News Item dt.30-07-2018

News Item dt.30-07-2018 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು News Item dt.30-07-2018, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : News Item dt.30-07-2018
ಲಿಂಕ್ : News Item dt.30-07-2018

ಓದಿ


News Item dt.30-07-2018

                                                    ಡೆಂಗ್ಯೂ ನಿಯಂತ್ರಣಕ್ಕೆ ನೀರು ನಿಲ್ಲದಂತೆ ನೋಡಿಕೊಳ್ಳಿ

ಕಲಬುರಗಿ,ಜು.30.(ಕ.ವಾ.)-ಮಾರಕ ಸಾಂಕ್ರಾಮಿಕ ರೋಗವಾದ ಡೆಂಗ್ಯೂ ಜ್ವರ ನಿಯಂತ್ರಿಸಬೇಕಾದರೆ ಮನೆಯಲ್ಲಿನ ನೀರಿನ ತೊಟ್ಟಿ, ಹಳೆ ಟೈರು ಹಾಗೂ ನೀರು ನಿಲ್ಲುವ ತಾಣಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಕಲಬುರಗಿ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಜ್ಞ ಹಾಗೂ ಅಧೀಕ್ಷಕ ಡಾ.ಬಿ.ಎನ್.ಜೋಷಿ ಹೇಳಿದರು.
ಅವರು ಸೋಮವಾರ “ಡೆಂಗ್ಯೂ ವಿರೋಧಿ ಮಾಸಾಚರಣೆ” ಅಂಗವಾಗಿ ಜಿಲ್ಲಾ ಆಸ್ಪತ್ರೆಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ವರೆಗೆ ಹಮ್ಮಿಕೊಳ್ಳಲಾದ ಜನ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು. ನೀರಿನ ತಾಣಗಳನ್ನು ಪ್ರತಿ ವಾರಕ್ಕೊಮ್ಮೆ ಸ್ವಚ್ಛಗೊಳಿಸಿ ಪುನ: ನೀರು ತುಂಬಿಸಿಕೊಳ್ಳಬೇಕು ಎಂದ ಅವರು ಡೆಂಗ್ಯೂ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಹಲವಾರು ನಿಯಂತ್ರಣ ಕ್ರಮಗಳನ್ನು ಕೈಗೊಂಡಿದ್ದು, ಇದರಲ್ಲಿ ಸಾರ್ವಜನಕರ ಸಹಕಾರವು ಅತ್ಯಗತ್ಯವಾಗಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಾಧವರಾವ ಕೆ.ಪಾಟೀಲ ಮಾತನಾಡಿ ಜಿಲ್ಲೆಯಲ್ಲಿ ಲಾರ್ವಾ ಸಮೀಕ್ಷೆ ಅಂಗವಾಗಿ ಸಾಂಕ್ರಾಮಿಕ ರೋಗಗಳು ಹರಡದಂತೆ ನಿರಂತರ ಹತೋಟಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
  ಜಿಲ್ಲಾ ವಿಬಿಡಿ ಸಮಲೋಚಕ ಕರ್ಣಿಕ ಕೋರೆ ಮಾತನಾಡಿ ಡೆಂಗ್ಯೂ, ಚಿಕನಗುನ್ಯಾ, ಮಲೇರಿಯಾ, ಆನೆಕಾಲು ರೋಗಗಳ ಬಗ್ಗೆ ಮಕ್ಕಳಿಗೆ ಶಾಲಾ ಹಂತದಲ್ಲಿ ಆರೋಗ್ಯ ಶಿಕ್ಷಣ ನೀಡಲಾಗುತ್ತಿದೆ ಎಂದರು. ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಬಸವರಾಜ ಗುಳಗಿ, ಜಿಲ್ಲಾ ಕೀಟಶಾಸ್ತ್ರಜ್ಞ ಚಾಮರಾಜ ಸೇರಿದಂತೆ ನರ್ಸಿಂಗ್ ವಿದ್ಯಾರ್ಥಿಗಳು ಇನ್ನೀತರರು ಜಾಥಾದಲ್ಲಿ ಭಾಗವಹಿಸಿದ್ದರು.

                             

                                  ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ದೌರ್ಜನ್ಯವೆಸಗಿದ ಆರೋಪಿಗೆ 8 ವರ್ಷ ಕಠಿಣ ಶಿಕ್ಷೆ

ಕಲಬುರಗಿ,ಜು.30.(ಕ.ವಾ.)-ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಲೈಂಗಿಕ ಹಲ್ಲೆ ನಡೆಸುವ ಮೂಲಕ ದೌರ್ಜನ್ಯವೆಸಗಿದ ಆರೋಪಿ ಬಸಯ್ಯ @ ಬಸಲಿಂಗಯ್ಯ ತಂದೆ ರಾಚಯ್ಯ ಹಿರೇಮಠಗೆ ಗರಿಷ್ಠ 8 ವರ್ಷ ಕಠಿಣ ಶಿಕ್ಷೆ ಮತ್ತು 2.50 ಲಕ್ಷ ರೂ. ದಂಡ ವಿಧಿಸಿ 2ನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಗೋಪಾಲಪ್ಪ ಎಸ್. ಸೋಮವಾರ ತೀರ್ಪು ನೀಡಿರುತ್ತಾರೆ.
ಆರೋಪಿಯೂ 2015ರ ಜುಲೈ 7 ರಂದು ಕಲಬುರಗಿ ನಗರದ ಬನಶಂಕರ ಲೇಔಟ್ ಪ್ರದೇಶದಲ್ಲಿ ಅಪ್ರಾಪ್ತ ಬಾಲಕಿ ಬೆಳಿಗ್ಗೆ 9.30 ಗಂಟೆಗೆ ಕಾಲೇಜಿಗೆ ಹೋಗುವಾಗ ಅವಳನ್ನು ಬಲವಂತವಾಗಿ ಅಪಹರಿಸಿಕೊಂಡು ನೆರೆಯ ಗೋವಾ ರಾಜ್ಯಕ್ಕೆ ಕರೆದುಕೊಂಡು ಹೋಗಿ ಅವಳ ಮೇಲೆ ಲೈಂಗಿಕ ಹಲ್ಲೆ ನಡೆಸಿ ದೌರ್ಜನ್ಯ ನಡೆಸಿದ್ದು, ಇತನ ವಿರುದ್ಧ ಬ್ರಹ್ಮಪುರ ಪೊಲೀಸ್ ಠಾಣೆಯ ಅಂದಿನ ಸಿ.ಪಿ.ಐ ಅವರು ದೋಷಾರೋಹಣ ಪಟ್ಟಿಯನ್ನು ನ್ಯಾಯಾಲಯ್ಕಕೆ ಸಲ್ಲಿಸಿದರು.
ಪ್ರಕರಣದ ವಾದ ವಿವಾದಗಳನ್ನು ಆಲಿಸಿದ ನ್ಯಾಯಾಧೀಶರು ಆರೋಪಿ ಬಸಯ್ಯ @ ಬಸಲಿಂಗಯ್ಯ ತಂದೆ ರಾಚಯ್ಯ ಹಿರೇಮಠ ಈತನು ಐಪಿಸಿ ಕಲಂ 366 ಮತ್ತು ಪೋಕ್ಸೋ ಕಾಯ್ದೆ ಕಲಂ 12ರಲ್ಲಿ ಅಪರಾಧವೆಸಗಿದ್ದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಐಪಿಸಿ ಕಲಂ 366 ಅಪರಾಧಕ್ಕೆ 8 ವರ್ಷ ಕಠಿಣ ಶಿಕ್ಷೆ ಮತ್ತು ಪೋಕ್ಸೋ ಕಾಯ್ದೆ ಕಲಂ 12ರ ಅಪರಾಧಕ್ಕೆ 2 ವರ್ಷ ಕಠಿಣ ಶಿಕ್ಷೆ ಮತು ಎರಡು ಕಲಂಗಳಡಿ ಅಪರಾಧಕ್ಕೆ 2.50 ಲಕ್ಷ ರೂ. ದಂಡ ವಿಧಿಸಿ ಆದೇಶ ನೀಡಿರುತ್ತಾರೆ. ಇನ್ನು ನೊಂದ ಬಾಲಕಿಗೆ ಸರ್ಕಾರದಿಂದ 2 ಲಕ್ಷ ರೂ.ಗಳ ಪರಿಹಾರ ಮೊತ್ತ ನೀಡುವಂತೆ ತಮ್ಮ ತೀರ್ಪಿನಲ್ಲಿ ಆದೇಶ ನೀಡಿರುತ್ತಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ(ಪೋಕ್ಸೊ) ಎಲ್.ವಿ.ಚಟ್ಣಾಳಕರ ವಾದ ಮಂಡಿಸಿದ್ದರು.



ಹೀಗಾಗಿ ಲೇಖನಗಳು News Item dt.30-07-2018

ಎಲ್ಲಾ ಲೇಖನಗಳು ಆಗಿದೆ News Item dt.30-07-2018 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ News Item dt.30-07-2018 ಲಿಂಕ್ ವಿಳಾಸ https://dekalungi.blogspot.com/2018/07/news-item-dt30-07-2018.html

Subscribe to receive free email updates:

0 Response to "News Item dt.30-07-2018"

ಕಾಮೆಂಟ್‌‌ ಪೋಸ್ಟ್‌ ಮಾಡಿ