ಶೀರ್ಷಿಕೆ : ಮೆಕ್ಕೆಜೋಳಕ್ಕೆ ಸೈನಿಕ ಹುಳು : ನಿಯಂತ್ರಣಕ್ಕೆ ರೈತರಿಗೆ ಸಲಹೆ
ಲಿಂಕ್ : ಮೆಕ್ಕೆಜೋಳಕ್ಕೆ ಸೈನಿಕ ಹುಳು : ನಿಯಂತ್ರಣಕ್ಕೆ ರೈತರಿಗೆ ಸಲಹೆ
ಮೆಕ್ಕೆಜೋಳಕ್ಕೆ ಸೈನಿಕ ಹುಳು : ನಿಯಂತ್ರಣಕ್ಕೆ ರೈತರಿಗೆ ಸಲಹೆ
ಕೊಪ್ಪಳ ಆ. 16 (ಕರ್ನಾಟಕ ವಾರ್ತೆ): ಮೆಕ್ಕೆಜೋಳ ಸೇರಿದಂತೆ ವಿವಿಧ ಏಕದಳ ಧಾನ್ಯಗಳಿಗೆ ಕಂಠಕವಾಗಬಹುದಾದ ಹೊಸ ಕೀಟಪೀಡೆ ಹುಸಿ ಸೈನಿಕ ಹುಳು (ಸ್ಪೋಡಾಪ್ಟೆರಾ ಫ್ರುಗಿಫರ್ಡಾ) ಆಗಿದ್ದು, ಇದರ ನಿಯಂತ್ರಣಕ್ಕೆ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಿಂದ ರೈತರಿಗೆ ಸಲಹೆಗಳನ್ನು ನೀಡಲಾಗಿದೆ.
ರಾಜ್ಯದಲ್ಲಿ ಮೆಕ್ಕೆಜೋಳದ ಮೇಲೆ ಇತ್ತೀಚೆಗೆ ಹೊಸಕೀಟವೊಂದು ಕಾಣಿಸಿಕೊಂಡಿದ್ದು, ಏಕದಳ ಧಾನ್ಯ ಬೆಳೆಗಳ ಮೇಲೆ ಕಂಠಕಪ್ರಾಯವಾಗುವ ಸಾಧ್ಯತೆ ಇರುತ್ತದೆ. ಈ ಕೀಟವನ್ನು ವಿಜ್ಞಾನಿಗಳು ‘ಫಾಲ್ ಆರ್ಮಿವಾರ್ಮ್’ ಎಂತಲೂ ವೈಜ್ಞಾನಿಕವಾಗಿ “ಸ್ಪೋಡಾಪ್ಟೆರಾ ಫ್ರುಗಿಫರ್ಡಾ” ಎಂದು ಹೆಸರಿಸಿದ್ದಾರೆ. ಈ ಕೀಟವು ಕಂದು ಬಣ್ಣದ ಪತಂಗವಾಗಿದ್ದು, ರೆಕ್ಕೆಯ ಅಂಚಿನಲ್ಲಿ ಬಿಳಿಯ ಪಟ್ಟಿಗಳನ್ನು ಹೊಂದಿದೆ. ಕೀಟದ ಜೀವನ ಚಕ್ರವು 30 ರಿಂದ 40 ದಿನಗಳನ್ನು ಹೊಂದಿದ್ದು, ಸಾಧಾರಣವಾಗಿ ಸುಮಾರು ಸಾವಿರ ತತ್ತಿಗಳನ್ನು ಇಡುವ ಶಕ್ತಿಯನ್ನು ಹೊಂದಿದೆ. ಇದರಿಂದಾಗಿ ಕೀಟವು ಅಲ್ಪಾವಧಿಯಲ್ಲಿಯೇ ಬೃಹದಾಕಾರವಾಗಿ ಅಭಿವೃದ್ದಿಹೊಂದುವ ಸಾಮಥ್ರ್ಯ ಪಡೆದಿದೆ. ಅಲ್ಲದೇ, ಸುಮಾರು 500 ರಿಂದ 100 ಕಿ.ಮೀ ವರಗೆ ವಲಸೆ ಹೋಗುವ ಶಕ್ತಿಯನ್ನು ಹೊಂದಿರುತ್ತದೆ. ಈ ಕೀಟವು ತರಕಾರಿ ಬೆಳೆಗಳು, ಭತ್ತ, ಕಬ್ಬು, ಹತ್ತಿ ಹಾಗೂ ಜೋಳ ಬೆಳೆಗಳ ಮೇಲೂ ದಾಳಿಮಾಡುವ ಸಾಧ್ಯತೆ ಇದೆ. ಇದರಿಂದಾಗಿದೆ ಶೇ.40 ರಿಂದ 70 ರಷ್ಟು ಬೆಳೆ ಹಾನಿ ಸಾಧ್ಯತೆ ಇರುತ್ತದೆ. ಇದರ ನಿಯಂತ್ರಣಕ್ಕೆ ಕೆಲವು ಸಲಹೆಗಳನ್ನು ನೀಡಲಾಗಿದೆ.
ನಿಯಂತ್ರಣ ಕ್ರಮಗಳು : ಪ್ರೌಢ ಪತಂಗವು ಮೊಟ್ಟೆಗಳನ್ನು ಗುಂಪಾಗಿ ಇಡುವುದರಿಂದ ಮೊಟ್ಟೆ ಹಾಗು ಮರಿ ಹುಳುಗಳನ್ನು ಆರಿಸಿ ತೆಗೆಯಬೇಕು. ಮರಿಹುಳು ಕಂಡ ತಕ್ಷಣ ಶೇ.5 ರ ಬೇವಿನ ಬೀಜದ ಕಷಾಯವನ್ನು ಸಿಂಪಡಿಸಬೇಕು. ನ್ಯುಮೋರಿಯಾ ರಿಲೇ ಜೈವಿಕ ಕೀಟನಾಶಕವನ್ನು 2 ಗ್ರಾಂ. ಪ್ರತಿ ಲೀ. ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಇಮಾಮೆಕ್ಟಿನ್ ಬೆಂಜೋಯೇಟ್ 5% ಎಸ್.ಜಿ. @ 0.4ಗ್ರಾಂ. ಅಥವಾ ಸ್ಪೈನೋಸೈಡ್ 45 ಎಸ್.ಸಿ. @ 0.3 ಮಿ.ಲೀ. ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪಡಿಸಬೇಕು. ಬೆಳೆದ ಹುಳುಗಳನ್ನು ಹತೋಟಿಯಲ್ಲಿಡಲು ವಿಷಪಾಶಾಣದ ಬಳಕೆ ಮಾಡಬೇಕು. 10 ಕೆ.ಜಿ. ತೌಡು, 5 ಕೆ.ಜಿ. ಬೆಲ್ಲ, 4-5 ಲೀ. ನೀರು ಕಲಸಿ ಇಟ್ಟು, ಮಾರನೆ ದಿನ 100 ಗ್ರಾಂ. ಥಯೋಡಿಕಾರ್ಬ್ (ಪ್ರತಿ ಕೇಜಿ ಭತ್ತದ ತೌಡಿಗೆ 10ಗ್ರಾಂ. ನಂತೆ) ಕೀಟನಾಶಕ ಮಿಶ್ರಣಮಾಡಿ ಸಂಜೆ 5 ಗಂಟೆಯ ನಂತರ ಬೆಳೆಯ ಸುಳಿಯಲ್ಲಿ ಹಾಕಬೇಕು. ವಿಶೇಷ ಸೂಚನೆ ಎಂದರೆ ಕೀಟನಾಶಕ ಮತ್ತು ವಿಷಪಾಶಾಣವನ್ನು ಸುಳಿಯಲ್ಲಿ ನೀಡಬೇಕು. ವಿಷಪಾಶಾಣ ನೀಡಿದ ಮೆಕ್ಕೆಜೋಳದ ತಾಕಿನಲ್ಲಿ ಜಾನುವಾರುಗಳನ್ನು ಮೇಯಲು ಬಿಡಬಾರದು.
ರೈತರು ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 9900145705 ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಷಯ ತಜ್ಞರಾದ (ಕೀಟಶಾಸ್ತ್ರ) ಬದರಿಪ್ರಸಾದ ಪಿ.ಆರ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಮೆಕ್ಕೆಜೋಳಕ್ಕೆ ಸೈನಿಕ ಹುಳು : ನಿಯಂತ್ರಣಕ್ಕೆ ರೈತರಿಗೆ ಸಲಹೆ
ಎಲ್ಲಾ ಲೇಖನಗಳು ಆಗಿದೆ ಮೆಕ್ಕೆಜೋಳಕ್ಕೆ ಸೈನಿಕ ಹುಳು : ನಿಯಂತ್ರಣಕ್ಕೆ ರೈತರಿಗೆ ಸಲಹೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಮೆಕ್ಕೆಜೋಳಕ್ಕೆ ಸೈನಿಕ ಹುಳು : ನಿಯಂತ್ರಣಕ್ಕೆ ರೈತರಿಗೆ ಸಲಹೆ ಲಿಂಕ್ ವಿಳಾಸ https://dekalungi.blogspot.com/2018/08/blog-post_87.html
0 Response to "ಮೆಕ್ಕೆಜೋಳಕ್ಕೆ ಸೈನಿಕ ಹುಳು : ನಿಯಂತ್ರಣಕ್ಕೆ ರೈತರಿಗೆ ಸಲಹೆ"
ಕಾಮೆಂಟ್ ಪೋಸ್ಟ್ ಮಾಡಿ