ಉದ್ಯೋಗ ಖಾತ್ರಿ ಯೋಜನೆ : ಆ. 23 ರವರೆಗೆ ಗುಳೆ ತಡೆ ಅಭಿಯಾನ

ಉದ್ಯೋಗ ಖಾತ್ರಿ ಯೋಜನೆ : ಆ. 23 ರವರೆಗೆ ಗುಳೆ ತಡೆ ಅಭಿಯಾನ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಉದ್ಯೋಗ ಖಾತ್ರಿ ಯೋಜನೆ : ಆ. 23 ರವರೆಗೆ ಗುಳೆ ತಡೆ ಅಭಿಯಾನ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಉದ್ಯೋಗ ಖಾತ್ರಿ ಯೋಜನೆ : ಆ. 23 ರವರೆಗೆ ಗುಳೆ ತಡೆ ಅಭಿಯಾನ
ಲಿಂಕ್ : ಉದ್ಯೋಗ ಖಾತ್ರಿ ಯೋಜನೆ : ಆ. 23 ರವರೆಗೆ ಗುಳೆ ತಡೆ ಅಭಿಯಾನ

ಓದಿ


ಉದ್ಯೋಗ ಖಾತ್ರಿ ಯೋಜನೆ : ಆ. 23 ರವರೆಗೆ ಗುಳೆ ತಡೆ ಅಭಿಯಾನ


ಕೊಪ್ಪಳ ಆ. 13 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕ ಪಂಚಾಯತ್ ವತಿಯಿಂದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಐಇಸಿ ಕಾರ್ಯಕ್ರಮದಡಿ ಆ. 23 ರವರೆಗೆ ತಾಲೂಕಿನ 38 ಗ್ರಾಮ ಪಂಚಾಯತಿಗಳಲ್ಲಿ ಗುಳೆ ತಡೆ ಅಭಿಯಾನ ನಡೆಯಲಿದೆ ಎಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಟಿ. ಕೃಷ್ಣಮೂರ್ತಿ ಅವರು ತಿಳಿಸಿದ್ದಾರೆ.       
    ಗುಳೆ ತಡೆ ಅಭಿಯಾನದಲ್ಲಿ ಜಾಗೃತಿ ರಥದ ಮೂಲಕ ಅರಿವು ಕಾರ್ಯಕ್ರಮ ನಡೆಯಲಿದೆ.  ಕೊಪ್ಪಳ ತಾಲೂಕಿನ 38 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಕೂಲಿಕಾರರು ಗುಳೆ ಹೋಗದಂತೆ ತಡೆಯಲು, ಕೂಲಿಕಾರರ ಕೂಲಿ ಬೇಡಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆಯುವ ಪ್ರಯುಕ್ತ "ಗುಳೆ ತಡೆ ಅಭಿಯಾನ" ಮೂಲಕ ಪ್ರಚಾರ ಕೈಗೊಳ್ಳಲಿದ್ದು, ಸಂಬಂಧಿಸಿದ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸರ್ವ ಸದಸ್ಯರನ್ನು ಒಳಗೊಂಡು ವಾಹನವನ್ನು ಸ್ವಾಗತಿಸಿದ ನಂತರ ಗ್ರಾ.ಪಂ. ವ್ಯಾಪ್ತಿಯಲ್ಲಿ ಪ್ರಚಾರಕ್ಕೆ ಸಿಬ್ಬಂದಿಯನ್ನು ನಿಯೋಜಿಸಿ ಪ್ರಚಾರ ಕೈಗೊಳ್ಳಬೇಕು.    
ಗುಳೆ ತಡೆ ಅಭಿಯಾನ ವಾಹನದ ಪ್ರಚಾರವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ, ಸಂತೆ, ಜಾತ್ರೆ, ಜನಜಂಗುಳಿ ಪ್ರದೇಶದಲ್ಲಿ ಎಸ್.ಸಿ/ ಎಸ್.ಟಿ ಕಾಲೋನಿಗಳಲ್ಲಿ ಭಾರಿ ಪ್ರಚಾರ ಕೈಗೊಳ್ಳಬೇಕು ಅಲ್ಲದೇ ಈ ಕುರಿತು ವರದಿಯನ್ನು ತಾ.ಪಂ. ಕಾರ್ಯಾಲಯಕ್ಕೆ ಸಲ್ಲಿಸಬೇಕು.  ಗ್ರಾ.ಪಂ. ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಕೂಲಿಕಾರರು ಗುಳೆ ಹೋಗದಂತೆ ತಡೆಯಲು ಡೆಂಗುರ, ತಮಟೆ ಮೂಲಕ ಪ್ರಚಾರ ಕೈಗೊಳ್ಳಬೇಕು ಹಾಗೂ ಗ್ರಾಮದ ದೇವಸ್ಥಾನದ ಮೈಕ್‍ಸೆಟ್ ಮೂಲಕ ಪ್ರಚುರಪಡಿಸಬೇಕು.  ಸಮುದಾಯಿಕ ಕಾಮಗಾರಿಗಳು ಪ್ರಗತಿಯಲ್ಲಿರುವ ಬಗ್ಗೆ ಮತ್ತು ಇಲ್ಲಿಯವರೆಗೆ ಕೂಲಿಕಾರರಿಗೆ ಕೂಲಿ ಕೆಲಸ ನೀಡಿದ ಬಗ್ಗೆ ವರದಿಯನ್ನು ಸಲ್ಲಿಸಬೇಕು.  ಉದ್ಯೋಗ ಚೀಟಿ ಹೊಂದಿದ ಕುಟುಂಬಗಳ ಮನೆ ಮನೆ ಭೇಟಿ ಮೂಲಕ ವೈಯಕ್ತಿಕ ಕಾಮಗಾರಿಗಳಾದ ಕೃಷಿಕೊಂಡ, ಬದು ನಿರ್ಮಾಣ, ತೋಟಗಾರಿಕೆ ಸಸಿ ನಡುವಿಕೆ ಮುಂತಾದ ಕಾಮಗಾರಿಗಳ ಬೇಡಿಕೆ ಪಡೆದುಕೊಳ್ಳಬೇಕು.  ಪ್ರತಿ ಕುಟುಂಬದ ಸದಸ್ಯರ ವೈಯಕ್ತಿಕ ಬ್ಯಾಂಕ್ ಖಾತೆಯನ್ನು ಪಡೆದು ಮತ್ತು ಎಂ.ಐ.ಎಸ್. ನಲ್ಲಿ ಹಿಂದಿರುಗಿಸಬೇಕು.  ಆ. 30 ರವರೆಗೆ ಗ್ರಾ.ಪಂ. ಮಟ್ಟದಲ್ಲಿ ಎಂ.ಜಿ. ನರೇಗಾದಡಿ ವಿವಿಧ ಐಇಸಿ ಕಾರ್ಯಕ್ರಮ ಜರುಗಿಸಿ ಮಾನವ ದಿನಗಳ ಸೃಜನೆಗೆ ಕ್ರಮವಹಿಸುವುದು ಮತ್ತು ಪ್ರತಿ ಐಇಸಿ ಕಾರ್ಯಕ್ರಮದ ವಿಡಿಯೋ ಹಾಗೂ ಛಾಯಾಚಿತ್ರೀಕರಣ ದಾಖಲಾತಿ ಕೈಗೊಳ್ಳಬೇಕು.  ಈ ಕಾರ್ಯಕ್ರಮಗಳನ್ನು ಕೈಗೊಳ್ಳದೇ, ಕೂಲಿಕಾರರು ಗುಳೆ ಹೋದ ಪ್ರಕರಣಗಳು ಕಂಡು ಬಂದಲ್ಲಿ ಸಂಬಧಿಸಿದ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮತ್ತು ತಾಂತ್ರಿಕ ಸಹಾಯಕರನ್ನೇ ನೇರ ಹೋಣೆಗಾರರನ್ನಾಗಿ ಮಾಡಿ ಕ್ರಮ ಜರುಗಿಸಲು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ಕೊಪ್ಪಳ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಟಿ. ಕೃಷ್ಣಮೂರ್ತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಹೀಗಾಗಿ ಲೇಖನಗಳು ಉದ್ಯೋಗ ಖಾತ್ರಿ ಯೋಜನೆ : ಆ. 23 ರವರೆಗೆ ಗುಳೆ ತಡೆ ಅಭಿಯಾನ

ಎಲ್ಲಾ ಲೇಖನಗಳು ಆಗಿದೆ ಉದ್ಯೋಗ ಖಾತ್ರಿ ಯೋಜನೆ : ಆ. 23 ರವರೆಗೆ ಗುಳೆ ತಡೆ ಅಭಿಯಾನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಉದ್ಯೋಗ ಖಾತ್ರಿ ಯೋಜನೆ : ಆ. 23 ರವರೆಗೆ ಗುಳೆ ತಡೆ ಅಭಿಯಾನ ಲಿಂಕ್ ವಿಳಾಸ https://dekalungi.blogspot.com/2018/08/23.html

Subscribe to receive free email updates:

0 Response to "ಉದ್ಯೋಗ ಖಾತ್ರಿ ಯೋಜನೆ : ಆ. 23 ರವರೆಗೆ ಗುಳೆ ತಡೆ ಅಭಿಯಾನ"

ಕಾಮೆಂಟ್‌‌ ಪೋಸ್ಟ್‌ ಮಾಡಿ