ಶೀರ್ಷಿಕೆ : ತುಂಗಭದ್ರಾ ಕಾಲುವೆ ಪ್ರದೇಶಗಳಿಗೆ ಮಧ್ಯರಾತ್ರಿ ಡಿ.ಸಿ. ದಿಢೀರ್ ಭೇಟಿ : ನೀರು ಹರಿವು ಪ್ರಮಾಣ ಮತ್ತು ಬಂದೋಬಸ್ತ್ ಕುರಿತು ಖುದ್ದು ಪರಿಶೀಲನೆ
ಲಿಂಕ್ : ತುಂಗಭದ್ರಾ ಕಾಲುವೆ ಪ್ರದೇಶಗಳಿಗೆ ಮಧ್ಯರಾತ್ರಿ ಡಿ.ಸಿ. ದಿಢೀರ್ ಭೇಟಿ : ನೀರು ಹರಿವು ಪ್ರಮಾಣ ಮತ್ತು ಬಂದೋಬಸ್ತ್ ಕುರಿತು ಖುದ್ದು ಪರಿಶೀಲನೆ
ತುಂಗಭದ್ರಾ ಕಾಲುವೆ ಪ್ರದೇಶಗಳಿಗೆ ಮಧ್ಯರಾತ್ರಿ ಡಿ.ಸಿ. ದಿಢೀರ್ ಭೇಟಿ : ನೀರು ಹರಿವು ಪ್ರಮಾಣ ಮತ್ತು ಬಂದೋಬಸ್ತ್ ಕುರಿತು ಖುದ್ದು ಪರಿಶೀಲನೆ
ಕೊಪ್ಪಳ ಆ. 27 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಶನಿವಾರದಂದು ತುಂಗಭದ್ರಾ ಎಡದಂಡೆ ಕಾಲುವೆ ಪ್ರದೇಶದುದ್ದಕ್ಕೂ ಮಧ್ಯರಾತ್ರಿ ದಿಢೀರ್ ಭೇಟಿ ನೀಡಿ, ಕಾಲುವೆಯಲ್ಲಿನ ನೀರಿನ ಹರಿವು ಪ್ರಮಾಣ ಹಾಗೂ ಬಂದೋಬಸ್ತ್ ಕುರಿತು ಖುದ್ದು ಪರಿಶೀಲನೆ ನಡೆಸಿದರು.ಕೊಪ್ಪಳ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳ ರೈತರ ಪಾಲಿಗೆ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಿಂದ ಎಡದಂಡೆ ಕಾಲುವೆ ಮೂಲಕ ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ರೈತರ ಕೃಷಿ ಚಟುವಟಿಕೆಗಳಿಗಾಗಿ ಈಗಾಗಲೆ ನೀರು ಹರಿಸಲಾಗಿದೆ. ತುಂಗಭದ್ರಾ ಎಡದಂಡೆ ಕಾಲುವೆಯ ಟೇಲ್ ಎಂಡ್ ಪ್ರದೇಶಗಳಲ್ಲಿ ನೀರಿನ ಹರಿವು ಪ್ರಮಾಣ ಕಡಿಮೆ ಇರುವುದಾಗಿ, ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿಗಳು ಶನಿವಾರದಂದು ಮಧ್ಯರಾತ್ರಿ ತುಂಗಭದ್ರಾ ಎಡದಂಡೆ ಕಾಲುವೆ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶನಿವಾರದಂದು ರಾತ್ರಿ 10.30 ಗಂಟೆಗೆ ತಮ್ಮ ಭೇಟಿ ಕಾರ್ಯಕ್ರಮವನ್ನು ಪ್ರಾರಂಭಿಸಿದ ಜಿಲ್ಲಾಧಿಕಾರಿಗಳು, ಮೈಲ್ ಸಂಖ್ಯೆ 24 ರಿಂದ ಜಿಲ್ಲೆಯ ಗಡಿ ಪ್ರದೇಶವಾದ ಕಾರಟಗಿಯ ಮೈಲ್ ಸಂಖ್ಯೆ 47 ರವರೆಗೂ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಿಶೀಲನಾ ಕಾರ್ಯ ಬೆಳಗಿನ ಜಾವ 04 ಗಂಟೆಯವರೆಗೂ ನಡೆಯಿತು. ಮುಖ್ಯ ಕಾಲುವೆಯಿಂದ ಡಿಸ್ಟ್ರಿಬ್ಯೂಟರಿ ಕಾಲುವೆಗಳಿಗೆ ನೀರಿನ ಹರಿವು ಪ್ರಮಾಣ, ಗೇಜ್ ನಿರ್ವಹಣೆ ಕುರಿತಂತೆ ಖುದ್ದು ಮನವರಿಕೆ ಮಾಡಿಕೊಂಡರು. ಅಲ್ಲದೆ ಕಾಲುವೆಯುದ್ದಕ್ಕೂ ಪ್ರದೇಶಗಳಿಗೆ ಕಂದಾಯ, ನೀರಾವರಿ ಹಾಗೂ ಪೊಲೀಸ್ ಇಲಾಖೆಯನ್ನೊಳಗೊಂಡಂತೆ ಬಂದೋಬಸ್ತ್‍ಗಾಗಿ ಅಧಿಕಾರಿ, ಸಿಬ್ಬಂದಿಗಳನ್ನು ಈಗಾಗಲೆ ನಿಯೋಜಿಸಿದ್ದು, ಬಂದೋಬಸ್ತ್ ನಿರ್ವಹಣೆ ಕುರಿತಂತೆಯೂ ಪರಿಶೀಲನೆ ನಡೆಸಿದರು.

ಕೊಪ್ಪಳ ತಹಸಿಲ್ದಾರ್ ಗುರುಬಸವರಾಜ್ ಅವರು ಜಿಲ್ಲಾಧಿಕಾರಿಗಳೊಂದಿಗೆ ಇದ್ದು, ಕಾಲುವೆ ಪ್ರದೇಶಗಳು, ನೀರಿನ ಹರಿವು, ಬಂದೋಬಸ್ತ್ ಕುರಿತಂತೆ ಮಾಹಿತಿ ನೀಡಿದರು. ಕಂದಾಯ ಇಲಾಖೆ, ನೀರಾವರಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹೀಗಾಗಿ ಲೇಖನಗಳು ತುಂಗಭದ್ರಾ ಕಾಲುವೆ ಪ್ರದೇಶಗಳಿಗೆ ಮಧ್ಯರಾತ್ರಿ ಡಿ.ಸಿ. ದಿಢೀರ್ ಭೇಟಿ : ನೀರು ಹರಿವು ಪ್ರಮಾಣ ಮತ್ತು ಬಂದೋಬಸ್ತ್ ಕುರಿತು ಖುದ್ದು ಪರಿಶೀಲನೆ
ಎಲ್ಲಾ ಲೇಖನಗಳು ಆಗಿದೆ ತುಂಗಭದ್ರಾ ಕಾಲುವೆ ಪ್ರದೇಶಗಳಿಗೆ ಮಧ್ಯರಾತ್ರಿ ಡಿ.ಸಿ. ದಿಢೀರ್ ಭೇಟಿ : ನೀರು ಹರಿವು ಪ್ರಮಾಣ ಮತ್ತು ಬಂದೋಬಸ್ತ್ ಕುರಿತು ಖುದ್ದು ಪರಿಶೀಲನೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ತುಂಗಭದ್ರಾ ಕಾಲುವೆ ಪ್ರದೇಶಗಳಿಗೆ ಮಧ್ಯರಾತ್ರಿ ಡಿ.ಸಿ. ದಿಢೀರ್ ಭೇಟಿ : ನೀರು ಹರಿವು ಪ್ರಮಾಣ ಮತ್ತು ಬಂದೋಬಸ್ತ್ ಕುರಿತು ಖುದ್ದು ಪರಿಶೀಲನೆ ಲಿಂಕ್ ವಿಳಾಸ https://dekalungi.blogspot.com/2018/08/blog-post_97.html

0 Response to "ತುಂಗಭದ್ರಾ ಕಾಲುವೆ ಪ್ರದೇಶಗಳಿಗೆ ಮಧ್ಯರಾತ್ರಿ ಡಿ.ಸಿ. ದಿಢೀರ್ ಭೇಟಿ : ನೀರು ಹರಿವು ಪ್ರಮಾಣ ಮತ್ತು ಬಂದೋಬಸ್ತ್ ಕುರಿತು ಖುದ್ದು ಪರಿಶೀಲನೆ"
ಕಾಮೆಂಟ್ ಪೋಸ್ಟ್ ಮಾಡಿ