ಶೀರ್ಷಿಕೆ : ಆ. 20 ರಂದು ಕೊಪ್ಪಳದಲ್ಲಿ ಮಿನಿ ಉದ್ಯೋಗ ಮೇಳ
ಲಿಂಕ್ : ಆ. 20 ರಂದು ಕೊಪ್ಪಳದಲ್ಲಿ ಮಿನಿ ಉದ್ಯೋಗ ಮೇಳ
ಆ. 20 ರಂದು ಕೊಪ್ಪಳದಲ್ಲಿ ಮಿನಿ ಉದ್ಯೋಗ ಮೇಳ
ಕೊಪ್ಪಳ ಆ. 13 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ವತಿಯಿಂದ ಮಿನಿ ಉದ್ಯೋಗ ಮೇಳವನ್ನು ಆ. 20 ರಂದು ಬೆಳಿಗ್ಗೆ 10-30 ರಿಂದ 2-30 ರವರೆಗೆ ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿನ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಆಯೋಜಿಸಲಾಗಿದೆ.
ಮಿನಿ ಉದ್ಯೋಗ ಮೇಳದಲ್ಲಿ ಸೀಮೆನ್ ಸ್ಟಾಫಿಂಗ್ ಸಲ್ಯೂಷನ್ಸ ಪ್ರೈ.ಲಿ. ಹುಬ್ಬಳ್ಳಿ, ಡಿಪ್‍ಸನ್ಸ ಸರ್ವಿಸ್ ಪ್ರೈ.ಲಿ. ಧಾರವಾಡ, ಪ್ರವೈಡರ್ ಪ್ರೈ.ಲಿ. ಬೆಂಗಳೂರು, ಐಸಿಐಸಿಐ ಬ್ಯಾಂಕ್ ಲಿ. ಬೆಂಗಳೂರು, ಎಜುಬ್ರಿಡ್ಜ್ ಪ್ರೈ.ಲಿ. ಶಿವಮೊಗ್ಗ, ನವಭಾರತ ಫರ್ಟಿಲೈಜರ್ಸ್ ಪ್ರೈ.ಲಿ. ಹುಬ್ಬಳ್ಳಿ ಹಾಗೂ ಹೋಂಡಾ ಎಸ್.ಬಿ.ಎಂ.ಎಸ್. ಪ್ರೈ.ಲಿ. ಬೆಂಗಳೂರು, ಕಂಪನಿಗಳು ಭಾಗವಹಿಸಿ ತಮ್ಮಲ್ಲಿನ ಖಾಲಿ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಿದ್ದು, ಭಾಗವಹಿಸಲು ಉಚಿತ ಪ್ರವೇಶವಿರುತ್ತದೆ.
1 ನೇ ತರಗತಿಯಿಂದ ಎಸ್.ಎಸ್.ಎಲ್.ಸಿ, ಪಿಯುಸಿ, ಯಾವುದೇ ಪದವಿ, ಐ.ಟಿ.ಐ ಎಲ್ಲಾ ಟ್ರೇಡ್‍ಗಳು ಅನ್ವಯಿಸುತ್ತದೆ. ಡಿಪೆÇ್ಲೀಮ (ಇ&ಸಿ, ಎಲೆಕ್ಟ್ರಿಷಿಯನ್, ಆಟೋಮೊಬೈಲ್ಸ್), ಬಿ.ಇ (ಇ&ಸಿ ಎಲೆಕ್ಟ್ರಿಷಿಯನ್, ಆಟೋಮೊಬೈಲ್ಸ್) ಯಾವುದೇ ಸ್ನಾತಕೋತ್ತರ ಪದವಿ, ಎಂ.ಬಿ.ಎ. ಮತ್ತು ಮಾಜಿ ಸೈನಿಕರು (ಪ್ರವೈಡರ್ ಪ್ರೈ.ಲಿ.ಬೆಂಗಳೂರು), ಅಭ್ಯರ್ಥಿಗಳಿಗೆ ನೇರ ಸಂದರ್ಶನ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಈ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳು 18 ರಿಂದ 38 ವರ್ಷ ವಯೋಮಿತಿಯ ಅರ್ಹ ವಿದ್ಯಾರ್ಹತೆ ಹೊಂದಿದ ನಿರುದ್ಯೋಗಿ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಎಲ್ಲ ಪ್ರಮಾಣ ಪತ್ರಗಳು ಮತ್ತು ಆಧಾರ ಕಾರ್ಡಿನ ಪ್ರತಿ, 4 ರಿಂದ 5 ಬಯೋಡಾಟಾ (ರೆಸ್ಯೂಮ್), ಹಾಗೂ ಪಾಸ್‍ಪೆÇೀರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ಮಿನಿ ಉದ್ಯೋಗ ಮೇಳದಲ್ಲಿ ಭಾಗವಹಿಸಿ, ಉದ್ಯೋಗದ ನೆರವನ್ನು ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾ ಆಡಳಿತ ಭವನ ಕೊಪ್ಪಳ ದೂರವಾಣಿ ಸಂಖ್ಯೆ 08539-220859, ಮೊ.ಸಂ 8105848991 ಕ್ಕೆ ಸಂಪರ್ಕಿಸಬಹುದು ಎಂದು ಕೊಪ್ಪಳ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಆ. 20 ರಂದು ಕೊಪ್ಪಳದಲ್ಲಿ ಮಿನಿ ಉದ್ಯೋಗ ಮೇಳ
ಎಲ್ಲಾ ಲೇಖನಗಳು ಆಗಿದೆ ಆ. 20 ರಂದು ಕೊಪ್ಪಳದಲ್ಲಿ ಮಿನಿ ಉದ್ಯೋಗ ಮೇಳ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಆ. 20 ರಂದು ಕೊಪ್ಪಳದಲ್ಲಿ ಮಿನಿ ಉದ್ಯೋಗ ಮೇಳ ಲಿಂಕ್ ವಿಳಾಸ https://dekalungi.blogspot.com/2018/08/20.html
0 Response to "ಆ. 20 ರಂದು ಕೊಪ್ಪಳದಲ್ಲಿ ಮಿನಿ ಉದ್ಯೋಗ ಮೇಳ"
ಕಾಮೆಂಟ್ ಪೋಸ್ಟ್ ಮಾಡಿ