news and photo Date: 7-9-2018

news and photo Date: 7-9-2018 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು news and photo Date: 7-9-2018, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : news and photo Date: 7-9-2018
ಲಿಂಕ್ : news and photo Date: 7-9-2018

ಓದಿ


news and photo Date: 7-9-2018

ಸಮಾಜ ಕಲ್ಯಾಣ ಸಚಿವರ ಪ್ರವಾಸ
********************************
ಕಲಬುರಗಿ,ಸೆ.07.(ಕ.ವಾ.)-ಸಮಾಜ ಕಲ್ಯಾಣ ಸಚಿವರು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಅವರು ಹೈದ್ರಾಬಾದ್‍ದಿಂದ ರಸ್ತೆ ಮೂಲಕ ಇದೇ ಸೆಪ್ಟೆಂಬರ್ 8ರಂದು ಮಧ್ಯಾಹ್ನ 12.30 ಗಂಟೆಗೆ ಕಲಬುರಗಿಗೆ ಆಗಮಿಸುವರು.
ನಂತರ ಅಂದು ಮಧ್ಯಾಹ್ನ 1 ಗಂಟೆಗೆ ಕಲಬುರಗಿ ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಮೆರಿಟ್ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ, ಬಹುಮಾನ ವಿತರಣೆ ಹಾಗೂ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಅಂದು ಮಧ್ಯಾಹ್ನ 3.30 ಗಂಟೆಗೆ ಕಲಬುರಗಿಯಿಂದ ರಸ್ತೆ ಮೂಲಕ ಹೈದ್ರಾಬಾದಿಗೆ ಪ್ರಯಾಣಿಸುವರು.
ಸಹಕಾರ ಸಚಿವರ ಪ್ರವಾಸ
************************
ಕಲಬುರಗಿ,ಸೆ.07.(ಕ.ವಾ.)-ಸಹಕಾರ ಸಚಿವರು ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಬಂಡೆಪ್ಪ ಖಾಶೆಂಪೂರ ಅವರು ಬೆಂಗಳೂರಿನಿಂದ ಉದ್ಯಾನ ಎಕ್ಸ್‍ಪ್ರೆಸ್ ರೈಲಿನ ಮೂಲಕ ಸೆಪ್ಟೆಂಬರ್ 8ರಂದು ಬೆಳಿಗ್ಗೆ 8.45 ಗಂಟೆಗೆ ಕಲಬುರಗಿಗೆ ಆಗಮಿಸುವರು.
ಅಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿ ಎ.ಪಿ.ಎಂ.ಸಿ.ಯಲ್ಲಿ ಕಲಬುರಗಿ ವಿಭಾಗದ ಸಹಕಾರ ಇಲಾಖೆ ಮತ್ತು ಕೃಷಿ ಮಾರಾಟ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 1 ಗಂಟೆಗೆ ನಗರದ ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘ ಜಿಲ್ಲಾ ಶಾಖೆ ಹಾಗೂ ಕುರುಬ ಗೊಂಡ ನೌಕರರ ಸಂಘ ಜಿಲ್ಲಾ ಶಾಖೆ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾದ ಸನ್ಮಾನ ಸಮಾರಂಭ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ಸಂಜೆ 4.30 ಗಂಟೆಗೆ ಕಲಬುರಗಿಯ ಛತ್ರಪತಿ ಶಿವಾಜಿ ಕೋ-ಆಪರೇಟಿವ ಬ್ಯಾಂಕ್ ಆವರಣದಲ್ಲಿ ಹಾಗೂ ಸಂಜೆ 5.30 ಗಂಟೆಗೆ ಕಲಬುರಗಿ ಜೆಡಿಎಸ್ ಕಾರ್ಯಾಲಯದಲ್ಲಿ ಹಾಗೂ ಸಂಜೆ 7.30 ಗಂಟೆಗೆ ಬಬಲಾಯಿ ಮಠದ ವತಿಯಿಂದ ಏರ್ಪಡಿಸಲಾದ ಖಾಸಗಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು.
ಸುಖಕರ ಜೀವನಕ್ಕೆ ಕಾನೂನು ಪರಿಪಾಲನೆ ಅತ್ಯಾವಶ್ಯಕ
************************************************
--ಎಸ್.ಆರ್. ಮಾಣಿಕ್ಯ
********************
ಕಲಬುರಗಿ,ಸೆ.07.(ಕ.ವಾ.)-ಪ್ರತಿಯೊಬ್ಬರು ತಮ್ಮ ಜೀವನವನ್ನು ಸುಖಕರವಾಗಿ ನಡೆಸಲು ಕಾನೂನಿನ ಪರಿಪಾಲನೆ ಮಾಡುವುದು ಅತ್ಯವಶ್ಯಕವಾಗಿದೆ ಎಂದು ಕಲಬುರಗಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಸ್.ಆರ್. ಮಾಣಿಕ್ಯ ತಿಳಿಸಿದರು.
ಅವರು ಶುಕ್ರವಾರ ಸರ್ಕಾರಿ ಮಹಾವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ ಸಭಾಂಗಣದಲ್ಲಿ ಕಲಬುರಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್), ಮಾಹಿತಿ ಹಕ್ಕು ಕಾರ್ಯಕರ್ತರ ಸಂಘ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ “ಮೂಲಭೂತ ಕಾನೂನುಗಳು ಮತ್ತು ಕರ್ತವ್ಯಗಳು ಹಾಗೂ ಪೊಲೀಸ್ ದೂರು ಪ್ರಾಧಿಕಾರ” ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಮತದಾನದ ಹಕ್ಕು ಪಡೆದು ದೇಶದ ನಾಗರಿಕರಾಗಿ ದೇಶದ ಮುನ್ನಡೆಗೆ ಕಾರಣಿಕರ್ತರಾಗಿದ್ದಾರೆ. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತು, ಸಂಯಮ, ಸನ್ನಡತೆ ಬೆಳೆಸಿಕೊಂಡು ಹಕ್ಕು ಮತ್ತುಕರ್ತವ್ಯಗಳ ಪಾಲನೆ ಮಾಡುವ ಮೂಲಕ ಉತ್ತಮ ಪ್ರಜೆಗಳಾಗಬೇಕು. ಎಲ್ಲರೂ ಜನನ ಮರಣ ನೋಂದಣಿ, ಭ್ರೂಣಹತ್ಯೆ ನಿಷೇಧ ಕಾಯ್ದೆ, ಗ್ರಾಹಕರ ಹಿತರಕ್ಷಣಾ ಕಾಯ್ದೆ, ಮೋಟಾರ ವಾಹನ ಕಾಯ್ದೆಯ ಕುರಿತು ಅರಿತು ಕೊಳ್ಳಬೇಕು. ವಿದ್ಯಾರ್ಥಿಗಳು ಸನ್ನಡತೆ, ಸದಾಚಾರ, ಶಿಸ್ತು, ಸದಾಭಿರುಚಿ ಹೊಂದಿ ವಿದ್ಯೆಯಲ್ಲಿ ಅತ್ಯುನ್ನತೆಯನ್ನು ಸಾಧಿಸಬೇಕು. ಇಂದಿನ ತಾಂತ್ರಿಕ ಯುಗದಲ್ಲಿ ಎಲ್ಲ ವಿಷಯಗಳ ಮಾಹಿತಿ ದೊರೆಯುತ್ತದೆ. ವಿದ್ಯಾರ್ಥಿಗಳು ವಿದ್ಯಾರ್ಜನೆಗೆ ಸಂಬಂಧಿಸಿದ ವಿಷಯಗಳನ್ನು ಮಾತ್ರ ಪಡೆಯಬೇಕು ಎಂದು ವಿವರಿಸಿದರು.
ಕಲಬುರಗಿ ಮಾಹಿತಿ ಹಕ್ಕು ಕಾರ್ಯಕರ್ತರ ಸಂಘದ ಅಧ್ಯಕ್ಷ ಸಿದ್ರಾಮಯ್ಯ ಎಸ್. ಹಿರೇಮಠ ಅವರು ಪೊಲೀಸ್ ದೂರು ಪ್ರಾಧಿಕಾರದ ಕುರಿತು ಮಾತನಾಡಿ, ಮಾನವನ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳಿಗೆ ಚ್ಯುತಿ ಬಂದಾಗ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಲಾಗುವುದು. ಆದರೆ ಕೆಲವು ಬಾರಿ ಪೊಲೀಸರಿಂದಲೇ ಮಾನವ ಹಕ್ಕುಗಳ ಉಲ್ಲಂಘನೆಯಾಗಿ ವಿನಾ:ಕಾರಣ ಸಾರ್ವಜನಿಕರಿಗೆ ತೊಂದರೆ ನೀಡುತ್ತಾರೆ. ಇದರ ವಿರುದ್ಧ ದೂರು ನೀಡಲು ಪೊಲೀಸ್ ದೂರು ಪ್ರಾಧಿಕಾರ ರಚನೆಯಾಗಿದ್ದು, ಯಾರಿಗಾದರೂ ಪೊಲೀಸರಿಂದ ತೊಂದರೆಯಾದಲ್ಲಿ ಲಿಖಿತವಾಗಿ ದೂರು ಸಲ್ಲಿಸಬೇಕು. ಪೊಲೀಸ್ ದೂರು ಪ್ರಾಧಿಕಾರವು, ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪೊಲೀಸರಿಂದ ಅನ್ಯಾಯಕ್ಕೊಳಗಾದವರು ಪೊಲೀಸ್ ಠಾಣೆಯಲ್ಲಿರುವ ದೂರು ಪೆಟ್ಟಿಗೆ ಅಥವಾ ಜಿಲ್ಲಾಧಿಕಾರಿಗಳ ಅಥವಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗಳಲ್ಲಿ ದೂರು ಸಲ್ಲಿಸಬಹುದಾಗಿದೆ ಎಂದರು.
ಸರ್ಕಾರಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ನಂದಗಿ ರಾಚಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ಮಹಾವಿದ್ಯಾಲಯದ ಪ್ಲೇಸ್‍ಮೆಂಟ್ ಸೆಲ್ ಸಂಯೋಜಕ ಚಂದ್ರಶೇಖರ ಆರ್.ಸಿ., ಸಾಂಸ್ಕøತಿಕ ಚಟುವಟಿಕೆಗಳ ಸಂಯೋಜಕ ಡಾ. ನಾಗರಾಜ್ ಕುಲಕರ್ಣಿ ಪಾಲ್ಗೊಂಡಿದ್ದರು. ಸರ್ಕಾರಿ ಮಹಾವಿದ್ಯಾಲಯದ ವಿದ್ಯಾರ್ಥಿನಿ ಭವಾನಿ ಪ್ರಾರ್ಥನಾ ಗೀತೆ ಹಾಡಿದರು. ಬೀರಲಿಂಗ್ ಸ್ವಾಗತಿಸಿದರು.
ಕೊಡಗು ಸಂತ್ರಸ್ಥರಿಗೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ಪರಿಹಾರ ಸಾಮಗ್ರಿ ರವಾನೆ
***********************************************************************
ಕಲಬುರಗಿ,ಸೆ.07.(ಕ.ವಾ.)-ಕಲಬುರಗಿ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳು ಹಾಗೂ ದಾನಿಗಳು ಕೊಡಗು ಜಿಲ್ಲೆಯ ಸಂತ್ರಸ್ಥರಿಗಾಗಿ ದಾನ ಮಾಡಿದ ಸಾಮಗ್ರಿಗಳನ್ನು 58 ಕಾರ್ಟನ್ ಬಾಕ್ಸ್ ಹಾಗೂ 31 ಚೀಲಗಳಲ್ಲಿ ಪ್ಯಾಕ್ ಮಾಡಿ ಶುಕ್ರವಾರ ವಾಹನದ ಮೂಲಕ ಮೈಸೂರು ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಅವರು ತಿಳಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಜಲ ಪ್ರವಾಹ ಉಂಟಾಗಿ ಜನರು ತುಂಬಾ ತೊಂದರೆ ಅನುಭವಿಸಿರುತ್ತಾರೆ. ನೊಂದ ಸಂತ್ರಸ್ಥರಿಗೆ ಕಲಬುರಗಿ ಜಿಲ್ಲೆಯ ಸಂಘ ಸಂಸ್ಥೆಗಳು ವೈಯಕ್ತಿಕವಾಗಿ ನಗದು ಹಾಗೂ ಸಾಮಗ್ರಿಗಳ ರೂಪದಲ್ಲಿ ದಾನ ಮಾಡಿರುತ್ತಾರೆ. ಇಲ್ಲಿಯವರೆಗೆ ಕೊಡಗು ಸಂತ್ರಸ್ಥರಿಗಾಗಿ ಆರ್.ಟಿ.ಜಿ.ಎಸ್. ಮೂಲಕ ಶರಣಬಸವ ವಿಶ್ವವಿದ್ಯಾಲಯದ 21 ಲಕ್ಷ ರೂ., ಎಸ್.ಬಿ.ಪಾಟೀಲ ಸಮೂಹ ಸಂಸ್ಥೆಗಳ ಅಧ್ಯಕ್ಷ ಬಿ.ಜಿ. ಪಾಟೀಲ ನೀಡಿರುವ 2.50 ಲಕ್ಷ ರೂ.ಗಳನ್ನು ಹಾಗೂ ಉತ್ತರ ಕರ್ನಾಟಕ ರಕ್ಷಣಾ ವೇದಿಕೆಯ ಶಹಾಪುರಿನ ಅಧ್ಯಕ್ಷ ಶರಣು ಬಿ ಗದ್ದುಗೆ ನೀಡಿರುವ 50 ಸಾವಿರ ರೂ.ಗಳ ಚೆಕ್ ಹಾಗೂ ಗುಲಬರ್ಗಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಆರ್.ಕೆ. ಹಿರೇಮಠ ನೀಡಿರುವ 41,000 ರೂ.ಗಳ ಚೆಕ್‍ನ್ನು ಕಳುಹಿಸಿಕೊಡಲಾಗಿದೆ. ಕಲಬುರಗಿಯ ಎನ್.ಪಿ.ಎಲ್.ಸಿ. ಸದಸ್ಯರು ಹಾಗೂ ಸಮಾಜ ಸೇವಕರು ದಾನ ಮಾಡಿದ 13 ಪೆಟ್ಟಿಗೆ (ಕಾರ್ಟನ್ಸ್) ಔಷಧಗಳನ್ನು ಸಹ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಲಬುರಗಿ ಕಲ್ಲುನಾಡಿನ ಯುವಕ ಸಂಘದವರು ದಾನ ಮಾಡಿದ ಅಡುಗೆ ಪಾತ್ರೆಗಳು, ಶ್ರೀಗುರುಪ್ರಸಾದ ಮತ್ತು ಪ್ರಮೋದ ಅವರು ನೀಡಿದ ಸಾಬೂನು, ಶಾಂಪೂ, ಬ್ಯಾಂಡೇಡ್, ಸ್ಯಾನಿಟರಿ ಪ್ಯಾಡ್ಸ್, ಟೂಥ್ ಪೇಸ್ಟ್, ಇನ್ನರ್ ವೇರ್, ಶ್ರೀ ಮ.ನಿ.ಪ್ರ.ಸ್ವ. ಗುರುಪಾದಲಿಂಗೇಶ್ವರರ ಮಹಾಶಿವಯೋಗಿಗಳು, ಶ್ರೀ ಗುರುವೀರೇಶ್ವರ ವಿರಕ್ತ ಮಠದ ಸುಕ್ಷೇತ್ರ ಮುತ್ಯಾನ ಬಬಲಾದ ಚೆನ್ನವೀರೇಶ್ವರ ವಿರಕ್ತಮಠ ಭವಾನಿ ನಗರ ಕಲಬುರಗಿ ಇವರು ನೀಡಿದ 550 ಸೀರೆಗಳು, 30 ರೆಡಿಮೆಡ್ ಡ್ರೆಸ್ಸ್‍ಗಳು, 6 ಜೊತೆ ದೋತಿ ಮತ್ತು ಪ್ಯಾಂಟ್, ಶರ್ಟ್‍ಬಟ್ಟೆಗಳು, ಕಲಬುರಗಿ ಹೊಟೇಲ್ ಪರಿವಾರ ಅವರು ನೀಡಿದ 12 ಬಕೆಟ್ ಮತ್ತು 12 ಮಗ್, ಕಲಬರುಗಿ ಫ್ರೆಂಡ್ಸ್ ಕ್ಲಬ್‍ನವರು ನೀಡಿದ 250 ಜೊತೆ ಚಪ್ಪಲ್, ಬೇಬಿ ಡ್ರೆಸೆಸ್ ಆಂಡ್ ಶಾವಲ್ಸ್ ಮತ್ತು 51 ಪೀಸೆಸ್ ಸೀರೆಗಳು, ಸೇವಾ ಸಂಗಮ, ಸಮಾಜ ಸೇವಾ ಸಂಸ್ಥೆ ಯವರು ನೀಡಿದ 32 ಕಾರ್ಟನ್ ಮತ್ತು 28 ಚೀಲಗಳು ಸಾಮಗ್ರಿ ಪಟ್ಟಿಯನ್ನು ಕಲಬುರಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಮೂಲಕ ವಾಹನ ಸಂಖ್ಯೆ ಕೆಎ 32 ಜಿ 429 ಮೂಲಕ ಜಿಲ್ಲಾಧಿಕಾರಿಗಳ ಕಾರ್ಯಾಲಯದ ವಿಪತ್ತು ನಿರ್ವಹಣಾ ಪರಿಣಿತ ನಿತ್ಯಾನಂದ ಅವರೊಂದಿಗೆ ಮೈಸೂರು ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡಲಾಗಿದೆ.
ಕೊಡಗು ಜಿಲ್ಲೆಯ ಸಂತ್ರಸ್ಥರಿಗಾಗಿ ಕಲಬುರಗಿ ಜಿಲ್ಲೆಯ ದಾನಿಗಳಿಂದ ಸೆಪ್ಟೆಂಬರ್ 1ರಂದು ಸಾಮಗ್ರಿಗಳನ್ನು ಸಂಗ್ರಹಿಸಲಾಗಿತ್ತು. ಜಿಲ್ಲೆಯ ವಿವಿಧ ತಾಲೂಕುಗಳಿಂದ ಸಾಮಗ್ರಿಗಳು ಸಂಗ್ರಹಿಸಲಾಗುತ್ತಿದ್ದು, ಸೇವಾ ಸಂಗಮ ಸಂಸ್ಥೆಯಲ್ಲಿ ಸಂಗ್ರಹಿಸಿದ ಸಾಮಗ್ರಿಗಳನ್ನು ಜಿಲ್ಲಾಧಿಕಾರಿಗಳ ಕಚೇರಿಯ ನೋಡಲ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸೆಪ್ಟೆಂಬರ್ 1ರಂದೇ ಸಾಮಗ್ರಿಗಳನ್ನು ಮೈಸೂರಿಗೆ ಕಳುಹಿಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಕಲಬುರಗಿಯಿಂದ ಮೈಸೂರಿಗೆ ಹೋಗುವ ಬಸವ ಎಕ್ಸ್‍ಪ್ರೆಸ್ ರೈಲು ಸೆಪ್ಟೆಂಬರ್ 1 ರಿಂದಲೇ ಸ್ಥಗಿತಗೊಂಡಿದ್ದರಿಂದ ಸಾಮಗ್ರಿಗಳನ್ನು ರವಾನಿಸಲು ಆಗಿಲ್ಲ. ಈ ಸಾಮಗ್ರಿಗಳಲ್ಲಿ ಯಾವುದೇ ಕೊಳೆತು ಹೋಗುವ ಅಥವಾ ಕೆಡುವ ಪದಾರ್ಥಗಳಿಲ್ಲ ಎಂದು ಸೇವಾ ಸಂಗಮ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕ ಫಾದರ ಅನಿಲ್ ಸ್ಪಷ್ಟಪಡಿಸಿದ್ದಾರೆ.
ಸೆಪ್ಟೆಂಬರ್ 10ರಂದು ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನ: ಜಾಥಾ-ಅರಿವು ಕಾರ್ಯಕ್ರಮ
**************************************************************************
ಕಲಬುರಗಿ.ಸೆ.07.(ಕ.ವಾ.)-ಕಲಬುರಗಿ ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಲಬುರಗಿ ಇವುಗಳ ಸಂಯುಕ್ರಾಶ್ರಯದಲ್ಲಿ ಸೆಪ್ಟೆಂಬರ್ 10ರಂದು ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನದ ಅಂಗವಾಗಿ ಜಾಥಾ ಹಾಗೂ ಅರಿವು ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಅಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಆಸ್ಪತ್ರೆಯಲ್ಲಿ ಏರ್ಪಡಿಸಲಾದ ಜಾಥಾವನ್ನು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ ಉದ್ಘಾಟಿಸುವರು. ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್. ಮಾಣಿಕ್ಯ ಮುಖ್ಯ ಅತಿಥಿಗಳಾಗಿ ಹಾಗೂ ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಡಾ|| ಉಮೇಶ, ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಜ್ಞ ಡಾ. ಶಿವಾನಂದ ಸುರಗಾಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|| ಎಂ.ಕೆ. ಪಾಟೀಲ ಹಾಗೂ ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಡಾ|| ಶಿವಕುಮಾರ ಅತಿಥಿಗಳಾಗಿ ಪಾಲ್ಗೊಳ್ಳುವರು. ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ|| ಶರಣಬಸಪ್ಪ ಕೆ. ಅಧ್ಯಕ್ಷತೆ ವಹಿಸಲಿದ್ದಾರೆ.
ಅಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿಯ ಹೆಚ್.ಐ.ಟಿ. ಸಭಾಂಗಣದಲ್ಲಿ ಏರ್ಪಡಿಸಲಾದ ಅರಿವು ಕಾರ್ಯಕ್ರಮವನ್ನು ಕಲಬುರಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾವ ಮಲಾಜಿ ಉದ್ಘಾಟಿಸುವರು. ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್. ಮಾಣಿಕ್ಯ ಮುಖ್ಯ ಅತಿಥಿಗಳಾಗಿ ಹಾಗೂ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಜ್ಞ ಡಾ. ಶಿವಾನಂದ ಸುರಗಾಳಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ. ಶರಣಬಸಪ್ಪ ಕೆ. ಅತಿಥಿಗಳಾಗಿ ಪಾಲ್ಗೊಳ್ಳುವರು. ಜಿಮ್ಸ್ ಮನೋವೈದ್ಯ ಡಾ. ಚಂದ್ರಶೇಖರ ಹುಡೇದ್ ಉಪನ್ಯಾಸ ನೀಡುವರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|| ಎಂ.ಕೆ. ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. “ಎಲ್ಲರೂ ಜೊತೆಗುಡಿ ಆತ್ಮಹತ್ಯೆಯನ್ನು ತಡೆಗಟ್ಟೋಣ” ಎಂಬುವುದು ಈ ದಿನಾಚರಣೆಯ ಘೋಷವಾಕ್ಯವಾಗಿದೆ.
ಉದ್ಯೋಗ ಮತ್ತು ತರಬೇತಿ ಇಲಾಖಾ ಪರೀಕ್ಷೆ :
****************************************
ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ
***************************************
ಕಲಬುರಗಿ.ಸೆ.07.(ಕ.ವಾ.)-ಅಖಿಲ ಭಾರತ ಉದ್ಯೋಗ ಮತ್ತು ತರಬೇತಿ ಇಲಾಖಾ ಪರೀಕ್ಷೆಯು ಇದೇ ಸೆಪ್ಟೆಂಬರ್ 10 ರಿಂದ 18ರವರೆಗೆ ಪ್ರತಿದಿನ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1 ಗಂಟೆ ಹಾಗೂ ಮಧ್ಯಾಹ್ನ 1.30 ಗಂಟೆಯವರೆಗೆ ಜರುಗಲಿದೆ.
ಅಕ್ರಮ ಮತ್ತು ನಕಲು ಅವ್ಯವಹಾರ ತಡೆಯಲು ಹಾಗೂ ಪರೀಕ್ಷೆಗಳನ್ನು ಸುಗಮವಾಗಿ ನಡೆಸಲು ಅನುವಾಗುವಂತೆ ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ 200 ಮೀಟರ್ ಪ್ರದೇಶÀದಲ್ಲಿ 1973ರ ಸಿಆರ್.ಪಿ.ಸಿ. ಕಾಯ್ದೆಯ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಪರೀಕ್ಷಾ ಕೇಂದ್ರದ ಸುತ್ತಮುತ್ತಲು ಇರುವ ಜಿರಾಕ್ಸ್/ಪುಸ್ತಕ ಮಳಿಗೆಗಳನ್ನು ಮುಚ್ಚುವಂತೆ ಕಲಬುರಗಿ ತಹಶೀಲ್ದಾರ್ ಅಶೋಕ ಹಿರೋಳ್ಳೆ ಅವರು ಆದೇಶ ಹೊರಡಿಸಿದ್ದಾರೆ.
ಪರೀಕ್ಷಾ ಕೋಣೆಯಲ್ಲಿ ಯಾವುದೇ ಅವ್ಯವಹಾರ ನಡೆಯದಂತೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬರುವಾಗ ಮೊಬೈಲ್ ಫೋನ್ ಹಾಗೂ ಇತರೆ ಚಿಕ್ಕ ಗಾತ್ರದ ಬ್ಲ್ಯೂಟೂತ್ ಉಪಕರಣಗಳನ್ನು ಸೇರಿದಂತೆ ಮತ್ತಿತರ ಯಾವುದೇ ವಸ್ತುಗಳನ್ನು ತರಕೂಡದು ಎಂದು ಆದೇಶದಲ್ಲಿ ತಿಳಿಸಿರುತ್ತಾರೆ.
ಮುಕ್ತ ವಿಶ್ವವಿದ್ಯಾಲಯ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
*********************************************
ಕಲಬುರಗಿ,ಸೆ.07.(ಕ.ವಾ.)-ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ 2018-19ನೇ ಶೈಕ್ಷಣಿಕ ವರ್ಷಕ್ಕೆ ಸ್ನಾತಕ ಪದವಿಗಳಾದ ಪ್ರಥಮ ಬಿ.ಎ., ಬಿ.ಕಾಂ., ಬಿ.ಲಿಬ್. ಐ.ಎಸ್ಸಿ ಹಾಗೂ ಸ್ನಾತಕೋತ್ತರ ಪದವಿಗಳಾದ ಪ್ರಥಮ ಎಂ.ಎ.: ಕನ್ನಡ, ಇಂಗ್ಲೀಷ, ಹಿಂದಿ, ಉರ್ದು, ಇತಿಹಾಸ, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಸಾರ್ವಜನಿಕ ಆಡಳಿತ, ಸಮೂಹ ಸಂವಹನ ಆಂಡ್ ಪತ್ರಿಕೋದ್ಯಮ, ಎಂ.ಕಾಂ., ಎಂ.ಎಸ್‍ಸಿ. (ಪರಿಸರ ವಿಜ್ಞಾನ) ಹಾಗೂ ಎಂ.ಲಿಬ್ ಐ.ಎಸ್ಸಿ. ಕೋರ್ಸ್‍ಗಳಿಗೆ ಪ್ರವೇಶ ಪಡೆಯಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಪ್ರಾದೇಶಿಕ ಕೇಂದ್ರದ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪರಿಶಿಷ್ಠ ಜಾತಿ/ ಪರಿಶಿಷ್ಠ ಪಂಗಡ ವಿದ್ಯಾರ್ಥಿಗಳಿಗೆ ಸರ್ಕಾರದ ಆದೇಶದ ಅನ್ವಯ ಶುಲ್ಕ ವಿನಾಯಿತಿ ಇರುತ್ತದೆ. ಬಿಪಿಎಲ್ ಕಾರ್ಡುನ್ನು ಹೊಂದಿರುವ ಮಹಿಳಾ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕದಲ್ಲಿ ಶೇ. 25ರಷ್ಟು ವಿನಾಯಿತಿ ನೀಡಲಾಗಿದೆ. ಪ್ರವೇಶ ಪಡೆಯಲು ಸೆಪ್ಟೆಂಬರ್ 20 ಕೊನೆಯ ದಿನವಾಗಿದೆ. 200 ರೂ.ಗಳ ದಂಡ ಶುಲ್ಕದೊಂದಿಗೆ ಪ್ರವೇಶಾತಿ ಪಡೆದುಕೊಳ್ಳಲು ಅಕ್ಟೋಬರ್ 1 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಪ್ರಾದೇಶಿಕ ಕೇಂದ್ರ, ಕನ್ನಡ ಅಧ್ಯಯನ ಸಂಸ್ಥೆ, ಗುಲಬರ್ಗಾ ವಿಶ್ವವಿದ್ಯಾಲಯ ಆವರಣ ಕಲಬುರಗಿ ಹಾಗೂ ಪ್ರಾದೇಶಿಕ ಕೇಂದ್ರದ ನಿರ್ದೇಶಕರಾದ ಡಾ. ಸಂಗಮೇಶ ಹಿರೇಮಠ ಮೊಬೈಲ್ ಸಂಖ್ಯೆ 9916783555, ಕಚೇರಿ ದೂರವಾಣಿ 08472-265868 ಹಾಗೂ hಣಣಠಿ://ಞsoumಥಿsoಡಿe.ಞಚಿಡಿಟಿಚಿಣಚಿಞಚಿ.gov.iಟಿ ವೆಬ್‍ಸೈಟ್‍ನ್ನು ಸಂಪರ್ಕಿಸಲು ಕೋರಿದೆ.
ಸೆಪ್ಟೆಂಬರ್ 12ರಂದು ಕ್ಯಾಂಪಸ್ ಸಂದರ್ಶನ
****************************************
ಕಲಬುರಗಿ,ಸೆ.07.(ಕ.ವಾ.)-ಬಳ್ಳಾರಿ ಜಿಲ್ಲೆಯ ತೊರಣಗಲ್ಲ ಜಿಂದಾಲ್ ವಿಜಯನಗರ ಸ್ಟೀಲ್ ವಕ್ರ್ಸ್ ಲಿಮಿಟೆಡ್‍ನಲ್ಲಿ ಐಟಿಐ ವೃತ್ತಿಯ ಫಿಟ್ಟರ್, ಎಲೆಕ್ಟ್ರೀಶಿಯನ್, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ವೆಲ್ಡರ್, ಮಶಿನಿಸ್ಟ್, ಟರ್ನರ್, ಡಿಸೈಲ್ ಮೆಕ್ಯಾನಿಕ್ ಆಂಡ್ ವೈರ್‍ಮೆನ್ ವೃತ್ತಿಗಳಲ್ಲಿ ಪಾಸಾದ ಹಾಗೂ ಅಂತಿಮ ಸೆಮಿಸ್ಟರ್ ಪರೀಕ್ಷೆಗೆ ಹಾಜರಾಗಿರುವ ಅಭ್ಯರ್ಥಿಗಳಿಗೆ ಅಪ್ರೆಂಟಿಸ್ ತರಬೇತಿಗಾಗಿ ಇದೇ ಸೆಪ್ಟೆಂಬರ್ 12ರಂದು ಬೆಳಿಗ್ಗೆ 9 ಗಂಟೆಗೆ ಕ್ಯಾಂಪಸ್ ಸಂದರ್ಶನವನ್ನು ಏರ್ಪಡಿಸಲಾಗಿದೆ.
18 ವರ್ಷ ಮೇಲ್ಪಟ್ಟ ಅರ್ಹ ಅಭ್ಯರ್ಥಿಗಳು ಮೂಲ ದಾಖಲಾತಿ ಮತ್ತು 02 ಸೆಟ್ ನಕಲು ಪ್ರತಿಗಳೊಂದಿಗೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಮಹಿಳಾ) ಎಂ.ಎಸ್.ಕೆ.ಮಿಲ್ ರಸ್ತೆ ಕಲಬುರಗಿಯಲ್ಲಿ ಹಾಜರಾಗಬಹುದು, ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಸೂಚನಾ ಫಲಕದಲ್ಲಿ ವಿವರವನ್ನು ನೋಡಬಹುದಾಗಿದೆ ಹಾಗೂ ಹೆಚ್ಚಿನ ಮಾಹಿತಿಗಾಗಿ ತರಬೇತಿ ಸಂಸ್ಥೆಯ ದೂರವಾಣಿ 08472-278611ಗೆ ಸಂಪರ್ಕಿಸಬೇಕೆಂದು ಕಲಬುರಗಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಪುರುಷ) ಪ್ರಾಚಾರ್ಯ ಎಸ್.ಎನ್. ಪಂಚಾಳ ಅವರು ತಿಳಿಸಿದ್ದಾರೆ.
ವಿಶ್ವ ಹಿರಿಯ ನಾಗರಿಕರ ಕ್ರೀಡಾಕೂಟ: ಹೆಸರು ನೋಂದಾಯಿಸಲು ಸೂಚನೆ
*****************************************************************
ಕಲಬುರಗಿ,ಸೆ.07.(ಕ.ವಾ)-ವಿಶ್ವ ಹಿರಿಯ ನಾಗರಿಕರ ದಿನಾಚಾರಣೆ ಅಂಗವಾಗಿ ಇದೇ ಸೆಪ್ಟೆಂಬರ್ 11ರಂದು ಬೆಳಿಗ್ಗೆ 10.30 ಗಂಟೆಗೆ ಜಿಲ್ಲಾ ಮಟ್ಟದ ಹಿರಿಯ ನಾಗರಿಕರ ಕ್ರೀಡಾಕೂಟವನ್ನು ಕಲಬುರಗಿ ನಗರದ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ.
ಆಸಕ್ತಿಯುಳ್ಳ 60 ರಿಂದ 80 ವರ್ಷದೊಳಗಿನ ಹಿರಿಯ ನಾಗರಿಕರು ಕಲಬುರಗಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಕಚೇರಿಯಲ್ಲಿ ಇದೇ ಸೆಪ್ಟೆಂಬರ್ 10 ರೊಳಗಾಗಿ ತಮ್ಮ ಹೆಸರನ್ನು ನೊಂದಣಿ ಮಾಡಿಸಬೇಕೆಂದು ಕಲಬುರಗಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಪ್ರೆಂಟಿಸ್ ತರಬೇತಿಗಾಗಿ ಅರ್ಜಿ ಆಹ್ವಾನ
*************************************
ಕಲಬುರಗಿ,ಸೆ.07.(ಕ.ವಾ)-ಬೆಂಗಳೂರಿನ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‍ನ ಟೆಕ್ನಿಕಲ್ ಟ್ರೇನಿಂಗ್ ಇನ್‍ಸ್ಟಿಟ್ಯೂಟ್‍ನಲ್ಲಿ ಎಸ್.ಎಸ್.ಎಲ್.ಸಿ. ಪಾಸಾದ ಸಿ.ಎನ್.ಸಿ. ಪ್ರೋಗ್ರಾಮ್ ಕಂ-ಆಪರೇಟರ್ ಅಪ್ರೆಂಟಿಸ್ ತರಬೇತಿ ನೀಡಲಾಗುತ್ತಿದೆ. ಇದಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಉದ್ಯೋಗ ಮತ್ತು ತರಬೇತಿ ಕಚೇರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಎಸ್.ಎಸ್.ಎಲ್.ಸಿ.ಯಲ್ಲಿ ಶೇ. 60ರಷ್ಟು ಅಂಕ ಪಡೆದಿರುವ 15 ರಿಂದ 18 ವರ್ಷದ ವಯೋಮಿತಿಯೊಳಗಿನ ಬಿಪಿಎಲ್/ಅಂತ್ಯೋದಯ ರೇಷನ್ ಕಾರ್ಡ ಹೊಂದಿದÀ ಅಭ್ಯರ್ಥಿಗಳು ಅಪ್ರೆಂಟಿಸ್ ತರಬೇತಿ ಪಡೆಯಲು ಅರ್ಹರು. ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಿಂದ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ ಅರ್ಜಿಯೊಂದಿಗೆ ಎಸ್.ಎಸ್.ಎಲ್.ಸಿ. ಪಾಸಾದ ಅಂಕ ಪಟ್ಟಿ, ಆಧಾರ ಕಾರ್ಡ, ಮೀಸಲಾತಿ ಬಯಸಿದ್ದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಓಬಿಸಿ, ಅಂಗವಿಕಲ, ಬಿಪಿಎಲ್/ಅಂತ್ಯೋದಯ ರೇಷನ್ ಕಾರ್ಡ ಮತ್ತು ಆಮ್ರ್ಡ ಪೋರ್ಸ ಪ್ರಮಾಣ ಪತ್ರ ಹೊಂದಿದ್ದಲ್ಲಿ ಪ್ರಮಾಣಪತ್ರ, ಇತ್ತೀಚಿನ ಪಾಸ್ ಪೋರ್ಟ ಅಳತೆಯ ಭಾವಚಿತ್ರವನ್ನು ದಾಖಲೆಗಳನ್ನು ಲಗತ್ತಿಸಿ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಯಮ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಸೆಪ್ಟೆಂಬರ್ 17ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸದರಿ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-274846ನ್ನು ಸಂಪರ್ಕಿಸಲು ಕೋರಲಾಗಿದೆ.
ಸೆಪ್ಟೆಂಬರ್ 8ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
***********************************************
ಕಲಬುರಗಿ,ಸೆ.04.(ಕ.ವಾ.)-ಜೆಸ್ಕಾಂನ ಕಲಬುರಗಿ ನಗರ ಕಾರ್ಯ ಮತ್ತು ಪಾಲನೆ ವಿಭಾಗದ ವ್ಯಾಪ್ತಿಯಲ್ಲಿ ಬರುವ 11ಕೆ.ವಿ. ನೃಪತುಂಗಾ, ಐ.ಟಿ. ಪಾರ್ಕ್, ಪೊಲೀಸ್ ಕಾಲೋನಿ, ಹೌಸಿಂಗ್ ಬೋರ್ಡ್ ಕಾಲೋನಿ, ಗೋದುತಾಯಿ ನಗರ, ಮಹಾವೀರ ನಗರ, ರಾಘವೇಂದ್ರ ಕಾಲೋನಿ, ವಿಠ್ಠಲನಗರ, ಐವಾನ್‍ಶಾಹಿ, ಎ.ಐ.ಆರ್., ನಂದಿಕೂರ ಹಾಗೂ ಉಮರ ಕಾಲೋನಿ ಫೀಡರುಗಳ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 8ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ನಿರ್ವಹಣಾ ಕಾರ್ಯ ಕೈಗೆತ್ತಿಕೊಂಡಿರುವುದರಿಂದ ಸದರಿ ಫೀಡರಗಳ ವ್ಯಾಪ್ತಿಯ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಜೆಸ್ಕಾಂನೊಂದಿಗೆ ಸಹಕರಿಸುವಂತೆ ವಿಭಾಗದ ಕಾರ್ಯನಿರ್ವಾಹಕ ಇಂಜಿನೀಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
11 ಕೆ.ವಿ ನೃಪತುಂಗಾ ಫೀಡರ್: ಜಿ.ಡಿ.ಎ. ಕೋಟನುರ ಪ್ರದೇಶ, ನ್ಯೂ ಓಝಾ ಲೇಔಟ್, ಧನಶೆಟ್ಟಿ ನಗರ, ಸ್ಲಂ ಬೋರ್ಡ್ ವಸತಿ ಗೃಹಗಳು ಹಾಗೂ ಸುತ್ತಮುತ್ತಲ್ಲಿನ ಪ್ರದೇಶಗಳು.
11ಕೆ.ವಿ. ಐ.ಟಿ.ಪಾರ್ಕ್ ಫೀಡರ್: ಸಂತೋಷ ಕಾಲೋನಿ, ವರ್ಗಿಸ್ ಅಪಾರ್ಟ್‍ಮೆಂಟ್, ಮಾಣಿಕ ಪ್ರಭು ಕಾಲೋನಿ, ಐ.ಟಿ.ಪಾರ್ಕ್, ನಂದಗೋಕುಲ ಮತ್ತು ಜಯತೀರ್ಥ ಕಲ್ಯಾಣ ಮಂಟಪ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
11ಕೆ.ವಿ. ಪೋಲಿಸ್ ಕಾಲೋನಿ ಫೀಡರ್: ರಾಜಾಪುರ, ನಾಯ್ಡು ಲೇಔಟ್, ಪಿ.ಡಬ್ಲ್ಯೂ.ಡಿ. ಕ್ವಾರ್ಟರ್ಸ್, ನೃಪತುಂಗಾ ಕಾಲೋನಿ, ಪ್ರಶಾಂತನಗರ ಬಿ, ಶಹಾಬಾದ ಶಕ್ತಿನಗರ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.
11 ಕೆ.ವಿ. ಹೌಸಿಂಗ್ ಬೋರ್ಡ್ ಕಾಲೋನಿ ಫೀಡರ್: ಎನ್.ಜಿ.ಓ. ಕಾಲೋನಿ ಪಿ.ಎನ್.ಟಿ. ಕಾಲೋನಿ ಸಿದ್ದೇಶ್ವರ ಕಲ್ಯಾಣ ಮಂಟಪ, ದತ್ತ ನಗರ ಬಿದಾಪೂರ ಬಾಗ್ಯವಂತಿ ನಗರ, ಗಾಬ್ರೇ ಲೇಔಟ್, ಮೋಹನನಗರ, ಹೌಸಿಂಗ್ ಬೋರ್ಡ ಕಾಲೋನಿ (ಪಿ ಆಂಡ್ ಟಿ) ಮತ್ತು ಸುತ್ತಮುತ್ತಲಿನ ಪ್ರದೇಶಗಳು.
11 ಕೆ.ವಿ. ಗೋದುತಾಯಿ ನಗರ ಫೀಡರ್: ಸಿ.ಐ.ಬಿ. ಕಾಲೋನಿ, ಶಕ್ತಿ ನಗರ, ಗೋದುತಾಯಿ ನಗರ, ಭಾಗ್ಯವಂತಿ ನಗರ, ಜಿ.ಡಿ.ಎ. ಲೇಔಟ್, ಘಾಟಗೆ ಲೇಔಟ್, ಧರಿಯಾಪೂರ, ರೆಹಮತ್ ನಗರ, ಪಿ.ಡಬ್ಲೂ.ಡಿ ಕ್ವಾರ್ಟರ್ಸ್, ಎನ್.ಜಿ.ಓ ಕಾಲೋನಿ( ರೈಲ್ವೆ ಟ್ರ್ಯಾಕ್), ದತ್ತ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
11 ಕೆ.ವಿ. ಮಹಾವೀರ ನಗರ ಫೀಡರ್: ಮಹಾವೀರನಗರ, ಶಾಸ್ತ್ರಿನಗರ, ಹನುಮಾನ ನಗರ, ಪಂಚಶೀಲ ನಗರ, ವೆಂಕಟೇಶನಗರ, ಕೆ.ಇ.ಬಿ. ಸ್ಟೋರ್, ಕೆ.ಇ.ಬಿ.ಕ್ವಾರ್ಟರ್ಸ್, ಪಿ.ಡಬ್ಲ್ಯೂಡಿ ಕಚೇರಿ, ಅಮಲ್‍ವಾಡಿ ಸ್ಟೇಶನ್ ಬಜಾರ್ ಅಪ್ಪÀರ ಲೆನ್ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.
11 ಕೆ.ವಿ ರಾಘವೇಂದ್ರ ಕಾಲೋನಿ ಫೀಡರ್: ಪಿ.ಎಲ್.ಡಿ. ಬ್ಯಾಂಕ್, ಗೂಲ್ಲರಗಲ್ಲಿ, ಜಗತ್, ಜಗತ್ ಅಪ್ಪರ್À ಮತ್ತು ಲೋವರ್ ಲೆನ್ ಮಹಾನಗರಪಾಲಿಕೆ ಆಯುಕ್ತರವರ ಗೃಹ, ತಿರಂದಾಜ್ ಟಾಕೀಸ್ ಎದುರುಗಡೆ, ಮೈಲಾರಲಿಂಗ ದೇವಸ್ಥಾನ ಆದಿತ್ಯಾ ಹೋಟೆಲ್, ಎಸ್.ಪಿ. ಕಚೇರಿ ಪ್ರದೇಶ, ಏಶಿಯನ್ ಮಾಲ್, ಆಮಂತ್ರಣ ಹೋಟೆಲ್, ಕಕ್ಕೇರಿ ಕಾಂಪ್ಲೆಕ್ಸ್ ಪಶುವೈದ್ಯಕೀಯ ಆಸ್ಪತ್ರೆ, ಟ್ರೈನಿಂಗ್ ಸೆಂಟರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
11 ಕೆ.ವಿ ವಿಠ್ಠಲನಗರ ಫೀಡರ್: ಡಿ.ಡಿ.ಪಿ.ಐ.ಕಚೇರಿ, ವಿಜಯ-ವಿದ್ಯಾಲಯ ಕಂಪೌಂಡ್, ಐವಾನ್ ಶಾಹಿ ಅಥಿತಿಗೃಹ, ಗುಲ್ಲಾಬೌಡಿ, ಲಾಹೋಟಿ ಪೆಟ್ರೋಲ್‍ಪಂಪ್, ಕೆ.ಬಿ.ಎನ್.ಆಸ್ಪತ್ರೆ, ಖೂಬಾಪ್ಲಾಟ್, ವಿಠ್ಠಲನಗರ, ಆನಂದನಗರ, ವಿವೇಕಾನಂದನಗರ, ರಾಮನಗರ, ಇಂದಿರಾನಗರ, ವಿದ್ಯಾನಗರ, ಬಲಘಟ ಕಂಪೌಂಡ್, ಮೇಹತಾ ಕಂಪೌಂಡ್, ಮಿನಿವಿಧಾನಾಸೌಧ, ಜಿಲ್ಲಾ ನ್ಯಾಯಾಲಯ ಮತ್ತು ಜೆಸ್ಕಾಂ ಕಚೇರಿ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.
11 ಕೆ.ವಿ. ಐವಾನ್-ಶಾಹಿ ಫೀಡರ್: ಹಳೆಯ ಗೇಸ್ಟ ಹೌಸ್, ನೀಚೆಗಲ್ಲಿ, ಕಮರ್ಶಿಯಲ್ ಟ್ಯಾಕ್ಸ್ ಕಚೇರಿ, ವಿಜಯ ವಿದ್ಯಾಲಯ, ಲಾಹೋಟಿ ಪೆಟ್ರೋಲ್ ಪಂಪ್, ಹೆಚ್.ಕೆ.ಇ. ಕಚೇರಿ, ಎಶಿಯನ್ ಪ್ಲಾಜಾ, ಪರಿವಾರ ಹೋಟೆಲ್, ತಿಮ್ಮಾಪುರಿ ಚೌಕ್, ವಿಜು ಉಮ್ಯಾನ್ಸ ಕಾಲೇಜ್, ಪಿಡಿಎ ಇಂಜಿನಿಯರಿಂಗ್ ಕಾಲೇಜ್ ರಸ್ತೆ, ಬಿಎಸ್‍ಎನ್‍ಎಲ್ ಎಕ್ಸಚೇಂಜ್, ಪಿಡಬ್ಲೂಡಿ ಕ್ವಾರ್ಟಸ್, ಮಿನಿ ವಿಧಾನಸೌಧ ಎದುರು ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
11 ಕೆ.ವಿ. ಎ.ಐ.ಆರ್ ಫೀಡರ್: ಎ.ಐ.ಆರ್ ಮತ್ತು ಸುತ್ತ-ಮುತ್ತಲಿನ ಪ್ರದೇಶಗಳು.
11 ಕೆ.ವಿ. ನಂದೀಕೂರ ಫೀಡರ್: ನಂದೀಕೂರ ಮತ್ತು ಸುತ್ತ-ಮುತ್ತಲಿನ ಪ್ರದೇಶಗಳು.
11ಕೆ.ವಿ. ಉಮರ್ ಕಾಲೋನಿ ಫೀಡರ್: ಉಮರಕಾಲೋನಿ, ಅಬುಬಕರ್ ಕಾಲೋನಿ, ಆಜಾದಪೂರ ರಸ್ತೆ, ಅಹ್ಮದ್‍ನಗರ್, ಮಕ್ಕಾ ಕಾಲೋನಿ, ಮಹಾರಾಜಾ ಹೋಟೆಲ್, ವಾಟರ್ ಟ್ಯಾಂಕ್À, ಯದ್ದುಲ್ಲಾ ಕಾಲೋನಿ, ಕಮಾಲ ಎ ಮುಜರತ್, ಮಹಬೂಬ ನಗರ, ವೀರಭದ್ರೇಶ್ವರ ದೇವಾಲಯ, ಖಾನ್ ಕಂಪೌಂಡ್, ಟಿಪ್ಪುಸುಲ್ತಾನ ಚೌಕ, ಸನಾ ಹೋಟೆಲ್, ಅಕ್ಬರ್ ಬಾಗ, ರಾಮಜೀ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು.



ಹೀಗಾಗಿ ಲೇಖನಗಳು news and photo Date: 7-9-2018

ಎಲ್ಲಾ ಲೇಖನಗಳು ಆಗಿದೆ news and photo Date: 7-9-2018 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ news and photo Date: 7-9-2018 ಲಿಂಕ್ ವಿಳಾಸ https://dekalungi.blogspot.com/2018/09/news-and-photo-date-7-9-2018.html

Subscribe to receive free email updates:

0 Response to "news and photo Date: 7-9-2018"

ಕಾಮೆಂಟ್‌‌ ಪೋಸ್ಟ್‌ ಮಾಡಿ