ಶೀರ್ಷಿಕೆ : ಆ. 15 ರಿಂದ "ಹಸಿರು ಕರ್ನಾಟಕ" ಯೋಜನೆ : ಸಸಿ ನೆಡುವ ಮೂಲಕ ಕೊಪ್ಪಳವನ್ನು ಹಸಿರು ಜಿಲ್ಲೆಯಾಗಿಸೋಣ : ಯಶ್‍ಪಾಲ್ ಕ್ಷೀರಸಾಗರ
ಲಿಂಕ್ : ಆ. 15 ರಿಂದ "ಹಸಿರು ಕರ್ನಾಟಕ" ಯೋಜನೆ : ಸಸಿ ನೆಡುವ ಮೂಲಕ ಕೊಪ್ಪಳವನ್ನು ಹಸಿರು ಜಿಲ್ಲೆಯಾಗಿಸೋಣ : ಯಶ್‍ಪಾಲ್ ಕ್ಷೀರಸಾಗರ
ಆ. 15 ರಿಂದ "ಹಸಿರು ಕರ್ನಾಟಕ" ಯೋಜನೆ : ಸಸಿ ನೆಡುವ ಮೂಲಕ ಕೊಪ್ಪಳವನ್ನು ಹಸಿರು ಜಿಲ್ಲೆಯಾಗಿಸೋಣ : ಯಶ್‍ಪಾಲ್ ಕ್ಷೀರಸಾಗರ
ಕೊಪ್ಪಳ ಆ. 13 (ಕರ್ನಾಟಕ ವಾರ್ತೆ): ರಾಜ್ಯಾದ್ಯಂತ ಆ. 15 ರಿಂದ 18 ರವರೆಗೆ "ಹಸಿರು ಕರ್ನಾಟಕ" ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಆ. 15 ರಂದು ಕೊಪ್ಪಳ ಜಿಲ್ಲೆಯಾದ್ಯಂತ ಸಸಿ ನೆಡುವ ಮತ್ತು ಸಸಿ ವಿತರಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಎಲ್ಲರೂ ಸಸಿ ನೆಡುವ ಮೂಲಕ ಕೊಪ್ಪಳ ಜಿಲ್ಲೆಯನ್ನು ಹಸಿರು ಜಿಲ್ಲೆಯಾಗಿಸೋಣ ಎಂದು ಎಂದು ಕೊಪ್ಪಳ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶ್‍ಪಾಲ್ ಕ್ಷೀರಸಾಗರ ಅವರು ಕರೆ ನೀಡಿದ್ದಾರೆ.
ರಾಜ್ಯ ಸರ್ಕಾರವು ಪ್ರಸಕ್ತ ಸಾಲಿನ ಆಯ್ಯವ್ಯಯ ಭಾಷಣದಲ್ಲಿ "ಹಸಿರು ಕರ್ನಾಟಕ" ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದೆಂದು ಘೋಷಿಸಿದ್ದು, ಅದನ್ನು ಅನುಷ್ಠಾನಗೊಳಿಸುವ ಕುರಿತು, ಸರ್ಕಾರದ ಮಟ್ಟದಲ್ಲಿ ಯೋಜನೆಯನ್ನು ಜಾರಿಗೊಳಿಸಲಾಗುವುದು. ಇತ್ತೀಚಿನ ವರ್ಷಗಳಲ್ಲಿ ರಾಜ್ಯದಲ್ಲಿ ಅರಣ್ಯ ಪ್ರಮಾಣವು ಕೊಂಚ ಚೇತರಿಕೆಯಾಗುತ್ತಿದೆ. ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ನೀಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ಸಾಮಾಜಿಕ ಅರಣ್ಯ ಬೆಳವಣಿಗೆಗೆ ಹೆಚ್ಚು ಒತ್ತು ನೀಡಲು ನಿರ್ಧರಿಸಲಾಗಿದೆ. ಆದ್ದರಿಂದ ರಾಜ್ಯದಲ್ಲಿರುವ ಸಣ್ಣ ಪುಟ್ಟ ಬೆಟ್ಟ-ಗುಡ್ಡಗಳು ಮತ್ತು ಸುತ್ತಮುತ್ತಲಿನ ಸರ್ಕಾರಿ ಜಮೀನುಗಳಲ್ಲಿ ಆಯಾ ಪ್ರದೇಶದಲ್ಲಿ ಸ್ಥಳೀಯವಾಗಿ ಬೆಳೆಯುವ ಸೂಕ್ತವಾದ ಮರಗಳನ್ನು ವ್ಯಾಪಕವಾಗಿ ಬೆಳೆಸುವ "ಹಸಿರು ಕರ್ನಾಟಕ" ಯೋಜನೆಯನ್ನು ಆಂದೋಲನ ಮಾದರಿಯಲ್ಲಿ ಅನುಷ್ಠಾನಗೊಳಿಸಲಾಗುವುದು. ಶಾಲಾ ಕಾಲೇಜು ವಿದ್ಯಾರ್ಥಿಗಳು ಪರಿಸರ ಸಂಘಟನೆಗಳು ಈ ಆಂದೋಲನದಲ್ಲಿ ಸಕ್ರೀಯವಾಗಿ ಭಾಗವಹಿಸಲಿದ್ದಾರೆ. "ಮನೆಗೊಂದು ಮರ ಊರಿಗೊಂದು ತೋಪು" "ತಾಲೂಕಿಗೊಂದು ಕಿರು ಅರಣ್ಯ ಜಿಲ್ಲೆಗೊಂದು ಕಾಡು ಅರಣ್ಯ" ಎನ್ನುವುದು ಹಸಿರು ಕರ್ನಾಟಕದ ದ್ಯೇಯವಾಗಿದೆ.
ರಾಷ್ಟ್ರೀಯ ಅರಣ್ಯ ನೀತಿಯಂತೆ ಒಟ್ಟು ಭೂ ಪ್ರದೇಶದ ಶೇ.33 ರಷ್ಟು ಪ್ರದೇಶವು ಹಸಿರು ಹೊದಿಕೆಯಿಂದ ಕೂಡಿರಬೇಕಾಗಿರುತ್ತದೆ. ಆದರೆ ಕರ್ನಾಟಕದಲ್ಲಿ ಶೇ.20 ರಷ್ಟು, ಪ್ರಸ್ತುತ ಕೊಪ್ಪಳ ಜಿಲ್ಲೆಯಲ್ಲಿ ಶೇ. 5.90 ರಷ್ಟು ಮಾತ್ರ ಅರಣ್ಯ ಪ್ರದೇಶವಿರುತ್ತದೆ. ಕೊಪ್ಪಳ ಜಿಲ್ಲೆಯಲ್ಲಿ ಅರಣ್ಯವನ್ನು ಬೆಳೆಸುವ ಸಲುವಾಗಿ ಆ. 15 ರ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಡಿ ಸಸಿ ನಡೆಸುವ ಮತ್ತು ಸಸಿ ವಿತರಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಈ ಕಾರ್ಯಕ್ರಮದಡಿಯಲ್ಲಿ ವ್ಯಾಪಕವಾಗಿ ಆ. 15 ರಿಂದ 18 ರವರೆಗೆ ಜಿಲ್ಲೆಯಾದ್ಯಂತ ಎಲ್ಲಾ ಇಲಾಖೆಯ ಕಛೇರಿ, ಶಾಲಾ ಕಾಲೇಜು ವಿದ್ಯಾರ್ಥಿಗಳು ಪರಿಸರ ಸಂಘಟನೆಗಳು, ಸ್ಥಳೀಯ ಸಂಘಸಂಸ್ಥೆಗಳು, ಸ್ವಯಂ ಸೇವಕರು, ಸಾರ್ವಜನಿಕರು ಹಾಗೂ ಇತರರ ಸಹಭಾಗಿತ್ವದೊಂದಿಗೆ ಯಶಸ್ವಿಯಾಗಿ ನಿರ್ವಹಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು. ಬನ್ನಿ ಎಲ್ಲರೂ ಕೈ ಜೋಡಿಸಿ "ಹಸಿರು ಕರ್ನಾಟಕ" ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ರಾಜ್ಯ ಹಾಗೂ ಕೊಪ್ಪಳ ಜಿಲ್ಲೆಯನ್ನು ಹಸಿರುಗೊಳಿಸೋಣ ಎಂದು ಕೊಪ್ಪಳ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶ್‍ಪಾಲ್ ಕ್ಷೀರಸಾಗರ ಅವರು ಕರೆ ನೀಡಿದ್ದಾರೆ.
ಹೀಗಾಗಿ ಲೇಖನಗಳು ಆ. 15 ರಿಂದ "ಹಸಿರು ಕರ್ನಾಟಕ" ಯೋಜನೆ : ಸಸಿ ನೆಡುವ ಮೂಲಕ ಕೊಪ್ಪಳವನ್ನು ಹಸಿರು ಜಿಲ್ಲೆಯಾಗಿಸೋಣ : ಯಶ್‍ಪಾಲ್ ಕ್ಷೀರಸಾಗರ
ಎಲ್ಲಾ ಲೇಖನಗಳು ಆಗಿದೆ ಆ. 15 ರಿಂದ "ಹಸಿರು ಕರ್ನಾಟಕ" ಯೋಜನೆ : ಸಸಿ ನೆಡುವ ಮೂಲಕ ಕೊಪ್ಪಳವನ್ನು ಹಸಿರು ಜಿಲ್ಲೆಯಾಗಿಸೋಣ : ಯಶ್‍ಪಾಲ್ ಕ್ಷೀರಸಾಗರ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಆ. 15 ರಿಂದ "ಹಸಿರು ಕರ್ನಾಟಕ" ಯೋಜನೆ : ಸಸಿ ನೆಡುವ ಮೂಲಕ ಕೊಪ್ಪಳವನ್ನು ಹಸಿರು ಜಿಲ್ಲೆಯಾಗಿಸೋಣ : ಯಶ್‍ಪಾಲ್ ಕ್ಷೀರಸಾಗರ ಲಿಂಕ್ ವಿಳಾಸ https://dekalungi.blogspot.com/2018/08/15_13.html
0 Response to "ಆ. 15 ರಿಂದ "ಹಸಿರು ಕರ್ನಾಟಕ" ಯೋಜನೆ : ಸಸಿ ನೆಡುವ ಮೂಲಕ ಕೊಪ್ಪಳವನ್ನು ಹಸಿರು ಜಿಲ್ಲೆಯಾಗಿಸೋಣ : ಯಶ್‍ಪಾಲ್ ಕ್ಷೀರಸಾಗರ"
ಕಾಮೆಂಟ್ ಪೋಸ್ಟ್ ಮಾಡಿ