ಶೀರ್ಷಿಕೆ : ವಡ್ಡರಹಟ್ಟಿಯಲ್ಲಿ ಉದ್ಯೋಗ ಮಾಹಿತಿ ರಥಕ್ಕೆ ಚಾಲನೆ
ಲಿಂಕ್ : ವಡ್ಡರಹಟ್ಟಿಯಲ್ಲಿ ಉದ್ಯೋಗ ಮಾಹಿತಿ ರಥಕ್ಕೆ ಚಾಲನೆ
ವಡ್ಡರಹಟ್ಟಿಯಲ್ಲಿ ಉದ್ಯೋಗ ಮಾಹಿತಿ ರಥಕ್ಕೆ ಚಾಲನೆ

ಕೊಪ್ಪಳ ಆ. 16 (ಕರ್ನಾಟಕ ವಾರ್ತೆ): ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಗ್ರಾಮ ಪಂಚಾಯತಿ ವತಿಯಿಂದ ಆಯೋಜಿಸಲಾದ ಉದ್ಯೋಗ ಮಾಹಿತಿ ರಥಕ್ಕೆ ವಡ್ಡರಹಟ್ಟಿ ಗ್ರಾ.ಪಂ. ಅಧ್ಯಕ್ಷೆ ಸುನೀತಾ ನಿತ್ಯಾನಂದ ಅವರು ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು.
ವಡ್ಡರಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಉದ್ಯೋಗ ಮಾಹಿತಿ ರಥ ಕಾರ್ಯಕ್ರಮ ಆಚರಣೆ ಗುರುವಾರದಂದು ಮಾಡಲಾಯಿತು. ಗಂಗಾವತಿ ತಾಲೂಕಾ ಪಂಚಾಯತ ಐ.ಇ.ಸಿ. ಸಂಯೋಜಕರಾದ ಕೃಷ್ಣನಾಯಕ ಅವರು ಉದ್ಯೋಗ ಮಾಹಿತಿ ರಥ ಕಾರ್ಯಕ್ರಮದ ಉದ್ದೇಶದ ಬಗ್ಗೆ ಮಾಹಿತಿ ನೀಡಿದರು.
ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಮಂಜುನಾಥ ಅಂಗಡಿ ಮಾತನಾಡಿ, ವೈಯಕ್ತಿಕ ಅಥವಾ ಸಮುದಾಯ ಕಾಮಗಾರಿಗಳನ್ನು ನಿರ್ಮಿಸಿಕೊಂಡು ಉದ್ಯೋಗ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ಯೋಜನೆಯ ಮಾಹಿತಿಯನ್ನು ಎಲ್ಲರಿಗೂ ತಿಳಿಸಲು "ಉದ್ಯೋಗ ಮಾಹಿತಿ ರಥ" ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ವಿಶೇಷವಾಗಿ ಎಸ್.ಸಿ. ಎಸ್.ಟಿ ಸಮುದಾಯದವರಿಗೆ ಈ ಯೋಜನೆಯ ಬಗ್ಗೆ ಜಾಗೃತಿ ಮೂಡಿಸಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಸಿಬ್ಬಂದಿಗಳು, ಹಾಗೂ ಕಾಯಕ ಬಂದುಗಳು, ಕೂಲಿಕಾರರು ಉಪಸ್ಥಿತರಿದ್ದರು.
ಹೀಗಾಗಿ ಲೇಖನಗಳು ವಡ್ಡರಹಟ್ಟಿಯಲ್ಲಿ ಉದ್ಯೋಗ ಮಾಹಿತಿ ರಥಕ್ಕೆ ಚಾಲನೆ
ಎಲ್ಲಾ ಲೇಖನಗಳು ಆಗಿದೆ ವಡ್ಡರಹಟ್ಟಿಯಲ್ಲಿ ಉದ್ಯೋಗ ಮಾಹಿತಿ ರಥಕ್ಕೆ ಚಾಲನೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ವಡ್ಡರಹಟ್ಟಿಯಲ್ಲಿ ಉದ್ಯೋಗ ಮಾಹಿತಿ ರಥಕ್ಕೆ ಚಾಲನೆ ಲಿಂಕ್ ವಿಳಾಸ https://dekalungi.blogspot.com/2018/08/blog-post_79.html
0 Response to "ವಡ್ಡರಹಟ್ಟಿಯಲ್ಲಿ ಉದ್ಯೋಗ ಮಾಹಿತಿ ರಥಕ್ಕೆ ಚಾಲನೆ"
ಕಾಮೆಂಟ್ ಪೋಸ್ಟ್ ಮಾಡಿ