News and Photo Date: 06-02-2019

News and Photo Date: 06-02-2019 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು News and Photo Date: 06-02-2019, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : News and Photo Date: 06-02-2019
ಲಿಂಕ್ : News and Photo Date: 06-02-2019

ಓದಿ


News and Photo Date: 06-02-2019

ಸಾರ್ವಜನಿಕರ ದೂರು ಸ್ವೀಕರಿಸಲು ಸಹಾಯವಾಣಿ ಕೇಂದ್ರ ಸ್ಥಾಪನೆ
***********************************************************
ಕಲಬುರಗಿ,ಫೆ.06.(ಕ.ವಾ)-ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಸಾರ್ವಜನಿಕರ ಅಹವಾಲು ಸ್ವೀಕರಿಸಲು ಮಹಾನಗರ ಪಾಲಿಕೆಯ ಹೊಸ ಕಟ್ಟಡದಲ್ಲಿ ಸಾರ್ವಜನಿಕ ಕುಂದುಕೊರತೆ ಕೋಶವನ್ನು ಸ್ಥಾಪಿಸಿ ಸಹಾಯವಾಣಿ ಕೇಂದ್ರವನ್ನು ಪ್ರಾರಂಭಿಸಲಾಗಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತೆ ಬಿ. ಫೌಜಿಯಾ ತರನ್ನುಂ ಅವರು ತಿಳಿಸಿದ್ದಾರೆ.
ಈ ಸಹಾಯವಾಣಿ ಕೇಂದ್ರವು ಪ್ರತಿದಿನ ಬೆಳಿಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೆ ಕಾರ್ಯನಿರ್ವಹಿಸಲಿದೆ. ಸಾವರ್Àಜನಿಕರು ತಮ್ಮ ದೂರುಗಳನ್ನು ಜನಹಿತ ವೆಬ್‍ಸೈಟ್ ತಿತಿತಿ.mಡಿಛಿ.gov.iಟಿ/ರಿಚಿಟಿಚಿhiಣಚಿ ಮೂಲಕ, ಜನಹಿತ ವಾಟ್ಸಾಪ್ ನಂಖ್ಯೆ 8277777728, ಕಲಬುರಗಿ ಮಹಾನಗರ ಪಾಲಿಕೆಯ ವಾಟ್ಸಾಪ್ ಸಂಖ್ಯೆ 8296097777 ಹಾಗೂ ಕಲಬುರಗಿ ಮಹಾನಗರ ಪಾಲಿಕೆ ಟೋಲ್ ಫ್ರೀ ನಂಬರ್ 18004251364 ಮೂಲಕ ಸಲ್ಲಿಸಬಹುದಾಗಿದೆ.
ದೂರುಗಳ ವರ್ಗೀಕರಣಿ ಇಂತಿದೆ. ತಾಂತ್ರಿಕ ಶಾಖೆ, ಸಮುದಾಯ ವ್ಯವಹಾರಗಳು, ಉದ್ಯಾನವನ, ಪಶುವೈದ್ಯ, ಮಾಹಿತಿ ಮತ್ತು ತಂತ್ರಜ್ಞಾನ, ನೀರು ಸರಬರಾಜು ಮತ್ತು ಒಳ ಚರಂಡಿ, ಆರೋಗ್ಯ, ಕಂದಾಯ, ಆಡಳಿತ, ನಗರ ಯೋಜನೆ, ಲೆಕ್ಕಪತ್ರ ಶಾಖೆಗೆ ಸಂಬಂಧಿಸಿದ ಹಾಗೂ ವಲಯ ಕಚೇರಿಗಳ ಆಡಳಿತ ಸಂಬಂಧಿಸಿದ ದೂರುಗಳೆಂದು ವರ್ಗೀಕರಿಸಲಾಗಿದೆ.
ಸಾರ್ವಜನಿಕರ ಅಹವಾಲು ಸ್ವೀಕರಿಸಲು ವಿನೂತನವಾದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸಾರ್ವಜನಿಕರು ತಮ್ಮ ದೂರುಗಳನ್ನು ಈ ಸಹಾಯವಾಣಿ ಕೇಂದ್ರದಲ್ಲಿ ನೋಂದಾಯಿಸಬೇಕು. ಸಾರ್ವಜನಿಕರಿಂದ ಸ್ವೀಕರಿಸಿದ ದೂರುಗಳನ್ನು ಕೂಡಲೇ ನಿಯಮಾನುಸಾರ ಪರಿಶೀಲಿಸಿ ತ್ವರಿತವಾಗಿ ಕ್ರಮಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಫೆಬ್ರವರಿ 7ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
**********************************************
ಕಲಬುರಗಿ,ಫೆ.06.(ಕ.ವಾ)-ಜೆಸ್ಕಾಂನ ಕಲಬುರಗಿ ನಗರ ಕಾರ್ಯ ಮತ್ತು ಪಾಲನೆ ವಿಭಾಗದ ವ್ಯಾಪ್ತಿಯಲ್ಲಿ ಬರುವ ಕಲಬುರಗಿ ನಗರದ 11.ಕೆ.ವಿ. ಮಹೆಬೂಬ್‍ನಗರ ಹಾಗೂ ಎಂ.ಎಸ್.ಕೆ. ಮಿಲ್ ಹಾಗೂ ಪೊಲೀಸ್ ಕಾಲೋನಿ ಫೀಡರಗಳ ಮೇಲೆ ನಿರ್ವಹಣಾ ಕಾರ್ಯ ಹಾಗೂ 11ಕೆ.ವಿ. ಗಣೇಶನಗರ ಫೀಡರ ವ್ಯಾಪ್ತಿಯಲ್ಲಿ ಜಿ.ಐ.ಎಸ್. ಕೆಲಸ ಕೈಗೊಂಡಿರುವ ಹಿನ್ನೆಲೆಯಲ್ಲಿ ಗುರುವಾರ ಫೆಬ್ರವರಿ 7 ಅಂದು ಬೆಳಿಗ್ಗೆ 10 ರಿಂದ ಸಾಯಂಕಾಲ 4 ಗಂಟೆ ವರೆಗೆ ಸದರಿ ಫೀಡರಗಳ ವ್ಯಾಪ್ತಿಯ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಜೆಸ್ಕಾಂನೊಂದಿಗೆ ಸಹಕರಿಸುವಂತೆ ವಿಭಾಗದ ಕಾರ್ಯನಿರ್ವಾಹಕ ಇಂಜಿನೀಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
11 ಕೆ.ವಿ ಮಹೆಬೂಬ್ ನಗರ ಫೀಡರ್: ಖಾಜಾ ಕಾಲೋನಿ, ಸೈಯದಗಲ್ಲಿ, ನೂರ್‍ಬಾಗ್ ಶಾಲಿಮಾರ ಫಂಕ್ಷನ್ ಹಾಲ್, ಮದಿನಾ ಕಾಲೋನಿ, ಕಲ್ಕತಾ ಫಂಕ್ಷನ್ ಹಾಲ್, ಯಾದುಲ್ಲಾ ಕಾಲೋನಿ, ದರ್ಗಾ, ಖಾನ್ ಕಂಪೌಂಡ್, ಕಾಲಾ ವಾಡ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
11 ಕೆ.ವಿ. ಎಂ.ಎಸ್.ಕೆ.ಮಿಲ್ ಫೀಡರ್: ಮದೀನಾ ಕಾಲೋನಿ, ನ್ಯೂ ಮದೀನಾ ಕಾಲೋನಿ, ಮೀಸ್‍ಬಾ ನಗರ, ಇಕ್ಬಾಲ್ ಕಾಲೋನಿ, ಹುಸೇನ್ ಗಾರ್ಡನ್, ಕೃಷ್ಟ ಮಿನರಲï್ಸ, ನ್ಯೂ ರಾಘವೇಂದ್ರ ಕಾಲೋನಿ, ಖಾನ್ ಏರಿಯಾ, ಮಹ್ಮದಿ ಚೌಕ್, ಕೆ.ಬಿ.ಎನ್. ಹುಸೇನ್ ಕೊಲ್ಡ್‍ಸ್ಟೊರೇಜ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
11 ಕೆ.ವಿ. ಪೊಲೀಸ್ ಕಾಲೋನಿ ಫೀಡರ್: ಪೊಲೀಸ್ ಭವನ, ಏಶಿಯನ್ ಮಾಲ್, ಪಿ.ಎಲ್.ಡಿ. ಬ್ಯಾಂಕ್, ಪೃಥ್ವಿರಾಜ ಟಿ.ಸಿ, ಗೊಲ್ಲರಗಲ್ಲಿ, ದರ್ಗಾ ಟಿ.ಸಿ., ಹನುಮಾನ ಮಂದಿರ ಜಗತ್, ಅನ್ನಪೂರ್ಣ ಆಸ್ಪತ್ರೆ ಕ್ರಾಸ್, ಕಕ್ಕೇರಿ ಟಿ.ಸಿ., ಆಮಂತ್ರಣ ಹೊಟೇಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
11 ಕೆ.ವಿ. ಗಣೇಶ ನಗರ ಫೀಡರ್: ಎಂ.ಬಿ.ನಗರ, ಬಾಕರ್ ಪಂಕ್ಷನ್ ಹಾಲ್, ಆದರ್ಶ ನಗರ ಮತ್ತು ಬಂದೇ ನವಾಜ್ ಕಾಲೋನಿ, ಕೆ.ಹೆಚ್.ಬಿ. ಲೇಔಟ್, ಗಣೇಶ ನಗರ, ಮನ್ಸೂಬ್‍ದಾರ್ ಲೇಔಟ್, ಆದರ್ಶ ನಗರ ನ್ಯೂ ಜಿ.ಡಿ.ಎ. ಮೇಹತಾ ಲೇಔಟ್ ಮತ್ತು ವೀರೆಂದ್ರ ಪಾಟೀಲ್ ಬಡವಾಣೆ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.
ಕಾಣೆಯಾದ ವ್ಯಕ್ತಿಯ ಪತ್ತೆಗೆ ಮನವಿ
********************************
ಕಲಬುರಗಿ,ಫೆ.06.(ಕ.ವಾ)-ವೈಯಕ್ತಿಕ ಕೆಲಸದ ಹಿನ್ನೆಲೆಯಲ್ಲಿ 2019ರ ಜನವರಿ 23ರಂದು ಕಲಬುರಗಿಯಿಂದ ಬೆಂಗಳೂರಿಗೆ ಹೋಗಿ ಬರುತ್ತೇನೆಂದು ಮನೆಯಿಂದ ಹೋದ 46 ವರ್ಷದ ಆಳಂದ ಪಟ್ಟಣದ ಹತ್ಯಾನಗಲ್ಲಿಯ ನಿವಾಸಿ ಮಹಾದೇವಪ್ಪಾ ವೀರಬಸವಂತರಾವ ಪಾಟೀಲ ಇವರು ಮರಳಿ ಮನೆ ಬಾರದೆ ಕಾಣೆಯಾಗಿದ್ದಾರೆ. ಈ ಸಂಬಂಧ ಕಾಣೆಯಾದ ವ್ಯಕ್ತಿಯ ಪತ್ನಿ ಅನೀತಾ ಮಹಾದೇವಪ್ಪ ಪಾಟೀಲ ಅವರ ದೂರಿನನ್ವಯ ಆಳಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.
ಕಾಣೆಯಾದ ಈ ವ್ಯಕ್ತಿಯು ಐದು ಅಡಿ ಆರು ಇಂಚು ಎತ್ತರ, ಗೋಧಿ ಮೈಬಣ್ಣ, ತಲೆಯ ಮೇಲೆ ಕಪ್ಪು-ಬಿಳಿ ಮಿಶ್ರಿತ ಕೂದಲು ಇದ್ದು, ಕೋಲು ಮುಖ, ಕ್ರಿಮ್ ಕಲರ್ ಶರ್ಟ್, ಚಾಕಲೇಟ್ ಬಣ್ಣದ ಪ್ಯಾಂಟ್ ಹಾಗೂ ಕನ್ನಡಕ ಧರಿಸಿದ್ದು, ಕನ್ನಡ, ಹಿಂದಿ ಮತ್ತು ಇಂಗ್ಲೀಷ್ ಭಾಷೆ ಮಾತನಾಡುತ್ತಾನೆ. ಈ ವ್ಯಕ್ತಿಯ ಕಾಣೆಯಾದ ಈ ಕುರಿತು ಆಳಂದ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 24/2019 ರನ್ವಯ ದಿನಾಂಕ: 02-02-2018ರಂದು ಪ್ರಕರಣ ದಾಖಲಿಸಲಾಗಿದೆ.
ಈತನ ಸುಳಿವು ಸಿಕ್ಕಲ್ಲಿ ಕೂಡಲೇ ಕಲಬುರಗಿ ಪೊಲೀಸ್ ಅಧೀಕ್ಷಕರ ಮೊಬೈಲ್ ಸಂಖ್ಯೆ 9480803501, ಆಳಂದ ಆರಕ್ಷಕ ವೃತ್ತ ನಿರೀಕ್ಷಕರ ಮೊಬೈಲ್ ಸಂಖ್ಯೆ 9480803539, ಆಳಂದ ಪೊಲೀಸ್ ಠಾಣೆಯ ಪಿ.ಎಸ್.ಐ. ಇವರ ಮೊಬೈಲ್ ಸಂಖ್ಯೆ 9480803563 ಹಾಗೂ ಆಳಂದ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08472-202222ಗೆ ತಿಳಿಸುವಂತೆ ಕೋರಲಾಗಿದೆ.
ಕಾಯಕ ನಿಷ್ಠೆಗೆ ಹೆಸರಾದವರು ಶರಣ ಶಿವಯೋಗಿ ಸಿದ್ದರಾಮೇಶ್ವರರು
************************************************************
ಕಲಬುರಗಿ,ಫೆ.6,(ಕ.ವಾ)-ಹನ್ನೆರಡನೇ ಶತಮಾನದಲ್ಲಿಯೆ ಮಾನವ ಜೀವನ ಒಳಿತಿಗಾಗಿ ಕೆರೆ-ಕಟ್ಟೆಗಳÀ ನಿರ್ಮಾಣದ ಪರಿಕಲ್ಪನೆ ಹೊಂದಿದ್ದ ಶರಣ ಶಿವಯೋಗಿ ಸಿದ್ಧರಾಮೇಶ್ವರರು ಕಾಯಕ ನಿಷ್ಠೆಗೆ ಹೆಸರಾದವರು ಎಂದು ವಿಜಯಪುರದ ಬಿ.ಎಲ್.ಡಿ ಸಂಸ್ಥೆಯ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಕೆ.ವಿ ಒಡೆಯರ್ ಹೇಳಿದರು.
ಅವರು ಬುಧವಾರ ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ಧರಾಮೇಶ್ವರರ 847ನೇ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸದಲ್ಲಿ ಮಾತನಾಡುತ್ತ, ಆಕಾಶದಲ್ಲಿ ನಕ್ಷತ್ರ ಹೊಳೆದಂತೆ ಶಿವಯೋಗಿ ಸಿದ್ಧರಾಮೇಶ್ವರ ಜೀವನ ಚರಿತ್ರೆಯ ಇತಿಹಾಸವಿದೆ. ಜೀವನುದ್ದಕ್ಕು ಯಾವುದೇ ಕಳಂಕವಿಲ್ಲದೆ ದುಡಿದ ಶ್ರೇಷ್ಠ ಕಾಯಕಯೋಗಿ ಅವರಾಗಿದ್ದಾರೆ ಎಂದರು.
12ನೇ ಶತಮಾನದಲ್ಲಿ ಅತಿ ಹೆಚ್ಚು ಅಂದರೆ 68 ಸಾವಿರ ವಚನಗಳನ್ನು ಕನ್ನಡದಲ್ಲಿ ಬರೆದ ಪ್ರಥಮ ವಚನಕಾರ ಎಂಬ ಕೀರ್ತಿಗೆ ಶಿವಯೋಗಿ ಸಿದ್ದರಾಮೇಶ್ವರರು ಪಾತ್ರರಾಗಿದ್ದು, ದುರಾದೃಷ್ಠವೆಂದರೆ 137 ವಚನಗಳು ಮಾತ್ರ ನಮಗೆ ಓದಲು ದೊರಕಿವೆ. ಶರಣ ಸಿದ್ದರಾಮೇಶ್ವರರು ಹೇಳಿದ ಹಾಗೆ ಕಲ್ಲು ಒಡೆಯುವ ಕೆಲಸ ತುಂಬಾ ಕಷ್ಟದ ಕೆಲಸ, ಅದು ಕೇವಲ ಭೋವಿ ವಡ್ಡರ್ ಸಮುದಾಯದ ಜನರಿಂದ ಮಾತ್ರ ಸಾಧ್ಯ. ಆದರೆ ಇತ್ತೀಚೆಗೆ ಗಣಿಗಾರಿಕೆ ಸ್ಥಗಿತದಿಂದ ಈ ಸಮುದಾಯ ತನ್ನ ಮೂಲ ವೃತ್ತಿಯನ್ನೆ ಕಳೆದುಕೊಂಡು ಗೂಳೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ತಡೆಯಲು ಸರ್ಕಾರವು ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ವಿಶೇಷವಾಗಿ 5 ಎಕರೆ ಜಮೀನು ನೀಡಿ ಗಣಿಗಾರಿಕೆಗೆ ಅವಕಾಶ ಕಲ್ಪಿಸಿಕೊಟ್ಟು ಈ ಸಮುದಾಯದ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಬೇಕು ಹಾಗೂ ಜಿಲ್ಲಾ ಕೇಂದ್ರದಲ್ಲಿ ಭೋವಿ ಸಮುದಾಯ ಭವನ ನಿರ್ಮಾಣವಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿಧಾನ ಪರಿಷತ್ತಿನ ಮಾಜಿ ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, ಸಮಾಜದ ಏಳಿಗೆಗಾಗಿ ಅನೇಕ ಶರಣರು ಹೋರಾಡಿದಾರೆ, ಜಾತೀಯತೆ ವಿರುದ್ಧ ತಮ್ಮ ಧ್ವನಿ ಎತ್ತಿದಾರೆ. ಅದರಲ್ಲು ಮುಖ್ಯವಾಗಿ ಕರ್ಮಯೋಗಿ ಎಂದು ಹೆಸರು ಪಡೆದ ಸಿದ್ಧರಾಮೇಶ್ವರರು ಸಾಕ್ಷಾತ ಶಿವನನ್ನೆ ಮೆಚ್ಚಿಸಿದ ಒಬ್ಬ ಮಹಾನ ಯೋಗಿಯಾಗಿದಾರೆ. ಭೋವಿ ಸಮಾಜವು ಕಾಯಕ ಶ್ರೇಷ್ಠ ಸಮಾಜವಾಗಿದೆ. ಈ ಸಮಾಜದಲ್ಲಿ ಅನೇಕ ಬಡ ಮಕ್ಕಳಿದ್ದು, ಅವರೆಲ್ಲರಿಗೂ ಸರ್ಕಾರದ ಸೌಲಭ್ಯ ದೊರೆತಿದ್ದೆ ಆದಲ್ಲಿ ಇವರು ಸಹ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದರು.
ಕಲಬುರಗಿ ಜಿಲ್ಲಾ ಪಂಚಾಯತ ಅಧ್ಯಕ್ಷೆ ಸುವರ್ಣಾ ಹಣಮಂತ ಮಲಾಜಿ ಅವರು ಶರಣ ಶಿವಯೋಗಿ ಸಿದ್ಧರಾಮೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಮಹಾಪೌರರಾದ ಮಲ್ಲಮ್ಮ ಸಿದ್ರಾಮಪ್ಪ ವಳಕೇರಿ, ಪ್ರಭಾರಿ ಅಪರ ಜಿಲ್ಲಾಧಿಕಾರಿ ಡಾ. ಶರಣಪ್ಪ ಸತ್ಯಂಪೇಟ್, ಶಿಷ್ಟಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ್, ಭೋವಿ ವಡ್ಡರ ಸಮಾಜದ ಗೌರವಾಧ್ಯಕ್ಷ ರಾಮು ನಂದೂರ, ಭೋವಿ ವಡ್ಡರ ನೌಕರರ ಸಂಘದ ಜಿಲ್ಲಾಧ್ಯಕ್ಷ ತಿಮ್ಮಯ್ಯ ಶಹಾಬಾದಕರ್, ಭೋವಿ ವಡ್ಡರ ಸಮಾಜದ ನಗರಾಧ್ಯಕ್ಷ ಭೀಮಾಶಂಕರ ಭಂಕೂರ, ಮುಖಂಡರಾದ ಸಿದ್ರಾಮ ದಂಡಗುಳಕರ್, ಈರಣ್ಣ ಹಲಕಟ್ಟಿ, ರಾಮಯ್ಯ ಪೂಜಾರಿ ಸೇರಿದಂತೆ ಇನ್ನೀತರ ಮುಖಂಡರು, ನೂರಾರು ಸಂಖ್ಯೆಯಲ್ಲಿ ಸಮುದಾಯ ಬಾಂಧವರು ಇದ್ದರು.
ಕಲಬುರಗಿ ಜಿಲ್ಲಾ ಭೋವಿ ವಡ್ಡರ ಸಮಾಜದ ಜಿಲ್ಲಾಧ್ಯಕ್ಷ ತಿಪ್ಪಣ ಒಡೆಯರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ್ ಮರಬನಳ್ಳಿ ಸ್ವಾಗತಿಸಿದರು. ಶಿವಾನಂದ ಅಣಜಗಿ ನಿರೂಪಿಸಿದರು.
ಫೆಬ್ರವರಿ 19ರಂದು ಛತ್ರಪತಿ ಶಿವಾಜಿ ಜಯಂತಿ ಸಂಭ್ರಮದಿಂದಾಚರಿಸಲು ತೀರ್ಮಾನ
*************************************************************************
ಕಲಬುರಗಿ,ಫೆ.06.(ಕ.ವಾ.)-ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು 2019ರ ಫೆಬ್ರವರಿ 19ರಂದು ಕಲಬುರಗಿ ನಗರ ಹಾಗೂ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಸಂಭ್ರಮ-ಸಡಗರದಿಂದ ಆಚರಿಸಲು ಪ್ರಭಾರಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಶರಣಪ್ಪ ಸತ್ಯಂಪೇಟ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜರುಗಿದ ಸಭೆಯು ಸರ್ವಾನುಮತದಿಂದ ನಿರ್ಣಯ ಕೈಗೊಂಡಿತು.
ಅಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ಸಮಾರಂಭವನ್ನು ಮಧ್ಯಾಹ್ನ 12.30 ಗಂಟೆಗೆ ಡಾ. ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡುವ ಮೂಲಕ ಜಯಂತಿ ಕಾರ್ಯಕ್ರಮ ಏರ್ಪಡಿಸುವುದು. ಶಿಷ್ಟಾಚಾರದಂತೆ ಸಮಾರಂಭಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಇನ್ನೀತರ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗುವುದು. ಛತ್ರಪತಿ ಶಿವಾಜಿ ಮಹಾರಾಜರ ಜೀವನ ಮತ್ತು ಸಾಧನೆ ಕುರಿತು ವಿಶೇಷ ಉಪನ್ಯಾಸ ಸಹ ಏರ್ಪಡಿಸಲಾಗುವುದು ಎಂದರು.
ಜಯಂತಿಯ ಅಂಗವಾಗಿ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರದ ಬೃಹತ್ ಮೆರವಣಿಗೆ ಅಂದು ಬೆಳಿಗ್ಗೆ 10.30 ಗಂಟೆಗೆ ಕಲಬುರಗಿ ನಗರದ ಐಯ್ಯರವಾಡಿ ಹನುಮಾನ ದೇವಸ್ಥಾನದಿಂದ ಆರಂಭಗೊಂಡು, ಸೂಪರ ಮಾರ್ಕೆಟ್, ಜಗತ್ ವೃತ್ತದ ಮೂಲಕ ಡಾ.ಎಸ್.ಎಂ.ಪಂಡಿತ ರಂಗಮಂದಿರದವರೆಗೆ ಸಾಗಲಿದೆ. ಮೆರವಣಿಗೆಗೆ ಜಾನಪದ ಕಲಾ ತಂಡ ನಿಯೋಜಿಸಬೇಕು.
ಇದಲ್ಲದೆ ಅಂದು ಕಲಬುರಗಿ ನಗರ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಲೆ-ಕಾಲೇಜುಗಳಲ್ಲಿ ಮತ್ತು ತಾಲೂಕಾ ಕೇಂದ್ರಗಳಲ್ಲಿ ಜಯಂತಿ ಆಚರಣೆಗೆ ಸುತ್ತೋಲೆ ಹೊರಡಿಸಬೇಕು. ಜಯಂತಿಯ ಮೆರವಣಿಗೆ ಮತ್ತು ವೇದಿಕೆ ಕಾರ್ಯಕ್ರಮಕ್ಕೆ ಕುಡಿಯುವ ನೀರಿನ ವ್ಯವಸ್ಥೆ, ಸೂಕ್ತ ಪೊಲೀಸ್ ಬಂದೋಬಸ್ಸ್ ಹಾಗೂ ವೇದಿಕೆ ಸ್ಥಳವನ್ನು ಸ್ವಚ್ಚಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಶರಣಪ್ಪ ಸತ್ಯಂಪೇಟ್ ನಿರ್ದೇಶನ ನೀಡಿದರು.
ಸಭೆಯಲ್ಲಿ ಶಿಷ್ಠಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ, ಡಿವೈ.ಎಸ್‍ಪಿ ಶಿವಲಿಂಗಪ್ಪ ಪಟ್ಟಣ, ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್ತಿನ ರಾಜ್ಯ ಉಪಾಧ್ಯಕ್ಷ ಸೂರ್ಯಕಾಂತ ಕದಂ, ಜಿಲ್ಲಾಧ್ಯಕ್ಷ ಆರ್.ವಿ. ಜಗದಾಳೆ, ಪ್ರಧಾನ ಕಾರ್ಯದರ್ಶಿ ರಾಜು ಕಾಕಡೆ, ಉಪಾಧ್ಯಕ್ಷ ಜೀವನ ವಾಗ್ಮೋರೆ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ್ ಮರಬನಳ್ಳಿ ಜಯಂತಿಯ ರೂಪುರೇಷೆ ಹಾಗೂ ಕೈಗೊಂಡ ಪೂರ್ವಸಿದ್ಧತೆ ಕುರಿತು ವಿವರಿಸಿದರು.
ಸಂತ ಶ್ರೀ ಸೇವಾಲಾಲ ಜಯಂತ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲು ನಿರ್ಣಯ
*************************************************************************
ಕಲಬುರಗಿ,ಫೆ.06.(ಕ.ವಾ.)-ಲಂಬಾಣಿ ಸಮಾಜದ ದಾರ್ಶನಿಕ ಮತ್ತು ಸಮಾಜ ಸುಧಾರಕ ಸಂತ ಶ್ರೀ ಸೇವಾಲಾಲ ಜಯಂತಿಯನ್ನು ಫೆಬ್ರವರಿ 15ರಂದು ಕಲಬುರಗಿ ಜಿಲ್ಲೆಯಾದ್ಯಂತ ಸಂಭ್ರಮ-ಸಡಗರದಿಂದ ಆಚರಿಸಲು ಪ್ರಭಾರಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಶರಣಪ್ಪ ಸತ್ಯಂಪೇಟ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಸಭೆಯು ಸರ್ವಾನುಮತದಿಂದ ನಿರ್ಣಯ ಕೈಗೊಂಡಿತು.
ಜಯಂತಿಯ ಅಂಗವಾಗಿ ಅಂದು ಬೆಳಿಗ್ಗೆ 9.30 ಗಂಟೆಗೆ ಗಂಜ್‍ನಲ್ಲಿರುವ ನಗರೇಶ್ವರ ಶಾಲೆಯಿಂದ ಎಸ್.ಎಂ. ಪಂಡಿತ ರಂಗಮಂದಿರವರೆಗೆ ಸಂತ ಶ್ರೀ ಸೇವಾಲಾಲ ಅವರ ಭಾವಚಿತ್ರದ ಬೃಹತ್ ಮೆರವಣಿಗೆಯನ್ನು ಆಯೋಜಿಸಲು ಹಾಗೂ ಮುಖ್ಯ ಕಾರ್ಯಕ್ರಮವನ್ನು ಮಧ್ಯಾಹ್ನ 1 ಗಂಟೆಗೆ ಡಾ. ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ನಡೆಸಲು ನಿರ್ಧರಿಸಲಾಯಿತು. ಸಂತ ಶ್ರೀ ಸೇವಾಲಾಲ ಅವರ ಜೀವನ ಮತ್ತು ಸಾಧನೆ ಕುರಿತು ವಿಶೇಷ ಉಪನ್ಯಾಸ, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಸಹ ಆಯೋಜಿಸಲು ಸಭೆ ಒಪ್ಪಿಗೆ ಸೂಚಿಸಿತು.
ಕಾರ್ಯಕ್ರಮಕ್ಕೆ ಶಿಷ್ಠಚಾರದಂತೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳನ್ನು ಆಹ್ವಾನಿಸುವುದು ಹಾಗೂ ಡಾ. ರಾಮರಾವ ಮಹಾರಾಜ ಅವರನ್ನು ಕಾರ್ಯಕ್ರಮದ ಸಾನಿಧ್ಯ ವಹಿಸಲು ಆಹ್ವಾನಿಸಲು ಸಭೆಯು ತೀರ್ಮಾನಿಸಿತು.
ಇದಲ್ಲದೆ ಅಂದು ಕಲಬುರಗಿ ನಗರ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಲೆ-ಕಾಲೇಜುಗಳಲ್ಲಿ ಮತ್ತು ತಾಲೂಕಾ ಕೇಂದ್ರಗಳಲ್ಲಿ ಜಯಂತಿ ಆಚರಣೆಗೆ ಸುತ್ತೋಲೆ ಹೊರಡಿಸಬೇಕು. ಜಯಂತಿಯ ಮೆರವಣಿಗೆ ಮತ್ತು ವೇದಿಕೆ ಕಾರ್ಯಕ್ರಮಕ್ಕೆ ಕುಡಿಯುವ ನೀರಿನ ವ್ಯವಸ್ಥೆ, ಸೂಕ್ತ ಪೊಲೀಸ್ ಬಂದೋಬಸ್ಸ್ ಹಾಗೂ ವೇದಿಕೆ ಸ್ಥಳವನ್ನು ಸ್ವಚ್ಚಗೊಳಿಸಲು, ಮೆರವಣಿಗೆಯಲ್ಲಿ ಆಕರ್ಷಕ ಕಲಾ ತಂಡವನ್ನು ನಿಯೋಜಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಶರಣಪ್ಪ ಸತ್ಯಂಪೇಟ್ ನಿರ್ದೇಶನ ನೀಡಿದರು. ಸಭೆಯಲ್ಲಿ ಭಾಗವಹಿಸಿದ ಲಂಬಾಣಿ ಸಮಾಜದ ಮುಖಂಡರು ಜಯಂತಿ ಯಶಸ್ಸಿಗೆ ಅಗತ್ಯ ಸಲಹೆಗಳನ್ನು ನೀಡಿದರು.
ಸಭೆಯಲ್ಲಿ ಶಿಷ್ಠಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ, ಡಿವೈಎಸ್‍ಪಿ ಶಿವಲಿಂಗಪ್ಪ ಪಟ್ಟಣ, ಲಂಬಾಣಿ ಸಮಾಜದ ಜಿಲ್ಲಾ ಪದಾಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ್ ಮರಬನಳ್ಳಿ ಸಭೆಗೆ ಸರ್ವರನ್ನು ಸ್ವಾಗತಿಸಿ ಜಯಂತಿ ರೂಪುರೇಷೆ, ಪೂರ್ವ ಸಿದ್ಧತೆ ಬಗ್ಗೆ ವಿವರಿಸಿದರು.


ಹೀಗಾಗಿ ಲೇಖನಗಳು News and Photo Date: 06-02-2019

ಎಲ್ಲಾ ಲೇಖನಗಳು ಆಗಿದೆ News and Photo Date: 06-02-2019 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ News and Photo Date: 06-02-2019 ಲಿಂಕ್ ವಿಳಾಸ https://dekalungi.blogspot.com/2019/02/news-and-photo-date-06-02-2019.html

Subscribe to receive free email updates:

0 Response to "News and Photo Date: 06-02-2019"

ಕಾಮೆಂಟ್‌‌ ಪೋಸ್ಟ್‌ ಮಾಡಿ