ಶೀರ್ಷಿಕೆ : ಪ್ರೀತಿ
ಲಿಂಕ್ : ಪ್ರೀತಿ
ಪ್ರೀತಿ
ಪ್ರವೀಣಕುಮಾರ್ ಗೋಣಿ
ಪ್ರೀತಿಸಿದಷ್ಟು ಪಡೆಯುತ್ತ ಹೋಗುವೆ
ದ್ವೇಷಿಸಿದಷ್ಟು ಕಳೆದುಕೊಳ್ಳುತ್ತಾ ಸಾಗುವೆ
ಸುಮ್ಮನೆ ಪ್ರೀತಿಸು ! ಅಕಾರಣವಾಗಿ ಪ್ರೀತಿಸು !
ಪ್ರೀತಿಯೊಂದೇ ಪವಿತ್ರವಾದುದ್ದು
ಪರಮ ಅರಿವಿನ ಹಾದಿಯದು ಪ್ರೀತಿ .
ಪ್ರೀತಿಸುತ್ತ ಪಾಮರತೆಯು ಸರಿವುದು
ಇರುಳು ಸರಿದು ಹಗಲು ಅರಳುವಂತೆ ,
ಪ್ರೀತಿಸುತ್ತಲೇ ಹೃದಯ ಅರಳುವುದು
ಮೊಗ್ಗುಗಳೆಲ್ಲ ಅರಳಿ ಪರಿಮಳವ ಬೀರುವಂತೆ .
ಪ್ರೀತಿಯೇ ಹಾಗೇ , ಹಾತೊರೆದಷ್ಟು
ಕೊರೆಯಾಗಿ ಕಾಡುವುದು ,
ಬೇಕೆಂದೆಷ್ಟು ದಕ್ಕದೆ ಬೇಡುವವನ
ಹೃದಯವನ್ನ ಬಡವಾಗಿಸುವುದು .
ಅದಕ್ಕೆ ಪ್ರೀತಿಯನ್ನ , ನಿನ್ನ ಹೃದಯದಿಂದ
ತಿರುಗೇನನ್ನೂ ಬಯಸದೆ , ಬಸಿ ಬಸಿದು
ಕೊಡುತ್ತ ಸಾಗು .ನಿನ್ನಂತರ್ಯ
ಪ್ರೀತಿಯ ಜಲಧಿಯಾಗುವುದು ,
ನಿನ್ನ ಹೃದಯವೇ ಪ್ರೀತಿಯ
ಉಗಮಸ್ಥಾನವಾಗಿ ಹೋಗುವುದು .
ಹೀಗಾಗಿ ಲೇಖನಗಳು ಪ್ರೀತಿ
ಎಲ್ಲಾ ಲೇಖನಗಳು ಆಗಿದೆ ಪ್ರೀತಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಪ್ರೀತಿ ಲಿಂಕ್ ವಿಳಾಸ https://dekalungi.blogspot.com/2018/08/blog-post_63.html
0 Response to "ಪ್ರೀತಿ"
ಕಾಮೆಂಟ್ ಪೋಸ್ಟ್ ಮಾಡಿ