ಶೀರ್ಷಿಕೆ : News and photo Date: 25-8-2018
ಲಿಂಕ್ : News and photo Date: 25-8-2018
News and photo Date: 25-8-2018
ಜಿಲ್ಲಾ ಸಚಿವರಿಂದ ಪ್ರಾಯೋಗಿಕ ವಿಮಾನ ಹಾರಾಟ ಸಿದ್ಧತೆ ಪರಿಶೀಲನೆ
*************************************************************
ಕಲಬುರಗಿ,ಆ.25(ಕ.ವಾ.)-ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಅವರು ಶನಿವಾರ ಶ್ರೀನಿವಾಸ ಸರಡಗಿ ಹತ್ತಿರ ನಿರ್ಮಾಣಗೊಂಡಿರುವ ಕಲಬುರಗಿ ವಿಮಾನ ನಿಲ್ದಾಣದ ಕಾಮಗಾರಿ ಹಾಗೂ ಪ್ರಾಯೋಗಿಕ ವಿಮಾನ ಹಾರಾಟದ ಸಿದ್ಧತೆಗಳನ್ನು ಪರಿಶೀಲಿಸಿದರು.
ಕಲಬುರಗಿ ನಗರಕ್ಕೆ ಪ್ರಪ್ರಥಮ ಬಾರಿಗೆ ವಿಮಾನಗಳು ಬಂದಿಳಿಯುತ್ತಿವೆ. ಇದನ್ನು ನೋಡಲು ಸಾರ್ವಜನಿಕರಲ್ಲಿ ಕುತೂಹಲವಿದ್ದು, ಪ್ರಾಯೋಗಿಕ ವಿಮಾನ ಹಾರಾಟ ವೀಕ್ಷಣೆಗೆ ಆಗಮಿಸುವ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು. ಸಾರ್ವಜನಿಕರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಮಾರ್ಗವನ್ನು ಗುರುತಿಸಬೇಕು. ಸಾರ್ವಜನಿಕರು ವಿಮಾನ ನಿಲ್ದಾಣಕ್ಕೆ ಆಗಮಿಸುವಾಗ ಯಾವುದೇ ತರಹದ ವಸ್ತುಗಳನ್ನು ಹಾಗೂ ಆಹಾರ ಪದಾರ್ಥಗಳನ್ನು ತರಬಾರದೆಂದು ಮನವಿ ಮಾಡಿದರು.
ಹೈದ್ರಾಬಾದ್‍ನಿಂದ ರವಿವಾರ ಬೆಳಿಗ್ಗೆ 10.30 ರಿಂದ 11 ಗಂಟೆಯೊಳಗಾಗಿ ಒಂದು ವಿಮಾನ ಹಾಗೂ ಬೆಳಿಗ್ಗೆ 11 ರಿಂದ 11.15 ಗಂಟೆಯೊಳಗಾಗಿ ಇನ್ನೊಂದು ವಿಮಾನ ಹೀಗೆ ಎರಡು ವಿಮಾನಗಳು ಬಂದಿಳಿಯಲಿವೆ. ಈ ವಿಮಾನಗಳು ಮರಳಿ ಮಧ್ಯಾಹ್ನ 12 ಗಂಟೆಗೆ ಹಾಗೂ 12.30 ಗಂಟೆಗೆ ಟೇಕಾಫ್ ಆಗಲಿವೆ. ವಿಮಾನಗಳ ಲ್ಯಾಂಡಿಂಗ್ ಹಾಗೂ ಟೇಕಾಫ್ ಸಮಯದಲ್ಲಿ ರನ್‍ವೇ ಮೇಲೆ ಯಾವುದೇ ಪ್ರಾಣಿ ಅಥವಾ ಪಕ್ಷಿಗಳು ಇರದಂತೆ ನೋಡಿಕೊಳ್ಳಬೇಕು. ಸಾಧ್ಯವಾದಲ್ಲಿ ಪೊಲೀಸರು ಏರ್‍ಗನ್ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಸೂಚಿಸಿದರು.
ಪ್ರಾಯೋಗಿಕ ವಿಮಾನ ಹಾರಾಟ ಕಾರ್ಯಕ್ರಮಕ್ಕೆ ಕಲಬುರಗಿ ವಿಭಾಗದಿಂದ ಹಲವಾರು ನಾಯಕರು, ಗಣ್ಯರು, ಜನಪ್ರತಿನಿಧಿಗಳು ಆಗಮಿಸಲಿದ್ದು, ಅವರ ವಾಹನಗಳ ನಿಲುಗಡೆಗೆ ಹಾಗೂ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಕಲ್ಪಿಸಬೇಕು. ಕಾರ್ಯಕ್ರಮಕ್ಕೆ ಯಾವುದೇ ತರಹದ ಅಡೆತಡೆ ಆಗದಂತೆ ಎಚ್ಚರಿಕೆ ವಹಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ, ಎಶಿಯನ್ ಪೆಸಿಫಿಕ್ ಫ್ಲೈಟ್ ಟ್ರೇನಿಂಗ್ ಅಕಾಡೆಮಿಯ ಮಹಮ್ಮದ್ ಫೈಸಲ್, ಕ್ಯಾಪ್ಟನ್ ಶಾಮ, ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಇಂಜನಿಯರ ಪ್ರಕಾಶ ಶ್ರೀಹರಿ, ಕಾರ್ಯನಿರ್ವಾಹಕ ಇಂಜಿನಿಯರ್ ಅಮೀನ್ ಮುಕ್ತಾರ, ಪೊಲೀಸ್ ಅಧಿಕಾರಿಗಳು ಸೇರಿದಂತೆ ಇನ್ನಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.
ಸಮಾಜ ಕಲ್ಯಾಣ ಸಚಿವರ ಪ್ರವಾಸ
*********************************
ಕಲಬುರಗಿ,ಆ.25(ಕ.ವಾ.)-ಸಮಾಜ ಕಲ್ಯಾಣ ಸಚಿವರು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಹೈದ್ರಾಬಾದ್‍ದಿಂದ ರಸ್ತೆ ಮೂಲಕ ಆಗಸ್ಟ್ 25ರಂದು ಮಧ್ಯಾಹ್ನ 2.20 ಗಂಟೆಗೆ ಕಲಬುರಗಿಗೆ ಆಗಮಿಸುವರು. ನಂತರ ಸಚಿವರು ಆಗಸ್ಟ್ 25 ರಿಂದ 30ರವರೆಗೆ ಕಲಬುರಗಿ ಹಾಗೂ ಚಿತ್ತಾಪುರ ವಿಧಾನಸಭಾ ಕ್ಷೇತ್ರಗಳಲ್ಲಿ ನಿಗದಿತ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.
ಗಣಿ ಮತ್ತು ಭೂ ವಿಜ್ಞಾನ ಹಾಗೂ ಮುಜರಾಯಿ ಸಚಿವರ ಪ್ರವಾಸ
*******************************************************
ಕಲಬುರಗಿ,ಆ.25(ಕ.ವಾ.)-ಗಣಿ ಮತ್ತು ಭೂ ವಿಜ್ಞಾನ ಹಾಗೂ ಮುಜರಾಯಿ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ರಾಜಶೇಖರ ಬಿ. ಪಾಟೀಲ ಅವರು ಯಾದಗಿರಿಯಿಂದ ರಸ್ತೆ ಮೂಲಕ ಆಗಸ್ಟ್ 28ರಂದು ಸಂಜೆ 4.15 ಗಂಟೆಗೆ ಕಲಬುರಗಿಗೆ ಆಗಮಿಸುವರು. ಸಚಿವರು ಅಂದು ಸಂಜೆ 4.30 ಗಂಟೆಗೆ ಕಲಬುರಗಿಯಿಂದ ರಸ್ತೆ ಮೂಲಕ ಹುಮನಾಬಾದಿಗೆ ಪ್ರಯಾಣಿಸುವರು.
ವಿಮಾನ ನಿಲ್ದಾಣ ಕಾಮಗಾರಿ ಸೆಪ್ಟೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲು ತಾಕೀತು
*************************************************************************
ಕಲಬುರಗಿ,ಆ.25(ಕ.ವಾ.)-ಕಲಬುರಗಿ ವಿಮಾನ ನಿಲ್ದಾಣವನ್ನು ಪ್ರಸಕ್ತ ವರ್ಷದ ಅಂತ್ಯದೊಳಗಾಗಿ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಸಿದ್ಧಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ವಿಮಾನ ನಿಲ್ದಾಣದ ಕಾಮಗಾರಿಗಳನ್ನು ಸಂಪೂರ್ಣವಾಗಿ ಸೆಪ್ಟೆಂಬರ್ ಮಾಹೆಯ ಅಂತ್ಯದೊಳಗಾಗಿ ಪೂರ್ಣಗೊಳಿಸಬೇಕೆಂದು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಸುಬೋಧ ಯಾದವ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಅವರು ಶನಿವಾರ ಕಲಬುರಗಿ ಪ್ರಾದೇಶಿಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಕಲಬುರಗಿ ವಿಮಾನ ನಿಲ್ದಾಣ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಗುತ್ತಿಗೆದಾರರು ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದ ಎಲ್ಲ ಕಟ್ಟಡ ಕಾಮಗಾರಿಗಳನ್ನು ಸೆಪ್ಟೆಂಬರ್ 10ರೊಳಗಾಗಿ ಪೂರ್ಣಗೊಳಿಸಿ ಲೋಕೋಪಯೋಗಿ ಇಲಾಖೆಗೆ ಒಪ್ಪಿಸಬೇಕು. ಈ ಕಟ್ಟಡಗಳಲ್ಲಿ ಸೆಪ್ಟೆಂಬರ್ ಅಂತ್ಯದೊಳಗಾಗಿ ಅವಶ್ಯಕ ಉಪಕರಣ, ಸಾಮಗ್ರಿಗಳನ್ನು ಅಳವಡಿಸಬೇಕೆಂದು ಗುತ್ತಿಗೆದಾರರಿಗೆ ಸೂಚಿಸಿದರು.
ವಿಮಾನ ನಿಲ್ದಾಣಕ್ಕೆ ವಿದ್ಯುತ್ ಒದಗಿಸುವ ಕಾಮಗಾರಿ ಪ್ರಗತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಪ್ರಾದೇಶಿಕ ಆಯುಕ್ತರು, ವಿದ್ಯುತ್ ಕಾಮಗಾರಿಯನ್ನು ಆದ್ಯತೆಯ ಮೇರೆಗೆ ಕೈಗೊಳ್ಳಬೇಕು. ವಿಮಾನ ನಿಲ್ದಾಣಕ್ಕೆ ವಿದ್ಯುತ್ ಸಂಪರ್ಕ ದೊರೆತಾಗ ಮಾತ್ರ ಎಲ್ಲ ಕಾಮಗಾರಿಗಳನ್ನು ಹಾಗೂ ಉಪಕರಣಗಳನ್ನು ಪರೀಕ್ಷಿಸಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಸದಾ ಸಂಪರ್ಕದಲ್ಲಿದ್ದು, ಕಾಮಗಾರಿಗಳ ಗುಣಮಟ್ಟ ಕಾಪಾಡುವ ಜೊತೆಗೆ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಮುತುವರ್ಜಿ ವಹಿಸಬೇಕೆಂದು ಹೇಳಿದರು.
ವಿಮಾನ ನಿಲ್ದಾಣದ ಎಲ್ಲ ಕಾಮಗಾರಿಗಳು ಪೂರ್ಣಗೊಳ್ಳುವ ಹಂತಗಳಲ್ಲಿವೆ. ಪ್ರಗತಿಯಲ್ಲಿರುವ ಹಾಗೂ ಈವರೆಗೆ ಕೈಗೊಂಡಿರುವ ಕಾಮಗಾರಿಗಳ ಬಿಲ್ಲನ್ನು ಸಲ್ಲಿಸಿದಲ್ಲಿ ತಕ್ಷಣ ಪಾವತಿಸಲಾಗುವುದು. ಅನುದಾನದ ಯಾವುದೇ ಕೊರತೆ ಇರುವುದಿಲ್ಲ. ಗುತ್ತಿಗೆದಾರರು ಬೇಗನೇ ಬಿಲ್ಲುಗಳನ್ನು ಲೋಕೋಪಯೋಗಿ ಇಲಾಖೆಗೆ ಸಲ್ಲಿಸಬೇಕು. ವಿಮಾನ ನಿಲ್ದಾಣಕ್ಕೆ ಅವಶ್ಯಕವಿರುವ ಅಗ್ನಿಶಾಮಕ ವಾಹನಗಳ ಹಾಗೂ ಉಪಕರಣಗಳನ್ನು ಆದಷ್ಟು ಬೇಗ ಖರೀದಿಸಿ ನೀಡುವಂತೆ ಕ್ರಮ ಜರುಗಿಸಬೇಕೆಂದು ಅಗ್ನಿಶಾಮಕ ದಳದ ಅಧಿಕಾರಿಗಳಿಗೆ ತಿಳಿಸಿದರು.
ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜನೀಯರ ಅಮೀನ ಮುಕ್ತಾರ ಮಾತನಾಡಿ, ಕಲಬುರಗಿ ವಿಮಾನ ನಿಲ್ದಾಣ ಕಾಮಗಾರಿಗೆ 175.57 ಕೋಟಿ ರೂ.ಗಳ ಪರಿಷ್ಕøತ ಅಂದಾಜು ಪಟ್ಟಿಗೆ ಸರ್ಕಾರ ಅನುಮೋದನೆ ನೀಡಿದೆ. ಹೆಚ್.ಕೆ.ಆರ್.ಡಿ.ಬಿ. ನೀಡಿರುವ ತನ್ನ ಪಾಲು 58.51 ಕೋಟಿ ರೂ.ಗಳು ಸೇರಿದಂತೆ ಈವರೆಗೆ 106.87 ಕೋಟಿ ರೂ.ಗಳು ಖರ್ಚಾಗಿವೆ. ಪ್ರಥಮ ಪ್ಯಾಕೇಜಿನಲ್ಲಿರುವ 3.72 ಕಿ.ಮಿ. ರನ್ ವೇ, ಎಪ್ರಾನ್, ಈಸೋಲೇಶನ್ ಬೇ, ಪೆರಿಫೆರಲ್ ರೋಡ, ಆವರಣ ಗೋಡೆ, ಡ್ರೇನ್ ಕಾಮಗಾರಿಗಳು ಪೂರ್ಣಗೊಂಡಿವೆ. ಎರಡನೇ ಪ್ಯಾಕೇಜಿನಲ್ಲಿರುವ ಪ್ಯಾಸೆಂಜರ್ ಟರ್ಮಿನಲ್ ಬಿಲ್ಡಿಂಗ್, ಏರ್ ಟ್ರಾಫಿಕ್ ಕಂಟ್ರೋಲ್ ಬಿಲ್ಡಿಂಗ್, ಕ್ರ್ಯಾಶ್ ಫೈರ್ ಆಂಡ್ ರೆಸ್ಕ್ಯೂ ಬಿಲ್ಡಿಂಗ್, ಎಲೆಕ್ಟ್ರಿಕ್ ಸಬ್ ಸ್ಟೇಶನ್ ಕಟ್ಟಡಗಳ ಕಾಮಗಾರಿಗಳು ಮುಗಿಯುವ ಹಂತದಲ್ಲಿವೆ. ಇನ್ನಿತರೇ ಉಪಕರಣಗಳಾದ ಫೈರ್ ಫೈಟಿಂಗ್, ಸಿಗ್ನಲ್ಸ್, ಸೇಫ್ಟಿ ಇಕ್ಯೂಪ್‍ಮೆಂಟ್‍ಗಳನ್ನು ಖರೀದಿಸಲಾಗಿದೆ. ಮೂರನೇ ಪ್ಯಾಕೇಜಿನಲ್ಲಿರುವ ಅಟೋಮೆಟಿಕ್ ವೆದರ್ ಸೆಷನ್, ಏರ್ ಕಂಡೀಷನಿಂಗ್ ಕಾಮಗಾರಿಗಳು ಪೂರ್ಣಗೊಂಡಿದ್ದು, ಏರ್ ಫೀಲ್ಡ್ ಲೈಟಿಂಗ್ ಸಿಸ್ಟಮ್, ಬ್ಯಾಗೇಜ್ ಹ್ಯಾಂಡಲಿಂಗ್ ಸಿಸ್ಟಮ್, ವೈ-ಫೈ ನೆಟವರ್ಕಿಗ್ ಕಾಮಗಾರಿಗಳು ಪ್ರಗತಿಯಲ್ಲಿವೆ. ಫರ್ನಿಶಿಂಗ್, ಫ್ಲೈಟ್ ಇನ್ಫಾರ್ಮೇಶನ್ ಡಿಸ್‍ಪ್ಲೆ, ಎಕ್ಸ್ ರೇ ಮಶೀನ್‍ಗಳನ್ನು ಖರೀದಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ, ಎಶಿಯನ್ ಪೆಸಿಫಿಕ್ ಫ್ಲೈಟ್ ಟ್ರೇನಿಂಗ್ ಅಕಾಡೆಮಿಯ ಮಹಮ್ಮದ್ ಫೈಸಲ್, ಕ್ಯಾಪ್ಟನ್ ಶಾಮ, ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜನೀಯರ ಎನ್.ಎಸ್.ರಮೇಶ, ಅಧೀಕ್ಷಕ ಇಂಜನಿಯರ ಪ್ರಕಾಶ ಶ್ರೀಹರಿ, ಚೀಫ್ ಫೈರ್ ಆಫೀಸರ್ ಎಫ್.ಆರ್.ಶರೀಫ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.
ಆ. 27ರಂದು ಪ್ರಾಕೃತ ಜಗದ್ವಲಯ ಕೃತಿಯ ಬಿಡುಗಡೆ-ಸಂವಾದ
*********************************************************
ಕಲಬುರಗಿ,ಆ.25(ಕ.ವಾ.)-ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರಗಿ ಇವರ ವತಿಯಿಂದ ಪ್ರಸಿದ್ಧ ಸಂಶೋಧಕ ಪ್ರೊ. ಷ. ಶೆಟ್ಟರ್ ಅವರ ಪ್ರಾಕೃತ ಜಗದ್ವಲಯ (ಎರಡನೇ ಮುದ್ರಣ) ಕೃತಿಯ ಬಿಡುಗಡೆ ಹಾಗೂ ಸಂವಾದ ಕಾರ್ಯಕ್ರಮವನ್ನು ಇದೇ ಆಗಸ್ಟ್ 27ರಂದು ಮಧ್ಯಾಹ್ನ 3 ಗಂಟೆಗೆ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರಗಿಯ ಕಾರ್ಯಸೌಧ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಚ್.ಎಂ. ಮಹೇಶ್ವರಯ್ಯ ಅಧ್ಯಕ್ಷತೆ ವಹಿಸುವರು. ಪ್ರಸಿದ್ಧ ಸಂಶೋಧಕ ಪ್ರೊ. ಷ. ಶೆಟ್ಟರ್ ಮುಖ್ಯ ಅತಿಥಿಗಳಾಗಿ ಹಾಗೂ ಸಮಕುಲಪತಿ ಪ್ರೊ. ಜಿ.ಆರ್.ನಾಯಕ, ಕುಲಸಚಿವ ಪ್ರೊ. ಚಂದ್ರಕಾಂತ ಯಾತನೂರು, ಶಾಸ್ತ್ರೀಯ ಕನ್ನಡ ಕೇಂದ್ರದ ನಿರ್ದೇಶಕ ಪ್ರೊ.ಶಿವಗಂಗಾ ರುಮ್ಮಾ, ಮಾನವಿಕ ಮತ್ತು ಭಾಷಾ ನಿಕಾಯಿ ಡೀನರಾದ ಪ್ರೊ. ಸುನೀತಾ ಮಂಜನಬೈಲ್, ಬೆಂಗಳೂರಿನ ಅಭಿನವ ಪ್ರಕಾಶಕರುಗಳಾದ ನ. ರವಿಕುಮಾರ ಹಾಗೂ ಪಿ. ಚಂದ್ರೀಕಾ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.
ಕನ್ನಡ ಪುಸ್ತಕ ಮುದ್ರಣ ಸೊಗಸು-2017 ಬಹುಮಾನ: ಅರ್ಜಿ ಆಹ್ವಾನ
***********************************************************
ಕಲಬುರಗಿ,ಆ.25(ಕ.ವಾ.)-ಕನ್ನಡ ಪುಸ್ತಕ ಪ್ರಾಧಿಕಾರದಿಂದ 2017ರ ಜನವರಿಯಿಂದ ಡಿಸೆಂಬರ್ ಅವಧಿಯಲ್ಲಿ ಕನ್ನಡದಲ್ಲಿ ಪ್ರಕಟವಾದ ಕೃತಿಗಳಿಗೆ, ಅವುಗಳ ಮುದ್ರಣ ಗುಣಮಟ್ಟವನ್ನು ಪರಿಗಣಿಸಿ ಮುದ್ರಕರಿಗೆ “ಕನ್ನಡ ಪುಸ್ತಕ ಮುದ್ರಣ ಸೊಗಸು-2017” ಬಹುಮಾನವನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.
ಪುಸಕ್ತದ ಹೆಸರು, ಲೇಖಕರ ಹೆಸರು, ಪ್ರಕಟವಾದ ವರ್ಷ, ಮುದ್ರಕರ ಹೆಸರು ಎಲ್ಲ ವಿವರಗಳೊಂದಿಗೆ ಪುಸ್ತಕದ ಎರಡು ಪ್ರತಿಗಳನ್ನು 2018ರ ಆಗಸ್ಟ್ 27 ರೊಳಗಾಗಿ ಆಡಳಿತಾಧಿಕಾರಿಗಳು, ಕನ್ನಡ ಭವನ, ಜೆ.ಸಿ. ರಸ್ತೆ ಬೆಂಗಳೂರು-560002 ವಿಳಾಸಕ್ಕೆ ಕಳುಹಿಸಬೇಕು. ಬಹುಮಾನಕ್ಕಾಗಿ ಕಳುಹಿಸಿದ ಪುಸ್ತಕಗಳನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಪ್ರಾಧಿಕಾರ ಮೇಲ್ಕಂಡ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 080-22484516, 22107704 ಹಾಗೂ ಪ್ರಾಧಿಕಾರದ ತಿತಿತಿ.ಞಚಿಟಿಟಿಚಿಜಚಿಠಿusಣಚಿಞಚಿಠಿಡಿಚಿಜhiಞಚಿಡಿಚಿ.ಛಿom ವೆಬ್‍ಸೈಟ್‍ನ್ನು ಸಂಪರ್ಕಿಸಬಹುದಾಗಿದೆ.
ರಾಷ್ಟ್ರ ಮಟ್ಟದ ಯುವ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
******************************************
ಕಲಬುರಗಿ,ಆ.25(ಕ.ವಾ.)-ಕಲಬುರಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 2016-17ನೇ ಸಾಲಿನ ರಾಷ್ಟ್ರ ಮಟ್ಟದ ಯುವ ಪ್ರಶಸ್ತಿಗಾಗಿ 15 ರಿಂದ 29 ವರ್ಷದ ವಯೋಮಿತಿಯೊಳಗಿನ ಯುವಕ ಮತ್ತು ಯುವತಿಯರು ಹಾಗೂ ಯುವಕ ಮತ್ತು ಯುವತಿ ಸಂಘಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಯುವಜನ ಸೇವೆ, ರಾಷ್ಟ್ರೀಯ ಅಭಿವೃದ್ಧಿ ಮತ್ತು ಸಮಾಜ ಸೇವೆಗಳಾದ ಆರೋಗ್ಯ, ಸಂಶೋಧನೆ, ಕಲೆ ಮತ್ತು ಸಾಹಿತ್ಯ, ಪ್ರವಾಸ, ಕ್ರೀಡೆ, ಸಾಂಪ್ರಾದಾಯಿಕ ಔಷಧಿಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ್ದ ಪುರಾವೆಗಳ ಮೂಲ ದಾಖಲೆಗಳನ್ನು ಎ-4 ಅಳತೆಯ ಕಾಗದದಲ್ಲಿ ಸ್ವಷ್ಟವಾಗಿ ಆಂಗ್ಲ ಭಾಷೆಯಲ್ಲಿ ನಿಗದಿತ ಅರ್ಜಿ ನಮೂನೆಯಲ್ಲಿ ವಿವರಗಳನ್ನು ಸ್ಪಷ್ಟವಾಗಿ ಭರ್ತಿ ಮಾಡಿ ಸಹಿ ಮತ್ತು ಮೊಹರಿನೊಂದಿಗೆ ಅರ್ಜಿದಾರರ ಇತ್ತೀಚಿನ ಭಾವಚಿತ್ರಗಳನ್ನು ಮೂರು ಪ್ರತಿಗಳಲ್ಲಿ ಲಗತ್ತಿಸಿರಬೇಕು ಹಾಗೂ ವೈಯಕ್ತಿಕ ಮತ್ತು ಸಾಂಘಿಕ ಪ್ರಸ್ತಾವನೆಯನ್ನು ತಯಾರಿಸುವಾಗ ಕಾರ್ಯಕ್ರಮದ ದಿನಾಂಕ ಹಾಗೂ ಸದರಿ ಕಾರ್ಯಕ್ರಮಕ್ಕೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ಆಹ್ವಾನ ಪತ್ರಿಕೆ, ಛಾಯಾಚಿತ್ರಗಳು, ಪತ್ರಿಕಾ ವರದಿ, ದೃಢೀಕರಣ ಪತ್ರಗಳು ಇತ್ಯಾದಿಗಳನ್ನು ಒಂದೇ ಕಡೆ ಲಭ್ಯವಿರುವಂತೆ ಜೋಡಿಸಿ ಪ್ರಸ್ತಾವನೆಯನ್ನು ಎ-4 ಅಳತೆಯ ಕಾಗದದಲ್ಲಿ ತಯಾರಿಸಿ ಸಲ್ಲಿಸಬೇಕು.,
ಯುವಕ ಮತ್ತು ಯುವತಿಯರು ಹಾಗೂ ಯುವಕ ಮತ್ತು ಯುವತಿ ಸಂಘಗಳು ಈ ಪ್ರಶಸ್ತಿಗಾಗಿ ಪ್ರಸ್ತಾವನೆಗಳನ್ನು ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಂದ್ರಶೇಖರ ಪಾಟೀಲ್ ಕ್ರೀಡಾಂಗಣ ಕಲಬುರಗಿ ಇವರ ಕಾರ್ಯಾಲಯದಲ್ಲಿ ಸೆಪ್ಟೆಂಬರ್ 1 ರೊಳಗಾಗಿ ಸಲ್ಲಿಸಬೇಕು. ಕೊನೆಯ ದಿನಾಂಕದ ನಂತರ ಬಂದ ಪ್ರಸ್ತಾವನೆಗಳನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಸದರಿ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 9480886476, ಕಚೇರಿ ದೂರವಾಣಿ ಸಂಖ್ಯೆ 08472-268637ಗಳನ್ನು ಸಂಪರ್ಕಿಸಬೇಕೆಂದು ಅವರು ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು News and photo Date: 25-8-2018
ಎಲ್ಲಾ ಲೇಖನಗಳು ಆಗಿದೆ News and photo Date: 25-8-2018 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ News and photo Date: 25-8-2018 ಲಿಂಕ್ ವಿಳಾಸ https://dekalungi.blogspot.com/2018/08/news-and-photo-date-25-8-2018.html





0 Response to "News and photo Date: 25-8-2018"
ಕಾಮೆಂಟ್ ಪೋಸ್ಟ್ ಮಾಡಿ