ಶೀರ್ಷಿಕೆ : ಹಜರತ್ ಸೈಯದ್ ಶ್ಯಾಮಿದಲಿ ಉರುಸು : ಮದ್ಯಪಾನ ನಿಷೇಧ ಜಾರಿ
ಲಿಂಕ್ : ಹಜರತ್ ಸೈಯದ್ ಶ್ಯಾಮಿದಲಿ ಉರುಸು : ಮದ್ಯಪಾನ ನಿಷೇಧ ಜಾರಿ
ಹಜರತ್ ಸೈಯದ್ ಶ್ಯಾಮಿದಲಿ ಉರುಸು : ಮದ್ಯಪಾನ ನಿಷೇಧ ಜಾರಿ
ಕೊಪ್ಪಳ ಜು. 30 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕು ತಾವರಗೇರಾ ಪಟ್ಟಣದ ಹಜರತ್ ಸೈಯದ್ ಶ್ಯಾಮಿದಲಿ ದರ್ಗಾ ಉರುಸು ಆಚರಣೆಯ ನಿಮಿತ್ಯ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮದ್ಯಪಾನ ನಿಷೇಧಿಸಿ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಆದೇಶ ಹೊರಡಿಸಿದ್ದಾರೆ.
ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿ ಹಜರತ್ ಸೈಯದ್ ಶ್ಯಾಮಿದಲಿ ದರ್ಗಾ ಉರುಸು ಜರುಗುತ್ತಿದ್ದು, ಆಚರಣೆಯ ಸಮಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಜು. 29ರ ಸಾಯಂಕಾಲ 06 ಗಂಟೆಯಿಂದ, ಜು. 31ರ ಬೆಳಿಗ್ಗೆ 06 ಗಂಟೆಯವರೆಗೆ ತಾವರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 21ರನ್ವಯ ಮದ್ಯಪಾನ ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಈ ಸಂಬಂಧವಾಗಿ ಅಬಕಾರಿ ಉಪ ಆಯುಕ್ತರ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಿ, ಅದರಲ್ಲಿ ಆರಕ್ಷಕ ವೃತ್ತ ನಿರೀಕ್ಷಕರು, ಅಬಕಾರಿ ವೃತ್ತ ನಿರೀಕ್ಷಕರು, ಕಾರ್ಯನಿರ್ವಹಿಸಲು ಆದೇಶಿಸಿದೆ. ಈ ಆದೇಶವನ್ನು ಜಾರಿಗೆ ತರುವಲ್ಲಿ ನಿರ್ಲಕ್ಷತನ ತೋರಿದವರ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಹಜರತ್ ಸೈಯದ್ ಶ್ಯಾಮಿದಲಿ ಉರುಸು : ಮದ್ಯಪಾನ ನಿಷೇಧ ಜಾರಿ
ಎಲ್ಲಾ ಲೇಖನಗಳು ಆಗಿದೆ ಹಜರತ್ ಸೈಯದ್ ಶ್ಯಾಮಿದಲಿ ಉರುಸು : ಮದ್ಯಪಾನ ನಿಷೇಧ ಜಾರಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಹಜರತ್ ಸೈಯದ್ ಶ್ಯಾಮಿದಲಿ ಉರುಸು : ಮದ್ಯಪಾನ ನಿಷೇಧ ಜಾರಿ ಲಿಂಕ್ ವಿಳಾಸ https://dekalungi.blogspot.com/2018/07/blog-post_75.html
0 Response to "ಹಜರತ್ ಸೈಯದ್ ಶ್ಯಾಮಿದಲಿ ಉರುಸು : ಮದ್ಯಪಾನ ನಿಷೇಧ ಜಾರಿ"
ಕಾಮೆಂಟ್ ಪೋಸ್ಟ್ ಮಾಡಿ