News and Photos Date: 24--12--2018

News and Photos Date: 24--12--2018 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು News and Photos Date: 24--12--2018, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : News and Photos Date: 24--12--2018
ಲಿಂಕ್ : News and Photos Date: 24--12--2018

ಓದಿ


News and Photos Date: 24--12--2018

ದೇಶದ ಅಭಿವೃದ್ಧಿಗೆ ನಾಗರಿಕರು ಬದಲಾಗುವುದು ಅವಶ್ಯಕ
****************************************************
ಕಲಬುರಗಿ,ಡಿ.24.(ಕ.ವಾ.)-ದೇಶದಾದ್ಯಂತ ಸಧ್ಯ ರಾಜಕೀಯ ಬದಲಾವಣೆಯ ಗಾಳಿ ಬೀಸುತ್ತಿದೆ. ದೇಶದ ಅಭಿವೃದ್ಧಿಗಾಗಿ ಹೈ.ಕ. ಭಾಗದ ನಾಗರಿಕರೂ ಸಹ ಬದಲಾಗಬೇಕಾಗಿದೆ ಎಂದು ಕಲಬುರಗಿ ಲೋಕಸಭಾ ಸದಸ್ಯ ಡಾ.ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಅವರು ಸೋಮವಾರ ಕಲಬುರಗಿ ನಗರದಲ್ಲಿ ಹೆಚ್.ಕೆ.ಆರ್.ಡಿ.ಬಿ. ಮ್ಯಾಕ್ರೋ ಯೋಜನೆಯಡಿಯಲ್ಲಿ ಹಮ್ಮಿಕೊಂಡಿದ್ದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ತಾರಫೈಲ್ ಪ್ರದೇಶದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ, ಸಾರ್ವಜನಿಕರು ತಮ್ಮ ಹಕ್ಕುಗಳನ್ನು ಉಳಿಸಿಕೊಳ್ಳಲು ಸಂವಿಧಾನವನ್ನು ರಕ್ಷಿಸಬೇಕಾಗಿದೆ. ಸಂವಿಧಾನಕ್ಕೆ ಗೌರವ ನೀಡುವ ಹಾಗೂ ಅಭಿವೃದ್ಧಿಯ ಮನೋಭಾವ ಹೊಂದಿರುವ ಜವಾಬ್ದಾರಿಯುತ ಜನಪ್ರತಿನಿಧಿಗಳನ್ನು ಆಯ್ಕೆಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಹೇಳಿದರು.
ಕಲಬುರಗಿ ಜಿಲ್ಲೆಯ ಮತದಾರರು ಆಶೀರ್ವಾದದಿಂದ ಸಂಸದನಾಗಿದ್ದಕ್ಕೆ ಈ ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಹೈ.ಕ. ಭಾಗದ ಸರ್ವಾಂಗೀಣ ಅಭಿವೃದ್ಧಿಗಾಗಿ ಸಂವಿಧಾನದ 371 ಕಲಂಗೆ ತಿದ್ದುಪಡಿ ಮಾಡಿದ್ದರಿಂದಲೇ ಇಂದು ಹೈದ್ರಾಬಾದ ಕರ್ನಾಟಕ ಪ್ರದೇಶಕ್ಕೆ ಹೆಚ್ಚಿನ ಅನುದಾನ ದೊರೆತು ಹೈ.ಕ. ಭಾಗದ ಆರು ಜಿಲ್ಲೆಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. 371(ಜೆ) ಕಲಂನಿಂದಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಮೀಸಲಾತಿ ದೊರೆತ್ತಿದ್ದರಿಂದ ಈ ಭಾಗದ ಬಡವರ ಮಕ್ಕಳು ಸಹ ವೈದ್ಯಕೀಯ ಮತ್ತು ಇಂಜನಿಯರಿಂಗ್ ಓದುತ್ತಿದ್ದಾರೆ. ಈ ಭಾಗದಲ್ಲಿ ಖಾಲಿಯಿರುವ ಹುದ್ದೆಗಳನ್ನು ಹೈ.ಕ. ಭಾಗದ ಅಭ್ಯರ್ಥಿಗಳಿಂದಲೇ ಭರ್ತಿ ಮಾಡುವ ಮೂಲಕ ಉದ್ಯೋಗಾವಕಾಶ ಕಲ್ಪಿಸಲಾಗಿದೆ. ಸರ್ಕಾರವು ಹೈ.ಕ. ಭಾಗದ ಅಭಿವೃದ್ಧಿಗೆ ಪ್ರತಿವರ್ಷ 1500 ಕೋಟಿ ರೂ.ಗಳ ವಿಶೇಷ ಅನುದಾನ ನೀಡುತ್ತಿದೆ ಎಂದು ವಿವರಿಸಿದರು.
ಕಲಬುರಗಿಯ ಲುಂಬಿನಿ ಬುದ್ಧ ವಿಹಾರದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಬೇಡಿಕೆಯಿದ್ದು, 10 ಲಕ್ಷ ರೂ.ಗಳನ್ನು ಸಂಸದರ ನಿಧಿಯಿಂದ ನೀಡಲಾಗುವುದು. ಅದೇ ರೀತಿ ಕಾಳಿಮಾತಾ ದೇವಸ್ಥಾನಕ್ಕೂ ಸಹ 5 ಲಕ್ಷ ರೂ.ಗಳನ್ನು ನೀಡಲಾಗುವುದು ಎಂದು ಘೋಷಿಸಿದ ಸಂಸದರು ಹೆಚ್.ಕೆ.ಆರ್.ಡಿ.ಬಿ. ಮ್ಯಾಕ್ರೋ ಯೋಜನೆಯಡಿಯ ಒಟ್ಟು 3.75 ಕೋಟಿ ರೂ. ವೆಚ್ಚದ 6 ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಚಾಲನೆ ನೀಡಲಾಗಿದೆ. ಗುಣಮಟ್ಟದಿಂದ ಕೂಡಿದ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕ ಇಕ್ಬಾಲ್ ಅಹ್ಮದ ಸರಡಗಿ, ಮಹಾನಗರಪಾಲಿಕೆ ಮಹಾಪೌರ ಮಲ್ಲಮ್ಮ ವಳಕೇರಿ, ಗಣ್ಯರಾದ ಅಲ್ಲಮ್ಮಪ್ರಭು ಪಾಟೀಲ, ಜಗದೇವ ಗುತ್ತೇದಾರ, ಮಾರುತಿರಾವ ಮಾಲೆ, ಮಹಾನಗರ ಪಾಲಿಕೆಯ ಸದಸ್ಯರಾದ ಮಹೇಶ ಹೊಸೂರಕರ, ಅಲಿಮುದ್ದೀನ್ ಪಟೇಲ್, ಮೀನಾಕ್ಷಿ ಮದನಕುಮಾರ ಬಂಡೆ, ಲತಾ ರವಿ ರಾಠೋಡ, ಸೈಯದ್ ಹಮೀದ ನಿಸಾರ, ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ, ಮಹಾನಗರ ಪಾಲಿಕೆ ಆಯುಕ್ತ ಪೆದ್ದಪ್ಪಯ್ಯ, ಮಹಾನಗರ ಪಾಲಿಕೆ ಕಾರ್ಯಪಾಲಕ ಇಂಜಿನಿಯರ್ ಶಿವನಗೌಡ ಪಾಟೀಲ ಮತ್ತಿತರ ಅಧಿಕಾರಿಗಳು ಹಾಗೂ ಗಣ್ಯರು ಪಾಲ್ಗೊಂಡಿದ್ದರು.
ಇದಕ್ಕೂ ಮುನ್ನ ಸಂಸದರು 69 ಲಕ್ಷ ರೂ. ವೆಚ್ಚದ ಕಲಬುರಗಿ ನಗರದ ಇಕ್ಬಾಲ ಕಾಲೋನಿಯ ಸ್ಮಶಾನ ಭೂಮಿಯ ಗೇಟ್ ನಂ. 2 ರಿಂದ ಹೀರಾಪುರ ಕ್ರಾಸ್ ರಿಂಗ್ ರೋಡವರೆಗೆ ಸಿ.ಸಿ. ಚರಂಡಿ ನಿರ್ಮಾಣ, 30 ಲಕ್ಷ ರೂ. ವೆಚ್ಚದ ನಗರದ ವಾರ್ಡ ಸಂಖ್ಯೆ 38 ರಲ್ಲಿ ಬರುವ ಹೀರಾಪುರ ವೃತ್ತ ಅಭಿವೃದ್ಧಿ ಕಾಮಗಾರಿ, 66.20 ಲಕ್ಷ ರೂ. ವೆಚ್ಚದ ಕಲಬುರಗಿ ನಗರದ ವಾರ್ಡ ಸಂಖ್ಯೆ 38 ರಲ್ಲಿ ಬರುವ ರೈಲ್ವ್ವೆ ಕೆಳ ಸೇತುವೆಯಿಂದ ಹೀರಾಪುರ ರೈಲ್ವೆ ಗೇಟ್‍ವರೆಗೆ ರಸ್ತೆ ಅಭಿವೃದ್ದಿ ಕಾಮಗಾರಿ, 25ಲಕ್ಷ ರೂ. ವೆಚ್ಚದ ನಗರದ ವಾರ್ಡ ಸಂಖ್ಯೆ 55ರ ವರದಾ ನಗರದ ಸೋಮನಾಥ ವಲದಾರ ಮನೆಯಿಂದ ಮಲ್ಲಪ್ಪಾ ಗೌಡ ಖಜುರಿಯವರ ಮನೆವರೆಗೆ ಡಾಮಿನಿಂಟ್ ಶಾಲೆ ಹಿಂದುಗಡೆ ರಸ್ತೆ ನಿರ್ಮಾಣ, 1 ಕೋಟಿ ರೂ. ವೆಚ್ಚದ ನಗರದ ವಾರ್ಡ ನಂ. 48 ರಲ್ಲಿ ತಾರಫೈಲ್ ಏರಿಯಾದಲ್ಲಿ 11ನೇ ಅಡ್ಡರಸ್ತೆಯಿಂದ 14ನೇ ಅಡ್ಡ ರಸ್ತೆ ವರೆಗೆ ಸುಧಾರಣೆ ಡ್ರೈನೆಟ್ ನಿರ್ಮಾಣ ಹಾಗೂ 85 ಲಕ್ಷ ರೂ. ವೆಚ್ಚದ ಕಲಬುರಗಿ ನಗರದ ವಾರ್ಡ ಸಂಖ್ಯೆ 53ರಲ್ಲಿನ ಒಂದನೇ ಅಡ್ಡರಸ್ತೆಯಿಂದ 11ನೇ ಅಡ್ಡರಸ್ತೆವರೆಗೆ ತಾರಫೈಲ್ ಏರಿಯಾದಲ್ಲಿ ಸಿ.ಸಿ. ರಸ್ತೆ ನಿರ್ಮಾಣದ ಜೊತೆಗೆ ಎಸ್.ಡಬ್ಲ್ಯೂ.ಡಿ. ಡ್ರೈನೆಜ್ ನಿರ್ಮಾಣ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಮುಜರಾಯಿ ಸಚಿವರ ಪ್ರವಾಸ
****************************
ಕಲಬುರಗಿ,ಡಿ.24.(ಕ.ವಾ.)-ಗಣಿ ಮತ್ತು ಭೂವಿಜ್ಞಾನ ಹಾಗೂ ಮುಜರಾಯಿ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ರಾಜಶೇಖರ ಬಿ. ಪಾಟೀಲ ಅವರು ಹುಮನಾಬಾದಿನಿಂದ ರಸ್ತೆ ಮೂಲಕ ಇದೇ ಡಿಸೆಂಬರ್ 25ರಂದು ಕಲಬುರಗಿಗೆ ಆಗಮಿಸಿ, ಬೆಳಿಗ್ಗೆ 11.30 ಗಂಟೆಗೆ ಕಲಬುರಗಿಯ ಗುಲಬರ್ಗಾ ವಿಶ್ವವಿದ್ಯಾಲಯದ ಎದುರಿಗೆಯಿರುವ ವೇದ ಪಬ್ಲಿಕ್ ಶಾಲೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. ಮಧ್ಯಾಹ್ನ 2 ಗಂಟೆಗೆ ಕಲಬುರಗಿಯಿಂದ ಹುಮನಾಬಾದಿಗೆ ಪ್ರಯಾಣಿಸುವರು.
ಡಿಸೆಂಬರ್ 25-28ರವರೆಗೆ ಕೆ.ಎಸ್.ಐ.ಸಿ.
*************************************
ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಹಾಗೂ ಮಾರಾಟ ಮೇಳ
*******************************************************
ಕಲಬುರಗಿ,ಡಿ.24.(ಕ.ವಾ.)-ಕರ್ನಾಟಕದ ಪಾರಂಪಾರಿಕ ಉತ್ಪನ್ನವಾದ ಕೆ.ಎಸ್.ಐ.ಸಿ. ಮೈಸೂರ ಸೀಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟವನ್ನು ಇದೇ ಡಿಸೆಂಬರ್ 25 ರಿಂದ 28ರವರೆಗೆ ಪ್ರತಿದಿನ ಬೆಳಗಿನ 10 ರಿಂದ ರಾತ್ರಿ 8 ಗಂಟೆಯವರೆಗೆ ಕಲಬುರಗಿ ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದ ಬಳಿಯಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಭವನದ (ಶ್ರೀ ಬಾಪೂಗೌಡ ದರ್ಶನಾಪುರ ರಂಗಮಂದಿರ) ದಲ್ಲಿ ಏರ್ಪಡಿಸಲಾಗಿದೆ.
ಡಿಸೆಂಬರ್ 25ರಂದು ಬೆಳಿಗ್ಗೆ 10.30 ಗಂಟೆಗೆ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಅವರು ಈ ಪ್ರದರ್ಶನ ಹಾಗೂ ಮಾರಾಟವನ್ನು ಉದ್ಘಾಟಿಸುವರು. ಸಂಪ್ರದಾಯಿಕ ಮೈಸೂರು ಸಿಲ್ಕ್ ಸೀರೆಗಳಲ್ಲದೇ ಕೆ.ಎಸ್.ಐ.ಸಿ.ಯ ಈಗ ನಾಜೂಕಾದ ವಿನ್ಯಾಸದ ಸಂಗ್ರಹಿತ “ಕ್ರೇಪ್ ಡಿ ಚೈನ್” ಸೀರೆಗಳನ್ನು ಹಾಗೂ ಜಾರ್ಜೆಟ್ ಮತ್ತು ಸಾದಾ ಮುದ್ರಿತ ಸೀರೆಗಳನ್ನು, ಟೈ, ಸ್ಕಾರ್ಪ್ ಇತ್ಯಾದಿ ಉತ್ಪನ್ನಗಳನ್ನು ಪ್ರದರ್ಶಿಸುತ್ತಿದೆ. ಇದಲ್ಲದೇ ನವನವೀನ “ವಿವಾಹ ಸಂಗ್ರಹ” ಸೀರೆಗಳನ್ನು ಪರಿಚಯಿಸಲಾಗಿದೆ ಹಾಗೂ ಕೆ.ಎಸ್.ಐ.ಸಿ.ಯು ತನ್ನ ಉತ್ಪನ್ನಗಳ ಮೇಲೆ ಶೇಕಡಾ 25 ರವರೆಗೆ ವಿಶೇಷ ರಿಯಾಯಿತಿಯನ್ನು ನೀಡುತ್ತಿದೆ.
ಕೆ.ಎಸ್.ಐ.ಸಿ.ಯ ಮೈಸೂರು ಸೀಲ್ಕ್ ಸೀರೆಗಳಿಗೆ ಭೌಗೋಳಿಕ ಗುರುತಿನ ನೋಂದಣಿ ಉI-11 (ಉeogಡಿಚಿಠಿhiಛಿಚಿಟ iಟಿಜiಛಿಚಿಣioಟಿ ಖegisಣಡಿಚಿಣioಟಿ) ಪಡೆದುಕೊಂಡಿದೆ. ಇದು ಸರಕುಗಳ ಭೌಗೋಳಿಕ ಗುರುತಿನ (ನೋಂದಣಿ ಮತ್ತು ಸಂರಕ್ಷಣೆ) ಕಾಯ್ದೆ 1999 ರಲ್ಲಿ ಲೋಕಸಭೆಯಲ್ಲಿ ಅನುಮೋದನೆಗೊಂಡಿದೆ. ಈ ನೋಂದಣಿಯ ಪ್ರಕಾರ ಕೆ.ಎಸ್.ಐ.ಸಿ.ಯು. ಮೈಸೂರು ಸಿಲ್ಕ್‍ನ ಏಕೈಕ ಮಾಲೀಕತ್ವ ಹೊಂದಿದೆ. ಇದಲ್ಲದೇ ಕಂಪನಿಯು ISಔ 9001-2015 , ಇಒS 14001-2015 ಹಾಗೂ ಔಊSಂS 18001-2007 ರ ದೃಢೀಕರಣ ಪತ್ರವನ್ನು ಹೊಂದಿದೆ. ಈ ನಿಗಮಕ್ಕೆ 2016-17ನೇ ಆರ್ಥಿಕ ವರ್ಷದಲ್ಲಿ ಕರ್ನಾಟಕ ಉದ್ದಿಮೆಗಳಿಗೆ ಪ್ರಧಾನ ಮಾಡಲಾಗುವ “ಮುಖ್ಯಮಂತ್ರಿಗಳ ವಾರ್ಷಿಕ ರತ್ನ” ಪ್ರಶಸ್ತಿ ಲಭಿಸಿದೆ. 2012ರಲ್ಲಿ ಶತಮಾನೋತ್ಸವವನ್ನು ಪೂರೈಸಿದ ಕರ್ನಾಟಕ ಸರ್ಕಾರದ ಮೊದಲ ಸರ್ಕಾರಿ ಉದ್ಯಮವಾಗಿರುತ್ತದೆ.
ಅಪ್ರೆಂಟಿಸ್ ತರಬೇತಿಗಾಗಿ ಅರ್ಜಿ ಆಹ್ವಾನ
*************************************
ಕಲಬುರಗಿ,ಡಿ.24.(ಕ.ವಾ.)-ಬೆಂಗಳೂರಿನ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‍ನ ಟೆಕ್ನಿಕಲ್ ಟ್ರೇನಿಂಗ್ ಇನ್‍ಸ್ಟಿಟ್ಯೂಟ್‍ನಲ್ಲಿ ಕೆಳಕಂಡ ವಿವಿಧ ಡಿಪ್ಲೋಮಾ ಕೋರ್ಸುಗಳಲ್ಲಿ ಪಾಸಾದ ಅಭ್ಯರ್ಥಿಗಳಿಗೆ ಅಪ್ರೆಂಟಿಸ್ ತರಬೇತಿ ನೀಡಲಾಗುತ್ತಿದೆ. ಇದಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಉದ್ಯೋಗ ಮತ್ತು ತರಬೇತಿ ಕಚೇರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಡಿಪ್ಲೋಮಾ ಏರೋನಾಟಿಕಲ್ ಇಂಜಿನಿಯರಿಂಗ್, ಡಿಪ್ಲೋಮಾ ಇನ್ ಮೆಕ್ಯಾನಿಕಲ್ ಇಂಜನಿಯರಿಂಗ್, ಡಿಪ್ಲೋಮಾ ಇನ್ ಎಲೆಕ್ಟ್ರಿಕಲ್ ಆಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಡಿಪ್ಲೋಮಾ ಇನ್ ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್, ಡಿಪ್ಲೋಮಾ ಇನ್ ಸಿವಿಲ್ ಇಂಜಿನಿಯರಿಂಗ್, ಡಿಪ್ಲೋಮಾ ಕಂಪ್ಯೂಟರ್ ಸೈನ್ಸ್ ಆಂಡ್ ಇಂಜಿನಿಯರಿಂಗ್/ಇನ್ಫಾಮೇಶನ್ ಸೈನ್ಸ್ ಆಂಡ್ ಇಂಜಿನಿಯರಿಂಗ್/ಡಿಪ್ಲೋಮಾ ಇನ್ ಕಮರ್ಶಿಯಲ್ ಪ್ರಾಕ್ಟಿಸ್ ಹಾಗೂ ಡಿಪ್ಲೋಮಾ ಇನ್ ಮೆಟಾಲರ್ಜಿ ಇಂಜಿನಿಯರಿಂಗ್ ಕೋರ್ಸುಗಳಲ್ಲಿ ಪಾಸಾದ ಅಭ್ಯರ್ಥಿಗಳಿಗೆ ಅಪ್ರೆಂಟಿಸ್ ತರಬೇತಿ ನೀಡಲಾಗುತ್ತಿದೆ.
ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರ ಕಚೇರಿಯಿಂದ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ ಅರ್ಜಿಯೊಂದಿಗೆ ಎಸ್.ಎಸ್.ಎಲ್.ಸಿ. ಡಿಪ್ಲೋಮಾ ಪಾಸಾದ ಅಂಕಪಟ್ಟಿ, ಆಧಾರ ಕಾರ್ಡ್ ಹಾಗೂ ಮೀಸಲಾತಿ ಬಯಸಿದ್ದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಓಬಿಸಿ, ಅಂಗವಿಕಲ ಪ್ರಮಾಣಪತ್ರಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ ಸದರಿ ಕಚೇರಿಯಲ್ಲಿ 2019ರ ಜನವರಿ 8ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-274846ನ್ನು ಸಂಪರ್ಕಿಸಲು ಕೋರಲಾಗಿದೆ.
ಪೋಷಕತ್ವ ಯೋಜನೆಯಡಿ ಅರ್ಜಿ ಆಹ್ವಾನ
**************************************
ಕಲಬುರಗಿ,ಡಿ.24.(ಕ.ವಾ.)-ಬಾಲನ್ಯಾಯ ಕಾಯ್ದೆ-2015ರ ಸೆಕ್ಷನ್ 44ರ ಪೋಷಕತ್ವ ಯೋಜನೆಯಡಿಯಲ್ಲಿ ರಕ್ಷಣೆÉ ಹಾಗೂ ಪೋಷಣೆಗಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಆದೇಶದ ಮೇರೆಗೆ ಮಗುವಿಗೆ ಜೈವಿಕ ಕುಟುಂಬವಲ್ಲದ ಕುಟುಂಬಕ್ಕೆ ತಾತ್ಕಾಲಿಕವಾಗಿ ಅಥವಾ ವಿಸ್ತರಿಸಲ್ಪಟ್ಟ ಅವಧಿಗೆ ಒಂದು ವರ್ಷಕ್ಕೆ ಮೀರದ ಅವಧಿವರೆಗೆ ಮಗುವನ್ನು ಪೋಷಕತ್ವ ಯೋಜನೆಯಡಿಯಲ್ಲಿ ನಿಯೋಜನೆ ಮಾಡಬಹುದಾಗಿದೆ ಎಂದು ಕಲಬುರಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ತಿಳಿಸಿದ್ದಾರೆ.
ಸೂಕ್ತ ಮಕ್ಕಳನ್ನು ಪೋಷಕತ್ವ ಯೋಜನೆಯಡಿ ಮಗುವನ್ನು ತೆಗೆದುಕೊಳ್ಳಬಯಸುವ ಕುಟುಂಬಗಳು/ಪಾಲಕರು ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ಕಲ್ಯಾಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಾರ್ಯಾಲಯ, ಸರ್ಕಾರಿ ವೀಕ್ಷಣಾಲಯ ಕಟ್ಟಡದ ಮೊದಲನೇ ಮಹಡಿ, ಚಂದ್ರಶೇಖರ ಪಾಟೀಲ ಕ್ರೀಡಾಂಗಣ ಕಲಬುರಗಿ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-243219, ಮೊಬೈಲ್ ಸಂಖ್ಯೆ 9945089111, 9482756419ಗಳನ್ನು ಸಂಪರ್ಕಿಸಬೇಕು. ಜಿಲ್ಲಾ ಮಕ್ಕಳ ರಕ್ಷಣಾ ಘಟಕ 0-18 ವರ್ಷದೊಳಗಿನ ಮಕ್ಕಳಿಗಾಗಿ ಬಾಲನ್ಯಾಯ ಕಾಯ್ದೆಯಡಿ ಪೋಷಣೆ ಮತ್ತು ರಕ್ಷಣೆ ಕುರಿತು ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿಸೆಂಬರ್ 26ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
*************************************************
ಕಲಬುರಗಿ,ಡಿ.24.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗದಿಂದ ಹೆಚ್.ಟಿ. ಕಂಬಗಳನ್ನು ಸ್ಥಳಾಂತರಿಸುವ ಕಾರ್ಯ ಕೈಗೊಳ್ಳುವ ಪ್ರಯುಕ್ತ 11ಕೆ.ವಿ. ಜೇವರ್ಗಿ ಕಾಲೋನಿ ಫೀಡರ್ ಮೇಲೆ ಡಿಸೆಂಬರ್ 26 ರಂದು (ಬುಧವಾರ) ಬೆಳಗಿನ 10 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸದರಿ ಕೇಂದ್ರದ ಮೇಲೆ ಬರುವ ಫೀಡರುಗಳ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.
11 ಕೆ.ವಿ ಜೇವರ್ಗಿ ಕಾಲೋನಿ ಫೀಡರ್: ಅಂಬಿಕಾ ನಗರ, ಪಿ ಆಂಡ್ ಟಿ ಕ್ವಾರ್ಟರ್ಸ್, ಜೀವನ ಪ್ರಕಾಶ ಶಾಲೆ, ಕಾರ್ಪೋರೇಶನ್ ಲೇಔಟ್, ನ್ಯೂ ಮಾಕಾ ಲೇಔಟ್, ಪವಾರ ಲೇಔಟ್, ಶ್ರೀನಗರ, ಸಂತೋಷ ಕಾಲೋನಿ, ವರ್ಗೀಸ್ ಅಪಾರ್ಟ್‍ಮೆಂಟ್, ಉದನೂರ ರಸ್ತೆ, ಮಾಣಿಕಪ್ರಭು ಕಾಲೋನಿ, ವೀರಭದ್ರೇಶ್ವರ ಕಾಲೋನಿ, ಬಿದ್ದಾಪುರ ಕಾಲೋನಿ, ಹೈಕೋರ್ಟ್, ಸಿರಸಗಿ ಮಡ್ಡಿ ಮತ್ತು ಕೋಬ್ರಾ ಕಾಲೋನಿ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು





ಹೀಗಾಗಿ ಲೇಖನಗಳು News and Photos Date: 24--12--2018

ಎಲ್ಲಾ ಲೇಖನಗಳು ಆಗಿದೆ News and Photos Date: 24--12--2018 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ News and Photos Date: 24--12--2018 ಲಿಂಕ್ ವಿಳಾಸ https://dekalungi.blogspot.com/2018/12/news-and-photos-date-24-12-2018.html

Subscribe to receive free email updates:

0 Response to "News and Photos Date: 24--12--2018"

ಕಾಮೆಂಟ್‌‌ ಪೋಸ್ಟ್‌ ಮಾಡಿ