News Date: 05-02-2019

News Date: 05-02-2019 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು News Date: 05-02-2019, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : News Date: 05-02-2019
ಲಿಂಕ್ : News Date: 05-02-2019

ಓದಿ


News Date: 05-02-2019

ಫೆಬ್ರವರಿ 15ರಂದು ಮಾಸಿಕ ಕೆ.ಡಿ.ಪಿ.ಸಭೆ
*************************************
ಕಲಬುರಗಿ,ಫೆ.05.(ಕ.ವಾ)-ಕಲಬುರಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ ಅವರ ಅಧ್ಯಕ್ಷತೆಯಲ್ಲಿ ಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆ.ಡಿ.ಪಿ.) ಎಸ್.ಡಿ.ಪಿ. ಹಾಗೂ ನಬಾರ್ಡ್ ಯೋಜನೆ ಪ್ರಗತಿ ಪರಿಶೀಲನಾ ಸಭೆಯು ಇದೇ ಫೆಬ್ರವರಿ 15ರಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿಯ ಜಿಲ್ಲಾ ಪಂಚಾಯತ್ ಹೊಸ ಸಭಾಂಗಣದಲ್ಲಿ ಜರುಗಲಿದೆ.
ಸಂಬಂಧಪಟ್ಟ ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳು ಸಂಬಂಧಿಸಿದ ಎಲ್ಲ ಪ್ರಗತಿ ವರದಿಯೊಂದಿಗೆ ಸದರಿ ಸಭೆಗೆ ಖುದ್ದಾಗಿ ಹಾಜರಾಗುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ರಾಜಾ ಪಿ. ಅವರು ಸೂಚಿಸಿದ್ದಾರೆ.

ಆಯುಷ್ಮಾನ ಭಾರತ-ಆರೋಗ್ಯ ಕರ್ನಾಟಕ ಯೋಜನೆ:
***********************************************
ಸಾರ್ವಜನಿಕರು ನೋಂದಣಿ ಮಾಡಿಕೊಳ್ಳಲು ಸೂಚನೆ
************************************************
ಕಲಬುರಗಿ,ಫೆ.05.(ಕ.ವಾ)-ರಾಜ್ಯ ಸರ್ಕಾರವು ‘ಆಯುಷ್ಮಾನ ಭಾರತ-ಆರೋಗ್ಯ ಕರ್ನಾಟಕ' ಎಂಬ ಸಂಯೋಜಿತ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಯೋಜನೆಯಡಿ ಆರೋಗ್ಯ ಸೇವೆಯನ್ನು ಪಡೆಯಲು ಕಲಬುರಗಿ ಜಿಲ್ಲೆಯ ಎಲ್ಲ ಸಾರ್ವಜನಿಕರು ನೋಂದಣಿ ಕೇಂದ್ರಗಳಿಗೆ ಅವಶ್ಯಕ ದಾಖಲೆಗಳೊಂದಿಗೆ ತೆರಳಿ ಅಗತ್ಯ ಶುಲ್ಕ ಪಾವತಿಸಿ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಾಧವರಾವ ಕೆ.ಪಾಟೀಲ ತಿಳಿಸಿದ್ದಾರೆ.
ಸಾರ್ವಜನಿಕರು ಆಧಾರ್ ಕಾರ್ಡ ಮತ್ತು ಪಡಿತರ ಚೀಟಿ ದಾಖಲೆಗಳೊಂದಿಗೆ ಕಲಬುರಗಿ ಜಿಲ್ಲಾ ಸಾರ್ವಜನಿಕ ಆಸ್ಪತ್ರೆ/ ಜಿಮ್ಸ್ ಆಸ್ಪತ್ರೆಗಳಲ್ಲಿನ ನೋಂದಣಿ ಕೇಂದ್ರದಲ್ಲಿ 10 ರೂ.ಗಳನ್ನು ಪಾವತಿಸಿ ನೋಂದಣಿ ಮಾಡಿಕೊಳ್ಳಬೇಕು. ಇದಲ್ಲದೇ ಕಲಬುರಗಿ ಮಿನಿ ವಿಧಾನಸೌಧ, ಕೆ.ಹೆಚ್.ಬಿ. ಕಾಂಪ್ಲೆಕ್ಸ್ ಹಾಗೂ ಸುಪರ ಮಾರ್ಕೇಟ್ನಲ್ಲಿರುವ ಕರ್ನಾಟಕ ಒನ್ಗಳಲ್ಲಿಯೂ ಸಹ 35 ರೂ.ಗಳನ್ನು ಪಾವತಿಸಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಪ್ರಾಥಮಿಕ ಆರೋಗ್ಯ ಸೇವೆಗಳು, ಸಾಮಾನ್ಯ ದ್ವಿತೀಯ ಹಂತದ ಆರೋಗ್ಯ ಸೇವೆಗಳು, ಕ್ಲಿಷ್ಟಕರ ದ್ವಿತೀಯ ಹಂತದ ಆರೋಗ್ಯ ಸೇವೆಗಳು ಹಾಗೂ ತೃತೀಯ ಹಂತದ ಆರೋಗ್ಯ ಸೇವೆಗಳು ಹಾಗೂ ತುರ್ತು ಆರೋಗ್ಯ ಸೇವೆಗಳು ಒಂದೇ ಸೂರಿನಡಿ ಎಲ್ಲ ಹಂತದ ಸೇವೆಗಳು ಈ ಯೋಜನೆಯಡಿ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ಕ್ರೆಡಿಟ್/ಡೆಬಿಟ್ ಕಾರ್ಡ ಮೂಲಕ ವಿದ್ಯುತ್ ಬಿಲ್ಲು ಪಾವತಿಸಲು ಅವಕಾಶ
**************************************************************
ಕಲಬುರಗಿ,ಫೆ.05.(ಕ.ವಾ)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ವ್ಯಾಪ್ತಿಯ ವಿದ್ಯುತ್ ಗ್ರಾಹಕರು ತಮ್ಮ ವಿದ್ಯುತ್ ಬಿಲ್ಲನ್ನು ಉಪವಿಭಾಗ/ ಶಾಖೆಯ ಕ್ಯಾಶ್ ಕೌಂಟರ್ಗಳಲ್ಲಿ ಡೆಬಿಟ್/ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಬಹುದಾಗಿದೆ. ಇದಕ್ಕೆ ಯಾವುದೇ ಹೆಚ್ಚುವರಿ ಶುಲ್ಕ ಇರುವುದಿಲ್ಲ ಎಂದು ಜೆಸ್ಕಾಂ ಕಾರ್ಯ ಮತ್ತುಪಾಲನೆ ನಗರ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರರು ತಿಳಿಸಿದ್ದಾರೆ.
ಗ್ರಾಹಕರು ತಮ್ಮ ಸಂಪೂರ್ಣ ವಿದ್ಯುತ್ ಬಿಲ್ಲ ಪಾವತಿಗಾಗಿ ಡೆಬಿಟ್/ ಕ್ರೇಡಿಟ್ ಕಾರ್ಡ್ ಅಥವಾ ನಗದು ರೂಪದಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಂಡು ಬಿಲ್ಲನ್ನು ಪಾವತಿ ಮಾಡಬೇಕು. ಅರ್ಧ ಬಿಲ್ಲು ನಗದು ಹಾಗೂ ಅರ್ಧ ಬಿಲ್ಲನ್ನು ಡೆಬಿಟ್/ ಕ್ರೇಡಿಟ್ ಕಾರ್ಡ್ ಮೂಲಕ ಪಾವತಿಸಲು ಅವಕಾಶವಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಸಗಟು ಖರೀದಿ ಯೋಜನೆಯಡಿ ಕನ್ನಡ ಪುಸ್ತಕಗಳ ಖರೀದಿ: ಅರ್ಜಿ ಆಹ್ವಾನ
****************************************************************
ಕಲಬುರಗಿ,ಫೆ.05.(ಕ.ವಾ)-ಕನ್ನಡ ಪುಸ್ತಕ ಪ್ರಾಧಿಕಾರವು 2016ನೇ ಸಾಲಿನಲ್ಲಿ ಸಗಟು ಖರೀದಿ ಯೋಜನೆಯಡಿ ಪ್ರಥಮಾವೃತ್ತಿಯಾಗಿ ಮುದ್ರಣಗೊಂಡ ಕನ್ನಡ ಪುಸ್ತಕಗಳನ್ನು ಖರೀದಿಸಲು ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.
ಅರ್ಜಿ ನಮೂನೆಗಳನ್ನು
ತಿತಿತಿ.ಞಚಿಟಿಟಿಚಿಜಚಿಠಿusಣಚಿಞಚಿಠಿಡಿಚಿಜhiಞಚಿಡಿಚಿ.ಛಿom ಪ್ರಾಧಿಕಾರದ ವೆಬ್ಸೈಟ್ದಿಂದ, ಕನ್ನಡ ಪುಸ್ತಕ ಪ್ರಾಧಿಕಾರದ ಕಚೇರಿ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಉಚಿತವಾಗಿ ಖುದ್ದಾಗಿ ಪಡೆದು ಭರ್ತಿ ಮಾಡಿ ಅರ್ಜಿಯೊಂದಿಗೆ ಎರಡು ಪುಸ್ತಕಗಳ ಪ್ರತಿ ಲಗತ್ತಿಸಿ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ ಬೆಂಗಳೂರು-560002 ಇವರಿಗೆ ಫೆಬ್ರವರಿ 28ರ ಸಂಜೆ 5 ಗಂಟೆಯೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆಗೆ 080-22484516, 22017704ಗಳಿಗೆ ಸಂಪರ್ಕಿಸಲು ಕೋರಲಾಗಿದೆ.

ಕೈಗೆಟುಕುವ ಬೆಲೆಯಲ್ಲಿ ಸೋಲಾರ ಲ್ಯಾಂಪ ಮಾರಾಟಕ್ಕೆ ಲಭ್ಯ
*******************************************************
ಕಲಬುರಗಿ,ಫೆ.05.(ಕ.ವಾ)-ಸಾರ್ವಜನಿಕರಿಗೆ ಕೈಗೆಟುಕುವ ಬೆಲೆಯಲ್ಲಿ ಸೋಲಾರ ಲ್ಯಾಂಪ ದೊರಕುವ ಉದ್ದೇಶದಿಂದ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ವಿವಿಧ ಅಂಚೆ ಕಚೇರಿಗಳಲ್ಲಿ ಸನ್ಕಿಂಗ್ ಸೋಲಾರ್ ಲ್ಯಾಂಪ್ಗಳು ಮಾರಾಟಕ್ಕೆ ಲಭ್ಯವಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕೆಂದು ಎಂದು ಕಲಬುರಗಿ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಬಿ.ಆರ್.ನನಜಗಿ ತಿಳಿಸಿದ್ದಾರೆ.
ಸನ್ಕಿಂಗ್ ಸೋಲಾರ ಲ್ಯಾಂಪ ಕಂಪನಿಯು ಭಾರತೀಯು ಅಂಚೆ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಸೋಲಾರ್ ಲ್ಯಾಂಪಗಳು ಸೌರ್ಯಶಕ್ತಿಯ ಪ್ರಕಾಶಮಾನ, ದೀರ್ಘಬಾಳಿಕೆ, ಶಕ್ತಿಶಾಲಿ, ಬಹುಬಳಕೆಯ ಉತ್ಪನ್ನವಾಗಿದೆ. ಇದು ನೀರಿನ ಪ್ರತಿರೋಧ ಗುಣ ಹೊಂದಿದ್ದು, ಇದರಿಂದ ಮೊಬೈಲ್ ಬ್ಯಾಟರಿ ಕೂಡ ಚಾರ್ಜ ಮಾಡಬಹುದಾಗಿದೆ. ಈ ಸೋಲಾರ್ ಲ್ಯಾಂಪ್ನ ದರವು 499 ರೂ. ರಿಂದ ಪ್ರಾರಂಭವಾಗುತ್ತದೆ.
ಸೋಲಾರ ಲ್ಯಾಂಪ್ ದೊರೆಯುವ ಅಂಚೆ ಕಚೇರಿಗಳ ವಿವರ ಇಂತಿದೆ. ಕಲಬುರಗಿಯ ಪ್ರಧಾನ ಅಂಚೆ ಕಚೇರಿ, ಜಗತ್ ಅಂಚೆ ಕಚೇರಿ, ರೈಲ್ವೆ ಸ್ಟೇಶನ್ ಅಂಚೆ ಕಚೇರಿ, ಜೆಗಂಗಾ ಅಂಚೆ ಕಚೇರಿ, ಜಿ.ಜಿ.ಹೆಚ್. ಅಂಚೆ ಕಚೇರಿ, ಬಹಮನಿಪುರ ಅಂಚೆ ಕಚೇರಿ, ಶಹಾಪುರ, ಚಿತ್ತಾಪೂರ, ಸೇಡಂ, ಸುಲೇಪೇಟ್, ಶಹಾಬಾದ, ಶಹಾಬಾದ ಎಸಿಸಿ, ಶೋರಾಪುರ, ಮುಧೋಳ, ಜೇವರ್ಗಿ, ಮಹಾಗಾಂವ, ಅಳಂದ, ಕಾಳಗಿ, ಭೀಮರಾಯನಗುಡಿ, ಗೋಗಿ, ಗುರುಮಿಟಕಲ್, ಹುಣಸಗಿ, ಕುಂಬಾರಪೇಟ್, ಯಡ್ರಾಮಿ, ದೇವಲಗಾಣಗಾಪೂರ, ಅಫಜಲಪುರ, ರಾಮಸಮುದ್ರ, ಮಳಖೇಡ, ಕೆಂಭಾವಿ ಮತ್ತು ಚಿಂಚೋಳಿ ಅಂಚೆ ಕಛೇರಿಗಳಲ್ಲಿ ಲಭ್ಯವಿದೆ.

ಫೆಬ್ರವರಿ 6ರಂದು ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತ್ಯೋತ್ಸವ
***********************************************************
ಕಲಬುರಗಿ,ಫೆ.05.(ಕ.ವಾ)-ಕಲಬುರಗಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತ್ಯೋತ್ಸವವನ್ನು ಬುಧವಾರ ಫೆಬ್ರವರಿ 6ರಂದು ಬೆಳಿಗ್ಗೆ 11.30 ಗಂಟೆಗೆ ಕಲಬುರಗಿ ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ.
ಸಮಾಜ ಕಲ್ಯಾಣ ಸಚಿವರು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸುವರು. ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ದತ್ತಾತ್ರೇಯ ಸಿ. ಪಾಟೀಲ್ ರೇವೂರ್ ಅಧÀ್ಯಕ್ಷತೆ ವಹಿಸುವರು. ಕಲಬುರಗಿ ಲೋಕಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ, ಬೀದರ ಲೋಕಸಭಾ ಸದಸ್ಯ ಭಗವಂತ ಖೂಬಾ, ಕಲಬುರಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ವಿಧಾನಸಭಾ ಶಾಸಕರುಗಳಾದ ಡಾ|| ಉಮೇಶ ಜಾಧವ, ಡಾ|| ಅಜಯಸಿಂಗ್, ಎಮ್.ವಾಯ್. ಪಾಟೀಲ, ರಾಜಕುಮಾರ ಪಾಟೀಲ ತೇಲ್ಕೂರ, ಬಸವರಾಜ ಬಿ. ಮತ್ತಿಮೂಡ, ಖನೀಜ್ ಫಾತೀಮಾ ಹಾಗೂ ಸುಭಾಷ ಗುತ್ತೇದಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ವಿಧಾನ ಪರಿಷತ್ ಶಾಸಕರುಗಳಾದ ಇಕ್ಬಾಲ್ ಅಹ್ಮದ್ ಸರಡಗಿ, ಶರಣಪ್ಪ ಮಟ್ಟೂರ್, ಬಿ.ಜಿ. ಪಾಟೀಲ, ಡಾ. ಚಂದ್ರಶೇಖರ ಪಾಟೀಲ, ಕಲಬುರಗಿ ಮಹಾನಗರ ಪಾಲಿಕೆ ಮಹಾಪೌರ ಮಲ್ಲಮ್ಮ ಸಿದ್ರಾಮಪ್ಪ ವಳಕೇರಿ, ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಹಾಗೂ ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಸುಬೋಧ ಯಾದವ, ಈಶಾನ್ಯ ವಲಯದ ಪೊಲೀಸ್ ಮಹಾನಿರೀಕ್ಷಕ ಮನೀಷ್ ಖರ್ಬಿಕರ್, ಕಲಬುರಗಿ ಜಿಲ್ಲಾ ಭೋವಿ (ವಡ್ಡರ) ಸಮಾಜದ ಅಧ್ಯಕ್ಷ ತಿಪ್ಪಣ್ಣ ಒಡೆಯರಾಜ ಅವರು ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿರುವರು. ವಿಜಯಪುರ ಬಿ.ಎಲ್.ಡಿ. ಸಂಸ್ಥೆ ಪದವಿಪೂರ್ವ ಕಾಲೇಜಿನ ದೈಹಿಕ ಉಪನ್ಯಾಸಕ ಕೆ.ವಿ. ಒಡೆಯರ್ ಅವರು ವಿಶೇಷ ಉಪನ್ಯಾಸ ನೀಡುವರು.
ಇದಕ್ಕೂ ಮುನ್ನ ಮಧ್ಯಾಹ್ನ 1.30 ಗಂಟೆಯಿಂದ ವಿವಿಧ ಜಾನಪದ ಕಲಾತಂಡಗಳೊಂದಿಗೆ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯುವುದು. ಕಲಬುರಗಿ ಡಾ. ಎಸ್.ಎಂ.ಪಂಡಿತ ರಂಗಮಂದಿರದಿಂದ ಆರಂಭವಾಗುವ ಮೆರವಣಿಗೆಯು ಜಗತ್ ವೃತ್ತ, ಗೋವಾ ಹೊಟೇಲ್, ಕುಂಬಾರ ಗಲ್ಲಿ, ಶಾಸ್ತ್ರೀ ಚೌಕ್, ಭಗತಸಿಂಗ್ ಚೌಕ್ ಮೂಲಕ ಬ್ರಹ್ಮಪುರ (ಗಡ್ಡರಗಲ್ಲಿ)ಯಲ್ಲಿರುವ ಪೂಜ್ಯ ಶ್ರೀ ಶಿವದಾಸ ಮಹಾರಾಜರ ಮಠಕ್ಕೆ ಆಗಮಿಸಿ ಕೊನೆಗೊಳ್ಳುವುದು.

ಕಾಣೆಯಾದ ಯುವಕನ ಪತ್ತೆಗೆ ಮನವಿ
*********************************
ಕಲಬುರಗಿ,ಫೆ.05.(ಕ.ವಾ)-ಕಲಬುರಗಿಯಲ್ಲಿ ಇಟ್ಟಂಗಿ ಭಟ್ಟಿಯಲ್ಲಿ ಗಾರೆ ಕೆಲಸಮಾಡಿಕೊಂಡಿರುವ ಸಹೋದರನಿಗೆ ಮನೆಯಿಂದ ಊಟ ನೀಡಲು ಹೋದ ಚಿತ್ತಾಪೂರ ತಾಲೂಕಿನ ಸಾವತ್ತಖೇಡ ಗ್ರಾಮದ ರಾಜಣ್ಣ ರೇವಣಸಿದ್ದಪ್ಪ ಗೋಣಗಿ ಇವರ ಮಗ ಶ್ರೀಕಾಂತ ಈತನು ಮರಳಿ ಮನೆಗೆ ಬಾರದೇ ಕಾಣೆಯಾಗಿದ್ದು, ಯುವಕನ ಪತ್ತೆಗೆ ಮನವಿ ಮಾಡಲಾಗಿದೆ.
ಕಲಬುರಗಿಯಲ್ಲಿ ಇಟ್ಟಂಗಿ ಭಟ್ಟಿಯಲ್ಲಿ ಗಾರೆ ಕೆಲಸಮಾಡಿಕೊಂಡಿರುವ ಸಹೋದರ ರವಿ ಎಂಬುವರಿಗೆ ಊಟ ನೀಡಿ ಬರುವುದಾಗಿ ಮನೆಯಲ್ಲಿ ಹೇಳಿ 2019ರ ಜನವರಿ 16ರಂದು ಸಂಜೆ 6.30 ಗಂಟೆಗೆ ಹೋಗಿದ್ದ ಶ್ರೀಕಾಂತ ಮರಳಿ ಮನೆಗೆ ಬಂದಿರುವುದಿಲ್ಲ. ಈ ಸಂಬಂಧ ರಾಜಣ್ಣ ರೇವಣಸಿದ್ದಪ್ಪ ಗೋಣಗಿ ಅವರು ಮಾಡಬೂಳ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಕಾಣೆಯಾದ 20 ವರ್ಷದ ಯುವಕ ಶ್ರೀಕಾಂತ ರಾಜಣ್ಣ ಗೋಣಗಿ ಇತನು ಸಾದಾ ಕಪ್ಪು ಮೈಬಣ್ಣ, ದುಂಡು ಮುಖ ತಳ್ಳನೆ ಮೈಕಟ್ಟು ಮತ್ತು ತಲೆಯ ಮೇಲೆ ಕರಿ ಕೂದಲು ಇರುತ್ತದೆ. ಇತನು ಜೀನ್ಸ್ ಪ್ಯಾಂಟ್ ಹಾಗೂ ಗೆರೆಗೆರೆಯುಳ್ಳ ಶರ್ಟ್ ಹಾಕಿಕೊಂಡಿರುತ್ತಾನೆ. ಈ ಯುವಕನ ಕಾಣೆಯಾದ ಈ ಕುರಿತು ಮಾಡಬೂಳ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 10/2019 ರನ್ವಯ ದಿನಾಂಕ: 28-01-2019 ರಂದು ಪ್ರಕರಣ ದಾಖಲಿಸಲಾಗಿದೆ.


ಈತನ ಸುಳಿವು ಸಿಕ್ಕಲ್ಲಿ ಕೂಡಲೇ ಮಾಡಬೂಳ ಪೊಲೀಸ್ ಠಾಣೆಯ ಪಿ.ಎಸ್.ಐ. ಮೊಬೈಲ್ ಸಂಖ್ಯೆ 9480803572 ಹಾಗೂ ಕಾಳಗಿ ವೃತ್ತದ ಸಿಪಿಐ ಮೊಬೈಲ್ ಸಂಖ್ಯೆ 9480803542ಗೆ ಸಂಪರ್ಕಿಸಲು ಕೋರಲಾಗಿದೆ.


ಹೀಗಾಗಿ ಲೇಖನಗಳು News Date: 05-02-2019

ಎಲ್ಲಾ ಲೇಖನಗಳು ಆಗಿದೆ News Date: 05-02-2019 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ News Date: 05-02-2019 ಲಿಂಕ್ ವಿಳಾಸ https://dekalungi.blogspot.com/2019/02/news-date-05-02-2019.html

Subscribe to receive free email updates:

0 Response to "News Date: 05-02-2019"

ಕಾಮೆಂಟ್‌‌ ಪೋಸ್ಟ್‌ ಮಾಡಿ