ಗಲಾಟೆ ಹೂ ಬೆಳೆದು ಉತ್ತಮ ಆದಾಯ ಗಳಿಸಿ : ರೈತರಿಗೆ ಸಲಹೆ

ಗಲಾಟೆ ಹೂ ಬೆಳೆದು ಉತ್ತಮ ಆದಾಯ ಗಳಿಸಿ : ರೈತರಿಗೆ ಸಲಹೆ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಗಲಾಟೆ ಹೂ ಬೆಳೆದು ಉತ್ತಮ ಆದಾಯ ಗಳಿಸಿ : ರೈತರಿಗೆ ಸಲಹೆ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಗಲಾಟೆ ಹೂ ಬೆಳೆದು ಉತ್ತಮ ಆದಾಯ ಗಳಿಸಿ : ರೈತರಿಗೆ ಸಲಹೆ
ಲಿಂಕ್ : ಗಲಾಟೆ ಹೂ ಬೆಳೆದು ಉತ್ತಮ ಆದಾಯ ಗಳಿಸಿ : ರೈತರಿಗೆ ಸಲಹೆ

ಓದಿ


ಗಲಾಟೆ ಹೂ ಬೆಳೆದು ಉತ್ತಮ ಆದಾಯ ಗಳಿಸಿ : ರೈತರಿಗೆ ಸಲಹೆ


ಕೊಪ್ಪಳ ಸೆ. 01 (ಕರ್ನಾಟಕ ವಾರ್ತೆ): ಆಕರ್ಷಕ ನಿವ್ವಳ ಆದಾಯ ಪಡೆಯಲು "ಗಲಾಟೆ ಹೂ" ಬೆಳೆಯನ್ನು ಬೆಳೆಯುವಂತೆ ಕೊಪ್ಪಳ ತೋಟಗಾರಿಕೆ ಇಲಾಖೆಯು ರೈತರಿಗೆ ಸಲಹೆಯನ್ನು ನೀಡಿದೆ.
    ಆಸ್ಟರೇಸೀ ಎನ್ನುವ ಕುಟುಂಬಕ್ಕೆ ಸೇರಿದ ಸೂರ್ಯಕಾಂತಿ ಜಾತಿಯ ಗಲಾಟೆ ಹೂವಿನ ಮೂಲ, ದಕ್ಷಿಣ ಅಮೇರಿಕ.  18ನೇ ಶತಮಾನದ ಸಸ್ಯ ಶಾಸ್ತ್ರಜ್ಞ ಹಾಗೂ ಮ್ಯಾಜಿಸ್ಟ್ರೇಟ  ಎಂ. ಗೈಲಾರ್ಡಿ ಎಂಬುವವರಿಂದಾಗಿ ಈ ಹೂವಿಗೆ ವೈಜ್ಞಾನಿಕವಾಗಿ "ಗೈಲಾರ್ಡಿಯಾ" ಎಂಬ  ಹೆಸರು ಬಂದಿದ್ದು, ಇದರಲ್ಲಿ ಅನೇಕ  ಪ್ರಭೇದಗಳಾದ ಗೈ. ಅರಿಸ್ಟೇಟಾ ಮತ್ತು ಗೈ. ಈಸ್ಟಿವ್ಯಾಲಿಸ್ ಮುಂತಾದವುಗಳು ಪ್ರಮುಖ. 
ಇಂಗ್ಲಿಷನಲ್ಲಿ ಬ್ಲಾಂಕೆಟ್ ಫ್ಲವರ್ ಎಂದು ಕರೆಯಲ್ಪಡುವ ಈ ಗಲಾಟೆ ಹೂವನ್ನು ವರ್ಷ ಪೂರ್ತಿ ಬೆಳೆಯಬಹುದಾದರೂ ಶ್ರಾವಣ ಮಾಸಕ್ಕೆ ಎರಡು ತಿಂಗಳ ಮೊದಲೇ ನಾಟಿ ಮಾಡಿದಲ್ಲಿ ಉತ್ತಮ ಲಾಭ ಕೊಡುವ ಮಧ್ಯಮವಾಧಿ ಹೂವಿನ ಬೆಳೆ ಇದಾಗಿದೆ.  ನೀರು ಬಸಿದು ಹೋಗುವ ಎಲ್ಲ ಬಗೆಯ  ಮಣ್ಣಿನಲ್ಲಿ ಈ ಪುಷ್ಪ ಬೆಳೆಯುತ್ತಾದರೂ, ಮರಳು ಮಿಶ್ರಿತ ಗೋಡು ಮಣ್ಣು ಅತ್ಯುತ್ತಮ.  ಅಲ್ಪ ನೀರಿನಲ್ಲಿ ಉತ್ತಮ ಆದಾಯ ಕೊಡುವ ಗಲಾಟೆ ಹೂ ಕೊಪ್ಪಳ ಜಿಲ್ಲೆಗೆ ಅತ್ಯಂತ ಸೂಕ್ತ.  ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ಸಣ್ಣ ರೈತರಿಗೆ ಗಲಾಟೆ ಹೂ ಬೇಸಾಯ ಈ ಸಮಯದಲ್ಲಿ ಅತೀ ಸೂಕ್ತವಾಗಿದೆ. 
ಪ್ರಮುಖ ತಳಿಗಳು ಹಾಗೂ ನಾಟಿ ವಿಧಾನ :
*********** ಸಾಮಾನ್ಯವಾಗಿ ಸ್ಥಳೀಯ ತಳಿಗಳೇ ಹೆಚ್ಚು, ಉಪಯೋಗಿಸಲ್ಪಡುತ್ತದೆ.  ಆದರೂ ಧಾರವಾಡ ವಿಶ್ವವಿದ್ಯಾಲಯದಿಂದ ಅಭಿವೃದ್ಧಿ ಪಡಿಸಿದ ಡಿ.ಜಿ.ಎಸ್. -1 ತಳಿ 5 ರಿಂದ 6 ಟನ್ ದೊಡ್ಡ ಗಾತ್ರದ ಹೂಗಳ ಇಳುವರಿ ಕೊಡಬಲ್ಲದು.  ಸಾಮಾನ್ಯವಾಗಿ 250 ರಿಂದ 300 ಗ್ರಾಂ. ಬೀಜ ಪ್ರತಿ ಎಕರೆಗೆ  ಬೇಕಾಗುತ್ತದೆ.  ಭೂಮಿಯನ್ನು 2 ರಿಂದ 3 ಸಾರಿ ಚೆನ್ನಾಗಿ ಉಳುಮೆ ಮಾಡಿ, 6 ರಿಂದ 8 ಟನ್ ಕೊಟ್ಟಿಗೆ ಗೊಬ್ಬರವನ್ನು ಟ್ರೈಕೋಡರ್ಮಾ, ಸೂಡೋಮೋನಾಸ್ ಮತ್ತು ವ್ಯಾಮ್ ಜೈವಿಕ ಗೊಬ್ಬರಗಳಿಂದ ಉಪಚರಿಸಿ ಮಣ್ಣಿನಲ್ಲಿ ಬೆರೆಸಬೇಕು.  ನಾಟಿ ಮಾಡುವ ಪೂರ್ವದಲ್ಲಿ ಎಕೆರೆಗೆ 2 ಕ್ವಿಂಟಲ್ ಎರೆಹುಳು ಗೊಬ್ಬರ ಬೆರೆಸಿ, 45 ಸೆಂ.ಮೀ. ಅಂತರದಲ್ಲಿ 30 ಸೆಂ.ಮೀ. ಸಸಿಯಿಂದ ಸಸಿಗೆ ಅಂತರ ಬಿಟ್ಟು ನಾಟಿ ಮಾಡಬೇಕು.  ಎಕೆರೆಗೆ ಬೇಕಾದ ಬೀಜಗಳನ್ನು  ಏರು ಮಡಿ ಮಾಡಿ ಬಿತ್ತಬೇಕು.  ನಾಲ್ಕು ವಾರಗಳ ನಂತರ ಸಸಿಗಳು ನಾಟಿಗೆ ಸಿದ್ದವಾಗುತ್ತವೆ. 
ಗೊಬ್ಬರ ಮತ್ತು ನೀರಿನ ನಿರ್ವಹಣೆ :
********** ರೈತರು ಈ ಹೂವಿನ ಬೆಳೆಗೆ ಸಾಮಾನ್ಯವಾಘಿ ಯಾವುದೇ ಗೊಬ್ಬರ ಉಪಯೋಗಿಸುವುದಿಲ್ಲ.  ಆದರೆ ಎಕೆರೆಗೆ 30:40:25 ಕಿ.ಗ್ರಾಂ. ಸಾರಾಜನಕ, ರಂಜಕ ಮತ್ತು ಪೊಟ್ಯಾಷ್ ಉಪಯೋಗಿಸಿದರೆ 5 ರಿಂದ 6 ಟನ್ ಇಳುವರಿ ಪಡೆಯುವ ಸಾಧ್ಯತೆ ಇದೆ.  ಅತೀ ಕಡಿಮೆ ನೀರಿನಲ್ಲಿ ಗಲಾಟೆ ಹೂವನ್ನು ಬೆಳೆಸಬಹುದು.  5 ರಿಂದ 7 ದಿನಗಳಿಗೊಮ್ಮೆ  ವಾತಾವರಣ ಆಧರಿಸಿ ನೀರು ಕೊಡಬೇಕು.  ಹನಿ ನೀರಾವರಿ ಸೂಕ್ತ.  ಪ್ರಖರವಾಗಿ ಬಿಸಿಲು ಹೆಚ್ಚಿನ ಹೂ ಬಿಡಲು ಸಹಕಾರಿ. 
ಸಸ್ಯ ಸಂರಕ್ಷಣೆ :
******** ಗಲಾಟೆ ಹೂವಿಗೆ ಹೆಚ್ಚಿನ ಕೀಟ/ ರೋಗಗಳ ಬಾಧೆ ಇರುವುದಿಲ್ಲ.  ಆದರೂ ರಸಹೀರುವ ಎಲೆ ತಿನ್ನುವ ಕೀಟಗಳು ಕಂಡುಬಂದಾಗ  ಹತೋಟಿಗೆ  ಬೇವಿನಣ್ಣೆ ಅಷ್ಟೆ ಸಿಂಪರಿಸಿದರೆ ಸಾಕು.  ಎಲೆ ಚುಕ್ಕೆ  ಅಥವಾ ಸೊರಗು ರೋಗದ ಲಕ್ಷಣ ಕಂಡು ಬಂದಲ್ಲಿ, ಕಾರ್ಬೆಂಡೆಜಿಮ್ 50. ಡಬ್ಲೂ. ಪಿ. 1ಗ್ರಾಂ. ಸಿಂಪಡಿಸಬೇಕು ಮತ್ತು  ನೀರು ಚೆನ್ನಾಗಿ ಬಸಿದು  ಹೋಗುವಂತೆ ನೋಡಿಕೊಳ್ಳಬೇಕು. 
ಇಳುವರಿ : ನಾಟಿ ಮಾಡಿದ 60 ರಿಂದ 70 ದಿನಗಳಲ್ಲಿ ಹೂ ಬಿಡಲು ಆರಂಭಿಸುವ ಗಲಾಟೆ ಹೂ ಬೆಳೆಯು, ಮುಂದಿನ 3 ತಿಂಗಳವರೆಗೂ ಇಳುವರಿ  ಕೊಡುತ್ತದೆ.  ವಾರದಲ್ಲಿ 2 ಸಾರಿ  ಕಟಾವು ಮಾಡಬೇಕು.  ಒಂದು ಎಕೆರೆಯಿಂದ 4 ರಿಂದ 5 ಟನ್ ಇಳುವರಿ ನಿರೀಕ್ಷಿಸಬಹುದಾಗಿದೆ.  ಪ್ರತಿ ಕಿ.ಗ್ರಾಂ. ರೂ. 25 ಸರಾಸರಿ ದರದಂತೆ ಎಕೆರೆಗೆ  ರೂ. 1.00 ಲಕ್ಷ ಆದಾಯ ನೀರಿಕ್ಷಿಸಬಹುದು ಖರ್ಚೆಲ್ಲ ಹೋಗಿ 5 ರಿಂದ 6 ತಿಂಗಳಲ್ಲಿ ರೂ 60,000/- ದಿಂದ 75,000/- ನಿವ್ವಳ ಆದಾಯ ಪ್ರತಿ ಎಕೆರೆಗೆ ದೊರೆಯಬಹುದು. 
ಹೆಚ್ಚಿನ ಮಾಹಿತಿಗಾಗಿ ಜಿಲ್ಲೆಯ ಆಯಾ ತಾಲೂಕು ಕಛೇರಿ ಹಾಗೂ ತೋಟಗಾರಿಕೆ ಉಪನಿರ್ದೇಶರ ಕಛೇರಿ ಜಿಲ್ಲಾ ಪಂಚಾಯತ್ ಕೊಪ್ಪಳ, ಇಲ್ಲಿಗೆ ಅಥವಾ ತೋಟಗಾರಿಕೆ ವಿಷಯ ತಜ್ಞರಾದ ವಾಮನ ಮೂರ್ತಿ ಮೊ.ಸಂ. 9482672039 ಕ್ಕೆ ಸಂಪರ್ಕಿಸಬುಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.


ಹೀಗಾಗಿ ಲೇಖನಗಳು ಗಲಾಟೆ ಹೂ ಬೆಳೆದು ಉತ್ತಮ ಆದಾಯ ಗಳಿಸಿ : ರೈತರಿಗೆ ಸಲಹೆ

ಎಲ್ಲಾ ಲೇಖನಗಳು ಆಗಿದೆ ಗಲಾಟೆ ಹೂ ಬೆಳೆದು ಉತ್ತಮ ಆದಾಯ ಗಳಿಸಿ : ರೈತರಿಗೆ ಸಲಹೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಗಲಾಟೆ ಹೂ ಬೆಳೆದು ಉತ್ತಮ ಆದಾಯ ಗಳಿಸಿ : ರೈತರಿಗೆ ಸಲಹೆ ಲಿಂಕ್ ವಿಳಾಸ https://dekalungi.blogspot.com/2018/09/blog-post_1.html

Subscribe to receive free email updates:

0 Response to "ಗಲಾಟೆ ಹೂ ಬೆಳೆದು ಉತ್ತಮ ಆದಾಯ ಗಳಿಸಿ : ರೈತರಿಗೆ ಸಲಹೆ"

ಕಾಮೆಂಟ್‌‌ ಪೋಸ್ಟ್‌ ಮಾಡಿ