News and photo Date: 28-07-2018

News and photo Date: 28-07-2018 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು News and photo Date: 28-07-2018, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : News and photo Date: 28-07-2018
ಲಿಂಕ್ : News and photo Date: 28-07-2018

ಓದಿ


News and photo Date: 28-07-2018

ವಕ್ಫ್ ಆಸ್ತಿ ಸಂರಕ್ಷಣೆಗೆ ಟಾಸ್ಕ್ ಫೋರ್ಸ್ ಸಮಿತಿ ರಚನೆಗೆ ಚಿಂತನೆ
**********************************************************
-ನಸೀರ ಅಹ್ಮದ್
**************
ಕಲಬುರಗಿ,ಜು.28.(ಕ.ವಾ.)-ರಾಜ್ಯದಲ್ಲಿನ ವಕ್ಫ್ ಆಸ್ತಿ ಸಂರಕ್ಷಣೆಗೆ ಪೊಲೀಸ್ ವರೀಷ್ಠಾಧಿಕಾರಿ ರ್ಯಾಂಕಿನ ಅಧಿಕಾರಿಯ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ಸಮಿತಿ ರಚನೆಗೆ ಚಿಂತನೆ ನಡೆದಿದೆ ಎಂದು ಕರ್ನಾಟಕ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ನಸೀರ ಅಹ್ಮದ್ ಹೇಳಿದರು.
ಅವರು ಶನಿವಾರ ಕಲಬುರಗಿ ನಗರದ ಜಿಲ್ಲಾ ಪಂಚಾಯತ್ ಹಳೇ ಸಭಾಂಗಣದಲ್ಲಿ ಅಲ್ಪಸಂಖ್ಯಾತ ಸಮುದಾಯದ ಸಾರ್ವಜನಿಕರು ಮತ್ತು ಸ್ವಯಂ ಸೇವಾ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ನಡೆದ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವಕ್ಫ್ ಆಸ್ತಿ ಬಗ್ಗೆ ಸಾಕಷ್ಟು ದೂರು ಎಲ್ಲೆಡೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಇನ್ನು ಪ್ರಸ್ತುತ ರಾಜ್ಯದಲ್ಲಿ ವಕ್ಫ ಆಸ್ತಿಗೆ ಸಂರಕ್ಷಣೆಗಿರುವ ಕಾಯ್ದೆ ಪರಿಣಾಮಕಾರಿಯಾಗಿದ್ದು, ಇದನ್ನು ಸಮಪರ್ಕವಾಗಿ ಅನುಷ್ಠಾನಗೊಳಿಸಬೇಕು ಹಾಗೂ ವಕ್ಪ್ ಆಸ್ತಿಯನ್ನು ಕಡ್ಡಾಯವಾಗಿ ಸಂಸ್ಥೆಗಳು ವಕ್ಪ್ ಬೋರ್ಡಿನಲ್ಲಿ ನೋಂದಾಯಿತಿಸಬೇಕು ಎಂದರು.
ಜಿಲ್ಲೆಯ ಅಲ್ಪಸಂಖ್ಯಾತ ಸಮುದಾಯದವರಿಗೆ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ಮಂಜೂರಾತಿಗಾಗಿ ಅರ್ಜಿಗಳು ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಬಳಿ ಬಾಕಿಯಿವೆ ಎಂಬ ಮಾಹಿತಿ ಅರಿತ ಆಯೋಗದ ಅಧ್ಯಕ್ಷರು ಸಭೆಯಿಂದಲೆ ನೇರವಾಗಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ದೂರವಾಣಿಯಲ್ಲಿ ಮಾತನಾಡಿ ಕೂಡಲೆ ಕಲಬುರಗಿ ಜಿಲ್ಲೆಯ ಎಲ್ಲಾ ಅರ್ಜಿಗಳನ್ನು ಮಂಜೂರು ಮಾಡುವಂತೆ ನಿರ್ದೇಶನ ನೀಡದರು. ನಿಗಮದಿಂದ ಕಳೆದ ಸಾಲಿನಿಂದ ರೈತ ಸಮುದಾಯದವರಿಗೆ 50 ಸಾವಿರ ರೂ. ಆರ್ಥಿಕ ಸಹಾಯಧನ ನೀಡುವ ಹಾಗೂ ಹೈನುಗಾರಿಕೆಗಾಗಿ 20 ಸಾವಿರ ರೂ. ಆರ್ಥಿಕ ಸಹಾಯಧನ ನೀಡುವ ಯೋಜನೆಗಳನ್ನು ಹಾಕಿಕೊಂಡಿದ್ದು, ಇದೂವರೆಗೆ ಫಲಾನುಭವಿಗಳ ಖಾತೆಗೆ ಹಣ ಜಮಾವಾಗಿಲ್ಲ ಈ ಬಗ್ಗೆ ಮೂರು ದಿನದೊಳಗಾಗಿ ಆಯೋಗಕ್ಕೆ ವರದಿ ಸಲ್ಲಿಸಿ ಎಂದು ನಿಗಮದ ಕಲಬುರಗಿ ಜಿಲ್ಲಾ ವ್ಯವಸ್ಥಾಪಕ ವೆಂಕಟೇಶ ಮಾನೆ ಅವರಿಗೆ ಅಧ್ಯಕ್ಷರು ಸೂಚಿಸಿದರು.
ಮುಸ್ಲಿಂ, ಸಿಖ್, ಪಾರ್ಸಿ, ಜೈನ್ ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಗಳ ಶ್ರೇಯೋಭಿವೃದ್ಧಿಗಾಗಿಯೆ ಆಯೋಗ ಕಾರ್ಯನಿರ್ವಹಿಸುತ್ತಿದೆ. ಆಯೋಗದಲ್ಲಿ ಎಲ್ಪ ಅಲ್ಪಸಂಖ್ಯಾತ ಸಮುದಾಯವರಿಗೆ ಪ್ರಾತಿನಿಧ್ಯ ನೀಡಲಾಗಿದ್ದು, ಯಾರು ಅನ್ಯಥಾ ಭಾವಿಸಬಾರದು. ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರ, ಮೆರಿಟ್, ವಿದ್ಯಾಸಿರಿ ಯೋಜನೆಗಳಡಿ ಸುಮಾರು 15 ಲಕ್ಷ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಹಾಗೂ ಇನ್ನೀತರ ಆರ್ಥಿಕ ಸೌಲಭ್ಯ ಪಡೆಯುತ್ತಿದ್ದಾರೆ. ಅಲ್ಪಸಂಖ್ಯಾತ ಮಹಿಳೆಯರನ್ನು ಆರ್ಥಿಕ ಸಬಲೆಯರನ್ನಾಗಿ ಮಾಡಬೇಕಾಗಿದ್ದು, ಈ ನಿಟ್ಟಿನಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಕಾರ್ಯಪ್ರವೃತ್ತರಾಗಬೇಕು. ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಡಿ.ಸಿ.ಸಿ ಬ್ಯಾಂಕ್‍ನಿಂದ ಬಡ್ಡಿರಹಿತ 50 ಸಾವಿರ ರೂ. ಸಾಲ ಪಡೆದು ಮಹಿಳಾ ಸ್ವಯಂ ಸೇವಾ ಸಂಸ್ಥೆಗಳು ಮಹಿಳೆಯರಿಗೆ ಸ್ವಯಂ ಉದ್ಯೋಗದ ಬಗ್ಗೆ ತರಬೇತಿ ನೀಡುತ್ತಿದ್ದು, ಇದೇ ಮಾದರಿಯಲ್ಲಿ ಕಲಬುರಗಿಯಲ್ಲಿಯೂ ಅನುಷ್ಟಾನಕ್ಕೆ ತರಲು ಸ್ವಯಂ ಸೇವಾ ಸಂಸ್ಥೆಗಳು ಸ್ಥಳೀಯ ಶಾಸಕರ ನೆರವು ಪಡೆಯಬೇಕು ಎಂದರು.
ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಮಹೆಬೂಬ ಸಾಬ್ ಮಾತನಾಡಿ ಜಿಲ್ಲೆಯಲ್ಲಿ 1999 ರಿಂದ ಶಾದಿ ಮಹಲ್ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದಯ, ಬಹುತೇಕ ಶಾದಿ ಮಹಲ್ ನಿರ್ಮಾಣದ ಹಂತದಲ್ಲಿವೆ. ಬಿದಾಯಿ ಯೋಜನೆಯಡಿ 2000 ಅರ್ಜಿಗಳು ಬಾಕಿ ಇದ್ದು, ಇದಕ್ಕಾಗಿ 10 ಕೋಟಿ ರೂ. ಅನುದಾನದ ಅವಶ್ಯಕೆಯಿದ್ದು, ಅನುದಾನ ದೊರೆತ ಕೂಡಲೆ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಿ ಸಂಬಂಧಿಸಿದವರ ಖಾತೆಗೆ ಹಣ ಜಮಾ ಮಾಡಲಾಗುವುದು. ಜಿಲ್ಲೆಯಲ್ಲಿ 13 ಮೋರಾರ್ಜಿ ದೇಸಾಯಿ ವಸತಿ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಕಲಬುರಗಿ ನಗರಕ್ಕೆ ಹೊಂದಿಕೊಂಡಿರುವ ಹಾಗರಗಾದಲ್ಲಿ ಉದ್ದೇಶಿತ ಮೋರಾರ್ಜಿ ದೇಸಾಯಿ ವಸತಿ ಶಾಲೆಗೆ ನಿವೇಶನ ಮಂಜೂರಾತಿಯ ವ್ಯಾಜ್ಯ ಬಾಕಿಯಿರುವ ಹಿನ್ನೆಲೆಯಲ್ಲಿ ಬೇರೆ ಸ್ಥಳದಲ್ಲಿ ನಿವೇಶನ ಗುರುತಿಸಲಾಗಿದೆ ಎಂದರು.
ಸಭೆಯಲ್ಲಿ ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ ಕನೀಜ್ ಫಾತಿಮಾ, ಕರ್ನಾಟಕ ಆಲ್ಪಸಂಖ್ಯಾತ ಆಯೋಗದ ಕಾರ್ಯದರ್ಶಿ ಅನೀಸ್ ಸಿರಾಜ್, ಸದಸ್ಯರಾದ ಡಾ.ಆರ್.ಅಬ್ದುಲ್ ಹಮೀದ್, ರಫೀ ಬಂಡಾರಿ, ಮಹಮೂದ ಪಟೇಲ್, ಆದಿಲ್ ಸುಲೇಮಾನ ಸೇಠ್, ಕೆ.ಮಹೇಂದ್ರ ಜೈನ್, ಬಲಜೀತ್ ಸಿಂಗ್, ಡಾ.ಮೆಟಿಲ್ಡಾ ಡಿಸೋಜಾ ಸೇರಿದಂತೆ ಅಲ್ಪಸಂಖ್ಯಾತ ಸಮುದಾಯದ ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳ ಕಾರ್ಯಕತರು ಭಾಗವಹಿಸಿದ್ದರು.
ಜುಲೈ 30ರಂದು ಡೆಂಗ್ಯೂ ವಿರೋಧಿ ಮಾಸಾಚರಣೆ ಜಾಥಾಕ್ಕೆ ಚಾಲನೆ
************************************************************
ಕಲಬುರಗಿ,ಜು.28.(ಕ.ವಾ.)-ಕಲಬುರಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಇದೇ ಜುಲೈ 30ರಂದು ಬೆಳಿಗ್ಗೆ 9 ಗಂಟೆಗೆ ಕಲಬುರಗಿ ಜಿಲ್ಲಾ ಆಸ್ಪತ್ರೆಯಲ್ಲಿ ಏರ್ಪಡಿಸಲಾದ ಡೆಂಗ್ಯೂ ವಿರೋಧಿ ಮಾಸಾಚರಣೆ ಜಾಥಾ-2018ಕ್ಕೆ ಕಲಬುರಗಿ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಜ್ಞ ಡಾ. ಬಾಲಚಂದ್ರ ಜೋಶಿ ಅವರು ಚಾಲನೆ ನೀಡುವರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಂ.ಕೆ. ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ಶಿವಶರಣಪ್ಪ ಹಾಗೂ ಕಲಬುರಗಿ ತಾಲೂಕು ಆರೋಗ್ಯ ಅಧಿಕಾರಿ ಡಾ. ರಾಜಕುಮಾರ ಕೆ. ಅತಿಥಿಗಳಾಗಿ ಪಾಲ್ಗೊಳ್ಳುವರು.
ಪಿ.ಪಿ.ಪಿ. ಯೋಜನೆಯಡಿ ಐ.ಟಿ.ಐ. ಪ್ರವೇಶ
ಕಲಬುರಗಿ,ಜು.28.(ಕ.ವಾ.)-ಕಲಬುರಗಿಯ (ಮಹಿಳಾ) ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2018-19ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಪಿ.ಪಿ.ಪಿ. ಯೋಜನೆಯಡಿ ಕೆಳಕಂಡ ವೃತ್ತಿಗಳಲ್ಲಿ ಪ್ರವೇಶ ಪ್ರಾರಂಭವಾಗಿದ್ದು, ಎಸ್.ಎಸ್.ಎಲ್.ಸಿ. ಪಾಸಾದ ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಡೊನೇಶನ್ ಮೂಲಕ ಪ್ರವೇಶ ಪಡೆಯಬಹುದಾಗಿದೆ ಎಂದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎರಡು ವರ್ಷದ ಎಲೆಕ್ಟ್ರಿಶಿಯನ್-21, ಫಿಟ್ಟರ್-21, ಎಲೆಕ್ಟ್ರಾನಿಕ್ ಮೆಕ್ಯಾನಿಕ್-12 ಸ್ಥಾನಗಳು ಹಾಗೂ ಒಂದು ವರ್ಷದ ಕಂಪ್ಯೂಟರ್ ಹಾರ್ಡ್‍ವೇರ್ ಆಂಡ್ ನೆಟವರ್ಕ್ ಮೆಂಟೆನನ್ಸ್-52, ಕಂಪ್ಯೂಟರ್ ಆಪರೇಟರ್ ಆಂಡ್ ಪ್ರೋಗ್ರಾಮಿಂಗ್ ಅಸಿಸ್ಟಂಟ್-12 ಸ್ಥಾನಗಳು ಲಭ್ಯವಿದ್ದು, ಪ್ರವೇಶ ಬಯಸುವ ವಿದ್ಯಾರ್ಥಿಗಳು ಸಂಬಂಧಿಸಿದ ದಾಖಲಾತಿಗಳೊಂದಿಗೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ (ಮಹಿಳಾ) ಸರ್ಕಾರಿ ತರಬೇತಿ ಸಂಸ್ಥೆ ಪ್ರಾಚಾರ್ಯರನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-236753, ಕಿರಿಯ ತರಬೇತಿ ಅಧಿಕಾರಿ ಶರಣಬಸಪ್ಪ ಕುಂಬಾರ ಅವರ ಮೊಬೈಲ್ ಸಂಖ್ಯೆ 9972910066ನ್ನು ಸಂಪರ್ಕಿಸಲು ಕೋರಲಾಗಿದೆ.
ಸರಳ ವಿವಾಹ ಕಾರ್ಯಕ್ರಮದಡಿ ಪ್ರೋತ್ಸಾಹಧನ: ಅರ್ಜಿ ಆಹ್ವಾನ
********************************************************
ಕಲಬುರಗಿ,ಜು.28.(ಕ.ವಾ.)-ಸಮಾಜ ಕಲ್ಯಾಣ ಇಲಾಖೆಯಿಂದ ಸಾಮೂಹಿಕ ವಿವಾಹ ಕಾರ್ಯಕ್ರಮದಡಿ ಮದುವೆಯಾದ ಕಲಬುರಗಿ ಜಿಲ್ಲೆಯ ಪರಿಶಿಷ್ಟ ಜಾತಿಯ ದಂಪತಿಗಳು ಹಾಗೂ ಮದುವೆ ನಡೆಸಿರುವ ಸಂಘ ಸಂಸ್ಥೆಗಳಿಂದ ಪ್ರೋತ್ಸಾಹಧನಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಈ ಯೋಜನೆಯ ಸೌಲಭ್ಯ ಪಡೆಯಲು ವಧು-ವರನ ದೃಢೀಕೃತ ಜಾತಿ ಮತ್ತು ಆದಾಯ ಪ್ರಮಾಣಪತ್ರ, ಜಿಲ್ಲಾ ನೋಂದಣಿ ಕಚೇರಿಯಿಂದ ಪಡೆದ ವಿವಾಹವಾಗಿರುವ ಕುರಿತು ನೋಂದಣಿ ಪತ್ರ, ತಹಶೀಲ್ದಾರರರಿಂದ ಪಡೆದ ವಾಸಸ್ಥಳ ಪ್ರಮಾಣಪತ್ರ, ವಧು-ವರನ ದೃಢೀಕೃತ ಆಧಾರ ಚೀಟಿಯ ಜಿರಾಕ್ಸ್ ಪ್ರತಿ, ವಧು-ವರನ ಜಂಟಿ ಭಾವಚಿತ್ರ, ಜಂಟಿ ಖಾತೆಯ ಬ್ಯಾಂಕ್ ಪಾಸ್‍ಬುಕ್ ಜಿರಾಕ್ಸ್ ಪ್ರತಿ ಹಾಗೂ ಸಂಘ ಸಂಸ್ಥೆಯವರಿಂದ ಪಡೆದ ದೃಢೀಕರಣ ಪತ್ರದ ದಾಖಲಾತಿಗಳನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯನ್ನು ಅಥವಾ ಸಂಬಂಧಪಟ್ಟ ಆಯಾ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.
ವಕ್ಫ್ ಜಮೀನು ಪ್ರಕರಣ: ಆಗಸ್ಟ್ 14ರಂದು ವಿಚಾರಣೆ
***********************************************
ಕಲಬುರಗಿ,ಜು.28.(ಕ.ವಾ.)-ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದ ಛಿಲ್ಲಾ ಚಿತ್ತಾ ಶಾ ವಲಿ ಖಾನ್‍ಬೌಲಿ ಪೇಠ ವಕ್ಫ್ ಸಂಸ್ಥೆಗೆ ಸೇರಿದ ಸರ್ವೆ ನಂ. 35/2 ವಿಸ್ತೀರ್ಣ 03 ಎಕರೆ 15 ಗುಂಟೆ ಆಸ್ತಿ ಖರೀದಿಗೆ ಸಂಬಂಧಿಸಿದಂತೆ ಶ್ರೀ ಶ್ರೀನಿವಾಸ ಕೋನಖೇಡ ತಂದೆ ದಿ. ಶಂಕರರಾವ, ವಿಕಾಸ ನಿಕಾಸ ನಂ-1-1-118(ಹೊಸ ಸಂ.1-1-108)ಹೆಚ್.ಸ್ಪೋಕ್ಸ್ ನಂ.2 ಸಪ್ನಾ ಬೇಕರಿ ಹತ್ತಿರ, ಬಸವೇಶ್ವರ ಕಾಲೋನಿ ಕಲಬುರಗಿ ಇವರ ವಿರುದ್ಧ ಸಮನ್ಸ್ ಜಾರಿ ಮಾಡಲಾಗಿದೆ ಎಂದು ಕಲಬುರಗಿ ಜಿಲ್ಲಾ ವಕ್ಫ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸದರಿ ದೂರಿನ ಕುರಿತು 2018ರ ಆಗಸ್ಟ್ 14ರಂದು ಮಧ್ಯಾಹ್ನ 3 ಗಂಟೆಗೆ ವಿಚಾರಣಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಕರ್ನಾಟಕ ವಕ್ಫ್ ಬೋರ್ಡ್ ಇಲ್ಲಿ ನಡೆಯುವ ವಿಚಾರಣೆಗೆ ಖುದಾಗಿ ಅಥವಾ ವಕೀಲರ ಮೂಲಕ ಕಡ್ಡಾಯವಾಗಿ ಹಾಜರಾಗಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕನ್ನಡ ಪುಸ್ತಕ ಮಾರಾಟ ಮೇಳ: ಮಳಿಗೆ ನಿರ್ಮಿಸಲು ಇ-ಟೆಂಡರ್ ಆಹ್ವಾನ
****************************************************************
ಕಲಬುರಗಿ,ಜು.28.(ಕ.ವಾ.)-ಕನ್ನಡ ಪುಸ್ತಕ ಪ್ರಾಧಿಕಾರದಿಂದ ಬೆಂಗಳೂರು, ಕಲಬುರಗಿ, ಬೀದರ, ಮಂಗಳೂರು, ಬೆಳಗಾವಿ ಮತ್ತು ಧಾರವಾಡದಲ್ಲಿ ರಿಯಾಯಿತಿ ಕನ್ನಡ ಪುಸ್ತಕ ಮಾರಾಟ ಮೇಳವನ್ನು ನಡೆಸಲಾಗುವುದು. ಈ ಮಾರಾಟ ಮೇಳಕ್ಕಾಗಿ ಮಳಿಗೆ ನರ್ಮಿಸಲು ಸೂಕ್ತ ನೋಂದಾಯಿತ ಸಂಸ್ಥೆ/ ವ್ಯಕ್ತಿಗಳಿಂದ ಇ-ಪ್ರೊಕ್ಯೂರ್ಮೆಂಟ್ ಫೋರ್ಟಲ್ ಮೂಲಕ ಇ-ಟೆಂಡರ್ ಕರೆಯಲಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.
ಆಸಕ್ತ ನೋಂದಾಯಿತ ಸಂಸ್ಥೆ/ ವ್ಯಕ್ತಿಗಳು 2018ರ ಆಗಸ್ಟ್ 18 ರೊಳಗೆ ಇ-ಟೆಂಡರ್ ಮೂಲಕ ಭರ್ತಿ ಮಾಡಬೇಕು. ಟೆಂಡರ್ ದಸ್ತಾವೇಜು ಹಾಗೂ ಇತರೆ ಮಾಹಿತಿಗಾಗಿ hಣಣಠಿs://eಠಿಡಿoಛಿ.ಞಚಿಡಿಟಿಚಿಣಚಿಞಚಿ.gov.iಟಿ ವೆಬ್‍ಸೈಟ್‍ನಲ್ಲಿ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಮೊದಲನೇ ಮಹಡಿ, ಜೆ.ಸಿ. ರಸ್ತೆ ಬೆಂಗಳೂರು-560002, ದೂರವಾಣಿ ಸಂಖ್ಯೆ 080-22484516/ 22107704 ಹಾಗೂ ಪ್ರಾಧಿಕಾರದ ತಿತಿತಿ.ಞಚಿಟಿಟಿಚಿಜಚಿಠಿusಣಚಿಞಚಿಠಿಡಿಚಿಜhiಞಚಿಡಿಚಿ.ಛಿom ವೆಬ್‍ಸೈಟ್‍ನ್ನು ಸಂಪರ್ಕಿಸಲು ಕೋರಲಾಗಿದೆ.
ನಗರದ ಉದ್ಯಾನವನಗಳ ರಕ್ಷಣೆಗೆ ಸಹಕರಿಸಿ
****************************************
ಡಾ. ಮಲ್ಲಿಕಾರ್ಜುನ ಖರ್ಗೆ
***********************
ಕಲಬುರಗಿ,ಜು.28.(ಕ.ವಾ.)-ನಗರದಲ್ಲಿ ಕಲಬುರಗಿ ಮಹಾನಗರ ಪಾಲಿಕೆಯಿಂದ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿಪಡಿಸಲಾದ ಉದ್ಯಾನವನಗಳನ್ನು ಆಯಾ ಕಾಲೋನಿಯವರು ನಿರ್ವಹಣೆ ಮಾಡಿ ಸಂರಕ್ಷಿಸಬೇಕೆಂದು ಕಲಬುರಗಿ ಲೋಕಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಅವರು ಶನಿವಾರ ಹೈಕೋರ್ಟ ಪಕ್ಕದ ಕೆ.ಹೆಚ್.ಬಿ. ಅಕ್ಕಮಹಾದೇವಿ ಕಾಲೋನಿಯಲ್ಲಿ 2016-17ನೇ ಸಾಲಿನ ಕೇಂದ್ರ ಸರ್ಕಾರ ಪುರಸ್ಕøತ ಅಮೃತ ಯೋಜನೆಯಡಿ 82 ಲಕ್ಷ ರೂ.ಗಳಿಂದ ನಿರ್ಮಿಸಿದ ಮಕ್ಕಳ ಸ್ನೇಹಿ ಉದ್ಯಾನವನವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಉದ್ಯಾನವನಗಳಲ್ಲಿ ಮಕ್ಕಳಿಗಾಗಿ ಆಟಿಕೆ ಸಾಮಾನುಗಳನ್ನು ಅಳವಡಿಸಲಾಗಿದೆ. ಅವುಗಳ ಮೇಲೆ ವಯಸ್ಕರು ಕುಳಿತು ಹಾಳು ಮಾಡಬಾರದು. ಉದ್ಯಾನವನ ಸಂರಕ್ಷಣೆಗೆ ಹಿರಿಯರು ನೀಡುವ ನೀತಿ ಪಾಠವನ್ನು ಯುವಕರು ಪಾಲಿಸಬೇಕು. ಎಲ್ಲರೂ ಸಾರ್ವಜನಿಕ ಆಸ್ತಿಗಳನ್ನು ಹಾಗೂ ಮನೆಯ ಅಂಗಳವನ್ನು ಸ್ವಚ್ಛವಾಗಿಟ್ಟುಕೊಂಡು ನಗರಕ್ಕೆ ಒಳ್ಳೆಯ ಹೆಸರು ತರಬೇಕು. ಬೇರೆಯವರು ಕಲಬುರಗಿಗೆ ಆಗಮಿಸಿ ಸಧ್ಯ ನಗರ ಪರವಾಗಿಲ್ಲ ಎಂದು ಹೇಳುತ್ತಿದ್ದಾರೆ. ಇದು ಇನ್ನು ಮುಂದೆ ಎಲ್ಲ ಹಂತದಲ್ಲಿಯೂ ಅಭಿವೃದ್ಧಿಯಾಗಿ ಕಲಬುರಗಿ ನಗರ ತುಂಬಾ ಚೆನ್ನಾಗಿದೆ ಎಂಬ ಭಾವನೆ ಮೂಡುವಂತಾಗಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಕೆಲವರು ಹೈದ್ರಾಬಾದ ಕರ್ನಾಟಕವನ್ನು ಹಳೆಯ ಮೈಸೂರು ಕರ್ನಾಟಕ ಹಾಗೂ ಮುಂಬಯಿ ಕರ್ನಾಟಕಕ್ಕೆ ಹೋಲಿಸಿ ಈ ಭಾಗ ಅಭಿವೃದ್ಧಿಯಾಗಿಲ್ಲ ಕಾರಣ ಉತ್ತರ ಕರ್ನಾಟಕವನ್ನು ಬೇರೆ ರಾಜ್ಯವನ್ನಾಗಿ ಮಾರ್ಪಡಿಸಬೇಕು ಎಂದು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಡಾ. ನಿಜಲಿಂಗಪ್ಪ ಸೇರಿದಂತೆ ಅನೇಕ ಗಣ್ಯರು ಕರ್ನಾಟಕದ ಏಕೀಕರಣಕ್ಕೆ ಹೋರಾಟ ಮಾಡುವ ಮೂಲಕ ಅಖಂಡ ಕರ್ನಾಟಕವನ್ನು ರೂಪಿಸಿದ್ದಾರೆ. ಇದನ್ನು ಕಾಪಾಡಿಕೊಂಡು ಎಲ್ಲರೂ ಒಗ್ಗಟ್ಟಾಗಿ ಮುನ್ನಡೆಯಬೇಕು. ಹೈದ್ರಾಬಾದ ಕರ್ನಾಟಕ ಪ್ರದೇಶದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು ಕಲಂ 371(ಜೆ) ರೂಪಿಸಿದೆ. ಇದರಡಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಅಭಿವೃದ್ಧಿ ಮಾಡಲಾಗುತ್ತಿದೆ. ಈ ಕಲಂ ಅಡಿಯಲ್ಲಿ ರೂಪಿಸಿರುವ ಮೀಸಲಾತಿಯ ಪ್ರಯೋಜನ ಪಡೆದು ಅಭಿವೃದ್ಧಿ ಹೊಂದಬೇಕು. ಅನುದಾನ ಕಡಿಮೆ ಆದಲ್ಲಿ ಸರ್ಕಾರಕ್ಕೆ ಕೇಳಬೇಕು. ಆದರೆ ಯಾರೂ ಸಹ ರಾಜ್ಯವನ್ನು ಒಡೆಯುವ ಅಪಸ್ವರ ಎತ್ತಬಾರದು ಎಂದು ಹೇಳಿದರು.
ನಂತರ ಮಹಾನಗರ ಪಾಲಿಕೆ ವತಿಯಿಂದ 2017-18ನೇ ಸಾಲಿನ ಹೆಚ್.ಕೆ.ಆರ್.ಡಿ.ಬಿ. ಅನುದಾನದಲ್ಲಿ 33.75 ಲಕ್ಷ ರೂ.ಗಳ ವೆಚ್ಚದಲ್ಲಿ ಜಗತ್ ವೃತ್ತದಲ್ಲಿರುವ ಬಸವೇಶ್ವರ ಪುತ್ಥಳಿಯ ಸುತ್ತಲಿನ ಉದ್ಯಾನವನ ಅಭಿವೃದ್ಧಿ ಕಾಮಗಾರಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ಕಲಬುರಗಿ ನಗರದ ಮಧ್ಯ ಭಾಗದಲ್ಲಿ ಕೇವಲ ಒಂದು ಉದ್ಯಾನವಿದೆ. ಅದರಲ್ಲಿಯೂ ಹಲವು ಕಟ್ಟಡಗಳು ನಿರ್ಮಿಸಲಾಗಿದೆ. ಉದ್ಯಾನವನವನ್ನು ಪ್ರೇಕ್ಷಣೀಯ ಸ್ಥಳವನ್ನಾಗಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಪಡಿಸಬೇಕು. ಉದ್ಯಾನವನಕ್ಕೆ ನಾಲ್ಕು ಸ್ವಾಗತ ಕಮಾನುಗಳನ್ನು ನಿರ್ಮಿಸಲು ಹೆಚ್.ಕೆ.ಆರ್.ಡಿ.ಬಿ.ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜೊತೆಗೆ ಸಂಸದರ ನಿಧಿಯಿಂದಲೂ ಸಹ ಸಾಧ್ಯವಾದಷ್ಟು ಅನುದಾನ ನೀಡಲಾಗುವುದು. ಕಲಬುರಗಿ ಜಿಲ್ಲೆಯ ನಾಗರಿಕರು ಸಾರ್ವಜನಿಕ ಆಸ್ತಿಗಳನ್ನು ಉಳಿಸಿಕೊಂಡು ಹೋಗಬೇಕು. ಜಿಲ್ಲೆಯಲ್ಲಿ ಐತಿಹಾಸಿಕ ಕಟ್ಟಡ ಹಾಗೂ ವಾಸ್ತುಶಿಲ್ಪವಿದೆ. ಬಹುಕೋಟೆ, ಕೋಟೆಯಲ್ಲಿರುವ ಜಾಮಿಯಾ ಮಸೀದಿ, ಮಳಖೇಡದಲ್ಲಿರುವ ಜೈನ ಮತ್ತು ಹಿಂದು ಧರ್ಮದ ಕುರುಹುಗಳು, ಸನ್ನತಿಯಲ್ಲಿರುವ ಶಾತವಾಹನರ ಕಾಲದ ಬೌದ್ಧ ಧರ್ಮದ ಪಳಿಯುಳಿಕೆಗಳು ಹಾಗೂ ಆಳಂದನಲ್ಲಿರುವ ಜೈನ ಬಸದಿಗಳು ಸಂರಕ್ಷಿಸಬೇಕು. ಜಿಲ್ಲೆಯಲ್ಲಿ ಮನೆಗಳನ್ನು ನಿರ್ಮಿಸುವಾಗ ಪುರಾತನ ಮೂರ್ತಿಗಳನ್ನು ಅಡಿಪಾಯಕ್ಕೆ ಬಳಸಿರುವುದು ಖೇದಕರ ಸಂಗತಿಯಾಗಿದೆ. ಬಸವಣ್ಣನವರ ಸಾಮಾಜಿಕ ನ್ಯಾಯ ಮತ್ತು ಸುಧಾರಣಾ ತತ್ವಗಳನ್ನು ಎಲ್ಲರೂ ಒಪ್ಪಿಕೊಂಡು ಆಧುನಿಕ ಸಮಾಜ ನಿರ್ಮಿಸಬೇಕಾಗಿದೆ. ಎಲ್ಲರೂ ಶಾಸ್ತ್ರೀಯವಾಗಿ ಚಿಂತನೆ ಮಾಡಿ ನವ ಯುಗವನ್ನು ನಿರ್ಮಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕಿ ಕನೀಜ ಫಾತೀಮಾ, ಮಾಜಿ ಶಾಸಕ ಬಿ.ಆರ್. ಪಾಟೀಲ, ಮಹಾನಗರ ಪಾಲಿಕೆ ಮಹಾಪೌರ್ ಶರಣುಕುಮಾರ ಮೋದಿ, ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಮಹಾನಗರ ಪಾಲಿಕೆ ಆಯುಕ್ತ ಪಿ. ರಘನಂಧನಮೂರ್ತಿ, ಮಹಾನಗರ ಪಾಲಿಕೆ ಸದಸ್ಯೆ ಲಲಿತಾ ರವಿ ರಾಠೋಡ, ಮುಖಂಡರಾದ ಜಗದೇವ ಗುತ್ತೇದಾರ್, ಸುಶೀಲ ಮಾಮಡಿ, ಅರುಣಕುಮಾರ ಪಾಟೀಲ, ಮಹಾನಗರ ಪಾಲಿಕೆ ಕಾರ್ಯನಿರ್ವಾಹಕ ಇಂಜಿನಿಯರ್ ಆರ್.ಪಿ. ಜಾಧವ ಮತ್ತಿತರರು ಪಾಲ್ಗೊಂಡಿದ್ದರು.
ಅಲ್ಪಸಂಖ್ಯಾತ ಸಮುದಾಯದ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿ
ಕಲಬುರಗಿ,ಜು.28.(ಕ.ವಾ.)-ಪ್ರತಿ ಮೂರು ತಿಂಗಳಿಗೆ ವಿವಿಧ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಅಲ್ಪಸಂಖ್ಯಾತ ಸಮುದಾಯಗಳು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿ ಎಂದು ಕರ್ನಾಟಕ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ನಸೀರ ಅಹ್ಮದ್ ಅವರು ಕಲಬುರಗಿ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅವರು ಶನಿವಾರ ಕಲಬುರಗಿ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರಧಾನಮಂತ್ರಿ 15 ಅಂಶಗಳ ಕಾರ್ಯಕ್ರಮ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ಮತ್ತು ವಕ್ಫ್ ಬೋರ್ಡಿಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಸ್ಲಿಂ, ಜೈನ್, ಕ್ರಿಶ್ಚಿಯನ್ ಸಮುದಾಯದವರಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸರಿಯಾಗಿ ದೊರೆಯುತ್ತಿಲ್ಲ ಎಂಬುದು ಸಮುದಾಯದವರ ದೂರಾಗಿದೆ. ಜೈನ್ ಸಮುದಾಯದಲ್ಲಿ ಶ್ವೇತಾಂಬರ ಮತ್ತು ದಿಗಂಬರ ಜಾತಿಗಳಿವೆ. ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡವರು ಇದಾರೆ. ಇವರೆಲ್ಲರು ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು ಬಹಳಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಪ್ರಸ್ತುತವಿರುವ ನಿಯಮಾವಳಿಯಂತೆ ಈ ಎಲ್ಲ ಅಲ್ಪಸಂಖ್ಯಾತರಿಗೆ ನಿಗಧಿತ ಅವಧಿಯೊಳಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ವಿತರಿಸಲು ತಹಶೀಲ್ದಾರರಿಗೆ ಅಗತ್ಯ ಸೂಚನೆ ನೀಡಬೇಕು ಒಂದು ವೇಳೆ ನಿರಾಕರಿಸಿದರೆ ಅದಕ್ಕೆ ಕಾರಣ ಸಹ ನೀಡಬೇಕು. ಅಲ್ಪಸಂಖ್ಯಾತರು ಶಿಕ್ಷಣ ಪಡೆಯುತ್ತಿರುವುದರಿಂದ ಈ ಸಮುದಾಯದಲ್ಲಿ ಅನಕ್ಷರತೆ ಪ್ರಮಾಣ ಕ್ರಮೇಣ ಕಡಿಮೆಯಾಗಿ ಮುಖ್ಯ ವಾಹಿನಿಗೆ ಬರುತ್ತಿದ್ದ್ದು, ಇದಕ್ಕೆ ಆಡಳಿತಾತ್ಮಕವಾಗಿಯೂ ಸಹಕಾರದ ಅವಶ್ಯಕತೆ ಇದೆ. ಪ್ರತಿ ವರ್ಷ ಶೈಕ್ಷಣಿಕ ಆರಂಭದ ಪೂರ್ವದಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಪಡೆಯಲು ವಿಶೇಷ ಕ್ಯಾಂಪ್ ಆಯೋಜಿಸಿದಲ್ಲಿ ತುಂಬಾ ಒಳಿತಾಗುತ್ತದೆ ಎಂದರು.
ಮುಸ್ಲಿಂ, ಸಿಖ್, ಪಾರ್ಸಿ, ಜೈನ್ ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರ ಹತ್ತಾರು ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಸಮುದಾಯದಲ್ಲಿ ಮಾಹಿತಿಯ ಕೊರತೆಯ ಪರಿಣಾಮ ಅರ್ಹ ಫಲಾನುಭವಿಗಳಿಗೆ ಈ ಯೋಜನೆಯ ಲಾಭ ಸಿಗುತ್ತಿಲ್ಲ. ಅಲ್ಪಸಂಖ್ಯಾತ ಇಲಾಖೆಯಿಂದ ಜಿಲ್ಲೆಯಲ್ಲಿ 6 ಜನ ಮಾಹಿತಿ ಅಧಿಕಾರಿಗಳಿದ್ದು, ಇವರುಗಳ ಮುಖೇನ ಅವರ ಅಧಿಕಾರ ವ್ಯಾಪ್ತಿಯ ಮಸೀದಿ, ಪ್ರಾರ್ಥನಾ ಮಂದಿರ ಮತ್ತು ಗುರುದ್ವಾರಗಳಿಗೆ ಪ್ರತಿ ವಾರಕ್ಕೊಮ್ಮೆ ಭೇಟಿ ನೀಡಿ ಸರ್ಕಾರಿ ಯೋಜನೆಗಳ ಬಗ್ಗೆ ಕಿರುಪತ್ರಗಳನ್ನು ಹಂಚಲು ಕ್ರಮ ಕೈಗೊಳ್ಳಬೇಕು ಹಾಗೂ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಿಂದ ಅಲ್ಪಸಂಖ್ಯಾತ ಸಮುದಾಯದವರು ಹೆಚ್ಚಿರುವ ಪ್ರದೇಶದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿನ ವಕ್ಫ್ ಆಸ್ತಿ ಸಂರಕ್ಷಣೆ ನಿಟ್ಟಿನಲ್ಲಿಯೂ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದ ಅಧ್ಯಕ್ಷರು ಕಲಬುರಗಿ ಕೋಟೆಯೊಳಗೆ ಸುಮಾರು 200 ಸಂಖ್ಯೆ ಕುಟುಂಬಗಳು ಬಹಳಷ್ಟು ವರ್ಷಗಳಿಂದ ವಾಸಿಸುತ್ತಿದ್ದು, ಈ ಕುಟುಂಬಗಳಿಗೆ ಆಗಾಗ ನೋಟಿಸ್ ನೀಡಲಾಗುತ್ತಿದೆ. ಈ ಬಗ್ಗೆಯೂ ಕಾನೂನಾತ್ಮಕ ಪರಿಶೀಲನೆ ಮಾಡಿ ಎಂದರು.
ಶಾದಿ ಮಹಲ್:- ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಶೇ.50ರ ಆರ್ಥಿಕ ಸಹಾಯಧನದೊಂದಿಗೆ ಜಿಲ್ಲೆಯಲ್ಲಿ 20 ಶಾದಿ ಮಹಲ್ ನಿರ್ಮಾಣ ಕಾಮಗಾರಿ ಪ್ರಸ್ತುತ ಪ್ರಗತಿಯಲ್ಲಿದ್ದು, ಇದಕ್ಕಾಗಿ ಅಗತ್ಯ ಅನುದಾನ ಸಹ ಬಿಡುಗಡೆ ಮಾಡಲಾಗಿದೆ. ಮಹಲ್ ನಿರ್ಮಾಣ ಮತ್ತು ಅನುದಾನ ಸಮರ್ಪಕ ಬಳಕೆ ಬಗ್ಗೆ ಸಾರ್ವಜನಿಕರಿಂದ ದೂರು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಅನುದಾನ ಪಡೆದ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಕ್ಷೇತ್ರದ ಶಾಸಕರ ಸಮಕ್ಷಮ ಸಭೆ ನಡೆಸಿ ಶಾದಿ ಮಹಲ್ ನಿರ್ಮಾಣದ ವಸ್ತುಸ್ಥಿತಿ ಪರಿಶೀಲನೆ ಮಾಡಬೇಕು. ಪೂರ್ಣಗೊಂಡ ಶಾದಿ ಮಹಲ್‍ನಲ್ಲಿ ಕನಿಷ್ಠ ನಿರ್ವಹಣಾ ವೆಚ್ಚದ ದರವನ್ನೆ ಬಾಡಿಗೆ ದರವನ್ನಾಗಿ ನಿಗದಿಪಡಿಸಬೇಕು ಹಾಗೂ ದರವನ್ನು ಶಾದಿ ಮಹಲ್ ನಲ್ಲಿ ಸಾರ್ವಜನಿಕವಾಗಿ ಪ್ರಕಟಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಮಾತನಾಡಿ ವಕ್ಪ್ ಆಸ್ತಿಗೆ ಸಂಬಂಧಿಸಿದಂತೆ 1974ರ ಅಧಿಸೂಚನೆಯಂತೆ ಜಿಲ್ಲೆಯಲ್ಲಿ ವಕ್ಫ್ ಆಸ್ತಿ ಸಾಕಷ್ಟು ಪ್ರಮಾಣದಲ್ಲಿದ್ದು, ಎಲ್ಲಾ ವಕ್ಫ್ ಆಸ್ತಿಗಳನ್ನು ಕಾಲಂ-11ರಲ್ಲಿ ನಮೂದಿಸಿಕೊಂಡು ವಕ್ಫ್ ಆಸ್ತಿಗಳನ್ನು ಬೋರ್ಡಿನ ಸುಪರ್ದಿಗೆ ಪಡೆಯಲಾಗಿದೆ. ಕೆಲವು ಕಡೆ ವಕ್ಫ್ ಆಸ್ತಿಗಳನ್ನು ಕಬಳಿಸಿ ಉಳುಮೆ ಮಾಡುವ ಪ್ರಕರಣ ಸಹ ನಮ್ಮ ಮುಂದಿದ್ದು ಇಂತಹ ಪ್ರಕರಣಗಳಲ್ಲಿ ಸಂಬಂಧಿಸಿದವರಿಗೆ ಈಗಾಗಲೆ ನೋಟಿಸ್ ನೀಡಿ ಮುಂದಿನ ಕ್ರಮ ವಹಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಆಯೋಗದ ಅಧ್ಯಕ್ಷರು ಅಲ್ಪಸಂಖ್ಯಾತರಿಗೆ ಸಂಬಂಧಿಸಿದಂತೆ ಆರೋಗ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಪೊಲೀಸ್ ಇಲಾಖೆ, ಆಹಾರ, ಸ್ಥಳೀಯ ಸಂಸ್ಥೆಗಳು, ವಸತಿ ಯೋಜನೆಗಳ ಬಗ್ಗೆಯೂ ಇಲಾಖಾವಾರು ಪರಿಶೀಲನೆ ನಡೆಸಿದರು. ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ಮಹೆಬೂಬ ಸಾಬ್ ಅವರು ಇಲಾಖೆಯ ಯೋಜನೆಗಳ ಬಗ್ಗೆ ಅಂಕಿ-ಸಂಖ್ಯೆಯೊಂದಿಗೆ ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ ಕನೀಜ್ ಫಾತಿಮಾ, ಕರ್ನಾಟಕ ಆಲ್ಪಸಂಖ್ಯಾತ ಆಯೋಗದ ಕಾರ್ಯದರ್ಶಿ ಅನೀಸ್ ಸಿರಾಜ್, ಸದಸ್ಯರಾದ ಡಾ.ಆರ್.ಅಬ್ದುಲ್ ಹಮೀದ್, ರಫೀ ಬಂಡಾರಿ, ಮಹಮೂದ ಪಟೇಲ್, ಆದಿಲ್ ಸುಲೇಮಾನ ಸೇಠ್, ಕೆ.ಮಹೇಂದ್ರ ಜೈನ್, ಬಲಜೀತ್ ಸಿಂಗ್, ಡಾ.ಮೆಟಿಲ್ಡಾ ಡಿಸೋಜಾ, ಕಲಬುರಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೋರ್ಲಪಾಟಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಶಶಿಕುಮಾರ, ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ವೆಂಕಟೇಶ ಮಾನೆ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಇದಕ್ಕು ಮುನ್ನ ಆಯೋಗದ ಅಧ್ಯಕ್ಷರು ಹಾಗರಗಾದಲ್ಲಿ ನಿರ್ಮಿಸಲಾಗುತ್ತಿರುವ ಶಾದಿ ಮಹಲ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ರೈತರು ಆತ್ಮಹತ್ಯೆಗೆ ಶರಣಾಗದಂತೆ ಸಂದೇಶ ನೀಡಲು ಸೂಚನೆ
********************************************************
ಕಲಬುರಗಿ,ಜು.28.(ಕ.ವಾ.)-ಸರ್ಕಾರವು ರೈತರ ಸಾಲ ಮನ್ನಾ ಮಾಡಿದೆ. ರೈತರು ಸಾಲಕ್ಕೆ ಧೃತಿಗೆಟ್ಟು ಆತ್ಮಹತ್ಯೆ ಶರಣಾಗಬಾರದು ಎಂಬ ಸಂದೇಶವನ್ನು ಎಲ್ಲ ರೈತರಿಗೆ ಮುಟ್ಟಿಸಬೇಕು ಹಾಗೂ ರೈತರು ಖಾಸಗಿ ಸಂಸ್ಥೆಗಳಿಂದ ಪಡೆದ ಸಾಲ ಮರುಪಾವತಿಗೆ ಒತ್ತಡ ಇದ್ದಲ್ಲಿ ತಿಳಿದು ಸೂಕ್ತ ಕ್ರಮ ಜರುಗಿಸಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಜೆ. ರವಿಶಂಕರ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಲಬುರಗಿ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ವಿವಿಧ ಇಲಾಖೆಗಳಲ್ಲಿರುವ ಸಮಸ್ಯೆಗಳನ್ನು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಲಿಖಿತ ರೂಪದಲ್ಲಿ ಸಲ್ಲಿಸಬೇಕು. ಆ ಸಮಸ್ಯೆಗಳ ನಿವಾರಣೆಗೆ ರಾಜ್ಯಮಟ್ಟದಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.
ಮುಂದಿನ ಸಭೆಗಳಲ್ಲಿ ಇಲಾಖಾವಾರು ಹಾಗೂ ಕುಲಂಕೂಷವಾಗಿ ಪ್ರಗತಿ ಪರಿಶೀಲನೆ ಕೈಗೊಳ್ಳಲಾಗುವುದು. ಇದಕ್ಕೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಮರ್ಪಕ ಉತ್ತರ ನೀಡಬೇಕು. ಇಲ್ಲದಿದ್ದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು. ಇಂದಿನ ಸಭೆಗೆ ಗೈರು ಹಾಜರಾದ ಅಧಿಕಾರಿಗಳು ಬೆಂಗಳೂರಿನ ಸಭೆಗೆ ಹೋಗಿದ್ದಾರೆ ಎಂದು ಹೇಳುತ್ತಿದ್ದಾರೆ. ಬೆಂಗಳೂರಿನಲ್ಲಿ ಸಭೆ ಇರುವುದನ್ನು ಖಚಿತಪಡಿಸಬೇಕು. ಇಲ್ಲದಿದ್ದಲ್ಲಿ ಗೈರು ಹಾಜರಾದ ಅಧಿಕಾರಿಗಳಿಗೆ ನೋಟೀಸು ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಚಿಂಚೋಳಿ ತಾಲೂಕಿನ ಚಂದನಕೇರಾ ಬಹುಗ್ರಾಮ ಕುಡಿಯುವ ನೀರು ಯೋಜನೆಯ 70 ಲಕ್ಷ ರೂ. ವಿದ್ಯುತ್ ಬಿಲ್ ಬಾಕಿ ಇದೆ. ಇದನ್ನು ಗ್ರಾಮ ಪಂಚಾಯತ್‍ಗಳು ಭರಿಸಬೇಕು. ಆದರೆ ಸಾಧ್ಯವಾಗುತ್ತಿಲ್ಲ. 2015-16ನೇ ಸಾಲಿನ ಸಮಾಜ ಕಲ್ಯಾಣ ಇಲಾಖೆಯ ವಸತಿ ಕಟ್ಟಡಗಳು ಇನ್ನೂ ಪೂರ್ಣಗೊಂಡಿಲ್ಲ ಇವುಗಳನ್ನು ಕ್ರೈಸ್ಟ್ ಸಂಸ್ಥೆಯವರು ನಿರ್ಮಿಸುತ್ತಿದ್ದಾರೆ. ಅವರಿಗೆ ಅನುದಾನ ಬೆಂಗಳೂರಿನಿಂದಲೇ ನೇರವಾಗಿ ಬಿಡುಗಡೆಯಾಗಿ ಪ್ರಗತಿ ಪರಿಶೀಲನೆ ಅವರೇ ಕೈಗೊಳ್ಳುತ್ತಾರೆ. ಜಿಲ್ಲಾ ಮಟ್ಟದಲ್ಲಿ ಯಾವುದೇ ಹಿಡಿತವಿಲ್ಲ ಕಾರಣ ಕಟ್ಟಡಗಳ ಪ್ರಗತಿ ಆಮೆ ಗತಿಯಲ್ಲಿ ಸಾಗಿದೆ. ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ಈ ಹಿಂದೆ ತಾಯಿ ಭಾಗ್ಯ ಯೋಜನೆ ಜಾರಿಗೊಳಿಸಲಾಗಿತ್ತು. ತಾಯಿ ಭಾಗ್ಯ ಯೋಜನೆಯಡಿ ಗರ್ಭಿಣಿಯರಿಗೆ ಚಿಕಿತ್ಸೆ ನೀಡಿ ಹೆರಿಗೆಗಾಗಿ ಬಸವೇಶ್ವರ, ಸಂಗಮೇಶ್ವರ ಹಾಗೂ ಕೆ.ಬಿ.ಎನ್. ಆಸ್ಪತ್ರೆಗಳನ್ನು ಯೋಜನೆಯಡಿ ಅಳವಡಿಸಿಕೊಳ್ಳಲಾಗಿತ್ತು. ಈ ಆಸ್ಪತ್ರೆಯ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಒಂದು ಹೆರಿಗೆಗೆ 6000 ರೂ.ಗಳನ್ನು ನೀಡಲು ಒಪ್ಪಿಗೆ ಮಾಡಿಕೊಳ್ಳಲಾಗಿತ್ತು. ಆದರೆ ಈ ಯೋಜನೆಯು ಸಧ್ಯ ಜಾರಿಯಲ್ಲಿ ಇರುವುದಿಲ್ಲ. ಈ ಯೋಜನೆ ಈ ಭಾಗದ ತಾಯಿ ಮತ್ತು ಶಿಶುವಿನ ಮರಣ ಪ್ರಮಾಣ ತಗ್ಗಿಸುವಲ್ಲಿ ತುಂಬಾ ಸಹಾಯಕಾರಿಯಾಗಿದೆ. ಈ ಯೋಜನೆಯನ್ನು ಮುಂದುವರೆಸಿ ಹೆರಿಗೆ ವೆಚ್ಚ 6000 ರೂ.ಗಳಿಗೆ ಹೆಚ್ಚಿಸುವಂತೆ ಸರ್ಕಾರದ ಗಮನಕ್ಕೆ ತರಬೇಕೆಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಅವರು ಉಸ್ತುವಾರಿ ಕಾರ್ಯದರ್ಶಿಗಳಿಗೆ ತಿಳಿಸಿ ಮುಂದಿನ ಎರಡು ದಿನಗಳ ಕಾಲ ಜಿಲ್ಲಾ ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನವನ್ನು ಬಿಡಬಾರದು ಎಂದು ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಮಾತನಾಡಿ, ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಈ ವರ್ಷ 29.41 ಲಕ್ಷ ಮಾನವ ದಿನಗಳ ಉದ್ಯೋಗ ಸೃಷ್ಠಿ ಮಾಡಲು ಗುರಿ ನೀಡಲಾಗಿದೆ. ಕಳೆದ ವರ್ಷ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಕೂಲಿ ಮತ್ತು ಸಾಮಾಗ್ರಿಗಳ ಅನುಪಾತ 90:10ರಷ್ಟಿತ್ತು. ಕಾರಣ ಸರ್ಕಾರಿ ಸಂಸ್ಥೆಗಳ ರಕ್ಷಣೆಗಾಗಿ 110 ಆವರಣ ಗೋಡೆ ನಿರ್ಮಿಸಿ ಆಸ್ತಿ ಸೃಷ್ಠಿಸಲಾಗಿತ್ತು. ಈ ವರ್ಷವೂ ಸಹ ಆಸ್ತಿ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ಪ್ರಸಕ್ತ ವರ್ಷದ ಮಾನವ ದಿನಗಳ ಸೃಷ್ಠಿ ಗುರಿಯನ್ನು ವಿವಿಧ ಇಲಾಖೆಗಳಿಗೆ ನೀಡಲಾಗಿದೆ. ಕಳೆದ ವರ್ಷ ಜಿಲ್ಲೆಯಲ್ಲಿ 60 ಸಾವಿರ ವೈಯಕ್ತಿಕ ಶೌಚಾಲಯ ನಿರ್ಮಿಸುವ ಗುರಿ ಹೊಂದಿ 57,000 ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಕಲಬುರಗಿ ತಾಲೂಕಿನಲ್ಲಿ 15,000 ಶೌಚಾಲಯಗಳನ್ನು ನಿರ್ಮಿಸಿದರೆ ಕಲಬುರಗಿ ತಾಲೂಕು ಬಯಲು ಬಹಿರ್ದೆಸೆ ಮುಕ್ತ ತಾಲೂಕಾಗಿ ಘೋಷಿಸಬಹುದು. ಇದನ್ನು ಆಗಸ್ಟ್ 15ರೊಳಗಾಗಿ ಸಾಧಿಸಲು ಪ್ರಯತ್ನಿಸಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 55,000 ವೈಯಕ್ತಿಕ ಶೌಚಾಲಯ ನಿರ್ಮಿಸಿದಲ್ಲಿ ಪೂರ್ತಿ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿ ಘೋಷಿಸಲಾಗುವುದು ಎಂದು ವಿವರ ನೀಡಿದರು.
ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಪಿ. ರಘುನಂದನಮೂರ್ತಿ, ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಐ.ಎಸ್.ಎಸ್. ಪ್ರೊಬೇಷನರಿ ಅಧಿಕಾರಿ ಲೋಖಂಡೆ ಸ್ನೇಹಲ ಸುಧಾಕರ, ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.














ಹೀಗಾಗಿ ಲೇಖನಗಳು News and photo Date: 28-07-2018

ಎಲ್ಲಾ ಲೇಖನಗಳು ಆಗಿದೆ News and photo Date: 28-07-2018 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ News and photo Date: 28-07-2018 ಲಿಂಕ್ ವಿಳಾಸ https://dekalungi.blogspot.com/2018/07/news-and-photo-date-28-07-2018.html

Subscribe to receive free email updates:

0 Response to "News and photo Date: 28-07-2018"

ಕಾಮೆಂಟ್‌‌ ಪೋಸ್ಟ್‌ ಮಾಡಿ