ಶೀರ್ಷಿಕೆ : News and photo Date: 03-08-2018
ಲಿಂಕ್ : News and photo Date: 03-08-2018
News and photo Date: 03-08-2018
ಮಧ್ಯಸ್ಥಿಕೆದಾರರು ಸಮಾನ ಮನಸ್ಥಿತಿ ಹೊಂದಬೇಕು
**********************************************
--ನ್ಯಾ. ಎಲ್.ನಾರಾಯಣಸ್ವಾಮಿ
******************************
ಕಲಬುರಗಿ,ಆ.03.(ಕ.ವಾ.)-ನ್ಯಾಯಾಲಯದಿಂದ ಬಗೆಹರಿಯದ ಕೆಲವೊಂದು ಪ್ರಕರಣಗಳು ಮಧ್ಯಸ್ಥಿಕೆ ಕೇಂದ್ರದಿಂದ ಇತ್ಯರ್ಥಗೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ಮಧ್ಯಸ್ಥಿಕೆದಾರರು ಯಾವುದೇ ಪಕ್ಷಗಾರರ ಪರ ವಿರೋಧ ನಿಲುವು ತಾಳದೆ ಸಮಾನ ಮನಸ್ಥಿತಿ ಹೊಂದುವುದು ಇಲ್ಲಿ ಅವಶ್ಯಕ ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ರಾಜ್ಯ ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ ಅಭಿಪ್ರಾಯಪಟ್ಟ್ಟರು.
ಅವರು ಶುಕ್ರವಾರ ಕಲಬುರಗಿ ಜಿಲ್ಲಾ ನ್ಯಾಯಾಲಯ ಸಮುಚ್ಛಯದ ಎ.ಡಿ.ಆರ್. ಬಿಲ್ಡಿಂಗ್‍ನಲ್ಲಿ ಬೆಂಗಳೂರು ಹಾಗೂ ಕಲಬುರಗಿ ಜಿಲ್ಲಾ ಮಧ್ಯಸ್ಥಿಕೆ ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ “ಮಧ್ಯಸ್ಥಿಕೆದಾರರಿಗೆ ಮೂರು ದಿನಗಳ ಪುನರ್‍ಮನನ್ ತರಬೇತಿ” ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ರಾಜಿ ಸಂಧಾನ ಮೂಲಕ ಸಮಸ್ಯೆಗಳಿಗೆ ಇತಿಶ್ರೀ ಹಾಡುವ ಮಧ್ಯಸ್ಥಿಕೆದಾರರಿಗೆ ಯಾವುದೇ ಶಬ್ದ ಜ್ಞಾನ, ತೋಳ್ಬಲ ಬೇಕಿಲ್ಲ ಆದರೆ ಪಕ್ಷಗಾರರನ್ನು ಮಾನವೀಯತೆಯಿಂದ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷಗಾರರ ಒಳಿತಿಗಾಗಿಯೆ ಹಾಗೂ ಸಮಯ ಮತ್ತು ಆರ್ಥಿಕ ವೆಚ್ಚ ಉಳಿಸಲೆಂದೆ ಮಧ್ಯಸ್ಥಿಕೆ ಕೇಂದ್ರ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಅವರನ್ನು ಮನಗಾಣಿಸಬೇಕು. ಮಧ್ಯಸ್ಥಿಕೆದಾರರು ಯಾರು ಸರಿ, ತಪ್ಪು ಎಂಬುದು ನಿರ್ಧರಿಸುವುದನ್ನು ಬಿಟ್ಟು ಪ್ರಕರಣದ ವಾಸ್ತವ ಸ್ಥಿತಿಯನ್ನು ಇಬ್ಬರಿಗೆ ಮನದಟ್ಟಾಗುವಂತೆ ಹೇಳಿ ಕಾನೂನಿನ ಬಗ್ಗೆಯೂ ಅರಿವು ನೀಡಿ ಒಂದು ಸಾಮಾನ್ಯ ಪರಿಹಾರಕ್ಕೆ ಬರುವಂತೆ ತಿಳಿಸಿ ಪಕ್ಷಗಾರರೆ ಸ್ವತ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಮುಕ್ತ ಅವಕಾಶದ ವೇದಿಕೆ ಕಲ್ಪಿಸಬೇಕು ಎಂದರು.
ಪ್ರತಿಯೊಬ್ಬ ವ್ಯಕ್ತಿ ತನ್ನ ವೈಯಕ್ತಿಕ ಹಾಗೂ ಕೌಟುಂಬಿಕ ಸಮಸ್ಯೆಗಳಲ್ಲಿ ಭಿನ್ನಾಭಿಪ್ರಾಯ ಹೊಂದಿರುತ್ತಾನೆ. ಸಾವಿರಾರು ಪ್ರಕರಣಕ್ಕೆ ಕಾನೂನು ಚೌಕಟ್ಟಿನಲ್ಲಿ ಪರಿಹಾರ ಕಲ್ಪಿಸುವ ನ್ಯಾಯಾಧೀಶರಿಗೆ ಕೆಲವೊಮ್ಮೆ ಜಟೀಲ ಪ್ರಕರಣಗಳು ಮುಂದೆ ಬಂದಾಗ ಅದನ್ನು ಮಧ್ಯಸ್ಥಿಕೆ ಕೇಂದ್ರಕ್ಕು ವಹಿಸುವುದುಂಟು. ಹೀಗಾಗಿ ಮಧ್ಯಸ್ಥಿಕೆದಾರರು ಸಮಾನ ಮನಸ್ಥಿತಿಯಿಂದ ಯಾವುದೇ ಫಲಾಪೇಕ್ಷವಿಲ್ಲದೆ ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸಬೇಕು ಎಂದರು.
ಕರ್ನಾಟಕ ಉಚ್ಛನ್ಯಾಯಾಲಯದ ನ್ಯಾಯಾಧೀಶರು ಹಾಗೂ ಕಲಬುರಗಿ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರಾದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಮಾತನಾಡಿ ಮಧ್ಯಸ್ಥಿಕೆದಾರರು ಮತ್ತು ಅವರ ವಕೀಲರನ್ನು ಮೊದಲು ವಿಶ್ವಾಸಕ್ಕೆ ತೆಗೆದುಕೊಂಡು ಅವರನ್ನು ಕುಟುಂಬದ ಸದಸ್ಯರಂತೆ ಕಾಣಬೇಕು. ಕಾನೂನು ಕಟ್ಟಳೆಗಳಲ್ಲಿ ಸಡಿಲಿಕೆ ಮಾಡಿಕೊಂಡು ಪಕ್ಷಗಾರರಿಗೆ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಳ್ಳಲು ಇಲ್ಲಿ ಅವಕಾಶ ಮಾಡಿಕೊಡಬೇಕು. ಆಗ ಪಕ್ಷಗಾರರಲ್ಲಿಯೆ ಪರಿಹಾರಕ್ಕೆ ಮೂಡುವ ಸಮಾನ ವಿಷಯಗಳ ಬಗ್ಗೆ ಹೆಚ್ಚು ಕೇಂದ್ರೀಕರಿಸಿ ಒತ್ತು ನೀಡಿ ಅದರ ಬಗ್ಗೆ ತಿಳಿಹೇಳಬೇಕು. ಅದಕ್ಕಿಂತ ಹೆಚ್ಚಾಗಿ ಪಕ್ಷಗಾರರಿಗೆ ತತ್ವಜ್ಞಾನಿಯಾಗಿ, ಮಾರ್ಗದರ್ಶಕರಾಗಿ, ಸ್ಬೇಹಿತರಾಗಿ ಕಾರ್ಯನಿರ್ವಹಿಸವುದು ಬಹಳ ಮುಖ್ಯ ಎಂದ ಅವರು ಒಟ್ಟಿನಲ್ಲಿ ಮಧ್ಯಸ್ಥಿಕೆ ಪ್ರಕ್ರಿಯೆ ಮುಕ್ತ ಅನಿಸಿಕೆಗೆ ಅವಕಾಶ ನೀಡಿ ಯಾವುದು ಸರಿ ಎಂದು ಹೇಳಿ ಪರಿಹಾರ ಕಂಡುಕೊಳ್ಳುವಂತಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ನ್ಯಾಯಾವಾದಿಗಳ ಸಂಘದ ಅಧ್ಯಕ್ಷ ಆರ್.ಕೆ.ಹಿರೇಮಠ, ಬೆಂಗಳೂರಿನ ಮೀಡಿಯೇಷನ್ ಸೆಂಟರಿನ ಮಾಸ್ಟರ್ ಟ್ರೇನರ್ಸ್ ಆಂಡ್ ಕೋ-ಆರ್ಡಿನೇಟರ್ ಸುಶೀಲಾ ಎಸ್., ಟ್ರೇನರ್‍ಗಳಾದ ಭರತ ಕುಮಾರ ಮೆಹತಾ, ಜೊಯ್ ಜೊಸೇಫ್, ಉಪನಿರ್ದೇಶಕ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಮಾಕಾಂತ ಚವ್ಹಾಣ, ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಕಾಶಿನಾಥ ಮೋತಕಪಲ್ಲಿ, ಲೋಕ ಅದಾಲತ್ ಅಧ್ಯಕ್ಷ ಎಸ್.ಎಂ.ಪಾಟೀಲ ಸೇರಿದಂತೆ ಕಲಬುರಗಿ ಜಿಲ್ಲಾ ನ್ಯಾಯಾಲಯದ ವಿವಿಧ ಶ್ರೇಣಿಯ ಹಿರಿಯ ಕಿರಿಯ ನ್ಯಾಯಧೀಶರು ಭಾಗವಹಿಸಿದ್ದರು. ಕಲಬುರಗಿ ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಪಿ.ಟಿ. ಕಟ್ಟಿಮನಿ ಸ್ವಾಗತಿಸಿದರೆ ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಆರ್.ಮಾಣಿಕ್ಯ ನಿರೂಪಿಸಿ ವಂದಿಸಿದರು.

ಮೂರು ದಿನಗಳ ಪುನರ್‍ಮನನ ತರಬೇತಿ ಕಾರ್ಯಾಗಾರದಲ್ಲಿ ಕಲಬುರಗಿ, ಬೀದರ ಮತ್ತು ಯಾದಗಿರಿ ಜಿಲ್ಲೆಯ ನ್ಯಾಯಾವಾದಿಗಳು ಹಾಗೂ ಮಧ್ಯಸ್ಥಿಕೆದಾರರು ಭಾಗವಹಿಸಿದ್ದರು.
ಆಗಸ್ಟ್ 4ರಂದು ಹೋಬಳಿ ಮಟ್ಟದ ಜನಸ್ಪಂದನ ಸಭೆಗಳು
**************************************************
ಕಲಬುರಗಿ,ಆ.03.(ಕ.ವಾ.)-ಕಲಬುರಗಿ ಜಿಲ್ಲೆಯ ವಿವಿಧ ತಾಲೂಕಿನ ಗ್ರಾಮಗಳಲ್ಲಿ ಇದೇ ಆಗಸ್ಟ್ 4ರಂದು ಬೆಳಿಗ್ಗೆ 11 ಗಂಟೆಗೆ ಜನಸ್ಪಂದನ ಸಭೆಗಳನ್ನು ನಡೆಸಲಾಗುವುದು ಎಂದು ಹೆÀಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ತಿಳಿಸಿದ್ದಾರೆ. ತಾಲೂಕುವಾರು ನಡೆಯುವ ಜನಸ್ಪಂದನಗಳ ಹೋಬಳಿ, ಗ್ರಾಮ ಮತ್ತು ಸಭೆ ಸ್ಥಳಗಳ ವಿವರ ಇಂತಿದೆ.
ಕಲಬುರಗಿ-ಮಹಾಗಾಂವ ಹೋಬಳಿಯ ಕುರಿಕೋಟಾ ಗ್ರಾಮ ಪಂಚಾಯತ್ ಕಾರ್ಯಾಲಯ. ಆಳಂದ-ನಿಂಬರ್ಗಾ ಹೋಬಳಿಯ ಧುತ್ತರಗಾಂವ ಗ್ರಾಮ ಪಂಚಾಯತ್ ಕಾರ್ಯಾಲಯ. ಅಫಜಲಪುರ-ಆತನೂರ ಹೋಬಳಿಯ ಅಂಕಲಗಾ ಗ್ರಾಮ ಪಂಚಾಯಿತಿ ಕಾರ್ಯಾಲಯ. ಜೇವರ್ಗಿ-ನೆಲೋಗಿ ಹೋಬಳಿಯ ಕಲ್ಲೂರ(ಕೆ) ಸಂಬಂಧಿಸಿದಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯಂಕಂಚಿಯಲ್ಲಿ, ಸೇಡಂ-ಮುಧೋಳ ಹೋಬಳಿಯ ರಿಬ್ಬನಪಲ್ಲಿ ಗ್ರಾಮ ಪಂಚಾಯತ್ ಕಾರ್ಯಾಲಯ. ಚಿತ್ತಾಪುರ-ಕಾಳಗಿ ಹೋಬಳಿಯ ಗೋಟೂರ ಗ್ರಾಮ ಪಂಚಾಯತ್ ಕಾರ್ಯಾಲಯ. ಚಿಂಚೋಳಿ-ಐನಾಪುರ ಹೋಬಳಿಯ ಗುರಂಪಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣ.

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಚಾರಗೋಷ್ಠಿ-ನಾಟಕ ಸ್ಪರ್ಧೆ
***********************************************************
ಕಲಬುರಗಿ,ಆ.03.(ಕ.ವಾ.)-ಕಲಬುರಗಿ ಜಿಲ್ಲಾ ಶಿಕ್ಷಣ ಹಾಗೂ ತರಬೇತಿ ಸಂಸ್ಥೆಯಿಂದ ಪ್ರಸಕ್ತ 2018-19ನೇ ಸಾಲಿಗೆ ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕವಾಗಿ ಮನೋಭಾವ ಬೆಳೆಸಿಕೊಳ್ಳಲು ಅನುಕೂಲವಾಗುವಂತೆ ವಿಜ್ಞಾನಕ್ಕೆ ಸಂಬಂಧಿಸಿದಂತೆ ವಿಜ್ಞಾನ ವಿಚಾರಗೋಷ್ಠಿ, ವಿಜ್ಞಾನ ನಾಟಕ ಸ್ಪರ್ಧೆ ಮತ್ತು ವಿಜ್ಞಾನ ವಸ್ತು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಕಲಬುರಗಿ ಕಮಲಾಪುರ ಡಯಟ್‍ನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನಿರ್ದೇಶಕರು (ಅಭಿವೃದ್ಧಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಮೊದಲು ಶಾಲಾ ಹಂತದಲ್ಲಿ ವಿಜ್ಞಾನ ಚಟುವಟಿಕೆಗಳನ್ನು ಏರ್ಪಡಿಸಿ ಇದರಲ್ಲಿ ವಿಜೇತರಾದ ಮಕ್ಕಳನ್ನು ತಾಲೂಕು ಮಟ್ಟದ ಸ್ಪರ್ಧೆಗಳಿಗೆ ಕಳುಹಿಸಬೇಕು. ತಾಲೂಕು ಮಟ್ಟದಲ್ಲಿ ಆಯೋಜಿಸುವ ವಿಜ್ಞಾನ ಚಟುವಟಿಕೆಗಳ ದಿನಾಂಕದ ವಿವರ ಇಂತಿದೆ. ಆಗಸ್ಟ್ 20 ರೊಳಗಾಗಿ ವಿಜ್ಞಾನ ವಿಚಾರಗೋಷ್ಠಿ ಮತ್ತು ವಿಜ್ಞಾನ ನಾಟಕ ಹಾಗೂ ಆಗಸ್ಟ್ 28ರೊಳಗಾಗಿ ವಿಜ್ಞಾನ ವಸ್ತು ಪ್ರದರ್ಶನ ಆಯೋಜಿಸಬೇಕು.
ಕಾರ್ಯಕ್ರಮ ನೋಡಲ್ ಅಧಿಕಾರಿಗಳಾದ ಕಮಲಾಪುರ ಡಯಟ್ ಉಪನ್ಯಾಸಕ ಗುಂಡಪ್ಪಾ ಹುಡುಗೆ (ಮೊಬೈಲ್ ಸಂಖ್ಯೆ 9901529016) ಅವರು ಕೈಗಾರಿಕೆ ಕ್ರಾಂತಿ: ನಾವು ತಯಾರಾಗಿದ್ದೇವೆಯೇ ಎಂಬ ವಿಷಯ ಕುರಿತು ವಿಜ್ಞಾನ ವಿಚಾರ ಗೋಷ್ಠಿ ಆಯೋಜಿಸಬೇಕು. ಅದೇ ರೀತಿ ಇನ್ನೋರ್ವ ನೋಡಲ್ ಅಧಿಕಾರಿಯಾದ ಡಯಟ್ ಕಮಲಾಪುರ ಉಪನ್ಯಾಸಕ ಕರಬಸಪ್ಪ ಮೇತ್ರೆ (ಮೊಬೈಲ್ ಸಂಖ್ಯೆ 9036691762) ಅವರು ಡಿಜಿಟಲ್ ಭಾರತ, ಸ್ವಚ್ಛತೆ, ಆರೋಗ್ಯ ಮತ್ತು ನೈರ್ಮಲ್ಯ, ಹಸಿರು ಮತ್ತು ಶುದ್ಧ ಶಕ್ತಿ, ಪರಿಸರ ಸಂರಕ್ಷಣೆ ವಿಜ್ಞಾನ ನಾಟಕವನ್ನು ಆಯೋಜಿಸಬೇಕು.
ಕಾರ್ಯಕ್ರಮ ನೋಡಲ್ ಅಧಿಕಾರಿಯಾದ ಡಯಟ್ ಉಪನ್ಯಾಸಕ ಶಿವಾನಂದ ರೆಡ್ಡಿ (ಮೊಬೈಲ್ ಸಂಖ್ಯೆ 6361439699) ಅವರು ವಿಜ್ಞಾನ ವಸ್ತು ಪ್ರದರ್ಶನವನ್ನು ಆಯೋಜಿಸಬೇಕು. ಜೀವನದ ಸವಾಲುಗಳಿಗೆ ವೈಜ್ಞಾನಿಕ ಪರಿಹಾರ ವಸ್ತು ಪ್ರದರ್ಶನದ ಮುಖ್ಯ ವಿಷಯವಾಗಿದೆ. ವ್ಯವಸಾಯ ಮತ್ತು ಸಾವಯವ ಕೃಷಿ, ಆರೋಗ್ಯ ಮತ್ತು ನೈರ್ಮಲ್ಯ, ಸಂಪನ್ಮೂಲ ನಿರ್ವಹಣೆ, ತ್ಯಾಜ್ಯ ನಿರ್ವಹಣೆ, ಸಾರಿಗೆ ಮತ್ತು ಸಂಪರ್ಕ (ಸಂವಹನ) ಹಾಗೂ ಗಣಿತ ಶಾಸ್ತ್ರದಿಂದ ವಿನ್ಯಾಸಗೊಳಿಸುವಿಕೆ ಉಪವಿಷಯಗಳಾಗಿವೆ.
ಜಿಲ್ಲೆಯ ಅಧೀನಕ್ಕೊಳಪಡುವ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರೌಢಶಾಲೆಗಳ ಮಕ್ಕಳಿಗೆ ಈ ವಿಜ್ಞಾನ ಚುಟವಟಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಂಬಂಧಪಟ್ಟ ಶಾಲೆಯ ಮುಖ್ಯೋಪಾಧ್ಯಾಯರು ಕ್ರಮ ವಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ಆ ತಾಲೂಕಿನ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಬೇಕೆಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದು, ಯುವ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಅನ್ವೇಷಣೆ ಮತ್ತು ವಿಶ್ಲೇಷಣಾತ್ಮಕ ಪ್ರವೃತ್ತಿಯನ್ನು ಜಾಗೃತಿಗೊಳಿಸುವುದು, ಅರಳುತ್ತಿರುವ ವಿಜ್ಞಾನಿಗಳಿಗೆ ವಿಚಾರ ವಿನಿಮಯಕ್ಕೆ ವೇದಿಕೆ ಸೃಷ್ಠಿಸುವುದು, ದೇಶದ ಎಲ್ಲ ಯುವ ಪ್ರತಿಭೆಗಳಲ್ಲಿ ರಾಷ್ಟ್ರೀಯ ಐಕ್ಯತಾ ಭಾವನೆ ಬೆಳೆಸುವುದು ಹಾಗೂ ಮೂಢನಂಬಿಕೆಗಳು ಮತ್ತು ಕಂದಾಚಾರಗಳನ್ನು ಹೋಗಲಾಡಿಸುವ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ಈ ವಿಜ್ಞಾನ ಚುಟುವಟಿಕೆ ಕಾರ್ಯಕ್ರಮದ ಉದ್ದೇಶವಾಗಿದೆ.

ಆಗಸ್ಟ್ 10ರಂದು ಶಿಶಿಕ್ಷು ತರಬೇತಿಗೆ ಆಯ್ಕೆ ಮಾಡಲು ಮೌಖಿಕ ಸಂದರ್ಶನ
******************************************************************
ಕಲಬುರಗಿ,ಆ.03.(ಕ.ವಾ.)-ಶಿಶಿಕ್ಷು ಕಾಯ್ದೆ–1961 ರನ್ವಯ ವಿವಿಧ ತಾಂತ್ರಿಕ/ ಗಣಕೀಕೃತ ವೃತ್ತಿಗಳಲ್ಲಿ 2018ರ ಆಗಸ್ಟ್ 15 ರಿಂದ ಅಕ್ಟೋಬರ್ 15ರವರೆಗೆ ಅಧಿವೇಶನಕ್ಕಾಗಿ ವಿವಿಧ ವೃತ್ತಿಯ 87 ಸ್ಥಾನಗಳಿಗೆ ಶಿಶಿಕ್ಷು ತರಬೇತಿದಾರರನ್ನು ಆಯ್ಕೆ ಮಾಡಲು 2018ರ ಆಗಸ್ಟ್ 10ರಂದು ಬೆಳಗಿನ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಕಲಬುರಗಿಯ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗ-1ರ ಕಚೇರಿಯಲ್ಲಿ ಅರ್ಹ ಅಭ್ಯರ್ಥಿಗಳಿಗೆ ಮೌಖಿಕ ಸಂದರ್ಶನ ನಡೆಯಲಿದೆ ಎಂದು ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
ಫಿಟ್ಟರ್-11 ಸ್ಥಾನ, ಆಟೋ ಎಲೆಕ್ಟ್ರಿಶಿಯನ್-18, ವೆಲ್ಡರ್-03, ಮೋಟಾರು ಮೆಕ್ಯಾನಿಕ್ ವಹಿಕಲ್-13, ಡಿಸೇಲ್ ಮೆಕ್ಯಾನಿಕ್-15 ಖಾಲಿಯಿರುವ ಸ್ಥಾನಗಳಿಗೆ ತರಬೇತಿ ಪಡೆಯಲು ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ. ಮತ್ತು ಐಟಿಐ ವೃತ್ತಿಯಲ್ಲಿ ತೇರ್ಗಡೆಯಾಗಿರಬೇಕು. ಪಾಸಾ-14 ಸ್ಥಾನಗಳಿಗೆ ತರಬೇತಿ ಪಡೆಯಲು ಪಿಯುಸಿ ಮತ್ತು ಐಟಿಐ ಕೋಪಾ ವೃತ್ತಿಯಲ್ಲಿ ತೇರ್ಗಡೆಯಾಗಿರಬೇಕು. ಶೀಟ್ ಮೆಟಲ್ ವರ್ಕ್-13 ಖಾಲಿಯಿರುವ ಸ್ಥಾನಗಳಿಗೆ ತರಬೇತಿ ಪಡೆಯಲು ಎಸ್.ಎಸ್.ಎಲ್.ಸಿ. ಮತ್ತು ಐಟಿಐ ವೃತ್ತಿಯಲ್ಲಿ ತೇರ್ಗಡೆಯಾಗಿರಬೇಕು. ಅಭ್ಯರ್ಥಿಯು 2018ರ ಆಗಸ್ಟ್ 10ಕ್ಕೆ ಕನಿಷ್ಠ 18ವರ್ಷ ಪೂರ್ಣಗೊಂಡಿರಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1, ಮಾಜಿ ಸೈನಿಕರ ಅಭ್ಯರ್ಥಿಗಳಿಗೆ 40ವರ್ಷ, 2ಎ,2ಬಿ,3ಎ ಮತ್ತು 3ಬಿ ವರ್ಗದ ಅಭ್ಯರ್ಥಿಗಳಿಗೆ 38ವರ್ಷ ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳು 35 ವರ್ಷ ಮೀರಬಾರದು.
ಮೌಖಿಕ ಸಂದರ್ಶನಕ್ಕೆ ಹಾಜರಾಗುವ ಎಲ್ಲಾ ಅರ್ಹ ಅಭ್ಯರ್ಥಿಗಳು ಕಡ್ಡಾಯವಾಗಿ ತಮ್ಮ ಹೆಸರಿನಲ್ಲಿ ಇ-ಮೇಲ್ ಐಡಿ ಹೊಂದಿರಬೇಕು. ಅರ್ಜಿ ನಮೂನೆಯಂತೆ ಬಿಳಿ ಹಾಳೆಯಲ್ಲಿ ಭರ್ತಿ ಮಾಡಿದ ಅರ್ಜಿಯೊಂದಿಗೆ ಎಸ್.ಎಸ್.ಎಲ್.ಸಿ. ಅಂಕಪಟ್ಟಿ, ಐಟಿಐ ಅಂಕಪಟ್ಟಿ, ಜಾತಿ ಪ್ರಮಾಣಪತ್ರ, ಆಧಾರ ಕಾರ್ಡ, ಪಾಸಪೋರ್ಟ್ ಅಳತೆಯ 2 ಭಾವಚಿತ್ರ, ಅಭ್ಯರ್ಥಿಯ ಹೆಸರಿನಲ್ಲಿರುವ ಇ-ಮೇಲ್ ವಿಳಾಸ, ಆಧಾರ ಕಾರ್ಡ ಲಿಂಕ್ ಮಾಡಿದ ಬ್ಯಾಂಕ್ ಖಾತೆಯ ದಾಖಲಾತಿಳೊಂದಿಗೆ ಮೇಲ್ಕಂಡ ದಿನದಂದು ಸ್ವಂತ ಖರ್ಚಿನಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು. ನೇಮಕಾತಿಯ ಷರತ್ತು ಮತ್ತು ನಿಬಂಧನೆ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಭಾಗ-1ರ ಕಚೇರಿಯನ್ನು ಅಥವಾ ದೂರವಾಣಿ ಸಂಖ್ಯೆ 08472-221598ಗಳನ್ನು ಸಂಪರ್ಕಿಸಿ ಪಡೆಯಲು ಕೋರಲಾಗಿದೆ.

ಆಗಸ್ಟ್ 4ರಂದು ಕುರಿಕೋಟಾ ಗ್ರಾಮದಲ್ಲಿ ಜನಸ್ಪಂದನ ಸಭೆ
****************************************************
ಕಲಬುರಗಿ,ಆ.03.(ಕ.ವಾ.)-ಕಲಬುರಗಿ ತಾಲೂಕಿನ ಮಹಾಗಾಂವ ಹೋಬಳಿಯ ಕುರಿಕೋಟಾ ಗ್ರಾಮದ ಗ್ರಾಮ ಪಂಚಾಯತಿ ಆವರಣದಲ್ಲಿ ಇದೇ ಆಗಸ್ಟ್ 4ರಂದು ಬೆಳಿಗ್ಗೆ 11 ಗಂಟೆಗೆ ಜನಸ್ಪಂದನ ಏರ್ಪಡಿಸಲಾಗಿದೆ ಎಂದು ಕಲಬುರಗಿ ತಹಸೀಲ್ದಾರರು ತಿಳಿಸಿದ್ದಾರೆ.
ಕುರಿಕೋಟಾ ಗ್ರಾಮ ಪಂಚಾಯತಿಗೊಳಪಟ್ಟ ಜನಪ್ರತಿನಿಧಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ತಪ್ಪದೇ ಖುದ್ದಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಕೋರಿದ್ದಾರೆ.

ವಸತಿ ನಿಲಯ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
***************************************
ಕಲಬುರಗಿ,ಆ.03.(ಕ.ವಾ.)-ಕಲಬುರಗಿ ತಾಲೂಕಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ 2018-19ನೇ ಸಾಲಿಗೆ ಸ್ನಾತಕೋತ್ತರ ಬಾಲಕ/ಬಾಲಕಿಯರ ವಸತಿ ನಿಲಯ ಪ್ರವೇಶಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ತಾಲೂಕು ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿಗಳು ತಿಳಿಸಿದ್ದಾರೆ.
ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ ಜನಾಂಗದ ಅಭ್ಯರ್ಥಿಗಳಿಗೆ ಶೇ. 75ರಷ್ಟು ಹಾಗೂ ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಶೇ. 25 ರಷ್ಟು ಸ್ಥಾನಗಳನ್ನು ಮೀಸಲಿಡಲಾಗಿದೆ. ವಿದ್ಯಾರ್ಥಿಗಳು ಸರ್ಕಾರಿ ಅಥವಾ ಅಂಗೀಕೃತ ಶಾಲೆ/ ಕಾಲೇಜುಗಳಲ್ಲಿ ಸ್ನಾತಕೋತ್ತರ ತರಗತಿಗಳಲ್ಲಿ ಅಭ್ಯಾಸ ಮಾಡುತ್ತಿರಬೇಕು.
ಅವಶ್ಯಕ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಲು ಆಗಸ್ಟ್ 24 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ತಾಲೂಕಿನ ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿಗಳ ಕಾರ್ಯಾಲಯವನ್ನು ಹಾಗೂ ಬಾಲಕರ ವಸತಿ ನಿಲಯ ಕುರಿತು ಮೊಬೈಲ್ ಸಂಖ್ಯೆ 8217355571 ಹಾಗೂ ಬಾಲಕಿಯರ ವಸತಿ ನಿಲಯ ಕುರಿತು ಮೊಬೈಲ್ ಸಂಖ್ಯೆ 7259557749ನ್ನು ಸಂಪರ್ಕಿಸಲು ಕೋರಲಾಗಿದೆ.

ತಾಯಿಯ ಎದೆ ಹಾಲು ಅಮೃತಕ್ಕೆ ಸಮಾನ
**************************************
ಕಲಬುರಗಿ,ಆ.03.(ಕ.ವಾ.)-ತಾಯಿಯ ಎದೆ ಹಾಲು ಅಮೃತಕ್ಕೆ ಸಮಾನಾಗಿದ್ದು, ಅದಕ್ಕಿಂತ ಉತ್ತಮ ಆಹಾರ ಬೇರೆ ಇಲ್ಲ. ತಾಯಿ ಹಾಲು ಸೇವಿಸುವುದರಿಂದ ಮಗುವಿನ ದೈಹಿಕ, ಮಾನಸಿಕ ಬೆಳವಣಿಗೆಯಾಗುವುದಲ್ಲದೇ ಪೋಷಕಾಂಶಗಳು ಸಿಗುತ್ತದೆ ಎಂದು ಮಹಾನಗರ ಪಾಲಿಕೆ ಸದಸ್ಯರಾದ ಹುಲಿಗೆಪ್ಪ ಕನಕಗಿರಿ ಅವರು ಹೇಳಿದರು.
ಗುರುವಾರ ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಕಲಬುರಗಿ ನಗರ ವತಿಯಿಂದ ಕಲಬುರಗಿ ನಗರದ ಪಂಚಶೀಲನಗರ ಸಮುದಾಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ಡಾ. ಮಂಗಲಾ ಮಾತನಾಡಿದರು. ವಲಯದ ಮೇಲ್ವಿಚಾರಕಿ ಮಾತನಾಡಿ, ತಾಯಿಯ ಹಾಲಿನಲ್ಲಿ ರೋಗನಿರೋಧಕ ಶಕ್ತಿ ಹೊಂದಿರುತ್ತದೆ. ಈ ಹಾಲಿನಲ್ಲಿ ಮಗುವಿಗೆ ಬೇಕಾಗುವ ಅಗತ್ಯ ಪ್ರೋಟಿನಾಂಶವಿರುತ್ತದೆ. ಇದಲ್ಲದೇ ಮಗುವಿಗೆ ತಪ್ಪದೇ ಎಲ್ಲ ಚುಚ್ಚುಮದ್ದು (ಲಸಿಕೆ) ಹಾಕಿಸಬೇಕೆಂದು ತಿಳಿಸಿದರು. ಅಂಗನವಾಡಿ ಕಾರ್ಯಕರ್ತೆ ರೇಣುಕಾ ಸ್ವಾಗತಿಸಿದರೆ ಮೇಲ್ವಿಚಾರಕಿ ವಿಲಾಸಮತಿ ಕಾರ್ಯಕ್ರಮ ನಿರೂಪಿಸಿದರು.

ಜುಲೈ 4ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
********************************************
ಕಲಬುರಗಿ,ಆ.03.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗದಿಂದ 11 ಕೆವಿ. ಗೋದುತಾಯಿ ನಗರ, ಐ.ಟಿ. ಪಾರ್ಕ್, ಆದರ್ಶನಗರ ಹಾಗೂ ಶಾಂತಿನಗರ ಫೀಡರಗಳ ಮೇಲೆ ತುರ್ತು ನಿರ್ವಹಣಾ ಕಾರ್ಯ ಕೈಗೆತ್ತಿಕೊಂಡಿರುವ ಪ್ರಯುಕ್ತ ಆಗಸ್ಟ್ 4ರಂದು ಬೆಳಿಗ್ಗೆ 10 ರಿಂದ ಸಾಯಂಕಾಲ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸದರಿ ಕೇಂದ್ರದ ಮೇಲೆ ಬರುವ ಫೀಡರ್ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.
11 ಕೆ.ವಿ. ಗೋದುತಾಯಿ ನಗರ ಫೀಡರ್: ಸಿ.ಐ.ಬಿ ಕಾಲೋನಿ, ಶಕ್ತಿ ನಗರ, ಗೋದುತಾಯಿ ನಗರ, ಭಾಗ್ಯವಂತಿ ನಗರ, ಜಿ.ಡಿ.ಏ ಲೇಔಟ್, ಘಾಟಗೇ ಲೇಔಟ್, ಧರಿಯಾಪೂರ, ರೆಹಮತ್ ನಗರ, ಪಿ.ಡಬ್ಲೂ.ಡಿ. ಕ್ವಾರ್ಟರ್ಸ್, ಎನ್.ಜಿ.ಓ ಕಾಲೋನಿ (ರೈಲ್ವೆ ಟ್ರ್ಯಾಕ್), ದತ್ತ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
11ಕೆ.ವಿ. ಐ.ಟಿ.ಪಾರ್ಕ್ ಫೀಡರ್: ಸಂತೋಷ ಕಾಲೋನಿ, ವರ್ಗಿಸ್ ಅಪಾರ್ಟ್‍ಮೆಂಟ್, ಮಾಣಿಕ ಪ್ರಭು ಕಾಲೋನಿ, ಐ.ಟಿ.ಪಾರ್ಕ್, ನಂದಗೋಕುಲ ಮತ್ತು ಜಯತೀರ್ಥ ಕಲ್ಯಾಣ ಮಂಟಪ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
11 ಕೆ.ವಿ ಆದರ್ಶನಗರ ಫೀಡರ್: ಶಿವಾಜಿ ನಗರ, ಅಬುಬಕ್ಕರ್ ಕಾಲೋನಿ, ಕೆ.ಹೆಚ್.ಬಿ. ಕಾಲೋನಿ, ಒಕ್ಕಲ್ಗೇರಾ, ಬಿಲಾಲಾಬಾದ, ಕೆ.ಬಿ.ಎನ್. ಇಂಜಿನಿಯರಿಂಗ್ ಕಾಲೇಜ, ಇಸ್ಲಾಮಾಬಾದ, ಕೆ.ಸಿ.ಟಿ. ಪಾಲಿಟೆಕ್ನಿಕ, ಖಮರ್ ಕಾಲೋನಿ ಮತ್ತು ಎಸ್.ಬಿ.ಹೆಚ್. ಕಾಲೋನಿ. ಖಾಜಾ ಕಾಲೋನಿ, ಇ.ಬಿ ರಾಜ, ಮದೀನಾ ಕಾಲೋನಿ, ಶಾಲಿಮಾರ ಫಂಕ್ಷನ್ ಹಾಲ್ ಪ್ರದೇಶ, ಧನಗರ ಗಲ್ಲಿ ನೂರಬಾಗ್, ಸೈಯ್ಯದ್ ಗಲ್ಲಿ, ಖಾಜಾ ಬಂದೇ ನವಾಜ ದರ್ಗಾ ಹಾಗೂ ಸುತ್ತ ಮುತ್ತಲಿನ ಏರಿಯಾ, ಐಯರವಾಡಿ ಹಳೆ ಮತ್ತು ಹೊಸ ಖಾಲಿ ಗುಮಜ್ ಪ್ರದೇಶ, ಖಾಲಾ ಗೊಡಾ ಪ್ರದೇಶ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
11 ಕೆ.ವಿ. ಶಾಂತಿ ನಗರ ಫೀಡರ್: ಎಮ್.ಎಸ್.ಕೆ ಮಿಲ್ ಗೇಟ್, ಅಶೋಕನಗರ, ಶಾಂತಿನಗರ, ವಿದ್ಯಾನಗರ, ಕೆ.ಹೆಚ್.ಬಿ. ಕಾಂಪ್ಲೇಕ್ಸ್, ಪೋಲಿಸ್ ಕ್ವಾರ್ಟರ್ಸ್, ಕೆ.ಎಸ್. ಆರ್.ಟಿ.ಸಿ.ಕ್ವಾರ್ಟರ್ಸ್, ಬೋರಾಬಾಯಿ ನಗರ, ಬಸವ ನಗರ, ಹೀರಾ ನಗರ, ಹಿರಾಪುರ, ಭೀಮ ನಗರ, ಮಿಸಬಾ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ಸ್ಕೇಟಿಂಗ್ ರಿಂಕ್ ನಿರ್ಮಿಸಲು ನಿರ್ಧಾರ
**********************************************************************
ಕಲಬುರಗಿ,ಆ.03.(ಕ.ವಾ.)- ಕಲಬುರಗಿ ನಗರದ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ಸ್ಕೇಟಿಂಗ್ ರಿಂಕ್ ನಿರ್ಮಿಸಲು ಜಿಲ್ಲಾ ಕ್ರೀಡಾಂಗಣ ಸಮಿತಿ ನಿರ್ಧರಿಸಿದೆ ಎಂದು ಪ್ರಾದೇಶಿಕ ಆಯುಕ್ತ ಹಾಗೂ ಹೆಚ್.ಕೆ.ಆರ್.ಡಿ.ಬಿ. ಕಾರ್ಯದರ್ಶಿ ಸುಬೋದ ಯಾದವ ತಿಳಿಸಿದರು.
ಅವರು ಶುಕ್ರವಾರ ಇಲ್ಲಿನ ಪ್ರಾದೇಶಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಕ್ರೀಡಾಂಗಣ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಹೆಚ್.ಕೆ.ಆರ್.ಡಿ.ಬಿ ಮಂಡಳಿಯಿಂದ 20 ಲಕ್ಷ ರೂ. ಹಾಗೂ ಉಳಿದ 20 ಲಕ್ಷ ರೂ. ಅನುದಾನವನ್ನು ಸ್ಥಳೀಯ ಶಾಸಕರು ಹಾಗೂ ಸಂಸದರ ಸ್ಥಳೀಯ ಪ್ರದೆಶಾಭಿವೃದ್ಧಿ ಅನುದಾನದಿಂದ ಹಾಗೂ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಅನುದಾನ ಪಡೆದು ಸ್ಕೇಟಿಂಗ್ ರಿಂಕ್ ನಿರ್ಮಿಸಲಾಗುವುದು ಎಂದರು.
ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ಫುಟ್‍ಬಾಲ್ ಮತ್ತು ಕ್ರಿಕೆಟ್ ಪ್ರತ್ಯೇಕ ಆಟದ ಮೈದಾನದ ಕೊರತೆಯಿರುವ ಹಿನ್ನೆಲೆಯಲ್ಲಿ ಈಜುಕೊಳ ಹಿಂದುಗಡೆ ಲೋಕೋಪಯೋಗಿ ಇಲಾಖೆಗೆ ಸೇರಿದ 7 ಎಕರೆ ನಿವೇಶನ ಲಭ್ಯವಿದ್ದು, ಅದನ್ನು ಕ್ರೀಡಾ ಇಲಾಖೆಗೆ ಪಡೆದು ಅಲ್ಲಿ ಕ್ರಿಕೆಟ್ ಮತ್ತು ಫುಟ್‍ಬಾಲ್ ಮೈದಾನ ನಿರ್ಮಿಸಬಹುದಾಗಿದೆ. ಸದರಿ 7 ಎಕರೆ ಜಮೀನನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಉಚಿತವಾಗಿ ನೀಡಲು ಲೋಕೋಪಯೋಗಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ. ಇದಲ್ಲದೆ ನಗರದ ಬಡೇಪುರ ಪ್ರದೇಶದ ವಿರೇಂದ್ರ ಪಾಟೀಲ್ ಬಡಾವಣೆಯಲ್ಲಿ ಲಭ್ಯವಿರುವ 2.75 ಎಕರೆ ಜಮೀನಿನಲ್ಲಿ ಕ್ರಿಕೆಟ್ ಪ್ರ್ಯಾಕ್ಟಿಸ್ ಪಿಚ್ ಮತ್ತು ವಿವಿಧ ಕ್ರೀಡಾ ಸೌಲಭ್ಯ ನಿರ್ಮಿಸಲಾಗುವುದು ಎಂದು ಸುಬೋದ ಯಾದವ ತಿಳಿಸಿದರು.
ಇತ್ತೀಚಿಗೆ ಕ್ರೀಡಾಂಗಣದಲ್ಲಿನ ಮಕ್ಕಳ ಈಜುಕೊಳ ದುರಸ್ತಿ ಮಾಡಿದರೂ ಸಹ ಈಜುಕೊಳದಲ್ಲಿನ ನೀರು ಸೋರಿಕೆಯಾಗುತ್ತಿದ್ದು, ಕೂಡಲೆ ಒಂದು ವಾರದೊಳಗೆ ದುರಸ್ತಿ ಮಾಡಬೇಕು. ಕ್ರೀಡಾಂಗಣದಲ್ಲಿ ನೀರಿನ ಓವರ ಹೆಡ್ ಟ್ಯಾಂಕ್ ನಿರ್ಮಿಸಲಾಗಿದೆ ಆದರೆ ಪೈಪ್‍ಲೈನ್ ಸಂಪರ್ಕ ಇರುವುದಿಲ್ಲ. ಕೂಡಲೆ ಪೈಪ್‍ಲೈನ್ ಸಂಪರ್ಕ ಕಲ್ಪಿಸಬೇಕು. ನಿರ್ಮಿತಿ ಕೇಂದ್ರದ ಅಧಿಕಾರಿಗಳು ಜಿಲ್ಲಾ ಕ್ರೀಡಾಧಿಕಾರಿಗಳೊಂದಿಗೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳ ಪ್ರಗತಿಯನ್ನು ಜಂಟಿ ಸಮೀಕ್ಷೆ ಮಾಡಿ ಪರಿಶೀಲಿಸಬೇಕು ಮತ್ತು ಪೂರ್ಣಗೊಳ್ಳದ ಕಾಮಗಾರಿಗಳನ್ನು ಆದಷ್ಟು ಬೇಗ ಮುಗಿಸಬೇಕು. ಸಣ್ಣ ಪುಟ್ಟ ದುರಸ್ತಿಗಳಿದ್ದಲ್ಲಿ ಅದನ್ನ ಸಹ ಸರಿಪಡಿಸುವಂತೆ ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು ಕ್ರೀಡಾಂಗಣದಲ್ಲಿನ ಶೌಚಾಲಯಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.
ಜಿಲ್ಲಾ ಕ್ರೀಡಾಂಗಣ ಸಮಿತಿಯಲ್ಲಿ ಕ್ರೀಡಾ ಕ್ಷೇತ್ರದ ಸದಸ್ಯರಿಲ್ಲ ಹೀಗಾಗಿ ಕ್ರೀಡಾ ಕ್ಷೇತ್ರದಿಂದ ಸದಸ್ಯರನ್ನು ನೇಮಕ ಮಾಡಬೇಕು ಹಾಗೂ ಈ ಸಮಿತಿಗೆ ಪೂರಕವಾಗಿ ಜಿಲ್ಲಾ ಕ್ರೀಡಾಂಗಣ ಕಾರ್ಯನಿರ್ವಾಹಕ ಸಮಿತಿ ರಚಿಸಬೇಕು. ಆ ಮೂಲಕ ಕಾಮಗಾರಿಗಳ ಅನುಷ್ಠಾನದ ಮೇಲೆ ತೀವ್ರ ನಿಗಾವಹಿಸಲು ಸಾಧ್ಯವಾಗುತ್ತದೆ. ಬಳಕೆದಾರರನ್ನು ಸಮತಿಗೆ ನೇಮಿಸಿದ್ದಲ್ಲಿ ಅವರ ಸಹಭಾಗಿತ್ವದಿಂದ ಕ್ರೀಡಾ ಸೌಲಭ್ಯಗಳನ್ನು ಇನ್ನಷ್ಟು ಉತ್ಕøಷ್ಟಗೊಳಿಸಬಹುದಾಗಿದೆ. ಇನ್ನು ಜಿಲ್ಲಾ ಕ್ರೀಡಾಂಗಣದಲ್ಲಿರುವ ಕ್ಯಾಂಟಿನ್ ಪ್ರಾರಂಭಿಸಲು ಕೂಡಲೆ ಟೆಂಡರ್ ಕರೆಯುವಂತೆ ಅಧಿಕಾರಿಗಳಿಗೆ ಅವರು ಸೂಚಿಸಿದರು.
ಕೇಂದ್ರ ಸರ್ಕಾರದ “ಖೇಲೋ ಇಂಡಿಯಾ” ಯೋಜನೆಯಡಿ ಕ್ರೀಡಾಂಗಣದಲ್ಲಿ ಫುಟಬಾಲ್ ಹಾಗೂ ಹಾಕಿ ಸಿಂಥೆಟಿಕ್ ಹಾಗೂ ಜುಡೋ/ರೆಸ್ಟಲಿಂಗ್ ಹಾಲ್ ನಿರ್ಮಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಜಿ.ನಾಡಗೀರ ಮಾತನಾಡಿ ಕ್ರೀಡಾಂಗಣದಲ್ಲಿ 17 ಕ್ರೀಡಾ ಸೌಲಭ್ಯಗಳಿದ್ದು, ಪ್ರತಿ ದಿನ 900ಕ್ಕಿಂತ ಹೆಚ್ಚು ಕ್ರೀಡಾ ಪಟುಗಳು ಇದರ ಸೌಲಭ್ಯ ಪಡೆಯುತಿದ್ದಾರೆ ಎಂದರು. ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಏಕಾಂತಪ್ಪ ಅವರು ಸಂಸ್ಥೆಯಿಂದ ಕೈಗೊಂಡಿರುವ ವಿವಿಧ ಕಾಮಗಾರಿಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಭಾಗವಹಿಸಿದ ಕಲಬುರಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ಮಹಾನಗರ ಪಾಲಿಕೆಯ ಮಹಾಪೌರ ಶರಣಕುಮಾರ ಮೋದಿ, ವಿಧಾನ ಪರಿಷತ್ ಶಾಸಕ ಬಿ.ಜಿ.ಪಾಟೀಲ ಅವರು ಅಗತ್ಯ ಸಲಹೆ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೋರ್ಲಪಾಟಿ, ಪ್ರೊಬೇಷನರ್ ಐ.ಎ.ಎಸ್. ಅಧಿಕಾರಿ ಸ್ನೇಹಲ್ ಸುಧಾಕರ ಲೋಕಂಡೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ನಗರ-ಸ್ಥಳೀಯ ಸಂಸ್ಥೆಗಳ ಚುನಾವಣೆ:
**********************************
ವಾರ್ಡುವಾರು ಅಂತಿಮ ಮೀಸಲಾತಿ ಪಟ್ಟಿ ಪ್ರಕಟ
*******************************************
ಕಲಬುರಗಿ,ಆ.03.(ಕ.ವಾ.)-ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ-2018ರ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ಎಲ್ಲ ನಗರ ಮತ್ತು ಸ್ಥಳೀಯ ಸಂಸ್ಥೆಗಳ ವಾರ್ಡುವಾರು ಅಂತಿಮ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು 2018ರ ಜುಲೈ 30ರಂದು ಅಧಿಸೂಚನೆ ಹೊರಡಿಸಿದ್ದಾರೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಅವರು ತಿಳಿಸಿದ್ದಾರೆ.
ಕರ್ನಾಟಕ ಪುರಸಭೆ ಕಾಯ್ದೆ 1964ರ ಕಲಂ 13ರನ್ವಯ (ಕರ್ನಾಟಕ ಆಕ್ಟ್ 22 ಆಫ್ 1964) ಹಾಗೂ ಸರ್ಕಾರದ ಅಧಿಸೂಚನೆ ದಿನಾಂಕ: 30-8-2012ರನ್ವಯ (ಕರ್ನಾಟಕ ಆ್ಯಕ್ಟ್ ನಂ. 32 ಆಫ್ 2012) ರನ್ವಯ ನಗರ ಮತ್ತು ಸ್ಥಳೀಯ ಸಂಸ್ಥೆಗಳ ವಾರ್ಡುವಾರು ಮೀಸಲಾತಿಯನ್ನು ನಿಗದಿಪಡಿಸಿ ಕರಡು ಅಧಿಸೂಚನೆಯನ್ನು ದಿನಾಂಕ: 31-5-2018ರಂದು ಪ್ರಕಟಿಸಿ ಇದರಿಂದ ಬಾಧಿತರಾಗಬಹುದಾದ ವ್ಯಕ್ತಿಗಳಿಂದ ಲಿಖಿತವಾಗಿ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು. ನಿಗದಿತ ಅವಧಿಯಲ್ಲಿ ಬಂದ ಆಕ್ಷೇಪಣೆಗಳನ್ನು ಸ್ವೀಕರಿಸಿ ಅಂತಿಮವಾಗಿ ಈ ಕೆಳಕಂಡಂತೆ ಸ್ಥಳೀಯ ಸಂಸ್ಥೆಯ ವಾರ್ಡುವಾರು ಮೀಸಲಾತಿಯನ್ನು ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.
ಶಹಾಬಾದ ನಗರಸಭೆ (ಒಟ್ಟು 27 ವಾರ್ಡುಗಳು):- ವಾರ್ಡ್ ಸಂಖ್ಯೆ ಮತ್ತು ಮೀಸಲಾತಿ ವಿವರ. ವಾರ್ಡ ಸಂ. 1-ಹಿಂದುಳಿದ ವರ್ಗ (ಎ) ಮಹಿಳೆ, ವಾರ್ಡ ಸಂ.2- ಸಾಮಾನ್ಯ, ವಾರ್ಡ ಸಂ. 3-ಸಾಮಾನ್ಯ, ವಾರ್ಡ ಸಂ. 4-ಹಿಂದುಳಿದ ವರ್ಗ (ಎ), ವಾರ್ಡ್ ಸಂ. 5-ಪರಿಶಿಷ್ಟ ಜಾತಿ, ವಾರ್ಡ ಸಂ. 6-ಸಾಮಾನ್ಯ ಮಹಿಳೆ, ವಾರ್ಡ ಸಂ. 7-ಪರಿಶಿಷ್ಟ ಜಾತಿ ಮಹಿಳೆ, ವಾರ್ಡ ಸಂ. 8-ಪರಿಶಿಷ್ಟ ಜಾತಿ ಮಹಿಳೆ, ವಾರ್ಡ ಸಂ. 9-ಪರಿಶಿಷ್ಟ ಜಾತಿ ಮಹಿಳೆ, ವಾರ್ಡ್ ಸಂ. 10-ಪರಿಶಿಷ್ಟ ಜಾತಿ ಮಹಿಳೆ, ವಾರ್ಡ ಸಂ. 11-ಹಿಂದುಳಿದ ವರ್ಗ (ಬಿ), ವಾರ್ಡ್ ಸಂಖ್ಯೆ 12-ಸಾಮಾನ್ಯ, ವಾರ್ಡ್ ಸಂ. 13-ಪರಿಶಿಷ್ಟ ಜಾತಿ, ವಾರ್ಡ್ ಸಂ. 14-ಸಾಮಾನ್ಯ, ವಾರ್ಡ ಸಂ. 15-ಸಾಮಾನ್ಯ ಮಹಿಳೆ, ವಾರ್ಡ ಸಂ. 16-ಪರಿಶಿಷ್ಟ ಜಾತಿ, ವಾರ್ಡ್ ಸಂಖ್ಯೆ 17-ಸಾಮಾನ್ಯ, ವಾರ್ಡ್ ಸಂ. 18-ಪರಿಶಿಷ್ಟ ಪಂಗಡ, ವಾರ್ಡ ಸಂ. 19-ಪರಿಶಿಷ್ಟ ಜಾತಿ, ವಾರ್ಡ ಸಂ. 20-ಸಾಮಾನ್ಯ, ವಾರ್ಡ ಸಂ. 21-ಸಾಮಾನ್ಯ ಮಹಿಳೆ, ವಾರ್ಡ್ ಸಂ. 22-ಸಾಮಾನ್ಯ, ವಾರ್ಡ ಸಂ. 23-ಸಾಮಾನ್ಯ ಮಹಿಳೆ, ವಾರ್ಡ ಸಂ. 24-ಪರಿಶಿಷ್ಟ ಜಾತಿ, ವಾರ್ಡ ಸಂ. 25-ಸಾಮಾನ್ಯ ಮಹಿಳೆ, ವಾರ್ಡ ಸಂ. 26-ಸಾಮಾನ್ಯ ಮಹಿಳೆ, ವಾರ್ಡ ಸಂ. 27-ಸಾಮಾನ್ಯ ಮಹಿಳೆ.
ಆಳಂದ ಪುರಸಭೆ(ಒಟ್ಟು 27 ವಾರ್ಡುಗಳು):- ವಾರ್ಡ್ ಸಂಖ್ಯೆ ಮತ್ತು ಮೀಸಲಾತಿ ವಿವರ. ವಾರ್ಡ ಸಂ. 1-ಹಿಂದುಳಿದ ವರ್ಗ (ಎ) ಮಹಿಳೆ, ವಾರ್ಡ ಸಂ. 2-ಸಾಮಾನ್ಯ, ವಾರ್ಡ ಸಂ. 3-ಸಾಮಾನ್ಯ ಮಹಿಳೆ, ವಾರ್ಡ ಸಂ. 4-ಸಾಮಾನ್ಯ, ವಾರ್ಡ ಸಂ. 5-ಹಿಂದುಳಿದ ವರ್ಗ (ಎ), ವಾರ್ಡ ಸಂ. 6-ಸಾಮಾನ್ಯ ಮಹಿಳೆ, ವಾರ್ಡ ಸಂ. 7-ಸಾಮಾನ್ಯ, ವಾರ್ಡ ಸಂ. 8-ಸಾಮಾನ್ಯ, ವಾರ್ಡ ಸಂ. 9-ಹಿಂದುಳಿದ ವರ್ಗ (ಎ) ಮಹಿಳೆ, ವಾರ್ಡ ಸಂ. 10-ಹಿಂದುಳಿದ ವರ್ಗ (ಬಿ) ಮಹಿಳೆ, ವಾರ್ಡ ಸಂ. 11-ಪರಿಶಿಷ್ಟ ಜಾತಿ ಮಹಿಳೆ, ವಾರ್ಡ ಸಂ. 12-ಪರಿಶಿಷ್ಟ ಪಂಗಡ, ವಾರ್ಡ ಸಂ. 13-ಹಿಂದುಳಿದ ವರ್ಗ (ಎ), ವಾರ್ಡ ಸಂ. 14-ಸಾಮಾನ್ಯ, ವಾರ್ಡ ಸಂ. 15-ಹಿಂದುಳಿದ ವರ್ಗ (ಎ) ಮಹಿಳೆ, ವಾರ್ಡ ಸಂ. 16-ಸಾಮಾನ್ಯ, ವಾರ್ಡ ಸಂ. 17-ಹಿಂದುಳಿದ ವರ್ಗ (ಬಿ), ವಾರ್ಡ ಸಂ. 18-ಸಾಮಾನ್ಯ ಮಹಿಳೆ, ವಾರ್ಡ ಸಂ. 19-ಹಿಂದುಳಿದ ವರ್ಗ (ಎ), ವಾರ್ಡ ಸಂ. 20-ಸಾಮಾನ್ಯ, ವಾರ್ಡ ಸಂ. 21-ಸಾಮಾನ್ಯ ಮಹಿಳೆ, ವಾರ್ಡ ಸಂ. 22-ಸಾಮಾನ್ಯ ಮಹಿಳೆ, ವಾರ್ಡ ಸಂ. 23-ಪರಿಶಿಷ್ಟ ಜಾತಿ ಮಹಿಳೆ, ವಾರ್ಡ ಸಂ. 24-ಸಾಮಾನ್ಯ ಮಹಿಳೆ, ವಾರ್ಡ ಸಂ. 25-ಸಾಮಾನ್ಯ ಮಹಿಳೆ, ವಾರ್ಡ ಸಂ. 26-ಪರಿಶಿಷ್ಟ ಜಾತಿ, ವಾರ್ಡ ಸಂ. 27-ಪರಿಶಿಷ್ಟ ಜಾತಿ.

ಅಫಜಲಪುರ ಪುರಸಭೆ (ಒಟ್ಟು 23 ವಾರ್ಡುಗಳು):- ವಾರ್ಡ್ ಸಂಖ್ಯೆ ಮತ್ತು ಮೀಸಲಾತಿ ವಿವರ. ವಾರ್ಡ ಸಂಖ್ಯೆ 1-ಸಾಮಾನ್ಯ, ವಾರ್ಡ ಸಂ. 2-ಸಾಮಾನ್ಯ, ವಾರ್ಡ ಸಂ. 3-ಸಾಮಾನ್ಯ ಮಹಿಳೆ, ವಾರ್ಡ ಸಂ. 4-ಸಾಮಾನ್ಯ, ವಾರ್ಡ ಸಂ. 5-ಸಾಮಾನ್ಯ ಮಹಿಳೆ, ವಾರ್ಡ ಸಂ. 6-ಹಿಂದುಳಿದ ವರ್ಗ (ಎ), ವಾರ್ಡ ಸಂ. 7-ಹಿಂದುಳಿದ ವರ್ಗ (ಎ) ಮಹಿಳೆ, ವಾರ್ಡ ಸಂ. 8-ಸಾಮಾನ್ಯ, ವಾರ್ಡ ಸಂ. 9-ಹಿಂದುಳಿದ ವರ್ಗ (ಎ) ಮಹಿಳೆ, ವಾರ್ಡ ಸಂ. 10-ಹಿಂದುಳಿದ ವರ್ಗ (ಎ), ವಾರ್ಡ ಸಂ. 11-ಸಾಮಾನ್ಯ ಮಹಿಳೆ, ವಾರ್ಡ ಸಂ. 12-ಸಾಮಾನ್ಯ ಮಹಿಳೆ, ವಾರ್ಡ ಸಂ. 13-ಸಾಮಾನ್ಯ ಮಹಿಳೆ, ವಾರ್ಡ ಸಂ. 14-ಪರಿಶಿಷ್ಟ ಜಾತಿ ಮಹಿಳೆ, ವಾರ್ಡ ಸಂ. 15-ಪರಿಶಿಷ್ಟ ಜಾತಿ, ವಾರ್ಡ ಸಂ. 16-ಪರಿಶಿಷ್ಟ ಜಾತಿ, ವಾರ್ಡ ಸಂ. 17-ಸಾಮಾನ್ಯ, ವಾರ್ಡ ಸಂ. 18-ಹಿಂದುಳಿದ ವರ್ಗ (ಬಿ), ವಾರ್ಡ ಸಂ. 19-ಪರಿಶಿಷ್ಟ ಪಂಗಡ, ವಾರ್ಡ ಸಂ. 20-ಪರಿಶಿಷ್ಟ ಜಾತಿ ಮಹಿಳೆ, ವಾರ್ಡ ಸಂ. 21-ಪರಿಶಿಷ್ಟ ಜಾತಿ, ವಾರ್ಡ ಸಂ. 22-ಸಾಮಾನ್ಯ, ವಾರ್ಡ ಸಂ. 23-ಸಾಮಾನ್ಯ ಮಹಿಳೆ.
ಚಿಂಚೋಳಿ ಪುರಸಭೆ (ಒಟ್ಟು 23 ವಾರ್ಡುಗಳು):- ವಾರ್ಡ್ ಸಂಖ್ಯೆ ಮತ್ತು ಮೀಸಲಾತಿ ವಿವರ. ವಾರ್ಡ ಸಂಖ್ಯೆ 1-ಪರಿಶಿಷ್ಟ ಜಾತಿ, ವಾರ್ಡ ಸಂ. 2-ಹಿಂದುಳಿದ ವರ್ಗ (ಎ), ವಾರ್ಡ ಸಂ. 3-ಹಿಂದುಳಿದ ವರ್ಗ (ಎ) ಮಹಿಳೆ, ವಾರ್ಡ ಸಂ. 4-ಸಾಮಾನ್ಯ ಮಹಿಳೆ, ವಾರ್ಡ ಸಂ. 5-ಪರಿಶಿಷ್ಟ ಜಾತಿ, ವಾರ್ಡ ಸಂ. 6-ಸಾಮಾನ್ಯ, ವಾರ್ಡ ಸಂ. 7-ಪರಿಶಿಷ್ಟ ಜಾತಿ ಮಹಿಳೆ, ವಾರ್ಡ ಸಂ. 8-ಸಾಮಾನ್ಯ, ವಾರ್ಡ ಸಂ. 9-ಪರಿಶಿಷ್ಟ ಜಾತಿ ಮಹಿಳೆ, ವಾರ್ಡ ಸಂ. 10-ಸಾಮಾನ್ಯ ಮಹಿಳೆ, ವಾರ್ಡ ಸಂ. 11-ಪರಿಶಿಷ್ಟ ಪಂಗಡ, ವಾರ್ಡ ಸಂ. 12-ಹಿಂದುಳಿದ ವರ್ಗ (ಬಿ), ವಾರ್ಡ ಸಂ. 13-ಸಾಮಾನ್ಯ, ವಾರ್ಡ ಸಂ. 14-ಸಾಮಾನ್ಯ ಮಹಿಳೆ, ವಾರ್ಡ ಸಂ. 15-ಸಾಮಾನ್ಯ ಮಹಿಳೆ, ವಾರ್ಡ ಸಂ. 16-ಪರಿಶಿಷ್ಟ ಜಾತಿ, ವಾರ್ಡ ಸಂ. 17-ಸಾಮಾನ್ಯ, ವಾರ್ಡ ಸಂ. 18-ಪರಿಶಿಷ್ಟ ಜಾತಿ ಮಹಿಳೆ, ವಾರ್ಡ ಸಂ. 19-ಸಾಮಾನ್ಯ, ವಾರ್ಡ ಸಂ. 20-ಸಾಮಾನ್ಯ, ವಾರ್ಡ ಸಂ. 21-ಸಾಮಾನ್ಯ ಮಹಿಳೆ, ವಾರ್ಡ ಸಂ. 22-ಹಿಂದುಳಿದ ವರ್ಗ (ಎ) ಹಾಗೂ ವಾರ್ಡ ಸಂ. 23-ಸಾಮಾನ್ಯ ಮಹಿಳೆ.

ಚಿತ್ತಾಪುರ ಪುರಸಭೆ (ಒಟ್ಟು 23 ವಾರ್ಡುಗಳು):- ವಾರ್ಡ್ ಸಂಖ್ಯೆ ಮತ್ತು ಮೀಸಲಾತಿ ವಿವರ. ವಾರ್ಡ ಸಂಖ್ಯೆ 1-ಹಿಂದುಳಿದ ವರ್ಗ (ಎ) ಮಹಿಳೆ, ವಾರ್ಡ ಸಂ. 2-ಪರಿಶಿಷ್ಟ ಜಾತಿ, ವಾರ್ಡ ಸಂ. 3-ಸಾಮಾನ್ಯ ಮಹಿಳೆ, ವಾರ್ಡ ಸಂ. 4-ಹಿಂದುಳಿದ ವರ್ಗ (ಎ), ವಾರ್ಡ ಸಂ. 5-ಪರಿಶಿಷ್ಟ ಜಾತಿ ಮಹಿಳೆ, ವಾರ್ಡ ಸಂ. 6-ಸಾಮಾನ್ಯ ಮಹಿಳೆ, ವಾರ್ಡ ಸಂ. 7-ಪರಿಶಿಷ್ಟ ಜಾತಿ, ವಾರ್ಡ ಸಂ. 8-ಪರಿಶಿಷ್ಟ ಜಾತಿ, ವಾರ್ಡ ಸಂ. 9-ಸಾಮಾನ್ಯ, ವಾರ್ಡ ಸಂ. 10-ಸಾಮಾನ್ಯ ಮಹಿಳೆ, ವಾರ್ಡ ಸಂ. 11-ಸಾಮಾನ್ಯ ಮಹಿಳೆ, ವಾರ್ಡ ಸಂ. 12-ಸಾಮಾನ್ಯ, ವಾರ್ಡ ಸಂ. 13-ಪರಿಶಿಷ್ಟ ಪಂಗಡ, ವಾರ್ಡ ಸಂ. 14-ಸಾಮಾನ್ಯ, ವಾರ್ಡ ಸಂ. 15-ಪರಿಶಿಷ್ಟ ಜಾತಿ, ವಾರ್ಡ ಸಂ. 16-ಸಾಮಾನ್ಯ ಮಹಿಳೆ, ವಾರ್ಡ ಸಂ. 17-ಸಾಮಾನ್ಯ ಮಹಿಳೆ, ವಾರ್ಡ ಸಂ. 18-ಸಾಮಾನ್ಯ, ವಾರ್ಡ ಸಂ. 19-ಹಿಂದುಳಿದ ವರ್ಗ (ಬಿ), ವಾರ್ಡ ಸಂ. 20-ಪರಿಶಿಷ್ಟ ಜಾತಿ ಮಹಿಳೆ, ವಾರ್ಡ ಸಂ. 21-ಸಾಮಾನ್ಯ, ವಾರ್ಡ ಸಂ. 22-ಸಾಮಾನ್ಯ, ವಾರ್ಡ ಸಂ. 23-ಪರಿಶಿಷ್ಟ ಜಾತಿ ಮಹಿಳೆ.
ಜೇವರ್ಗಿ ಪುರಸಭೆ (ಒಟ್ಟು 23 ವಾರ್ಡುಗಳು):- ವಾರ್ಡ್ ಸಂಖ್ಯೆ ಮತ್ತು ಮೀಸಲಾತಿ ವಿವರ. ವಾರ್ಡ ಸಂಖ್ಯೆ 1-ಪರಿಶಿಷ್ಟ ಪಂಗಡ, ವಾರ್ಡ ಸಂ. 2-ಹಿಂದುಳಿದ ವರ್ಗ (ಎ) ಮಹಿಳೆ, ವಾರ್ಡ ಸಂ. 3-ಸಾಮಾನ್ಯ, ವಾರ್ಡ ಸಂ. 4-ಸಾಮಾನ್ಯ, ವಾರ್ಡ ಸಂ. 5-ಪರಿಶಿಷ್ಟ ಜಾತಿ ಮಹಿಳೆ, ವಾರ್ಡ ಸಂ. 6-ಸಾಮಾನ್ಯ ಮಹಿಳೆ, ವಾರ್ಡ ಸಂ. 7-ಹಿಂದುಳಿದ ವರ್ಗ(ಎ), ವಾರ್ಡ ಸಂ. 8-ಹಿಂದುಳಿದ ವರ್ಗ(ಬಿ), ವಾರ್ಡ ಸಂ.-9 ಪರಿಶಿಷ್ಟ ಜಾತಿ ಮಹಿಳೆ, ವಾರ್ಡ ಸಂ. 10-ಹಿಂದುಳಿದ ವರ್ಗ (ಎ) ಮಹಿಳೆ, ವಾರ್ಡ ಸಂ. 11-ಪರಿಶಿಷ್ಟ ಜಾತಿ, ವಾರ್ಡ ಸಂ. 12-ಸಾಮಾನ್ಯ, ವಾರ್ಡ ಸಂ. 13-ಸಾಮಾನ್ಯ, ವಾರ್ಡ ಸಂ. 14-ಪರಿಶಿಷ್ಟ ಜಾತಿ, ವಾರ್ಡ ಸಂ. 15-ಸಾಮಾನ್ಯ ಮಹಿಳೆ, ವಾರ್ಡ ಸಂ. 16-ಸಾಮಾನ್ಯ, ವಾರ್ಡ ಸಂ. 17-ಹಿಂದುಳಿದ ವರ್ಗ (ಎ), ವಾರ್ಡ ಸಂ. 18-ಸಾಮಾನ್ಯ, ವಾರ್ಡ ಸಂ. 19-ಹಿಂದುಳಿದ ವರ್ಗ(ಎ), ವಾರ್ಡ ಸಂ. 20-ಸಾಮಾನ್ಯ ಮಹಿಳೆ, ವಾರ್ಡ ಸಂ. 21-ಸಾಮಾನ್ಯ ಮಹಿಳೆ, ವಾರ್ಡ ಸಂ. 22-ಸಾಮಾನ್ಯ ಮಹಿಳೆ, ವಾರ್ಡ ಸಂ. 23-ಸಾಮಾನ್ಯ ಮಹಿಳೆ.
ಸೇಡಂ ಪುರಸಭೆ (ಒಟ್ಟು 23 ವಾರ್ಡುಗಳು):- ವಾರ್ಡ್ ಸಂಖ್ಯೆ ಮತ್ತು ಮೀಸಲಾತಿ ವಿವರ. ವಾರ್ಡ ಸಂಖ್ಯೆ 1-ಹಿಂದುಳಿದ ವರ್ಗ(ಎ) ಮಹಿಳೆ, ವಾರ್ಡ ಸಂ. 2-ಸಾಮಾನ್ಯ, ವಾರ್ಡ ಸಂ.3-ಸಾಮಾನ್ಯ, ವಾರ್ಡ ಸಂ.4-ಸಾಮಾನ್ಯ ಮಹಿಳೆ, ವಾರ್ಡ ಸಂ. 5-ಹಿಂದುಳಿದ ವರ್ಗ (ಎ), ವಾರ್ಡ ಸಂ. 6-ಹಿಂದುಳಿದ ವರ್ಗ (ಬಿ), ವಾರ್ಡ ಸಂ. 7-ಪರಿಶಿಷ್ಟ ಜಾತಿ, ವಾರ್ಡ ಸಂ. 8-ಸಾಮಾನ್ಯ, ವಾರ್ಡ ಸಂ.9-ಪರಿಶಿಷ್ಟ ಜಾತಿ ಮಹಿಳೆ, ವಾರ್ಡ ಸಂ. 10-ಪರಿಶಿಷ್ಟ ಜಾತಿ ಮಹಿಳೆ, ವಾರ್ಡ ಸಂ.11-ಹಿಂದುಳಿದ ವರ್ಗ (ಎ) ಮಹಿಳೆ, ವಾರ್ಡ ಸಂ. 12-ಸಾಮಾನ್ಯ ಮಹಿಳೆ, ವಾರ್ಡ ಸಂ.13-ಪರಿಶಿಷ್ಟ ಪಂಗಡ, ವಾರ್ಡ ಸಂ. 14-ಹಿಂದುಳಿದ ವರ್ಗ (ಎ), ವಾರ್ಡ ಸಂ. 15-ಸಾಮಾನ್ಯ ಮಹಿಳೆ, ವಾರ್ಡ ಸಂ. 16-ಸಾಮಾನ್ಯ, ವಾರ್ಡ ಸಂ. 17-ಸಾಮಾನ್ಯ, ವಾರ್ಡ ಸಂ. 18-ಸಾಮಾನ್ಯ ಮಹಿಳೆ, ವಾರ್ಡ ಸಂ. 19-ಪರಿಶಿಷ್ಟ ಜಾತಿ, ವಾರ್ಡ ಸಂ. 20-ಸಾಮಾನ್ಯ, ವಾರ್ಡ ಸಂ. 21-ಪರಿಶಿಷ್ಟ ಜಾತಿ, ವಾರ್ಡ ಸಂ. 22-ಸಾಮಾನ್ಯ ಮಹಿಳೆ ಹಾಗೂ ವಾರ್ಡ ಸಂ. 23-ಸಾಮಾನ್ಯ ಮಹಿಳೆ.

ವಕ್ಫ್ ಮಂಡಳಿಯ ಚುನಾವಣೆ
***************************
ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಸೂಚನೆ
*********************************************************
ಕಲಬುರಗಿ,ಆ.03.(ಕ.ವಾ.)- ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ನಾಲ್ಕು ಮತಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ಮತದಾರರ ಪಟ್ಟಿ ತಯಾರಿಕೆ ಕುರಿತು ಆಗಸ್ಟ್ 3ರಂದು ಅಧಿಸೂಚನೆ ಹೊರಡಿಸಿದ್ದು, ಅರ್ಹ ವ್ಯಕ್ತಿಗಳು ವಕ್ಫ್ ಮಂಡಳಿಯ ಮತದಾರರಾಗಿ ಹೆಸರು ನೋಂದಣಿ ಮಾಡಿಕೊಳ್ಳಬೇಕೆಂದು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಹಾಗೂ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಚುನಾವಣೆಯ ಮತದಾರರ ನೋಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿಗೆ ಅರ್ಜಿ ಸಲ್ಲಿಸಲು ಆಗಸ್ಟ್ 9 ಕೊನೆಯ ದಿನವಾಗಿದೆ. ಸೆಪ್ಟೆಂಬರ್ 10 ರಂದು ಕರುಡು ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ. ಹಕ್ಕು/ ಆಕ್ಷೇಪಣೆಗಳನ್ನು ಸೆಪ್ಟೆಂಬರ್ 11 ರಿಂದ 25ರವರೆಗೆ ಸಲ್ಲಿಸಬಹುದಾಗಿದೆ. ಕರ್ನಾಟಕ ವಕ್ಫ್ ನಿಯಮ 13(ಸಿ) ರಂತೆ ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 17 ರಂದು ಪ್ರಕಟಿಸಲಾಗುವುದು.
ಕರ್ನಾಟಕ ರಾಜ್ಯದ ಲೋಕಸಭೆ/ರಾಜ್ಯಸಭೆಯ ಮುಸ್ಲಿಂ ಸದಸ್ಯರುಗಳು, ಕರ್ನಾಟಕ ವಿಧಾನಸಭೆ/ವಿಧಾನ ಪರಿಷತ್ತಿನ ಮುಸ್ಲಿಂ ಸದಸ್ಯರುಗಳು, ಕರ್ನಾಟಕ ಬಾರ್ ಕೌನ್ಸಿಲ್‍ನ ಮುಸ್ಲಿಂ ಸದಸ್ಯರುಗಳು, ಒಂದು ಲಕ್ಷ ರೂ. ಮತ್ತು ಅದಕ್ಕಿಂತ ಹೆಚ್ಚು ವಾರ್ಷಿಕ ಆದಾಯವುಳ್ಳ ವಕ್ಫ್ ಮುತವಲ್ಲಿಗಳು, ಕರ್ನಾಟಕ ರಾಜ್ಯದ ಲೋಕಸಭೆ/ರಾಜ್ಯಸಭೆಯ ಮುಸ್ಲಿಂ ಮಾಜಿ ಸದಸ್ಯರುಗಳು, ಕರ್ನಾಟಕ ವಿಧಾನಸಭೆ/ವಿಧಾನ ಪರಿಷತ್‍ನ ಮುಸ್ಲಿಂ ಮಾಜಿ ಸದಸ್ಯರುಗಳು ಹಾಗೂ ಕರ್ನಾಟಕ ಬಾರ್ ಕೌನ್ಸಿಲ್‍ನ ಮುಸ್ಲಿಂ ಮಾಜಿ ಸದಸ್ಯರುಗಳು ಮತದಾರರಾಗಿ ಹೆಸರು ನೋಂದಾಯಿಸಿಕೊಳ್ಳಲು ಅರ್ಹರಿರುತ್ತಾರೆ ಎಂದು ಅವರು ತಿಳಿಸಿದ್ದಾರೆ.

ಹೀಗಾಗಿ ಲೇಖನಗಳು News and photo Date: 03-08-2018
ಎಲ್ಲಾ ಲೇಖನಗಳು ಆಗಿದೆ News and photo Date: 03-08-2018 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ News and photo Date: 03-08-2018 ಲಿಂಕ್ ವಿಳಾಸ https://dekalungi.blogspot.com/2018/08/news-and-photo-date-03-08-2018.html

0 Response to "News and photo Date: 03-08-2018"
ಕಾಮೆಂಟ್ ಪೋಸ್ಟ್ ಮಾಡಿ