ಶೀರ್ಷಿಕೆ : ಮುನಿರಾಬಾದ : ಗುಳೆ ತಡೆ ಅಭಿಯಾನ ರಥಕ್ಕೆ ಬಾಲಚಂದ್ರನ್‍ರಿಂದ ಚಾಲನೆ
ಲಿಂಕ್ : ಮುನಿರಾಬಾದ : ಗುಳೆ ತಡೆ ಅಭಿಯಾನ ರಥಕ್ಕೆ ಬಾಲಚಂದ್ರನ್‍ರಿಂದ ಚಾಲನೆ
ಮುನಿರಾಬಾದ : ಗುಳೆ ತಡೆ ಅಭಿಯಾನ ರಥಕ್ಕೆ ಬಾಲಚಂದ್ರನ್‍ರಿಂದ ಚಾಲನೆ
ಕೊಪ್ಪಳ ಆ. 16 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕ ಪಂಚಾಯತಿ ಹಾಗೂ ಮುನಿರಾಬಾದ ಗ್ರಾ.ಪಂ ವತಿಯಿಂದ ಆಯೋಜಿಸಲಾದ ಉದ್ಯೋಗ ಮಾಹಿತಿಯುಳ್ಳ ಗುಳೆ ತಡೆ ಅಭಿಯಾನ ರಥಕ್ಕೆ ತಾ.ಪಂ ಅಧ್ಯಕ್ಷ ಬಾಲಚಂದ್ರನ್ ಅವರು ಹಸಿರು ನೀಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು.

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಐಇಸಿ ಕಾರ್ಯಕ್ರಮದಡಿ ಮುನಿರಾಬಾದ ಗ್ರಾ.ಪಂ. ಆವರಣದಲ್ಲಿ ಮಂಗಳವಾರದಂದು ಗುಳೆ ತಡೆ ಅಭಿಯಾನ ಜರುಗಿತು.
ಅಭಿಯಾನಕ್ಕೆ ಚಾಲನೆ ನೀಡಿದ ಕೊಪ್ಪಳ ತಾ.ಪಂ ಅಧ್ಯಕ್ಷ ಬಾಲಚಂದ್ರನ್ ಅವರು ಮಾತನಾಡಿ, ಮುಖ್ಯಮಂತ್ರಿಗಳ 21 ಅಂಶಗಳ ಕಾರ್ಯಕ್ರಮದಡಿಯಲ್ಲಿ "ನಮ್ಮ ಗ್ರಾಮ ಪಂಚಾಯತಿ" ವೈಯಕ್ತಿಕ ಅಥವಾ ಸಮುದಾಯಿಕ ಕಾಮಗಾರಿಗಳಲ್ಲಿ ಕೂಲಿಕಾರರು ಕೆಲಸ ನಿರ್ವಹಿಸಬಹುದಾಗಿದ್ದು, ಹತ್ತಿರದ ಗ್ರಾ.ಪಂಗೆ ಸಂಪರ್ಕಿಸಿ ನಮೂನೆ-6 ರಲ್ಲಿ ಕೂಡಲೇ ಅರ್ಜಿ ಸಲ್ಲಿಸಬಹುದು. ಪ್ರಸ್ತುತ ಬರಗಾಲ ಇರುವುದರಿಂದ ಎಲ್ಲರೂ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ಬಯಸಿ ಗ್ರಾ.ಪಂಗೆ ಅರ್ಜಿ ಸಲ್ಲಿಸಿ ಕೂಲಿ ಉದ್ಯೋಗ ಪಡೆದುಕೊಳ್ಳಿ. ಪ್ರತಿ ದಿನಕ್ಕೆ ಕೂಲಿ ರೂ.249/-ನ್ನು ನಿಗದಿಪಡಿಸಿದ್ದು ಮತ್ತು ಉಪಕರಣಗಳ ಬಳಕೆಗಾಗಿ ಗುದ್ದಲಿ, ಸಲಿಕೆ ಹರಿತಕ್ಕೆ ರೂ.10/-ನ್ನು ಹೆಚ್ಚುವರಿಯಾಗಿ ಪಾವತಿಸಲು ಅವಕಾಶವಿದೆ. ಯಾವುದೇ ಕಾರಣಕ್ಕೂ ಕೂಲಿಕಾರರು ಗುಳೆ ಹೋಗದೇ ಸ್ಥಳೀಯವಾಗಿ ಗ್ರಾ.ಪಂಗೆ ಸಂಪರ್ಕಿಸಿ ಸಮುದಾಯಿಕ ಕಾಮಗಾರಿಗಳಾದ ಕೆರೆ ಅಭಿವೃದ್ಧಿ, ಆಟದ ಮೈದಾನ, ಸ್ಮಶಾನ ಅಭಿವೃದ್ಧಿ, ನಮ್ಮ ಹೊಲ ನಮ್ಮ ರಸ್ತೆ, ಕೃಷಿ ಹೊಂಡ ನಿರ್ಮಾಣ, ಬದು ನಿರ್ಮಾಣ, ಮುಂತಾದ ಕಾಮಗಾರಿಗಳಲ್ಲಿ ಕೂಲಿಕಾರರು ಭಾಗವಹಿಸಿ ಕೆಲಸ ನಿರ್ವಹಿಸಿ ಕೂಲಿಯನ್ನು ತಮ್ಮ ಬ್ಯಾಂಕ್ ಖಾತೆಗೆ ಪಡೆದು ಕೂಲಿ ಉದ್ಯೋಗದ ಆರ್ಥಿಕ ನೆರವನ್ನು ಪಡೆದು ಸದೃಢರಾಗಬಹುದು. ಕೆಲಸಕ್ಕೆ ತಕ್ಕ ಕೂಲಿ ತಮ್ಮ ಬ್ಯಾಂಕ್ ಖಾತೆಗೆ ಜಮಾ ಆಗದಿದ್ದಲ್ಲಿ, ಪ್ರತಿ ತಿಂಗಳ 2ನೇ ಗುರುವಾರದಂದು ನಡೆಯುವ ರೋಜಗಾರ್ ಸಭೆಯಲ್ಲಿ ಭಾಗವಹಿಸಿ ತಮ್ಮ ಕುಂದು ಕೊರತೆಗಳನ್ನು ಇತ್ಯಾರ್ಥಪಡಿಸಿಕೊಳ್ಳಿ. ರೈತರ ಜಮೀನು ಲಭ್ಯವಿಲ್ಲದೇ ಇದ್ದ ಪಕ್ಷದಲ್ಲಿ ವೈಯಕ್ತಿಕ ಕಾಮಗಾರಿಗಳಾದ ದನದೊಡ್ಡಿ, ಕುರಿದೊಡ್ಡಿ ನಿರ್ಮಾಣ ಮಾಡಿಕೊಳ್ಳಲು ಅವಕಾಶವಿದ್ದು, ಉದ್ಯೋಗ ಖಾತ್ರಿ ಯೋಜನೆಯ ಸದುಪಯೋಗ ಪಡೆದುಕೊಳ್ಳಿ ಎಂದು ಕೂಲಿ ಕಾರರಿಗೆ ಹಾಗೂ ರೈತರಿಗೆ ಕರೆ ನೀಡಿದರು.
ಮುನಿರಾಬಾದ ಗ್ರಾ.ಪಂ. ಅಧ್ಯಕ್ಷೆ ಸುಶೀಲಮ್ಮ, ಉಪಾಧ್ಯಕ್ಷೆ ಖುರ್ಷಿದಾಬೇಗಂ, ಸದಸ್ಯರಾದ ವೆಂಕೋಬ ದಾಸರ, ಭಾರತಿ, ಪಿಡಿಓ ದುರ್ಗಾಪ್ರಸಾದ, ಕರವಸೂಲಿಗಾರ ರಾಜು, ಗಣಕಯಂತ್ರ ನಿರ್ವಾಹಕ ದೊಡ್ಡಬಸಪ್ಪ ಹಾಗೂ ಸಿಬ್ಬಂದಿಗಳು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹೀಗಾಗಿ ಲೇಖನಗಳು ಮುನಿರಾಬಾದ : ಗುಳೆ ತಡೆ ಅಭಿಯಾನ ರಥಕ್ಕೆ ಬಾಲಚಂದ್ರನ್‍ರಿಂದ ಚಾಲನೆ
ಎಲ್ಲಾ ಲೇಖನಗಳು ಆಗಿದೆ ಮುನಿರಾಬಾದ : ಗುಳೆ ತಡೆ ಅಭಿಯಾನ ರಥಕ್ಕೆ ಬಾಲಚಂದ್ರನ್‍ರಿಂದ ಚಾಲನೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಮುನಿರಾಬಾದ : ಗುಳೆ ತಡೆ ಅಭಿಯಾನ ರಥಕ್ಕೆ ಬಾಲಚಂದ್ರನ್‍ರಿಂದ ಚಾಲನೆ ಲಿಂಕ್ ವಿಳಾಸ https://dekalungi.blogspot.com/2018/08/blog-post_45.html
0 Response to "ಮುನಿರಾಬಾದ : ಗುಳೆ ತಡೆ ಅಭಿಯಾನ ರಥಕ್ಕೆ ಬಾಲಚಂದ್ರನ್‍ರಿಂದ ಚಾಲನೆ"
ಕಾಮೆಂಟ್ ಪೋಸ್ಟ್ ಮಾಡಿ