News & photos Dt.31-07-2018

News & photos Dt.31-07-2018 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು News & photos Dt.31-07-2018, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : News & photos Dt.31-07-2018
ಲಿಂಕ್ : News & photos Dt.31-07-2018

ಓದಿ


News & photos Dt.31-07-2018

                                                 ನ್ಯಾಯಾಧೀಕರಣ ತರಬೇತಿಗಾಗಿ ಅರ್ಜಿ ಆಹ್ವಾನ

ಕಲಬುರಗಿ,ಜು.31.(ಕ.ವಾ.)-ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ 2018-19ನೇ ಸಾಲಿಗೆ ನಾಲ್ಕು ವರ್ಷದ ಆಡಳಿತ ನ್ಯಾಯಾಧೀಕರಣ ತರಬೇತಿಗಾಗಿ ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ, ಜೈನ್, ಸಿಖ್ ಮತ್ತು ಪಾರ್ಸಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಕಲಬುರಗಿ ಜಿಲ್ಲೆಯ ಕಾನೂನು ಪದವಿಧರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸ್ವೀಕರಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕಕ್ಕೆ 2 ವರ್ಷಗಳ ಅವಧಿಯೊಳಗೆ ಕಾನೂನು ಪದವಿ ಪಡೆದ,  ವಾರ್ಷಿಕ ಆದಾಯ 3.50 ಲಕ್ಷ ರೂ. ಮೀರಿರದ (ಪ್ರವರ್ಗ-1ರಡಿ ಬರುವ ಅಲ್ಪಸಂಖ್ಯಾತರಿಗೆ ಆದಾಯ ಮಿತಿ ಇರುವುದಿಲ್ಲ) ಹಾಗೂ 30 ವರ್ಷ ವಯೋಮಿತಿ ಮೀರಿರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ಅರ್ಜಿ ನಮೂನೆಯನ್ನು ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಜಿ.ಡಿ.ಎ. ಮೊದಲನೇ ಮಹಡಿ ಕಲಬುರಗಿ ಕಚೇರಿಯಿಂದ ಪಡೆದು ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಇದೇ ಕಚೇರಿಗೆ ಆಗಸ್ಟ್ 27ರೊಳಗಾಗಿ ಸಲ್ಲಿಸಬೇಕು.
ಇನ್ನು ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ಮಾಹೆ 4000 ರೂ. ತರಬೇತಿ ಭತ್ಯೆ ನೀಡಲಾಗುವದು. ಅವಧಿ ಮೀರಿ ಬಂದ ಅರ್ಜಿಗಳನ್ನು ಪರಿಗಣಿಸುವುದಿಲ್ಲ ಎಂದು ಜಿಲ್ಲಾ ಅಲ್ಪಸಂಖ್ಯಾತ ಅಧಿಕಾರಿ ಮಹೆಬೂಬ ಸಾಬ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಕುರಿತು ಹೆಚ್ಚಿನ ವಿವರಕ್ಕಾಗಿ ಸದರಿ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.

                                                          ಪಿ.ಪಿ.ಪಿ. ಯೋಜನೆಯಡಿ ಐ.ಟಿ.ಐ. ಪ್ರವೇಶ

ಕಲಬುರಗಿ,ಜು.31.(ಕ.ವಾ.)-ಚಿಂಚೋಳಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2018-19ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಪಿ.ಪಿ.ಪಿ. ಯೋಜನೆಯಡಿ ಫಿಟ್ಟರ್-5 ಮತ್ತು ಎಲೆಕ್ಟ್ರಿಷಿಯನ್-5 ಸ್ಥಾನಗಳ ಪ್ರವೇಶಾತಿಗೆ ಆಗಸ್ಟ್ 3 ರಂದು ಬೆಳಿಗ್ಗೆ 11 ಗಂಟೆಗೆ ಸಂಸ್ಥೆಯಲ್ಲಿ ಬಹಿರಂಗ ಹರಾಜು ನಡೆಯಲಿದೆ.
ಎಸ್.ಎಸ್.ಎಲ್.ಸಿ. ಪಾಸಾದ ಹಾಗೂ ಆಸಕ್ತ ಅರ್ಹ ಅಭ್ಯರ್ಥಿಗಳು ಸಂಬಂಧಿಸಿದ ದಾಖಲಾತಿಗಳೊಂದಿಗೆ ಅಂದು ಬಹಿರಂಗ ಹರಾಜಿನಲ್ಲಿ ಭಾಗವಹಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9845303733/9980630233ನ್ನು ಸಂಪರ್ಕಿಸಲು ಕೋರಲಾಗಿದೆ.

                                   ವೃತ್ತಿಪರ ಮತ್ತು ನರ್ಸಿಂಗ್ ವಸತಿ ನಿಲಯ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

ಕಲಬುರಗಿ,ಜು.31.(ಕ.ವಾ.)-ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಕಲಬುರಗಿ ತಾಲೂಕಿನಲ್ಲಿ ನಡೆಯುತ್ತಿರುವ ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ ವೃತ್ತಿಪರ, ಸ್ನಾತಕೋತ್ತರ, ನರ್ಸಿಂಗ್ ಮತ್ತು ಇಂಜಿನಿಯರಿಂಗ್ ಮತ್ತು ವೈದ್ಯಕೀಯ ವಿದ್ಯಾರ್ಥಿ ನಿಲಯಗಳ 2018-19ನೇ ಸಾಲಿಗೆ ಪ್ರವೇಶಕ್ಕಾಗಿ ಪ್ರವರ್ಗ-1, 2ಎ, 2ಬಿ, 3ಎ, 3ಬಿ, ಪ.ಜಾ./ಪ.ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಪ್ರವರ್ಗ-1, ಎಸ್.ಸಿ. ಮತ್ತು ಎಸ್.ಟಿ. ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯ ಮಿತಿ 2.50 ಲಕ್ಷ ರೂ. ಹಾಗೂ ಪ್ರವರ್ಗ-2ಎ, 2ಬಿ, 3ಎ, 3ಬಿ, ಇತರೆ ಹಿಂದುಳಿದ ವರ್ಗ ಹಾಗೂ ಇತರೆ ವರ್ಗದವರಿಗೆ ಆದಾಯ ಮಿತಿ 1 ಲಕ್ಷ ರೂ. ದೊಳಗಿರಬೇಕು. ಅಭ್ಯರ್ಥಿಗಳು ಇಲಾಖೆಯ ವೆಬ್‍ಸೈಟ್ https://ift.tt/1pXtg5j ಆನ್‍ಲೈನ್‍ನಲ್ಲಿ ಆಗಸ್ಟ್ 24ರೊಳಗಾಗಿ ಅರ್ಜಿ ಸಲ್ಲಿಸಬೇಕು.
ಆನ್‍ಲೈನ್ ಅರ್ಜಿ ಸಲ್ಲಿಸಿದ ನಂತರ ಅರ್ಜಿ ಪ್ರತಿ ಹಾಗೂ ಅಪಲೋಡ್ ಮಾಡಲಾದ ದಾಖಲಾತಿಗಳ ಪ್ರತಿಗಳನ್ನು ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರಿಂದ ದೃಢೀಕರಿಸಿ ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು ಕಲಬುರಗಿ ಕಚೇರಿಗೆ ಆಗಸ್ಟ್ 30ರೊಳಗೆ ಸಲ್ಲಿಸಿ ಸ್ವೀಕೃತಿ ಪಡೆಯುವುದು. ಅವಧಿ ಮೀರಿ ಬರುವ ಅರ್ಜಿಗಳನ್ನು ಪರಿಗಣಿಸಲಾಗದು. ಹೆಚ್ಚಿನ ವಿವರಕ್ಕೆ ಸದರಿ ಕಚೇರಿಯನ್ನು ಸಂಪರ್ಕಿಸಲು ಕೋರಿದೆ.

                                        ಆರೋಗ್ಯ ಕರ್ನಾಟಕ ಯೋಜನೆ: ಕಾರ್ಡು ನೀಡುವ ಪ್ರಕ್ರಿಯೆ ನಿರಂತರ

ಕಲಬುರಗಿ,ಜು.31.(ಕ.ವಾ.)-ರಾಜ್ಯ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ಆರೋಗ್ಯ ಕರ್ನಾಟಕ ಯೋಜನೆಯಡಿ ಫಲಾನುಭವಿಗಳಿಗೆ ನೀಡಲಾಗುವ ಆರೋಗ್ಯ ಕಾರ್ಡು ವಿತರಣೆ ನಿರಂತರ ಪ್ರಕ್ರಿಯೆಯಾಗಿದ್ದು, ಇನ್ನು ಮುಂದೆ ಜಿಲ್ಲೆಯ ಎಲ್ಲ ತಾಲೂಕಾ ಕೇಂದ್ರಗಳಲ್ಲಿ ನಿರಂತರವಾಗಿ ಕಾರ್ಡು ವಿತರಣೆ ಮಾಡಲಾಗುತ್ತದೆ ಎಂದು ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಸಾರ್ವಜನಿಕರು ಯಾವುದೇ ಆತಂಕಗೊಳ್ಳದೆ ದೈನಂದಿನ ಕೆಲಸಗಳನ್ನು ಬದಿಗೊತ್ತಿ ಆರೋಗ್ಯ ಕಾರ್ಡುಗಾಗಿ ಆಸ್ಪತ್ರೆಗಳಲ್ಲಿ ಸರದಿಯಲ್ಲಿ ನಿಲ್ಲುವುದು ಅನಾವಶ್ಯಕ. ಇನ್ನೂ ಆರೋಗ್ಯ ಕಾರ್ಡು ಪಡೆಯಲು ಎ.ಪಿ.ಎಲ್ ಅಥವಾ ಬಿ.ಪಿ.ಎಲ್ ಕಾರ್ಡು ಹಾಗೂ ಆಧಾರ್ ಕಾರ್ಡು ಇದ್ದರೆ ಸಾಕು ಹಾಗೂ ಪ್ರಸ್ತುತ ಈ ದಾಖಲೆಗಳ ಆಧಾರದ ಮೇಲೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ನಿಗದಿಪಡಿಸಿದ ಚಿಕಿತ್ಸೆ ಉಚಿತವಾಗಿ ನೀಡಲಾಗುತ್ತಿದ್ದು, ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದಲ್ಲಿ ಮಾತ್ರ ರೆಫರಲ್ ಕಾರ್ಡು ನೀಡಲಾತ್ತಿದೆ ಎಂದು ಅವರು ತಿಳಿಸಿದ್ದಾರೆ.

                                                                   ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಕಲಬುರಗಿ,ಜು.31.(ಕ.ವಾ.)-ಜೆಸ್ಕಾಂನ ಕಲಬುರಗಿ ನಗರ ಕಾರ್ಯ ಮತ್ತು ಪಾಲನೆ ವಿಭಾಗದ ವ್ಯಾಪ್ತಿಯಲ್ಲಿ ಬರುವ ಕಲಬುರಗಿ ನಗರದ 11.ಕೆ.ವಿ. ವಿಠ್ಠಲ ನಗರ ಮತ್ತು 11.ಕೆ.ವಿ. ಆಳಂದ ಕಾಲೋನಿ ಫೀಡರಗಳ ಮೇಲೆ ಆಗಸ್ಟ್ 1 ರಂದು ನಿರ್ವಹಣಾ ಕೆಲಸ ಕೈಗೆತ್ತಿಕೊಂಡಿರುವುದರಿಂದ ಅಂದು ಬೆಳಿಗ್ಗೆ 10 ರಿಂದ ಸಾಯಂಕಾಲ 4 ಗಂಟೆ ವರೆಗೆ ಸದರಿ ಫೀಡರಗಳ ವ್ಯಾಪ್ತಿಯ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಜೆಸ್ಕಾಂನೊಂದಿಗೆ ಸಹಕರಿಸುವಂತೆ ವಿಭಾಗದ ಕಾರ್ಯನಿರ್ವಾಹಕ ಇಂಜಿನೀಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳ ವಿವರ. 11.ಕೆ.ವಿ. ವಿಠ್ಠಲ ನಗರ- ಎಸ್ ಬಿ ಪೆಟ್ರೋಲ್ ಬಂಕ್, ಚಿರಾಯು ಆಸ್ಪತ್ರೆ, ಮಲಬಾರ ಗೋಲ್ಡ, ಬಿರಾದಾರ ಆಸ್ಪತ್ರೆ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು. 11.ಕೆ.ವಿ. ಆಳಂದ ಕಾಲೋನಿ- ಚಿಂಚೋಳಿ ಲೇಔಟ್, ಚೋರ ಬಜಾರ, ಫಿಲ್ಟರ್ ಬೆಡ್, ಚೆಕ್ ಪೋಸ್ಟ್, ಶಿವಾ ದಾಲ್ ಮಿಲ್, ರಾಮತೀರ್ಥ, ರಾಣೇಶ ಪೀರ್ ದರ್ಗಾ, ವಿಶ್ವರಾಧ್ಯ ಮಂದಿರ, ಸಿದ್ದರಾಮೇಶ್ವರ ನಗರ, ಆಯೋಧ್ಯ ನಗರ, ಲಕ್ಷ್ಮೀ ನಗರ, ಎಮ್ ಜಿ. ಟಿ.ಟಿ, ಆಶ್ರಯ ಕಾಲೋನಿ, ದುಬೈ ಕಾಲೋನಿ, ಅಹ್ಮದ ನಗರ ಪಿ.ಎಫ್ ಕಚೇರಿ, ಆಳಂದ ಕಾಲೋನಿ, ನಬಿ ಕಾಲೋನಿ, ಶೇಖ ರೋಜಾ, ಕಸ್ತೂರಿ ನಗರ, ಖಾದ್ರಿ ಚೌಕ್, ಸ್ವರ್ಗೆಶ ನಗರ, ಕಡಗಂಚಿ ಮಟ್ಟ ಮತ್ತು ಸುತ್ತ-ಮುತ್ತಲಿನ ಪ್ರದೇಶಗಳು.

                                              ಗ್ರಾಮೀಣ ಕ್ರೀಡೆ ಉಳಿವಿಗೆ ಕುಸ್ತಿ ಪಂದ್ಯಾವಳಿ ಆಯೋಜನೆ

ಕಲಬುರಗಿ,ಜು.31.(ಕ.ವಾ.)-ಗ್ರಾಮೀಣ ಕ್ರೀಡೆ ಉಳಿಸಿ ಬೆಳೆಸಲು ಇದೇ ಪ್ರಥಮ ಬಾರಿಗೆ ಕಲಬುರಗಿ ಜಿಲ್ಲೆಯಲ್ಲಿ 17 ವರ್ಷದೊಳಗಿನ ಬಾಲಕರ ಕುಸ್ತಿ ಪಂದ್ಯಾವಳಿ ಏರ್ಪಡಿಸಿ ಮಟ್ಟಿ ಕುಸ್ತಿ, ಮ್ಯಾಟ್ ಕುಸ್ತಿ, ವೈಜ್ಞಾನಿಕ ಮತ್ತು ಪಾಯಿಂಟ ಕುಸ್ತಿಗೆ ಅವಕಾಶ ನೀಡಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಜಿ.ನಾಡಗೀರ ಹೇಳಿದರು.
ಅವರು ಸೋಮವಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಖೆ, ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮ ಹಾಗೂ ಡಾ. ಬಿ.ಆರ್. ಅಂಬೇಡ್ಕರ ಕ್ರಾಂತಿಕಾರಿ ಯುವಕ ಸಂಘ ನರೋಣಾ ಇವರ ಸಂಯುಕ್ತ ಆಶ್ರಯದಲ್ಲಿ ನರೋಣಾದ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ 17 ವರ್ಷದೊಳಗಿನ ಬಾಲಕರ ಕುಸ್ತಿ ಪಂದ್ಯಾವಳಿ ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದರು. ಅರ್ಹ ಕುಸ್ತಿ ಪಟುಗಳಿಗೆ ರಾಜ್ಯ ದಸರಾ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಲು ಸಹ ನಿಯೋಜಿಸಲಾಗುವುದು ಎಂದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶಿವಕುಮಾರ ಕರಹರಿ ಮಾತನಾಡಿ ಕುಸ್ತಿಪಟುಗಳಲ್ಲಿ ಅಡಗಿರುವ ಪ್ರತಿಭೆಯನ್ನು ಪ್ರೋತ್ಸಾಹಿಸಲು ಇಂತಹ ಸ್ಪರ್ಧೆಗಳು ಹೆಚ್ಚಿನ ರೀತಿಯಲ್ಲಿ ಆಗಾಗ ಆಯೋಜಿಸುವುದು ಅವಶ್ಯಕವಾಗಿದೆ ಎಂದರು.
ಪಂದ್ಯಾವಳಿಯನ್ನು ನರೋಣಾ ಗ್ರಾಮ ಪಂಚಾಯತ ಅಧ್ಯಕ್ಷೆ ಶರಣಮ್ಮಾ ಬಾಳಿ ಉದ್ಘಾಟಿಸಿದರು. ತಾಲೂಕಾ ಪಂಚಾಯತಿಯ ಮಾಜಿ ಸದಸ್ಯ ಮಲ್ಲಿಕಾರ್ಜುನ ಮದಲಿ, ಶಾಲಾ ಮುಖ್ಯಗುರು ಅಂಬುಬಾಯಿ, ಎಸ್.ಡಿ.ಎಮ್.ಸಿ ಅಧ್ಯಕ್ಷ ಸಂಜುಕುಮಾರ ಹೀರಾ, ತರಬೇತುದಾರ ಅಶೋಕ ಸೇರಿದಂತೆ ನಾಗಪ್ಪಾ ಎಸ್. ಕೋರೆ, ಚಂದ್ರಕಾಂತ ಕೋರೆ, ಕೈಲಾಸ ರಾಗಿ, ಶಂಕರ ಜಾಧವ, ಶಿವಪುತ್ರ ರಾಗಿ ಸೇರಿದಂತೆ ಗ್ರಾಮದ ಗಣ್ಯರು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯತ ಸದಸ್ಯೆ ವಿಜಯಲಕ್ಷ್ಮೀ ಎಮ್. ರಾಗಿ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಿದರು.

                                                       ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ

ಕಲಬುರಗಿ,ಜು.31.(ಕ.ವಾ.)-ಕಲಬುರಗಿಯ ಪಶು ವೈದ್ಯಕೀಯ ಪರೀಕ್ಷಕರ ತರಬೇತಿ ಕೇಂದ್ರದಿಂದ ರೈತರಿಗಾಗಿ ಆಗಸ್ಟ್ 8 ರಿಂದ 10ರ ವರೆಗೆ ಕುರಿ ಮತ್ತು ಮೇಕೆ ಸಾಕಾಣಿಕೆ ಹಾಗೂ ಆಗಸ್ಟ್ 16 ರಿಂದ 18ರ ವರೆಗೆ ಹೈನುಗಾರಿಕೆ ತರಬೇತಿ ನೀಡಲಾಗುತ್ತಿದ್ದು, ಆಸಕ್ತ ರೈತರು ಇದರ ಲಾಭ ಪಡೆಯುವಂತೆ ಕೇಂದ್ರದ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ತರಬೇತಿಗೆ ಬರುವ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಭತ್ಯೆ ಅಥವಾ ಊಟದ ವ್ಯವಸ್ಥೆ ಇರುವುದಿಲ್ಲ. ಹೆಚ್ಚಿನ ವಿವರಕ್ಕಾಗಿ ಉಪನಿರ್ದೇಶಕರು ಪಶು ವೈದ್ಯಕೀಯ ಪರೀಕ್ಷಕರ ತರಬೇತಿ ಕೇಂದ್ರ ಸೇಡಂ ರಸ್ತೆ ಕಲಬುರಗಿ ಇವರನ್ನು ಸಂಪರ್ಕಿಸಹದಾಗಿದೆ.




ಹೀಗಾಗಿ ಲೇಖನಗಳು News & photos Dt.31-07-2018

ಎಲ್ಲಾ ಲೇಖನಗಳು ಆಗಿದೆ News & photos Dt.31-07-2018 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ News & photos Dt.31-07-2018 ಲಿಂಕ್ ವಿಳಾಸ https://dekalungi.blogspot.com/2018/07/news-photos-dt31-07-2018.html

Subscribe to receive free email updates:

0 Response to "News & photos Dt.31-07-2018"

ಕಾಮೆಂಟ್‌‌ ಪೋಸ್ಟ್‌ ಮಾಡಿ