News and photo Date: 26-8-2018

News and photo Date: 26-8-2018 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು News and photo Date: 26-8-2018, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : News and photo Date: 26-8-2018
ಲಿಂಕ್ : News and photo Date: 26-8-2018

ಓದಿ


News and photo Date: 26-8-2018

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಪ್ರಾಯೋಗಿಕ ವಿಮಾನ ಹಾರಾಟ ಯಶಸ್ವಿ:
******************************************************************
ಬಿಸಿಲೂರಿನ ಜನರ ದಶಕದ ಕನಸು ನನಸು
*************************************
ಕಲಬುರಗಿ,ಆ.26.(ಕ.ವಾ.)-ಕಲಬುರಗಿ-ಸೇಡಂ ರಸ್ತೆಯಯಲ್ಲಿರುವ ಕಲಬುರಗಿ ವಿಮಾನ ನಿಲ್ದಾಣದಲ್ಲಿ ರವಿವಾರ ನಡೆಸಲಾದ ಪ್ರಾಯೋಗಿಕ ಲಘು ವಿಮಾನ ಹಾರಾಟ ಯಶಸ್ವಿಯಾಗಿದ್ದು, ಈ ಮೂಲಕ ಸೂರ್ಯ ನಗರಿ ಕಲಬುರಗಿ ಜನರ ದಶಕದ ಕನಸು ನನಸಾಗಿದೆ.
ಹೈದ್ರಾಬಾದಿನಿಂದ ಏಶಿಯನ್ ಪೆಸಿಫಿಕ್ ಫ್ಲೈಟ್ ಟ್ರೇನಿಂಗ್ ಅಕಾಡೆಮಿಯ ಡೈಮಂಡ್-40 ಮತ್ತು ಡೈಮಂಡ್-42 ಎಂಬ 4 ಅಸನವುಳ್ಳ ಎರಡು ಲಘು ವಿಮಾನಗಳು ಬೆಳಿಗ್ಗೆ ಕ್ರಮವಾಗಿ 10 ಗಂಟೆ 50 ನಿಮಿಷಕ್ಕೆ ಮತ್ತು 11 ಗಂಟೆ 20 ನಿಮಿಷಕ್ಕೆ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಬಂದಿಳಿಯುವ ಮೂಲಕ ಕಲಬುರಗಿ ಜಿಲ್ಲೆಯ ಜನರ ಗಗನ ಹಾರಾಟದ ಆಸೆಗೆ ಹಸಿರು ನಿಶಾನೆ ತೋರಿಸಿದಂತಾಯಿತು.
ಈ ಸಂದರ್ಭದಲ್ಲಿ ವಿಮಾನ ಲ್ಯಾಂಡ್ ಮಾಡಿದ ಪೈಲಟ್ ಮತ್ತು ಇತರೆ ಸಿಬ್ಬಂದಿಗಳನ್ನು ಸ್ವಾಗತಿಸಿ ಮಾತಾಡಿದ ಕಲಬುರಗಿ ಲೋಕಸಭಾ ಸದಸ್ಯ ಡಾ.ಮಲ್ಲಿಕಾರ್ಜುನ ಖರ್ಗೆ ಅವರು, ಇಂದು ಕಲಬುರಗಿಯಲ್ಲಿ ನಡೆಸಲಾದ ಪ್ರಾಯೋಗಿಕ ವಿಮಾನ ಹಾರಾಟ ಯಶಸ್ವಿಯಾಗಿದ್ದು, ಪೈಲಟ್‍ಗಳು ನಿಲ್ದಾಣ ಮತ್ತು ರನ್ ವೇ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಬೃಹತ್ ಆಕಾರದ ಕಲಬುರಗಿ ವಿಮಾನ ನಿಲ್ದಾಣದಲ್ಲಿ ನಾಗರಿಕ ವಿಮಾನಯಾನ ಸಚಿವಾಲಯದ ನಿರ್ದೇಶನದನ್ವಯ ರನ್ ವೇ ಸಿದ್ಧಪಡಿಸಲಾಗಿದ್ದು, ಜೆಟ್ ಸೇರಿದಂತೆ ದೊಡ್ಡ ಪ್ರಮಾಣದ ವಿಮಾನಗಳು ಸಹ ಇಲ್ಲಿ ಲ್ಯಾಂಡ್ ಮಾಡಬಹುದಾಗಿದೆ. ರಾಜ್ಯದ ಇತರೆ ವಿಮಾನ ನಿಲ್ದಾಣಗಳು ಕ್ರಮೇಣವಾಗಿ ಅಭಿವೃದ್ಧಿಗೊಂಡಿದರೆ ಕಲಬುರಗಿ ವಿಮಾನ ನಿಲ್ದಾಣ ಆರಂಭದಲ್ಲಿಯೆ ಎಲ್ಲಾ ಸೌಲಭ್ಯಗಳು ಹೊಂದಿರುವುದು ವಿಶೇಷ. ಕಲಬುರಗಿ ಜನರ ಹತ್ತಾರು ವರ್ಷದ ಬೇಡಿಕೆ ಸಾಕಾರಗೊಂಡ ಕ್ಷಣ ಇದಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕಲಬುರಗಿ ವಿಮಾನ ನಿಲ್ದಾಣದಿಂದ ವಾಣಿಜ್ಯ ಕಾರ್ಯಾಚರಣೆ (ಸಾರ್ವಜನಿಕರು ಪ್ರಯಾಣ) ಮಾಡಲು ಈಗಾಗಲೆ ರಾಜ್ಯ ಸರ್ಕಾರದಿಂದ ನಾಗರೀಕ ವಿಮಾನಯಾನ ಸಚಿವಾಲಯಕ್ಕೆ ಪತ್ರ ಬರೆಯಲಾಗಿದ್ದು, ತಾವು ಸಹ ಸಚಿವಾಲಯದ ಅಧಿಕಾರಿಗಳನ್ನು ಖುದ್ದಾಗಿ ಭೇಟಿ ಮಾಡಿ ಉಡಾನ್ ಯೋಜನೆಯಡಿ ಕಲಬುರಗಿ ವಿಮಾನ ನಿಲ್ದಾಣ ತೆಗೆದುಕೊಂಡು ಇಲ್ಲಿನ ಜನರ ಗಗನ ಹಾರಾಟಕ್ಕೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಲಾಗುವುದೆಂದ ಅವರು 371ಜೆ ವಿಶೇಷ ಸ್ಥಾನಮಾನ ಹೊಂದಿರುವ ಹೈದ್ರಾಬಾದ ಕರ್ನಾಟಕದಲ್ಲಿ ಕಲಬುರಗಿ ವಿಮಾನ ನಿಲ್ದಾಣ ಸಜ್ಜುಗೊಂಡಿದ್ದು, ಏರ್ ಇಂಡಿಯಾ ಸಂಸ್ಥೆಯು ವಿಶೇಷ ಕಾಳಜಿ ವಹಿಸಿ ಪ್ರತಿ ದಿನ ಬೆಳಿಗ್ಗೆ ಮತ್ತು ಸಾಯಂಕಾಲ ಸಾರ್ವಜನಿಕರ ಪ್ರಯಾಣಕ್ಕೆ ವಿಮಾನ ಸೇವೆಯ ಅವಕಾಶ ಮಾಡಿಕೊಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿದರು.
740 ಎಕರೆ ಪ್ರದೇಶದ ವಿಸ್ತೀರ್ಣ ಹೊಂದಿರುವ ವಿಮಾನ ನಿಲ್ದಾಣದಲ್ಲಿ ವಿಮಾನಯಾನಕ್ಕೆ ಸಂಬಂಧಿಸಿದಂತೆ ಚಟುವಟಿಕೆಗಳು ನಿರಂತರವಾಗಿ ನಡೆಯಲು ಇಲ್ಲಿ ಫ್ಲೈಟ್ ಟ್ರೇನಿಂಗ್ ತರಬೇತಿ ಶಾಲೆ ಆರಂಭಿಸುವ ಚಿಂತನೆ ಸಹ ಇದ್ದು, ಇದರಿಂದ ವಿಮಾನ ನಿಲ್ದಾಣ ನಿರ್ವಣೆಗೆ ಸಹಕಾರಿಯಾಗಲಿದೆ ಎಂದರು.
ಮೊದಲು ಮಹಿಳಾ ಪೈಲಟ್ ಹೊಂದಿದ ವಿಮಾನ ಭೂಸ್ಪರ್ಶ :- ಕಲಬುರಗಿ ವಿಮಾನ ನಿಲ್ದಾಣಕ್ಕೆ ರವಿವಾರ ಹೈದ್ರಾಬಾದಿನಿಂದ ಬಂದಿಳಿದ ಎರಡು ಲಘು ವಿಮಾನಗಳ ಪೈಕಿ ಮಹಿಳಾ ಪೈಲಟ್ ಆಗಿರುವ ಕ್ಯಾಪ್ಟನ್ ಜಾನವಿ ಅವರ ಮೊದಲ ವಿಮಾನ ಕಲಬುರಗಿ ನೆಲದಲ್ಲಿ ಮೊದಲ ಬಾರಿಗೆ ಭೂಸ್ಪರ್ಶ ಮಾಡಿದ್ದು, ಇವರೊಂದಿಗೆ ಕ್ಯಾಪ್ಟನ್ ಶಹೀನ ಶಹಾ ಮತ್ತು ಚೀಫ್ ಅಪರೇಟಿವ್ ಆಫೀಸರ್ ಹೇಮಂತ ಡಿ.ಪಿ. ಜೊತೆಗಿದ್ದರು. ನಂತರ ಕ್ಯಾಪ್ಟನ್ ಅರುಣ ಮತ್ತು ಕ್ಯಾಪ್ಟನ್ ಅಭಿಜಿತ್ ಅವರಿದ್ದ ಎರಡನೇ ಲಘು ವಿಮಾನ ಬಂದಿಳಿಯಿತು.
ಐತಿಹಾಸಿಕದ ಈ ಕ್ಷಣದಲ್ಲಿ ಸಮಾಜ ಕಲ್ಯಾಣ ಸಚಿವ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ, ಕಲಬುರಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುವರ್ಣ ಹಣಮಂತರಾಯ ಮಲಾಜಿ, ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ವಿಧಾನಸಭಾ ಶಾಸಕರಾದ ಡಾ.ಅಜಯ ಸಿಂಗ್, ಬಸವರಾಜ ಮತ್ತಿಮೂಡ, ಖನೀಜ್ ಫಾತಿಮಾ, ಎಂ.ವೈ.ಪಾಟೀಲ, ಡಾ.ಉಮೇಶ ಜಾಧವ, ರಾಜಕುಮಾರ ಪಾಟೀಲ ತೇಲ್ಕೂರ, ದತ್ತಾತ್ರೇಯ ಪಾಟೀಲ ರೇವೂರ, ವಿಧಾನ ಪರಿಷತ್ತಿನ ಶಾಸಕ ಇಕ್ಬಾಲ ಅಹ್ಮದ ಸರಡಗಿ, ಕಲಬುರಗಿ ಮಹಾನಗರ ಪಾಲಿಕೆಯ ಮೇಯರ್ ಶರಣಕುಮಾರ ಮೋದಿ, ಮಾಜಿ ಎಂ.ಎಲ್.ಸಿ.ಗಳಾದ ಕೆ.ಬಿ.ಶಾಣಪ್ಪ, ಅಲ್ಲಮಪ್ರಭು ಪಾಟೀಲ, ಪ್ರಾದೇಶಿಕ ಆಯುಕ್ತ ಸುಬೋಧ ಯಾದವ, ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೋರ್ಲಪಾಟಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಶಶಿಕುಮಾರ, ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೇಳ್ಳಿ, ಎಸಿಯಾ ಪೆಸಿಫಿಕ್ ಫ್ಲೈಟ್ ಟ್ರೇನಿಂಗ್ ಅಕಾಡೆಮಿಯ ಕ್ಯಾಪ್ಟನ್ ಆರ್.ವಿ.ಕುಮಾರ, ಮಹಮ್ಮದ್ ಫೈಸಲ್, ಅಮಿತ್ ಸಿಂಗ್, ಕ್ಯಾಪ್ಟನ್ ಶಾಮ, ಲೋಕೋಪಯೋಗಿ ಇಲಾಖೆ ಅಧೀಕ್ಷಕ ಇಂಜನೀಯರ ಪ್ರಕಾಶ ಶ್ರೀಹರಿ, ಕಾರ್ಯನಿರ್ವಾಹಕ ಇಂಜನೀಯರ ಅಮೀನ ಮುಕ್ತಾರ ಸೇರಿದಂತೆ ಇನ್ನಿತರ ಜನಪ್ರತಿನಿಧಿಗಳು, ಮುಖಂಡರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಲಬುರಗಿ ನಗರ ಹಾಗೂ ಅಕ್ಕ ಪಕ್ಕದ ಗ್ರಾಮಗಳಿಂದ ಆಗಮಿಸಿದ ಸಹಸ್ರಾರು ಸಂಖ್ಯೆಯ ಸಾರ್ವಜನಿಕರು ವಿಮಾನಗಳನ್ನು ಪ್ರಥಮಬಾರಿಗೆ ಹತ್ತಿರದಿಂದ ಕಂಡು ಪುಳಕಿತರಾದರು. ಕೇಕೇ ಹಾಕಿ ಸಂಭ್ರಮಿಸಿದರು. ವಿಮಾನಗಳ ಸಮೀಪ ಹೋಗಿ ತಮ್ಮ ಮೋಬೈಲ್‍ಗಳಲ್ಲಿ ಸೇಲ್ಫಿ ಕ್ಲಿಕ್ಕಿಸುವ ಮೂಲಕ ನೆನಪುಗಳನ್ನು ಭದ್ರಗೊಳಿಸಿದರು.
ಉಡಾನ್ ಯೋಜನೆಯಡಿ ಕಲಬರಗಿ ವಿಮಾನ ನಿಲ್ದಾಣ ಸೇರ್ಪಡೆಗೆ ಪ್ರಯತ್ನ
*****************************************************************
-ಸಚಿವ ಪ್ರಿಯಾಂಕ ಖರ್ಗೆ
***********************
ಕಲಬುರಗಿ,ಆ.26.(ಕ.ವಾ.)- ಕಲಬುರಗಿ ಸೇರಿದಂತೆ ಹೈದ್ರಾಬಾದ ಕರ್ನಾಟಕ ಭಾಗದ ನಾಗರಿಕರು ಕಲಬುರಗಿ ಪ್ರಾದೇಶಿಕ ವಿಮಾನ ನಿಲ್ದಾಣದಿಂದ ದೂರದ ಬೆಂಗಳೂರು, ಮುಂಬೈ ಸೇರಿದಂತೆ ದೇಶದ ಇನ್ನೀತರ ಭಾಗಕ್ಕೆ ವಿಮಾನ ಪ್ರಯಾಣ ಮಾಡಲು ಅನುಕೂಲವಾಗಲು ಕೇಂದ್ರ ಸರ್ಕಾರವು “ಉಡಾನ್” ಯೋಜನೆಯಡಿ ಕಲಬುರಗಿ ವಿಮಾನ ನಿಲ್ದಾಣವನ್ನು ತೆಗೆದುಕೊಳ್ಳಬೇಕೆಂಬುದು ರಾಜ್ಯ ಸರ್ಕಾರದ ಆಶಯವಾಗಿದ್ದು, ಈ ನಿಟ್ಟಿನಲ್ಲಿ ನಾಗರಿಕ ವಿಮಾನಯಾನ ಸಚಿವಾಲಯದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಸಚಿವ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಹೇಳಿದರು.
ಅವರು ರವಿವಾರ ಕಲಬುರಗಿ ನಗರದ ಐವಾನ್-ಎ-ಶಾಹಿ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತ, ಉಡಾನ್ ಯೋಜನೆಯಡಿ ಕಲಬುರಗಿ ವಿಮಾನ ನಿಲ್ದಾಣ ಸೇರ್ಪಡೆ ಮಾಡಿದಲ್ಲಿ ಕಲಬುರಗಿ ಜನರ ಗಗನ ಹಾರಾಟದ ಕನಸು ದಿನಗಳು ಸನ್ನಿಹವಾದಂತೆ. ರಾಜ್ಯ ಸರ್ಕಾರವೆ ಸಂಪೂರ್ಣವಾಗಿ ಅಭಿವೃದ್ಧಿಪಡಿಸಿರುವ ಯೋಜನೆ ಇದಾಗಿದ್ದು, ಕಲಬುರಗಿ ವಿಮಾನ ನಿಲ್ದಾಣದಿಂದ ವಾಣಿಜ್ಯ ಕಾರ್ಯಾಚರಣೆ ಆರಂಭಗೊಂಡಲ್ಲಿ ವಿಮಾನಯಾನ ಸಾರಿಗೆ ಮತ್ತು ಈ ಭಾಗದ ಅಭಿವೃದ್ಧಿಗೆ ಮತ್ತೊಂದು ಮೈಲಿಗಲ್ಲು ಆಗಲಿದೆ. ಹೀಗಾಗಿ ಹೈದ್ರಾಬಾದಿನ ಏಶಿಯಾ ಪೆಸಿಫಿಕ್ ಫ್ಲೈಟ್ ಟ್ರೇನಿಂಗ್ ಸೆಂಟರ್ ಅಕಾಡೆಮಿಯಿಂದ ರವಿವಾರ ಪ್ರಾಯೋಗಿಕ ವಿಮಾನ ಹಾರಾಟ ನಡೆಸಲಾಗುತ್ತಿದೆ ಎಂದರು.
2008ರಲ್ಲಿ ಕಲಬುರಗಿ ವಿಮಾನ ನಿಲ್ದಾಣ ಕಾಮಗಾರಿ ಆರಂಭಗೊಂಡಿದ್ದು, ಆರಂಭಿಕ ಹಂತದಲ್ಲಿ ಪಿಪಿಪಿ ಯೋಜನೆಯಡಿ ಹೈದ್ರಾಬಾದಿನ ಸತ್ಯಂ ಕಂಪನಿಯ ಅಂಗ ಸಂಸ್ಥೆಯಾದ ಮೇಟಾಸ್ ಸಂಸ್ಥೆಗೆ ವಿಮಾನ ನಿಲ್ದಾಣ ಕಾಮಗಾರಿಯ ಗುತ್ತಿಗೆ ನೀಡಲಾಗಿತ್ತು. ಸತ್ಯಂ ಹಗರಣ ಬಯಲಿಗೆ ಬಂದ ನಂತರ ಸದರಿ ಕಂಪನಿಯೊಂದಿಗೆ ಮಾಡಿಕೊಂಡ ಒಪ್ಪಂದ ರದ್ದುಪಡಿಸಿ ನಂತರ 2010ರಲ್ಲಿ ರಾಹಿ ಸಂಸ್ಥೆಗೆ ಜವಾಬ್ದಾರಿ ನೀಡಲಾಗಿತ್ತು. ರಾಹಿ ಸಂಸ್ಥೆಯ ನಿಧಾನಗತಿ ಕಾಮಗಾರಿಯಿಂದ ರಾಜ್ಯ ಸರ್ಕಾರ ಸದರಿ ಸಂಸ್ಥೆಯಿಂದ ಯೋಜನೆಯನ್ನು ಹಿಂಪಡೆದು ನಾಗರಿಕ ವಿಮಾನಯಾನ ಪ್ರಾಧಿಕಾರದಿಂದ ತಾಂತ್ರಿಕವಾಗಿ ಅನುಮೋದನೆ ಪಡೆದು ಉಳಿದ ಕಾಮಗಾರಿಯನ್ನು ಪೂರ್ಣಗೊಳಿಸಲು 2015ರಲ್ಲಿ ಲೋಕೋಪಯೋಗಿ ಇಲಾಖೆಗೆÉ ವಹಿಸಲಾಗಿದೆ. ಪ್ರಸ್ತುತ 175.57 ಪರಿಷ್ಕøತ ಅಂದಾಜು ಮೊತ್ತದ ವಿಮಾನ ನಿಲ್ದಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ವಿಮಾನಯಾನ ಸಂಚಾರಕ್ಕೆ ಯಾವುದೆ ತೊಂದರೆಯಿಲ್ಲ. ಇನ್ನುಳಿದ ಕಾಮಗಾರಿಗಳು ಈ ವರ್ಷಾಂತ್ಯಕ್ಕೆ ಮುಗಿಯಲಿವೆ ಎಂದರು.
742 ಎಕರೆ ಬೃಹತ್ ಪ್ರದೇಶ ಹೊಂದಿರುವ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಲಘು ವಿಮಾನಗಳು ಸೇರಿದಂತೆ ಏರ್‍ಬಸ್-320 ಸಹ ಭೂಸ್ಪರ್ಶ ಮಾಡುವಂತೆ 3.725 ಕಿ.ಮಿ. ಉದ್ದದ ರನ್‍ವೇ ಸಿದ್ದಪಡಿಸಲಾಗಿದೆ. ವಿಮಾನ ನಿಲ್ದಾಣ ಸಂಪೂರ್ಣವಾಗಿ ಸದ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಇಲ್ಲಿ ವಿಮಾನಯಾನ ಸೇವೆಗೆ ಸಂಬಂಧಪಟ್ಟಂತೆ ಕಾರ್ಯಚಟುವಟಿಕೆಗಳು ನಿರಂತರ ಸಾಗಲು ಏಶಿಯಾ ಪೆಸಿಫಿಕ್ ಫ್ಲೈಟ್ ಟ್ರೇನಿಂಗ್ ಸ್ಕೂಲ್ ಮತ್ತು ಎವಿಕಾನ್ ಟ್ರೇನಿಂಗ್ ಇನ್ಸ್‍ಟಿಟ್ಯೂಟ್ ಫ್ಲೈಯಿಂಗ್ ಸ್ಕೂಲ್ ಆರಂಭಿಸಲು ಪ್ರಸ್ತಾವನೆ ಬಂದಿದ್ದು, ನಾಗರಿಕ ವಿಮಾನಯಾನ ಪ್ರಾಧಿಕಾರದ ಅನುಮತಿ ಪಡೆದು ಇಲ್ಲಿ ತರಬೇತಿ ಶಾಲೆ ಪ್ರಾರಂಭಿಸಲಾಗುವುದು. ಇದಲ್ಲದೆ ಫ್ಲೈಟ್ ಅಟೆಂಡರ್‍ಗಳಿಗೆ ತರಬೇತಿ ನೀಡಲು ಮತ್ತು ಕೌಶಲ್ಯ ತರಬೇತಿಗಾಗಿ ಏವಿಯೆಷನ್ ಸ್ಕಿಲ್ ಟ್ರೇನಿಂಗ್ ಸಂಸ್ಥೆಯಿಂದ ಶಾಲೆ ಪ್ರಾರಂಭಿಸಲು ಆರಂಭಿಕ ಹಂತದ ಸಮಾಲೋಚನೆ ನಡೆಯುತ್ತಿದೆ ಎಂದು ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದರು.
ವಾಣಿಜ್ಯ ಕಾರ್ಯಾಚರಣೆಗೆ ಕೇಂದ್ರ ಸರ್ಕಾರದ ಅನುಮತಿ ಅಗತ್ಯವಾಗಿದ್ದು, ಫ್ಲೈಯಿಂಗ್ ಲೈಸೆನ್ಸ್ ಪಡೆಯವುದು ಸರ್ಕಾರದ ಪ್ರಥಮಾದ್ಯತೆಯಾಗಿದೆ. ನಾಗರಿಕ ವಿಮಾನಯಾನ ಪ್ರಾಧಿಕಾರದಿಂದ ಪ್ಲೈಯಿಂಗ್ ಲೈಸೆನ್ಸ್ ದೊರೆತ ನಂತರ ಖಾಸಗಿ ಸಂಸ್ಥೆಗಳಾದ ಇಂಡಿಗೋ, ಸ್ಪೈಸ್ ಜೆಟ್ ಹಾಗೂ ಇನ್ನೀತರ ಸಂಸ್ಥೆಯ ವಿಮಾನಗಳು ಇಲ್ಲಿಂದ ವಿಮಾನ ಹಾರಾಟ ಮಾಡಲು ಸದರಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕಿ ಕನೀಜ್ ಫಾತಿಮಾ, ಜಿಲ್ಲಾ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಜಗದೇವ ಗುತ್ತೇದಾರ ಸೇರಿದಂತೆ ಇನ್ನೀತರ ಮುಖಂಡರು ಉಪಸ್ಥಿತರಿದ್ದರು.










ಹೀಗಾಗಿ ಲೇಖನಗಳು News and photo Date: 26-8-2018

ಎಲ್ಲಾ ಲೇಖನಗಳು ಆಗಿದೆ News and photo Date: 26-8-2018 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ News and photo Date: 26-8-2018 ಲಿಂಕ್ ವಿಳಾಸ https://dekalungi.blogspot.com/2018/08/news-and-photo-date-26-8-2018.html

Subscribe to receive free email updates:

0 Response to "News and photo Date: 26-8-2018"

ಕಾಮೆಂಟ್‌‌ ಪೋಸ್ಟ್‌ ಮಾಡಿ