ಶೀರ್ಷಿಕೆ : ತುಂಗಭದ್ರಾ : ಕುಡಿಯುವ ನೀರನ್ನು ಸಮರ್ಪಕವಾಗಿ ನಿರ್ವಹಿಸಲು ಪೊಲೀಸ್ ಸಿಬ್ಬಂದಿಗಳ ನೇಮಕ
ಲಿಂಕ್ : ತುಂಗಭದ್ರಾ : ಕುಡಿಯುವ ನೀರನ್ನು ಸಮರ್ಪಕವಾಗಿ ನಿರ್ವಹಿಸಲು ಪೊಲೀಸ್ ಸಿಬ್ಬಂದಿಗಳ ನೇಮಕ
ತುಂಗಭದ್ರಾ : ಕುಡಿಯುವ ನೀರನ್ನು ಸಮರ್ಪಕವಾಗಿ ನಿರ್ವಹಿಸಲು ಪೊಲೀಸ್ ಸಿಬ್ಬಂದಿಗಳ ನೇಮಕ
ಕೊಪ್ಪಳ ಜು. 26 (ಕರ್ನಾಟಕ ವಾರ್ತೆ): ತುಂಗಭದ್ರಾ ಜಲಾಶದ ಎಡದಂಡೆ ನಾಲೆಯಲ್ಲಿ ಕುಡಿಯುವ ನೀರನ್ನು ಸಮರ್ಪಕವಾಗಿ ನಿರ್ವಹಿಸಲು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿ ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಆದೇಶ ಹೊರಡಿಸಿದ್ದಾರೆ.
ಮುಂಗಾರು ಹಂಗಾಮಿಗೆ ತುಂಗಭದ್ರಾ ಎಡದಂಡೆ ನಾಲೆಗೆ ಜುಲೈ. 20 ರಿಂದ ನವೆಂಬರ್. 30 ರವರೆಗೆ ನೀರು ಹರಿಸಬೇಕಾಗಿರುವ ಹಿನ್ನಲೆಯಲ್ಲಿ ನೀರು ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸಲು ತುಂಗಭದ್ರಾ ಎಡದಂಡೆ ನಾಲೆಯಲ್ಲಿ ನೀರನ್ನು ರೈತರು ಅನಧೀಕೃತವಾಗಿ ಬಳಸದಂತೆ ಮತ್ತು ವಿತರಣಾ ಕಾಲುವೆಗಳ ಗೇಟಗಳನ್ನು ಆಪರೇಟ ಮಾಡದಂತೆ ಕಾರ್ಯ ನಿರ್ವಹಿಸಲು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸುವಂತೆ ಮುಖ್ಯ ಅಭಿಯಂತರು, ಕ.ನೀ.ನಿ.ನಿ ನೀರಾವರಿ ಕೇಂದ್ರ ವಲಯ, ಮುನಿರಾಬಾದ್ ಇವರು ಕೋರಿದ್ದರು. ಈ ನಿಟ್ಟಿನಲ್ಲಿ ನೀರು ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸಲು ತಂಗಭದ್ರಾ ಎಡದಂಡೆ ನಾಲೆಯ ಉಪ ಕಾಲುವೆಗಳಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನೇಮಿಸುವುದು ಸೂಕ್ತವಿರುವುದರಿಂದ ಈ ಆದೇಶವನ್ನು ಹೊರಡಿಸಲಾಗಿದೆ.
ತಂಗಭದ್ರಾ ಜಲಾಶದ ಎಡದಂಡೆ ನಾಲೆಯಲ್ಲಿ ಕುಡಿಯುವ ನೀರನ್ನು ಸಮರ್ಪಕವಾಗಿ ನಿರ್ವಹಿಸಲು ದಾಸನಾಳ ಬ್ರಿಡ್ಜ ಹತ್ತಿರದ ಉಪ ಕಾಲುವೆ ಸಂಖ್ಯೆ-16, ದಾಸನಾಳ ಉಪ ಕಾಲುವೆ ಸಂಖ್ಯೆ-17, ಆರಾಳ ಉಪ ಕಾಲುವೆ ಸಂಖ್ಯೆ-18 ಹಾಗೂ 19, ಕನಕಗಿರಿ ರಸ್ತೆಯ ಮುಖ್ಯ ಕಾಲುವೆಯ ಕ್ರಾಸಿಂಗ್ ಹತ್ತಿರ ಉಪ ಕಾಲುವೆ ಸಂಖ್ಯೆ-21, ಮಸಾರಿಕ್ಯಾಂಪ್ ಉಪ ಕಾಲುವೆ ಸಂಖ್ಯೆ-22, 23 ಹಾಗೂ 23ಅ, ಜೀರಾಳಕಲ್ಗುಡಿ ಉಪ ಕಾಲುವೆ ಸಂಖ್ಯೆ-25, ಚಿಕ್ಕಡಂಕನಕಲ್ ಉಪ ಕಾಲುವೆ ಸಂಖ್ಯೆ-27, 28, 29 ಹಾಗೂ 30, ಕಾರಟಗಿ-ನವಲಿ ರಸ್ತೆಯ ಮುಖ್ಯ ಕಾಲುವೆಯ ಕ್ರಾಸಿಂಗ್ ಹತ್ತಿರದ ಉಪ ಕಾಲುವೆ ಸಂಖ್ಯೆ-31 ಮತ್ತು ಮ್ಯಲಾಪುರ ಗ್ರಾಮದ ಹತ್ತಿರದ ಉಪ ಕಾಲುವೆ ಸಂಖ್ಯೆ-32, ಕಾಲುವೆಗಳಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ಜು. 23 ರಿಂದ ನವೆಂಬರ್. 30 ರವರೆಗೆ ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ತುಂಗಭದ್ರಾ : ಕುಡಿಯುವ ನೀರನ್ನು ಸಮರ್ಪಕವಾಗಿ ನಿರ್ವಹಿಸಲು ಪೊಲೀಸ್ ಸಿಬ್ಬಂದಿಗಳ ನೇಮಕ
ಎಲ್ಲಾ ಲೇಖನಗಳು ಆಗಿದೆ ತುಂಗಭದ್ರಾ : ಕುಡಿಯುವ ನೀರನ್ನು ಸಮರ್ಪಕವಾಗಿ ನಿರ್ವಹಿಸಲು ಪೊಲೀಸ್ ಸಿಬ್ಬಂದಿಗಳ ನೇಮಕ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ತುಂಗಭದ್ರಾ : ಕುಡಿಯುವ ನೀರನ್ನು ಸಮರ್ಪಕವಾಗಿ ನಿರ್ವಹಿಸಲು ಪೊಲೀಸ್ ಸಿಬ್ಬಂದಿಗಳ ನೇಮಕ ಲಿಂಕ್ ವಿಳಾಸ https://dekalungi.blogspot.com/2018/07/blog-post_20.html
0 Response to "ತುಂಗಭದ್ರಾ : ಕುಡಿಯುವ ನೀರನ್ನು ಸಮರ್ಪಕವಾಗಿ ನಿರ್ವಹಿಸಲು ಪೊಲೀಸ್ ಸಿಬ್ಬಂದಿಗಳ ನೇಮಕ"
ಕಾಮೆಂಟ್ ಪೋಸ್ಟ್ ಮಾಡಿ