ಶೀರ್ಷಿಕೆ : News and Photos Date: 11-3-2019
ಲಿಂಕ್ : News and Photos Date: 11-3-2019
News and Photos Date: 11-3-2019
ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಏಕಗವಾಕ್ಷಿ ಪ್ರಾರಂಭಿಸಲು ಸೂಚನೆ
***************************************************************
ಕಲಬುರಗಿ.ಮಾ.11.(ಕ.ವಾ.)-ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಪಕ್ಷಗಳು ಅಥವಾ ಅಭ್ಯರ್ಥಿಗಳು ಚುನಾವಣಾ ಪ್ರಚಾರಕ್ಕಾಗಿ, ಸಭೆ-ಸಮಾರಂಭಗಳಿಗಾಗಿ ಕಡ್ಡಾಯವಾಗಿ ಮುಂಚಿತವಾಗಿ ಪರವಾನಿಗೆ ಪಡೆಯಬೇಕಾಗಿದೆ. ರಾಜಕೀಯ ಪಕ್ಷಗಳಿಗೆ ಸೂಕ್ತ ಸಮಯದಲ್ಲಿ ಪರವಾನಿಗೆ ನೀಡಲು ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯ ಎಲ್ಲ ಸಹಾಯಕ ಚುನಾವಣಾಧಿಕಾರಿಗಳು ಏಕಗವಾಕ್ಷಿ ಪದ್ಧತಿಯನ್ನು ಪ್ರಾರಂಭಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ಆರ್. ವೆಂಕಟೇಶಕುಮಾರ ಸೂಚಿಸಿದರು.
ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಲೋಕಸಭಾ ಚುನಾವಣಾ ಪ್ರಕ್ರಿಯೇಗೆ ನೇಮಿಸಲಾದ ಸಹಾಯಕ ಚುನಾವಣಾಧಿಕಾರಿಗಳು, ವಿವಿಧ ಸಮಿತಿಗಳ ನೋಡಲ್ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಜಿಲ್ಲಾ ಮಟ್ಟದಲ್ಲಿಯೂ ಸಹ ಏಕಗವಾಕ್ಷಿ ಪದ್ಧತಿಯನ್ನು ಪ್ರಾರಂಭಿಸಲಾಗುತ್ತಿದ್ದು, ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಪರವಾನಿಗೆಗಳನ್ನು ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯಿಂದ ನೀಡಲಾಗುವುದು. ವಿಧಾನಸಭಾ ಮತಕ್ಷೇತ್ರಗಳಿಗೆ ಸಂಬಂಧಿಸಿದ ಪರವಾನಿಗೆಗಳನ್ನು ಆಯಾ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು ನೀಡಬೇಕು. ಏಕಗವಾಕ್ಷಿ ವ್ಯವಸ್ಥೆಯಲ್ಲಿ ಪೊಲೀಸ್, ಜೆಸ್ಕಾಂ, ನಗರಸಭೆ, ಮಹಾನಗರಪಾಲಿಕೆ, ಆಗ್ನಿಶಾಮಕದಳದ ಅಧಿಕಾರಿಗಳನ್ನು ಒಳಗೊಂಡಿರಬೇಕು ಎಂದು ಹೇಳಿದರು.
ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವವರೆಗೆ ವಿವಿಧ ಪಕ್ಷಗಳು ಪಡೆಯುವ ಪರವಾನಿಗೆಯ ಖರ್ಚನ್ನು ಪಕ್ಷದ ಹೆಸರಿಗೆ ಸೇರಿಸಬೇಕು. ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ ನಂತರ ಚುನಾವಣಾ ಖರ್ಚು ಅಭ್ಯರ್ಥಿಗಳು ಹೆಸರಿಗೆ ಸೇರಿಸಬೇಕು. ಪರವಾನಿಗೆ ನೀಡಲಾಗುವ ಎಲ್ಲ ವಿವರಗಳನ್ನು ಆನ್‍ಲೈನ್ ಮುಖಾಂತರ ದಾಖಲಿಸಬೇಕು. ವಿವಿಧ ಪಕ್ಷಗಳ ಪ್ರಚಾರ ಸಾಮಗ್ರಿಗಳನ್ನು ಮುದ್ರಿಸುವ ಮುದ್ರಕರು ಹಾಗೂ ಪ್ರಕಾಶಕರು ಕಡ್ಡಾಯವಾಗಿ ಘೋಷಣಾ ಪತ್ರವನ್ನು ಚುನಾವಣಾ ಶಾಖೆಗೆ ಸಲ್ಲಿಸಬೇಕು. ಮುದ್ರಿಸುವ ಎಲ್ಲ ಸಾಮಗ್ರಿಗಳ ಮೇಲೆ ಮುದ್ರಕರ ಹೆಸರು ಹಾಗೂ ಮುದ್ರಿಸಲಾದ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು. ಇಲ್ಲದಿದ್ದಲ್ಲಿ ಸಂಬಂಧಿಸಿದ ಪಕ್ಷ ಹಾಗೂ ಮುದ್ರಕರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕು ಎಂದು ತಿಳಿಸಿದರು.
ಜಿಲ್ಲೆಯಾದ್ಯಂತ ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಚುನಾಯಿತ ಪ್ರತಿನಿಧಿಗಳಿಗೆ, ಗಣ್ಯರಿಗೆ ನೀಡಿರುವ ಸರ್ಕಾರಿ ವಾಹನಗಳನ್ನು ಹಿಂಪಡೆದು ಜಿಲ್ಲಾಧಿಕಾರಿಗಳ ಶಿಷ್ಠಾಚಾರ ಶಾಖೆಗೆ ಹಿಂದಿರುಗಿಸಬೇಕು. ವಿವಿಧ ಇಲಾಖೆಗಳು ತಮ್ಮ ವೆಬ್‍ಸೈಟ್‍ಗಳಲ್ಲಿ ಬಳಸಲಾಗಿರುವ ಚುನಾಯಿತ ಪ್ರತಿನಿಧಿಗಳ ಭಾವಚಿತ್ರಗಳನ್ನು ತೆಗೆಯಬೇಕು. ವಿವಿಧ ಇಲಾಖೆಗಳು ಸರ್ಕಾರದ ಯೋಜನೆಗಳ ಪ್ರಚಾರಕ್ಕಾಗಿ ಅಳವಡಿಸಲಾಗಿರುವ ಬ್ಯಾನರ್, ಕಟೌಟ್, ಬಟ್ಟಿಂಗ್‍ಗಳನ್ನು ತೆರವುಗೊಳಿಸಬೇಕು. ಖಾಸಗಿ ವ್ಯಕ್ತಿಗಳು ಅಳವಡಿಸಿಕೊಂಡಿರುವ ಚುನಾಯಿತ ಪ್ರತಿನಿಧಿಗಳ ಭಾವಚಿತ್ರಗಳನ್ನು ಸಹ ತೆರವುಗೊಳಿಸಬೇಕಾಗಿದ್ದು, ಭಾವಚಿತ್ರ ಅಳವಡಿಸಲು ಪರವಾನಿಗೆ ಪಡೆದಿದ್ದಲ್ಲಿ ಅದನ್ನು ಪಕ್ಷದ ವೆಚ್ಚಕ್ಕೆ ಸೇರಿಸಬೇಕೆಂದರು.
ಜಿಲ್ಲೆಯಲ್ಲಿರುವ ಸರ್ಕಾರಿ ಕಾಮಗಾರಿಗಳ ಅನುಷ್ಠಾನ ಸಂಸ್ಥೆಗಳು ಪ್ರಾರಂಭಿಸಿರುವ ಕಾಮಗಾರಿಗಳ ಪಟ್ಟಿ ಮಾಡಿ ಸಲ್ಲಿಸಬೇಕು. ಪ್ರಾರಂಭವಾಗದ ಕಾಮಗಾರಿಗಳನ್ನು ಪ್ರಾರಂಭಿಸಬಾರದು. ಪ್ರಾರಂಭವಾಗಿರುವ ಕಾಮಗಾರಿಗಳನ್ನು ಮುಂದುವರೆಸಿ ಅವುಗಳ ಬಿಲ್ ಮಾಡಲು ಯಾವುದೇ ತೊಂದರೆ ಇರುವುದಿಲ್ಲ. ಬರ ಕಾಮಗಾರಿಗಳು ಹಾಗೂ ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಆಯಾ ಇಲಾಖೆಗಳು ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ. ಕ್ರಿಯಾ ಯೋಜನೆಯಲ್ಲಿ ಅನುಮೋದನೆಗೊಂಡ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದೆ ಎಂದು ತಿಳಿಸಿದ ಜಿಲ್ಲಾಧಿಕಾರಿಗಳು ಯಾವುದೇ ಕಾರಣಕ್ಕೂ ಅಧಿಕಾರಿಗಳು ಪೂರ್ವಾನುಮತಿ ಇಲ್ಲದೇ ಕೇಂದ್ರ ಸ್ಥಾನ ಬಿಡಬಾರದು ಎಂದು ಎಚ್ಚರಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪಿ. ರಾಜಾ ಮಾತನಾಡಿ, ವಿವಿಧ ಸಮಿತಿಗಳಿಗೆ ನೇಮಸಲಾಗಿರುವ ನೋಡಲ್ ಅಧಿಕಾರಿಗಳು ಪ್ರತಿದಿನ ವರದಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಮುಖ್ಯವಾಗಿ ಪ್ರತಿದಿನ ವಶಪಡಿಸಿಕೊಂಡ ಹಣ, ವಸ್ತುಗಳು ಹಾಗೂ ದಾಖಲಾದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ವಿವರವನ್ನು ಕಡ್ಡಾಯವಾಗಿ ನೀಡಬೇಕು. ಲೀಡ್ ಬ್ಯಾಂಕ್‍ನವರು ದೊಡ್ಡ ಮೊತ್ತದ ಹಣದ ವರ್ಗಾವಣೆ ಮೇಲೆ ನಿಗಾವಹಿಸಬೇಕು. ಬ್ಯಾಂಕ್ ಶಾಖೆಗಳಿಗೆ ಹಣ ಜಮಾ ಮಾಡಲು ಬ್ಯಾಂಕಿನವರು ಕೊಂಡೊಯ್ಯುವ ಹಣದ ಬಗ್ಗೆ ನಿಖರ ದಾಖಲೆ ಇಟ್ಟುಕೊಳ್ಳಬೇಕು. ಧಾರ್ಮಿಕ ಕಾರ್ಯಕ್ರಮ ಮತ್ತು ಮದುವೆಗಳಿಗೆ ಯಾವುದೇ ಪೂರ್ವಾನುಮತಿ ಪಡೆಯುವ ಅವಶ್ಯಕತೆಯಿಲ್ಲ. ಆದರೆ ಯಾವುದಾದರೂ ಪ್ರಕರಣ ದಾಖಲಾದರೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಮತಗಟ್ಟೆವಾರು ಅಂಗವಿಕಲರ ಪಟ್ಟಿ ಸಿದ್ಧಪಡಿಸಿ ಸಲ್ಲಿಸಬೇಕೆಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟೀನ್ ಮಾರ್ಬನ್ಯಾಂಗ್, ಮಹಾನಗರ ಪಾಲಿಕೆ ಆಯುಕ್ತ ಬಿ. ಫೌಜಿಯಾ ತರನ್ನುಮ್, ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ಸ್ನೇಹಲ ಸುಧಾಕರ ಲೋಖಂಡೆ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಜಿಲ್ಲಾಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

ಸಾರ್ವತ್ರಿಕ ಲೋಕಸಭಾ ಚುನಾವಣೆ ಘೋಷಣೆ ಹಿನ್ನಲೆ:
***********************************************
ಮಾದರಿ ನೀತಿ ಸಂಹಿತೆ ಜಾರಿ--- ಆರ್.ವೆಂಕಟೇಶ್ ಕುಮಾರ
*****************************************************
ಕಲಬುರಗಿ,ಮಾ.11.(ಕ.ವಾ.)- ಭಾರತ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರು ರವಿವಾರ ಸಾರ್ವತ್ರಿಕ ಲೋಕಸಭಾ ಚುನಾವಣೆಯನ್ನು ಘೋಷಣೆ ಮಾಡಿದ್ದು, ಘೋಷಣೆ ಮಾಡಿದ ತಕ್ಷಣದಿಂದಲೆ (ಮಾರ್ಚ್ 10) ಗುಲಬರ್ಗಾ ಲೋಕಸಭಾ ಕ್ಷೇತ್ರದಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ ಎಂದು ಕಲಬುರಗಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ತಿಳಿಸಿದರು.
ಅವರು ಸೋಮವಾರ ಇಲ್ಲಿನ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಗುಲಬರ್ಗಾ ಲೋಕಸಭಾ ಕ್ಷೇತ್ರದ ಚುನಾವಣೆಯು ಮೂರನೇ ಹಂತದಲ್ಲಿ ಅಂದರೆ ಏಪ್ರಿಲ್ 23 ರಂದು ಮತದಾನ ನಡೆಯಲಿದ್ದು, ಮೇ 23ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ. ಸಾರ್ವತ್ರಿಕ ಲೋಕಸಭಾ ಚುನಾವಣೆ ಶಾಂತಿಯುತ ಹಾಗೂ ಸೂಸುತ್ರವಾಗಿ ಚುನಾವಣೆ ನಡೆಸಲು ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದರು.
ಗುಲಬರ್ಗಾ ಲೋಕಸಭಾ(ಪ.ಜಾ) ಮೀಸಲು ಕ್ಷೇತ್ರವಾಗಿದ್ದು, ಇದರಡಿ ಕಲಬುರಗಿ ಜಿಲ್ಲೆಯ ಅಫಜಲಪೂರ, ಜೇವರ್ಗಿ, ಚಿತ್ತಾಪುರ, ಸೇಡಂ, ಕಲಬುರಗಿ ಉತ್ತರ, ಕಲಬುರಗಿ ದಕ್ಷಿಣ, ಕಲಬುರಗಿ ಗ್ರಾಮೀಣ ಹಾಗೂ ಯಾದಗಿರಿ ಜಿಲ್ಲೆಯ ಗುರುಮಠಕಲ್ ಕ್ಷೇತ್ರಗಳು ಬರುತ್ತವೆ. ಲೋಕಸಭಾ ಮತಕ್ಷೇತ್ರದಲ್ಲಿ ಇಂದಿನ ವರೆಗೆ ಒಟ್ಟು 19,20,977 ಮತದಾರರಿದ್ದು, ಅದರಲ್ಲಿ 96,82,42 ಪುರುಷ ಮತದಾರರು, 95,27,35 ಮಹಿಳಾ ಮತದಾರರಿದ್ದಾರೆ. 14117 ವಿಕಲಚೇತನ ಮತದಾರರಿದ್ದು, ಅವರನ್ನು ಮತದಾನ ಕೇಂದ್ರಕ್ಕೆ ಕರೆತರಲು ವಾಹನದ ವ್ಯವಸ್ಥೆ ಮಾಡಲಾಗುವುದಲ್ಲದೆ ಮತಗಟ್ಟೆಗಳಲ್ಲಿ ರ್ಯಾಂಪ್ ವ್ಯವಸ್ಥೆ ಸಹ ಮಾಡಲಾಗುವುದು. 660 ಸೇವಾ ಮತದಾರರಿದ್ದು, ಕ್ಷೇತ್ರದಲ್ಲಿ ಈ ಬಾರಿ 35521 ಹೊಸದಾಗಿ ಯುವ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಂಡಿದ್ದಾರೆ. ಮತದಾರರ ನೊಂದಣಿ ನಿರಂತರ ಪ್ರಕ್ರಿಯೆ ನಡೆಯಲಿದ್ದು, ಈಗಲೂ ಸಹ ಮತದಾರರು ನಮೂನೆ 6, 7, 8ರಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದರು.
ಕ್ಷೇತ್ರದಾದ್ಯಂತ 2368 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಇದರಲ್ಲಿ 516 ಸೂಕ್ಷ್ಮ ಮತಗಟ್ಟೆ ಹಾಗೂ 61 ವಲ್‍ನರಬೇಲ್ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಈಬಾರಿಯೂ ಮಹಿಳಾ ಮತದಾರರನ್ನು ಮತದಾನದತ್ತ ಸೆಳೆಯಲು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸಖಿ ಪಿಂಕ್ ಬೂತ್ ಸ್ಥಾಪಿಸಲಾಗುವುದು ಎಂದರು.
ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ರಾಜಕೀಯ ನಾಯಕರಿಗೆ ಸರ್ಕಾರದಿಂದ ಒದಗಿಸಲಾದ ವಾಹನಗಳನ್ನು ಕೂಡಲೆ ಹಿಂಪಡೆಯಲಾಗುವುದು. ಹೆದ್ದಾರಿ ಫಲಕಗಳ ಮೇಲಿರುವ ಸರ್ಕಾರಿ ಜಾಹೀರಾತುಗಳ ಫ್ಲೆಕ್ಸ್‍ಗಳನ್ನು ತೆಗೆಯಲಾಗುವುದು. ಅಲ್ಲದೆ ಸರ್ಕಾರಿ ಪ್ರವಾಸಿ ಮಂದಿರಗಳನನ್ನು ಸಹ ವಶಕ್ಕೆ ಪಡೆಯಲು ನಿರ್ದೇಶನ ನೀಡಿದೆ. ಚುನಾವಣಾ ಆಯೋಗದ ಅನುಮತಿ ಪಡೆಯದೆ ವರ್ಗಾವಣೆ, ನಿಯೋಜನೆ ಮಾಡುವುದನ್ನು ಸಹ ನಿಷೇಧಿಸಲಾಗಿದೆ ಎಂದರು.
ಕಲಬುರಗಿ ಜಿಲ್ಲೆಯು ಅಂತರಾಜ್ಯಕ್ಕೆ ಹೊಂದಿಕೊಂಡಿದ್ದು, ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು, ಅಕ್ರಮಗಳನ್ನು ತಡೆಗಟ್ಟವ ನಿಟ್ಟಿನಲ್ಲಿ ಜಿಲ್ಲೆಯ ಆಯ್ದ ಸ್ಥಳಗಳಲ್ಲಿ ಚೆಕ್ ಪೋಸ್ಟ್, ಪ್ರಮುಖ 27 ಸ್ಥಳಗಳಲ್ಲಿ ಸ್ಟ್ಯಾಟಿಕ್ ಸರ್ವಿಲೆನ್ಸ್ ತಂಡ ಸ್ಥಾಪಿಸಲಾಗುವುದು. ಚೆಕ್‍ಪೋಸ್ಟ್‍ನಲ್ಲಿ ಪೊಲೀಸ್, ಕಂದಾಯ–ವಾಣಿಜ್ಯ ಇಲಾಖೆಯ ಅಧಿಕಾರಿಗಳನ್ನು ನೇಮಿಸಿ 24 ಗಂಟೆ ತಪಾಸಣೆ ಮಾಡಲಾಗುವುದು. ಅಕ್ರಮ ಪತ್ತೆಗಾಗಿ 63 ಫ್ಲೈಯಿಂಗ್ ಸ್ಕ್ವಾಡ್ ರಚನೆ, ಸಾರ್ವಜನಿಕ ಸಭೆ-ಸಮಾರಂಭಗಳ ಮೇಲೆ ನಿಗಾ ಇಡಲು 20 ವಿಡಿಯೋ ಸರ್ವಿಲೆಂಸ್ ತಂಡ, 8 ವಿಧಾನಸಭಾ ಕ್ಷೇತ್ರಗಳಿಗೆ ತಲಾ ಒಂದರಂತೆ ಹಾಗೂ ತಂಡ ನೀಡುವ ವೀಡಿಯೋಗಳನ್ನು ವೀಕ್ಷಿಸಲು 9 ವೀವಿಂಗ್ ತಂಡ ರಚಿಸಲಾಗಿದೆ. ಚುನಾವಣೆಯ ಖರ್ಚು ವೆಚ್ಚದ ಲೆಕ್ಕಾ ಇಡಲು 12 ಲೆಕ್ಕಪತ್ರ ತಂಡ ಕಾರ್ಯನಿರ್ವಹಿಸಲಿವೆ. ಚುನಾವಣೆ ಕಾರ್ಯಕ್ಕೆ ಒಟ್ಟಾರೆ 14682 ಸಿಬ್ಬಂದಿ ಅವಶ್ಯಕತೆ ಇದ್ದು ಈಗಾಗಲೆ ಗುರುತಿಸಲಾಗಿದೆ. ಚುನಾವಣೆ ಕೆಲಸಕ್ಕಾಗಿ ನೇಮಿಸಲಾಗಿರುವ ತಂಡ ಹಾಗೂ ಸಿಬ್ಬಂದಿಗೆ ಈಗಾಗಲೆ ತರಬೇತಿ ನೀಡಲಾಗಿದೆ ಎಂದು ವಿವರಿಸಿದರು.
ಕಾಸಿಗಾಗಿ ಸುದ್ದಿ ಮೇಲೆ ನಿಗಾ:- ಕಾಸಿಗಾಗಿ ಸುದ್ದಿ ಸೇರಿದಂತೆ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾವಹಿಸಲು ಎಂ.ಸಿ.ಎಂ.ಸಿ ತಂಡ ನೇಮಿಸಲಾಗಿದೆ. ಇದಲ್ಲದೆ ಟಿ.ವಿ., ಸ್ಥಳೀಯ ಕೇಬಲ್, ರೇಡಿಯೋಗಳಲ್ಲಿ, ಎಲ್.ಇ.ಡಿ. ಸ್ಕ್ರೀನ್ ವಾಹನಗಳ ಮೇಲೆ ದೃಶ್ಯ ಮತ್ತು ಆಡಿಯೋ ಜಾಹೀರಾತು ಪ್ರಸಾರಕ್ಕೆ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ. ಈ ಬಾರಿ ಕಣದಲ್ಲಿರುವ ಅಭ್ಯರ್ಥಿಗಳು ತಮ್ಮ ಅಫಿಡೇವಿಟ್‍ನಲ್ಲಿ ಸಾಮಾಜಿಕ ಜಾಲತಾಣದ ಖಾತೆಯ ವಿವರ ಸಹ ಸಲ್ಲಿಸುವುದು ಕಡ್ಡಾಯ ಮಾಡಲಾಗಿದೆ ಎಂದರು.
ದೂರಿಗೆ ಶುಲ್ಕರಹಿತ ಸಹಾಯವಾಣಿ:- ಚುನಾವಣೆಗೆ ಸಂಬಂಧಿಸಿದಂತೆ ದೂರು ಸ್ವೀಕರಿಸಲು 24ಘಿ7 ತಾಸು ಶುಲ್ಕರಹಿತ 1950 ಸಹಾಯವಾಣಿ ಆರಂಭಿಸಿದೆ. ಸಾರ್ವಜನಿಕರು ಇಲ್ಲಿ ದೂರುಗಳನ್ನು ಸಲ್ಲಿಸಬಹುದಾಗಿದೆ. ಸಹಾಯವಾಣಿಯಲ್ಲಿ ಸ್ವೀಕರಿಸಿರುವ ದೂರುಗಳನ್ನು ಆನ್‍ಲೈನ್ ಮುಖಾಂತರ ಅಪಡೇಟ್ ಮಾಡಿ ಶೀಘ್ರಗತಿಯಲ್ಲಿ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು. ಇದಲ್ಲದೆ ಸಿಟಿಜನ್ ವಿಜಲ್ ಆ್ಯಪ್ ಸಹ ಅಭಿವೃದ್ಧಿಪಡಿಸಲಾಗಿದ್ದು, ಸಾರ್ವಜನಿಕರು ಪ್ಲೇಸ್ಟೋರ್‍ನಿಂದ ಈ ಆ್ಯಪ್ ಡೌನಲೋಡ್ ಮಾಡಿಕೊಂಡು ಮೋಬೈಲ್ ಮೂಲಕವು ಸಹ ದೂರು ಸಲ್ಲಿಸಬಹುದಾಗಿದೆ.
ಮದುವೆ ಸೇರಿದಂತೆ ಧಾರ್ಮಿಕ ಸಮಾರಂಭಕ್ಕೆ ಅನುಮತಿ ಬೇಕಿಲ್ಲ:- ನೀತಿ ಸಂಹಿತೆ ಅವಧಿಯಲ್ಲಿ ಮದುವೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳಿಗೆ ಅನುಮತಿ ಪಡೆಯುವ ಅವಶ್ಯಕತೆಯಿಲ್ಲ ಎಂದು ಸ್ಪಷ್ಠಪಡಿಸಿದ ಜಿಲ್ಲಾಧಿಕಾರಿಗಳು, ಇದೇ ಸಮಯವನ್ನು ಬಳಸಿಕೊಂಡು ರಾಜಕೀಯ ನಾಯಕರು ನೀತಿ ಸಂಹಿತೆ ಉಲ್ಲಂಘನೆಯಾಗುವ ರೀತಿಯಲ್ಲಿ ನಡೆದುಕೊಂಡಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು. ಇದಲ್ಲದೆ ರಾತ್ರಿ 10 ಗಂಟೆಯಿಂದ ಬೆಳಗಿನ 6 ಗಂಟೆ ವರೆಗೆ ಧ್ವನಿವರ್ಧಕ ಸ್ಪೀಕರ್ ಬಳಸುವಂತಿಲ್ಲ ಎಂದು ಆಯೋಗ ನಿರ್ದೇಶನ ನೀಡಿದ್ದು, ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದರು.
ಬರಪರಿಹಾರ, ಉದ್ಯೋಗ ಖಾತ್ರಿ ಕೆಲಸಗಳಿಗೆ ಅಡ್ಡಿಯಿಲ್ಲ:- ಕಲಬುರಗಿ ಜಿಲ್ಲೆಯ ಎಲ್ಲಾ ತಾಲೂಕುಗಳು ಬರಪೀಡಿತ ತಾಲೂಕುಗಳೆಂದು ಈಗಾಗಲೆ ಘೋಷಿಸಲಾಗಿದ್ದು, ಎಲ್ಲೆಡೆ ಬರ ಪರಿಹಾರ ಕಾರ್ಯಗಳು ನಡೆದಿವೆ. ನೀತಿ ಸಂಹಿತೆಯಡಿ ಬರ ಪರಿಹಾರ ಕಾಮಗಾರಿ, ಮೇವು ಖರೀದಿ, ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗಳು ಬರುವುದಿಲ್ಲ. ಹೀಗಾಗಿ ಬರ ಪರಿಹಾರ ಮತ್ತು ಕುಡಿಯುವ ನೀರಿನ ಕಾಮಗಾರಿಗಳಿಗೆ ಯಾವುದೇ ಅಡ್ಡಿಯಿಲ್ಲ. ಕ್ಷೇತ್ರದಾದ್ಯಂತ ಹೊಸದಾಗಿ ಸರ್ಕಾರಿ ಕಾಮಗಾರಿಗಳು ಆರಂಭಿಸುವಂತಿಲ್ಲ ಎಂದ ಜಿಲ್ಲಾಧಿಕಾರಿಗಳು ಈಗಾಗಲೇ ಕಾಮಗಾರಿಗೆ ಚಾಲನೆ ನೀಡಿದರೆ ಅದನ್ನು ಮುಂದುವರೆಸಬಹುದು ಎಂದರು.
ಸಭೆ-ಸಮಾರಂಭ ಹಾಗೂ ವಾಹನ ಪರವಾನಿಗೆ ಕಡ್ಡಾಯ:- ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಹಾಗೂ ಸಂಘ ಸಂಸ್ಥೆಗಳು ಚುನಾವಣಾ ಪ್ರಚಾರಕ್ಕೆಂದು ನಡೆಸುವ ಸಭೆ, ಸಮಾರಂಭ ಹಾಗೂ ವಾಹನಗಳ ಓಡಾಟಗಳಿಗೆ ಪರವಾನಿಗೆ ಪಡೆಯುವುದು ಕಡ್ಡಾಯವಾಗಿದೆ. ಒಂದೇ ಸೂರಿನಡಿ ಪರವಾನಿಗೆ ಪಡೆಯಲು ಎಲ್ಲಾ ಸಹಾಯಕ ಚುನಾವಣಾಧಿಕಾರಿಗಳ ಕಚೇರಿ ಹಾಗೂ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಏಕ ಗವಾಕ್ಷಿ ಪದ್ಧತಿಯಡಿ ಸಿಂಗಲ್ ವಿಂಡೋ ಸ್ಥಾಪಿಸಲಾಗುವುದು. ಇದಲ್ಲದೆ ವಿವಿಧ ಪರವಾನಿಗೆಗಳಿಗೆ ಆನ್‍ಲೈನ್‍ನಲ್ಲಿಯೆ ಅರ್ಜಿ ಸಲ್ಲಿಸಿ ಪರವಾನಿಗೆ ಪಡೆಯಲು “ಸುವಿಧಾ” ಸಾಫ್ಟವೇರ ಸಹ ಲಭ್ಯವಿದ್ದು, ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಇದನ್ನು ಸಹ ಬಳಸಿಕೊಳ್ಳಬಹುದಾಗಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಮಾತನಾಡಿ ಶಾಂತಿ ಮತ್ತು ಸುಸೂತ್ರವಾಗಿ ಚುನಾವಣೆ ನಡೆಸಲು ರಾಜ್ಯಕ್ಕೆ 10 ಸಿ.ಪಿ.ಎಂ.ಎಫ್ ಪೊಲೀಸ್ ಪಡೆಗಳು ಬಂದಿದ್ದು, ಇದರಲ್ಲಿ ಒಂದು ತಂಡ ಮೂರ್ನಾಲ್ಕು ದಿನಗಳಲ್ಲಿ ಕಲಬುರಗಿಗೆ ಬರಲಿದೆ. ಚೆಕ್‍ಪೋಸ್ಟ್, ಎಸ್.ಎಸ್.ಟಿ. ತಂಡಕ್ಕೆ, ಸೂಕ್ಷ್ಮ ಮತ್ತು ವಲನರೇಬಲ್ ಮತಗಟ್ಟೆಗಳಿಗೆ ಸಿ.ಪಿ.ಎಂ.ಎಫ್ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಜಿಲ್ಲೆಯಲ್ಲಿ 3668 ರೌಡಿಗಳು ರೌಡಿಶೀಟರ್ ಪಟ್ಟಿಯಲ್ಲಿದ್ದು, ಇದರಲ್ಲಿ 213 ರೌಡಿಗಳು ಮತದಾರರ ಮೇಲೆ ಪ್ರಭಾವ ಭೀರುವ ಸಾಧ್ಯತೆ ಇರುವುದರಿಂದ ಅವರ ಮೇಲೆ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಲಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಪಿ.ರಾಜಾ, ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಪ್ರಸನ್ನ ದೇಸಾಯಿ, ಮಹಾನಗರ ಪಾಲಿಕೆಯ ಆಯುಕ್ತೆ ಬಿ.ಫೌಜಿಯಾ ತರನ್ನುಮ್, ಪ್ರೊಬೇಷನರ್ ಐ.ಎ.ಎಸ್. ಅಧಿಕಾರಿ ಸ್ನೇಹಲ ಸುಧಾಕರ ಲೋಖಂಡೆ, ಪ್ರೊಬೇಷನರ್ ಐ.ಪಿ.ಎಸ್. ಅಧಿಕಾರಿ ರಾಮರಜನ ಕೆ. ಉಪಸ್ಥಿತರಿದ್ದರು.
ಚುನಾವಣಾ ಕೈಪಿಡಿ ಬಿಡುಗಡೆ: ಕಲಬುರಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಹೊರ ತಂದಿರುವ “ಲೋಕಸಭಾ ಚುನಾವಣೆ-2019: ಕಲಬುರಗಿ ಜಿಲ್ಲಾ ಚುನಾವಣೆ ಹಿನ್ನೋಟ 1957-2014” ಎಂಬ ಚುನಾವಣಾ ಕೈಪಿಡಿಯನ್ನು ಇದೇ ಸಂದರ್ಭದಲ್ಲಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಅವರು ಬಿಡುಗಡೆಗೊಳಿಸಿದರು.
ಜಿಲ್ಲೆಯಲ್ಲಿ 1957 ರಿಂದ 2014 ರವರೆಗೆ ನಡೆದ ಪ್ರತಿ ಲೋಕಸಭಾ ಚುನಾವಣೆಯ ಮಾಹಿತಿ ಈ ಕೈಪಿಡಿಯಲ್ಲಿ ಇದ್ದು, ಲೋಕಸಭಾ ಕ್ಷೇತ್ರ, ಒಟ್ಟು ಮತದಾರರ ಸಂಖ್ಯೆ, ಸ್ಪರ್ಧಿಸಿದ್ದ ಅಭ್ಯರ್ಥಿಗಳು, ಪಕ್ಷ, ಅಭ್ಯರ್ಥಿಗಳು ಪಡೆದ ಮತಗಳು ಸೇರಿದಂತೆ ಚುನಾವಣೆಯ ಸಮಗ್ರ ಮಾಹಿತಿಯನ್ನು ಈ ಕೈಪಿಡಿ ಒಳಗೊಂಡಿದೆ.

ಲೋಕಸಭಾ ಚುನಾವಣೆ: ಆಯುಧ ಠೇವಣಿ ಮಾಡಲು ಸೂಚನೆ
******************************************************
ಕಲಬುರಗಿ.ಮಾ.11.(ಕ.ವಾ.)-ಲೋಕಸಭಾ ಚುನಾವಣೆ-2019 ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಅನುಕೂಲವಾಗುವಂತೆ ಕಲಬುರಗಿ ಜಿಲ್ಲೆಯಾದ್ಯಂತ ಹೊಂದಿರುವ ಆಯುಧ ಲೈಸೆನ್ಸ್‍ದಾರರ ಆಯುಧ (ಫೈರ್ ಆಮ್ರ್ಸ್)ಗಳನ್ನು (ರಾಷ್ಟ್ರೀಕೃತ ಬ್ಯಾಂಕ್ ಮತ್ತು ರಿಸರ್ವ್ ಬ್ಯಾಂಕ ಅವರಿಂದ ಅನುಮೋದಿತ ಶೆಡ್ಯೂಲ್ ಬ್ಯಾಂಕುಗಳ ಸೆಕ್ಯೂರಿಟಿ ಗಾರ್ಡಗಳ ಆಯುಧಗಳನ್ನು ಹೊರತುಪಡಿಸಿ) ತಕ್ಷಣದಿಂದಲೇ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಠೇವಣಿ ಮಾಡುವಂತೆ ಜಿಲ್ಲಾ ದಂಡಾಧಿಕಾರಿ ಆರ್.ವೆಂಕಟೇಶ ಕುಮಾರ ಸೂಚಿಸಿ ಆದೇಶ ಹೊರಡಿಸಿದ್ದಾರೆ.
ಆಯುಧ ಕಾಯ್ದೆ 1959ರ ಕಲಂ 24ಎ(1)ರನ್ವಯ ಹೊರಡಿಸಿರುವ ಈ ಆದೇಶದಲ್ಲಿ ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೂ ಅಂದರೆ 2019ರ ಮೇ 27 ರವರೆಗೆ ಯಾವುದೇ ಆಯುಧ ಲೈಸೆನ್ಸ್‍ದಾರರು ತಮ್ಮ ಆಯುಧವನ್ನು ಚುನಾವಣೆ ಸ್ಥಳ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಹೊತ್ತು ಒಯ್ಯುವುದನ್ನು ಮತ್ತು ಪ್ರದರ್ಶನ ಮಾಡುವುದನ್ನು ಸಹ ನಿಷೇಧಿಸಲಾಗಿದೆ ಎಂದು ಅವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಜವಾಹರ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ:
ಪ್ರವೇಶ ಪತ್ರ ಡೌನ್‍ಲೋಡ್ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಸೂಚನೆ
ಕಲಬುರಗಿ.ಮಾ.11.(ಕ.ವಾ.)-ಚಿತ್ತಾಪುರ ತಾಲೂಕಿನ ಕೋರವಾರ ಜವಾಹರ ನವೋದಯ ವಿದ್ಯಾಲಯದ 6ನೇ ತರಗತಿ ಪ್ರವೇಶ ಪರೀಕ್ಷೆಯು 2019ರ ಏಪ್ರಿಲ್ 6 ರಂದು ಚಿಂಚೋಳಿ, ಸೇಡಂ ಹಾಗೂ ಚಿತ್ತಾಪುರ ತಾಲೂಕಿನ ಒಟ್ಟು 10 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ ಎಂದು ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯರು ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಆನ್‍ಲೈನ್ ಮೂಲಕ ಪ್ರವೇಶ ಪತ್ರಗಳನ್ನು ಡೌನ್‍ಲೋಡ್ ಮಾಡಿಕೊಳ್ಳಬೇಕು. ಡೌನ್‍ಲೋಡ್ ಮಾಡುವಾಗ ಏನಾದರೂ ಸಮಸ್ಯೆ ಬಂದಲ್ಲಿ ಅರ್ಜಿ ಸಲ್ಲಿಸಿದ ನೋಂದಣಿ ಸಂಖ್ಯೆ ಹಾಗೂ ಪಾಸ್‍ವರ್ಡ್‍ದೊಂದಿಗೆ ಕೋರವಾರ ಜವಾಹರ ನವೋದಯ ವಿದ್ಯಾಲಯವನ್ನು ಹಾಗೂ ಮೊಬೈಲ್ ಸಂಖ್ಯೆ 9449385301, 6360099749ಗಳಿಗೆ ಸಂಪರ್ಕಿಸಬೇಕೆಂದು ಕೋರವಾರ ಜವಾಹರ ವಿದ್ಯಾಲಯದ ಪ್ರಾಚಾರ್ಯರು ತಿಳಿಸಿದ್ದಾರೆ.

ಮಾರ್ಚ್ 12ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
************************************************
ಕಲಬುರಗಿ,ಮಾ. 11.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ವಿಭಾಗ-1ರಿಂದ 33/11ಕೆ.ವಿ. ಗುಡೂರ ಉಪ ವಿತರಣಾ ಕೇಂದ್ರದಲ್ಲಿ ಲೈನ್ ಶಿಫ್ಟಿಂಗ್ ಕಾರ್ಯಕೈಗೊಂಡಿರುವ ಹಿನ್ನೆಲೆಯಲ್ಲಿ 2019ರ ಮಾರ್ಚ್ 12ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಸದರಿ ಉಪವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಫೀಡರ್ ವ್ಯಾಪ್ತಿಯ ಗ್ರಾಮ ಹಾಗೂ ಇತರೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.
33/11ಕೆ.ವಿ. ಗುಡೂರ: ಎಫ್-2 ಕೋಗನೂರ, ಎಫ್-3 ನೀಲೂರ ಹಾಗೂ ಎಫ್‍ಎಸ್ ಭೈರಾಮಡಗಿ.

ಕಲಬುರಗಿ,ಮಾ.11.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗದಿಂದ 11 ಕೆವಿ. ಟಿ.ವಿ. ಸ್ಟೇಶನ್ ಫೀಡರ್ ಮೇಲೆ ತುರ್ತು ನಿರ್ವಹಣಾ ಕಾರ್ಯ ಕೈಗೆತ್ತಿಕೊಂಡಿರುವ ಪ್ರಯುಕ್ತ ಮಂಗಳವಾರ ಮಾರ್ಚ್ 12ರಂದು ಬೆಳಗಿನ 10ರಿಂದ ಸಾಯಂಕಾಲ 4ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸದರಿ ಕೇಂದ್ರದ ಮೇಲೆ ಬರುವ ಫೀಡರ್ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.
11ಕೆ.ವಿ ಟಿ.ವಿ. ಸ್ಟೇಶನ್ ಫೀಡರ್: ಮುನಿಂ ಸಂಘ, ಕಾಕಡೆ ಚೌಕ್, ರಾಮನಗರ, ರೇವಣಸಿದ್ದೇಶ್ವರ ಕಾಲೋನಿ, ಕೆ.ಕೆ. ನಗರ, ಶಿವಾಜಿ ನಗರ ಮತ್ತು ಭವಾನಿ ನಗರ.

ಕುಡಿಯವ ನೀರಿನ ಸಮಸ್ಯೆ ನಿವಾರಣೆಗಾಗಿ ವಾರ್ಡುವಾರು
**************************************************
ನೋಡಲ್ ಅಧಿಕಾರಿಗಳ ನೇಮಕ
*****************************
ಕಲಬುರಗಿ.ಮಾ.11.(ಕ.ವಾ.)-ಪ್ರಸ್ತುತ ಬೇಸಿಗೆ ಕಾಲದಲ್ಲಿ ಕಲಬುರಗಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗದಂತೆ ನೋಡಿಕೊಳ್ಳಲು ಹಾಗೂ ಕುಡಿಯುವ ನೀರು ಸರಬರಾಜು ಕುರಿತು ಸಾರ್ವಜನಿಕರಿಂದ ಬರುವ ದೂರುಗಳಿಗೆ ಸಮರ್ಪಕವಾಗಿ ಸ್ಪಂದಿಸಲು ಜಲಮಂಡಳಿಯ ಅಧಿಕಾರಿಗಳಿಗೆ ಸಹಾಯವಾಗುವ ಸಲುವಾಗಿ ಕಲಬುರಗಿ ಮಹಾನಗರ ಪಾಲಿಕೆಯ ಕಚೇರಿಯಿಂದ ಪ್ರತಿ 5 ವಾರ್ಡಗಳಿಗೆ ಒಬ್ಬ ನೋಡಲ್ ಅಧಿಕಾರಿಯನ್ನು ನಿಯೋಜಿಸಿ ಕಲಬುರಗಿ ಮಹಾನಗರಪಾಲಿಕೆ ಆಯುಕ್ಷೆ ಬಿ. ಫೌಜಿಯಾ ತರನ್ನುಮ್ ಅವರು ಆದೇಶ ಹೊರಡಿಸಿದ್ದಾರೆ.
ಜಲಮಂಡಳಿ ಅಧಿಕಾರಿಗಳ ಹೆಸರು, ಮೊಬೈಲ್ ಸಂಖ್ಯೆ ಹಾಗೂ ನಿರ್ವಹಿಸುವ ವಾರ್ಡಗಳ ಸಂಖ್ಯೆಗಳ ವಿವರ ಇಂತಿದೆ. ಜಲಮಂಡಳಿಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ದೀಲಿಪ್ ಸಿಂಗ್ (ಮೊಬೈಲ್ ಸಂಖ್ಯೆ 9448650051) ಹಾಗೂ ಉಮೇಶ ಪಂಚಾಳ (ಮೊಬೈಲ್ ಸಂಖ್ಯೆ 9480689519) ಅವರು ವಾರ್ಡ ಸಂಖ್ಯೆ 16ಪಿ, 17ಪಿ, 24, 25, 26, 27ಪಿ, 29ಪಿ, 30, 31, 39ಪಿ, 41,42, 43, 44ಪಿ, 45ಪಿ, 46, 47, 48ಪಿ ವಾರ್ಡಗಳನ್ನು, ಸಹಾಯಕ ಇಂಜಿನಿಯರ್ ಕೆ.ಎಂ.ಜೋಶಿ (ಮೊಬೈಲ್ ಸಂಖ್ಯೆ 9480689518) ವಾರ್ಡ ಸಂಖ್ಯೆ 1, 3, 6, 7, 8, 16ಪಿ, 17ಪಿ, 18, 19, 20, 22, 23, 32 ಹಾಗೂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅಬ್ದುಲ್ ಬಾಸೀತ್ ಮೊಬೈಲ್ ಸಂಖ್ಯೆ 9480689516 ಅವರು 2, 4, 5, 9, 10, 12, 13, 14, 15, 16ಪಿ, 27ಪಿ, 28, 29ಪಿ, 32ಪಿ, 38 ಪಿ, 48ಪಿ, 50, 53, 54 ಹಾಗೂ 55 ವಾರ್ಡಗಳನ್ನು ನಿರ್ವಹಿಸುತ್ತಿದ್ದಾರೆ.
ವಾರ್ಡವಾರು ನೇಮಕ ಮಾಡಲಾದ ಮಹಾನಗರ ಪಾಲಿಕೆ ನೋಡಲ್ ಅಧಿಕಾರಿ ಹೆಸರು ಹಾಗೂ ಮೊಬೈಲ್ ಸಂಖ್ಯೆಗಳ ವಿವರ: 02, 17, 24, 25, 26 ವಾರ್ಡುಗಳಿಗೆ ಬಾಬು-ಮೊಬೈಲ್ ಸಂಖ್ಯೆ 9686763581, ವಾರ್ಡ ಸಂಖ್ಯೆ 44, 45, 46, 47 ಮತ್ತು 48 ಗಳಿಗೆ ಪ್ರದೀಪ-ಮೊಬೈಲ್ ಸಂಖ್ಯೆ 8217314224, ವಾರ್ಡ ಸಂಖ್ಯೆ 43, 51, 52, 49 ಗಳಿಗೆ ಸಚೀನ-ಮೊಬೈಲ್ ಸಂಖ್ಯೆ 9738847601, ವಾರ್ಡ ಸಂಖ್ಯೆ 3, 6, 7, 8 ಮತ್ತು 35 ಗಳಿಗೆ ಸುಧೀರ್ ಮೇತ್ರಿ-ಮೊಬೈಲ್ ಸಂಖ್ಯೆ 9742546605, ವಾರ್ಡ ಸಂಖ್ಯೆ 18, 19, 22, 23 ಮತ್ತು 34 ಗಳಿಗೆ ಪುರುಷೋತ್ತಮ್-ಮೊಬೈಲ್ ಸಂಖ್ಯೆ 9620341599, ವಾರ್ಡು ಸಂಖ್ಯೆ 20, 21, 40, 41 ಮತ್ತು 42ಗಳಿಗೆ ಮಹೇಶ-ಮೊಬೈಲ್ ಸಂಖ್ಯೆ 9663363330, ವಾರ್ಡ ಸಂಖ್ಯೆ 22, 33, 36, 37 ಮತ್ತು 39ಗಳಿಗೆ ರೇವಣಸಿದ್ದಪ್ಪ ಮೊಬೈಲ್ ಸಂಖ್ಯೆ 9845688670, ವಾರ್ಡ್ ಸಂಖ್ಯೆ 5, 10, 11, 12, 14, 28 ಗಳಿಗೆ ಎಜಾಜ್ ಇನಾಮದಾರ್-ಮೊಬೈಲ್ ಸಂಖ್ಯೆ 963727867, ವಾರ್ಡ ಸಂಖ್ಯೆ 1, 15, 16, 26, 27, 29ಗಳಿಗೆ ವಾಜೀದ್-ಮೊಬೈಲ್ ಸಂಖ್ಯೆ 9742757860, ವಾರ್ಡ ಸಂಖ್ಯೆ 30, 32, 13, 04 ಮತ್ತು 09 ಗಳಿಗೆ ಶಾಂತಪ್ಪ ಮುಲಗೆ ಮೊಬೈಲ್ ಸಂಖ್ಯೆ 8861601585 ಹಾಗೂ ವಾರ್ಡ ಸಂಖ್ಯೆ 31, 50, 53, 54 ಮತ್ತು 55ಗಳಿಗೆ ಶ್ರೀನಾಥ ಹೊಗಾಡೆ-ಮೊಬೈಲ್ ಸಂಖ್ಯೆ 9739496695 ಇವರನ್ನು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಮಹಾನಗರ ಪಾಲಿಕೆ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹ್ಮದ್ ರಿಯಾಜ್ (ಮೊಬೈಲ್ ಸಂಖ್ಯೆ 8494856409) ಈ ಕಾರ್ಯದ ಮೇಲ್ವಿಚಾರಣೆ ಮಾಡಲಿದ್ದಾರೆ. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯನಿರ್ವಾಹಕ ಇಂಜಿನಿಯರ್ ಆರ್.ವಿ. ಪಾಟೀಲ್ ಮೊಬೈಲ್ ಸಂಖ್ಯೆ 9480813143 ಇವರು ಸಂಪೂರ್ಣ ಮೇಲ್ವಿಚಾರಣೆ ಮಾಡುವರು. ಆಯಾ ವಾರ್ಡಿಗೆ ಸಂಬಂಧಪಟ್ಟಂತೆ ಸಾರ್ವಜನಿಕರು ದೂರವಾಣಿ ಮುಖಾಂತರ ಕುಡಿಯುವ ನೀರು ಪೂರೈಕೆ ಕುರಿತು ದೂರುಗಳು ಸಲ್ಲಿಸಿದ್ದಲ್ಲಿ ಅವುಗಳಿಗೆ ತಕ್ಷಣ ಸ್ಪಂದಿಸಿ ಅಗತ್ಯ ಕುಡಿಯುವ ನೀರಿನ ವ್ಯವಸ್ಥೆಯನ್ನು ಚಾಚು ತಪ್ಪದೆ ಮಾಡಬೇಕು. ನಂತರ ಇದರ ಅನುಸರಣಾ ವರದಿಯನ್ನು ಮೇಲ್ವಿಚಾರಣೆ ಅಧಿಕಾರಿಕಾರಿಗಳಿಗೆ ಸಲ್ಲಿಸಬೇಕೆಂದು ಅವರು ತಿಳಿಸಿದ್ದಾರೆ.

ಹೀಗಾಗಿ ಲೇಖನಗಳು News and Photos Date: 11-3-2019
ಎಲ್ಲಾ ಲೇಖನಗಳು ಆಗಿದೆ News and Photos Date: 11-3-2019 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ News and Photos Date: 11-3-2019 ಲಿಂಕ್ ವಿಳಾಸ https://dekalungi.blogspot.com/2019/03/news-and-photos-date-11-3-2019.html
0 Response to "News and Photos Date: 11-3-2019"
ಕಾಮೆಂಟ್ ಪೋಸ್ಟ್ ಮಾಡಿ