ಶೀರ್ಷಿಕೆ : ಕಂಡೆ ನೋಡ !?
ಲಿಂಕ್ : ಕಂಡೆ ನೋಡ !?
ಕಂಡೆ ನೋಡ !?
ಪ್ರವೀಣಕುಮಾರ್ ಗೋಣಿ
ನಿನಗೆ ಶರಣಾಗುವಿಕೆಯ
ಹೊರತು ಮಿಕ್ಕೆಲ್ಲವೂ
ವ್ಯರ್ಥವೆನಿಸುವ ವೇಳೆ
ಮಾಯೆ ಅಳಿದು ನಿಂತಿತ್ತು ನೋಡ .
ವಾಸನೆಗಳ ತಾಳಕ್ಕೆ
ತಕ ತಕನೇ ಕುಣಿದು
ಮೈಮನಗಳು ದಣಿದಾಗ
ನಿನ್ನ ಅನುಭಾವವೊಂದೇ ಚಿರವೆನ್ನುವ
ಅರಿವು ಅರಳಿ ನಿಂತಿತ್ತು ನೋಡ .
ಏನಿದೆಲ್ಲ ವ್ಯರ್ಥ ಎನ್ನುವ
ಲೌಕಿಕ ಹೇಸಿಗೆ ಎನಿಸಿದಾಗ
ಮನಸಿಗೆ ಆನಿಕೆಯಾದ
ಅಲೌಕಿಕದ ಅಮೃತಕ್ಕೆ ಮನ ಹಸಿದಿತು ನೋಡ .
ಕತ್ತಲೆಯನ್ನೇ ಬೆಳಕೆಂದು
ಭಾವಿಸಿ ತನಗೆ ತಾನೇ
ಮರಾಮೋಸಗೊಳಿಸುವ ಮನಸಿನ
ಭ್ರಾಂತಿ ಅರಿವಾಗುವೆಡೆ
ನಿನ್ನ ಪ್ರಕಾಶದ ಛಾಯೆ ಪಸರಿತ್ತು ನೋಡ .
ಹೀಗಾಗಿ ಲೇಖನಗಳು ಕಂಡೆ ನೋಡ !?
ಎಲ್ಲಾ ಲೇಖನಗಳು ಆಗಿದೆ ಕಂಡೆ ನೋಡ !? ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಕಂಡೆ ನೋಡ !? ಲಿಂಕ್ ವಿಳಾಸ https://dekalungi.blogspot.com/2018/12/blog-post_23.html
0 Response to "ಕಂಡೆ ನೋಡ !?"
ಕಾಮೆಂಟ್ ಪೋಸ್ಟ್ ಮಾಡಿ