ಶೀರ್ಷಿಕೆ : ಖಾಸಗಿ ವಾಹನಗಳ ಮೇಲೆ ಕರ್ನಾಟಕ ಸರ್ಕಾರ ಎಂದು ಬರೆಸುವಂತಿಲ್ಲ : ಎಂ. ಕನಗವಲ್ಲಿ
ಲಿಂಕ್ : ಖಾಸಗಿ ವಾಹನಗಳ ಮೇಲೆ ಕರ್ನಾಟಕ ಸರ್ಕಾರ ಎಂದು ಬರೆಸುವಂತಿಲ್ಲ : ಎಂ. ಕನಗವಲ್ಲಿ
ಖಾಸಗಿ ವಾಹನಗಳ ಮೇಲೆ ಕರ್ನಾಟಕ ಸರ್ಕಾರ ಎಂದು ಬರೆಸುವಂತಿಲ್ಲ : ಎಂ. ಕನಗವಲ್ಲಿ
ಕೊಪ್ಪಳ ಜು. 07 (ಕರ್ನಾಟಕ ವಾರ್ತೆ): ಖಾಸಗಿ ವಾಹನಗಳ ಮೇಲೆ "ಕರ್ನಾಟಕ ಸರ್ಕಾರ", Government of Karnataka ಎಂದು ಫಲಕದ ಮೇಲೆ ಅಥವಾ ವಾಹನದ ಮೇಲೆ ಅಳವಡಿಸಿರುವುದನ್ನು ತೆಗೆದು ಹಾಕುವಂತೆ ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಸೂಚನೆ ನೀಡಿದ್ದಾರೆ.
ಸರ್ಕಾರದ ಸುತ್ತೋಲೆ ಅನ್ವಯ ಹಾಗೂ ಸಾರಿಗೆ ಇಲಾಖೆಯ ಸೂಚನೆಯಂತೆ ಕರ್ನಾಟಕ ಮೋಟರ್ ವಾಹನ ನಿಯಮವಳಿಗಳು 1989 ನಿಯಮ 145ಎ ರ ನಿಯಮದನ್ವಯ ಖಾಸಗಿ ವಾಹನಗಳ ಮೇಲೆ ಈ ರೀತಿಯ ಬರಹಗಳನ್ನು ಅಳವಡಿಸಿರುವುದನ್ನೆ ತೆಗೆದುಹಾಕಬೇಕು. ಕೊಪ್ಪಳ ಜಿಲ್ಲೆಯ ವಿವಿಧ ಇಲಾಖೆಗಳ ಅಧೀನದಲ್ಲಿ ಬರುವ ಸರ್ಕಾರಿ ಕಛೇರಿಗಳಿಗೆ ಹೊರ ಗುತ್ತಿಗೆ ಆಧಾರದ ಮೇರೆಗೆ ಪಡೆದ ಖಾಸಗಿ ವಾಹನಗಳ ಮೇಲೆ ‘ಕರ್ನಾಟಕ ಸರ್ಕಾರ’/ ‘ಸರ್ಕಾರದ ಸೇವೆಯಲ್ಲಿ’, ‘ಸರ್ಕಾರಿ ಕರ್ತವ್ಯದ ಮೇರೆಗೆ’ ಎಂಬುದಾಗಿ ಅಥವಾ ಇಂಗ್ಲೀಷ್ ಭಾಷೆಯಲ್ಲಿ Government of Karnataka, On Government Duty, On Special Duty, Government of India, Government Of India Undertaking, Government of Karnataka Undertaking ಎಂದು ಅಳವಡಿಸಿರುವ ಬರಹಗಳನ್ನು ಕೂಡಲೇ ತೆಗೆದು ಹಾಕಲು ಆದೇಶಿಸಲಾಗಿದೆ. ತಪ್ಪಿದಲ್ಲಿ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಎಚ್ಚರಿಕೆ ನೀಡಿದ್ದಾರೆ.
ಹೀಗಾಗಿ ಲೇಖನಗಳು ಖಾಸಗಿ ವಾಹನಗಳ ಮೇಲೆ ಕರ್ನಾಟಕ ಸರ್ಕಾರ ಎಂದು ಬರೆಸುವಂತಿಲ್ಲ : ಎಂ. ಕನಗವಲ್ಲಿ
ಎಲ್ಲಾ ಲೇಖನಗಳು ಆಗಿದೆ ಖಾಸಗಿ ವಾಹನಗಳ ಮೇಲೆ ಕರ್ನಾಟಕ ಸರ್ಕಾರ ಎಂದು ಬರೆಸುವಂತಿಲ್ಲ : ಎಂ. ಕನಗವಲ್ಲಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಖಾಸಗಿ ವಾಹನಗಳ ಮೇಲೆ ಕರ್ನಾಟಕ ಸರ್ಕಾರ ಎಂದು ಬರೆಸುವಂತಿಲ್ಲ : ಎಂ. ಕನಗವಲ್ಲಿ ಲಿಂಕ್ ವಿಳಾಸ https://dekalungi.blogspot.com/2018/07/blog-post_7.html
0 Response to "ಖಾಸಗಿ ವಾಹನಗಳ ಮೇಲೆ ಕರ್ನಾಟಕ ಸರ್ಕಾರ ಎಂದು ಬರೆಸುವಂತಿಲ್ಲ : ಎಂ. ಕನಗವಲ್ಲಿ"
ಕಾಮೆಂಟ್ ಪೋಸ್ಟ್ ಮಾಡಿ