ಶೀರ್ಷಿಕೆ : ಕೊಪ್ಪಳ 24*7 ನೀರು ಸರಬರಾಜು ಯೋಜನೆ ಹಾಗೂ ಹುಲಿಕೆರೆ ಭರ್ತಿ ಕಾರ್ಯಕ್ಕೆ ಚಾಲನೆ : ಕೊಪ್ಪಳ ನಗರಕ್ಕಿನ್ನು ನೀರಿನ ತೊಂದರೆ ಬಾಧಿಸದು- ರಾಘವೇಂದ್ರ ಹಿಟ್ನಾಳ
ಲಿಂಕ್ : ಕೊಪ್ಪಳ 24*7 ನೀರು ಸರಬರಾಜು ಯೋಜನೆ ಹಾಗೂ ಹುಲಿಕೆರೆ ಭರ್ತಿ ಕಾರ್ಯಕ್ಕೆ ಚಾಲನೆ : ಕೊಪ್ಪಳ ನಗರಕ್ಕಿನ್ನು ನೀರಿನ ತೊಂದರೆ ಬಾಧಿಸದು- ರಾಘವೇಂದ್ರ ಹಿಟ್ನಾಳ
ಕೊಪ್ಪಳ 24*7 ನೀರು ಸರಬರಾಜು ಯೋಜನೆ ಹಾಗೂ ಹುಲಿಕೆರೆ ಭರ್ತಿ ಕಾರ್ಯಕ್ಕೆ ಚಾಲನೆ : ಕೊಪ್ಪಳ ನಗರಕ್ಕಿನ್ನು ನೀರಿನ ತೊಂದರೆ ಬಾಧಿಸದು- ರಾಘವೇಂದ್ರ ಹಿಟ್ನಾಳ
ಕೊಪ್ಪಳ ಆ. 01 (ಕರ್ನಾಟಕ ವಾರ್ತೆ): ತುಂಗಭದ್ರಾ ಜಲಾಶಯದಿಂದ ಕೊಪ್ಪಳ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ 24*7 ಯೋಜನೆಯಡಿ, ನೀರು ಪೂರೈಕೆ ಮಾಡುವ ಕಾರ್ಯ ಪ್ರಾರಂಭಗೊಂಡಿದೆ, ಅಲ್ಲದೆ ಇದೇ ಯೋಜನೆಯಡಿ ಹುಲಿಕೆರೆಯನ್ನು ಭರ್ತಿ ಮಾಡಿ, ನೀರು ಸಂಗ್ರಹಿಸುತ್ತಿರುವುದರಿಂದ ಕೊಪ್ಪಳ ನಗರಕ್ಕೆ ಇನ್ನು ಮುಂದೆ ಬೇಸಿಗೆಯಲ್ಲೂ ನೀರಿನ ತೊಂದರೆ ಬಾಧಿಸದು ಎಂದು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಹೇಳಿದರು.

ತುಂಗಭದ್ರಾ ಜಲಾಶಯದಿಂದ ಕೊಪ್ಪಳ ನಗರಕ್ಕೆ 24*7 ನೀರು ಪೂರೈಕೆ ಯೋಜನೆಗೆ ಹಾಗೂ ಹುಲಿಕೆರೆ ಭರ್ತಿ ಮಾಡುವ ಕಾರ್ಯಕ್ಕೆ ಬುಧವಾರದಂದು ಚಾಲನೆ ನೀಡಿ, ಬಳಿಕ ಹುಲಿಕೆರೆ ಬಳಿ ಏರ್ಪಡಿಸಿದ್ದ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕೊಪ್ಪಳ ನಗರಕ್ಕೆ ತಾಲೂಕಿನ ಕಾಸನಕಂಡಿ ಬಳಿ ತುಂಗಭದ್ರಾ ಜಲಾಶಯ ಹಿನ್ನೀರಿನಿಂದ 24*7 ನೀರು ಪೂರೈಸುವ 54. 07 ಕೋಟಿ ರೂ. ವೆಚ್ಚದ ಯೋಜನೆಗೆ ಈ ಹಿಂದೆ ಅನುಮೋದನೆ ಪಡೆದು, ಕಾಮಗಾರಿ ಪ್ರಾರಂಭಿಸಲಾಗಿತ್ತು. 2041 ನೇ ಇಸವಿಯ ವೇಳೆಗೆ ನಗರದ ಜನಸಂಖ್ಯೆ 1. 65 ಲಕ್ಷ ಆಗಬಹುದೆಂಬ ಅಂದಾಜಿನಂತೆ 135 ಎಲ್‍ಪಿಸಿಡಿ ನೀರು ಪೂರೈಸುವ ಯೋಜನೆಗೆ ಕಾಮಗಾರಿ ಪ್ರಾರಂಭಿಸಲಾಯಿತು. ಕಳೆದ ಏಪ್ರಿಲ್ 23 ರಂದು ಪ್ರಾಯೋಗಿಕವಾಗಿ ನೀರು ಪೂರೈಕೆ ಚಾಲನೆಗೊಳಿಸಲಾಯಿತು. ಇದೀಗ ಕೊಪ್ಪಳ ನಗರಕ್ಕೆ 24*7 ಕುಡಿಯುವ ನೀರು ಪೂರೈಕೆಯನ್ನು ಪ್ರಾರಂಭಿಸಲಾಗಿದ್ದು, ಇದಕ್ಕೆ ಅನುಗುಣವಾಗಿ ಪೈಪ್‍ಲೈನ್ ಜಾಲ ವಿಸ್ತರಿಸುವ ಕಾರ್ಯಕ್ಕೂ ಶೀಘ್ರವೇ ಚಾಲನೆ ನೀಡಲಾಗುವುದು. ಕೊಪ್ಪಳ ನಗರದಲ್ಲಿ ನಗರೋತ್ಥಾನ ಯೋಜನೆಯಡಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ನಗರದ ಪ್ರಮುಖ ರಸ್ತೆಗಳ ನಿರ್ಮಾಣ ಕಾರ್ಯಕ್ಕೆ ವೇಗ ದೊರೆತಿದ್ದು, ನಗರದ ಸೌಂದರ್ಯೀಕರಣ ಕಾಮಗಾರಿಗಳನ್ನೂ ಹಂತ ಹಂತವಾಗಿ ಕೈಗೆತ್ತಿಕೊಳ್ಳಲಾಗುವುದು. ಪ್ರತಿ ವರ್ಷ ಬೇಸಿಗೆಯಲ್ಲಿ ನೀರಿನ ಕೊರತೆಯಿಂದಾಗಿ ನಗರದ ಜನ ನೀರಿಗೆ ತೊಂದರೆ ಅನುಭವಿಸುವ ಸ್ಥಿತಿ ಇತ್ತು. ಆದರೆ ಇದೀಗ ತುಂಗಭದ್ರಾ ಜಲಾಶಯದಿಂದ ನಗರದ ಹುಲಿಕೆರೆಯನ್ನು ಭರ್ತಿ ಮಾಡಲಾಗುತ್ತಿರುವುದರಿಂದ, ಹೆಚ್ಚಿನ ನೀರು ಸಂಗ್ರಹವಾಗಲಿದ್ದು, ಇನ್ನು ಮುಂದೆ ಬೇಸಿಗೆಯಲ್ಲಿ ನಗರಕ್ಕೆ ಕುಡಿಯುವ ನೀರಿನ ಯಾವುದೇ ತೊಂದರೆ ಬಾಧಿಸದು. ಕೊಪ್ಪಳ ನಗರಕ್ಕೆ ಸಂಬಂಧಿಸಿದಂತೆ ಇದೊಂದು ಐತಿಹಾಸಿಕ ಕಾರ್ಯವಾಗಿದೆ ಎಂದು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಹೇಳಿದರು.

ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ ಅವರು ಮಾತನಾಡಿ, ವರ್ಷದ 12 ತಿಂಗಳೂ, ಕೊಪ್ಪಳದ ಜನತೆ ಕುಡಿಯುವ ನೀರಿಗೆ ಬವಣೆ ಅನುಭವಿಸದಂತೆ, ಹುಲಿಕೆರೆಯನ್ನು ಭರ್ತಿ ಮಾಡುವ ಕಾರ್ಯವಲ್ಲದೆ, 24*7 ಕುಡಿಯುವ ನೀರು ಪೂರೈಕೆ ಯೋಜನೆಯನ್ನು ಪೂರ್ಣಗೊಳಿಸಲು ಶ್ರಮಿಸಿದ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹಾಗೂ ಸಂಬಂಧಿಸಿದ ಅಧಿಕಾರಿಗಳು ಅಭಿನಂದನಾರ್ಹರು ಎಂದರು.
24*7 ನೀರು ಪೂರೈಕೆ ಯೋಜನೆಯ ನೋಟ :
************ ಕೊಪ್ಪಳ ನಗರಕ್ಕೆ ತಾಲೂಕಿನ ಕಾಸನಕಂಡಿ ಬಳಿ ತುಂಗಭದ್ರಾ ಜಲಾಶಯ ಹಿನ್ನೀರಿನಿಂದ 24*7 ನೀರು ಪೂರೈಸುವ 54. 07 ಕೋಟಿ ರೂ. ವೆಚ್ಚದ ಯೋಜನೆಗೆ 2011 ರಲ್ಲಿ ಸರ್ಕಾರ ತಾಂತ್ರಿಕ ಅನುಮೋದನೆ ನೀಡಿತ್ತು. ಇದಾದ ಬಳಿಕ ಕಾಮಗಾರಿಗೆ ವೇಗ ದೊರೆತಿದ್ದು, ತುಂಗಭದ್ರಾ ಜಲಾಶಯದಲ್ಲಿ 10 ಮೀ. ವ್ಯಾಸದ ಜಾಕ್‍ವೆಲ್ ಕಂ ಪಂಪ್‍ಹೌಸ್ ನಿರ್ಮಾಣ ಮಾಡಲಾಗಿದೆ. ಹೊಸ ಮಾದರಿಯ 600 ಹೆಚ್.ಪಿ. ಸಾಮಥ್ರ್ಯದ ಸಬ್‍ಮರ್ಸಿಬಲ್ ಡೀಪ್‍ವೆಲ್ ಪಂಪ್ ಅಳವಡಿಸಲಾಗಿದೆ. ಇದಕ್ಕಾಗಿ 33 ಕೆ.ವಿ. ಉಪವಿದ್ಯುತ್ ಕೇಂದ್ರ ನಿರ್ಮಿಸಿದಿದು, ತಡೆರಹಿತ ವಿದ್ಯುತ್ ಸರಬರಾಜು ವ್ಯವಸ್ಥೆ ಇದೆ. ಮೂಲಸ್ಥಾವರದಿಂದ ಹಿರೇಸಿಂದೋಗಿ ರಸ್ತೆಯಲ್ಲಿರುವ ನೀರು ಶುದ್ಧೀಕರಣ ಘಟಕದವರೆಗೆ 610 ಮಿ.ಮೀ. ವ್ಯಾಸದ 22. 4 ಮೀ. ಎಮ್.ಎಸ್. ಕಚ್ಚಾ ನೀರು ಕೊಳವೆ ಅಳವಡಿಸಿದ್ದು, 10 ದಶಲಕ್ಷ ಲೀ. ಸಾಮಥ್ರ್ಯದ ನೀರು ಶುದ್ಧೀಕರಣ ಘಟಕ ನಿರ್ಮಿಸಿದೆ. 250 ಹೆಚ್.ಪಿ. ಸಾಮಥ್ರ್ಯದ 02 ನೀರಿನ ಪಂಪ್‍ಗಳಿಂದ ನಗರದ ಗವಿಶ್ರೀ ನಗರ, ದಿಡ್ಡಿಕೆರೆ, ಬೇಂದ್ರೆನಗರ ಹಾಗೂ ಎನ್.ಜಿ.ಓ. ಕಾಲೋನಿ ಬಳಿ ನಿರ್ಮಿಸಲಾಗಿರುವ 15 ಲಕ್ಷ ಲೀ. ಸಾಮಥ್ರ್ಯದ ಮೇಲೆತ್ತರದ ಒಟ್ಟು 04 ಜಲಸಂಗ್ರಹಾಗಾರಗಳಿಗೆ ನೀರು ಪೂರೈಸಲು 8 ಕಿ.ಮೀ. ಉದ್ದದ ಕೊಳವೆ ಅಳವಡಿಸಲಾಗಿದೆ. ಇದರ ಜೊತೆಗೆ ಹಾಲಿ ಇರುವ 10 ಲಕ್ಷ ಲೀ. ಸಾಮಥ್ರ್ಯದ 02 ಜಲ ಸಂಗ್ರಹಾಗಾರಗಳಿಗೂ ನೀರು ಪೂರೈಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಮುನಿರಾಬಾದ್ ಬಳಿಯ ಅರಣ್ಯ ಪ್ರದೇಶದಲ್ಲಿ 03 ಕಿ.ಮೀ. ಕೊಳವೆ ಅಳವಡಿಸುವ ಕಾಮಗಾರಿಯು, ಅರಣ್ಯ ಇಲಾಖೆಯಿಂದ ಅನುಮತಿ ಪಡೆಯುವುದಕ್ಕೆ ಸಂಬಂಧಿಸಿದಂತೆ ವಿಳಂಬವಾಗಲು ಕಾರಣವಾಯಿತು.
ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ಅಮ್ಜದ್ ಪಟೇಲ್ ಅವರು ಮಾತನಾಡಿದರು. ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ನಗರಸಭೆ ಉಪಾಧ್ಯಕ್ಷೆ ಮೀನಾಕ್ಷಮ್ಮ ಸೇರಿದಂತೆ ನಗರಸಭೆಯ ಸದಸ್ಯರುಗಳು, ಪೌರಾಯುಕ್ತ ಸುನೀಲ್ ಪಾಟೀಲ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸೈಯದ್ ಜುಲ್ಲು ಖಾದ್ರಿ, ಗಣ್ಯರಾದ ಶಾಂತಣ್ಣ ಮುದಗಲ್ ಹಾಗೂ ಇತರರು ಉಪಸ್ಥಿತರಿದ್ದರು.
ಹೀಗಾಗಿ ಲೇಖನಗಳು ಕೊಪ್ಪಳ 24*7 ನೀರು ಸರಬರಾಜು ಯೋಜನೆ ಹಾಗೂ ಹುಲಿಕೆರೆ ಭರ್ತಿ ಕಾರ್ಯಕ್ಕೆ ಚಾಲನೆ : ಕೊಪ್ಪಳ ನಗರಕ್ಕಿನ್ನು ನೀರಿನ ತೊಂದರೆ ಬಾಧಿಸದು- ರಾಘವೇಂದ್ರ ಹಿಟ್ನಾಳ
ಎಲ್ಲಾ ಲೇಖನಗಳು ಆಗಿದೆ ಕೊಪ್ಪಳ 24*7 ನೀರು ಸರಬರಾಜು ಯೋಜನೆ ಹಾಗೂ ಹುಲಿಕೆರೆ ಭರ್ತಿ ಕಾರ್ಯಕ್ಕೆ ಚಾಲನೆ : ಕೊಪ್ಪಳ ನಗರಕ್ಕಿನ್ನು ನೀರಿನ ತೊಂದರೆ ಬಾಧಿಸದು- ರಾಘವೇಂದ್ರ ಹಿಟ್ನಾಳ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಕೊಪ್ಪಳ 24*7 ನೀರು ಸರಬರಾಜು ಯೋಜನೆ ಹಾಗೂ ಹುಲಿಕೆರೆ ಭರ್ತಿ ಕಾರ್ಯಕ್ಕೆ ಚಾಲನೆ : ಕೊಪ್ಪಳ ನಗರಕ್ಕಿನ್ನು ನೀರಿನ ತೊಂದರೆ ಬಾಧಿಸದು- ರಾಘವೇಂದ್ರ ಹಿಟ್ನಾಳ ಲಿಂಕ್ ವಿಳಾಸ https://dekalungi.blogspot.com/2018/08/247.html
0 Response to "ಕೊಪ್ಪಳ 24*7 ನೀರು ಸರಬರಾಜು ಯೋಜನೆ ಹಾಗೂ ಹುಲಿಕೆರೆ ಭರ್ತಿ ಕಾರ್ಯಕ್ಕೆ ಚಾಲನೆ : ಕೊಪ್ಪಳ ನಗರಕ್ಕಿನ್ನು ನೀರಿನ ತೊಂದರೆ ಬಾಧಿಸದು- ರಾಘವೇಂದ್ರ ಹಿಟ್ನಾಳ"
ಕಾಮೆಂಟ್ ಪೋಸ್ಟ್ ಮಾಡಿ