ಶೀರ್ಷಿಕೆ : ಪಶುಪಾಲನಾ ಇಲಾಖೆ ವಿವಿಧ ಯೋಜನೆಯಡಿ ಸಹಾಯಧನ : ಅರ್ಜಿ ಆಹ್ವಾನ
ಲಿಂಕ್ : ಪಶುಪಾಲನಾ ಇಲಾಖೆ ವಿವಿಧ ಯೋಜನೆಯಡಿ ಸಹಾಯಧನ : ಅರ್ಜಿ ಆಹ್ವಾನ
ಪಶುಪಾಲನಾ ಇಲಾಖೆ ವಿವಿಧ ಯೋಜನೆಯಡಿ ಸಹಾಯಧನ : ಅರ್ಜಿ ಆಹ್ವಾನ
ಕೊಪ್ಪಳ ಆ. 16 (ಕರ್ನಾಟಕ ವಾರ್ತೆ): ಕೊಪ್ಪಳ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಅನುಷ್ಠಾನಗೊಳಿಸಲಾಗುವ ವಿವಿಧ ಯೋಜನೆಗಳಡಿ ಸಹಾಯಧನ ಸೌಲಭ್ಯಕ್ಕಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಅನುಷ್ಠಾನಗೊಳಿಸಲಾಗುವ ವಿವಿಧ ಸಾಮಾಜಿಕ ಆರ್ಥಿಕ ಅಭಿವೃದ್ಧಿ ಯೋಜನೆಗಳಾದ ಪಶುಭಾಗ್ಯ ಯೋಜನೆ, ಅಮೃತ ಯೋಜನೆ (ಮಹಿಳೆಯರಿಗೆ ಮಾತ್ರ), ವಿಶೇಷ ಘಟಕ ಯೋಜನೆ, ಗಿರಿಜನ ಉಪಯೋಜನೆಗಳಡಿಯಲ್ಲಿ ಹೈನುಗಾರಿಕೆ ಘಟಕ, ಕುರಿ ಅಥವಾ ಮೇಕೆ ಘಟಕ, ಕೋಳಿ ಘಟಕ ಹಾಗೂ ಕರುಗಳ ಸಾಕಾಣಿಕೆ ಘಟಕಗಳನ್ನು ಸರ್ಕಾರ ನಿಗಧಿಪಡಿಸಿದ ಸಹಾಯಧನ ಸೌಲಭ್ಯದೊಂದಿಗೆ ಸ್ಥಾಪಿಸಲು ಪಲಾನುಭವಿಗಳ ಆಯ್ಕೆಗಾಗಿ ಭೂರಹಿತ ಕೃಷಿ ಕಾರ್ಮಿಕರು, ಅತಿ ಸಣ್ಣ ರೈತರು, ಸಣ್ಣ ರೈತರಿಂದ ಮತ್ತು ಅಮೃತ ಯೋಜನೆಗಾಗಿ ವಿಧವೆಯರು, ದೇವದಾಸಿಯರು ಮತ್ತು ಸಂಕಷ್ಟಕ್ಕೊಳಗಾದ ಮಹಿಳೆಯರು ಅರ್ಜಿ ಸಲ್ಲಿಸಬಹುದಾಗಿದೆ.
ಸರ್ಕಾರದ ಮಾರ್ಗಸೂಚಿಗಳನ್ವಯ ನಿಗದಿಪಡಿಸಲಾಗುವ ಗುರಿಗಳಿಗೆ ಅನುಗುಣವಾಗಿ ತಾಲೂಕು ಆಯ್ಕೆ ಸಮಿತಿಯ ಮುಖಾಂತರ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ, ಫಲಾನುಭವಿಯ ಸೇವಾ ವ್ಯಾಪ್ತಿಯ ಬ್ಯಾಂಕುಗಳ ಸಾಲ ಸೌಲಭ್ಯದೊಂದಿಗೆ ಇಲಾಖೆಯ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು. ಆಸಕ್ತ ಅರ್ಹ ಫಲಾನುಭವಿಗಳು ಅರ್ಜಿಯನ್ನು ಆಯಾ ತಾಲೂಕುಗಳ ಪಶು ಆಸ್ಪತ್ರೆಗಳಲ್ಲಿ ಪಡೆದು ಸೂಕ್ತ ದಾಖಲೆಗಳೊಂದಿಗೆ ಸೆಪ್ಟೆಂಬರ್. 14 ರೊಳಗಾಗಿ ಸಲ್ಲಿಸಬೇಕು. ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08539-221408 ಕ್ಕೆ ಸಂಪರ್ಕಿಸಬಹುದು ಎಂದು ಕೊಪ್ಪಳ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ. ಬಸಯ್ಯ ಸಾಲಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಪಶುಪಾಲನಾ ಇಲಾಖೆ ವಿವಿಧ ಯೋಜನೆಯಡಿ ಸಹಾಯಧನ : ಅರ್ಜಿ ಆಹ್ವಾನ
ಎಲ್ಲಾ ಲೇಖನಗಳು ಆಗಿದೆ ಪಶುಪಾಲನಾ ಇಲಾಖೆ ವಿವಿಧ ಯೋಜನೆಯಡಿ ಸಹಾಯಧನ : ಅರ್ಜಿ ಆಹ್ವಾನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಪಶುಪಾಲನಾ ಇಲಾಖೆ ವಿವಿಧ ಯೋಜನೆಯಡಿ ಸಹಾಯಧನ : ಅರ್ಜಿ ಆಹ್ವಾನ ಲಿಂಕ್ ವಿಳಾಸ https://dekalungi.blogspot.com/2018/08/blog-post_16.html
0 Response to "ಪಶುಪಾಲನಾ ಇಲಾಖೆ ವಿವಿಧ ಯೋಜನೆಯಡಿ ಸಹಾಯಧನ : ಅರ್ಜಿ ಆಹ್ವಾನ"
ಕಾಮೆಂಟ್ ಪೋಸ್ಟ್ ಮಾಡಿ