆ. ಮೌಖಿಕ ಸಂದರ್ಶನಕ್ಕೆ ಅರ್ಹರಾಗಿರುವ ಅಭ್ಯರ್ಥಿಗಳು ಕರೆ ಪತ್ರಗಳನ್ನು ಇಲಾಖೆಯ ವೆಬ್‍ಸೈಟ್‍ನಿಂದ ಪಡೆದುಕೊಂಡು ಮೌಖಿಕ ಸಂದರ್ಶನಕ್ಕೆ ಹಾಜರಾಗಬೇಕೆಂದು ಅವರು ತಿಳಿಸಿದ್ದಾರೆ.
ಏಪ್ರಿಲ್ 25ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
*********************************************
ಕಲಬುರಗಿ,ಏ.24.(ಕ.ವಾ.)-ಜೆಸ್ಕಾಂ ಕಲಬುರಗಿ ನಗರ ಕಾರ್ಯ ಮತ್ತು ಪಾಲನೆ ನಗರ ವಿಭಾಗದ ವ್ಯಾಪ್ತಿಯಲ್ಲಿ ಬರುವ 11ಕೆ.ವಿ. ಟಿ.ವಿ. ಸ್ಟೇಶನ್, ಎಂ.ಎಸ್.ಕೆ. ಮಿಲ್ ಹಾಗೂ ಕೆ.ವಿ. ಭಾರತ ಫ್ರೈಡ್ ಫೀಡರಗಳ ವ್ಯಾಪ್ತಿಯಲ್ಲಿ 33ಕೆ.ವಿ. ವಿಜಿಐಎಸ್ ಕೆಲಸ ಕಾರ್ಯನಿರ್ವಹಣೆ ಹಿನ್ನೆಲೆಯಲ್ಲಿ ಗುರುವಾರ ಏಪ್ರಿಲ್ 25ರಂದು ಬೆಳಿಗ್ಗೆ 8 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಜೆಸ್ಕಾಂನೊಂದಿಗೆ ಸಹಕರಿಸುವಂತೆ ವಿಭಾಗದ ಕಾರ್ಯನಿರ್ವಾಹಕ ಇಂಜಿನೀಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
11 ಕೆ.ವಿ. ಟಿ.ವಿ. ಸ್ಟೇಶನ ಫೀಡರ್: ಮುನಿಂ ಸಂಘ, ಕಾಕಡೆ ಚೌಕ್, ರಾಮನಗರ, ರೇವಣಸಿದ್ದೇಶ್ವರ ಕಾಲೋನಿ, ಕೆ.ಕೆ. ನಗರ, ಶಿವಾಜಿ ನಗರ, ಭವಾನಿ ನಗರ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.
11ಕೆ.ವಿ. ಎಂ.ಎಸ್.ಕೆ. ಮಿಲ್ ಫೀಡರ್: ಮದೀನಾ ಕಾಲೋನಿ, ನ್ಯೂ ಮದೀನಾ ಕಾಲೋನಿ, ಮಿಸ್ಬಾ ನಗರ, ಇಕ್ಬಾಲ್ ಕಾಲೋನಿ, ಹುಸೇನ್ ಗಾರ್ಡನ್, ಕೃಷ್ಟ ಮಿನರಲï್ಸ , ನ್ಯೂ ರಾಘವೇಂದ್ರ ಕಾಲೋನಿ, ಖಾನಿ ಏರಿಯಾ ಮತ್ತು ಸುತ್ತ-ಮುತ್ತಲಿನ ಪ್ರದೇಶಗಳು.
11 ಕೆ.ವಿ. ಭಾರತ ಪ್ರೈಡ್ ಫೀಡರ್: ಶಿವಾಜಿ ನಗರ, ಭಾರತ ಪ್ರೈಡ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ:
*********************************************
ಓರ್ವ ಅಭ್ಯರ್ಥಿಯಿಂದ ಎರಡು ನಾಮಪತ್ರಗಳು ಸಲ್ಲಿಕೆ
*********************************************
ಕಲಬುರಗಿ,ಏ.24.(ಕ.ವಾ.). 42-ಚಿಂಚೋಳಿ (ಪ.ಜಾ.) ವಿಧಾನಸಭಾ ಕ್ಷೇತ್ರಕ್ಕೆ 2019ರ ಮೇ 19ರಂದು ನಡೆಯುವ ಉಪ ಚುನಾವಣೆಗಾಗಿ ನಾಮಪತ್ರ ಸಲ್ಲಿಕೆಗೆ ಎರಡನೇ ದಿನವಾದ ಬುಧವಾರ ಓರ್ವ ಅಭ್ಯರ್ಥಿಯಿಂದ 02 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಚಿಂಚೋಳಿ (ಪ.ಜಾ.) ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಸೋಮಶೇಖರ ಅವರು ತಿಳಿಸಿದ್ದಾರೆ.
ನಾಮಪತ್ರ ಸಲ್ಲಿಕೆ ವಿವರ ಇಂತಿದೆ. ದೀಪಕ ಗಂಗಾರಾಮ ಕಟಕದೊಂಡ ಅವರು ಹಿಂದುಸ್ತಾನ ಜನತಾ ಪಾರ್ಟಿಯಿಂದ 01 ನಾಮಪತ್ರ ಹಾಗೂ ಬಹುಜನ ಸಮಾಜ ಪಾರ್ಟಿಯಿಂದ 01 ನಾಮಪತ್ರವನ್ನು ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 29ರಂದು ಕೊನೆಯ ದಿನವಾಗಿದೆ. ಏಪ್ರಿಲ್ 30ರಂದು ನಾಮಪತ್ರಗಳ ಪರಿಶೀಲನಾ ಕಾರ್ಯ ನಡೆಯಲಿದೆ. ನಾಮಪತ್ರ ಹಿಂದಕ್ಕೆ ಪಡೆಯಲು ಮೇ 2 ರಂದು ಕೊನೆಯ ದಿನವಾಗಿದೆ. ಮೇ 23ರಂದು ಮತ ಎಣಿಕೆ ನಡೆಯಲಿದೆ. ಇಲ್ಲಿವರೆಗೆ ಒಟ್ಟು 02 ಅಭ್ಯರ್ಥಿಗಳಿಂದ 03 ನಾಮಪತ್ರಗಳು ಸಲ್ಲಿಸಿದಂತಾಗಿದೆ.
****


ಹೀಗಾಗಿ ಲೇಖನಗಳು News Date: 24--04--2019

ಎಲ್ಲಾ ಲೇಖನಗಳು ಆಗಿದೆ News Date: 24--04--2019 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ News Date: 24--04--2019 ಲಿಂಕ್ ವಿಳಾಸ https://dekalungi.blogspot.com/2019/04/news-date-24-04-2019.html

Subscribe to receive free email updates:

0 Response to "News Date: 24--04--2019"

ಕಾಮೆಂಟ್‌‌ ಪೋಸ್ಟ್‌ ಮಾಡಿ