ಒಂದು ಬೊಗಸೆ ಪ್ರೀತಿ - 13

ಒಂದು ಬೊಗಸೆ ಪ್ರೀತಿ - 13 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಒಂದು ಬೊಗಸೆ ಪ್ರೀತಿ - 13, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಒಂದು ಬೊಗಸೆ ಪ್ರೀತಿ - 13
ಲಿಂಕ್ : ಒಂದು ಬೊಗಸೆ ಪ್ರೀತಿ - 13

ಓದಿ


ಒಂದು ಬೊಗಸೆ ಪ್ರೀತಿ - 13

ಡಾ. ಅಶೋಕ್.‌ ಕೆ. ಆರ್.‌


ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
ಬೆಳಿಗ್ಗೆ ಡ್ಯೂಟಿ ಇಲ್ಲ. ಎದ್ದು ಗಂಡನಿಗೆ ಅಡುಗೆ ಮಾಡಿಕೊಡುವ ಕೆಲಸವೂ ಇಲ್ಲ. ಸೋಮಾರಿ ತರ ಹತ್ತರವರೆಗೆ ಬಿದ್ದುಕೊಂಡಿದ್ದೆ. ಬೆಳಗಾಗೆದ್ದು ಗಂಡನನ್ನು ನೋಡ್ತೀನೋ ದೇವರನ್ನು ನೋಡ್ತೀನೋ ಗೊತ್ತಿಲ್ಲ ಮೊಬೈಲು ನೋಡುವುದು ಅಭ್ಯಾಸವಾಗಿಬಿಟ್ಟಿದೆ. ಏಳು ಮೆಸೇಜುಗಳು ಬಂದಿದ್ದವು ಸಾಗರನಿಂದ. ಒಂದು ಮೆಸೇಜು ರಾಜೀವನಿಂದ ಬಂದಿತ್ತು. “ಗುಡ್ ಮಾರ್ನಿಂಗ್ ಡಿಯರ್” ಎಂದು ರಾಜೀವ್ ಮೆಸೇಜ್ ಕಳುಹಿಸಿದ್ದ. ‘ಗುಡ್ ಮಾರ್ನಿಂಗ್ ರಾಜಿ’ ಎಂದುತ್ತರಿಸಿ ಸಾಗರನ ಮೆಸೇಜುಗಳನ್ನು ತೆರೆದೆ.
“ಇನ್ಯಾವತ್ತೂ ನನಗೆ ಮೆಸೇಜ್ ಮಾಡ್ಬೇಡ. ನಮ್ಮಿಬ್ಬರ ನಡುವೆ ಗೆಳೆತನವೂ ಬೇಡ ಪರಿಚಯವೂ ಬೇಡ”

“ಸಾರಿ ನಿನ್ನೆ ರಾತ್ರಿ ನನ್ನ ಕತೆಯೆಲ್ಲ ಹೇಳಿ ನನ್ನ ಬಗ್ಗೆ ನಿನಗೆ ಅನುಕಂಪ ಮೂಡುವಂತೆ ಮಾಡಿಬಿಟ್ಟೆ ಎನ್ನಿಸುತ್ತೆ. ಸಾರಿ ಸಾರಿ”

“ನಾವಿಬ್ಬರೂ ತಪ್ಪು ಮಾಡ್ತಿದ್ದೀವಿ”

“ಅದೇನು ರಾತ್ರಿಯ ಪರಿಣಾಮವೋ ಇಷ್ಟು ದಿನದ ಹರಟೆಯ ಪರಿಣಾಮವೋ ಗೊತ್ತಿಲ್ಲ. ನಮ್ಮಿಬ್ಬರ ನಿನ್ನೆಯ ವರ್ತನೆ ನನಗೇ ಸರಿಕಾಣುತ್ತಿಲ್ಲ”

“ನನ್ನದೇನೋ ಬಿಡು ನೀನಂತೂ ಈ ರೀತಿ ಮಾಡಬಾರದಿತ್ತು”

“ನಿನಗ್ಯಾಕೆ ಮಧು ಕಂಡರೆ ಹೊಟ್ಟೆಯುರಿಯಬೇಕು, ನನಗ್ಯಾಕೆ ಪುರುಷೋತ್ತಮ್ ಮತ್ತು ರಾಜೀವ್ ಕಂಡರೆ ಜೆಲಸಿಯಾಗಬೇಕು? ಇದೆಲ್ಲ ತಪ್ಪು ಧರಣಿ. ಇಬ್ಬರೂ ಎಲ್ಲೆ ಮೀರಿ ಹೋಗುತ್ತಿದ್ದೇವೆ ಎನ್ನಿಸುತ್ತಿದೆ. ಮತ್ತು ಈ ರೀತಿ ಎಲ್ಲೆ ಮೀರಿ ಹೋಗುವುದು ನನಗಂತೂ ಸ್ವಲ್ಪವೂ ಸರಿ ಕಾಣಿಸುತ್ತಿಲ್ಲ”

“ಬೆಳಿಗ್ಗೆ ಎದ್ದು ನಿನ್ನೆ ಕಳುಹಿಸಿದ್ದ ಮೆಸೇಜುಗಳನ್ನೆಲ್ಲ ಮತ್ತೆ ಓದಿದೆ. ಕೊನೆಯಲ್ಲಿ ಇಬ್ಬರೂ ಒಬ್ಬರಿಗೊಬ್ಬರು I miss you ಅಂದಿದ್ದು ತಪ್ಪೆನ್ನಿಸುತ್ತಿದೆ. ಇನ್ಯಾವತ್ತೂ ನನಗೆ ಮೆಸೇಜು ಮಾಡಬೇಡ, ಫೋನು ಮಾಡಬೇಡ. ನಿನ್ನ ಜೀವನದಲ್ಲಿ ಕಾಲಿಟ್ಟಿದ್ದಕ್ಕೆ ಕ್ಷಮೆಯಿರಲಿ”

ತುಂಬ ಆಶ್ಚರ್ಯವೇನು ಆಗಲಿಲ್ಲ ನನಗೆ. ರಾತ್ರಿ ನಾನು I missed you ಕಣೋ ಎಂದು ಮೆಸೇಜು ಕಳುಹಿಸಿದಾಗಲೇ ಈ ರೀತಿಯ ಮೆಸೇಜುಗಳನ್ನು ಕಳುಹಿಸುತ್ತಾನೆ ಎಂದು ನಿರೀಕ್ಷೆ ಮಾಡಿದ್ದೆ. ಇನ್ನೂ ಮದುವೆಯಾಗದಿದ್ದ ಮಧು ಇವನೆಡೆಗೆ ಸ್ವಲ್ಪ ಪ್ರೀತಿಯ ಭಾವನೆ ತೋರಿಸಿದಾಗ ದೂರಾಗಿಬಿಟ್ಟಿದ್ದವನಿವನು. ಇನ್ನು ಮದುವೆಯಾಗಿರುವ ನನ್ನ ಜೊತೆ ಒಂದಷ್ಟು ಸಲಿಗೆಯಿಂದ ಮಾತನಾಡಿದಾಗ ಇಂತಹ ಮೆಸೇಜುಗಳು ನಿರೀಕ್ಷಿತವೇ ಆಗಿತ್ತು. ಸ್ನೇಹದ ವರ್ತುಲ ದಾಟಿ ನಮ್ಮ ಪರಿಚಯ ಮುಂದುವರಿಯುತ್ತಿರುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿತ್ತು. ಅವನು ನಿನ್ನೆ ಧರು ಎಂದು ಕರೆದಾಗ ನನ್ನಲ್ಲಿ ಮೂಡಿದ ಸಂತಸದ ಭಾವನೆ ಪ್ರೇಮದ್ದೇ ಅಲ್ಲವೇ? ಧರು ಎಂದು ಕರೆಯುವಾಗ ಅವನಲ್ಲೂ ಪ್ರೀತಿಯ ಭಾವನೆಗಳು ತುಂಬಿವೆ ಎನ್ನುವುದರ ಅರಿವಾಗದಷ್ಟು ಮುಗ್ಧಳೇನೂ ಅಲ್ಲವಲ್ಲ ನಾನು. ಸ್ನೇಹ ಇಷ್ಟು ಬೆಳೆದ ಮೇಲೆ ಸಾಗರನನ್ನು ಕಳೆದುಕೊಳ್ಳುವ ಮನಸ್ಸೂ ನನಗಿರಲಿಲ್ಲ. ನನಗತ್ತಿರವಾದವರೆಲ್ಲ ಕ್ರಮೇಣ ದೂರಾಗಿಬಿಡುತ್ತಾರೆ. ಪುರುಷೋತ್ತಮನ ವಿಷಯದಲ್ಲಷ್ಟೇ ಅಲ್ಲ, ನನ್ನ ಗೆಳತಿಯರೂ ಈಗ ದೂರಾಗಿಬಿಟ್ಟಿದ್ದಾರೆ. ಅಚಾನಕ್ಕಾಗಿ ಮೂಡಿದ ಈ ಗೆಳೆತನವನ್ನು ಕಳೆದುಕೊಳ್ಳುವುದು ನನಗಿಷ್ಟವಿಲ್ಲ. ಮೂಡಿರುವ ಪ್ರೀತಿ ಪ್ರೇಮದ ಭಾವನೆಗಳನ್ನು ದೂರಾಗಿಸಿ ಗೆಳೆತನವನ್ನಾದರೂ ಉಳಿಸಿಕೊಳ್ಳಬೇಕು. ಇವಾಗ ಇವನಿಗೆ ಏನೆಂದು ಪ್ರತ್ಯುತ್ತರಿಸಲಿ. ನನ್ನದೂ ತಪ್ಪಾಯಿತು ಎಂದು ಕ್ಷಮೆ ಕೇಳಲಾ? ಕ್ಷಮೆ ಕೇಳುವಂತ ತಪ್ಪನ್ನೇನು ಮಾಡಿಲ್ಲವಲ್ಲ.

‘ಯಾವ ವಿಷಯಕ್ಕೆ ಕ್ಷಮೆ ಕೇಳ್ತಿದ್ದೀಯೋ ಗೊತ್ತಾಗಲಿಲ್ಲ. ಮಿಸ್ ಯು ಅಂತ ಗೆಳೆಯರಿಬ್ಬರು ಹೇಳಿಕೊಳ್ಳಬಾರದಾ? ಸುಮ್ನೆ ಏನೇನೋ ಯೋಚನೆ ಮಾಡಿ ತಲೆಕೆಡಿಸ್ಕೋಬೇಡ. ಮದುವೆ ಅನ್ನೋದು ಗೆಳೆತನಕ್ಕೆ ಅಡ್ಡಿಯುಂಟುಮಾಡಬಾರದು’ ಎಂದು ಮೆಸೇಜಿಸಿದೆ. ಟೈಪಿಸಿದ್ದರಲ್ಲಿ ಸತ್ಯವಿದೆ ಎಂದು ನನಗೇ ಅನ್ನಿಸುತ್ತಿರಲಿಲ್ಲ.

“ನಿನ್ನೆ ನಮ್ಮ ಮಾತುಕತೆಗಳು ಗೆಳೆತನ ಮೀರಿ ಹೋದವೇನೋ ಅಂತ”

‘ಗೆಳೆತನಕ್ಕೆ ಗಡಿಗಳಿರುತ್ತಾ?’

“ಇರಲ್ಲವಾ?”

‘ಇರಲ್ಲ. ಇರಬಾರದು. ಹತ್ತಿರದಲ್ಲೇ ಪರೀಕ್ಷೆ ಅಂತೀಯ. ಸುಮ್ನೆ ಓದ್ಕೋ. ರಾತ್ರಿ ಫೋನ್ ಮಾಡ್ತೀನಿ. ಸರೀ ಬಯ್ಯಬೇಕು ನಿನಗೆ’

“ನನಗ್ಯಾಕೆ ಬಯ್ಯಬೇಕು?”

‘ಮತ್ತೆ ಏನೇನೋ ಚೈಲ್ಡಿಶ್ ಆಗಿ ಮೆಸೇಜ್ ಕಳಿಸಿದ್ರೆ ಬಯ್ಯಬಾರದಾ?’

“ಹ್ಹ ಹ್ಹ. ಸಾರಿ ಕಣೇ. ಇನ್ಮೇಲೆ ಹಂಗೆಲ್ಲ ಮೆಸೇಜು ಕಳಿಸಲ್ಲ ಬಿಡು”

ಒಂದು ಸ್ಮೈಲಿ ಕಳುಹಿಸಿ ‘ಸರಿ ಕಣೋ. ಮನೆ ಕ್ಲೀನ್ ಮಾಡಿ ಅಡುಗೆ ಮಾಡಿ ಡ್ಯೂಟಿಗೆ ಹೋಗ್ತೀನಿ. ಬಿಡುವಿದ್ದರೆ ಮೆಸೇಜ್ ಮಾಡ್ತೀನಿ. ಇಲ್ಲಾಂದ್ರೆ ರಾತ್ರಿ ಫೋನು’

“ಸರಿ ಮೇಡಮ್. ಬಯ್ಯಿಸಿಕೊಳ್ಳೋಕೆ ರೆಡಿ ಆಗಿರ್ತೀನಿ. ಆದರೆ ನಿನ್ನ ಲವ್ ಸ್ಟೋರಿ ಕೇಳಿ ಮುಗಿದ ನಂತರ” ತರ್ಲೆ. ಸುಮ್ನೆ ಏನೇನೋ ಯೋಚನೆ ಮಾಡಿ ತಲೆ ಕೆಡಿಸ್ಕೊಂಡು ಕುಳಿತಿದ್ದಾನೆ. ನನ್ನ ಲವ್ ಸ್ಟೋರಿ ಹೇಳಿದ ಮೇಲೂ ನನ್ನ ಜೊತೆ ಇಷ್ಟೇ ಸ್ನೇಹದಿಂದ ಗೌರವದಿಂದ ಮಾತನಾಡ್ತಾನಾ? ಎಂಬ ಪ್ರಶ್ನೆ ಮೂಡಿತು. ಅವನು ಮುಕ್ತವಾಗಿ ಹೇಳಿಕೊಂಡಿದ್ದಾನೆ. ಈಗ ನಾನು ಹೇಳದಿದ್ದರೆ ತಪ್ಪಾಗುತ್ತದೆ. ಪರಶುವಿನ ನೆನಪು ಒಂದಷ್ಟು ಖುಷಿ ಬಹಳಷ್ಟು ದುಃಖ ತರುವುದು ಸುಳ್ಳಲ್ಲ. ಸದ್ಯಕ್ಕೆ ಅದರ ಬಗ್ಗೆ ಯೋಚಿಸದಿದ್ದರೇ ಒಳಿತು ಎಂದುಕೊಂಡು ಹಾಸಿಗೆಯಿಂದ ಮೇಲೆದ್ದೆ. ದಿನನಿತ್ಯದ ಕೆಲಸಕಾರ್ಯಗಳ ಕಡೆಗೆ.

* * *

ಇವತ್ತು ಆಸ್ಪತ್ರೆಯಲ್ಲಿ ವಿಪರೀತ ಜನಜಂಗುಳಿ. ಮಧ್ಯೆ ಸಾಗರ್ ಮೆಸೇಜು ಮಾಡಿದ್ದ “ಬ್ಯುಸೀನಾ” ಅಂತ. ‘ಹ್ಞೂ ಕಣೋ ಬ್ಯುಸಿ’ ಎಂದು ಕಳಿಸಲೂ ಸಮಯವಾಗಿರಲಿಲ್ಲ. ಕೆಲಸ ಮುಗಿಸಿ ಎಂಟಕ್ಕೆ ಕಾರು ಹತ್ತಿದಾಗ ಸಾಗರನಿಗೆ ಕಾಲ್ ಮಾಡಿದೆ.

“ಹಲೋ”

‘ಹೇಳೋ’

“ಏನ್ ಹೇಳೋದಪ್ಪ. ನೀನೇ ಹೇಳಬೇಕು”

‘ಅದ್ಯಾಕೆ ಏನೇನೋ ಯೋಚಿಸಿ ಹಂಗೆಲ್ಲ ಮೆಸೇಜು ಕಳಿಸಿದ್ದೆ’

“ನಾವಿಬ್ಬರು ಮಾಡಿದ್ದು ಯಾಕೋ ತಪ್ಪು ಅನ್ನಿಸಿತು, ಅದಿಕ್ಕೆ”

‘ತಪ್ಪೇನಿಲ್ಲ ಕಣೋ’

“ಹೋಗ್ಲಿ ಬಿಡು. ನಿನ್ನ ವಿಷಯ ಹೇಳು”

‘ಫುಲ್ ಕ್ಯೂರಿಯಾಸಿಟೀನಾ’

“ಇರಲ್ವಾ ಮತ್ತೆ”

‘ನನಗೇನ್ ಗೊತ್ತು. ಮನೆಗೆ ಹೋದ ಮೇಲೆ ಮಾಡ್ಲಾ?’

“ಇವಾಗ ಎಲ್ಲಿದ್ದೆ ಹಾಗಿದ್ರೆ?”

‘ಈಗ ಡ್ಯೂಟಿ ಮುಗಿಸಿ ಹೋಗ್ತಾಇದ್ದೀನಿ’

“ಅಯ್ಯೋ ನಿನ್ನ. ಗಾಡಿ ಓಡಿಸಿಕೊಂಡು ಫೋನಲ್ಲಿ ಮಾತಾಡ್ತಿದ್ದೀಯ. ತಪ್ಪು ತಪ್ಪು. ಮನೆಗೆ ಹೋದ ಮೇಲೆ ಬಿಡುವು ಮಾಡಿಕೊಂಡೇ ಮಾಡವ್ವ” ಎಂದ. ಅವನ ಕಾಳಜಿಗೆ ಖುಷಿಯಾಯಿತು.

‘ಒಕೆ ಸರ್’ ಎಂದು ಹೇಳಿ ಫೋನ್ ಇಟ್ಟೆ. ಮನೆಯ ತಿರುವಿನಲ್ಲಿ ಪುಟ್ಟ ಹೋಟೆಲ್ಲಿದೆ. ಅಲ್ಲಿ ಒಂದು ಮಸಾಲೆ ದೋಸೆ ಒಂದು ವಡೆ ಕಟ್ಟಿಸಿಕೊಂಡು ಮನೆಗೆ ಹೋದೆ. ದೋಸೆ ಬಿಸೀಗಿತ್ತು, ವಡೆ ತಣ್ಣಗಾಗಿತ್ತು. ತಿಂದು ಮುಗಿಸಿ ಧರಿಸಿದ್ದ ಚೂಡಿ ಬಿಚ್ಚುಹಾಕಿದೆ. ನೈಟಿ ಹಾಕಿಕೊಳ್ಳಲು ಬೀರುವಿನಿಂದ ತೆಗೆದಿದ್ದಾಗ ಮೆಸೇಜು ಬಂತು. “ಇನ್ನೂ ಮನೆ ತಲುಪಲಿಲ್ಲವೇನೇ” ಎಂದು ಸಾಗರ ಮೆಸೇಜ್ ಕಳುಹಿಸಿದ್ದ. ಪರಶುವಿನ ಬಗ್ಗೆ ಮಾತನಾಡುವುದನ್ನು ಆದಷ್ಟು ಮುಂದೆ ಹಾಕುವ ಮನಸ್ಸು ನನಗೆ. ಇವನಿಗೋ ಅದನ್ನು ಎಷ್ಟು ಸಾಧ್ಯವೋ ಅಷ್ಟು ಬೇಗ ತಿಳಿದುಕೊಳ್ಳುವ ಕುತೂಹಲ. ನಿನ್ನೆ ಮಧು ವಿಷಯದಲ್ಲೂ ನನಗೆ ಅಷ್ಟೇ ಕುತೂಹಲವಿತ್ತಲ್ಲವೇ? ನಗುತ್ತಾ ನೈಟಿಯನ್ನು ಹಾಸಿಗೆಯ ಮೇಲೆ ಬಿಸುಟಿ, ಹಿಯರ್ ಫೋನನ್ನು ಮೊಬೈಲಿಗೆ ಸಿಕ್ಕಿಸಿಕೊಂಡು ಮಲಗಿ ಬೆಡ್ ಶೀಟನ್ನು ಹೊದ್ದಿಕೊಂಡೆ. ಸಾಗರನಿಗೆ ಫೋನ್ ಮಾಡಿದೆ.

“ಇದೇನೇ ಮನೆಗೆ ಬರೋಕೆ ಇಷ್ಟೊತ್ತಾಯ್ತ?” ಬಯ್ಯುವ ದನಿಯಲ್ಲಿ ಕೇಳಿದ.

‘ಬಂದು ಹೋಟೆಲ್ಲಿಂದ ತಂದಿದ್ದ ದೋಸೆ ತಿಂದು ಮುಗಿಸಿ ಬಟ್ಟೆ ಬದಲಿಸುತ್ತಿದ್ದೆ’

“ಹಂಗೆ. ಮುಗೀತ ಎಲ್ಲ”

‘ತಿಂದಿದ್ದೆಲ್ಲ ಮುಗೀತು ಬಟ್ಟೆ ಬದಲಿಸಿದ್ದು ಅರ್ಧಕ್ಕೆ ನಿಂತುಹೋಯಿತು’

“ಹಾ ಹಾ… ಸರಿ ಕೆಲಸ ಪೂರ್ತಿ ಮುಗಿಸಿಯೇ ಫೋನ್ ಮಾಡು”

‘ಒಬ್ಳೇ ಇರೋದಲ್ವೇನೋ ನಡೆಯುತ್ತೆ ಬಿಡು ಹೆಂಗಿದ್ರು’

“ಓ! ಹುಡ್ಗೀರು ನಮ್ ಥರಾನೇ”

‘ಅಂದ್ರೆ’

“ಈ ಮಂಗಳೂರಲ್ಲಿ ಮೊದಲೇ ಸೆಖೆ ಜಾಸ್ತಿ. ಮಳೆ ಬರ್ತಿದ್ರೂ ಬೆವರುತ್ತಿರುತ್ತೀವಿ. ರೂಮಿಗೆ ಬಂದ ಮೇಲೆ ಮೈಮೇಲೆ ಬಟ್ಟೆ ಹಾಕೋದೆ ಹಿಂಸೆ”

‘ಹ್ಹ ಹ್ಹ. ನಮಗೆ ಅಷ್ಟೆಲ್ಲ ಸಲೀಸಲ್ಲಪ್ಪ. ಒಬ್ರೇ ಇರೋದೇ ಕಮ್ಮಿ. ಇನ್ನು ಗಂಡನ ಮುಂದೆ ಮೂರೊತ್ತು ಹಂಗೆಲ್ಲ ಇದ್ರೆ ಬಯ್ಯಿಸಿಕೋಬೇಕು’

“ಅದಕ್ಕೂ ಬಯ್ತಾರಾ? ಚೆಂದ ಅಲ್ವಾ?”

‘ತರ್ಲೆ. ಮದುವೆಯಾದ ಮೇಲೆ ಈ ಮಾತು ಹೇಳು ನೋಡೋಣ’

“ಸರಿ ಬಿಡಪ್ಪ. ಮದುವೆಯಾದ ಮೇಲೇ ಹೇಳ್ತೀನಿ”

ಒಮ್ಮೆ ನಕ್ಕು ‘ಸುಮ್ನೆ ತಮಾಷೆಗೆ ಹೇಳಿದ್ದಪ್ಪ. ಮತ್ತೆ ಇದಕ್ಕೂ ಬೇಜಾರು ಮಾಡಿಕೊಂಡುಬಿಡಬೇಡ’

“ಆಡ್ಕೊಳ್ಳೋದು ನೋಡು. ಸರಿ ತಪ್ಪು ಅಂತ ಜಾಸ್ತಿ ಯೋಚಿಸ್ತೀನಿ ಕಣೇ”

‘ಸರಿ ತಪ್ಪೆಲ್ಲ ಅವರವರ ಅನುಕೂಲಕ್ಕೆ ಅಂತ ನಂಬಿರೋಳು ನಾನು’

“ಏನೋಪ್ಪ. ಇನ್ನೂ ನಿನ್ನೆ ಸುಮಾರು ತಪ್ಪು ಮಾಡಿದೆವು ಎನ್ನಿಸುತ್ತಿದೆ ನನಗೆ”

‘ಸರಿ ಬಿಡೋ. ನಿನಗಷ್ಟು ಕಷ್ಟವಾದರೆ ಫೋನ್ ಇಡ್ತೀನಿ’ ಸುಮ್ಮನೆ ಮಾತಿಗೆ ಹೇಳಿದೆ.

“ಮಾತಾಡಬೇಕು. ಇನ್ನೂ ಹೆಚ್ಚು ಮಾತಾಡಬೇಕು ಅನ್ನಿಸುತ್ತೆ ಕಣೇ”

‘ಮತ್ತೆ ಸುಮ್ನೆ ಮಾತಾಡು. ನೀನು ಕಣೇ ಅಂತೀಯಲ್ಲ ತುಂಬಾ ಚೆನ್ನಾಗಿರುತ್ತೆ’

“ಹೌದಾ”

‘ನಿಜವಾಗ್ಲೂ. ಚೆನ್ನಾಗಿ ಕರೀತೀಯ ಕಣೇ ಅಂತ’

“ಹ್ಹ ಹ್ಹ. ಸರಿ ಸರಿ ಮಾತು ಮರೆಸಬೇಡ. ನಿನ್ನ ಕತೆ ಏನು ಹೇಳು”

‘ಹೇಳಲೇಬೇಕಾ?’

“ಕೇಳೋಕೆ ನನಗೆ ಆಸೆ. ಧರಣಿ ಹೆಂಗಿದ್ಲು ಅಂತ ತಿಳ್ಕೋಬೋದಲ್ಲ. ಹೇಳೋ ಆಸಕ್ತಿ ನಿನಗೆ ಇರದಿದ್ದರೆ ಬಲವಂತ ಏನಿಲ್ಲಪ್ಪ”

‘ನಿನ್ನತ್ರ ಹೇಳ್ಕೋಬೇಕು ಅಂತ ನನಗೂ ಆಸೆ ಕಣೋ’

“ಮತ್ತೆ ಹೇಳು”

‘ಎಲ್ಲಿಂದ ಪ್ರಾರಂಭಿಸೋದು ಅನ್ನೋದೇ ಗೊತ್ತಾಗ್ತಿಲ್ಲ’

“ಮೊದಲ ಭೇಟಿಯಿಂದಲೇ ಪ್ರಾರಂಭಿಸು”

ಮುಂದುವರೆಯುವುದು...... 


ಹೀಗಾಗಿ ಲೇಖನಗಳು ಒಂದು ಬೊಗಸೆ ಪ್ರೀತಿ - 13

ಎಲ್ಲಾ ಲೇಖನಗಳು ಆಗಿದೆ ಒಂದು ಬೊಗಸೆ ಪ್ರೀತಿ - 13 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಒಂದು ಬೊಗಸೆ ಪ್ರೀತಿ - 13 ಲಿಂಕ್ ವಿಳಾಸ https://dekalungi.blogspot.com/2019/04/13.html

Subscribe to receive free email updates:

0 Response to "ಒಂದು ಬೊಗಸೆ ಪ್ರೀತಿ - 13"

ಕಾಮೆಂಟ್‌‌ ಪೋಸ್ಟ್‌ ಮಾಡಿ