ಶೀರ್ಷಿಕೆ : ಸ್ಥಳೀಯ ಸಂಸ್ಥೆ ಚುನಾವಣೆ : ನಾಮಪತ್ರ ಸಲ್ಲಿಸುವವರಿಗೆ ಸೂಚನೆಗಳು
ಲಿಂಕ್ : ಸ್ಥಳೀಯ ಸಂಸ್ಥೆ ಚುನಾವಣೆ : ನಾಮಪತ್ರ ಸಲ್ಲಿಸುವವರಿಗೆ ಸೂಚನೆಗಳು
ಸ್ಥಳೀಯ ಸಂಸ್ಥೆ ಚುನಾವಣೆ : ನಾಮಪತ್ರ ಸಲ್ಲಿಸುವವರಿಗೆ ಸೂಚನೆಗಳು
ಕೊಪ್ಪಳ ಆ. 09 (ಕ.ವಾ): ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಉಮೇದುವಾರಿಕೆ ಸಲ್ಲಿಸಬಯಸುವವರು ತಮ್ಮ ನಾಮಪತ್ರ ಸಲ್ಲಿಸುವ ಸಮಯದಲ್ಲಿ ಅನುಸರಿಸಬೇಕಾದ ಕ್ರಮ ಹಾಗೂ ಸಲ್ಲಿಸಬೇಕಾಗಿರುವ ಅಗತ್ಯ ದಾಖಲೆಗಳ ಕುರಿತು ಚುನಾವಣಾ ಆಯೋಗ ಕೆಲವು ಸೂಚನೆಗಳನ್ನು ನೀಡಿದೆ.
ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗೆ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು. ಅಭ್ಯರ್ಥಿಗಳು ನಾಮ ಪತ್ರದಲ್ಲಿ ತಮ್ಮ ಭಾವಚಿತ್ರವನ್ನು ಲಗತ್ತಿಸಬೇಕು. ಅಲ್ಲದೆ, ಎಲ್ಲ ಸೂಚಕರ ಭಾವಚಿತ್ರವನ್ನೂ ಕೂಡ ಲಗತ್ತಿಸಬೇಕು. ಚರ ಮತ್ತು ಸ್ಥಿರಾಸ್ತಿಗಳ ಕುರಿತು ಪ್ರಮಾಣ ಪತ್ರವನ್ನು ರೂ.20 ಛಾಪಾ ಕಾಗದದ ಮೇಲೆ ಸಲ್ಲಿಸಬೇಕು. ಪ್ರಮಾಣ ಪತ್ರದ ನಮೂನೆಯ ಎಲ್ಲ ಕಾಲಂಗಳನ್ನು ಭರ್ತಿ ಮಾಡಬೇಕು. ನಾಮಪತ್ರ ಪ್ರತಿಯನ್ನು ರೂ. 05 ಶುಲ್ಕ ಪಾವತಿಸಿ ಪಡೆಯಬೇಕು. ಚರ ಮತ್ತು ಸ್ಥಿರಾಸ್ತಿಗಳ ಪ್ರಮಾಣ ಪತ್ರವನ್ನು ನೋಟರಿ ಮುಂದೆ ಪ್ರಮಾಣೀಕರಿಸಬೇಕು. ವಾರ್ಡಿಗೆ ಮೀಸಲಾಗಿರುವ ಮೀಸಲಾತಿಯಂತೆ ಮೀಸಲಾತಿ ಪ್ರಮಾಣ ಪತ್ರವನ್ನು ತಹಶೀಲ್ದಾರರಿಂದ ಚುನಾವಣೆಗಾಗಿ ನೀಡಲ್ಪಟ್ಟಿರುವ ಹಿಂದುಳಿದ “ಎ” ಪ್ರವರ್ಗ, ಹಿಂದುಳಿದ “ಬಿ” ಪ್ರವರ್ಗಗಳ ಪ್ರಮಾಣ ಪತ್ರವನ್ನು ಲಗತ್ತಿಸಿಬೇಕು. ಎಸ್.ಸಿ ಮತ್ತು ಎಸ್.ಟಿ ಮೀಸಲಾತಿ ಕ್ಷೇತ್ರಗಳಿಗೆ ಆಯಾ ಜಾತಿ ಪ್ರಮಾಣ ಪತ್ರ ಸಲ್ಲಿಸಬೇಕು. ಮತ ಪತ್ರದಲ್ಲಿ ಅಭ್ಯರ್ಥಿಯ ಹೆಸರು ಯಾವ ರೀತಿ ಇರಬೇಕೆಂಬುದರ ಕುರಿತು ಅಭ್ಯರ್ಥಿಯ ಹೆಸರು ಮತ್ತು ಮಾದರಿ ಸಹಿಯನ್ನು ನೀಡಬೇಕು. ಇದರ ಜೊತೆಗೆ ತಮ್ಮ ಮೊಬೈಲ್ ಸಂಖ್ಯೆಯನ್ನು ನೀಡಬೇಕು. ನಾಮಪತ್ರದ ಜೊತೆಗೆ ಸಲ್ಲಿಸಬೇಕಾದ ದಾಖಲೆಗಳ ವಿವರ ಇಂತಿದೆ. ನಾಮಪತ್ರ, ಠೇವಣಿ ಸಂದಾಯದ ರಸೀದಿ, ಪ್ರಮಾಣಪತ್ರ/ ಘೋಷಣಾ ಪತ್ರ, ಪ.ಜಾತಿ/ಪ.ಪಂ/ಹಿಂ.ವರ್ಗ ಆಗಿದ್ದಲ್ಲಿ ಜಾತಿ ಪ್ರಮಾಣ ಪತ್ರ, ಭಾವಚಿತ್ರ, ಮತಪತ್ರದಲ್ಲಿ ಮುದ್ರಿಸಲು ಅಭ್ಯರ್ಥಿಯ ಹೆಸರು. ರಾಜಕೀಯ ಪಕ್ಷಗಳ ಅಭ್ಯರ್ಥಿಯಾದಲ್ಲಿ ನಮೂನೆ ಎ & ಬಿ ಅಥವಾ ಸಿ & ಡಿ., ಮತದಾರರ ಪಟ್ಟಿಯ ದೃಢೀಕೃತ ಪ್ರತಿ. ನಾಮಪತ್ರ ಸಲ್ಲಿಸಲು ಬೆಳಿಗ್ಗೆ 11 ರಿಂದ ಮಧ್ಯಾಹ್ನ 03 ಗಂಟೆಯವರೆಗೆ ಮಾತ್ರ ಕಾಲಾವಕಾಶ ನಿಗದಿಪಡಿಸಿದೆ.
ಚುನಾವಣೆಗೆ ಸ್ಪರ್ಧಿಸಬಯಸುವವರು ಸಲ್ಲಿಸುವ ಠೇವಣಿ ಮೊತ್ತದ ವಿವರ ಇಂತಿದೆ. ನಗರಸಭೆಗೆ ಸಾಮಾನ್ಯ ಅಭ್ಯರ್ಥಿಗೆ ರೂ. 2000, ಹಿಂದುಳಿದ ವರ್ಗ/ಎಸ್.ಸಿ/ಎಸ್.ಟಿ/ಮಹಿಳಾ ಅಭ್ಯರ್ಥಿಗಳಿಗೆ ರೂ. 1000 ಗಳಂತೆ ಠೇವಣಿ ನಿಗದಿಪಡಿಸಲಾಗಿದೆ. ಪುರಸಭೆ ಮತ್ತು ಪಟ್ಟಣ ಪಂಚಾಯತಿ ಚುನಾವಣೆಗೆ ಅಭ್ಯರ್ಥಿಗಳ ಠೇವಣಿ ಮೊತ್ತ ಸಾಮಾನ್ಯ ಅಭ್ಯರ್ಥಿಗೆ ರೂ. 1000, ಹಿಂದುಳಿದ ವರ್ಗ/ಎಸ್.ಸಿ/ಎಸ್.ಟಿ/ಮಹಿಳಾ ಅಭ್ಯರ್ಥಿಗಳಿಗೆ ರೂ. 500 ಗಳಂತೆ ಠೇವಣಿ ನಿಗದಿಪಡಿಸಲಾಗಿದೆ. ಒಬ್ಬ ಅಭ್ಯರ್ಥಿ ಒಂದೇ ವಾರ್ಡಿನಲ್ಲಿ ಒಂದಕ್ಕಿಂತ ಹೆಚ್ಚಿನ ನಾಮಪತ್ರ ಸಲ್ಲಿಸಿದಲ್ಲಿ, ಅಂತಹವರು ಒಂದಕ್ಕಿಂತ ಹೆಚ್ಚಿನ ಠೇವಣಿ ಮೊತ್ತ ನೀಡುವ ಅಗತ್ಯವಿರುವುದಿಲ್ಲ. ಠೇವಣಿ ಮೊತ್ತವನ್ನು ನಾಮಪತ್ರ ಸಲ್ಲಿಸುವಾಗ ಚುನಾವಣಾಧಿಕಾರಿಗೆ ನಗದಾಗಿ ಪಾವತಿಸಬೇಕು. ಒಬ್ಬ ಅಭ್ಯರ್ಥಿ ಗರಿಷ್ಠ 04 ನಾಮಪತ್ರ ಸಲ್ಲಿಸಲು ಅವಕಾಶವಿದೆ.
ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರದಲ್ಲಿ ಸಹಿ ಮಾಡಬೇಕಾದ ಸೂಚಕರ ಸಂಖ್ಯೆಯನ್ನು ನಿಗದಿಪಡಿಸಲಾಗಿದ್ದು, ನಗರಸಭೆಗೆ ಮಾನ್ಯತೆ ಪಡೆದ ಪಕ್ಷದ ಅಭ್ಯರ್ಥಿಯಾಗಿದ್ದಲ್ಲಿ 01 ಸೂಚಕರು, ಪಕ್ಷೇತರ ಅಭ್ಯರ್ಥಿಯಾಗಿದ್ದಲ್ಲಿ ಸೂಚಕರ ಸಂಖ್ಯೆ-05. ಪುರಸಭೆಗೆ ಮಾನ್ಯತೆ ಪಡೆದ ಪಕ್ಷದ ಅಭ್ಯರ್ಥಿಯಾಗಿದ್ದಲ್ಲಿ 01 ಸೂಚಕರು, ಪಕ್ಷೇತರ ಅಭ್ಯರ್ಥಿಯಾಗಿದ್ದಲ್ಲಿ ಸೂಚಕರ ಸಂಖ್ಯೆ-04. ಪಟ್ಟಣ ಪಂಚಾಯತಿ ಚುನಾವಣೆಗೆ ಮಾನ್ಯತೆ ಪಡೆದ ಪಕ್ಷದ ಅಭ್ಯರ್ಥಿಯಾಗಿದ್ದಲ್ಲಿ 01 ಸೂಚಕರು, ಪಕ್ಷೇತರ ಅಭ್ಯರ್ಥಿಯಾಗಿದ್ದಲ್ಲಿ ಸೂಚಕರ ಸಂಖ್ಯೆ-03 ಕಡ್ಡಾಯಗೊಳಿಸಲಾಗಿದೆ. ಸೂಚಕರು ಕಡ್ಡಾಯವಾಗಿ ಅದೇ ವಾರ್ಡಿನ ಮತದಾರನಾಗಿರಬೇಕು ಮತ್ತು ಅಭ್ಯರ್ಥಿಯು ನಗರ ವ್ಯಾಪ್ತಿಯ ಯಾವುದೇ ವಾರ್ಡಿನ ಮತದಾರನಾಗಿರಬೇಕು. ನಾಮ ಪತ್ರದಲ್ಲಿ ನಮೂದಿಸಿದ ಅಭ್ಯರ್ಥಿಯ ಮತ್ತು ಅವರ ಸೂಚಕರ ಹೆಸರುಗಳು ಮತ್ತು ಅವರುಗಳ ಕ್ರಮ ಸಂಖ್ಯೆಗಳು ಮುನ್ಸಿಪಾಲಿಟಿ ಮತದಾರರ ಪಟ್ಟಿಯಲ್ಲಿ ನಮೂದಿಸಿದಂತೆಯೇ ಇರಬೇಕು. ಒಬ್ಬ ಅಭ್ಯರ್ಥಿಯು ನಾಲ್ಕು ನಾಮ ಪತ್ರಗಳನ್ನು ಮಾತ್ರ ಸಲ್ಲಿಸತಕ್ಕದ್ದು. ಠೇವಣಿ ಮೊತ್ತವನ್ನು ಒಂದು ಸಲ ಮಾತ್ರ ತುಂಬಬೇಕು.
ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗೆ ಸ್ಪರ್ಧಿಸಬಯಸುವವರು ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್ ಅವರು ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಸ್ಥಳೀಯ ಸಂಸ್ಥೆ ಚುನಾವಣೆ : ನಾಮಪತ್ರ ಸಲ್ಲಿಸುವವರಿಗೆ ಸೂಚನೆಗಳು
ಎಲ್ಲಾ ಲೇಖನಗಳು ಆಗಿದೆ ಸ್ಥಳೀಯ ಸಂಸ್ಥೆ ಚುನಾವಣೆ : ನಾಮಪತ್ರ ಸಲ್ಲಿಸುವವರಿಗೆ ಸೂಚನೆಗಳು ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ : ನಾಮಪತ್ರ ಸಲ್ಲಿಸುವವರಿಗೆ ಸೂಚನೆಗಳು ಲಿಂಕ್ ವಿಳಾಸ https://dekalungi.blogspot.com/2018/08/blog-post_72.html
0 Response to "ಸ್ಥಳೀಯ ಸಂಸ್ಥೆ ಚುನಾವಣೆ : ನಾಮಪತ್ರ ಸಲ್ಲಿಸುವವರಿಗೆ ಸೂಚನೆಗಳು"
ಕಾಮೆಂಟ್ ಪೋಸ್ಟ್ ಮಾಡಿ