ಶೀರ್ಷಿಕೆ : News Date: 31-8-2018
ಲಿಂಕ್ : News Date: 31-8-2018
News Date: 31-8-2018
ಹೆಸರುಕಾಳು ಖರೀದಿ-43 ಖರೀದಿ ಕೇಂದ್ರಗಳು ಪ್ರಾರಂಭ
***************************************************
ಕಲಬುರಗಿ,ಆ.31.(ಕ.ವಾ.)-ಕಲಬುರಗಿ ಜಿಲ್ಲೆಯಾದ್ಯಂತ ರೈತರಿಂದ ಹೆಸರುಕಾಳನ್ನು ಆಗಸ್ಟ್ 31 ರಿಂದ ಖರೀದಿಸಲಾಗುತ್ತಿದೆ. ಸರ್ಕಾರದಿಂದ ಒಟ್ಟು 43 ಖರೀದಿ ಕೇಂದ್ರಗಳನ್ನು ತೆರೆಯಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಟಾಸ್ಕರ್ಫೋಸ್ ಸಮಿತಿ ಅಧ್ಯಕ್ಷರಾದ ಆರ್. ವೆಂಕಟೇಶಕುಮಾರ ತಿಳಿಸಿದ್ದಾರೆ.
ಕಲಬುರಗಿ ತಾಲೂಕಿನ ಅವರಾದ ಬಿ, ಬೇಲೂರ, ಸಾವಳಗಿ, ಕವಲಗಾ, ಮಹಾಗಾಂವ, ಓಕಳಿ, ಹರಸೂರ, ಆಳಂದತಾಲೂಕಿನ ಖಜೂರಿ, ಮಾದನ ಹಿಪ್ಪರಗಾ, ನಿಂಬರ್ಗಾ, ಕೆರಿ ಅಂಬಲಗಾ, ಸರಸಂಬಾ, ನಿಂಬಾಳ, ಕಮಲಾ ನಗರ, ಮುನ್ನೋಳ್ಳಿ, ಯಳಸಂಗಿ, ಅಫಜಲಪುರ ತಾಲೂಕಿನ ಕರಜಗಿ, ಬಡದಾಳ, ಆತನೂರ, ಜೇವರ್ಗಿ ತಾಲೂಕಿನ ಮಳ್ಳಿ, ಗುಡೂರ ಎಸ್.ಎನ್., ಮುತ್ತಖೇಡ, ಸೇಡಂ ತಾಲೂಕಿನ ಮುಧೋಳ, ಕೋಡ್ಲಾ, ಬಟಗೇರಾ ಬಿ, ಮಳಖೇಡ, ಹಾಬಾಳ ಟಿ, ಆಡಕಿ, ಚಿತ್ತಾಪುರ ತಾಲೂಕಿನ ನಾಲವಾರ, ಕಾಳಗಿ, ರಾವೂರ, ಗುಂಡಗುರ್ತಿ, ಹಲಕಟ್ಟಾ, ಟೆಂಗಳಿ, ಭೀಮನಳ್ಳಿ, ಕೊಡದೂರ, ದಂಡೋತಿ ಹಾಗೂ ಚಿಂಚೊಳ್ಳಿ ತಾಲೂಕಿನ ಚಿಮ್ಮನಚೋಡ, ಸುಲೇಪೇಟ, ಕೋಡ್ಲಿ, ಐನಾಪೂರ, ಸಾಲೇಬಿರನಳ್ಳಿ, ನಿಡಗುಂದಾ, ಐನೋಳ್ಳಿ ಗ್ರಾಮಗಳಲ್ಲಿ ಹೆಸರುಕಾಲು ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ.
ಪ್ರತಿಯೊಬ್ಬ ರೈತರು 10 ಕ್ವಿಂ. ಗರಿಷ್ಟ ಪ್ರಮಾಣದಲ್ಲಿ ಹೆಸರುಕಾಳು ಪ್ರತಿ ಕ್ವಿಂಟಲ್‍ಗೆ 6,975 ರೂ.ಗಳ ದರದಲ್ಲಿ ತಮ್ಮ ಗ್ರಾಮಕ್ಕೆ ಹತ್ತಿರದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಬಹುದಾಗಿದೆ. ರೈತರು ಖರೀದಿ ಕೇಂದ್ರಗಳಲ್ಲಿ ತಮ್ಮ ಹೊಲದ ಪಹಣಿ ಪತ್ರ, ಆಧಾರ ಕಾರ್ಡ, ಬೆಳೆ ದೃಢೀಕರಣ ಪತ್ರ ಹಾಗೂ ಆಧಾರ ಕಾರ್ಡ ಜೋಡಣೆಯಾದ ಬ್ಯಾಂಕ್ ಖಾತೆ ಹೊಂದಿರುವ ಪಾಸ್ ಪುಸ್ತಕದ ಝರಾಕ್ಸ ಪ್ರತಿಯನ್ನು ದೃಢೀಕರಿಸಿ ಸಲ್ಲಿಸಿ ದಿನಾಂಕ: 31.08.2018 ರಿಂದ 09.09.2018 ರ ವೆರೆಗೆ ಹೆಸರು ನೊಂದಾಯಿಸಿ ಕೊಳ್ಳಬಹುದಾಗಿದೆ. ಹೆಸರುಕಾಳು ಖರೀದಿ ಪ್ರಕ್ರಿಯೇಯು ದಿನಾಂಕ; 31.08.2018 ರಿಂದ 30 (ಮೂವತ್ತು) ದಿನಗಳ ವರೆಗೆ ಮಾತ್ರ ಇರುತ್ತದೆ. ರೈತರು ಹೆಸರುಕಾಳು ಹುಟ್ಟುವಳಿಯನ್ನು ಖರೀದಿ ಕೇಂದ್ರಕ್ಕೆ ತಂದು ತಮ್ಮ ಉಪಸ್ಥಿತಿಯಲ್ಲಿಯೇ ಹೆಸರುಕಾಳು ತೂಕ ಮಾಡಿಸಿಕೊಳ್ಳಬೇಕು ಹಾಗೂ ಅಧಿಕೃತ ರಸೀತಿಯನ್ನು ಪಡೆದುಕೊಳ್ಳಬೇಕು. ಖರೀದಿ ಕೇಂದ್ರದಲ್ಲಿ ಯಾವುದೇ ಹಣ ಪಾವತಿ ಮಾಡುವ ಅವಶ್ಯಕತೆ ಇರುವುದಿಲ್ಲ. ಹೆಸರುಕಾಳು ಉತ್ಪನ್ನ ಮಾರಾಟದ ನಂತರ ಸಂಬಂಧಪಟ್ಟ ಅಧಿಕಾರಿಗಳಿಂದ (ಆಃಖಿ) ನೇರವಾಗಿ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲಾಗುತ್ತದೆ.
ರೈತಬಾಂಧವರು ಹೆಸರುಕಾಳು ಉತ್ಪನ್ನದ ಖಾಲಿ ಚೀಲ ತೂಕ ಹೊರತುಪಡಿಸಿ 50 ಕೆ.ಜಿ. ಮಾತ್ರ ಒಳಗೊಂಡಿರುವುದನ್ನು ದೃಢೀಕರಿಸಿಕೊಳ್ಳಬೇಕು. ಹೆಚ್ಚುವರಿ ಪ್ರಮಾಣ ತೂಕಮಾಡಿದ್ದಲ್ಲಿ ಈ ಕೆಳಕಂಡ ತಾಲ್ಲೂಕಾ ನೂಡಲ್ ಅಧಿಕಾರಿಗಳ ಗಮನಕ್ಕೆ ತರಬೇಕು. ಹೆಸರುಕಾಳು ಖರೀದಿ ಕೇಂದ್ರದ ಬಗ್ಗೆ ಮಾಹಿತಿ ಅಥವಾ ದೂರಿಗಾಗಿ ಸಹಾಯವಾಣಿ ಸಂಖ್ಯೆ 08472-220610 ಸಂಪರ್ಕಿಸಲು ಕೋರಲಾಗಿದೆ.
ತಾಲೂಕಾವಾರು ನೇಮಿಸಲಾಗಿರುವ ನೂಡಲ್ ಅಧಿಕಾರಿಗಳ ಹೆಸರು ಹಾಗೂ ದೂರವಾಣಿ ಸಂಖ್ಯೆ ಇಂತಿದೆ. ಕಲಬುರಗಿ ತಾಲೂಕು- ಉಪ ಕೃಷಿ ನಿರ್ದೇಶಕರು, ಕಲಬುರಗಿ-82779 31501, ಆಳಂದ ತಾಲೂಕು- ಉಪ ನಿರ್ದೇಶಕರು, ಪಶುಸಂಗೋಪನೆ ಇಲಾಖೆ, ಕಲಬುರಗಿ-95385 34555, ಅಫಜಲಪೂರ ತಾಲೂಕು- ಸಹಾಯಕ ನಿರ್ದೇಶಕರು, ಮೀನುಗಾರಿಕೆ ಇಲಾಖೆ, ಕಲಬುರಗಿ-98802 10505, ಜೇವರ್ಗಿ ತಾಲೂಕು- ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಕಲಬುರಗಿ-94489 99235, ಸೇಡಂ ತಾಲೂಕು- ಉಪ ನಿರ್ದೇಶಕರು, ರೇಷ್ಮೆ ಇಲಾಖೆ,ಕಲಬುರಗಿ- 97427 34166, ಚಿತ್ತಾಪೂರ ತಾಲೂಕು- ಉಪ ನಿಬಂಧಕರು, ಸಹಕಾರ ಸಂಘಗಳ ಇಲಾಖೆ, ಕಲಬುರಗಿ-94488 13536 ಹಾಗೂ ಚಿಂಚೋಳಿ ತಾಲೂಕು-ಉಪ ನಿರ್ದೇಶಕರು, ಕೃಷಿ ಇಲಾಖೆ, ಸೇಡಂ-82779 31502.
ರೈಲ್ವೆ ಡಬ್ಲಿಂಗ್ ಕಾರ್ಯ: ರೈಲು ಸಂಚರಿಸುವ ಮಾರ್ಗದಲ್ಲಿ ಬದಲಾವಣೆ
ಕಲಬುರಗಿ,ಆ.31.(ಕ.ವಾ.)-ದಕ್ಷಿಣ ಮಧ್ಯ ರೈಲ್ವೆ ವ್ಯಾಪ್ತಿಯ ಗುಂತಕಲ್-ಕಲ್ಲೂರು ರೈಲು ನಿಲ್ದಾಣಗಳ ಮಧ್ಯೆ ರೈಲು ಹಳಿಗಳ ದ್ವಿಮಾರ್ಗ (ಡಬ್ಲಿಂಗ್) ಕಾರ್ಯ ಕೈಗೊಂಡಿರುವ ಹಿನ್ನೆಲೆಯಲ್ಲಿ ಕೆಲ ರೈಲು ಪ್ರಯಾಣಿಸುವ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಸೋಲಾಪುರ ಮಧ್ಯ ರೈಲ್ವೆ ವಿಭಾಗೀಯ ಕಮರ್ಶಿಯಲ್ ಮ್ಯಾನೇಜರ್ ಆರ್.ಕೆ. ಶರ್ಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾರ್ಗ ಬದಲಾವಣೆ ಮಾಡಿದ ರೈಲುಗಳ ವಿವರ: 17307 ಮೈಸೂರು ಬಾಗಲಕೋಟೆ ಎಕ್ಸ್‍ಪ್ರೆಸ್ ರೈಲು ಸೆಪ್ಟೆಂಬರ್ 1 ರಿಂದ 9ರವರೆಗೆ ಕಲ್ಲೂರು, ಗುಲ್ಪಲ್ಯಾಮು, ಗುಂತಕಲ್ ನಿರ್ಧರಿತ ಮಾರ್ಗದ ಬದಲಾಗಿ ಈ ರೈಲು ಯಶವಂತಪುರ, ಅರಸಿಕೇರೆ, ಚಿಕ್ಕಜಾಜೂರ ಜಂಕ್ಷನ್, ಬಳ್ಳಾರಿ, ಗದಗ ಮಾರ್ಗವಾಗಿ ಸಂಚರಿಸಲಿದೆ. ಅದೇ ರೀತಿ 17308 ಬಾಗಲಕೋಟ-ಮೈಸೂರು ಎಕ್ಸ್‍ಪ್ರೆಸ್ ರೈಲು ಈ ಅವಧಿಯಲ್ಲಿ ಬದಲಾವಣೆ ಮಾಡಲಾದ ಮಾರ್ಗದಲ್ಲಿಯೇ ಸಂಚರಿಸಲಿದೆ. ಸಾರ್ವಜನಿಕರು/ ಪ್ರಯಾಣಿಕರು ಈ ಬದಲಾವಣೆಗೆ ಸಹಕರಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆಪ್ಟೆಂಬರ್ 1ರಂದು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕಿನ ಶಾಖೆ ಉದ್ಘಾಟನೆ
***********************************************************************
ಕಲಬುರಗಿ,ಆ.31.(ಕ.ವಾ.)-ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕಿನ ಕಲಬುರಗಿ ಶಾಖೆಯ ಉದ್ಘಾಟನಾ ಸಮಾರಂಭವನ್ನು 2018ರ ಸೆಪ್ಟೆಂಬರ್ 1 ರಂದು ಮಧ್ಯಾಹ್ನ 2 ಗಂಟೆಗೆ ಕಲಬುರಗಿ ನಗರದ ಬ್ರಹ್ಮಪುರ ಪೊಲೀಸ್ ಠಾಣೆಯ ಹಿಂದುಗಡೆಯಿರುವ ಹೈದ್ರಾಬಾದ ಕರ್ನಾಟಕ ಚೇಂಬರ್ ಆಪ್ ಕಾಮರ್ಸ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಸಿ. ಪಾಟೀಲ ರೇವೂರ ಅವರು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕಿನ ಶಾಖೆಯನ್ನು ಉದ್ಘಾಟಿಸುವರು. ಕಲಬುರಗಿ ಉತ್ತರ ಶಾಸಕಿ ಕನೀಜ್ ಫಾತೀಮಾ, ವಿಧಾನ ಪರಿಷತ್ ಸದಸ್ಯರುಗಳಾದ ಬಿ.ಜಿ. ಪಾಟೀಲ, ಕೆ.ಬಿ. ಶಾಣಪ್ಪ ಹಾಗೂ ಮಹಾನಗರ ಪಾಲಿಕೆ ಮಹಾಪೌರ ಶರಣಕುಮಾರ ಮೋದಿ ಅವರು ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಳ್ಳುವರು.

ಸೆಪ್ಟೆಂಬರ್ 3 ರಿಂದ 9ರವರೆಗೆ ನೇತ್ರದಾನ ಜಾಗೃತಿ ಸಪ್ತಾಹ
******************************************************
ಕಲಬುರಗಿ,ಆ.31.(ಕ.ವಾ.)-ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಕಲಬುರಗಿ ಶಾಖೆಯಿಂದ ನೇತ್ರ ನಿಧಿ ವಿಭಾಗ ಹೈ.ಕ.ಶಿ. ಸಂಸ್ಥೆಯ ಬಸವೇಶ್ವರ ಆಸ್ಪತ್ರೆ ಹಾಗೂ ಅಂಬುಬಾಯಿ ಅಂಧ ಬಾಲಕಿಯರ ವಸತಿಯುತ ಶಾಲೆ ಕಲಬುರಗಿ ಇವರುಗಳ ಸಹಯೋಗದೊಂದಿಗೆ ನೇತ್ರದಾನ ಜಾಗೃತಿ ಸಪ್ತಾಹವನ್ನು ಸೆಪ್ಟೆಂಬರ್ 3 ರಿಂದ 9ರವರೆಗೆ ಏರ್ಪಡಿಸಲಾಗಿದೆ.
ನೇತ್ರದಾನ ಸಪ್ತಾಹದ ಅಂಗವಾಗಿ ಸೆಪ್ಟೆಂಬರ್ 3 ರಂದು ಬೆಳಿಗ್ಗೆ 9.30 ಗಂಟೆಗೆ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಅವರು ಜಾಥಾಕ್ಕೆ ಚಾಲನೆ ನೀಡುವರು. ಈ ಜಾಥಾವು ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಿಂದ ಆರಂಭಗೊಂಡು ಸರದಾರ ವಲ್ಲಭಭಾಯಿ ಪಟೇಲ್ ವೃತ್ತ, ಒನ್‍ವೇ ಮುಖಾಂತರ ರೈಲು ನಿಲ್ದಾಣದಿಂದ ಪಿಲ್ಲೂ ಹೋಮಿ ಇರಾನಿ ಕಾಲೇಜಿಗೆ ಬಂದು ಕೊನೆಗೊಳ್ಳಲಿದೆ. ಸೆಪ್ಟೆಂಬರ್ 3ರಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿ ಕೋರ್ಟ ರಸ್ತೆಯಲ್ಲಿರುವ ಶ್ರೀಮತಿ ಪಿಲ್ಲೂ ಹೋಮಿ ಇರಾನಿ ಮಹಿಳಾ ಮಹಾವಿದ್ಯಾಲಯದಲ್ಲಿ ಏರ್ಪಡಿಸಲಾದ ನೇತ್ರದಾನ ಜಾಗೃತಿ ಸಪ್ತಾಹವನ್ನು ಕರ್ನಾಟಕ ಪೀಪಲ್ಸ್ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿ ಮಾರುತಿರಾವ್ ಮಾಲೆ ಅವರು ಉದ್ಘಾಟಿಸುವರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಂ.ಕೆ. ಪಾಟೀಲ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ನೇತ್ರ ತಜ್ಞ ಡಾ. ಎಂ.ಎಂ. ಬೇಗ್ ಉಪನ್ಯಾಸ ನೀಡುವರು. ಪಿಲ್ಲೂ ಹೋಮಿ ಇರಾನಿ ಮಹಿಳಾ ಮಹಾವಿದ್ಯಾಲಯದ ಪ್ರಾಂಶುಪಾಲ ಕವಿತಾ ಪಾಟೀಲ ಅವರ ಗೌರವ ಉಪಸ್ಥಿತಿಯಲ್ಲಿ ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಕಲಬುರಗಿ ಸಭಾಪತಿ ಅಪ್ಪಾರಾವ ಅಕ್ಕೋಣೆ ಅಧ್ಯಕ್ಷತೆ ವಹಿಸಲಿದ್ದಾರೆ.
ಸಪ್ತಾಹದ ಅಂಗವಾಗಿ ಸೆಪ್ಟೆಂಬರ್ 4ರಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿ ಕುಸನೂರ ರಸ್ತೆ (ರಿಂಗ್ ರಸ್ತೆ)ಯ ಸರ್ಕಾರಿ ಮಹಾವಿದ್ಯಾಲಯದಲ್ಲಿ, ಸೆಪ್ಟೆಂಬರ್ 5 ರಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿಯ ಹೈ.ಕ.ಶಿ. ಸಂಸ್ಥೆಯ ಮಹಿಳಾ ಪಾಲಿಟೆಕ್ನಿಕ್‍ನಲ್ಲಿ, ಸೆಪ್ಟೆಂಬರ್ 6ರಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ, ಸೆಪ್ಟೆಂಬರ್ 7ರಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿಯ ಶ್ರೀ ಗುರೂಜಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಹಾಗೂ ಸೆಪ್ಟೆಂಬರ್ 8ರಂದು ಬೆಳಿಗ್ಗೆ 11 ಗಂಟೆಗೆ ಆಳಂದ ರಸ್ತೆಯಲ್ಲಿರುವ ಕೃಷಿ ಮಹಾವಿದ್ಯಾಲಯದಲ್ಲಿ ಉಪನ್ಯಾಸ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಈ ಸಪ್ತಾಹದ ಸಮಾರೋಪ ಸಮಾರಂಭವನ್ನು ಸೆಪ್ಟೆಂಬರ್ 9 ರಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿಯ ಶ್ರೀ ಶರಣಬಸವೇಶ್ವರ ಪ್ರವಾಸೋದ್ಯಮ ಮಹಾವಿದ್ಯಾಲಯದಲ್ಲಿ ಏರ್ಪಡಿಸಲಾಗಿದೆ.

ಶ್ರೀಕೃಷ್ಣ ಜನ್ಮಾಷ್ಟಮಿ: ಮಾಂಸ ಮಾರಾಟ ನಿಷೇಧ
*******************************************
ಕಲಬುರಗಿ.ಆ.31.(ಕ.ವಾ.)-ಕಲಬುರಗಿ ನಗರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು 2018ರ ಸೆಪ್ಟೆಂಬರ್ 2ರಂದು ಆಚರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಅಂದು ಕಲಬುರಗಿ ನಗರದಾದ್ಯಂತ ಯಾವುದೇ ರೀತಿಯ ಪ್ರಾಣಿ ವಧೆ ಮಾಡುವುದನ್ನು ಅಥವಾ ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಿ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ನಗರದಲ್ಲಿ ಮಾಂಸ ಮಾರಾಟ ಮಾಡುವ ಅಂಗಡಿಗಳ ಹಾಗೂ ಕಸಾಯಿ ಖಾನೆ ಮಾಲೀಕರು ಈ ಆದೇಶವÀನ್ನು ಕಟ್ಟುನಿಟ್ಟಾಗಿ ಪರಿಪಾಲಿಸುವಂತೆ ಸೂಚಿಸಿದ್ದಾರೆ. ತಪ್ಪಿದಲ್ಲಿ ಕೆ.ಎಂ.ಸಿ. ಕಾಯ್ದೆ 1976ರ ಪ್ರಕಾರ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.

ಕಲಬುರಗಿ-ಬೆಂಗಳೂರು ಮಾರ್ಗದಲ್ಲಿ
*********************************
ಎ.ಸಿ.-ನಾನ್-ಎಸಿ ಸ್ಪೀಪರ್ ಹೆಚ್ಚುವರಿ ಬಸ್‍ಗಳ ಕಾರ್ಯಾಚರಣೆ
*******************************************************
ಕಲಬುರಗಿ.ಆ.31.(ಕ.ವಾ.)-ಬೆಂಗಳೂರು ರೈಲು ಮಾರ್ಗದಲ್ಲಿ ದುರಸ್ತಿ ಕಾರ್ಯದ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಯು ಸೆಪ್ಟೆಂಬರ್ 9 ರವರೆಗೆ ಬೆಂಗಳೂರು ಕಲಬುರಗಿ ನಡುವೆ ಕೆಲವು ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಲಬುರಗಿ ವಿಭಾಗದ ಘಟಕ-1ರಿಂದ ಸೆಪ್ಟೆಂಬರ್ 9ರವರೆಗೆ ಎಸಿ/ ಸ್ಪೀಪರ್ ಹಾಗೂ ನಾನ್ ಎಸಿ ಸ್ಲೀಪರ್ ಹೆಚ್ಚುವರಿ ಬಸ್‍ಗಳ ಕಾರ್ಯಾಚರಣೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
ಪ್ರತಿದಿನ ಕಲಬುರಗಿಯಿಂದ ಬೆಂಗಳೂರ ಕಡೆ ಹೊರಡುವ ಎಸಿ ಸ್ಲೀಪರ್ ಬಸ್ಸು ಕಲಬುರಗಿಯಿಂದ ಸಾಯಂಕಾಲ 7 ಗಂಟೆಗೆ ಹಾಗೂ ನಾನ್-ಎಸಿ ಸ್ಲೀಪರ್ ಬಸ್ಸು 7.47 ಗಂಟೆಗೆ ಹೊರಡಲಿದೆ. ಅದೇ ರೀತಿ ಪ್ರತಿದಿನ ಬೆಂಗಳೂರನಿಂದ ಕಲಬುರಗಿಗೆ ಕಡೆ ಹೊರಡುವ ಎಸಿ ಸ್ಲೀಪರ್ ಬಸ್ಸು ಬೆಂಗಳೂರಿನಿಂದ ರಾತ್ರಿ 8 ಗಂಟೆಗೆ ಹಾಗೂ ನಾನ್-ಎಸಿ ಸ್ಲೀಪರ್ ಬಸ್ಸು 9.30 ಗಂಟೆಗೆ ಹೊರಡಲಿದೆ. ಸಾರ್ವಜನಿಕ ಪ್ರಯಾಣಿಕರು ಸದರಿ ಹೆಚ್ಚುವರಿ ಬಸ್ಸುಗಳ ಸೌಲಭ್ಯವನ್ನು ಪಡೆದುಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶೇ. 64.38 ರಷ್ಟು ಮತದಾನ
*********************************************************************
ಕಲಬುರಗಿ,ಆ.31.(ಕ.ವಾ.)-ಕಲಬುರಗಿ ಜಿಲ್ಲೆಯ ಏಳು ತಾಲೂಕುಗಳ 168 ವಾರ್ಡುಗಳಿಗಾಗಿ ಇಂದು ನಡೆದ ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆಯಲ್ಲಿ ಶೇ. 64.38 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದ್ದಾರೆ.
ಚಿತ್ತಾಪುರ ತಾಲೂಕಿ ಶಹಾಬಾದ ನಗರಸಭೆಯ 27 ವಾರ್ಡುಗಳಿಗಾಗಿ ಇಂದು ನಡೆದ ಮತದಾನದಲ್ಲಿ 11743 ಪುರುಷರು, 12011 ಮಹಿಳೆಯರು ಹೀಗೆ ಒಟ್ಟು 23754 ಮತದಾರರು ಮತ ಚಲಾಯಿಸಿದ್ದು, ಶೇ. 53.22 ರಷ್ಟು ಮತದಾನವಾಗಿದೆ.
ಸೇಡಂ ತಾಲೂಕಿನ ಸೇಡಂ ಪುರಸಭೆಯ 23 ವಾರ್ಡುಗಳಿಗಾಗಿ ನಡೆದ ಮತದಾನದಲ್ಲಿ 10948 ಪುರುಷರು ಮತ್ತು 10557 ಮಹಿಳೆಯರು ಸೇರಿದಂತೆ ಒಟ್ಟು 21505 ಮತದಾರರು ಮತ ಚಲಾಯಿಸುವ ಮೂಲಕ ಶೇ. 67.51 ರಷ್ಟು ಮತದಾನ ದಾಖಲಿಸಿದ್ದಾರೆ.
ಚಿತ್ತಾಪುರ ತಾಲೂಕಿನ ಚಿತ್ತಾಪುರ ಪುರಸಭೆಯ 23 ವಾರ್ಡುಗಳಿಗಾಗಿ ನಡೆದ ಮತದಾನದಲ್ಲಿ 8677 ಪುರುಷರು ಮತ್ತು 8959 ಮಹಿಳೆಯರು ಸೇರಿದಂತೆ ಒಟ್ಟು 17436 ಮತದಾರರು ಮತ ಚಲಾಯಿಸಿದ್ದು, ಶೇ. 67.42 ರಷ್ಟು ಮತದಾನವಾಗಿದೆ.
ಆಳಂದ ತಾಲೂಕಿನ ಆಳಂದ ಪುರಸಭೆಯ 27 ವಾರ್ಡುಗಳಿಗಾಗಿ ನಡೆದ ಮತದಾನದಲ್ಲಿ 10881 ಪುರುಷರು, 10224 ಮಹಿಳೆಯರು ಹೀಗೆ ಒಟ್ಟು 21105 ಮತದಾರರರು ಮತ ಚಲಾಯಿಸಿ ಶೇ. 62.52 ರಷ್ಟು ಮತದಾನವಾಗಿದೆ.
ಜೇವರ್ಗಿ ತಾಲೂಕಿನ ಜೇವರ್ಗಿ ಪುರಸಭೆಯ 23 ವಾರ್ಡುಗಳಿಗಾಗಿ ನಡೆದ ಮತದಾನದಲ್ಲಿ 8017 ಪುರುಷರು ಹಾಗೂ 7960 ಮಹಿಳೆಯರು ಸೇರಿದಂತೆ ಒಟ್ಟು 15977 ಮತದಾರರು ಮತ ಚಲಾಯಿಸಿದ್ದಾರೆ. ಶೇ. 71.10 ರಷ್ಟು ಮತದಾನವಾಗಿದೆ.
ಚಿಂಚೋಳಿ ತಾಲೂಕಿನ ಚಿಂಚೋಳಿ ಪುರಸಭೆಯ 23 ವಾರ್ಡುಗಳಿಗಾಗಿ ನಡೆದ ಮತದಾನದಲ್ಲಿ 5071 ಪುರುಷ ಹಾಗೂ 4984 ಮಹಿಳೆಯರು ಹಾಗೂ ಓರ್ವ ಇತರರು ಹೀಗೆ ಒಟ್ಟು 10056 ಮತದಾರರು ಮತ ಚಲಾಯಿಸಿ ಶೇ. 70.44 ರಷ್ಟು ಮತದಾನವಾಗಿದೆ.
ಅಫಜಲಪುರ ತಾಲೂಕಿನ ಅಫಜಲಪುರ ಪುರಸಭೆಯ 22 ವಾರ್ಡುಗಳಿಗಾಗಿ ನಡೆದ ಮತದಾನದಲ್ಲಿ 7054 ಪುರುಷರು ಹಾಗೂ 6527 ಮಹಿಳೆಯರು ಸೇರಿದಂತೆ ಒಟ್ಟು 13581 ಮತದಾರರು ಮತ ಚಲಾಯಿಸಿ ಶೇ. 72.03 ರಷ್ಟು ಮತದಾನವಾಗಿದೆ. ಜಿಲ್ಲೆಯ ಏಳು ತಾಲೂಕುಗಳಲ್ಲಿ ಒಟ್ಟು 62391 ಪುರುಷರು ಹಾಗೂ 61022 ಮಹಿಳೆಯರು ಹಾಗೂ ಓರ್ವ ಇತರರು ಸೇರಿದಂತೆ ಒಟ್ಟು 123414 ಮತದಾರರು ಮತ ಚಲಾಯಿಸಿ ಶೇ. 64.38 ರಷ್ಟು ಮತದಾನ ದಾಖಲಿಸಿದ್ದಾರೆ.
ಲೋಕಾಯುಕ್ತ ಪೊಲೀಸ್ ಅಧೀಕ್ಷಕರ ಹುದ್ದೆಯ ಹೆಚ್ಚುವರಿ ಪ್ರಭಾರ ಸ್ವೀಕಾರ
ಕಲಬುರಗಿ,ಆ.31.(ಕ.ವಾ.)-ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರಾದ ಟಿ.ಜಿ. ದೊಡ್ಡಮನಿ ಅವರು ಕರ್ನಾಟಕ ಲೋಕಾಯುಕ್ತ ಕಲಬುರಗಿ ವಿಭಾಗೀಯ ಕಚೇರಿಯ ಪೊಲೀಸ್ ಅಧೀಕ್ಷಕರ ಹುದ್ದೆಯ ಹೆಚ್ಚುವರಿ ಪ್ರಭಾರ ವಹಿಸಿಕೊಂಡಿರುತ್ತಾರೆ. ಕಲಬುರಗಿ ಹಾಗೂ ಬೀದರ ಜಿಲ್ಲೆಗಳ ಸಾರ್ವಜನಿಕರು ತಮ್ಮ ದೂರು ಹಾಗೂ ಕುಂದುಕೊರತೆಗಳನ್ನು ನೇರವಾಗಿ ಸಲ್ಲಿಸಬಹುದಾಗಿದೆ. ಪೊಲೀಸ್ ಅಧೀಕ್ಷಕರವರ ಕಚೇರಿ, ಕರ್ನಾಟಕ ಲೋಕಾಯುಕ್ತ, ಐವಾನ್-ಇ-ಶಾಹಿ ಕಂಪೌಂಡ್ ಕಲಬುರಗಿ, ದೂರವಾಣಿ/ ಫ್ಯಾಕ್ಸ್ ಸಂಖ್ಯೆ 08472-263645/263745 ಇರುತ್ತದೆ ಎಂದು ಅವರು ತಿಳಿಸಿದ್ದಾರೆ.

ಹೀಗಾಗಿ ಲೇಖನಗಳು News Date: 31-8-2018
ಎಲ್ಲಾ ಲೇಖನಗಳು ಆಗಿದೆ News Date: 31-8-2018 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ News Date: 31-8-2018 ಲಿಂಕ್ ವಿಳಾಸ https://dekalungi.blogspot.com/2018/08/news-date-31-8-2018.html
0 Response to "News Date: 31-8-2018"
ಕಾಮೆಂಟ್ ಪೋಸ್ಟ್ ಮಾಡಿ