ಆ. 13 ರಿಂದ ಗಂಗಾವತಿಯಲ್ಲಿ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಹಾಗೂ ಮಾರಾಟ ಮೇಳ

ಆ. 13 ರಿಂದ ಗಂಗಾವತಿಯಲ್ಲಿ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಹಾಗೂ ಮಾರಾಟ ಮೇಳ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಆ. 13 ರಿಂದ ಗಂಗಾವತಿಯಲ್ಲಿ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಹಾಗೂ ಮಾರಾಟ ಮೇಳ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಆ. 13 ರಿಂದ ಗಂಗಾವತಿಯಲ್ಲಿ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಹಾಗೂ ಮಾರಾಟ ಮೇಳ
ಲಿಂಕ್ : ಆ. 13 ರಿಂದ ಗಂಗಾವತಿಯಲ್ಲಿ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಹಾಗೂ ಮಾರಾಟ ಮೇಳ

ಓದಿ


ಆ. 13 ರಿಂದ ಗಂಗಾವತಿಯಲ್ಲಿ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಹಾಗೂ ಮಾರಾಟ ಮೇಳ


ಕೊಪ್ಪಳ ಆ. 09 (ಕರ್ನಾಟಕ ವಾರ್ತೆ) : ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮವು ಶ್ರಾವಣ ಮಾಸದಲ್ಲಿ ಬರಲಿರುವ  ಸಾಲು ಸಾಲು ಹಬ್ಬಗಳ ನಿಮಿತ್ಯ, ಕರ್ನಾಟಕದ ಪಾರಂಪರಿಕ ಉತ್ಪನ್ನವಾದ ಮೈಸೂರು ಸಿಲ್ಕ್ ರೇಷ್ಮೆ ಸೀರೆಗಳ ಬೃಹತ್ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಗಸ್ಟ್ 13 ರಿಂದ 17 ರವರೆಗೆ ಐದು ದಿನಗಳ ಕಾಲ ಗಂಗಾವತಿ-ಆನೆಗೊಂದಿ ರಸ್ತೆಯಲ್ಲಿನ ಸರೋಜಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದೆ.
    ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮವು ಆರನೆ ಬಾರಿಗೆ ಗಂಗಾವತಿಯಲ್ಲಿ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಹಮ್ಮಿಕೊಂಡಿದ್ದು,  ಗಂಗಾವತಿಯ ಸರೋಜಮ್ಮ ಕಲ್ಯಾಣ ಮಂಟಪದಲ್ಲಿ ಮಾರಾಟ ಮೇಳ ನಡೆಯಲಿದೆ. ಆ. 13 ರಿಂದ 17 ರವರೆಗೆ ಪ್ರತಿದಿನ ಬೆಳಗ್ಗೆ 10.00ರಿಂದ ರಾತ್ರಿ 8.00 ಗಂಟೆಯವರೆಗೆ  ಐದು ದಿನಗಳ ಕಾಲ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.   ವಿಶೇಷವಾಗಿ ಈ ಬಾರಿ ನಿಗಮವು ತನ್ನ ಉತ್ಪನ್ನಗಳ ಮೇಲೆ ಶೇ. 25 ರ ರಿಯಾಯಿತಿ ನೀಡಲಿದೆ.  ಶ್ರಾವಣ ಮಾಸದಲ್ಲಿ ಬರುವ ವಿವಿಧ ಹಬ್ಬಗಳ ಸಡಗರವನ್ನು ಮೈಸೂರು ಸಿಲ್ಕ್ ರೇಷ್ಮೆ ಖರೀದಿಸುವುದರೊಂದಿಗೆ ಆಚರಿಸಲು ಇದು ಉತ್ತಮ ಅವಕಾಶವಾಗಿದೆ.        
         ಸಾಂಪ್ರದಾಯಿಕ ರೀತಿಯಲ್ಲದೆ, ಕೆ.ಎಸ್.ಐ.ಸಿ.ಯು ಈಗ ನಾಜೂಕಾದ ವಿನ್ಯಾಸದ ಸಂಗ್ರಹಿತ “ಕ್ರೇಪ್ ಡಿ ಚೈನ್” ಸೀರೆಗಳನ್ನು, “ಕಸೂತಿ” ಎಂಬ್ರಾಯಿಡರಿ ಸೀರೆಗಳನ್ನು ಹಾಗೂ ಜಾರ್ಜೆಟ್ ಮತ್ತು ಸಾದಾ ಮುದ್ರಿತ ಸೀರೆಗಳನ್ನು, ಟೈಯ್ಸ್, ಸ್ಕಾರ್ಫ್ ಇತ್ಯಾದಿ ಉತ್ಪನ್ನಗಳನ್ನು ಪ್ರದರ್ಶಿತಗೊಳಿಸುತ್ತಿದೆ.   ಇದಲ್ಲದೆ  ನವನವೀನ “ವಿವಾಹ ಸಂಗ್ರಹ”  ಸೀರೆಗಳನ್ನು  ಪರಿಚಯಿಸಲಾಗಿದೆ   ಹಾಗೂ ಕೆ.ಎಸ್.ಐ.ಸಿ.ಯು ಇತ್ತೀಚೆಗೆ ಹಲವು ವಿನ್ಯಾಸಗಳ ಸೀರೆಗಳನ್ನು ಉತ್ಪಾದಿಸಿ ಗ್ರಾಹಕರುಗಳಿಗೆ ಪರಿಚಯಿಸಿದೆ.  ಮೈಸೂರ್ ಸಿಲ್ಕ್ ಸೀರೆಗಳ ಸಾಂಪ್ರದಾಯಿಕ ರೀತಿಯ ಉತ್ಪಾದನೆ, ಬಟ್ಟೆಯಲ್ಲಿ ಅಳವಡಿಸಲಾಗಿರುವ ಹುರಿ ಮಾಡುವ ವಿಧಾನ, ಭಾರತದಲ್ಲಿ ದೊರೆಯುವ ಕ್ರೇಪ್ ಸಿಲ್ಕ್ ಬಟ್ಟೆಗಳಲ್ಲಿಯೇ ಅತ್ಯುತ್ತಮವಾಗಿರುವುದಲ್ಲದೆ, ಬಟ್ಟೆಗೆ ವಿಶೇಷ ಮೆರುಗನ್ನು ನೀಡಿದೆ.  ಮೈಸೂರ್ ಸಇಲ್ಕ್‍ಗೆ ಉಪಯೋಗಿಸಲ್ಪಡುವ ರೇಷ್ಮೆಯು ಪರಿಶುದ್ಧವಾಗಿದ್ದು ಹಾಗೂ ಜರಿಯು ಪರಿಶುದ್ಧ ಚಿನ್ನದ್ದಾಗಿದ್ದು, ಶೇ. 0.65 ಚಿನ್ನ ಮತ್ತು ಶೇ. 65 ರಷ್ಟು ಬೆಳ್ಳಿಯಿಂದ ತಯಾರಿಸಲ್ಪಟ್ಟಿದೆ.  ವಿನ್ಯಾಸಗಳು ಸಾಂಪ್ರದಾಯಿಕ ಮತ್ತು ಆಧುನಿಕತೆಯಿಂದ ಕೂಡಿವೆ.   ಕೆ.ಎಸ್.ಐ.ಸಿ. ನಿಗಮಕ್ಕೆ 2016-17 ನೇ ಸಾಲಿನಲ್ಲಿ ಕರ್ನಾಟಕ ಸಾರ್ವಜನಿಕ ಉದ್ದಿಮೆಗಳಿಗೆ ಕೊಡಮಾಡುವ ‘ಮುಖ್ಯಮಂತ್ರಿಗಳ ವಾರ್ಷಿಕ ರತ್ನ’ ಪ್ರಶಸ್ತಿ ಲಭಿಸಿದೆ.  ಕಸೂತಿ ಮೈಸೂರ್ ಸಿಲ್ಕ್ ಸೀರೆಗಳು ಬಹಳ ಮನಮೋಹಕ ಮತ್ತು ಇವುಗಳ ಸೌಂದರ್ಯ ಕಣ್ಸೆಳೆಯುತ್ತದೆ.  
         ಸಾರ್ವಜನಿಕರು ಈ ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ಪ್ರಕಟಣೆ ತಿಳಿಸಿದೆ.


ಹೀಗಾಗಿ ಲೇಖನಗಳು ಆ. 13 ರಿಂದ ಗಂಗಾವತಿಯಲ್ಲಿ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಹಾಗೂ ಮಾರಾಟ ಮೇಳ

ಎಲ್ಲಾ ಲೇಖನಗಳು ಆಗಿದೆ ಆ. 13 ರಿಂದ ಗಂಗಾವತಿಯಲ್ಲಿ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಆ. 13 ರಿಂದ ಗಂಗಾವತಿಯಲ್ಲಿ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಲಿಂಕ್ ವಿಳಾಸ https://dekalungi.blogspot.com/2018/08/13_9.html

Subscribe to receive free email updates:

0 Response to "ಆ. 13 ರಿಂದ ಗಂಗಾವತಿಯಲ್ಲಿ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಹಾಗೂ ಮಾರಾಟ ಮೇಳ"

ಕಾಮೆಂಟ್‌‌ ಪೋಸ್ಟ್‌ ಮಾಡಿ