News and Photo Date: 20--03--2019

News and Photo Date: 20--03--2019 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು News and Photo Date: 20--03--2019, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : News and Photo Date: 20--03--2019
ಲಿಂಕ್ : News and Photo Date: 20--03--2019

ಓದಿ


News and Photo Date: 20--03--2019

ಲೋಕಸಭಾ ಚುನಾವಣೆ: ಸಹಾಯಕ ಚುನಾವಣಾಧಿಕಾರಿಗಳ ನೇಮಕ
************************************************************
ಕಲಬುರಗಿ,ಮಾ.20.(ಕ.ವಾ.)-ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಗೆ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಕಲಬುರಗಿ ಜಿಲ್ಲಾ ಚುನಾವಣಾಧಿಕಾರಿ ಆರ್. ವೆಂಕಟೇಶಕುಮಾರ ಅವರು ತಿಳಿಸಿದ್ದಾರೆ. ವಿಧಾನಸಭಾ ಕ್ಷೇತ್ರವಾರು ನೇಮಿಸಲಾದ ಸಹಾಯಕ ಚುನಾವಣಾಧಿಕಾರಿಗಳ ವಿವರ ಇಂತಿದೆ.
34-ಅಫಜಲಪುರ ವಿಧಾನಸಭಾ ಕ್ಷೇತ್ರ-ಕಲಬುರಗಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಅಶೋಕ ದುಡಗುಂಟಿ ಮೊಬೈಲ್ ಸಂಖ್ಯೆ 9740682511 ಹಾಗೂ ದೂರವಾಣಿ ಸಂಖ್ಯೆ 08470-282020.
35-ಜೇವರ್ಗಿ ವಿಧಾನಸಭಾ ಕ್ಷೇತ್ರ-ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಮಾಣಿಕ ರಘೋಜಿ ಮೊಬೈಲ್ ಸಂ. 9448100319 ಹಾಗೂ ದೂರವಾಣಿ ಸಂಖ್ಯೆ 08442-236025.
40-ಚಿತ್ತಾಪುರ ವಿಧಾನಸಭಾ ಕ್ಷೇತ್ರ(ಎಸ್.ಸಿ.)-ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ಮಂಜುನಾಥ ಎ. ಇವರ ಮೊಬೈಲ್ ಸಂಖ್ಯೆ 9845413323 ಹಾಗೂ ದೂರವಾಣಿ ಸಂಖ್ಯೆ 08474-236147.
41-ಸೇಡಂ ವಿಧಾನಸಭಾ ಕ್ಷೇತ್ರ-ಸೇಡಂ ಸಹಾಯಕ ಆಯುಕ್ತ ಪೂಜಾರ ವೀರಮಲ್ಲಪ್ಪ ಮೊಬೈಲ್ ಸಂಖ್ಯೆ 9449654338 ಹಾಗೂ ದೂರವಾಣಿ ಸಂಖ್ಯೆ 08441-276073.
42-ಚಿಂಚೋಳಿ ವಿಧಾನಸಭಾ ಕ್ಷೇತ್ರ(ಎಸ್.ಸಿ.)-ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಸಂತೋಷ ಸಪ್ಪಂಡಿ ಮೊಬೈಲ್ ಸಂಖ್ಯೆ 9448999235 ಹಾಗೂ ದೂರವಾಣಿ ಸಂಖ್ಯೆ 08475-273027.
43-ಗುಲಬರ್ಗಾ ಗ್ರಾಮೀಣ ವಿಧಾನಸಭಾ ಕ್ಷೇತ್ರ (ಎಸ್.ಸಿ.)–ಕಲಬುರಗಿ ಸಹಾಯಕ ಆಯುಕ್ತ ರಾಹುಲ್ ತುಕಾರಾಂ ಪಾಂಡ್ವೆ ಮೊಬೈಲ್ ಸಂಖ್ಯೆ 9890804482 ಹಾಗೂ ದೂರವಾಣಿ ಸಂಖ್ಯೆ 08472-278657.
44-ಗುಲಬರ್ಗಾ ದಕ್ಷಿಣ ವಿಧಾನಸಭಾ ಕ್ಷೇತ್ರ-ಕಲಬುರಗಿ ಕೆಐಎಡಿಬಿ ವಿಶೇಷ ಭೂಸ್ವಾಧೀನ ಅಧಿಕಾರಿ ಡಾ. ಬಿ. ಶರಣಪ್ಪ ಸತ್ಯಂಪೇಟ್ ಮೊಬೈಲ್ ಸಂಖ್ಯೆ 9448949094 ಹಾಗೂ ದೂರವಾಣಿ ಸಂಖ್ಯೆ 08472-260775.
45-ಗುಲಬರ್ಗಾ ಉತ್ತರ ವಿಧಾನಸಭಾ ಕ್ಷೇತ್ರ-ಕಲಬುರಗಿ ಮಹಾನಗರಪಾಲಿಕೆ ಆಯುಕ್ತ ಬಿ. ಫೌಜಿಯಾ ತರನ್ನುಮ್ ಮೊಬೈಲ್ ಸಂಖ್ಯೆ 7406240444 ಹಾಗೂ ದೂರವಾಣಿ ಸಂಖ್ಯೆ 08472-260775.
46-ಆಳಂದ ವಿಧಾನಸಭಾ ಕ್ಷೇತ್ರ-ಕಲಬುರಗಿ ಉಪ ಕಾರ್ಮಿಕ ಆಯುಕ್ತ ಡಾ. ಗಿರೀಶ ಪಾಟೀಲ ಮೊಬೈಲ್ ಸಂಖ್ಯೆ 9739231678 ಹಾಗೂ ದೂರವಾಣಿ ಸಂಖ್ಯೆ 08477-202428.
ಲೋಕಸಭಾ ಚುನಾವಣೆ: ದೂರು ಸ್ವೀಕರಿಸಲು ಸಹಾಯವಾಣಿ ಪ್ರಾರಂಭ
*************************************************************
ಕಲಬುರಗಿ,ಮಾ.20.(ಕ.ವಾ.). 05-ಗುಲಬರ್ಗಾ ಲೋಕಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ 43-ಗುಲಬರ್ಗಾ (ಗ್ರಾಮೀಣ) ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ದೂರು ಸ್ವೀಕರಿಸಲು ಸಹಾಯವಾಣಿ ಪ್ರಾರಂಭವಾಗಿದೆ.
ಸಾರ್ವಜನಿಕರು ಗುಲಬರ್ಗಾ (ಗ್ರಾಮೀಣ) ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಯಾವುದೇ ದೂರುಗಳಿದ್ದಲ್ಲಿ ಈ ಸಹಾಯವಾಣಿ 08472-272555 ಸಂಖ್ಯೆಗೆ ಸಂಪರ್ಕಿಸಿ ದೂರು ಸಲ್ಲಿಸಬಹುದಾಗಿದೆ ಎಂದು ಕಲಬುರಗಿ ಸಹಾಯಕ ಆಯುಕ್ತರು ಹಾಗೂ 43-ಗುಲಬರ್ಗಾ ಗ್ರಾಮೀಣ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳಾದ ರಾಹುಲ್ ತುಕಾರಾಂ ಪಾಂಡ್ವೆ ಅವರು ತಿಳಿಸಿದ್ದಾರೆ.
ಮಾರ್ಚ್ 23ರಂದು ಗ್ರಾಹಕರ ಕುಂದುಕೊರತೆ ಸಭೆ
********************************************
ಕಲಬುರಗಿ,ಮಾ.20.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಕಾರ್ಯ ಮತ್ತು ಪಾಲನೆ ವಿಭಾಗ-2ರ ವ್ಯಾಪ್ತಿಯಲ್ಲಿ ಬರುವ ಜೇವರ್ಗಿ, ಯಡ್ರಾಮಿ, ಚಿತ್ತಾಪುರ, ಶಹಾಬಾದ ಹಾಗೂ ಕಾಳಗಿ ಉಪವಿಭಾಗದ ಕಚೇರಿಯಲ್ಲಿ ಇದೇ ಮಾರ್ಚ್ 23 ಮಧ್ಯಾಹ್ನ 3 ರಿಂದ ಸಂಜೆ 5.30 ಗಂಟೆಯವರೆಗೆ ಗ್ರಾಹಕರ ಕುಂದುಕೊರತೆ ಸಭೆಯು ಜರುಗಲಿದೆ ಎಂದು ಕಾರ್ಯ ಮತ್ತು ಪಾಲನೆ ವಿಭಾಗ-2ರ ಕಾರ್ಯನಿರ್ವಾಹಕ ಇಂಜಿನಿಯರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೇವರ್ಗಿ, ಯಡ್ರಾಮಿ, ಚಿತ್ತಾಪುರ, ಶಹಾಬಾದ ಹಾಗೂ ಕಾಳಗಿ ಉಪವಿಭಾಗ ಶಾಖೆಗಳಲ್ಲಿ ಬರುವ ಗ್ರಾಹಕರು/ಸಾರ್ವಜನಿಕರು ತಮ್ಮ ಗ್ರಾಮಗಳಲ್ಲಿನ ವಿದ್ಯುತ್ ಸಂಬಂಧಿಸಿದ ಸಮಸ್ಯೆಗಳನ್ನು ಈ ಗ್ರಾಹಕರ ಕುಂದುಕೊರತೆ ಸಭೆಯಲ್ಲಿ ಪಾಲ್ಗೊಂಡು ಪರಿಹರಿಸಿಕೊಳ್ಳಬಹುದಾಗಿದೆ. ಸಾರ್ವಜನಿಕರು ಈ ಜನಸ್ಪಂದನ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆಯಬೇಕೆಂದು ಅವರು ತಿಳಿಸಿದ್ದಾರೆ.
ಹೋಳಿ ಹಬ್ಬಕ್ಕಾಗಿ ಮದ್ಯ ಮಾರಾಟ ನಿಷೇಧ
**************************************
ಕಲಬುರಗಿ,ಮಾ.20.(ಕ.ವಾ.)-ಕಲಬುರಗಿ ಜಿಲ್ಲೆಯಲ್ಲಿ ಹೋಳಿ ಹಬ್ಬದ ಪ್ರಯುಕ್ತ 2019ರ ಮಾರ್ಚ್ 20ರ ಬೆಳಿಗ್ಗೆ 6 ರಿಂದ ಮಾರ್ಚ್ 22ರ ಬೆಳಿಗ್ಗೆ 6 ಗಂಟೆಯವರೆಗೆ ಕಲಬುರಗಿ ಜಿಲ್ಲೆಯಾದ್ಯಂತ ಎಲ್ಲ ತರಹದ ಮದ್ಯಪಾನ, ಸಾರಾಯಿ, ಶೇಂದಿ, ಸ್ವದೇಶಿ ಮತ್ತು ವಿದೇಶಿ ಮಧ್ಯ ಮತ್ತು ಮತ್ತಿತರ ಮಾದಕ ವಸ್ತುಗಳ ಮಾರಾಟವನ್ನು ನಿಷೇಧಿಸಿ ಹಾಗೂ ಎಲ್ಲ ಮದ್ಯದ ಅಂಗಡಿಗಳನ್ನು ಮುಚ್ಚುವಂತೆ ಜಿಲ್ಲಾ ದಂಡಾಧಿಕಾರಿ ಆರ್. ವೆಂಕಟೇಶಕುಮಾರ ಆದೇಶ ಹೊರಡಿಸಿದ್ದಾರೆ.
ಹೋಳಿ ಹಬ್ಬ ಆಚರಣೆಯ ಸಂದರ್ಭದಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ 1965ರ ಕರ್ನಾಟಕ ಅಬಕಾರಿ ಕಲಂ 21ರ ಅನ್ವಯ ಈ ಆದೇಶ ಹೊರಡಿಸಲಾಗಿದೆ.
ಕರ್ತವ್ಯಕ್ಕೆ ಹಾಜರಾಗಲು ಸೂಚನೆ
*******************************
ಕಲಬುರಗಿ,ಮಾ.20.(ಕ.ವಾ.)-ಸೇಡಂ ತಾಲೂಕಿನ ವೆಂಕಟಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ (ಟಿ.ಜಿ.ಟಿ.) ಸಹ ಶಿಕ್ಷಕ ಬಸವರಾಜ ಅವರು 2015ರ ಮಾರ್ಚ್ 11 ರಿಂದ ಈವರೆಗೆ ಶಾಲಾ ಕರ್ತವ್ಯಕ್ಕೆ ಅನಧೀಕೃತವಾಗಿ ಗೈರು ಹಾಜರಾಗಿರುತ್ತಾರೆ ಎಂದು ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ (ಆಡಳಿತ) ಉಪನಿರ್ದೇಶಕರು ತಿಳಿಸಿದ್ದಾರೆ.
ಈಗಾಗಲೇ ಈ ಶಿಕ್ಷಕರಿಗೆ ಶಾಲಾ ಕರ್ತವ್ಯಕ್ಕೆ ಹಾಜರಾಗುವಂತೆ ಸೇಡಂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮುಖಾಂತರ ಮೂರು ಬಾರಿ ಕಾರಣ ಕೇಳುವ ನೋಟೀಸು ಜಾರಿ ಮಾಡಲಾಗಿದೆ. ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯಿಂದ ಅಂತಿಮ ನೋಟೀಸು ಸಹ ಜಾರಿ ಮಾಡಲಾಗಿದ್ದರೂ ಸಹ ಸದರಿ ಸಿಬ್ಬಂದಿಯು ಈವರೆಗೆ ಕರ್ತವ್ಯಕ್ಕೆ ಹಾಜರಾಗಿರುವುದಿಲ್ಲ.
ಈ ಶಿಕ್ಷಕರು ಈ ಪತ್ರಿಕಾ ಪ್ರಕಟಗೊಂಡ 07 ದಿನದೊಳಗಾಗಿ ವೆಂಕಟಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗಲು ಅಂತಿಮ ಅವಕಾಶ ನೀಡಲಾಗಿದೆ. ಒಂದು ವೇಳೆ ಈ ನೌಕರರು 07 ದಿನದೊಳಗಾಗಿ ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ ಕೆ.ಸಿ.ಎಸ್.ಆರ್. ನಿಯಮ 108ರ ಪ್ರಕಾರ ಸೇವೆಯಿಂದ ವಜಾಗೊಳಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿವಿಧ ವೃತ್ತಿಪರ ತರಬೇತಿಗಾಗಿ ಅರ್ಜಿ ಆಹ್ವಾನ
*****************************************
ಕಲಬುರಗಿ,ಮಾ.20.(ಕ.ವಾ.)-ಮೈಸೂರಿನ ಕೇಂದ್ರೀಯ ಪ್ಲಾಸ್ಟಿಕ್ಸ್ ತಂತ್ರಜ್ಞಾನ ಸಂಸ್ಥೆಯಲ್ಲಿ 2018-19ನೇ ಸಾಲಿಗೆ ಕಲಬುರಗಿ ಜಿಲ್ಲೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ನಿರುದ್ಯೋಗಿ ಯುವಕ/ ಯುವತಿಯರಿಗೆ ಕೆಳಕಂಡ ವಿವಿಧ ವೃತ್ತಿಪರ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ.
ಪ್ಲಾಸ್ಟಿಕ್ಸ್ ಪ್ರೊಸೆಸಿಂಗ್ ಮಷಿನ್ ಆಪರೇಷನ್, ಪ್ಲಾಸ್ಟಿಕ್ಸ್ ಪ್ರೊಡಕ್ಟ್ ಮ್ಯಾನುಫ್ಯಾಕ್ಚರಿಂಗ್, ಇಂಜಕ್ಷನ್ ಮೋಲ್ಡಿಂಗ್ ಮೆಷಿನ್ ಆಪರೇಷನ್ ಆಂಡ್ ಮೆಂಟೆನೆನ್ಸ್, ಸಿಎನ್‍ಸಿ ಮಷಿನ್ ಪ್ರೋಗ್ರಾಮಿಂಗ್ ಆಂಡ್ ಆಪರೇಷನ್ಸ್ ಹಾಗೂ ಕ್ಯಾಡ್, ಕ್ಯಾಮ್, ಸಿಎಇ ಅಪ್ಲಿಕೇಶನ್ಸ್ ಇನ್ ಪ್ಲಾಸ್ಟಿಕ್ಸ್ ಪ್ರೊಡಕ್ಟ್ ಆಂಡ್ ಮೋಲ್ಡ್ ಡಿಸೈನ್ ವೃತ್ತಿಪರ ಕೋರ್ಸುಗಳಲ್ಲಿ ತರಬೇತಿ ನೀಡಲಾಗುತ್ತದೆ. ತರಬೇತಿ ಅವಧಿಯು 6 ತಿಂಗಳು ಇರುತ್ತದೆ. ಎಸ್.ಎಸ್.ಎಲ್.ಸಿ., ಪಿಯುಸಿ, ಐಟಿಐ, ಡಿಪ್ಲೋಮಾ ಹಾಗೂ ಡಿಗ್ರಿ ಪಾಸಾಗಿದ ಅಭ್ಯರ್ಥಿಗಳು ಅರ್ಹರು.
ವಯೋಮಿತಿ 18 ರಿಂದ 35 ವರ್ಷದೊಳಗಿರಬೇಕು. ಆದಾಯ ಮಿತಿ 2.5 ಲಕ್ಷ ರೂ. ದೊಳಗಿರಬೇಕು. ಅಭ್ಯರ್ಥಿಗಳು ನೇರ ಆಯ್ಕೆಗಾಗಿ 2019ರ ಮಾರ್ಚ್ 22ರ ಸಂಜೆ 5 ಗಂಟೆಯೊಳಗಾಗಿ ತಮ್ಮ ಎಸ್.ಎಸ್.ಎಲ್.ಸಿ., ಪಿಯುಸಿ, ಐಟಿಐ, ಡಿಗ್ರಿ ಅಂಕಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಆಧಾರ ಕಾರ್ಡ ಹಾಗೂ 5 ಭಾವಚಿತ್ರ ದಾಖಲಾತಿಗಳೊಂದಿಗೆ ಹಾಜರಾಗಿ ಪ್ರವೇಶ ಪಡೆಯಬಹುದಾಗಿದೆ. ಕೆಲವೇ ಸೀಟು ಮಾತ್ರ ಉಳಿದಿದ್ದು, ಮೊದಲು ಬಂದವರಿಗೆ ಪ್ರಥಮಾದ್ಯತೆ ನೀಡಲಾಗುತ್ತದೆ. ತರಬೇತಿ ಸಂದರ್ಭದಲ್ಲಿ ಉಚಿತ ಊಟ ಮತ್ತು ವಸತಿ ಸೌಲಭ್ಯ ನೀಡಲಾಗುತ್ತದೆ. ಮಾಸಿಕ 500 ರೂ.ಗಳ ಶಿಷ್ಯವೇತನ ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಕೇಂದ್ರೀಯ ಪ್ಲಾಸ್ಟಿಕ್ ತಂತ್ರಜ್ಞಾನ ಸಂಸ್ಥೆ, ಭಾರತ ಸರ್ಕಾರ, ನಂ. 437/ಎ, ಹೆಬ್ಬಾಳ ಇಂಡಸ್ಟ್ರೀಯಲ್ ಏರಿಯಾ ಮೈಸೂರು-16 ಹಾಗೂ ದೂರವಾಣಿ ಸಂಖ್ಯೆ 0821-2510618, 2511903, ಮೊಬೈಲ್ ಸಂಖ್ಯೆ 9632688884, 8762342432 ಹಾಗೂ 9466146001 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.
ಗಂಡು ಮಗುವಿನ ಪೋಷಕರ ಪತ್ತೆಗೆ ಮನವಿ
*************************************
ಕಲಬುರಗಿ,ಮಾ.20.(ಕ.ವಾ)-ಕಲಬುರಗಿಯ ಲಾಲಗೇರಿ ಕ್ರಾಸ್‍ನಲ್ಲಿ 2019ರ ಮಾರ್ಚ್ 07ರಂದು ಪತ್ತೆಯಾದ ಸುಮಾರು ಒಂದು ದಿವಸದ ಗಂಡು ಮಗುವನ್ನು ಡಾನ್ ಬಾಸ್ಕೋ ಪ್ಯಾರ್ ಸಂಸ್ಥೆಯ ಸಿಬ್ಬಂದಿಯವರು ಕಲಬುರಗಿ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಿರುತ್ತಾರೆ. ನಂತರ ಈ ಗಂಡು ಮಗುವಿನ ಪಾಲನೆ ಹಾಗೂ ಪೋಷಣೆಗಾಗಿ ಕಲಬುರಗಿ ನಗರದ ಆಳಂದ ರಸ್ತೆಯಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಮೂಲ್ಯ ಶಿಶುಗೃಹದಲ್ಲಿ ದಾಖಲಿಸಲಾಗಿದೆ ಎಂದು ಕಲಬುರಗಿ ಅಮೂಲ್ಯ ಶಿಶು ಗೃಹದ ಅಧೀಕ್ಷಕರು ತಿಳಿಸಿದ್ದಾರೆ.
ಸಧ್ಯದಲ್ಲಿ ಕಲಬುರಗಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಈ ಗಂಡು ಮಗುವು ಬಿಳುಪು ಬಣ್ಣ ಮತ್ತು ಕಡಿಮೆ ತೂಕ ಹೊಂದಿದ್ದು, ಮೇಲ್ಕಂಡ ಗಂಡು ಮಗುವಿನ ಪಾಲಕರು ಮತ್ತು ಪೋಷಕರು ಪ್ರಕಟಣೆಯಾದ 30 ದಿನದೊಳಗೆ ಅಗತ್ಯ ದಾಖಲೆಗಳೊಂದಿಗೆ ಅಧೀಕ್ಷಕರು, ಅಮೂಲ್ಯ ಶಿಶು ಗೃಹ, ಆಳಂದ ರಸ್ತೆ, ಆಳಂದ ಕಾಲೋನಿ ಕಲಬುರಗಿ ಕಚೇರಿಗೆ ಭೇಟಿ ನೀಡಲು ಕೋರಿದೆ. ತಪ್ಪಿದಲ್ಲಿ ಕಾನೂನು ಪ್ರಕಾರ ಈ ಗಂಡು ಮಗುವಿನ ದತ್ತು ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಮೂಲ್ಯ ಶಿಶುಗೃಹದ ಅಧೀಕ್ಷಕರನ್ನು ಹಾಗೂ ದೂರವಾಣಿ ಸಂಖ್ಯೆ 08472-265588ಗೆ ಸಂಪರ್ಕಿಸಬೇಕೆಂದು ಕೋರಿದ್ದಾರೆ.


ಹೀಗಾಗಿ ಲೇಖನಗಳು News and Photo Date: 20--03--2019

ಎಲ್ಲಾ ಲೇಖನಗಳು ಆಗಿದೆ News and Photo Date: 20--03--2019 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ News and Photo Date: 20--03--2019 ಲಿಂಕ್ ವಿಳಾಸ https://dekalungi.blogspot.com/2019/03/news-and-photo-date-20-03-2019.html

Subscribe to receive free email updates:

0 Response to "News and Photo Date: 20--03--2019"

ಕಾಮೆಂಟ್‌‌ ಪೋಸ್ಟ್‌ ಮಾಡಿ