ಶೀರ್ಷಿಕೆ : ಮಾವು ಬೆಳೆಯಲ್ಲಿ ಮೈಟ್ ನುಶಿಯ ಬಾಧೆ : ನಿರ್ವಹಣೆಗೆ ಸಲಹೆಗಳು
ಲಿಂಕ್ : ಮಾವು ಬೆಳೆಯಲ್ಲಿ ಮೈಟ್ ನುಶಿಯ ಬಾಧೆ : ನಿರ್ವಹಣೆಗೆ ಸಲಹೆಗಳು
ಮಾವು ಬೆಳೆಯಲ್ಲಿ ಮೈಟ್ ನುಶಿಯ ಬಾಧೆ : ನಿರ್ವಹಣೆಗೆ ಸಲಹೆಗಳು
ಕೊಪ್ಪಳ ಆ. 29 (ಕರ್ನಾಟಕ ವಾರ್ತೆ): ಬೆಳೆಯಲ್ಲಿ ಮೈಟ್ ನುಶಿಯ ಬಾಧೆ ಕೊಪ್ಪಳ ಜಿಲ್ಲೆಯ ಕೆಲ ಭಾಗಗಳಲ್ಲಿ ಕಂಡು ಬಂದಿದ್ದು, ರೈತರು ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಲು ತೋಟಗಾರಿಕೆ ಇಲಾಖೆಯು ಸಲಹೆಗಳನ್ನು ತಿಳಿಸಿದೆ.
ಇತ್ತೀಚೆಗೆ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿಗಳಾದ ಡಾ. ಎಂ.ಬಿ. ಪಾಟೀಲ್ ಹಾಗೂ ಬದರಿಪ್ರಸಾದ್, ತೋಟಗಾರಿಕೆ ಇಲಾಖೆಯ ವಿಷಯತಜ್ಞ ವಾಮನಮೂರ್ತಿ, ಸಹಾಯಕ ತೋಟಗಾರಿಕೆ ಅಧಿಕಾರಿ ಓಬಣ್ಣ ನೇತೃತ್ವದ ತಂಡವು ಕೊಪ್ಪಳ ಜಿಲ್ಲೆಯ ಕಲ್‍ತಾವರಗೆರಾ ಮತ್ತು ಹಿರೇಸಿಂದೋಗಿ ಗ್ರಾಮದ ಸುತ್ತಮುತ್ತ ಹೊಸದಾಗಿ ನಾಟಿ ಮಾಡಿದ ಮಾವಿನ ಬೆಳೆ ತಾಕುಗಳಿಗೆ ಭೇಟಿ ನೀಡಿದ್ದು, ಮಾವಿನ ಬೆಳೆಗೆ ಕೆಂಪು ಮೈಟ್ ನುಶಿಯ (ಜೇಡ) ಭಾದೆ ಕಂಡು ಬಂದಿದೆ. ಮಾವು ಬೆಳೆಯಲ್ಲಿನ ಮೈಟ್ ನುಶಿಯ ಬಾಧೆ ಲಕ್ಷಣಗಳು ಹಾಗೂ ನಿರ್ವಹಣಾ ಕ್ರಮಗಳಿಗೆ ಸಲಹೆ ನೀಡಲಾಗಿದೆ.
ಬಾಧೆಯ ಲಕ್ಷಣ :
****** ನುಶಿಗಳು ಎಲೆಗಳಿಂದ ರಸ ಹೀರುತ್ತದೆ, ಅಂತಹ ಎಲೆಗಳ ಮೇಲೆ ಹಳದಿ ಚುಕ್ಕೆಗಳಾಗುತ್ತವೆ. ನಂತರ ಒಣಗುತ್ತವೆ ಹಾಗೂ ಎಲೆಗಳ ಮೇಲೆ ಜೇಡದ ಬಲೆಗಳಂತೆ ಬಲೆಗಳನ್ನು ಕಾಣಬಹುದು. ಬೆಳಕಿನಲ್ಲಿ ನೋಡಿದಾಗ ಸಣ್ಣ ನುಶಿಗಳ ಚಲನೆಯನ್ನು ಗಮನಿಸಬಹುದು.
ನಿರ್ವಹಣಾ ಕ್ರಮ :
******** ಮಾವು ಬೆಳೆಯಲ್ಲಿ ಮೈಟ್ ನುಶಿಯ ಭಾದೆ ನಯಂತ್ರಣಕ್ಕೆ ಇಲಾಖೆಯು ಶಿಫಾರಸು ಮಾಡಿದ ರಸ ಗೊಬ್ಬರಗಳನ್ನು ಬಳಸಬೇಕು. ಪ್ರತಿ ಗಿಡಕ್ಕೆ 250 ಗ್ರಾಂ. ಬೇವಿನ ಹಿಂಡಿಯನ್ನು ಮಣ್ಣಿಗೆ ಸೇರಿಸಬೇಕು. ಹೊಲವನ್ನು ನಿಯಮಿತವಾಗಿ ನೀರುಣಿಸಿ ಕಸಮುಕ್ತವಾಗಿಡಬೇಕು. ಪರಭಕ್ಷಕ ಜೇಡಗಳ ಸಂಖ್ಯೆ ಅಧಿಕವಿದ್ದರೆ ಸಿಂಪರಣೆ ಬೇಡ. ಪ್ರತಿ ಲೀಟರ್ ನೀರಿಗೆ 0.65 ಮಿ.ಲಿ ಸ್ಪೈರೊಮೆಸಿಫೆನ್ 24 ಎಸ್.ಸಿ ಅಥವಾ 0.5 ಮಿ.ಲಿ ಫೆನ್ ಪ್ರೋಪಾಥ್ರಿನ್ 30 ಇ.ಸಿ ಅಥವಾ 2.0 ಮಿಲಿ ಫೆನಜಾಕ್ವಿನ್ 10 ಇ.ಸಿ ಅಥವಾ 2.5 ಮಿ.ಲಿ ಡೈಕೋಫಾಲ್ 18.5 ಇ.ಸಿ ಅಥವಾ ನೀರಿನಲ್ಲಿ ಕರಗುವ ಗಂಧಕವನ್ನು 3 ಗ್ರಾಂ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಚಿಬ್ಬು ರೋಗದ ಲಕ್ಷಣಗಳು ಕಂಡುಬಂದಲ್ಲಿ ಕಾರ್ಬೆನ್ ಡೈಜಿಂ 50 ಡಬ್ಲು.ಪಿ 1 ಗ್ರಾಂ. ಅಥವಾ ಥಯೋಫಿನೇಟ್ ಮೀಥೈಲ್ 1 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಡಾ. ಎಂ.ಬಿ. ಪಾಟೀಲ್ (9480696319), ಬದರಿಪ್ರಸಾದ್ (9900145705), ಪ್ರದೀಪ ಬಿರಾದಾರ (9743064405) ಮತ್ತು ತೋಟಗಾರಿಕೆ ಇಲಾಖೆಯ ವಿಷಯತಜ್ಞ ವಾಮನಮೂರ್ತಿ (9482672039) ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಕೊಪ್ಪಳ ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಮಾವು ಬೆಳೆಯಲ್ಲಿ ಮೈಟ್ ನುಶಿಯ ಬಾಧೆ : ನಿರ್ವಹಣೆಗೆ ಸಲಹೆಗಳು
ಎಲ್ಲಾ ಲೇಖನಗಳು ಆಗಿದೆ ಮಾವು ಬೆಳೆಯಲ್ಲಿ ಮೈಟ್ ನುಶಿಯ ಬಾಧೆ : ನಿರ್ವಹಣೆಗೆ ಸಲಹೆಗಳು ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಮಾವು ಬೆಳೆಯಲ್ಲಿ ಮೈಟ್ ನುಶಿಯ ಬಾಧೆ : ನಿರ್ವಹಣೆಗೆ ಸಲಹೆಗಳು ಲಿಂಕ್ ವಿಳಾಸ https://dekalungi.blogspot.com/2018/08/blog-post_42.html
0 Response to "ಮಾವು ಬೆಳೆಯಲ್ಲಿ ಮೈಟ್ ನುಶಿಯ ಬಾಧೆ : ನಿರ್ವಹಣೆಗೆ ಸಲಹೆಗಳು"
ಕಾಮೆಂಟ್ ಪೋಸ್ಟ್ ಮಾಡಿ