NEWS AND PHOTO DATE: 4-8-2018

NEWS AND PHOTO DATE: 4-8-2018 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು NEWS AND PHOTO DATE: 4-8-2018, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : NEWS AND PHOTO DATE: 4-8-2018
ಲಿಂಕ್ : NEWS AND PHOTO DATE: 4-8-2018

ಓದಿ


NEWS AND PHOTO DATE: 4-8-2018

ಸಡಗರದಿಂದ ಸ್ವಾತಂತ್ರ್ಯ ದಿನಾಚರಣೆ ಆಚರಣೆಗೆ ನಿರ್ಧಾರ
****************************************************
ಕಲಬುರಗಿ,ಆ.04.(ಕ.ವಾ.)-ಕಲಬುರಗಿ ನಗರದ ಡಿ.ಎ.ಆರ್. ಪೊಲೀಸ್ ಪರೇಡ್ ಮೈದಾನದಲ್ಲಿ ಆಗಸ್ಟ್ 15ರಂದು ದೇಶದ 72ನೇ ಸ್ವಾತಂತ್ರ್ಯ ದಿನವನ್ನು ಅತ್ಯಂತ ಸಡಗರದಿಂದ ಆಚರಿಸಲು ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಜರುಗಿದ ಸಭೆಯು ನಿರ್ಧಾರ ಕೈಗೊಂಡಿತು.
ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ ನೆರವೇರಿಸಲು ಹಾಗೂ ಧ್ವಜಾರೋಹಣ ಕಾರ್ಯಕ್ರಮಕ್ಕೆ ಜಿಲ್ಲೆಯ ಜನಪ್ರತಿನಿಧಿಗಳನ್ನು, ಗಣ್ಯರನ್ನು ಆಹ್ವಾನಿಸಲು ತಿಳಿಸಲಾಯಿತು.
ಅಂದು ಬೆಳಗಿನ 7 ಗಂಟೆಯಿಂದ 8-30 ಗಂಟೆಯೊಳಗೆ ಎಲ್ಲ ಸರ್ಕಾರಿ, ಸರ್ಕಾರದ ನಿಗಮ ಮಂಡಳಿ, ಸರ್ಕಾರಿ ಸ್ವಾಮ್ಯದ ಎಲ್ಲ ಕಚೇರಿಗಳಲ್ಲಿ ಹಾಗೂ ಎಲ್ಲ ಶಾಲಾ ಕಾಲೇಜುಗಳಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಎಲ್ಲ ಅಧಿಕಾರಿಗಳು, ಶಾಲಾ ಕಾಲೇಜು ಮಕ್ಕಳು ಪೊಲೀಸ್ ಪರೇಡ್ ಮೈದಾನಕ್ಕೆ 8-30 ಗಂಟೆಯೊಳಗೆ ಆಗಮಿಸಬೇಕು. ಜಿಲ್ಲಾಮಟ್ಟದ ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಆಗಮಿಸಿ ಹಾಜರಾತಿ ನೀಡಬೇಕೆಂದು ಸೂಚಿಸಲಾಯಿತು.
ಡಿಎಆರ್ ಮೈದಾನದಲ್ಲಿ ಆಗಸ್ಟ್ 15 ರಂದು ಬೆಳಿಗ್ಗೆ 9 ಗಂಟೆಗೆ ಜರುಗುವ ಸ್ವಾತಂತ್ರ್ಯ ದಿನಾಚರಣೆಯ ಸಾರ್ವಜನಿಕ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಆಕರ್ಷಕ ತ್ರೀವರ್ಣದ ಬಲೂನ್ ಹಾರಿಸುವ ವ್ಯವಸ್ಥೆ ಮಾಡಬೇಕು. ಆರೋಗ್ಯ, ತೋಟಗಾರಿಕೆ, ಪ್ರವಾಸೋದ್ಯಮ, ಅರಣ್ಯ, ಮಹಾನಗರಪಾಲಿಕೆ ಹಾಗೂ ಜಿಲ್ಲಾ ಪಂಚಾಯಿತಿಯಿಂದ ಸ್ತಬ್ಧ ಚಿತ್ರಗಳನ್ನು ನಿರ್ಮಿಸಬೇಕು. ಶಾಲಾ-ಕಾಲೇಜು ವಿದ್ಯಾರ್ಥಿಗಳು ನೀಡುವ ಸಾಂಸ್ಕøತಿಕ ಕಾರ್ಯಕ್ರಮದ ಜೊತೆಗೆ ಡಿ.ಎ.ಆರ್., ಕೆ.ಎಸ್.ಆರ್.ಪಿ. ಹಾಗೂ ಆಗ್ನಿಶಾಮಕದಳದಿಂದ ಆಕರ್ಷಕ ಕಾರ್ಯಕ್ರಮಗಳನ್ನು ನೀಡಬೇಕು. ಕಲಬುರಗಿ ಜಿಲ್ಲೆಯಾದ್ಯಂತ ಸ್ವಾತಂತ್ರ್ಯ ದಿನಾಚರಣೆಯಂದು ಪ್ಲಾಸ್ಟಿಕ್ ರಾಷ್ಟ್ರಧ್ವಜಗಳ ಬಳಕೆ ಮಾಡುವುದನ್ನು ನಿಯಮಾನುಸಾರ ನಿಷೇಧಿಸುವಂತೆ ಹಾಗೂ ಪ್ಲಾಸ್ಟಿಕ್ ರಾಷ್ಟ್ರಧ್ವಜ ಮಾರಾಟ ಮಾಡುವವರ ವಿರುದ್ಧವೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ನಗರದ ಎಲ್ಲ ಪ್ರಮುಖ ವೃತ್ತಗಳನ್ನು ಹಾಗೂ ಸರ್ಕಾರಿ ಕಚೇರಿಗಳಲ್ಲಿ ವಿದ್ಯುದ್ದೀಪಗಳಿಂದ ಅಲಂಕರಿಸಬೇಕು. ಸ್ವಾತಂತ್ರ್ಯ ದಿನಾಚರಣೆಯ ಬೆಳಗಿನ ಮುಖ್ಯ ಸಮಾರಂಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಮತ್ತು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು, ಎಸ್.ಎಸ್.ಎಲ್.ಸಿ., ಪಿ.ಯು.ಸಿ.ಯಲ್ಲಿ ಅತ್ಯಧಿಕ ಅಂಕ ಪಡೆದ, ಸಿ.ಇ.ಟಿ., ಎನ್.ಸಿ.ಸಿ. ವಿದ್ಯಾರ್ಥಿಗಳನ್ನು, ರಾಷ್ಟ್ರ ಮತ್ತು ರಾಜ್ಯಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿದ ಪ್ರತಿಭಾವಂತ ಕ್ರೀಡಾಪಟುಗಳನ್ನು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲು ಕ್ರಮ ಕೈಗೊಳ್ಳಬೇಕು. ಕಾರ್ಯಕ್ರಮಗಳಲ್ಲಿ ಸನ್ಮಾನಕ್ಕೆ ಬಳಸುವ ಅನುದಾನವನ್ನು ರೆಡ್‍ಕ್ರಾಸ್ ಸಂಸ್ಥೆಗೆ ನೀಡಬೇಕು. ಈ ಭಾಗದ ಬರಹಗಾರರನ್ನು ಉತ್ತೇಜಿಸಲು ಅವರು ಬರೆದಿರುವ ಪುಸ್ತಕಗಳನ್ನು ಸನ್ಮಾನಿತರಿಗೆ ನೀಡಬೇಕು. ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕಾಲೇಜು ಶಿಕ್ಷಣ ಇಲಾಖೆಯಿಂದ ಮಕ್ಕಳಿಗೆ ಸ್ವಾತಂತ್ರ್ಯ ದಿನಾಚರಣೆ ಕುರಿತು ಚರ್ಚಾ ಸ್ಪರ್ಧೆ ಹಮ್ಮಿಕೊಳ್ಳಬೇಕೆಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಮಹಾನಗರ ಪಾಲಿಕೆ ಆಯುಕ್ತ ರಘುನಂದನಮೂರ್ತಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ಲೋಖಂಡೆ ಸ್ನೇಹಲ್ ಸುಧಾಕರ, ಶಿಷ್ಟಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ, ಜಿಲ್ಲಾ ಮಟ್ಟದ ಇತರೆ ಅಧಿಕಾರಿಗಳು ಸಭೆಯ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ಸ್ವಾತಂತ್ರ್ಯ ದಿನಾಚರಣೆ ಸಭೆ: ಗೈರು ಹಾಜರಾದ ಅಧಿಕಾರಿಗಳಿಗೆ ನೋಟೀಸು
******************************************************************
ಕಲಬುರಗಿ,ಆ.04.(ಕ.ವಾ.)-ಸ್ವಾತಂತ್ರ್ಯ ದಿನಾಚರಣೆಯನ್ನು ಅಚ್ಟುಕಟ್ಟಾಗಿ ಹಾಗೂ ಸಂಭ್ರಮದಿಂದ ಆಚರಿಸಲು ಅನುಕೂಲವಾಗುವ ಹಾಗೆ ಪೂರ್ವಭಾವಿ ಸಿದ್ಧತೆಗಳನ್ನು ಕೈಗೊಳ್ಳಲು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಕರೆಯಲಾಗುತ್ತದೆ. ಸ್ವಾತಂತ್ರ್ಯ ದಿನಾಚರಣೆಯನ್ನು ಹಗುರವಾಗಿ ತಿಳಿದು ಪೂರ್ವಭಾವಿ ಸಿದ್ಧತಾ ಸಭೆಗೆ ಗೈರು ಹಾಜರಾದ 22 ಅಧಿಕಾರಿಗಳಿಗೆ ನೋಟೀಸು ಜಾರಿ ಮಾಡುವಂತೆ ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ತಿಳಿಸಿದರು.
ಅವರು ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ದಿನಾಚರಣೆಯ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಭಾರತ ದೇಶಕ್ಕೆ ಆಗಸ್ಟ್ 15ರಂದು ಸ್ವಾತಂತ್ರ್ಯ ದೊರೆತಿದೆ. ಸ್ವಾತಂತ್ರ್ಯ ದೊರೆತಿರುವುದರಿಂದಲೇ ಎಲ್ಲರೂ ತಮ್ಮ ಇಷ್ಟದಂತೆ ಹಾಗೂ ಗೌರವಯುತವಾಗಿ ಬದುಕುವಂತಾಗಿದೆ. ಸ್ವಾತಂತ್ರ್ಯ ದಿನಾಚರಣೆಯನ್ನು ಸರ್ಕಾರಿ ಅಧಿಕಾರಿಗಳು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು ಎಂದರು.
ಪೂರ್ವಭಾವಿ ಸಿದ್ಧತಾ ಸಭೆಗೆ ಗೈರು ಹಾಜರಾದ ಅಧಿಕಾರಿಗಳು ಯಾವುದೇ ಅನುಮತಿ ಪಡೆದಿಲ್ಲ. ಅವರಿಗೆ ನೋಟೀಸು ಜಾರಿ ಮಾಡುವುದಲ್ಲದೇ ನಾಳೆ ರವಿವಾರದಂದು ಬೆಳಿಗ್ಗೆ 10.30 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಂಡಿರುವ ಗೈರು ಹಾಜರಾದ ಅಧಿಕಾರಿಗಳ ಸಭೆಗೆ ಕಡ್ಡಾಯವಾಗಿ ಹಾಜರಾಗುವಂತೆ ಸೂಚಿಸಬೇಕು ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಮಹಾನಗರ ಪಾಲಿಕೆ ಆಯುಕ್ತ ರಘುನಂದನಮೂರ್ತಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ಲೋಖಂಡೆ ಸ್ನೇಹಲ್ ಸುಧಾಕರ, ಶಿಷ್ಟಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ, ಜಿಲ್ಲಾ ಮಟ್ಟದ ಇತರೆ ಅಧಿಕಾರಿಗಳು ಸಭೆಯ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ಇನ್ಸ್‍ಪೈರ್ ಆವಾರ್ಡ್:
**********************
ವಿದ್ಯಾರ್ಥಿಗಳ ನೋಂದಣಿಗೆ ಆಗಸ್ಟ್ 31 ಕೊನೆಯ ದಿನ
***********************************************
ಕಲಬುರಗಿ,ಆ.04.(ಕ.ವಾ.)-ಇನ್ಸ್‍ಫೈರ್ ಆವಾರ್ಡ್‍ಗೆ ಆಯ್ಕೆಯಾದ ಪ್ರತಿ ಮಗುವಿಗೆ ಮಾದರಿ ಸಿದ್ಧಪಡಿಸಲು ಮತ್ತು ವಿವಿಧ ಹಂತದ ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರಯಾಣ ವೆಚ್ಚ ಭರಿಸಲು 10,000 ರೂ.ಗಳ ವಿಶೇಷ ಅನುದಾನವನ್ನು ಕೇಂದ್ರ ಸರ್ಕಾರವು ಭರಿಸಲಿದೆ. ಜಿಲ್ಲೆಯಲ್ಲಿರುವ ಪ್ರತಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು 6,7,8,9 ಮತ್ತು 10ನೇ ತರಗತಿಯಲ್ಲಿ ಓದುತ್ತಿರುವ ಪ್ರತಿ ತರಗತಿಗೆ ಒಬ್ಬರಂತೆ ಕಡ್ಡಾಯವಾಗಿ ನೋಂದಣಿ ಮಾಡಬೇಕೆಂದು ಕಮಲಾಪುರದ ಡಯಟ್ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನಿರ್ದೇಶಕರು (ಅಭಿವೃದ್ಧಿ) ಮರ್ತುಳೆ ಶಶಿಕಾಂತ ಅವರು ತಿಳಿಸಿದ್ದಾರೆ.
ಬೆಂಗಳೂರಿನ ಡಿ.ಎಸ್.ಆರ್.ಟಿ. ನಿರ್ದೇಶನದಂತೆ 2018-19ನೇ ಸಾಲಿನಲ್ಲಿ 6 ರಿಂದ 10ನೇ ತರಗತಿಯಲ್ಲಿ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸಲು ಪ್ರತಿ ಶಾಲೆಯಿಂದ ಕನಿಷ್ಠ ಇಬ್ಬರು ವಿದ್ಯಾರ್ಥಿಗಳನ್ನು ಆನ್‍ಲೈನ್ ಮೂಲಕ ನೋಂದಣಿ ಮಾಡಲು ಈಗಾಗಲೇ ಸಂಬಂಧಿಸಿದ ಬ್ಲಾಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳು ಹಾಗೂ ಬ್ಲಾಕಿನ ಇನ್ಸ್‍ಫೈರ್ ಆವಾರ್ಡ ನೋಡಲ್ ಅಧಿಕಾರಿಗಳಿಗೆ ತಿಳಿಸಲಾಗಿದೆ.
ಅರ್ಹ ಮಕ್ಕಳಿಗೆ ನೋಂದಣಿ ಮಾಡಲು ಆಗಸ್ಟ್ 31 ಕೊನೆಯ ದಿನವಾಗಿದೆ. ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳ ಹೆಸರು ನೋಂದಣಿ ಮಾಡಲು ಮಗುವಿನ ಯೋಜನಾ ಮುಖ್ಯಾಂಶಗಳ ಸಾರಾಂಶದ ವಿವರ, ಫೋಟೋ, ಮಗುವಿನ ಬ್ಯಾಂಕ್ ಖಾತೆಯ ವಿವರ ತೆಗೆದುಕೊಂಡು ಸಂಬಂಧಿಸಿದ ಬಿ.ಆರ್.ಸಿ. ಕೇಂದ್ರದಲ್ಲಿ ನೋಂದಣಿ ಮಾಡುವುದು ಕಡ್ಡಾಯವಾಗಿದೆ. ಹೆಚ್ಚಿನ ಮಾಹಿತಿಗಾಗಿ ಉಪನ್ಯಾಸಕರು ಹಾಗೂ ಜಿಲ್ಲಾ ಇನ್ಸ್‍ಫೈರ್ ಆವಾರ್ಡ್ ನೋಡಲ್ ಅಧಿಕಾರಿ ಶಿವಾನಂದ ರೆಡ್ಡಿ ಅವರ ಮೊಬೈಲ್ ಸಂಖ್ಯೆ 8105055824, 6361439699ಗಳನ್ನು ಸಂಪರ್ಕಿಸಲು ಕೋರಲಾಗಿದೆ.
ಆಫ್‍ಲೈನ್ ಮೂಲಕ ಐಟಿಐ ಪ್ರವೇಶ: ಅರ್ಜಿ ಆಹ್ವಾನ.
**********************************************
ಕಲಬುರಗಿ,ಆ.04.(ಕ.ವಾ.)-ಪ್ರಸಕ್ತ 2018-19ನೇ ಶೈಕ್ಷಣಿಕ ಸಾಲಿನ ಐಟಿಐ ಪ್ರವೇಶಕ್ಕಾಗಿ ಜಿಲ್ಲೆಯಲ್ಲಿನ ಸರ್ಕಾರಿ ಮತ್ತು ಖಾಸಗಿ ಅನುದಾನಿತ ಸಂಸ್ಥೆಗಳಲ್ಲಿ ಖಾಲಿ ಇರುವ ಸೀಟುಗಳಿಗಾಗಿ ಎಸ್.ಎಸ್.ಎಲ್.ಸಿ/ ಸಪ್ಲಿಮೆಂಟರಿ (ಪೂರಕ ಪರೀಕ್ಷೆ)s-2018 ಯಲ್ಲಿ ಪಾಸಾಗಿರುವ ಅರ್ಹ ವಿದ್ಯಾರ್ಥಿಗಳಿಂದ ಆಫ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಎಸ್.ಎನ್. ಪಂಚಾಳ ಅವರು ತಿಳಿಸಿದ್ದಾರೆ.
ಈ ಕಾಸುವೆಲ್ ಸುತ್ತಿಗಾಗಿ ಹೊಸದಾಗಿ ಅರ್ಜಿ ಸಲ್ಲಿಸುವವರು ಮತ್ತು ಈಗಾಗಲೇ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿ ಪ್ರವೇಶ ಸಿಗದೇ ಇರುವ ಅಭ್ಯರ್ಥಿಗಳು ಸಹ ಪ್ರವೇಶ ಬಯಿಸಿದ್ದಲ್ಲಿ ಆಫ್‍ಲೈನ್ ಮೂಲಕ ತಮಗೆ ಇಚ್ಛೆಯಿರುವ ಹತ್ತಿರದ ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಸಂಸ್ಥೆಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಖಾಲಿ ಉಳಿದಿರುವ ಸೀಟುಗಳಿಗೆ ಮಾತ್ರ ಮೆರಿಟ್ ಆಧಾರದ ಮೇಲೆ ಪ್ರವೇಶಕ್ಕೆ ಅವಕಾಶವಿರುತ್ತದೆ. ಅರ್ಜಿ ಸಲ್ಲಿಸಲು ಆಗಸ್ಟ್ 13 ಕೊನೆಯ ದಿನವಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ದೂರವಾಣಿ ಸಂಖ್ಯೆ 08472-278611ನ್ನು ಸಂಪರ್ಕಿಸಲು ಕೋರಲಾಗಿದೆ.
ರಾಜ್ಯ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
******************************
ಕಲಬುರಗಿ,ಆ.04.(ಕ.ವಾ.)-ಪ್ರಸಕ್ತ 2018-19ನೇ ಸಾಲಿಗೆ ವಿವಿಧ ಕ್ಷೇತ್ರಗಳಲ್ಲಿ (ಶಿಕ್ಷಣ, ಸಾಹಿತ್ಯ, ಕಲೆ, ಕಾನೂನು, ಪ್ರತಿಭೆ/ಕ್ರೀಡೆ, ಸಮಾಜ ಸೇವೆ) ಗಣನೀಯ ಸೇವೆ ಸಲ್ಲಿಸಿದ ಹಿರಿಯ ನಾಗರಿಕರಿಗೆ 6 ವೈಯಕ್ತಿಕ ಪ್ರಶಸ್ತಿ ಹಾಗೂ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ 01 ಸಂಸ್ಥೆಗೆ ಸಾಂಸ್ಥಿಕ ಪ್ರಶಸ್ತಿ ಸೇರಿದಂತೆ ಒಟ್ಟು 07 ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಇದಕ್ಕಾಗಿ ಕಲಬುರಗಿ ಜಿಲ್ಲೆಯ ಹಿರಿಯ ನಾಗರಿಕರು ಮತ್ತು ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಉತ್ತಮ ಕಾರ್ಯನಿರ್ವಹಿಸಿದ ಅರ್ಹ ಸಂಸ್ಥೆಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.
ನಿಗದಿತ ಅರ್ಜಿ ನಮೂನೆಯನ್ನು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯಯ ನಾಗರಿಕರ ಸಬಲೀಕರಣ ಇಲಾಖೆ, ಕಲಬುರಗಿ ಕಚೇರಿಯಿಂದ ಪಡೆದು ಭರ್ತಿ ಮಾಡಿ ಸದರಿ ಕಚೇರಿಯಲ್ಲಿ ಆಗಸ್ಟ್ 9 ರೊಳಗಾಗಿ ಸಲ್ಲಿಸಬೇಕು. 2018ರ ಅಕ್ಟೋಬರ್ 1 ರಂದು ನಡೆಯುವ ವಿಶ್ವ ಹಿರಿಯ ನಾಗರಿಕರ ದಿನಾಚರಣೆ 2018ರ ಸಂದರ್ಭದಲ್ಲಿ ಈ ರಾಜ್ಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಕ್ಫ್ ಮಂಡಳಿಯ ಚುನಾವಣೆ
*************************
ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಸೂಚನೆ
*********************************************************
ಕಲಬುರಗಿ,ಆ.04.(ಕ.ವಾ.)-ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ನಾಲ್ಕು ಮತಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ಮತದಾರರ ಪಟ್ಟಿ ತಯಾರಿಕೆ ಕುರಿತು ಆಗಸ್ಟ್ 3ರಂದು ಅಧಿಸೂಚನೆ ಹೊರಡಿಸಿದ್ದು, ಅರ್ಹ ವ್ಯಕ್ತಿಗಳು ವಕ್ಫ್ ಮಂಡಳಿಯ ಮತದಾರರಾಗಿ ಹೆಸರು ನೋಂದಣಿ ಮಾಡಿಕೊಳ್ಳಬೇಕೆಂದು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಹಾಗೂ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಚುನಾವಣೆಯ ಮತದಾರರ ನೋಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿಗೆ ಅರ್ಜಿ ಸಲ್ಲಿಸಲು ಆಗಸ್ಟ್ 9 ಕೊನೆಯ ದಿನವಾಗಿದೆ. ಸೆಪ್ಟೆಂಬರ್ 10 ರಂದು ಕರುಡು ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ. ಹಕ್ಕು/ ಆಕ್ಷೇಪಣೆಗಳನ್ನು ಸೆಪ್ಟೆಂಬರ್ 11 ರಿಂದ 25ರವರೆಗೆ ಸಲ್ಲಿಸಬಹುದಾಗಿದೆ. ಕರ್ನಾಟಕ ವಕ್ಫ್ ನಿಯಮ 13(ಸಿ) ರಂತೆ ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 17 ರಂದು ಪ್ರಕಟಿಸಲಾಗುವುದು.
ಕರ್ನಾಟಕ ರಾಜ್ಯದ ಲೋಕಸಭೆ/ರಾಜ್ಯಸಭೆಯ ಮುಸ್ಲಿಂ ಸದಸ್ಯರುಗಳು, ಕರ್ನಾಟಕ ವಿಧಾನಸಭೆ/ವಿಧಾನ ಪರಿಷತ್ತಿನ ಮುಸ್ಲಿಂ ಸದಸ್ಯರುಗಳು, ಕರ್ನಾಟಕ ಬಾರ್ ಕೌನ್ಸಿಲ್‍ನ ಮುಸ್ಲಿಂ ಸದಸ್ಯರುಗಳು, ಒಂದು ಲಕ್ಷ ರೂ. ಮತ್ತು ಅದಕ್ಕಿಂತ ಹೆಚ್ಚು ವಾರ್ಷಿಕ ಆದಾಯವುಳ್ಳ ವಕ್ಫ್ ಮುತವಲ್ಲಿಗಳು, ಕರ್ನಾಟಕ ರಾಜ್ಯದ ಲೋಕಸಭೆ/ರಾಜ್ಯಸಭೆಯ ಮುಸ್ಲಿಂ ಮಾಜಿ ಸದಸ್ಯರುಗಳು, ಕರ್ನಾಟಕ ವಿಧಾನಸಭೆ/ವಿಧಾನ ಪರಿಷತ್‍ನ ಮುಸ್ಲಿಂ ಮಾಜಿ ಸದಸ್ಯರುಗಳು ಹಾಗೂ ಕರ್ನಾಟಕ ಬಾರ್ ಕೌನ್ಸಿಲ್‍ನ ಮುಸ್ಲಿಂ ಮಾಜಿ ಸದಸ್ಯರುಗಳು ಮತದಾರರಾಗಿ ಹೆಸರು ನೋಂದಾಯಿಸಿಕೊಳ್ಳಲು ಅರ್ಹರಿರುತ್ತಾರೆ ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಗೆ 25.55 ಕೋಟಿ ರೂ.ಗಳ ನಿವ್ವಳ ಲಾಭ
*******************************************************************
ಕಲಬುರಗಿ,ಆ.04.(ಕ.ವಾ.)-ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯು 2017-18ನೇ ಹಣಕಾಸು ವರ್ಷದಲ್ಲಿ ನಿವ್ವಳ ಲಾಭ ಗಳಿಸಿದೆ. ಸಂಸ್ಥೆಯು ತನ್ನ ಹಣಕಾಸಿನ ಸ್ಥಿತಿಗತಿಗಳನ್ನು ಕ್ರೋಢೀಕರಿಸಿ ಮಾರ್ಚ್ 2018ರ ಅಂತ್ಯದವರೆಗೆ ಒಟ್ಟು 25.55 ಕೋಟಿ ರೂ.ಗಳ ನಿವ್ವಳ ಲಾಭ ದಾಖಲಿಸಿದೆ ಎಂದು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.
ಕಳೆದ ವರ್ಷ ಜಾರಿಗೊಂಡ ಸರಕು ಸೇವಾ ತೆರಿಗೆ ಹಾಗೂ ಅನಾಣ್ಯೀಕರಣಗಳ ಪರಿಣಾಮಗಳ ನಡುವೆಯೂ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯು ಧನಾತ್ಮಕ ಬೆಳವಣಿಗೆಯನ್ನು ದಾಖಲಿಸಿದೆ. ಸಂಸ್ಥೆಯು ಮಂಜೂರಾತಿಯಲ್ಲಿ ಅಲ್ಪ ಪ್ರಮಾಣದ ಸುಧಾರಣೆಯನ್ನು ಸಾಧಿಸಿದ್ದರೂ ಕೂಡ ಕರ್ನಾಟಕ ಸರ್ಕಾರದ ನೆರವಿನಿಂದಾಗಿ, 842.13 ಕೋಟಿ ರೂ.ಗಳ ಸಾಲ ಮಂಜೂರಾತಿ, 561.21 ಕೋಟಿ ರೂ.ಗಳ ಸಾಲ ವಿತರಣೆ, ಹಾಗೂ 781.91 ಕೋಟಿ ರೂ.ಗಳ ಸಾಲ ವಸೂಲಾತಿಯನ್ನು ಮಾಡಿದೆ. ಸಂಸ್ಥೆಯ ವತಿಯಿಂದ ಮಹಿಳಾ ಉದ್ದಿಮೆದಾರರಿಗೆ 200.84 ಕೋಟಿ ರೂ.ಗಳ ಹಣಕಾಸಿನ ನೆರವನ್ನು ನೀಡಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಉದ್ದಿಮೆದಾರರಿಗೆ 269.20 ಕೋಟಿ ರೂ.ಗಳು ಹಾಗೂ ಮೊದಲ ಪೀಳಿಗೆ ಉದ್ದಿಮೆದಾರರಿಗೆ 77.95 ಕೋಟಿ ರೂ.ಗಳ ಹಣಕಾಸಿನ ನೆರವನ್ನು ನೀಡಿದೆ.
2018-19ನೇ ಸಾಲಿನ ಮುನ್ನೋಟ:ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯು ಪ್ರಸಕ್ತ 2018-19ನೇ ಸಾಲಿನಲ್ಲಿ 1000 ಕೋಟಿ ರೂ.ಗಳ ಸಾಲ ಮಂಜೂರಾತಿ., 800 ಕೋಟಿ ರೂ.ಗಳ ಸಾಲ ವಿತರಣೆ ಹಾಗೂ 740 ಕೋಟಿ ರೂ.ಗಳ ಸಾಲ ವಸೂಲಾತಿಯ ಗುರಿಯನ್ನು ಹೊಂದಿದೆ.
ಪ್ರಸ್ತುತ ವರ್ಷ 2018-19ನೇ ಸಾಲಿನ ಕರ್ನಾಟಕ ಸರ್ಕಾರದ ಆಯವ್ಯಯದಲ್ಲಿ ಪ್ರಕಟಿಸಿರುವಂತೆ ಕೆ.ಎಸ್.ಎಫ್.ಸಿ. ಮುಖಾಂತರ ಸಾಲ ಪಡೆಯುವ ಅತಿ ಸಣ್ಣ ಮತ್ತು ಸಣ್ಣ ಪ್ರಮಾಣದ ತಯಾರಿಕಾ ಕೈಗಾರಿಕಾ ಘಟಕಗಳ ಉದ್ದಿಮೆದಾರರಿಗೆ ಸಾಲದ ಮೊದಲ ಕಂತನ್ನು ಬಿಡುಗಡೆ ಮಾಡಿದ ದಿನಾಂಕದಿಂದ 5 ವರ್ಷಗಳ ಅವಧಿಗೆ ಶೇ. 10ರಷ್ಟು ಬಡ್ಡಿ ಸಹಾಯಧನದ ಸೌಲಭ್ಯ ಕಲ್ಪಿಸಲಾಗಿದೆ.
ನೂತನ ಯೋಜನೆಗಳನ್ನು ಪರಿಚಯಿಸಿರುವುದರಿಂದ ಪ್ರಸ್ತುತ ಯೋಜನೆಗಳ ಬಗೆಗಿನ ಮೃದು ಧೋರಣೆ/ ಸಡಿಲಿಕೆಯಿಂದಾಗಿ, ಮಹಿಳಾ ಉದ್ದಿಮೆದಾರರ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉದ್ದಿಮೆದಾರರ ಯೋಜನೆಗಳ ಬಡ್ಡಿದರದಲ್ಲಿನ ಕಡಿತದಿಂದಾಗಿ ಸಂಸ್ಥೆಯ ವತಿಯಿಂದ ವ್ಯವಹಾರ ಅಭಿವೃದ್ಧಿ ಸಭೆಗಳನ್ನು ನಡೆಸಲು ಹಣಕಾಸು ವರ್ಷ-2018-19 ಹೆಚ್ಚು ಸೂಕ್ತವಾಗಿದೆ. ರಾಜ್ಯದಾದ್ಯಂತ ವ್ಯವಹಾರ ಅಭಿವೃದ್ಧಿ ಸಭೆಗಳ ಮೂಲಕ ಸುಧಾರಿತ ಸೇವೆಗಾಗಿ, ಸ್ನೇಹಿ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಸಂಸ್ಥೆಯು ತನ್ನ ಕಾರ್ಯಾಚರಣೆಯಲ್ಲಿ ದಕ್ಷತೆಯನ್ನು ಹೆಚ್ಚಿಸಲು ರಾಜ್ಯದ ಸಂಭಾವ್ಯ ಸ್ಥಳಗಳಲ್ಲಿ ವ್ಯಾಪಾರವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ವ್ಯವಹಾರ ಅಭಿವೃದ್ಧಿ ಸಭೆಗಳನ್ನು ನಡೆಸುತ್ತಿದೆ. ಪ್ರಸ್ತುತ ಸಾಲಿನಲ್ಲಿ ‘ಪೂರಕ ಭದ್ರತಾ ಖಾತರಿ ಯೋಜನೆ’ ಹಾಗೂ ಜವಳಿ ಉದ್ದಿಮೆಗಳನ್ನು ಸ್ಥಾಪಿಸಲು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಉದ್ದಿಮೆದಾರರಿಗೆ ವಿಶೇಷ ಯೋಜನೆಯನ್ನು ಜಾರಿಗೊಳಿಸಿರುವುದು ಸಹ ಸಂಸ್ಥೆಯು ತನ್ನ ಕಾರ್ಯಾಚರಣೆಯಲ್ಲಿ ಮಹತ್ವದ ತಿರುವನ್ನು ಪಡೆಯುವಲ್ಲಿ ಸಹಕಾರಿಯಾಗಲಿದೆ.
ಪ್ರಸ್ತುತ ವರ್ಷ 2018-19ನ್ನು “ವಿತರಣೆಯ ವರ್ಷ” ಎಂದು ಘೋಷಿಸುವುದರೊಂದಿಗೆ ಬದ್ಧತೆಯ ನೆರವೇರಿಕೆಯಲ್ಲಿ ಬೆಳವಣಿಗೆಯನ್ನು ಕಾಣುವ ಗುರಿಯನ್ನು ಹೊಂದಿದೆ. ಅಷ್ಟೇ ಅಲ್ಲದೇ, ಪ್ರಸ್ತುತ ವರ್ಷವನ್ನು “ವಸೂಲಾಗದ ಸಾಲಗಳ ವಿಶ್ಲೇಷಣಾ ವರ್ಷ” (ಆ-III, Posಣ-ಒoU & ಠಿಡಿe-ಒoU) ಎಂದು ಘೋಷಿಸಿ ಸಂಸ್ಥೆಯ ಉತ್ತಮವಲ್ಲದ ಸಾಲಗಳ ಪೋರ್ಟ್‍ಪೋಲಿಯೋ (ಅಧಿಕಾರ ಕ್ಷೇತ್ರ) ವನ್ನು ಶುದ್ಧೀಕರಿಸುವ ಕಾರ್ಯಕ್ಕೆ ಪ್ರಚೋದನೆಯನ್ನು ನೀಡಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಗಸ್ಟ್ 5 ಹಾಗೂ 6ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
******************************************************
ಕಲಬುರಗಿ,ಆ.04.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗದಿಂದ ಆಗಸ್ಟ್ 5ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ 11 ಕೆವಿ. ಕೆ.ಐ.ಎ.ಡಿ.ಬಿ. ಫಸ್ಟ್ ಸ್ಟೇಜ್ ಫೀಡರ ವ್ಯಾಪ್ತಿಯಲ್ಲಿ ಹಾಗೂ ಆಗಸ್ಟ್ 6ರಂದು ಬೆಳಿಗ್ಗೆ 10 ರಿಂದ ಸಾಯಂಕಾಲ 4 ಗಂಟೆಯವರೆಗೆ 11ಕೆ.ವಿ. ಮಹಾವೀರನಗರ, ಜಯನಗರ, ಹೌಸಿಂಗ್ ಬೋರ್ಡ್ ಕಾಲೋನಿ ಫೀಡರಗಳ ಮೇಲೆ ನಿರ್ವಹಣಾ ಕಾರ್ಯ ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸದರಿ ಕೇಂದ್ರದ ಮೇಲೆ ಬರುವ ಫೀಡರ್ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.
11ಕೆ.ವಿ. ಕೆ.ಐ.ಎ.ಡಿ.ಬಿ. ಫಸ್ಟ್ ಸ್ಟೇಜ್ ಫೀಡರ್: ಕಪನೂರ ಇಂಡಸ್ಟ್ರಿಯಲ್ ಏರಿಯಾ, ಪಸ್ಟ್ ಸ್ಟೇಜ್, ಕಪನೂರ ಎಸ್ಸಿ ಓಣಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
11 ಕೆ.ವಿ. ಮಹಾವೀರ ನಗರ ಫೀಡರ್: ಮಹಾವೀರನಗರ, ಶಾಸ್ತ್ರೀನಗರ, ಹನುಮಾನ ನಗರ, ಪಂಚಶೀಲ ನಗರ, ವೆಂಕಟೇಶನಗರ .ಕೆ.ಇ.ಬಿ.ಸ್ಟೋರ್, ಕೆ.ಇ.ಬಿ.ಕ್ವಾರ್ಟರ್ಸ್, ಪಿ.ಡಬ್ಲ್ಯೂಡಿ ಕಚೇರಿ, ಅಮಲ್‍ವಾಡಿ ಸ್ಟೇಶನ್ ಬಜಾರ್ ಅಪ್ಪÀರ ಲೆನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
11ಕೆ.ವಿ. ಜಯನಗರ ಫೀಡರ್: ಆರಿಹಂತ್‍ನಗರ ಜಯನಗರ, ಓಕಳಿಕ್ಯಾಂಪ್, ಬಸವೇಶ್ವರ ಆಸ್ಪತ್ರೆ, ಸರ್ಕಾರಿ ಸೂರ್ಯನಗರ, ತಿಲಕನಗರ್. ತೇಲಕರ ಲೇಔಟ್, ಪೂಜಾ ಕಾಲೋನಿ, ಜಿ.ಡಿ.ಎ.ಲೇಔಟ್, ವಿಶ್ವೇಶ್ವರಯ್ಯ ಕಾಲೋನಿ, ಆಂಜನೇಯ ನಗರ, ಕೆ.ಜಿ.ಬಿ ಬ್ಯಾಂಕ್, ಪ್ರಶಾಂತನಗರ(ಎ) ಮತ್ತು ಡೆಂಟಲ್ ಕಾಲೇಜ್, ಮತ್ತು ಸುತ್ತಮುತ್ತಲಿನ ಪ್ರದೇಶಗಳು.
11ಕೆ.ವಿ ಹೌಸಿಂಗ್ ಬೋರ್ಡ್ ಕಾಲೋನಿ ಫೀಡರ್: ಎನ್.ಜಿ.ಓ. ಕಾಲೋನಿ. ಪಿ.ಎನ್‍ಟಿ ಕಾಲೋನಿ. ಸಿದ್ದೇಶ್ವರ ಕಲ್ಯಾಣ ಮಂಟಪ, ದತ್ತ ನಗರ ಬಿದ್ದಾಪುರ ಬಾಗ್ಯವಂತಿ ನಗರ, ಗಾಬ್ರೇ ಲೇಔಟ್, ಮೋಹನನಗರ, ಹೌಸಿಂಗ್ ಬೋರ್ಡ ಕಾಲೋನಿ (ಪಿ ಆಂಡ್ ಟಿ) ಮತ್ತು ಸುತ್ತಮುತ್ತಲಿನ ಪ್ರದೇಶಗಳು.



ಹೀಗಾಗಿ ಲೇಖನಗಳು NEWS AND PHOTO DATE: 4-8-2018

ಎಲ್ಲಾ ಲೇಖನಗಳು ಆಗಿದೆ NEWS AND PHOTO DATE: 4-8-2018 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ NEWS AND PHOTO DATE: 4-8-2018 ಲಿಂಕ್ ವಿಳಾಸ https://dekalungi.blogspot.com/2018/08/news-and-photo-date-4-8-2018.html

Subscribe to receive free email updates:

0 Response to "NEWS AND PHOTO DATE: 4-8-2018"

ಕಾಮೆಂಟ್‌‌ ಪೋಸ್ಟ್‌ ಮಾಡಿ