ಕೊಪ್ಪಳ ಜಿಲ್ಲೆಯಲ್ಲಿ ಸದ್ದಿಲ್ಲದೆ ಪಸರಿಸಿದೆ ಜೇನಿನ ಝೇಂಕಾರ : ಸ್ನೇಹಿತರ ಹೊಲದ ಬೆಳೆಯಲ್ಲಿ ಅಧಿಕ ಇಳುವರಿಗೆ ಅನುವು ಮಾಡಿದ ಜೇನು ಕೃಷಿಕ

ಕೊಪ್ಪಳ ಜಿಲ್ಲೆಯಲ್ಲಿ ಸದ್ದಿಲ್ಲದೆ ಪಸರಿಸಿದೆ ಜೇನಿನ ಝೇಂಕಾರ : ಸ್ನೇಹಿತರ ಹೊಲದ ಬೆಳೆಯಲ್ಲಿ ಅಧಿಕ ಇಳುವರಿಗೆ ಅನುವು ಮಾಡಿದ ಜೇನು ಕೃಷಿಕ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಕೊಪ್ಪಳ ಜಿಲ್ಲೆಯಲ್ಲಿ ಸದ್ದಿಲ್ಲದೆ ಪಸರಿಸಿದೆ ಜೇನಿನ ಝೇಂಕಾರ : ಸ್ನೇಹಿತರ ಹೊಲದ ಬೆಳೆಯಲ್ಲಿ ಅಧಿಕ ಇಳುವರಿಗೆ ಅನುವು ಮಾಡಿದ ಜೇನು ಕೃಷಿಕ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಕೊಪ್ಪಳ ಜಿಲ್ಲೆಯಲ್ಲಿ ಸದ್ದಿಲ್ಲದೆ ಪಸರಿಸಿದೆ ಜೇನಿನ ಝೇಂಕಾರ : ಸ್ನೇಹಿತರ ಹೊಲದ ಬೆಳೆಯಲ್ಲಿ ಅಧಿಕ ಇಳುವರಿಗೆ ಅನುವು ಮಾಡಿದ ಜೇನು ಕೃಷಿಕ
ಲಿಂಕ್ : ಕೊಪ್ಪಳ ಜಿಲ್ಲೆಯಲ್ಲಿ ಸದ್ದಿಲ್ಲದೆ ಪಸರಿಸಿದೆ ಜೇನಿನ ಝೇಂಕಾರ : ಸ್ನೇಹಿತರ ಹೊಲದ ಬೆಳೆಯಲ್ಲಿ ಅಧಿಕ ಇಳುವರಿಗೆ ಅನುವು ಮಾಡಿದ ಜೇನು ಕೃಷಿಕ

ಓದಿ


ಕೊಪ್ಪಳ ಜಿಲ್ಲೆಯಲ್ಲಿ ಸದ್ದಿಲ್ಲದೆ ಪಸರಿಸಿದೆ ಜೇನಿನ ಝೇಂಕಾರ : ಸ್ನೇಹಿತರ ಹೊಲದ ಬೆಳೆಯಲ್ಲಿ ಅಧಿಕ ಇಳುವರಿಗೆ ಅನುವು ಮಾಡಿದ ಜೇನು ಕೃಷಿಕ


ಕೊಪ್ಪಳ ಆ. 29 (ಕರ್ನಾಟಕ ವಾರ್ತೆ): ಜೇನು ಕೃಷಿಯ ಜನಪ್ರಿಯತೆಯಿಂದಾಗಿ ಕೊಪ್ಪಳ ಜಿಲ್ಲೆಯಲ್ಲಿ ಸದ್ದಿಲ್ಲದೆ ಪಸರಿಸುತ್ತಿದೆ ಜೇನಿನ ಝೇಂಕಾರ.  ಸ್ನೇಹಿತನ ಹೊಲದಲ್ಲಿ ಜೇನು ಪೆಟ್ಟಿಗೆಗಳನ್ನಿಟ್ಟು ಜೇನು ಪರಾಗಸ್ಪರ್ಷದಿಂದಾಗಿ ಸ್ನೇಹಿತನ ಹೊಲದ ಸೂರ್ಯಕಾಂತಿ ಬೆಳೆಯಲ್ಲಿ ಶೇ.35ಕ್ಕಿಂತ ಅಧಿಕ ಇಳುವರಿಯನ್ನು ಪಡೆಯಲು ಅನುವು ಮಾಡಿಕೊಟ್ಟಿದ್ದಾರೆ ಕೊಪ್ಪಳ ತಾಲೂಕಿನ ಡಂಬ್ರಳ್ಳಿಯ ಗ್ರಾಮದ ಜೇನು ಕೃಷಿಕ ಆನಂದರಡ್ಡಿ ಅವರು. 

ಜೇನು ಎಂದೊಡನೆ ಎಲ್ಲರಿಗೂ ಬಾಯಲ್ಲಿ ನೀರೂರುವುದು ಸಹಜ ಆದರೆ ಜೇನು ಸಾಕಾಣಿಕೆ ಎಂದೊಡನೆ ದೂರ ಸರಿಯುವವರೆ ಬಹಳ.  ಹೀಗಿರುವಾಗ ಜೇನು ಕೃಷಿ ಮಾಡಿ ಅದರ ಲಾಭ ಪಡೆಯುವವರು ಬಹಳ ವಿರಳ.  ಇದಕ್ಕೆ ಅಪವಾದವೆಂಬಂತೆ ಕೊಪ್ಪಳ ಜಿಲ್ಲೆಯ ಕೆಲ ರೈತರು ಜೇನುಕೃಷಿ ಮಾಡಿ ಅದರ ಲಾಭ ಪಡೆಯುತ್ತಿರುವುದು, ಕೊಪ್ಪಳ ತಾಲೂಕಿನ ಡಂಬ್ರಳ್ಳಿಯ ಪ್ರಗತಿಪರ ರೈತ ಆನಂದರಡ್ಡಿ ಇಂತಹ ಒಬ್ಬ ಅಪರೂಪದ ರೈತ.  ಹತ್ತಾರು ಜೇನು ಪೆಟ್ಟಿಗೆಗಳನ್ನಿಟ್ಟು ಸಲಹುತ್ತ ಅದನ್ನು ತನ್ನ ಸ್ನೇಹಿತರ ಹೊಲಗಳಲ್ಲಿಟ್ಟು ತಾವೇ ಅವುಗಳನ್ನು ಸಲಹಿ ಆ ರೈತರಿಗೆ ಜೇನಿನ ಮಹತ್ವ ಮತ್ತು ಅವುಗಳ ಪರಾಗಸ್ಪರ್ಶದಿಂದ ಆಗುವ ಲಾಭವನ್ನು ಪರಿಚಯಿಸುತ್ತಿರುವುದು ಅವರ ಹೆಗ್ಗಳಿಕೆ.  

ಜೇನು ಕೃಷಿಕ ಆನಂದರಡ್ಡಿ ಅವರು ಇತ್ತೀಚೆಗೆ ತಮ್ಮ ಜೇನು ಪೆಟ್ಟಿಗೆಗಳನ್ನು ತಮ್ಮ ಸ್ನೇಹಿತ ಭೂಮರೆಡ್ಡಿಯವರ ಸೂರ್ಯಕಾಂತಿ ಹೊಲದಲ್ಲಿ ಇರಿಸಿದಾಗ ಅದರ ಇಳುವರಿ ಶೇ.35ಕ್ಕಿಂತ ಅಧಿಕವಾಗಿರುವುದು ಕಂಡುಬಂದಿದೆ.  ಅಲ್ಲದೇ ಸುತ್ತಲಿನ ಇನ್ನೂ 4-5 ರೈತರು ಈ ಜೇನು ಪರಾಗಸ್ಪರ್ಷದ ಫಲಾನುಭವಿಗಳಾಗಿದ್ದಾರೆ.  ಸೂರ್ಯಕಾಂತಿ ಕಟಾವಿಗೆ ಬಂದಿರುವುದರಿಂದ ಈಗ ತಮ್ಮದೇ ಬಾಳೆ ಹೊಲಕ್ಕೆ ಪೆಟ್ಟಿಗೆಗಳನ್ನು ವರ್ಗಾಯಿಸಿರುವುದು ಈಗಲೂ ಕಾಣಲು ಸಿಗುತ್ತದೆ.  

ಆನಂದರೆಡ್ಡಿಯವರು ಸಂಜೀವಿನಿ ಜೇನು ಕೃಷಿಕರ ಸಂಘದ ಸದಸ್ಯರೂ ಹೌದು.  ಸಂಘದಲ್ಲಿ ಸುಮಾರು 32 ಜನ ಪ್ರಗತಿಪರ ಜೇನು ಕೃಷಿಕರಿದ್ದು, ಒಬ್ಬೊಬ್ಬರದು ಒಂದೊಂದು ಅಪರೂಪದ ಅನುಭವವಾಗಿದೆ.  ಪಂಪಾಪತಿ ತರಕಾರಿ ಬೆಳೆಗಳಲ್ಲಿ, ಮಹೇಶ ಮತ್ತು ಅನಿಲಕುಮಾರ ಮಾವಿನಲ್ಲಿ, ವೆಂಕನಗೌಡ ಮೇಟಿ, ನಿಂಗಪ್ಪ ಮತ್ತು ದೇವೇಂದ್ರಗೌಡರು ವಿವಿದ ಪುಷ್ಪ ಮತ್ತು ಇನ್ನಿತರ ಬೆಳೆಗಳಲ್ಲಿ, ಶ್ರೀಧರ ಬಾಳೆ ಮತ್ತು ಗುಡ್ಡದಲ್ಲಿ ಇರುವ ಸಸ್ಯಗಳನ್ನು ಅವಲಂಬಿಸಿ ಜೇನು ಕೃಷಿ ಮಾಡಿದರೆ, ಭತ್ತದನಾಡಿನ ಪರ್ವತಯ್ಯನವರು ಹೊಲದ ಬದುಗಳಲ್ಲಿರುವ ಕಸವನ್ನೇ ಅವಲಂಬಿಸಿ ಜೇನುಕೃಷಿಯಲ್ಲಿ ತೊಡಗಿದ್ದಾರೆ. 
 ಸದ್ದಿಲ್ಲದೆ ಜೇನು ಸಂತತಿಯ ಉಳಿವಿಗೆ ಕಾರಣವಾಗಿರುವ ಈ ಎಲ್ಲಾ ಜೇನು ಕೃಷಿಕರು ತಮಗರಿವಿಲ್ಲದಂತೆಯೇ ತಮ್ಮ ಆರ್ಥಿಕ ದೃಢತೆಯೊಂದಿಗೆ ಪ್ರಕೃತಿಯ ವೈವಿದ್ಯತೆಯ ಉಳಿವಿಗೆ ಕಾರಣರಾಗಿದ್ದಾರೆ.  ಈ ಪ್ರಯತ್ನ ನೋಡಿ ಯಾರಾದರೂ ಜೇನು ಕೃಷಿಯತ್ತ ಆಸಕ್ತಿ ತೋರಿದರೆ ಮಾರ್ಗದರ್ಶನ ನೀಡಲು ಸದಾ ಸಿದ್ದವಾಗಿದೆ ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ.   
ಆಸಕ್ತ ರೈತರು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜಾÐನಿ (ಕೀಟಶಾಸ್ತ್ರ) ಪಿ.ಆರ್. ಬದರಿಪ್ರಸಾದ್ ಮೊ.ಸಂ. 9900145705, ಎಂ.ಬಿ. ಪಾಟೀಲ ಮೊ. 9480696319 ಮತ್ತು ಪ್ರದೀಪ ಬಿರಾದಾರ ಮೊ. 9743064405, ಇವರನ್ನು ಸಂಪರ್ಕಿಸಿಸಬಹುದು ಎಂದು ಪ್ರಕಟಣೆ ತಿಳಿಸಿದೆ.


ಹೀಗಾಗಿ ಲೇಖನಗಳು ಕೊಪ್ಪಳ ಜಿಲ್ಲೆಯಲ್ಲಿ ಸದ್ದಿಲ್ಲದೆ ಪಸರಿಸಿದೆ ಜೇನಿನ ಝೇಂಕಾರ : ಸ್ನೇಹಿತರ ಹೊಲದ ಬೆಳೆಯಲ್ಲಿ ಅಧಿಕ ಇಳುವರಿಗೆ ಅನುವು ಮಾಡಿದ ಜೇನು ಕೃಷಿಕ

ಎಲ್ಲಾ ಲೇಖನಗಳು ಆಗಿದೆ ಕೊಪ್ಪಳ ಜಿಲ್ಲೆಯಲ್ಲಿ ಸದ್ದಿಲ್ಲದೆ ಪಸರಿಸಿದೆ ಜೇನಿನ ಝೇಂಕಾರ : ಸ್ನೇಹಿತರ ಹೊಲದ ಬೆಳೆಯಲ್ಲಿ ಅಧಿಕ ಇಳುವರಿಗೆ ಅನುವು ಮಾಡಿದ ಜೇನು ಕೃಷಿಕ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಸದ್ದಿಲ್ಲದೆ ಪಸರಿಸಿದೆ ಜೇನಿನ ಝೇಂಕಾರ : ಸ್ನೇಹಿತರ ಹೊಲದ ಬೆಳೆಯಲ್ಲಿ ಅಧಿಕ ಇಳುವರಿಗೆ ಅನುವು ಮಾಡಿದ ಜೇನು ಕೃಷಿಕ ಲಿಂಕ್ ವಿಳಾಸ https://dekalungi.blogspot.com/2018/08/blog-post_77.html

Subscribe to receive free email updates:

0 Response to "ಕೊಪ್ಪಳ ಜಿಲ್ಲೆಯಲ್ಲಿ ಸದ್ದಿಲ್ಲದೆ ಪಸರಿಸಿದೆ ಜೇನಿನ ಝೇಂಕಾರ : ಸ್ನೇಹಿತರ ಹೊಲದ ಬೆಳೆಯಲ್ಲಿ ಅಧಿಕ ಇಳುವರಿಗೆ ಅನುವು ಮಾಡಿದ ಜೇನು ಕೃಷಿಕ"

ಕಾಮೆಂಟ್‌‌ ಪೋಸ್ಟ್‌ ಮಾಡಿ