ಪೌಷ್ಠಿಕ ಆಹಾರ ಮನುಕುಲಕ್ಕೆ ಪ್ರಮುಖವಾದ ಯೋಜನೆ : ಟಿ. ಶ್ರೀನಿವಾಸ

ಪೌಷ್ಠಿಕ ಆಹಾರ ಮನುಕುಲಕ್ಕೆ ಪ್ರಮುಖವಾದ ಯೋಜನೆ : ಟಿ. ಶ್ರೀನಿವಾಸ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಪೌಷ್ಠಿಕ ಆಹಾರ ಮನುಕುಲಕ್ಕೆ ಪ್ರಮುಖವಾದ ಯೋಜನೆ : ಟಿ. ಶ್ರೀನಿವಾಸ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಪೌಷ್ಠಿಕ ಆಹಾರ ಮನುಕುಲಕ್ಕೆ ಪ್ರಮುಖವಾದ ಯೋಜನೆ : ಟಿ. ಶ್ರೀನಿವಾಸ
ಲಿಂಕ್ : ಪೌಷ್ಠಿಕ ಆಹಾರ ಮನುಕುಲಕ್ಕೆ ಪ್ರಮುಖವಾದ ಯೋಜನೆ : ಟಿ. ಶ್ರೀನಿವಾಸ

ಓದಿ


ಪೌಷ್ಠಿಕ ಆಹಾರ ಮನುಕುಲಕ್ಕೆ ಪ್ರಮುಖವಾದ ಯೋಜನೆ : ಟಿ. ಶ್ರೀನಿವಾಸ



ಕೊಪ್ಪಳ ಸೆ. 01 (ಕರ್ನಾಟಕ ವಾರ್ತೆ): ಪೌಷ್ಠಿಕ ಆಹಾರ ಯೋಜನೆಯು ಮನುಕುಲಕ್ಕೆ ಬೇಕಾಗುವ ಪ್ರಮುಖವಾದ ಯೋಜನೆಯಾಗಿದೆ ಎಂದು ಕೊಪ್ಪಳ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಟಿ. ಶ್ರೀನಿವಾಸ ಅವರು ಹೇಳಿದರು.  
 
     ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪಂಚಂಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ ಮತ್ತು ಜಿಲ್ಲಾ ವಕೀಲರ ಸಂಘ ಇವರ ಸಹಯೋಗದಲ್ಲಿ "ರಾಷ್ಟ್ರೀಯ ಪೌಷ್ಠಿಕ ಆಹಾರ ಸಪ್ತಾಹ" ಅಂಗವಾಗಿ ನಗರದ ಸಿರಸಪ್ಪಯ್ಯನಮಠ ಹಿಂದುಗಡೆಯ ಅಂಗನವಾಡಿ ಕೇಂದ್ರದಲ್ಲಿ ಇತ್ತೀಚೆಗೆ ಆಯೋಜಿಸಲಾದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  
 
ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳ ಮೊದಲನೇ ವಾರದಲ್ಲಿ ರಾಷ್ಟ್ರೀಯ ಪೌಷ್ಠಿಕ ಆಹಾರ ಸಪ್ತಾಹ ಕಾರ್ಯಕ್ರಮವನ್ನು ಆಚರಿಸಲಾಗುತ್ತದೆ.  ಇದು ಒಂದು ಅತ್ಯಂತ ಮಹತ್ವದ ಕಾರ್ಯಕ್ರಮವಾಗಿದೆ.  "ಉತ್ತಮವಾದ ಪೌಷ್ಠಿಕತೆ ದೇಶವನ್ನು ಪ್ರಜ್ವಲಿಸುತ್ತದೆ" ಎಂಬುವುದು ಈ ವರ್ಷದ ಘೋಷಣೆಯಾಗಿದೆ.  ಮನುಕುಲಕ್ಕೆ ಮುಖ್ಯವಾದ ಯೋಜನೆಗಳಲ್ಲಿ ಪೌಷ್ಠಿಕ ಆಹಾರ ಯೋಜನೆ ಕೂಡ ಒಂದಾಗಿದ್ದು, ಒಂದು ಸರ್ವೆ ಪ್ರಕಾರ ಉಗಾಂಡ ದೇಶದಲ್ಲಿ ಹುಟ್ಟಿದ 80% ರಷ್ಟು ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿವೆ ಹಾಗೂ ಅಂಗವಿಕಲತೆಯಿಂದ ಹುಟ್ಟುತ್ತಿವೆ.  ಈ ಅಪೌಷ್ಠಿಕಕತೆಯನ್ನು ತಡೆಗಟ್ಟಲು ಗರ್ಭಿಣಿಯರಿಗೆ, ಮಕ್ಕಳಿಗೆ ಹಾಗೂ ಹದಿಹರೆಯದವರಿಗೆ ಪೌಷ್ಠಿಕ ಆಹಾರದ ಅರಿವು ಅತ್ಯಂತ ಅವಶ್ಯಕವಾಗಿರುತ್ತದೆ.  ಮುಂದಿನ ಪೀಳಿಗೆಯನ್ನು ಚನ್ನಾಗಿ ಕಾಪಾಡಿಕೊಂಡು ಹೋಗಬೇಕಾದರೆ ಪೌಷ್ಠಿಕ ಆಹಾರದ ಬಗ್ಗೆ ಪ್ರತಿಯೊಬ್ಬರು ಜಾಗೃತರಾಗಬೇಕು.  ಅಪೌಷ್ಠಿಕತೆಯನ್ನು ಸುಲಭ ರೀತಿಯಿಂದ ಪರಿಹರಿಸಬಹುದು.  ರಕ್ತಹೀನತೆ ತಡೆಗಟ್ಟಲು ಪೌಷ್ಠಿಕ ಆಹಾರವನ್ನು ಕಡ್ಡಾಯವಾಗಿ ಗರ್ಭಿಣಿಯವರು ಸೇವಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಟಿ. ಶ್ರೀನಿವಾಸ ಅವರು ಹೇಳಿದರು.   
      ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಅಲಕನಂದಾ ಮಳಗಿ ಅವರು ಮಾತನಾಡಿ, ಸಮತೋಲನ ಆಹಾರವಾದ ಕಾರ್ಬೋಹೈಡ್ರೇಟ್, ವಿಟಮಿನ್ಸ, ಮಿನರಲ್ಸ, ಶುದ್ಧವಾದ ನೀರು, ಗರ್ಭಿಣಿ ಸ್ತ್ರೀಯರು ಇಂತಹ ಪೌಷ್ಠಿಕ ಆಹಾರ ಸೇವಿಸುವುದರ ಜೊತೆಗೆ ಕಬ್ಬಿಣಾಂಶ ಮಾತ್ರೆ ಹಾಗೂ ಕ್ಯಾಲ್ಸಿಯಂ ಮಾತ್ರೆಯನ್ನು ತೆಗೆದುಕೊಳ್ಳಬೇಕು.  ಅಲ್ಲದೇ ಕಾಲಕಾಲಕ್ಕೆ ಗರ್ಭಿಣಿಯರು ತಪಾಸಣೆ, ಟಿ.ಟಿ. ಚುಚ್ಚುಮದ್ದು ಹಾಕಿಸಿಕೊಳ್ಳಬೇಕು.  ಸಾಮಾನ್ಯ ಹುಟ್ಟಿದ ಮಗುವಿನ ತೂಕ 2.5 ಕೆ.ಜಿ ಇರಬೇಕು.  ಇದಕ್ಕಿಂತ ಕಡಿಮೆ ಇದ್ದರೆ ಅದು ಕಡಿಮೆ ಹುಟ್ಟು ತೂಕವೆಂದು ಪರಿಗಣಿಸಲಾಗುತ್ತದೆ.  ಹದಿಹರೆಯದವರು ದೈಹಿಕ ಬೆಳವಣಿಗೆ ಚೆನ್ನಾಗಿ ಇರಬೇಕೆಂದರೆ ಪೌಷ್ಠಿಕ ಆಹಾರ ಸೇವಿಸಬೇಕು.  ಜೊತೆಗೆ ಪ್ರತಿ 06 ತಿಂಗಳಿಗೊಮ್ಮೆ 01 ರಿಂದ 19 ವರ್ಷದೊಳಗಿನ ಮಕ್ಕಳು ಜಂತು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳಬೇಕು.  ಸರ್ಕಾರ ಜಾರಿಗೆ ತಂದ "ಮಾತೃ ಪೂರ್ಣ ಯೊಜನೆ" ಅಡಿಯಲ್ಲಿ ವಿವಿಧ ರೀತಿಯ ಪೌಷ್ಠಿಕಾಂಶಗಳ ಆಹಾರ ನೀಡಲಾಗುತ್ತದೆ.  ಎಲ್ಲಾ ಗರ್ಭಿಣಿ ಬಾಣಂತಿಯರು ಅಂಗನವಾಡಿ ಕೇಂದ್ರಕ್ಕೆ ಬಂದು ಪೌಷ್ಠಿಕ ಆಹಾರ ಸೇವಿಸಬೇಕು.  ಇದರಿಂದ ರಕ್ತಹೀನತೆ ತಡೆಗಟ್ಟಲು ಸಾಧ್ಯವಾಗುತ್ತದೆ.  ಸಾಂಪ್ರದಾಯಿಕ ಆಹಾರ ಪದ್ಧತಿಯಿಂದ ಗರ್ಭಿಣಿಯರು, ಮಹಿಳೆಯರು ಜಾಗೃತರಾಗಬೇಕು.  ಪೌಷ್ಠಿಕ ಆಹಾರ ಸೇವನೆಯಿಂದ ಸದೃಡ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ವಿವರಿಸಿದರು.  
    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಶು ಅಭಿವೃದ್ದಿ ಯೋಜನೆ ಅಧಿಕಾರಿ ಸಿಂಧು ಎಲಿಗಾರ್ ವಹಿಸಿದ್ದರು.  ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಪೂಜಾರ ಅವರು ಪೌಷ್ಠಿಕ ಆಹಾರ ಶಿಭಿರ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು.  ಆರೋಗ್ಯ ಇಲಾಖೆ ಶಿವಕುಮಾರ, ಸರೋಜ, ಗಂಗಮ್ಮ, ಐ.ಸಿ.ಡಿ.ಎಸ್ ಮೇಲ್ವಿಚಾರಕಿ ಲಕ್ಷ್ಮೀರೆಡ್ಡಿ, ಐ.ಎಫ್.ವಿ, ಜೈಹಿಂದ ಸೇರಿದಂತೆ ಇಲಾಖೆಯ ಸಿಬ್ಬಂದಿಗಳು ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಗರ್ಭಿಣಿ ಸ್ತ್ರೀಯರು, ಕಿಶೋರಿಯರು, ಮಕ್ಕಳು ಕಾರ್ಯಕ್ರಮದಲ್ಲಿ ಹಾಜರಿದ್ದರು.  ವಿವಿಧ ಬಗೆಯ ‘’ಪೌಷ್ಠಿಕ ಆಹಾರ ಪ್ರಾತ್ಯಕ್ಷತೆಯನ್ನು’’ ಇದೇ ಸಂದರ್ಭದಲ್ಲಿ ಮಾಡಲಾಯಿತು.


ಹೀಗಾಗಿ ಲೇಖನಗಳು ಪೌಷ್ಠಿಕ ಆಹಾರ ಮನುಕುಲಕ್ಕೆ ಪ್ರಮುಖವಾದ ಯೋಜನೆ : ಟಿ. ಶ್ರೀನಿವಾಸ

ಎಲ್ಲಾ ಲೇಖನಗಳು ಆಗಿದೆ ಪೌಷ್ಠಿಕ ಆಹಾರ ಮನುಕುಲಕ್ಕೆ ಪ್ರಮುಖವಾದ ಯೋಜನೆ : ಟಿ. ಶ್ರೀನಿವಾಸ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಪೌಷ್ಠಿಕ ಆಹಾರ ಮನುಕುಲಕ್ಕೆ ಪ್ರಮುಖವಾದ ಯೋಜನೆ : ಟಿ. ಶ್ರೀನಿವಾಸ ಲಿಂಕ್ ವಿಳಾಸ https://dekalungi.blogspot.com/2018/09/blog-post.html

Subscribe to receive free email updates:

0 Response to "ಪೌಷ್ಠಿಕ ಆಹಾರ ಮನುಕುಲಕ್ಕೆ ಪ್ರಮುಖವಾದ ಯೋಜನೆ : ಟಿ. ಶ್ರೀನಿವಾಸ"

ಕಾಮೆಂಟ್‌‌ ಪೋಸ್ಟ್‌ ಮಾಡಿ