ಶೀರ್ಷಿಕೆ : ಹುಲಿಗಿ : ಕೃಷಿ ಅಭಿಯಾನ ಸಮಾರೋಪ ಸಮಾರಂಭ ಯಶಸ್ವಿ
ಲಿಂಕ್ : ಹುಲಿಗಿ : ಕೃಷಿ ಅಭಿಯಾನ ಸಮಾರೋಪ ಸಮಾರಂಭ ಯಶಸ್ವಿ
ಹುಲಿಗಿ : ಕೃಷಿ ಅಭಿಯಾನ ಸಮಾರೋಪ ಸಮಾರಂಭ ಯಶಸ್ವಿ
ಕೊಪ್ಪಳ ಜು. 07 (ಕರ್ನಾಟಕ ವಾರ್ತೆ): ಕೊಪ್ಪಳ ಕೃಷಿ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾದ "ಕೃಷಿ ಅಭಿಯಾನ" ಕಾರ್ಯಕ್ರಮದ ಸಮಾರೋಪ ಸಮಾರಂಭವು ಶನಿವಾರದಂದು ಹುಲಿಗಿ ಗ್ರಾಮದಲ್ಲಿ ಯಶಸ್ವಿಯಾಗಿ ಜರುಗಿತು.

ತಾಲೂಕ ಪಂಚಾಯತ್ ಸದಸ್ಯ ವೆಂಕಪ್ಪ ಹೊಸಳ್ಳಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕೃಷಿ ವಿಸ್ತರಣಾ ಶಿಕ್ಷಣ ಘಟಕದ ಮುಖ್ಯಸ್ಥರಾದ ಡಾ. ಎಂ.ಬಿ ಪಾಟೀಲ ಅವರು ಸಮಗ್ರ ಕೃಷಿ ಪದ್ಧತಿ ಹಾಗೂ ಭತ್ತದಲ್ಲಿ ನೀರಿನ ಸಮರ್ಪಕ ನಿರ್ವಹಣೆ ಕುರಿತು, ಸಹಾಯಕ ಕೃಷಿ ನಿರ್ದೇಶಕ ತುಕಾರಾಮ ಎನ್., ರೇಷ್ಮೆ ಇಲಾಖೆ ಅಧಿಕಾರಿ ದೇವೆಂದರ್ರ ಕುಮಾರ ಅವರು ತಮ್ಮ ತಮ್ಮ ಇಲಾಖೆಯ ಕಾರ್ಯಕ್ರಮ, ಅನುಷ್ಠಾನಗಳ ವಿವರಿಸಿ ಮತ್ತು ಅದರ ಪ್ರಯೋಜನೆಗಳನ್ನು ಪಡೆದುಕೊಳ್ಳುವಂತೆ ರೈತರಿಗೆ ಸಲಹೆ ನೀಡಿದರು. ಕೃಷಿ ವಿಸ್ತರಣಾ ಘಟಕದ ತೋಟಗಾರಿಕಾ ಬೆಳೆಗಳ ವಿಷಯತಜ್ಞರಾದ ಡಾ. ಪ್ರದೀಪ ಬಿರಾದರ್ ಅವರು ರೈತರಿಗೆ ತೋಟಗಾರಿಕಾ ಬೆಳೆಗಳ ಬಗ್ಗೆ ತಿಳಿಸಿದರು. ಪ್ರಗತಿಪರ ರೈತರಾದ ಕಾಶಿಮಲಿ ಸಾಬ ಮತ್ತು ಹುಸೆನಪೀರ ಜವಳಿ ಅವರು ರೈತರಿಗೆ ಇಲಾಖೆಗಳಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಲು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಎನ್.ಎಫ್.ಎಸ್.ಎಮ್ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಶಶಿಕುಮಾರ, ರೈತ ಅನುವುಗಾರರಾದ ಹನುಮೇಶ, ಮಂಜುನಾಥ ಮತ್ತು ಬೀರಪ್ಪ ಉಪಸ್ಥಿತರಿದ್ದರು. ಎನ್.ಎಫ್.ಎಸ್.ಎಂ ತಾಂತ್ರಿಕ ಸಹಾಯಕ ಮಾರುತಿ ಪೂಜಾರ ಕಾರ್ಯಕ್ರಮ ನಿರೂಪಿಸಿದರು, ಹಿಟ್ನಾಳ (ಹುಲಿಗಿ) ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಕೆ. ವಿದ್ಯಾಧರ ಅವರು ಕೊನೆಯಲ್ಲಿ ವಂದಿಸಿದರು.
ಹೀಗಾಗಿ ಲೇಖನಗಳು ಹುಲಿಗಿ : ಕೃಷಿ ಅಭಿಯಾನ ಸಮಾರೋಪ ಸಮಾರಂಭ ಯಶಸ್ವಿ
ಎಲ್ಲಾ ಲೇಖನಗಳು ಆಗಿದೆ ಹುಲಿಗಿ : ಕೃಷಿ ಅಭಿಯಾನ ಸಮಾರೋಪ ಸಮಾರಂಭ ಯಶಸ್ವಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಹುಲಿಗಿ : ಕೃಷಿ ಅಭಿಯಾನ ಸಮಾರೋಪ ಸಮಾರಂಭ ಯಶಸ್ವಿ ಲಿಂಕ್ ವಿಳಾಸ https://dekalungi.blogspot.com/2018/07/blog-post_36.html

0 Response to "ಹುಲಿಗಿ : ಕೃಷಿ ಅಭಿಯಾನ ಸಮಾರೋಪ ಸಮಾರಂಭ ಯಶಸ್ವಿ"
ಕಾಮೆಂಟ್ ಪೋಸ್ಟ್ ಮಾಡಿ