ಶೀರ್ಷಿಕೆ : ದ್ರಾಕ್ಷಿ ಬೆಳೆಗೆ ವಿವಿಧ ಕೀಟ ಹಾಗೂ ರೋಗ ಬಾಧೆ : ನಿರ್ವಹಣೆಗೆ ಸಲಹೆಗಳು
ಲಿಂಕ್ : ದ್ರಾಕ್ಷಿ ಬೆಳೆಗೆ ವಿವಿಧ ಕೀಟ ಹಾಗೂ ರೋಗ ಬಾಧೆ : ನಿರ್ವಹಣೆಗೆ ಸಲಹೆಗಳು
ದ್ರಾಕ್ಷಿ ಬೆಳೆಗೆ ವಿವಿಧ ಕೀಟ ಹಾಗೂ ರೋಗ ಬಾಧೆ : ನಿರ್ವಹಣೆಗೆ ಸಲಹೆಗಳು
ಕೊಪ್ಪಳ ಜು. 30 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಸದ್ಯ ಮಳೆಯ ಕೊರತೆಯಾಗಿದ್ದು, ದ್ರಾಕ್ಷಿ ಬೆಳೆಗೆ ವಿವಿಧ ಕೀಟ ಹಾಗೂ ರೋಗಬಾಧೆ ಕಂಡುಬಂದಿದೆ. ಹೀಗಾಗಿ ಇಂತಹ ಸಂದರ್ಭದಲ್ಲಿ ದ್ರಾಕ್ಷಿ ಬೆಳೆ ನಿರ್ವಹಣೆಗೆ ರೈತರು ಅನುಸರಿಸಬೇಕಾದ ಕ್ರಮಗಳ ಕುರಿತು ತೋಟಗಾರಿಕೆ ತಜ್ಞರು ರೈತರಿಗೆ ಸಲಹೆಗಳನ್ನು ನೀಡಿದ್ದಾರೆ.
ತೋಟಗಾರಿಕೆ ಇಲಾಖೆ ವಿಷಯ ತಜ್ಞ ಡಾ. ವಾಮನಮೂರ್ತಿ ಹಾಗೂ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳದ ವಿಸ್ತರಣಾ ಮುಂದಾಳು ಡಾ. ಎಮ್. ಬಿ .ಪಾಟೀಲ ಅವರು ಜಂಟಿಯಾಗಿ ಯಲಬುರ್ಗಾ ತಾಲೂಕಿನ ವಿವಿಧ ದ್ರಾಕ್ಷಿ ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ರೈತರಿಗೆ ಸಲಹೆಗಳನ್ನು ನೀಡಿದ್ದಾರೆ.
ಮುಂಗಾರಿನ ಆರಂಭದಲ್ಲಿ ಉತ್ತಮವಾಗಿ ಸುರಿದ ಮಳೆ, ನಂತರದ ದಿನಗಳಲ್ಲಿ ಬಾರದಿರುವುದು ಕೃಷಿ ಹಾಗೂ ತೋಟಗಾರಿಕೆಗೆ ಹಿನ್ನಡೆಯಾದಂತಾಗಿದೆ. ಒಣ ಹವೆಯಿಂದಾಗಿ ಮತ್ತು ಮೋಡ ಕವಿದ ವಾತಾವರಣದಿಂದಾಗಿ ದ್ರಾಕ್ಷಿಯಲ್ಲಿ ಅನೇಕ ರೋಗ/ಕೀಟಗಳು ಕಾಣಿಸಿಕೊಂಡಿವೆ ಇವುಗಳ ಹತೋಟಿಗಾಗಿ ಕೆಲವು ವಿಧಾನಗಳನ್ನು ಅನುಸರಿಸುವಂತೆ ಡಾ|| ಎಮ್. ಬಿ ಪಾಟೀಲ್ ರೈತರಿಗೆ ಸಲಹೆ ನೀಡಿದ್ದಾರೆ.
ಚಿಬ್ಬುರೋಗ: ಎಲೆ ಹಾಗೂ ಕಾಂಡದ ಮೇಲೂ ಈ ರೋಗದ ಲಕ್ಷಣಗಳು ಕಂಡು ಬಂದಿವೆ. ಇದರ ಹತೋಟಿಗೆ, ತೋಟದಲ್ಲಿ ಸ್ವಚ್ಛತೆ, ಝೈರಾಮ್ ಸಿಂಪರಣೆ – 4 ಮಿ.ಲಿ./ಲೀಟರ್ ನೀರಿಗೆ ಅಥವಾ ಥೈಯೋಫಿನೇಟ್ ಮಿಥೈಲ್ ಅಥವಾ ಕ್ಲೋರೋಥೆಲೊನಿಲ್ 2 ಗ್ರಾಂ/ ಲೀಟರ್ ನೀರಿಗೆ ಅಥವಾ ತಾಮ್ರದ ಆಕ್ಸಿಕ್ಲೋರೈಡ್ 3 ಗ್ರಾಂ./ಲೀಟರ್ ನೀರಿಗೆ 2 ರಿಂದ 3 ಬಾರಿ ಸಿಂಪಡಿಸಬೇಕು.
ಬೂದಿ ರೋಗ : ಕೆಲವೊಂದು ತೋಟಗಳಲ್ಲಿ ಮೊದಲೇ ಕಾಣಿಸಿಕೊಂಡ ಬೂದಿ ರೋಗ ಹತೋಟಿಗೆ ಬಂದಿಲ್ಲ. ಸೆಪ್ಟಂಬರ್ ಮೊದಲ ವಾರದಲ್ಲಿ ಚಾಟ್ನಿ ಮಾಡಿದ ಒಂದೆರೆಡು ತೋಟಗಳಲ್ಲಿ ಈ ರೋಗ ಕಾಣಿಸಿಕೊಂಡಿದೆ. ಈ ರೋಗದ ಹತೋಟಿಗೆ, 3 ಗ್ರಾಂ ನೀರಿನಲ್ಲಿ ಕರಗುವ ಗಂಧಕ ಶೇ.80 ಡಬ್ಲ್ಯೂ.ಪಿ. ಅಥವಾ 2 ಗ್ರಾಂ ಟ್ರೈಡೆಮೆಫಾನ್ 25 ಡಬ್ಲ್ಯೂ.ಪಿ. ಅಥವಾ 1 ಗ್ರಾಂ ಕಾರ್ಬೆನ್‍ಡೆಜಿಮ್ 50 ಡಬ್ಲ್ಯೂ.ಪಿ. ಅಥವಾ ಮೈಕ್ಲೋಬೂಟಾನಿಲ್ (0.05%), ಡಿನೋಕಾಫ್ (0.03%) ಒಂದು ಲೀಟರ್ ನೀರಿನಲ್ಲಿ ಬೆರೆಸಿ ಪ್ರತಿ 10 – 15 ದಿನಗಳಿಗೊಮ್ಮೆ ಸಿಂಪರಣೆ ಮಾಡಬೇಕು.
ದುಂಡಾಣು ಎಲೆ ಚುಕ್ಕೆ ರೋಗ : ಈ ರೋಗದ ನಿರ್ವಹಣೆಗೆ 0.5 ಗ್ರಾಂ. ಸ್ಟ್ರೆಪ್ಟೋಮೈಸಿನ್ ಸಲ್ಫೇಟ್ ಜೊತೆಗೆ 2 ಗ್ರಾಂ. ತಾಮ್ರದ ಆಕ್ಸಿಕ್ಲೋರೈಡ್‍ನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ 20 ದಿನಗಳ ಅಂತರದಲ್ಲಿ 3 ಸಲ ಸಿಂಪರಣೆಯನ್ನು ಮಾಡಬೇಕು.
ಕೆಲವು ತೋಟಗಳಲ್ಲಿ ರಸಹೀರುವ ಕೀಟಗಳಾದ ಹಿಟ್ಟು ತಿಗಣೆ ಮತ್ತು ಹಾಪರ್ಸನಂತಹ ಕೀಟಗಳು ಕಂಡುಬಂದಿವೆ. ಇದರ ಹತೋಟಿಗೆ, ಇಮಿಡಾಕ್ಲೋಪ್ರಿಡ್ 0.30 ಮೀ.ಲೀ ಅಥವಾ ಲಾಂಬ್ಡಾ ಸಿಯಾಲೋಥ್ರಿನ್ 5 ಇ.ಸಿ 1.00 ಮೀ,ಲೀ ಅಥವಾ ಬುಪ್ರೋಫಿಜಿನ್ 1.00 ಮೀ.ಲೀ 1 ಲೀ. ನೀರಿಗೆ ಬೆರೆಸಿ ಸಿಂಪರಿಸಬಹುದು.
ಹಿಟ್ಟು ತಿಗಣೆ : ಹತೋಟಿಗೆ ಮೀನಿನೆಣ್ಣೆ ಜೊತೆಗೆ ಡಿ.ಡಿ.ವಿ.ಪಿ. (76 %) 2 ಮಿ.ಲೀ. ಮತ್ತು ಸಾಬೂನಿನ ದ್ರಾವಣ ಬೆರೆಸಿ ಸಿಂಪರಿಸುವಂತೆ ದ್ರಾಕ್ಷಿ ಬೆಳೆಗಾರರಿಗೆ ಸಲಹೆ ನೀಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಡಾ. ಎಮ್. ಬಿ. ಪಾಟೀಲ-9480696319, ವಿಸ್ತರಣಾ ಮುಂದಾಳು, ವಾಮನಮೂರ್ತಿ, ವಿಷಯತಜ್ಞ, ಹಾರ್ಟಿಕ್ಲಿನಿಕ್, ಕೊಪ್ಪಳ ಅಲ್ಲದೇ ಆಯಾ ತಾಲೂಕಾ ಅಧಿಕಾರಿಗಳು ಹಾಗೂ ತೋಟಗಾರಿಕೆ ಉಪನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಹೀಗಾಗಿ ಲೇಖನಗಳು ದ್ರಾಕ್ಷಿ ಬೆಳೆಗೆ ವಿವಿಧ ಕೀಟ ಹಾಗೂ ರೋಗ ಬಾಧೆ : ನಿರ್ವಹಣೆಗೆ ಸಲಹೆಗಳು
ಎಲ್ಲಾ ಲೇಖನಗಳು ಆಗಿದೆ ದ್ರಾಕ್ಷಿ ಬೆಳೆಗೆ ವಿವಿಧ ಕೀಟ ಹಾಗೂ ರೋಗ ಬಾಧೆ : ನಿರ್ವಹಣೆಗೆ ಸಲಹೆಗಳು ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ದ್ರಾಕ್ಷಿ ಬೆಳೆಗೆ ವಿವಿಧ ಕೀಟ ಹಾಗೂ ರೋಗ ಬಾಧೆ : ನಿರ್ವಹಣೆಗೆ ಸಲಹೆಗಳು ಲಿಂಕ್ ವಿಳಾಸ https://dekalungi.blogspot.com/2018/07/blog-post_64.html
0 Response to "ದ್ರಾಕ್ಷಿ ಬೆಳೆಗೆ ವಿವಿಧ ಕೀಟ ಹಾಗೂ ರೋಗ ಬಾಧೆ : ನಿರ್ವಹಣೆಗೆ ಸಲಹೆಗಳು"
ಕಾಮೆಂಟ್ ಪೋಸ್ಟ್ ಮಾಡಿ