News Date: 21-7-2018

News Date: 21-7-2018 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು News Date: 21-7-2018, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : News Date: 21-7-2018
ಲಿಂಕ್ : News Date: 21-7-2018

ಓದಿ


News Date: 21-7-2018

ಜುಲೈ 25ರಂದು ಆರೋಗ್ಯ ಸಂಸ್ಥೆಗಳಿಗೆ ಕಾಯಕಲ್ಪ ಪ್ರಶಸ್ತಿ ಪ್ರದಾನ
************************************************************
ಕಲಬುರಗಿ,ಜು.21.(ಕ.ವಾ.)-ರಾಷ್ಟ್ರೀಯ ಆರೋಗ್ಯ ಅಭಿಯಾನದ ಕಾಯಕಲ್ಪ ಕಾರ್ಯಕ್ರಮದಡಿಯಲ್ಲಿ 2017-18ನೇ ಸಾಲಿನ ಕಾಯಕಲ್ಪ ಪ್ರಶಸ್ತಿಗೆ ಬಾಜನರಾದ ಆರೋಗ್ಯ ಸಂಸ್ಥೆಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು 2018ರ ಜುಲೈ 25ರಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಡಿಕ್ಯೂಎಯು ಮುಖ್ಯಸ್ಥರು ಹಾಗೂ ಜಿಲ್ಲಾ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಯಕಲ್ಪ ಕಾರ್ಯಕ್ರಮದಡಿ 2017-18ನೇ ಸಾಲಿಗೆ ಜಿಲ್ಲೆಯ ಒಟ್ಟು 13 ಸರ್ಕಾರಿ ಆರೋಗ್ಯ ಸಂಸ್ಥೆಗಳಿಗೆ (4-ಸಿಹೆಚ್‍ಸಿ, 7-ಪಿಹೆಚ್‍ಸಿ ಹಾಗೂ 2-ಯುಪಿಹೆಚ್‍ಸಿ) ಗಳಿಗೆ ರಾಜ್ಯಮಟ್ಟದ ಕಾಯಕಲ್ಪ ಪ್ರಶಸ್ತಿ ಲಭಿಸಿರುತ್ತದೆ. ಡಿಸ್ಟ್ರಿಕ್ಟ್ ಲೇವಲ್ ಆವಾರ್ಡ್ ನಾಮಿನೇಶನ್ ಕಮೀಟಿಯ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯಕ್ರಮದಲ್ಲಿ ನಡೆಯಲಿದೆ.
ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಂಬಂಧಪಟ್ಟ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು, ತಲಾ ಓರ್ವ ಶುಶ್ರೂಷಕರು ಮತ್ತು ಗ್ರೂಪ್ ಡಿ ನೌಕರರು ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕು ಅಧಿಕಾರಿಗಳು ಮತ್ತು ಎಲ್ಲ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು ಕಡ್ಡಾಯವಾಗಿ ಸಮಾರಂಭದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಗಳಡಿ ಸಹಾಯಧನ: ಅರ್ಜಿ ಆಹ್ವಾನ
***********************************************************************
ಕಲಬುರಗಿ,ಜು.21.(ಕ.ವಾ.)-ಕಲಬುರಗಿ ತಾಲೂಕಿನ ತೋಟಗಾರಿಕೆ ಇಲಾಖೆ ವತಿಯಿಂದ ವಿವಿಧ ಯೋಜನೆಗಳಾದ ರಾಷ್ಟ್ರೀಯ ತೋಟಗಾರಿಕೆ ಮಿಷನ್ (ಎನ್.ಎಚ್.ಎಂ.), ಕೃಷಿ ಭಾಗ್ಯ ಯೋಜನೆಯಡಿಯಲ್ಲಿ ನೆರಳು ಪರದೆ ಮತ್ತು ಹಸಿರು ಮನೆ, ರಾಷ್ಟ್ರೀಯ ಸೂಕ್ಷ್ಮ ಹನಿ ನೀರಾವರಿ (ಪಿ.ಎಂ.ಕೆ.ಎಸ್.ವೈ), ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಆರ್.ಕೆ.ವಿ.ವೈ), ತೋಟಗಾರಿಕೆ ಯಾಂತ್ರೀಕರಣ, ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ (ಸಿ.ಎಚ್.ಡಿ.), ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಬಾಳೆ ನಿಖರ ಬೇಸಾಯ ಮತ್ತು ಸರ್ವತೋಮುಖ ಅಭಿವೃದ್ಧಿ ಯೋಜನೆ, ಮದುವನ ಮತ್ತು ಜೇನು ಸಾಕಾಣಿಕೆ ಯೋಜನೆ (ಬೀ ಕೀಪಿಂಗ್), ತೋಟಗಾರಿಕೆ ಬೆಳೆಗಳ ಕೀಟ ಮತ್ತು ರೋಗಗಳ ಸಮಗ್ರ ನಿಯಂತ್ರಣ ಯೋಜನೆಗಳನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ (ಜಿ.ಪಂ.) ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಯೋಜನೆಗಳಡಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲು ಸರ್ಕಾರದಿಂದ ನಿಯಮಗಳನ್ನು ರೂಪಿಸಿದ್ದು, ಫಲಾನುಭವಿಗಳಿಂದ ಆಯಾ ಯೋಜನೆಗಳಡಿ ಕಾರ್ಯಕ್ರಮವಾರು ಮತ್ತು ಹೋಬಳಿವಾರು ಗುರಿಯಂತೆ ರೈತರಿಂದ ಅರ್ಜಿ ಆಹ್ವಾನಿಸಿ, ಲಾಟರಿ ಮುಖಾಂತರ ಅರ್ಹ ಫಲಾನುಭವಿಗಳನ್ನು ನಿಗದಿತ ಅವಧಿಯೊಳಗಾಗಿ ಆಯ್ಕೆ ಮಾಡಲಾಗುವುದು. ರೈತರು ಸಂಬಂಧಪಟ್ಟ ಹೋಬಳಿ ಅಥವಾ ತಾಲೂಕು ತೋಟಗಾರಿಕೆ ಕಚೇರಿಗೆ ನೀಡಿ ಸಂಪೂರ್ಣ ವಿವರ ಪಡೆದುಕೊಳ್ಳಬೇಕು.
ರೈತರು ಅರ್ಜಿಯೊಂದಿಗೆ ಪಹಣಿ, ಹೊಲ್ಡಿಂಗ್, ಜಾತಿ ಪ್ರಮಾಣಪತ್ರ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮಾತ್ರ) ಚುನಾವಣಾ ಗುರುತಿನ ಚೀಟಿ, ಆಧಾರ ಕಾರ್ಡ್, ಬ್ಯಾಂಕ್ ಪಾಸ್‍ಬುಕ್ ಜಿರಾಕ್ಸ್ ಪ್ರತಿ, ನೀರು ಬಳಕೆ/ಪತ್ರ ದಾಖಲಾತಿಗಳೊಂದಿಗೆ 2018ರ ಆಗಸ್ಟ್ 4 ರೊಳಗಾಗಿ ಹೋಬಳಿ ಅಥವಾ ತಾಲೂಕು ತೋಟಗಾರಿಕೆ ಕಚೇರಿಯಲ್ಲಿ ಅರ್ಜಿಯನ್ನು ಸಲ್ಲಿಸಬೇಕು. ಆಗಸ್ಟ್ 6 ರಿಂದ 8 ರೊಳಗೆ ಅರ್ಜಿಗಳನ್ನು ಪರಿಶೀಲನೆ ಮಾಡಲಾಗುತ್ತದೆ. ಪರಿಶೀಲನೆ ಸಮಯದಲ್ಲಿ ಅರ್ಜಿಗಳಲ್ಲಿ ಏನಾದರೂ ಬದಲಾವಣೆ ಇದ್ದಲ್ಲಿ ರೈತರು ಕಲಬುರಗಿ ಐವಾನ್ ಶಾಹಿ ರಸ್ತೆಯಲ್ಲಿರುವ ಹಿರಿಯ ಸಹಾಯಕ ತೋಟಗಾರಿಕೆ ಕಚೇರಿಗೆ ಭೇಟಿ ನೀಡಿ ಸರಿಪಡಿಸಿಕೊಳ್ಳಬೇಕು.
ಕಲಬುರಗಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಶಾಸಕರು, ತಾಲೂಕು ಪಂಚಾಯಿತಿ ಅಧ್ಯಕ್ಷರು ಮತ್ತು ತಾಲೂಕಿನ ಚುನಾಯಿತ ಪ್ರತಿನಿಧಿಗಳು ಹಾಗೂ ಅರ್ಜಿದಾರರ ಸಮ್ಮುಖದಲ್ಲಿ ಇಲಾಖಾ ಯೋಜನೆಗಳವಾರು ಕಲಬುರಗಿ ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಆಗಸ್ಟ್ 9 ರಂದು ಬೆಳಿಗ್ಗೆ 11 ಗಂಟೆಗೆ ಲಾಟರಿ ಆಯ್ಕೆ ಪ್ರಕ್ರಿಯೆ ಮೂಲಕ ಆಯ್ಕೆ ಮಾಡಲಾಗುವುದು.
ರೈತರು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳ ಹೆಸರು ಹಾಗೂ ಮೊಬೈಲ್ ಸಂಖ್ಯೆ ವಿವರ ಇಂತಿದೆ. ಕಲಬುರಗಿ ಹೋಬಳಿ ಗುರುಲಿಂಗಪ್ಪ ಬಗಲಿ ಮೊಬೈಲ್ ಸಂಖ್ಯೆ 9611646548, ಅವರಾದ(ಬಿ) ಹೋಬಳಿಯ ಬಸವರಾಜ ಗೊಬ್ಬೂರಕರ್ ಮೊಬೈಲ್ ಸಂಖ್ಯೆ 9008101303, ಮಹಾಗಾಂವ ಹೋಬಳಿಯ ಪ್ರಸನ್ನ ಜಿ. ಸಜ್ಜನ್ ಮೊಬೈಲ್ ಸಂಖ್ಯೆ 9900970770, ಪಟ್ಟಣ ಹೋಬಳಿಯ ಅವಿನಾಶ ರ್ಯಾಗಿ ಮೊಬೈಲ್ ಸಂಖ್ಯೆ 7760393107, ಫರಹತಾಬಾದ ಹೋಬಳಿಯ ಶಿವಕುಮಾರ ಮೊಬೈಲ್ ಸಂಖ್ಯೆ 8277944278, ಕಮಲಾಪುರ ಹೋಬಳಿಯ ಸುಲಭಾ ಅವರ ಮೊಬೈಲ್ ಸಂಖ್ಯೆ 8277944276ಗಳಿಗೆ ಸಂಪರ್ಕಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲೋಕಾಯುಕ್ತರಿಂದ ಕುಂದುಕೊರತೆಗಳ ಅಹವಾಲು ಸ್ವೀಕಾರ
****************************************************
ಕಲಬುರಗಿ,ಜು.21.(ಕ.ವಾ.)-ಕಲಬುರಗಿ ವಿಭಾಗದ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಜಿಲ್ಲೆಯ ಆಯಾ ತಾಲೂಕುಗಳಿಗೆ 2018ರ ಜುಲೈ 24, 25, 26 ಹಾಗೂ 27ರಂದು ಭೇಟಿ ನೀಡಿ ಆಯಾ ದಿನಗಳಂದು ಬೆಳಗಿನ 10 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಸಾರ್ವಜನಿಕರಿಂದ ಕುಂದುಕೊರತೆಗಳನ್ನು ಸ್ವೀಕರಿಸಲಿದ್ದಾರೆ ಮತ್ತು ಅವರ ಅಹವಾಲುಗಳನ್ನು ಆಲಿಸಲಿದ್ದಾರೆ ಎಂದು ಕಲಬುರಗಿ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ ಲೋಕಾಯುಕ್ತ ಪೊಲೀಸ್ ನಿರೀಕ್ಷಕ ರಾಘವೇಂದ್ರ ಅವರು ಜುಲೈ 24ರಂದು ಅಫಜಲಪುರ ಲೋಕೋಪಯೋಗಿ ಪ್ರವಾಸಿ ಮಂದಿರದಲ್ಲಿ, ಜುಲೈ 25ರಂದು ಆಳಂದ ಲೋಕೋಪಯೋಗಿ ಪ್ರವಾಸಿ ಮಂದಿರದಲ್ಲಿ, ಜುಲೈ 26ರಂದು ಚಿಂಚೋಳಿ ಲೋಕೋಪಯೋಗಿ ಪ್ರವಾಸಿ ಮಂದಿರದಲ್ಲಿ, ಜುಲೈ 27ರಂದು ಸೇಡಂ ಲೋಕೋಪಯೋಗಿ ಪ್ರವಾಸಿ ಮಂದಿರದಲ್ಲಿ ಅಹವಾಲು ಸ್ವೀಕರಿಸುವರು. ಅದೇ ರೀತಿ ಕಲಬುರಗಿ ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಶಿವಾನಂದ ಗಾಣಿಗೇರ ಅವರು ಜುಲೈ 24ರಂದು ಚಿತ್ತಾಪುರ ಲೋಕೋಪಯೋಗಿ ಪ್ರವಾಸಿ ಮಂದಿರದಲ್ಲಿ, ಜುಲೈ 25ರಂದು ಜೇವರ್ಗಿ ಲೋಕೋಪಯೋಗಿ ಪ್ರವಾಸಿ ಮಂದಿರದಲ್ಲಿ ಹಾಗೂ ಜುಲೈ 26ರಂದು ಶಹಾಬಾದ ಲೋಕೋಪಯೋಗಿ ಪ್ರವಾಸಿ ಮಂದಿರದಲ್ಲಿ ಅಹವಾಲು ಸ್ವೀಕರಿಸುವರು.
ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕರು ಪೊಲೀಸ್ ಅಧೀಕ್ಷರು, ಕರ್ನಾಟಕ ಲೋಕಾಯುಕ್ತ ಕಚೇರಿ, ಐವಾನ್-ಇ-ಶಾಹಿ ಕಂಪೌಂಡ್ ಕಲಬುರಗಿ-585102, ದೂರವಾಣಿ ಸಂಖ್ಯೆ 08472-263645/263745ಗಳನ್ನು ಸಂಪರ್ಕಿಸಬೇಕು. ಸಾರ್ವಜನಿಕರು ತಮ್ಮ ಕುಂದುಕೊರತೆ ಅಹವಾಲುಗಳನ್ನು ಸಲ್ಲಿಸಿ ಪರಿಹರಿಸಿಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಿಂಟರ್ ಕಾಟ್ರೇಜ್ ಸರಬರಾಜಿಗಾಗಿ ದರಪಟ್ಟಿ ಆಹ್ವಾನ
************************************************
ಕಲಬುರಗಿ,ಜು.21.(ಕ.ವಾ.)-ಕಲಬುರಗಿ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ಕಚೇರಿ ಉಪಯೋಗಕ್ಕಾಗಿ ಸ್ಯಾಮ್‍ಸ್ಯಾಂಗ್ ಪ್ರಿಂಟರಿನ ಕಾಟ್ರೇಜ್ ಸರಬರಾಜು ಮಾಡಲು ಸ್ಥಳೀಯ ಅಧಿಕೃತ/ನೋಂದಾಯಿತ ಸರಬರಾಜುದಾರರು ಹಾಗೂ ವಿತರಕರಿಂದ ದರಪಟ್ಟಿಗಳನ್ನು ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿಯ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ತಿಳಿಸಿದ್ದಾರೆ.
ಸ್ಯಾಮ್‍ಸ್ಯಾಂಗ್ ಪ್ರಿಂಟರ್ ಮಾಡೆಲ್ ನಂ. ಎಂ.ಎಲ್.ಟಿ.-ಡಿ 115ಎಲ್ ಮಾದರಿ ಪ್ರಿಂಟರಿನ 8 ಕಾಟ್ರೇಜ್‍ಗಳು ಹಾಗೂ ಮಾಡೆಲ್ ನಂ. ಎಂ.ಎಲ್.ಟಿ.-ಡಿ 203ಎಸ್ ಮಾದರಿ ಪ್ರಿಂಟರಿನ 12 ಕಾಟ್ರೇಜ್ ಸರಬರಾಜು ಮಾಡಲು ಆಸಕ್ತಿಯುಳ್ಳವರು ಸರಬರಾಜುದಾರರು ಬಂದ ಮಾಡಿದ ದರಪಟ್ಟಿಗಳ ಕೊಟೇಶನ್‍ನ್ನು 2018ರ ಜುಲೈ 25ರೊಳಗಾಗಿ ಕಲಬುರಗಿ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ. ಕಚೇರಿಯಲ್ಲಿ ಸಲ್ಲಿಸಬೇಕು. ಷರತ್ತು, ನಿಬಂಧನೆ ಹಾಗೂ ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ. ಕಚೇರಿಯನ್ನು ಸಂಪರ್ಕಿಸಲು ಕೋರಿದೆ.
ಜುಲೈ 23ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
*********************************************
ಕಲಬುರಗಿ,ಜು.21.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗದಿಂದ 11ಕೆ.ವಿ. ಸಿನಿಮಾ, ಗಾಜಿಪುರ ಹಾಗೂ ಬ್ರಹ್ಮಪುರ ಫೀಡರುಗಳ ವ್ಯಾಪ್ತಿಯಲ್ಲಿ 33/11 ಕೆ.ವಿ. ಜಿಆಯ್ ಸಬ್ ಸ್ಟೇಶನ್ ಮತ್ತು ಸರ್ವಿಸ್ ಸ್ಟೇಶನ್-44 ಸ್ಟ್ರಿಂಗಿಂಗ್ ಕಾರ್ಯ ಕೈಗೆತ್ತಿಕೊಂಡಿರುವ ಪ್ರಯುಕ್ತ ಜುಲೈ 23ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಕೆಳಕಂಡ ಫೀಡರಿನ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.
11ಕೆ.ವಿ. ಸಿನಿಮಾ ಫೀಡರ್: ಸುಪರ ಮಾರ್ಕೇಟ್, ಶಹಾ ಬಜಾರ್ ಜಿ.ಡಿ.ಎ., ಕಟಗರಪುರ, ಪ್ರಕಾಶ ಟಾಕೀಸ್, ಲೋಹಾರಗಲ್ಲಿ, ಐಯ್ಯರವಾಡಿ, ಸಿಟಿ ಬಸ್ ನಿಲ್ದಾಣ, ಬಂಬೂ ಬeóÁರ್, ಮಹಾಲಕ್ಷ್ಮೀ ಲೇಔಟ್, ಕಿರಾಣ ಬeóÁರ್, ಮಾರವಾಡಿ ಗಲ್ಲಿ, ಚೌಕ್ ಪೊಲೀಸ್ ಸ್ಟೇಶನ್, ಫೋರ್ಟ್ ರಸ್ತೆ, ಬಾಂಡಾ ಬಜಾರ್, ಸರಸ್ವತಿ ಗೋದಾಮು, ಪುಟಾಣಿ ಗಲ್ಲಿ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.
11ಕೆ.ವಿ. ಗಾಜಿಪುರ ಫೀಡರ್: ಜಿ.ಡಿ.ಎ. ಗೋಕುಲ ನಗರ, ಜಿಲ್ಲಾಧಿಕಾರಿಗಳ ಕಚೇರಿ, ಮಾಲಿ ಪಾಟೀಲ್ ಟಿ.ಸಿ, ಬಸವಣ್ಣಾ ಟೆಂಪಲ್, ಮಿಲ್‍ನ ಚೌಕ್, ಶಂಕರಲಿಂಗ್ ಟೆಂಪಲ್, ಮಟನ ಮಾರ್ಕೇಟ್, ಕಾವೇರಿ ನಗರ, ತಹಶೀಲ್ದಾರ ಕಚೇರಿ, ಚನ್ನಮಲ್ಲೇಶ್ವರ ನಗರ, ಮಜಗಿ ಲೇಔಟ್, ಸುಪರ ಮಾರ್ಕೇಟ್ ರೇಮಾಂಡ್ ಟಿ.ಸಿ. ಮತ್ತು ಸುತ್ತಮುತ್ತಲಿನ ಪ್ರದೇಶಗಳು.
11ಕೆ.ವಿ. ಬ್ರಹ್ಮಪುರ ಫೀಡರ್: ಶಹಬಜಾರ, ಶೆಟ್ಟಿ ಕಾಂಪ್ಲೆಕ್ಸ್, ಗದ್ಲೆಗಾಂವ, ಶಹಬಜಾರ ನಾಕಾ, ಶಹ ಬಜಾರ ಜಿ.ಡಿ.ಎ., ಕೈಲಾಶ ನಗರ, ಮಾಣೀಕೇಶ್ವರಿ ಕಾಲೋನಿ, ಲಾಲಗೇರಿ, ಗಂಗಾನಗರ, ಅಗ್ನಿಶಾಮಕ ದಳ, ಜನತಾ ಲೇಔಟ್, ಕಾಳೆ ಲೇಔಟ್, ಮಹಾಲಕ್ಷ್ಮೀ ಲೇಔಟ್, ಚೌಡೇಶ್ವರಿ ಕಾಲೋನಿ, ಎನ್.ಆರ್. ಕಾಲೋನಿ, ಬಾಳೆ ಲೇಔಟ್, ಅಗ್ರೀಕಲ್ಚರ ಲೇಔಟ್, ಜಿ.ಡಿ.ಎ ವಕ್ಕಲಗೇರಾ, ಜಿ.ಡಿ.ಎ. ಶಹಬಜಾರ, ಹರಿಜನ ವಾಡಾ ಮತ್ತು ಸುತ್ತಮುತ್ತಲಿನ ಪ್ರದೇಶಗಳು.


ಹೀಗಾಗಿ ಲೇಖನಗಳು News Date: 21-7-2018

ಎಲ್ಲಾ ಲೇಖನಗಳು ಆಗಿದೆ News Date: 21-7-2018 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ News Date: 21-7-2018 ಲಿಂಕ್ ವಿಳಾಸ https://dekalungi.blogspot.com/2018/07/news-date-21-7-2018.html

Subscribe to receive free email updates:

0 Response to "News Date: 21-7-2018"

ಕಾಮೆಂಟ್‌‌ ಪೋಸ್ಟ್‌ ಮಾಡಿ