ಶೀರ್ಷಿಕೆ : NI 20-07-2018
ಲಿಂಕ್ : NI 20-07-2018
NI 20-07-2018
ವಿವಿಧ ಯೋಜನೆಗಳಡಿ: ಕ್ರೀಡಾಪಟು-ಕ್ರೀಡಾ ಸಂಸ್ಥೆಗಳಿಂದ ಅರ್ಜಿ ಆಹ್ವಾನ
ಕಲಬುರಗಿ,ಜು.20.(ಕ.ವಾ.)-ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಈ ಕೆಳಕಂಡ ಯೋಜನೆಗಳಡಿ ಅರ್ಹ ವಿದ್ಯಾರ್ಥಿ/ಕ್ರೀಡಾಪಟು ಹಾಗೂ ಕ್ರೀಡಾ ಸಂಘಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
2017ರ ಜನವರಿ 1 ರಿಂದ ಡಿಸೆಂಬರ್ 31ರವರೆಗೆ ರಾಜ್ಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ಕಲಬುರಗಿ ಜಿಲ್ಲೆಯ ಪ್ರತಿಭಾವಂತ ಮಾಧ್ಯಮಿಕ/ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಅಥವಾ ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ 10,000 ರೂ.ಗಳ ಪ್ರೋತ್ಸಾಹಿತ ಕ್ರೀಡಾ ವಿದ್ಯಾರ್ಥಿ ವೇತನ ಹಾಗೂ ಕಲಬುರಗಿ ಜಿಲ್ಲೆಯ ಅರ್ಹ ನೊಂದಾಯಿತ ಕ್ರೀಡಾ ಸಂಘಗಳು ಮತ್ತು ನಿಗದಿತ ಕ್ರೀಡಾ ಕ್ಲಬ್‍ಗಳಿಂದ “ಕ್ರೀಡಾ ಮಿತ್ರ” ಯೋಜನೆ ಅಡಿ ಕ್ರೀಡಾ ಸಾಮಾಗ್ರಿ ನೀಡಲಾಗುತ್ತಿದೆ.
ಅದೇ ರೀತಿ “ನಮ್ಮೂರ ಶಾಲೆಗೆ ನಮ್ಮ ಯುವಜನರು” ಯೋಜನೆ ಅಡಿಯಲ್ಲಿ ಕಲಬುರಗಿ ಜಿಲ್ಲೆಯ ಪ್ರತಿ ತಾಲೂಕಿನ ಒಂದು ಸರ್ಕಾರಿ ಶಾಲೆಗೆ 2017-18ನೇ ಸಾಲಿನಲ್ಲಿ ಹೆಚ್ಚಿನ ಕ್ರೀಡಾ ಸಾಧನೆ ಮಾಡಿದ್ದಕ್ಕೆ 1ಲಕ್ಷ ರೂ.ಗಳ ಧನ ಸಹಾಯ ( ಇದರಲ್ಲಿ 90,000 ರೂ.ಗಳ ಶಾಲೆಗೆ ಕ್ರೀಡಾ ಸಾಮಾಗ್ರಿ ಖರೀದಿಗೆ ಮತ್ತು ರೂ.10,000/-ದೈಹಿಕ ಶಿಕ್ಷಣ ಶಿಕ್ಷಕರಿಗೆ ಗೌರವಧನ) ನೀಡಲು ಅರ್ಹ ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿದೆ.
ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿಗಳನ್ನು 2018ರ ಜುಲೈ 28 ರೊಳಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕಲಬುರಗಿ ಕಚೇರಿಯಲ್ಲಿ ಸಲ್ಲಿಸಬೇಕು. ನಿಗದಿತ ಅರ್ಜಿ ನಮೂನೆ ಮತ್ತು ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಸದರಿ ಕಚೇರಿಯನ್ನು ಅಥವಾ ಕಚೇರಿ ದೂರವಾಣಿ ಸಂಖ್ಯೆ 08472-268637ನ್ನು, ಹಾಕಿ ತರಬೇತುದಾರ ಸಂಜಯ ಬಾಣದ ಅವರ ಮೊಬೈಲ್ ಸಂಖ್ಯೆ 9844029235ನ್ನು ಸಂಪರ್ಕಿಸಲು ಕೋರಿದೆ. ನಿಗದಿತ ಅವಧಿ ನಂತರ ಬಂದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸುವುದಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ತವ್ಯಕ್ಕೆ ಹಾಜರಾಗಲು ಸೂಚನೆ
ಕಲಬುರಗಿ,ಜು.20.(ಕ.ವಾ.)-ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಬದನಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಸೋಮಲು ಎಸ್. ರಾಠೋಡ ಅವರು 2012ರ ಸೆಪ್ಟೆಂಬರ್ 7 ರಿಂದ ಈವರೆಗೆ ಶಾಲಾ ಕರ್ತವ್ಯಕ್ಕೆ ಅನಧೀಕೃತವಾಗಿ ಗೈರು ಹಾಜರಾಗಿರುತ್ತಾರೆ ಎಂದು ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ (ಆಡಳಿತ) ಉಪನಿರ್ದೇಶಕರು ತಿಳಿಸಿದ್ದಾರೆ.
ಈಗಾಗಲೇ ಸದರಿ ಸಿಬ್ಬಂದಿಗೆ ಶಾಲಾ ಕರ್ತವ್ಯಕ್ಕೆ ಹಾಜರಾಗುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಅಂತಿಮ ನೋಟೀಸು ಜಾರಿ ಮಾಡಲಾಗಿದೆ. ಆದರೂ ಸಹ ಈ ಸಿಬ್ಬಂದಿಯು ಈವರೆಗೆ ಕರ್ತವ್ಯಕ್ಕೆ ಹಾಜರಾಗಿರುವುದಿಲ್ಲ. ಸದರಿ ನೌಕರರು ಈ ಪತ್ರಿಕಾ ಪ್ರಕಟಗೊಂಡ 15 ದಿನದೊಳಗಾಗಿ ಶಾಲಾ ಕರ್ತವ್ಯಕ್ಕೆ ಹಾಜರಾಗುವಂತೆ ಅಂತಿಮ ಅವಕಾಶ ನೀಡಲಾಗಿದೆ. ಒಂದು ವೇಳೆ 15 ದಿನದೊಳಗಾಗಿ ನೌಕರರು ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ ಕೆ.ಸಿ.ಎಸ್.ಆರ್. ನಿಯಮಾವಳಿ ಪ್ರಕಾರ ಸೇವೆಯಿಂದ ವಜಾಗೊಳಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಿಂಟರ್ ಕಾಟ್ರೇಜ್ ಸರಬರಾಜಿಗಾಗಿ ದರಪಟ್ಟಿ ಆಹ್ವಾನ
ಕಲಬುರಗಿ,ಜು.20.(ಕ.ವಾ.)-ಕಲಬುರಗಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಕಚೇರಿ ಉಪಯೋಗಕ್ಕಾಗಿ ಸ್ಯಾಮ್‍ಸ್ಯಾಂಗ್ ಪ್ರಿಂಟರಿನ ಕಾಟ್ರೇಜ್ ಸರಬರಾಜು ಮಾಡಲು ಸ್ಥಳೀಯ ಅಧಿಕೃತ/ನೋಂದಾಯಿತ ಸರಬರಾಜುದಾರರು ಹಾಗೂ ವಿತರಕರಿಂದ ದರಪಟ್ಟಿಗಳನ್ನು ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿಯ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ತಿಳಿಸಿದ್ದಾರೆ.
ಸ್ಯಾಮ್‍ಸ್ಯಾಂಗ್ ಪ್ರಿಂಟರ್ ಮಾಡೆಲ್ ನಂ. ಎಂ.ಎಲ್.ಟಿ.-ಡಿ 115ಎಲ್ ಹಾಗೂ ಮಾಡೆಲ್ ನಂ. ಎಂ.ಎಲ್.ಟಿ.-ಡಿ 203ಎಸ್ ಮಾದರಿ ಪ್ರಿಂಟರಿನ ತಲಾ 12 ಕಾಟ್ರೇಜ್ ಸರಬರಾಜು ಮಾಡಲು ಆಸಕ್ತಿಯುಳ್ಳವರು ಸರಬರಾಜುದಾರರು ಬಂದ ಮಾಡಿದ ದರಪಟ್ಟಿಗಳ ಕೊಟೇಶನ್‍ನ್ನು 2018ರ ಜುಲೈ 25ರೊಳಗಾಗಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ಕಲಬುರಗಿ ಕಚೇರಿಯಲ್ಲಿ ಸಲ್ಲಿಸಬೇಕು. ಷರತ್ತು, ನಿಬಂಧನೆ ಹಾಗೂ ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿಯ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ಕಚೇರಿಯನ್ನು ಸಂಪರ್ಕಿಸಲು ಕೋರಿದೆ.
ಸಹಾಯಾನುದಾನ ಹಿಂತೆಗೆತ ಪ್ರಕರಣ: ಸರ್ಕಾರದಲ್ಲಿ ವಿಚಾರಣೆ ಬಾಕಿ
ಕಲಬುರಗಿ,ಜು.20.(ಕ.ವಾ.)- ಶಾಲಾ ಮಾನ್ಯತೆಯ ಅಗತ್ಯ ದಾಖಲೆಗಳಿಲ್ಲದ ಹಾಗೂ ಎನ್.ಸಿ.ಟಿ.ಇ. ಮಾರ್ಗಸೂಚಿ ಪಾಲಿಸದಿರುವ ಕಾರಣ ಕಲಬುರಗಿ ಉತ್ತರ ವಲಯ ವ್ಯಾಪ್ತಿಯ ಶ್ರೀ ಗುರುದೇವ ಶಿಕ್ಷಣ ಸಂಸ್ಥೆ(ರಿ)ಯಿಂದ ನಡೆಸುತ್ತಿರುವ ಬಸಮ್ಮಾ ಸ್ಮಾರಕ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಆಳಂದ ರಿಂಗ್ ರಸ್ತೆ ಕಲಬುರಗಿ ಶಾಲೆಗೆ ನೀಡಲಾಗುತ್ತಿದ್ದ ಸಹಾಯಾನುದಾನವನ್ನು ಹಿಂಪಡೆದು ಸದರಿ ಶಾಲೆಯಲ್ಲಿ ಮಕ್ಕಳ ಪ್ರವೇಶ ಮಾಡದಂತೆ ಈ ಹಿಂದೆ ಸೂಚನೆ ನೀಡಲಾಗಿತ್ತು.
ಇದೀಗ ಸದರಿ ಶಾಲೆಯ ಆಡಳಿತ ಮಂಡಳಿಯು ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಮೇಲ್ಮನವಿ ಸಲ್ಲಿಸಿದ್ದು, ಪ್ರಕರಣವು ಸರ್ಕಾರದ ಹಂತದಲ್ಲಿ ವಿಚಾರಣೆಗೆ ಬಾಕಿ ಇರುತ್ತದೆ. ಈ ಹಿನ್ನೆಲೆಯಲ್ಲಿ ಸದರಿ ಶಾಲೆಯಲ್ಲಿ ಹೊಸದಾಗಿ ಪ್ರವೇಶ ಪಡೆಯುವ ಅಥವಾ ನೀಡುವ ವಿಷಯವು ಸರ್ಕಾರದ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ. ಸಾರ್ವಜನಿಕರು, ಪಾಲಕ-ಪೋಷಕರು ಇದನ್ನು ಗಮನಿಸಬೇಕು ಎಂದು ಕಲಬುರಗಿ ಉತ್ತರ ವಲಯದ ಕ್ಷೇತ್ರ ಶೀಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೀದಿ ನಾಟಕ ಕಲಾ ತಂಡಗಳಿಂದ ಅರ್ಜಿ ಆಹ್ವಾನ
ಕಲಬುರಗಿ,ಜು.20.(ಕ.ವಾ.)-ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ 2018-19ನೇ ಸಾಲಿನಲ್ಲಿ ಗ್ರಾಮ ಸಂಪರ್ಕ ಕಾರ್ಯಕ್ರಮದಡಿ ಬೀದಿ ನಾಟಕ ಪ್ರದರ್ಶನ ನೀಡಲು ಜಿಲ್ಲೆಯ ನೊಂದಾಯಿತ ಬೀದಿ ನಾಟಕ ಕಲಾ ತಂಡಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಸಿದ್ದೇಶ್ವರಪ್ಪ ಜಿ.ಬಿ. ತಿಳಿಸಿದ್ದಾರೆ.
ಕಲಾ ತಂಡಗಳು ಕಲಬುರಗಿ ಮಿನಿ ವಿಧಾನಸೌಧದ ಆವರಣದಲ್ಲಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕರ ಕಚೆರಿಯಿಂದ ಇದೇ ಜುಲೈ 26ರೊಳಗಾಗಿ ಅರ್ಜಿಗಳನ್ನು ಪಡೆದು ಬರ್ತಿ ಮಾಡಿದ ಅರ್ಜಿಯನ್ನು ಜುಲೈ 28 ರೊಳಗಾಗಿ ಇದೇ ಕಚೇರಿಗೆ ಸಲ್ಲಿಸಬೇಕು. ಬೀದಿ ನಾಟಕ ಕಲಾ ತಂಡದಲ್ಲಿ ಕಡ್ಡಾಯವಾಗಿ 8 ಜನ ಕಲಾವಿದರಿದ್ದು, ಈ ಪೈಕಿ ಇಬ್ಬರು ಮಹಿಳಾ ಕಲಾವಿದರು ಇರುವುದು ಕಡ್ಡಾಯ. ತಂಡದ ಕಲಾವಿದರ ಪೈಕಿ ಒಬ್ಬರು ಪರಿಶಿಷ್ಠ ಜಾತಿ ಅಥವಾ ಪರಿಶಿಷ್ಠ ವರ್ಗಕ್ಕೆ ಸೇರಿದ ಕಲಾವಿದರಾಗಿರಬೇಕು. ಈ ಕುರಿತು ಹೆಚ್ಚಿನ ವಿವರಕ್ಕಾಗಿ ದೂ.ಸಂ.08472-223133 ಸಂಪರ್ಕಿಸಲು ಕೋರಿದೆ.
ಏರು ಮಡಿ ಪದ್ದತಿಯಲ್ಲಿ ಈರುಳ್ಳಿ ಬೆಳೆಯಲು ರೈತರಿಗೆ ಸಲಹೆ
ಕಲಬುರಗಿ,ಜು.20.(ಕ.ವಾ.)- ಜಿಲ್ಲೆಯ ಉಳ್ಳಾಗಡ್ಡಿ(ಈರುಳ್ಳಿ) ಬೆಳೆಯುವ ರೈತರು ಇಳುವರಿ ಹೆಚ್ಚು ನೀಡುವ ಏರುಮಡಿ ಪದ್ದತಿ ಮತ್ತು ಹನಿ ನೀರಾವರಿ ಪದ್ದತಿಯನ್ನು ಅಳವಡಿಸಿಕೊಳ್ಳುವಂತೆ ಕಲಬುರಗಿ ತೋಟಗಾರಿಕೆ ಉಪನಿರ್ದೇಶಕರು ರೈತರಿಗೆ ಸಲಹೆ ನೀಡಿದ್ದಾರೆ.
ಈ ಪದ್ಧತಿ ಅಳವಡಿಸಿಕೊಂಡಲ್ಲಿ ಉಳ್ಳಾಗಡ್ಡಿ ಬೆಳೆ ಇಳುವರಿ ಹೆಚ್ಚಾಗುವುದಲ್ಲದೆ ಗಡ್ಡೆಯ ಗಾತ್ರ ಸಮನಾಗಿರುತ್ತದೆ. ಸದಾಕಾಲ ಮಣ್ಣಿನಲ್ಲಿ ತೇವಾಂಶವಿರುವುದರಿಂದ ನೀರು ಮತ್ತು ಗೊಬ್ಬರಗಳ ಸದ್ಬಳಕೆ ಆಗುತ್ತದೆ. ಈ ಪದ್ಧಿತಿಯಿಂದ ಶೇ.40%ರಷ್ಟು ನೀರನ್ನು ಸಹ ಉಳಿತಾಯ ಮಾಡಬಹುದಾಗಿದೆ.
ಬೆಳೆಯು ಪದ್ಧತಿ: 15 ಸೆಂ.ಮೀ.ಎತ್ತರ 1.2ಮೀ ಅಗಲವಿರುವ ಏರು ಮಡಿ ನಿರ್ಮಿಸಬೇಕು. ಮಡಿಯಿಂದ ಮಡಿಗೆ 45 ಸೆಂ.ಮೀ.ಅಂತರವಿರಬೇಕು. ಇಂತಹ ಮಡಿಗಳಲ್ಲಿ ಎರಡು ಹನಿ ನೀರಾವರಿ ಪೈಪ್‍ಗಳನ್ನು (ಡ್ರಿಪ್ ಲೈನ್ಸ್) 60 ಸೆಂ.ಮೀ. ಅಂತರದಲ್ಲಿ ಹಾಕಬೇಕು. ಅಗಲವಾದ ಏರು ಮಡಿ ಇಲ್ಲವೇ ಬ್ರಾಡ್ ಬೆಡ್ ಫರೋ (ಬಿ.ಬಿ.ಎಫ್) ಪದ್ದತಿಯಲ್ಲಿ ಹನಿ ನೀರಾವರಿ ಅಳವಡಿಸಿ ಸಸಿಯಿಂದ ಸಸಿಗೆ 15 ಸೆಂ.ಮೀ. ಹಾಗೂ ಸಾಲಿನಿಂದ ಸಾಲಿಗೆ 10 ಸೆಂ.ಮೀ. ಅಂತರದಲ್ಲಿ ನಾಟಿ ಮಾಡಬೇಕು. ವಾರಕೊಮ್ಮೆ 4 ರಿಂದ 5 ಗಂಟೆ ಹನಿ ನೀರಾವರಿ ಪದ್ದತಿಯಿಂದ ನೀರುಣಿಸಬೇಕು. ಪ್ರತಿಗಂಟೆಗೆ 4 ಲೀ. ನೀರು ಕೊಡಬೇಕು.
ಇದಲ್ಲದೆ ಹನಿ ನೀರಾವರಿ ಪದ್ದತಿಯೊಂದಿಗೆ ರಸಾವರಿ ಪದ್ದತಿ ಅಳವಡಿಕೆಯಿಂದ ಪೊಷಕಾಂಶಗಳು ನೇರವಾಗಿ ಬೇರುಗಳಿಗೆ ದೊರೆಯುವಂತೆ ಮಾಡಿ ಮಣ್ಣಿನಲ್ಲಿ ಬಸಿದು ಹೊಗುವುದನ್ನು ತಡೆಯಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಕುರಿತು ಹೆಚ್ಚಿನ ವಿವರಕ್ಕಾಗಿ ಹಾರ್ಟಿಕ್ಲಿನಿಕ್ ವಿಷಯ ತಜ್ಞ ಮಂಜುನಾಥ ಪಾಟೀಲ-7259984026 ಅವರನ್ನು ಸಂಪರ್ಕಿಸುವುದು.

ಹೀಗಾಗಿ ಲೇಖನಗಳು NI 20-07-2018
ಎಲ್ಲಾ ಲೇಖನಗಳು ಆಗಿದೆ NI 20-07-2018 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ NI 20-07-2018 ಲಿಂಕ್ ವಿಳಾಸ https://dekalungi.blogspot.com/2018/07/ni-20-07-2018.html
0 Response to "NI 20-07-2018"
ಕಾಮೆಂಟ್ ಪೋಸ್ಟ್ ಮಾಡಿ