ಸ್ವಚ್ಛ ಸರ್ವೇಕ್ಷಣ ಗ್ರಾಮೀಣ ಜನಾಂದೋಲನ ಯಶಸ್ವಿಗೊಳಿಸಿ : ರವಿ ಬಸರಿಹಳ್ಳಿ

ಸ್ವಚ್ಛ ಸರ್ವೇಕ್ಷಣ ಗ್ರಾಮೀಣ ಜನಾಂದೋಲನ ಯಶಸ್ವಿಗೊಳಿಸಿ : ರವಿ ಬಸರಿಹಳ್ಳಿ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಸ್ವಚ್ಛ ಸರ್ವೇಕ್ಷಣ ಗ್ರಾಮೀಣ ಜನಾಂದೋಲನ ಯಶಸ್ವಿಗೊಳಿಸಿ : ರವಿ ಬಸರಿಹಳ್ಳಿ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಸ್ವಚ್ಛ ಸರ್ವೇಕ್ಷಣ ಗ್ರಾಮೀಣ ಜನಾಂದೋಲನ ಯಶಸ್ವಿಗೊಳಿಸಿ : ರವಿ ಬಸರಿಹಳ್ಳಿ
ಲಿಂಕ್ : ಸ್ವಚ್ಛ ಸರ್ವೇಕ್ಷಣ ಗ್ರಾಮೀಣ ಜನಾಂದೋಲನ ಯಶಸ್ವಿಗೊಳಿಸಿ : ರವಿ ಬಸರಿಹಳ್ಳಿ

ಓದಿ


ಸ್ವಚ್ಛ ಸರ್ವೇಕ್ಷಣ ಗ್ರಾಮೀಣ ಜನಾಂದೋಲನ ಯಶಸ್ವಿಗೊಳಿಸಿ : ರವಿ ಬಸರಿಹಳ್ಳಿ



ಕೊಪ್ಪಳ ಜು. 31 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಆಗಸ್ಟ್. 01 ರಿಂದ 31 ರವರೆಗೆ "ಸ್ವಚ್ಛ ಸರ್ವೇಕ್ಷಣ ಗ್ರಾಮೀಣ" ಜನಾಂದೋಲನ ಹಮ್ಮಿಕೊಂಡಿದ್ದು, ಈ ಆಂದೋಲನವನ್ನು ಯಶಸ್ವಿಗೊಳಿಸಿ, ಜಿಲ್ಲೆಗೆ ಒಳ್ಳೆಯ ಹೆಸರು ತಂದುಕೊಡಲು ಅಧಿಕಾರಿಗಳು ಶ್ರಮಿಸಬೇಕು  ಎಂದು ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ ಅವರು ಹೇಳಿದರು. 

    ಸ್ವಚ್ಛ ಸರ್ವೇಕ್ಷಣ ಗ್ರಾಮೀಣ ಕಾರ್ಯಕ್ರಮಗಳ ಆಯೋಜನೆ ಕುರಿತು ಜಿಲ್ಲಾ ಮತ್ತು ತಾಲೂಕ ಮಟ್ಟದ ಅಧಿಕಾರಿಗಳಿಗೆ ಜಿ.ಪಂ. ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಮಂಗಳವಾರದಂದು ಹಮ್ಮಿಕೊಳ್ಳಲಾದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  

    ಗ್ರಾಮೀಣ ನೈರ್ಮಲ್ಯವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಮಂತ್ರಾಲಯವು ಸ್ವಚ್ಛ ಸರ್ವೇಕ್ಷಣ ಗ್ರಾಮೀಣ ಜನಾಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಬೃಹತ್ ಪ್ರಮಾಣದಲ್ಲಿ ನಾಗರೀಕರು ಸ್ವಚ್ಛ ಭಾರತ್ ಅಭಿಯಾನದಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸುವುದು, ಶುಚಿತ್ವ, ಸ್ವಚ್ಛತೆ ಹಾಗೂ ನೈರ್ಮಲ್ಯದ ಮಹತ್ವದ ಬಗ್ಗೆ ಗ್ರಾಮೀಣ ಸಮುದಾಯದಲ್ಲಿ ಅರಿವು ಮೂಡಿಸುವುವುದು ಈ ಸರ್ವೇಕ್ಷಣೆಯ ಮುಖ್ಯ ಉದ್ದೇಶವಾಗಿದೆ.  ಯೋಜನೆಯಡಿ ಸಾಧಿಸಿದ ಕಾರ್ಯಕ್ಷಮತೆಯ ಆಧಾರದ ಮೇಲೆ ಸಮಗ್ರ ಶುಚ್ಚಿತ್ವವನ್ನು ಸಾಧಿಸಿದ ರಾಜ್ಯ ಹಾಗೂ ಜಿಲ್ಲೆಗಳಿಗೆ ಅಕ್ಟೋಬರ್. 02 ರಂದು ಶ್ರೇಣಿಯನ್ನು ನೀಡಲಾಗುತ್ತಿದೆ.  ಈ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲಾ ಪಂಚಾಯತ್ ಸ್ವಚ್ಛ ಭಾರತ ಮಿಷನ್ (ಗ್ರಾಮಿಣ) ವತಿಯಿಂದ ಸ್ವಚ್ಛ ಸರ್ವೇಕ್ಷಣ ಕಾರ್ಯಕ್ರಮವನ್ನು ಆ. 01 ರಂದು ಜಿಲ್ಲಾ ಹಂತದಲ್ಲಿ ಚಾಲನೆ ನೀಡಲಾಗುವುದು.  ಆ. 02 ಮತ್ತು 03 ರಂದು ಜಿಲ್ಲೆಯ ಎಲ್ಲಾ ತಾಲೂಕ ಹಾಗೂ ಗ್ರಾ.ಪಂ. ಮಟ್ಟಗಳಲ್ಲಿ ಚಾಲನೆ.  ಆ. 04 ರಂದು ಸ್ವಚ್ಛತೆ ಮತ್ತು ನೈರ್ಮಲ್ಯ ಕುರಿತು ಜಾಥಾ ಕಾರ್ಯ.  05 ರಂದು ಶಾಲಾ ಮಕ್ಕಳಿಗೆ ಹ್ಯಾಂಡ್ ವಾಷಿಕ್ ಕುರಿತು ಅರಿವು, ಆ. 06 ರಿಂದ ಸ್ವಚ್ಛತಾ ಶ್ರಮದಾನ, ಸಸಿ ನಡೆಯುವ ಹಾಗೂ ಇತರೆ ಸಾಮಾಜಿಕ ಚಟುವಟಿಕೆಗಳು ಆ. 15 ರವರೆಗೆ ಮೊದಲನೇ ಹಂತದಲ್ಲಿ ಮತ್ತು ನಂತರ ಆ. 31 ರವರೆಗೆ ಎರಡನೇ ಹಂತದಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಲಿವೆ.  ಮುಖ್ಯವಾಗಿ ಆ. 15 ರಂದು ಬೈಸಿಕಲ್ ಜಾಥಾ ಕಾರ್ಯಕ್ರಮ ನಡೆಯಲಿದೆ. 
    ಸ್ವಚ್ಛ ಸರ್ವೇಕ್ಷಣ ಕಾರ್ಯಕ್ರಮದಡಿ ಶಿಕ್ಷಣ ಇಲಾಖೆಯು ಜಿಲ್ಲೆಯ ವಸತಿ ಶಾಲೆಗಳು ಸೇರಿ ಎಲ್ಲಾ ಶಾಲೆಗಳಲ್ಲಿ ಪ್ರತಿನಿತ್ಯ ಸ್ವಚ್ಛತಾ ನಿರ್ವಹಣೆ ಕಾರ್ಯ ನಡೆಸಬೇಕು.  ಬೆಳಿಗ್ಗೆ ಪ್ರಾಥನಾ ಸಮಯದಲ್ಲಿ ಸ್ವಚ್ಛತೆ ಕುರಿತು ಅರಿವು ಮೂಡಿಸಬೇಕು.  ಶಾಲೆಗಳಲ್ಲಿ ಚರ್ಚಾ ಸ್ಪರ್ಧೆ, ಚಿತ್ರಕಲೆ, ಸೇರಿ ಒಟ್ಟು 05 ಸ್ಪರ್ಧೆಗಳನ್ನು ಏರ್ಪಡಿಸಬೇಕು.  ಪ್ರತಿ ಸ್ಪರ್ಧೆಗೆ ಪ್ರಥಮ ಮತ್ತು ದ್ವಿತೀಯ ಪ್ರಶಸ್ತಿ ಪತ್ರವನ್ನು ನೀಡಬೇಕು.  ಪ್ಲಾಸ್ಟಿಕ್ ನಿಷೇದ ಕುರಿತು ಜಾಗೃತಿ ಜಾಥಾ ಹಾಗೂ ಅರಿವು ಕಾರ್ಯಕ್ರಮದ ಜೊತೆಗೆ ಪ್ರಾತ್ಯೇಕ್ಷಿಕ ಕಾರ್ಯಕ್ರಮಗಳು ನಡೆಯಬೇಕು.  ಹಸಿ ಮತ್ತು ಒಣ ಕಸ ನಿರ್ವಹಣೆಗೆ ಪ್ರತ್ಯೆಕ ಪರ್ಯಾಯ ವ್ಯವಸ್ಥೆ ಕೈಗೊಂಡು ಶಾಲಾ ಆವರಣವನ್ನು ಸ್ವಚ್ಛಗೊಳಿಸಬೇಕು.  ಶಾಲೆಯಲ್ಲಿ ಮಕ್ಕಳ ಸಂಸತ್ ರಚನೆಯಾಗಿದೆಯೇ ಇಲ್ಲದಿದ್ದರೆ ಕೂಡಲೇ ರಚಿಸಿ, ಸ್ವಚ್ಛತಾ ಕುರಿತು ಮಕ್ಕಳ ಸಭೆ ನಡೆಸಬೇಕು.  ಶೈಕ್ಷಣಿಕ ಚಟುವಟಿಗಳ ಜೊತೆ ಸ್ವಚ್ಛತೆಗಾಗಿ ಸಾಮಾಜಿಕ ಕಾರ್ಯಕ್ಕೂ ಸಹ ಆಧ್ಯತೆ ನಿಡಿ.  "ಉತ್ತಮ ಸ್ವಚ್ಛತಾ ನಿರ್ವಹಣಾ ಶಾಲಾ ಪ್ರಶಸ್ತಿ"ಯನ್ನು ನೀಡಲಾಗುವುದು.  ಶೌಚಾಲಯ ಸ್ವಚ್ಛತೆ, ಬಳಕೆ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು ಆರೋಗ್ಯ ಇಲಾಖೆಯು ಜಾಥಾ ಕಾರ್ಯಕ್ರಮಗಳನ್ನು ಆಯೋಜಿಸಬೇಕು.  ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಸಸಿ ನಡೆಸಲು ಅವಕಾಶ ವಿದ್ದಲ್ಲಿ ಅಂತಹ ಶಾಲಾ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ವಿವಿಧ ಸಸಿಗಳನ್ನು ನಡುವಂತೆ ಅರಣ್ಯ ಇಲಾಖೆಯು ಸಹಕರಿಸಬೇಕು ಎಂದು ಜಿ.ಪಂ. ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ ಅವರು ಹೇಳಿದರು.
    ಕಾರ್ಯಾಗಾರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ಹೆಚ್. ಸೇರಿದಂತೆ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪಿಡಿಒಗಳು, ಜಿಲ್ಲಾ ಹಾಗೂ ತಾಲೂಕ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.


ಹೀಗಾಗಿ ಲೇಖನಗಳು ಸ್ವಚ್ಛ ಸರ್ವೇಕ್ಷಣ ಗ್ರಾಮೀಣ ಜನಾಂದೋಲನ ಯಶಸ್ವಿಗೊಳಿಸಿ : ರವಿ ಬಸರಿಹಳ್ಳಿ

ಎಲ್ಲಾ ಲೇಖನಗಳು ಆಗಿದೆ ಸ್ವಚ್ಛ ಸರ್ವೇಕ್ಷಣ ಗ್ರಾಮೀಣ ಜನಾಂದೋಲನ ಯಶಸ್ವಿಗೊಳಿಸಿ : ರವಿ ಬಸರಿಹಳ್ಳಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಸ್ವಚ್ಛ ಸರ್ವೇಕ್ಷಣ ಗ್ರಾಮೀಣ ಜನಾಂದೋಲನ ಯಶಸ್ವಿಗೊಳಿಸಿ : ರವಿ ಬಸರಿಹಳ್ಳಿ ಲಿಂಕ್ ವಿಳಾಸ https://dekalungi.blogspot.com/2018/07/blog-post_98.html

Subscribe to receive free email updates:

0 Response to "ಸ್ವಚ್ಛ ಸರ್ವೇಕ್ಷಣ ಗ್ರಾಮೀಣ ಜನಾಂದೋಲನ ಯಶಸ್ವಿಗೊಳಿಸಿ : ರವಿ ಬಸರಿಹಳ್ಳಿ"

ಕಾಮೆಂಟ್‌‌ ಪೋಸ್ಟ್‌ ಮಾಡಿ