News and Photo Date: 27-7-2018

News and Photo Date: 27-7-2018 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು News and Photo Date: 27-7-2018, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : News and Photo Date: 27-7-2018
ಲಿಂಕ್ : News and Photo Date: 27-7-2018

ಓದಿ


News and Photo Date: 27-7-2018

ಬೇರೆಯವರ ಹಕ್ಕುಗಳ ರಕ್ಷಣೆ ಮಾಡುವುದು ಎಲ್ಲರ ಕರ್ತವ್ಯ
****************************************************
ಕಲಬುರಗಿ,ಜು.27.(ಕ.ವಾ.)-ನಾಗರಿಕ ಸಮಾಜದಲ್ಲಿರುವ ಪ್ರತಿಯೊಬ್ಬರು ಬೇರೆಯವರ ಹಕ್ಕುಗಳನ್ನು ರಕ್ಷಣೆ ಮಾಡುವುದರ ಜೊತೆಗೆ ತಮ್ಮ ಹಕ್ಕುಗಳ ರಕ್ಷಣೆ ಮಾಡಬೇಕು ಹಾಗೂ ಕರ್ತವ್ಯಗಳ ಪಾಲನೆ ಮಾಡಬೇಕೆಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ನ್ಯಾಯಮೂರ್ತಿ ಕೆ.ಎನ್. ಫಣಿಂದ್ರ ಹೇಳಿದರು.
ಅವರು ಶುಕ್ರವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ ಪಾಟೀಲ ಕಲಾ, ವಿಜ್ಞಾನ ಮಹಾವಿದ್ಯಾಲಯ, ಪೊಲೀಸ್ ಇಲಾಖೆ, ಸಾರಿಗೆ ಇಲಾಖೆ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತರ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ಸರ್ವಜ್ಞ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಏರ್ಪಡಿಸಲಾಗಿದ್ದ “ಯುವ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ, ಸಂಚಾರಿ ನಿಯಮಗಳ ಮತ್ತು ಮೂಲಭೂತ ಕಾನೂನುಗಳ ಕುರಿತು” ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಳ್ಳಿಗಳಲ್ಲಿ ಓದು ಬರದವರೂ ಸಹ ಎಲ್ಲರಿಗೂ ಸಾಮಾಜಿಕ ನ್ಯಾಯ ನೀಡುವ ಶಕ್ತಿ ಹೊಂದಿದ್ದಾರೆ. ಹಳ್ಳಿಗಳಲ್ಲಿ ರಾಜಿ ಸಂಧಾನಗಳ ಮೂಲಕ ನ್ಯಾಯ ಒದಗಿಸಲಾಗುತ್ತದೆ. ಹಳ್ಳಿ ಕಟ್ಟೆ ನ್ಯಾಯ ತುಂಬಾ ಪರಿಣಾಮಕಾರಿಯಾಗಿದ್ದು, ಸಂಬಂಧಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ನ್ಯಾಯಾಲಯಗಳ ಮೂಲಕವೂ ನ್ಯಾಯ ದೊರಕಿಸಿಕೊಡಲಾಗುವುದು. ಆದರೆ ನ್ಯಾಯಾಲಯಗಳಲ್ಲಿ ವಾದ-ಪ್ರತಿವಾದಗಳು ಬಹಳ ದಿನಗಳವರೆಗೆ ನಡೆಯುವುದರಿಂದ ಕಕ್ಷಿದಾರರು ಆರ್ಥಿಕವಾಗಿ ಬಳಲುವುದರೊಂದಿಗೆ ಇಬ್ಬರ ನಡುವಿನ ಸಂಬಂಧಗಳು ಹಾಳಾಗುತ್ತವೆ. ಎಲ್ಲರೂ ಕಾನೂನನ್ನು ಅನುಸರಿಸುತ್ತೇವೆ. ಕಾನೂನು ತಿಳಿಯದಿದ್ದರೂ ನಮ್ಮ ದೇಹ, ಆಸ್ತಿ ರಕ್ಷಣೆ ಮಾಡುತ್ತೇವೆ. ಇದಕ್ಕೆ ನಾಗರಿಕ ಸಮಾಜವೇ ಕಾರಣವಾಗಿದೆ ಎಂದು ಹೇಳಿದರು.
ಮಾನವನ ದೇಹ, ಆಸ್ತಿ, ಗೌರವಕ್ಕೆ ಸಂಬಂಧಿಸಿದಂತೆ ರಕ್ಷಣೆ ನೀಡಲು ವಿವಿಧ ಹಂತಗಳಲ್ಲಿ ಕಾನೂನಿನ ವ್ಯವಸ್ಥೆ ಮಾಡಲಾಗಿದೆ. ಯಾವುದೇ ತೊಂದರೆಗಳನ್ನು ಹೇಳಿಕೊಳ್ಳುವುದಕ್ಕೆ ಕಾನೂನು ಬದ್ಧವಾಗಿ ವೇದಿಕೆಗಳನ್ನು ರಚಿಸಲಾಗಿದೆ. ಕಾನೂನಿನ ಪ್ರಕಾರ ತೊಂದರೆಗಳನ್ನು ಪರಿಹರಿಸಲು ಪೊಲೀಸ್ ಠಾಣೆ ಹಾಗೂ ನ್ಯಾಯಾಲಯಗಳನ್ನು ಪ್ರಾರಂಭಿಸಲಾಗಿದೆ. ಯಾವುದೇ ವಿಷಯದಲ್ಲಿ ಧಕ್ಕೆಯಾದರೆ ಅದಕ್ಕೆ ಸಂಬಂಧಿಸಿದಂತೆ ನ್ಯಾಯ ಒದಗಿಸಲಾಗುತ್ತಿದೆ ಎಂದು ಹೇಳಿದ ಅವರು ಶಾಲಾ ಮಕ್ಕಳು ವಾಹನ ಓಡಿಸುವ ಮೊದಲು ವಿಶೇಷ ಕಾನೂನುಗಳನ್ನು ತಿಳಿದುಕೊಳ್ಳಬೇಕು. ವಾಹನ ಚಾಲನೆ ಪರವಾನಿಗೆ ಇಲ್ಲದೇ ವಾಹನ ಓಡಿಸಬಾರದು. ಸಂಚಾರಿ ನಿಯಮಗಳನ್ನು ತಿಳಿದುಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್. ಮಾಣಿಕ್ಯ ಮಾತನಾಡಿ, ಯುವ ಸಮುದಾಯದಲ್ಲಿ ಅರಾಜಕತೆ ಕಂಡು ಬರುತ್ತಿದೆ. ಅವರು ಯಾರನ್ನು ಲೆಕ್ಕಿಸದೇ ಹಾಗೂ ನಂಬದೇ ಅಪರಾಧ ಕೃತ್ಯದಲ್ಲಿ ತೊಡಗುತ್ತಿದ್ದಾರೆ. ಯುವ ಜನಾಂಗ ಒಳ್ಳೆಯ ಸಂಸ್ಕøತಿ, ಸಂಸ್ಕಾರ, ವಿಧ್ಯೆ ಪಡೆದು ದೇಶದ ಆಸ್ತಿಯಾಗಬೇಕು. ಎಲ್ಲರೂ ಜನನ-ಮರಣ, ಗ್ರಾಹಕರ ಹಿತರಕ್ಷಣಾ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಬಾಲ ಕಾರ್ಮಿಕ ನಿಷೇಧ ಕಾಯ್ದೆ, ಬಾಲ ನ್ಯಾಯಿಕ ಕಾಯ್ದೆ, ಮಾಹಿತಿ ಹಕ್ಕು ಕಾಯ್ದೆ, ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳನ್ನು ಕಡ್ಡಾಯವಾಗಿ ಅರಿಯಬೇಕು ಎಂದು ವಿವರಿಸಿದರು.
ಕಲಬುರಗಿ ಸಾರಿಗೆ ಇಲಾಖೆಯ ಹಿರಿಯ ಉಪಸಾರಿಗೆ ಆಯುಕ್ತ ಪಿ. ಸುರೇಂದ್ರಪ್ಪ ಅವರು ಮೋಟಾರ ವಾಹನ ಕಾಯ್ದೆ ಕುರಿತು ಮಾತನಾಡಿ, ದೈಹಿಕವಾಗಿ ಆರೋಗ್ಯವಾಗಿರುವ 18 ವರ್ಷ ಪೂರ್ಣಗೊಂಡಿರುವವರು ವಾಹನ ಚಾಲನೆ ಪರವಾನಿಗೆ ಪಡೆಯಬಹುದು. 2018ರ ಜೂನ್ ಮಾಹೆಯಿಂದ ಆನ್‍ಲೈನ್ ಮೂಲಕ ವಾಹನ ಚಾಲನೆ ಪರವಾನಿಗೆಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಆನ್‍ಲೈನ್‍ನಲ್ಲಿಯೇ ಪರೀಕ್ಷೆ ಪಾಸಾಗುವ ಮೂಲಕ ಪರವಾನಿಗೆ ಪಡೆಯಬಹುದಾಗಿದೆ. ಯುವ ಜನಾಂಗ ವಾಹನ ಚಲಾಯಿಸುವಾಗ ಕೈ ಸಂಕೇತ, ಸಂಚಾರಿ ನಿಯಮಗಳು, ಸಂಚಾರಿ ಸಂಕೇತಗಳನ್ನು ಅರಿತು ಚಾಲನೆ ಮಾಡಬೇಕು. ವಾಹನ ಚಾಲನೆ ಪರವಾನಿಗೆ ಹಾಗೂ ವಾಹನದ ದಾಖಲಾತಿಗಳು ಇಲ್ಲದೇ ವಾಹನ ಓಡಿಸಿದ್ದಲ್ಲಿ ಶಿಕ್ಷೆ ಮತ್ತು ದಂಡ ವಿಧಿಸಲಾಗುವುದು ಎಂದರು.
ಬೇರೆಯವರಿಗೆ ವಾಹನ ಮಾರಾಟ ಮಾಡಿದಾಗ ವಾಹನದ ದಾಖಲಾತಿಗಳು ವಾಹನ ಕೊಂಡವರ ಹೆಸರಿಗೆ ಬದಲಾವಣೆ ಆಗಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ವಾಹನ ದಾಖಲಾತಿಗಳು ಬದಲಾವಣೆ ಆಗದಿದ್ದಲ್ಲಿ ಸದರಿ ವಾಹನಕ್ಕೆ ಅಥವಾ ವಾಹನದಿಂದ ಅಪಘಾತವಾಗಲಿ, ಯಾವುದೇ ದುಷ್ಕøತ್ಯವಾಗಲಿ ನಡೆದಲ್ಲಿ ಆ ವಾಹನ ಮಾರಾಟ ಮಾಡಿದ ಮಾಲೀಕರೇ ಜವಾಬ್ದಾರರಾಗುತ್ತಾರೆ. ಒಂದು ವೇಳೆ ಕಾನೂನಿನ ಪ್ರಕಾರ ಶಿಕ್ಷೆಯಾದಲ್ಲಿ ಕಷ್ಟಪಡಬೇಕಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಲಬುರಗಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಪಿ.ಟಿ. ಕಟ್ಟಿಮನಿ, ಕಾಯಕ ಎಜ್ಯುಕೇಶನ್ ಟ್ರಸ್ಟಿನ ಸಂಸ್ಥಾಪಕ ಚನ್ನಾರೆಡ್ಡಿ ಪಾಟೀಲ, ಸಂಚಾರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಹಮೀದ ಪಟೇಲ್, ಮಾಹಿತಿ ಹಕ್ಕು ಕಾರ್ಯಕರ್ತರ ಸಂಘದ ಅಧ್ಯಕ್ಷ ಸಿದ್ರಾಮಯ್ಯ ಎಸ್. ಹಿರೇಮಠ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
ಜಾತಿ ವ್ಯವಸ್ಥೆ ನಿರ್ಮೂಲನೆಯಾಗದ ಹೊರತು ದೇಶದ ಅಭಿವೃದ್ಧಿ ಅಸಾಧ್ಯ
****************************************************************
ಕಲಬುರಗಿ,ಜು.27.(ಕ.ವಾ.)-ದೇಶದಲ್ಲಿ ಬೆಂಬಿಡದೆ ಬೂತದಂತಿರುವ ಜಾತಿ ಪದ್ಧತಿ ಅಭಿವೃದ್ಧಿಗೆ ಮಾರಕವಾಗಿದ್ದು, ಇದನ್ನು ಹೋಗಲಾಡಿಸದ ಹೊರತು ದೇಶದ ಅಭಿವೃದ್ಧಿ ಅಸಾಧ್ಯ ಎಂದು ಬೀದರ ಜಿಲ್ಲೆಯ ಬಸವಗಿರಿಯ ಬಸವ ಸೇವಾ ಪ್ರತಿಷ್ಠಾನದ ಪೂಜ್ಯ ಅಕ್ಕ ಅನ್ನಪೂರ್ಣ ತಾಯಿಯವರು ಹೇಳಿದರು.
ಅವರು ಶುಕ್ರವಾರ ಕಲಬುರಗಿ ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಸರ್ಕಾರದಿಂದ ಇದೇ ಪ್ರಥಮ ಬಾರಿಗೆ ಆಯೋಜಿಸಲಾದ ಶ್ರೀ ಶಿವಶರಣ ಹಡಪದ ಅಪ್ಪಣ್ಣನವರ ಜಯಂತ್ಯೋತ್ಸವ ಸಮಾರಂಭದಲ್ಲಿ ಉಪನ್ಯಾಸ ನೀಡುತ್ತ ಮಾತನಾಡಿದರು. ಬಸವಾದಿ ಶರಣರ ಪೂರ್ವ ಅಜ್ಞಾನದ ಕಾಲದಲ್ಲಿ ಪ್ರಾಣಿ, ಪಕ್ಷಿಗೆ ನೀಡುತ್ತಿದ್ದ ಗೌರವ ಮಾನವ ಕುಲಕ್ಕೆ ಇರಲಿಲ್ಲ. ಇಂತಹ ಸಂದರ್ಭದಲ್ಲಿ ಜ್ಞಾನದ ದೀಪವಾಗಿ ಬಂದ ವಿಶ್ವಗುರು ಬಸವಣ್ಣನವರು ಜಾತಿ ಪದ್ಧತಿ ಹೋಗಲಾಡಿಸಲು ಶ್ರಮಿಸುವ ಮೂಲಕ ದೀನ-ದಲಿತರಿಗೆ ಹಾಗೂ ಕಾಯಕಯೋಗಿ ಶರಣ ಸಂಕುಲಕ್ಕೆ ಆಶಾಕಿರಣವಾಗಿ ಹೊರಹೊಮ್ಮಿದರು ಎಂದರು.
ಬಸವಣ್ಣನವರಿಗೆ ಹಡಪದ ಅಪ್ಪಣ್ಣನವರು ತುಂಬಾ ಆಪ್ತರಾಗಿದ್ದರು. ಒಂದು ರೀತಿಯಲ್ಲಿ ಬಸವಣ್ಣ ಮತ್ತು ಹಡಪದ ಅಪ್ಪಣ್ಣನವರು ಎರಡು ದೇಹ ಒಂದೇ ಜೀವ ಇದ್ದಂತೆ, ಅಷ್ಟೊಂದು ಆತ್ಮೀಯತೆ ಅವರಲ್ಲಿತ್ತು. ಶರಣ ಹಡಪದ ಅಪ್ಪಣ್ಣ ಪ್ರಜಾಪ್ರಭುತ್ವವಾದಿಯಾಗಿದ್ದರು ಎಂಬುದಕ್ಕೆ ಅವರ ರಚಿಸಿದ ವಚನಗಳೆ ಸಾಕ್ಷಿಯಾಗಿವೆ. ಶರಣರ ಇಂತಹ ವಚನಗಳನ್ನು ಇಂದಿನ ಯುವ ಸಮುದಾಯ ಅಧ್ಯಯನ ಮಾಡುವುದಲ್ಲದೆ ತಮ್ಮ ಜೀವನದಲ್ಲಿ ಶರಣರ ಸಂದೇಶಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ಸರ್ಕಾರ ಇದೇ ಪ್ರಥಮ ಬಾರಿಗೆ ಶರಣ ಹಡಪದ ಅಪ್ಪಣ್ಣನವರ ಜಯಂತ್ಯೋತ್ಸವ ಆಚರಿಸುತ್ತಿರುವುದಕ್ಕೆ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದ ಅವರು ಹಡಪದ ಅಪ್ಪಣ್ಣನ ಕುಲ ಬಾಂಧವರು ತಮ್ಮ ಕ್ಷೌರಿಕ ಕಾಯಕದ ಬಗ್ಗೆ ಕೀಳರಿಮೆ ಬೇಡ. ಹನ್ನೆರಡನೇ ಶತಮಾನದಲ್ಲಿ ಪಾದರಕ್ಷೆ ತಯಾರಿಸುತ್ತಿದ್ದ ಸಮಗಾರ ಸಮುದಾಯದ ಹರಳಯ್ಯನಿಗೂ ಪ್ರಧಾನಮಂತ್ರಿಯಾಗಿದ್ದ ಬಸವಣ್ಣನವರಿಗೆ ಅನುಭವ ಮಂಟಪದಲ್ಲಿ ಯಾವುದೇ ವ್ಯತ್ಯಾಸವಿರಲಿಲ್ಲ ಎಂಬುದನ್ನು ನೀವು ಮನಗಾಣಿ ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ್ದ ಚಿತ್ತಾಪುರ ಕಂಬಳೇಶ್ವರ ಮಠದ ಪೂಜ್ಯ ಸೋಮಶೇಖರ ಶಿವಾಚಾರ್ಯರು ಆಶೀರ್ವಚನ ನೀಡುತ್ತ ಅನುಭವ ಮಂಟಪದಲ್ಲಿದ್ದ 776 ಶರಣರಲ್ಲಿ ಬಸವಣ್ಣನವರಿಗೆ ಅತ್ಯಂತ ಆಪ್ತರು ಹಡಪದ ಅಪ್ಪಣನವರು. ಇಂತಹ ಶರಣರ ಜೀವನ ಮತು ಮೌಲ್ಯ ಇಂದಿನ ಪೀಳಿಗೆಗೆ ಮರೀಚಿಕೆಯಾಗಿದ್ದು, ಅದನ್ನು ತಿಳಿಸುವಂತಹ ಕೆಲಸವಾಗಬೇಕಿದೆ ಎಂದರು.
ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಶರಣ ಹಡಪದ ಅಪ್ಪಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶಿಷ್ಠಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ ಉದ್ಘಾಟಿಸಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ಮರಗನಹಳ್ಳಿ ಸ್ವಾಗತಿಸಿದರೆ ಎಸ್.ಎಂ.ಭಕ್ತಕುಂಬಾರ ನಿರೂಪಿಸಿದರು. ಹಡಪದ ಸಮಾಜದ ಜಿಲ್ಲಾಧ್ಯಕ್ಷ ಈರಣ್ಣ ಸಿ.ಹಡಪದ ಪ್ರಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ಸದಾಶಿವ ವಾಡಿ, ನರಸಪ್ಪ ಬ್ಯಾಡಿಯಾಳ, ಸುಭಾಷ ಸೊನ್ನ, ಈರಣ್ಣ ಗಿರೂರ, ಎಸ್.ಕೆ.ತೆಲ್ಲೂರ, ಚನ್ನಬಸವ ಉಡಗಿ, ಬಸವರಾಜ ಸೂಗೂರ, ಮಹಾರುದ್ರಪ್ಪ ಮರತೂರ, ಮಲ್ಲಿಕಾರ್ಜುನ ಮಾನೆ ಸೇರಿದಂತೆ
ಸಮಾಜದ ಇನ್ನಿತರ ಗಣ್ಯರು ಜಿಲ್ಲೆಯ ವಿವಿಧ ಭಾಗದಿಂದ ಆಗಮಿಸಿದ ಸಮಾಜ ಬಾಂಧವರು ಭಾಗವಹಿಸಿದ್ದರು. ಕಲಾವಿದೆ ಶಿಲ್ಪಾ ಗುರುರಾಜ ಹಾಗರಗುಂಡಗಿ ಹಾಗೂ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಇದಕ್ಕು ಮುನ್ನ ನಗರೇಶ್ವರ ಶಾಲೆಯಿಂದ ಡಾ.ಎಸ್.ಎಂ.ಪಂಡಿತ ರಂಗಮಂದಿರ ವರೆಗೆ ಶರಣ ಹಡಪದ ಅಪ್ಪಣ್ಣನವರ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಿತು.
ಯಶಸ್ವಿಯಾಗಿ ನಡೆದ ಕಲಾವಿದರ ಆಯ್ಕೆ ಪ್ರಕ್ರಿಯೆ
********************************************
ಕಲಬುರಗಿ,ಜು.27.(ಕ.ವಾ.)-ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ 2018-19ನೇ ಸಾಲಿನ ಪ್ರಾಯೋಜನೆಯಡಿ ಕಲಾವಿದರಿಗೆ ಕಾರ್ಯಕ್ರಮ ನೀಡುವ ಸಂಬಂಧ ಜುಲೈ 25 ಮತ್ತು 26 ರಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಆವರಣದಲ್ಲಿ ಕಲಾವಿದರ ಆಯ್ಕೆ ಪ್ರಕ್ರಿಯೆ ಯಶಸ್ವಿಯಾಗಿ ಜರುಗಿತು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರ ನೇತೃತ್ವದ ಆಯ್ಕೆ ಸಮಿತಿ ಮುಂದೆ ಕಲಾವಿದರ ಆಯ್ಕೆಗೆ ಅರ್ಜಿ ಸಲ್ಲಿಸಿದ ಜಿಲ್ಲೆಯ ವಿವಿಧ ಕಲಾ ತಂಡಗಳು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದರು.
ಜಾನಪದ ಸಂಗೀತ, ಸುಗಮ ಸಂಗೀತ, ತತ್ವಪದ, ಕೊಳಲು ವಾದನ, ಭಜನೆ ಹಾಡುಗಳು, ಭರತನಾಟ್ಯ, ನಾಟಕ, ಬಯಲಾಟ, ಗೀಗಿ ಪದ, ಡೊಳ್ಳು ಕುಣಿತ ಇತ್ಯಾದಿ ಕಲಾ ಪ್ರಕಾರಗಳನ್ನು ಕಲಾ ತಂಡಗಳು ಪ್ರದರ್ಶಿಸಿದರು.
ಜುಲೈ 30ರಂದು ನರೋಣಾದಲ್ಲಿ ಕುಸ್ತಿ ಪಂದ್ಯಾವಳಿ ಉದ್ಘಾಟನೆ
*******************************************************
ಕಲಬುರಗಿ,ಜು.27.(ಕ.ವಾ.)-ಕಲಬುರಗಿ ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮ ಮತ್ತು ಡಾ. ಅಂಬೇಡ್ಕರ ಕ್ರಾಂತಿಕಾರಿ ಯುವ ಸಂಘ ನರೋಣಾ ಇವುಗಳ ಸಂಯುಕ್ತಾಶ್ರಯದಲ್ಲಿ 17 ವರ್ಷದೊಳಗಿನ ಯುವಕರ ಕುಸ್ತಿ ಪಂದ್ಯಾವಳಿಯನ್ನು ಜುಲೈ 30 ರಂದು ಬೆಳಿಗ್ಗೆ 11 ಗಂಟೆಗೆ ಆಳಂದ ತಾಲೂಕಿನ ನರೋಣಾ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಲಾಗಿದೆ.
ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಬಿ. ಮತ್ತಿಮೂಡ ಅವರು ಕುಸ್ತಿ ಪಂದ್ಯಾವಳಿವನ್ನು ಉದ್ಘಾಟಿಸುವರು. ನರೋಣಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶರಣಮ್ಮ ಬಾಳ್ವಿ ಅಧ್ಯಕ್ಷತೆ ವಹಿಸಲಿದ್ದಾರೆ. ಆಳಂದ ತಹಶೀಲ್ದಾರ ಬಸವರಾಜ ಬೆಣ್ಣೆ ಶಿರೂರ, ಜಿಲ್ಲಾ ಪಂಚಾಯಿತಿ ಸದಸ್ಯರು, ತಾಲೂಕು ಪಂಚಾಯಿತಿ ಸದಸ್ಯರು, ಉಪಾಧ್ಯಕ್ಷರು, ಹಿರಿಯ ಮುಖಂಡರು, ಗ್ರಾಮದ ಮುಖಂಡರು ಸೇರಿದಂತೆ ಮತ್ತಿತರ ಗಣ್ಯ ವ್ಯಕ್ತಿಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಆಗಸ್ಟ್ 23 ಹಾಗೂ24 ರಂದು ಮೈಸೂರಿನಲ್ಲಿ ಡಿಫೆನ್ಸ್ ಅದಾಲತ್
********************************************************
ಕಲಬುರಗಿ,ಜು.27.(ಕ.ವಾ.)-ಉತ್ತರ ಪ್ರದೇಶದ ಅಲಹಾಬಾದ ಡಿಫೆನ್ಸ್ ಅಧಿಕಾರಿಗಳು ಡಿಪೆನ್ಸ್ ನೌಕರರ ಪಿಂಚಣಿ ಸಂಬಂಧ ಕುಂದುಕೊರತೆ ಆಲಿಸಲು 2018ರ ಆಗಸ್ಟ್ 23 ಮತ್ತು 24 ರಂದು ಮೈಸೂರಿನಲ್ಲಿ ಡಿಫೆನ್ಸ್ ಅದಾಲತ್ ಆಯೋಜಿಸಲಾಗಿದೆ. ಡಿಫೆನ್ಸ್ ಪಿಂಚಣಿಗೆ ಸಂಬಂಧಿಸಿದಂತೆ ಏನಾದರು ತೊಂದರೆಯಿದ್ದಲ್ಲಿ ಬಾಧಿತರು ಇದರಲ್ಲಿ ಈ ಅದಾಲತ್‍ನಲ್ಲಿ ಭಾಗವಹಿಸಬಹುದಾಗಿದೆ ಎಂದು ಕಲಬುರಗಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಕಲಬುರಗಿ ಉಪನಿರ್ದೇಶಕರು ಪ್ರಕಟಣೆಯಲ್ಲಿ
ಅದಾಲತ್‍ನಲ್ಲಿ ಭಾಗವಹಿಸಲು ತರಬೇಕಾದ ದಾಖಲೆ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಮಿನಿ ವಿಧಾನಸೌಧದಲ್ಲಿನ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-225003ನ್ನು ಸಂಪರ್ಕಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಡಳಿತ ನ್ಯಾಯಾಧೀಕರಣ ತರಬೇತಿ: ಆನ್‍ಲೈನ್ ಅರ್ಜಿ ಆಹ್ವಾನ
*********************************************************
ಕಲಬುರಗಿ,ಜು.27.(ಕ.ವಾ.)-ಕಲಬುರಗಿ ಸಮಾಜ ಕಲ್ಯಾಣ ಕಲ್ಯಾಣ ಇಲಾಖೆಯಿಂದ 2018-19ನೇ ಸಾಲಿನಲ್ಲಿ ನಾಲ್ಕು ವರ್ಷದ ಆಡಳಿತ ನ್ಯಾಯಾಧೀಕರಣ ತರಬೇತಿಗಾಗಿ ಅರ್ಹ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಾನೂನು ಪದವಿಧರರಿಂದ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದ, ವಾರ್ಷಿಕ ಆದಾಯ 2 ಲಕ್ಷ ರೂ. ಮೀರಿರದ ಹಾಗೂ 40 ವರ್ಷ ವಯೋಮಿತಿ ಮೀರಿರದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ಅಭ್ಯರ್ಥಿಗಳು ಇಲಾಖೆಯ ತಿತಿತಿ.sತಿ.ಞಚಿಡಿ.ಟಿiಛಿ.iಟಿ ವೆಬ್‍ಸೈಟ್‍ನಲ್ಲಿ ಅನ್‍ಲೈನ್ ಮೂಲಕ 2018ರ ಆಗಸ್ಟ್ 10ರೊಳಗಾಗಿ ಅರ್ಜಿ ಸಲ್ಲಿಸಿ, ಅರ್ಜಿಯ ಹಾರ್ಡ್ ಪ್ರತಿಯನ್ನು ಅವಶ್ಯಕ ದಾಖಲಾತಿಗಳೊಂದಿಗೆ ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಸಲ್ಲಿಸಬೇಕು. ಅಪೂರ್ಣವಾದ ಹಾಗೂ ತಡವಾಗಿ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೆಟ್ರಿಕ್ ನಂತರ ವಿದ್ಯಾರ್ಥಿ ನಿಲಯ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
*********************************************************
ಕಲಬುರಗಿ,ಜು.27.(ಕ.ವಾ.)-ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 2018-19ನೇ ಸಾಲಿಗೆ ಮೆಟ್ರಿಕ್ ನಂತರದ ಬಾಲಕ/ಬಾಲಕಿಯರ ವೃತ್ತಿಪರ, ಸ್ನಾತಕೋತ್ತರ, ನರ್ಸಿಂಗ ಮತ್ತು ಇಂಜಿನಿಯರಿಂಗ್ ಮತ್ತು ವೈದ್ಯಕೀಯ ವಿದ್ಯಾರ್ಥಿ ನಿಲಯಗಳಲ್ಲಿ ಹೊಸದಾಗಿ ಪ್ರವೇಶ ಪಡೆಯಲು ಪ್ರವರ್ಗ-1, 2ಎ, 3ಬಿ, 3ಎ, 3ಬಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಮತ್ತು ಇತರೆ ಹಿಂದುಳಿದ ವರ್ಗಕ್ಕೆ ಸೇರಿದ ಅರ್ಹ ವಿದ್ಯಾರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರವರ್ಗ-1, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯ ಮಿತಿ 2.50 ಲಕ್ಷ ರೂ. ಹಾಗೂ ಪ್ರವರ್ಗ-2ಎ, 2ಬಿ, 3ಎ, 3ಬಿ, ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯ ಮಿತಿ 1 ಲಕ್ಷ ರೂ. ದೊಳಗಿರಬೇಕು. ಇಲಾಖೆಯ ತಿತಿತಿ.bಚಿಛಿಞತಿಚಿಡಿಜಛಿಟಚಿsses.ಞಚಿಡಿ.ಟಿiಛಿ.iಟಿ ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಮೂಲಕ ಆಗಸ್ಟ್ 24 ರೊಳಗೆ ಅರ್ಜಿ ಸಲ್ಲಿಸಬೇಕು.
ತಾಲೂಕುವಾರು ವಿದ್ಯಾರ್ಥಿ ನಿಲಯಗಳ ವಿವರ ಹಾಗೂ ವಿದ್ಯಾರ್ಥಿ ನಿಲಯದ ಪ್ರವೇಶಕ್ಕೆ ಇರಬೇಕಾದ ಅರ್ಹತೆ, ಸಲ್ಲಿಸಬೇಕಾದ ದಾಖಲೆ ಮತ್ತು ಸರ್ಕಾರದ ಆದೇಶಕ್ಕಾಗಿ ಇಲಾಖೆಯ ವೆಬ್‍ಸೈಟ್‍ನ್ನು ಸಂಪರ್ಕಿಸಬಹುದಾಗಿದೆ. ಅರ್ಜಿ ಸಲ್ಲಿಸಲು ತಾಂತ್ರಿಕ ತೊಂದರೆಗಳಾದಲ್ಲಿ bಛಿತಿhosಣeಟಚಿಜmissioಟಿ.gmಚಿiಟ.ಛಿom ಇ-ಮೇಲ್ ಮುಖಾಂತರ ಅಥವಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ/ ತಾಲೂಕು ಅಧಿಕಾರಿಗಳನ್ನು ಅಗತ್ಯ ದಾಖಲಾತಿ, ಸಹಾಯವಾಣಿ ಸಂಖ್ಯೆ 805037006ನ್ನು ಸಂಪರ್ಕಿಸಲು ಕೋರಲಾಗಿದೆ.
ಖಾಜಾ ಬಂದೇನವಾಜ್ ಉರುಸ್: ಹೆಚ್ಚುವರಿ ಬಸ್‍ಗಳ ವ್ಯವಸ್ಥೆ
******************************************************
ಕಲಬುರಗಿ,ಜು.27.(ಕ.ವಾ.)-ಕಲಬುರಗಿಯ ಹಜರತ್ ಖಾಜಾ ಬಂದೇ ನವಾಜ್ ಉರುಸು (ಉರುಸ್-ಎ-ಶರೀಫ್) ಹಿನ್ನೆಲೆಯಲ್ಲಿ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಇದೇ ಜುಲೈ 28 ರಿಂದ 30ರವರೆಗೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕಲಬುರಗಿ ವಿಭಾಗ-1 ರಿಂದ ಕಲಬುರಗಿಯಿಂದ ವಿವಿಧ ಮಾರ್ಗಗಳಲ್ಲಿ ಸಂಚಾರಕ್ಕಾಗಿ ಹೆಚ್ಚುವರಿ ವಿಶೇಷ ಬಸ್‍ಗಳ ವ್ಯವಸ್ಥೆ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್.ಸಿ. ಬಸವರಾಜಪ್ಪ ತಿಳಿಸಿದ್ದಾರೆ.
ಕಲಬುರಗಿ-ಹೈದ್ರಾಬಾದ್ ವ್ಹಾಯಾ ಜಹೀರಾಬಾದ, ಕಲಬುರಗಿ- ಹೈದ್ರಾಬಾದ್ ವ್ಹಾಯಾ ಸೇಡಂ-ಕೊಂಡಗಲ್, ಕಲಬುರಗಿ-ಮೆಹಬೂಬ್ ನಗರ, ಕಲಬುರಗಿ-ಬೀದರ, ಕಲಬುರಗಿ-ವಿಜಯಪುರ ಹಾಗೂ ಕಲಬುರಗಿಯಿಂದ ಸೇಡಂ, ಚಿಂಚೋಳಿ, ಚಿತ್ತಾಪುರ ಮತ್ತು ಕಾಳಗಿ ಮತ್ತಿತರ ಮುಖ್ಯ ಸ್ಥಳಗಳಿಗೆ ಹೆಚ್ಚುವರಿ ಬಸ್‍ಗಳನ್ನು ಕಲ್ಪಿಸಲಾಗಿದೆ. ಸಾರ್ವಜನಿಕರು, ಯಾತ್ರಾರ್ಥಿಗಳು ಇದರ ಸದುಪಯೋಗ ಪಡೆಯಬೇಕೆಂದು ಅವರು ಕೋರಿದ್ದಾರೆ.
ಶುಲ್ಕ ಭರಿಸಿ ಸೈಕಲ್ ಬಳಕೆಗೆ ಅವಕಾಶ
***********************************
ಕಲಬುರಗಿ,ಜು.27.(ಕ.ವಾ.)-ಕ್ರೀಡಾಪಟುಗಳು ಮತ್ತು ಸಾರ್ವಜನಿಕರು ತಮ್ಮ ಆರೋಗ್ಯದ ಹಿತದೃಷ್ಟಿಯಿಂದ ದೈಹಿಕ ಸದೃಢತೆ ಕಾಪಾಡಿಕೊಳ್ಳಲು ಕಲಬುರಗಿ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಸೈಕಲ್‍ಗಳನ್ನು ಪ್ರತಿದಿನ ಬೆಳಿಗ್ಗೆ 6.30 ರಿಂದ 9.30 ಗಂಟೆಯವರೆಗೆ ನಿಗದಿತ ಶುಲ್ಕ ಪಾವತಿಸಿ ಬಳಸಲು ಅವಕಾಶ ನೀಡಲಾಗಿದೆ ಎಂದು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ: 08472-268637 ಅಥವಾ ಫಿಟನೆಸ್ ಟ್ರೇನರ್ ಸುರೇಶ ಲೋಕಾಪುರ ಇವರ ಮೊಬೈಲ್ ಸಂಖ್ಯೆ 8105430549 ಸಂಪರ್ಕಿಸಬೇಕೆಂದು ಅವರು ತಿಳಿಸಿದ್ದಾರೆ.
ಸಹಾಯಕ ನಿರ್ದೇಶಕರಾಗಿ ಕೊಟ್ರೇಶ್ ಮರಬನಳ್ಳಿ ಅಧಿಕಾರ ಸ್ವೀಕಾರ
************************************************************
ಕಲಬುರಗಿ,ಜು.27.(ಕ.ವಾ.)-ಕಲಬುರಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಕೊಟ್ರೇಶ್ ಮರಬನಳ್ಳಿ ಅವರು ಜುಲೈ 25ರಂದು ಅಧಿಕಾರ ಸ್ವೀಕರಿಸಿದ್ದಾರೆ. ಇಲಾಖೆಯ ಯೋಜನೆಗಳಿಗೆ ಸಂಬಂಧಿಸಿದಂತೆ ಪತ್ರ ವ್ಯವಹಾರವನ್ನು ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಡಾ. ಸಿದ್ಧಯ್ಯ ಪುರಾಣಿಕ ಸುವರ್ಣಾ ಸಾಂಸ್ಕøತಿಕ ಸಮಚ್ಛಯ, ಸೇಡಂ-ಶಹಾಬಾದ ವರ್ತುಲ ರಸ್ತೆ ಕಲಬುರಗಿ-585105 ಈ ವಿಳಾಸಕ್ಕೆ ವ್ಯವಹರಿಸಲು ಕೋರಲಾಗಿದೆ.







ಹೀಗಾಗಿ ಲೇಖನಗಳು News and Photo Date: 27-7-2018

ಎಲ್ಲಾ ಲೇಖನಗಳು ಆಗಿದೆ News and Photo Date: 27-7-2018 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ News and Photo Date: 27-7-2018 ಲಿಂಕ್ ವಿಳಾಸ https://dekalungi.blogspot.com/2018/07/news-and-photo-date-27-7-2018.html

Subscribe to receive free email updates:

0 Response to "News and Photo Date: 27-7-2018"

ಕಾಮೆಂಟ್‌‌ ಪೋಸ್ಟ್‌ ಮಾಡಿ