ಶೀರ್ಷಿಕೆ : news and photo Date: 21-6-2018
ಲಿಂಕ್ : news and photo Date: 21-6-2018
news and photo Date: 21-6-2018
ರಾಜ್ಯ ಮಹಿಳಾ ನಿವಾಸಿ ಶಬಾನಾಗೆ ಕೂಡಿ ಬಂದ ಕಂಕಣಬಲ
*******************************************************
ಕಲಬುರಗಿ,ಜೂ.21.(ಕ.ವಾ.)-ಕಲಬುರಗಿಯ ರಾಜ್ಯ ಮಹಿಳಾ ನಿಲಯದ ನಿವಾಸಿಯಾದ ಶಬಾನಾಳನ್ನು ಬೀದರ ಜಿಲ್ಲೆಯ ಮನ್ನಳ್ಳಿ ಗ್ರಾಮದ ವಿಕ್ರಮ ಎಂಬುವವರು ಜೂನ್ 21ರಂದು ಕನ್ಯಾಲಗ್ನದ ಶುಭ ಮಹೂರ್ತದಲ್ಲಿ ಮಾಂಗಲ್ಯಧಾರಣ ಮಾಡುವ ಮೂಲಕ ಗುರು ಹಿರಿಯರ ಇಚ್ಛೆಯಂತೆ ಬಾಳ ಸಂಗಾತಿಯನ್ನಾಗಿಸಿದರು.
ಕಲಬುರಗಿ ಜಿಲ್ಲಾ ಆಸ್ಪತ್ರೆಯಿಂದ ಶಬಾನಾ ಏಳು ವರ್ಷದವಳಿದ್ದಾಗ ಕಲಬುರಗಿ ಬಾಲಕಿಯರ ಬಾಲ ಮಂದಿರಕ್ಕೆ ದಾಖಲಿಸಲಾಗಿತ್ತು. ನಂತರ 15ನೇ ವರ್ಷಕ್ಕೆ ಯಾದಗಿರಿಗೆ ಬಾಲಕಿಯರ ಬಾಲಮಂದಿರಕ್ಕೆ ವರ್ಗಾಯಿಸಲಾಗಿತ್ತು. ತದನಂತರ 16ನೇ ವರ್ಷಕ್ಕೆ ಪುನ: ಕಲಬುರಗಿ ರಾಜ್ಯ ಮಹಿಳಾ ನಿಲಯಕ್ಕೆ ದಾಖಲಿಸಿಕೊಳ್ಳಲಾಗಿದೆ. ಸಧ್ಯ 21 ವರ್ಷದ ಶಬಾನಾ ಪಿಯುಸಿ ಓದಿದ್ದು, ಬ್ಯುಟಿಶಿಯನ್ ತರಬೇತಿ ಸಹಿತ ಪಡೆದುಕೊಂಡಿದ್ದಾಳೆ.
ಬೀದರ ಜಿಲ್ಲೆಯ ಮನ್ನಳ್ಳಿ ಗ್ರಾಮದ ಬ್ರಾಹ್ಮಣ ಕುಟುಂಬದ ವಿಮಲಾಬಾಯಿ ಮತ್ತು ವಿನಾಯಕರಾವ ಸಾವಜಿ ಅವರ ಪುತ್ರ ವಿಕ್ರಮ ಅವರು ಐಟಿಐ ಓದಿದ್ದು, ಬೀದರಿನಲ್ಲಿ ಹನಿ ನೀರಾವರಿ ಕ್ಷೇತ್ರದಲ್ಲಿ ಉದ್ಯೋಗ ಹೊಂದಿದ್ದಾರೆ. ಪ್ರತಿ ತಿಂಗಳು 25000 ರೂ.ಗಳ ವೇತನ ಪಡೆಯುತ್ತಾರೆ. ಇವರು ಶಬಾನಾಳನ್ನು ಸ್ವಇಚ್ಛೆಯಿಂದ ಮದುವೆಯಾಗಲು ಒಪ್ಪಿಕೊಂಡಿದ್ದರಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸರಳ ರೀತಿಯಲ್ಲಿ ಮದುವೆ ಮಾಡಿಕೊಡಲಾಯಿತು.
ಕಲಬುರಗಿ ರಾಜ್ಯ ಮಹಿಳಾ ನಿಲಯದಿಂದ 2005-06ರಿಂದ ಈವರೆಗೆ ಒಟ್ಟು 17 ಮದುವೆಗಳನ್ನು ಮಾಡಿದ್ದು, ಇದು 18ನೇ ಮದುವೆಯಾಗಿದೆ. ಮದುವೆಯಾದವರೆಲ್ಲ ಹೆಚ್ಚಾಗಿ ತಂದೆ ತಾಯಿಯಿಲ್ಲದವರೇ ಆಗಿದ್ದು, ಮದುವೆ ಬಂಧನಕ್ಕೊಳಗಾದ ಬಳಿಕ ನಿಲಯದ ಎಲ್ಲ ನಿವಾಸಿಗಳು ಸುಖ ಸಂತೋಷದಿಂದ ಬಾಳÀುತ್ತಿದ್ದಾರೆ. ನಿಲಯದ ನಿವಾಸಿಗಳ ಮದುವೆಯ ಬಳಿಕ ಮೂರು ವರ್ಷದವರೆಗೆ ನಿರಂತರ ನಿಕಟ ಸಂಪರ್ಕ ಸುಖಕರ ದಾಂಪತ್ಯ ಜೀವನದ ಬಗ್ಗೆ ಕಾಲಕಾಲಕ್ಕೆ ಮಾಹಿತಿ ಪಡೆಯಲಾಗುವುದು. ಮದುವೆಗಾಗಿ ಇಲಾಖೆಯಿಂದ ಒಟ್ಟು 25000ರೂ. ಒದಗಿಸಲಾಗಿದ್ದು, ಈ ಪೈಕಿ 5000 ರೂ. ಮದುವೆಗಾಗಿ ಖರ್ಚು ಮಾಡಲಾಗುತ್ತದೆ. ಉಳಿದ 20000 ರೂ. ಹಣವನ್ನು ದಂಪತಿಗಳ ಹೆಸರಿನಲ್ಲಿ ಮೂರು ವರ್ಷಕ್ಕಾಗಿ ಫಿಕ್ಸ್ ಡಿಪಾಜಿಟ್ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ರೆಡ್ಡಿ ತಿಳಿಸಿದರು.
ರಾಜ್ಯ ಮಹಿಳಾ ನಿಲಯದ ಅಧೀಕ್ಷಕಿ ವಿಜಯಲಕ್ಷ್ಮೀ, ಶಿಶು ಗೃಹದ ಅಧೀಕ್ಷಕಿ ಶಿಲ್ಪಾ, ಮತ್ತಿತರ ಅಧಿಕಾರಿಗಳು ಮತ್ತು ನಿಲಯದ ಸಿಬ್ಬಂದಿಗಳು, ವಿಕ್ರಮ ಅವರ ಸಂಬಂಧಿಕರು ಈ ಸಂದರ್ಭದಲ್ಲಿ ಹಾಜರಿದ್ದು, ನವ ದಂಪತಿಗಳನ್ನು ಶುಭ ಹಾರೈಸಿದರು.
ಮದುವೆಗಾಗಿ ಸಾಯಿ ಪ್ರೆಸ್ಸಿಡೆನ್ಸಿ ಡಿಗ್ರಿ ಕಾಲೇಜಿನ ಕೌಶಿಕ ಜಿ.ಕೆ. ಅವರು ಬಾಂಡೆ ಸಾಮಾನುಗಳನ್ನು ದೇಣಿಗೆಯಾಗಿ ನೀಡಿದ್ದಾರೆ.

ಯೋಗವು ದೇಶದಿಂದ ವಿಶ್ವಕ್ಕೆ ನೀಡಿದ ಉನ್ನತ ಕೊಡುಗೆ
************************************************
ಕಲಬುರಗಿ,ಜೂ.21.(ಕ.ವಾ.)-ದೇಶವು ವಿಶ್ವಕ್ಕೆ ಅನೇಕ ಕೊಡುಗೆಗಳನ್ನು ನೀಡಿದೆ. ಅವುಗಳಲ್ಲಿ ಯೋಗ ಉನ್ನತವಾದ ಕೊಡುಗೆಯಾಗಿದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದರು.
ಅವರು ಗುರುವಾರ ಕಲಬುರಗಿ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಆಯುಷ್ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ನಾಲ್ಕನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಭಾರತ ದೇಶದ ಸಂಸ್ಕøತಿಯಲ್ಲಿ ಸಾವಿರಾರು ವರ್ಷಗಳಿಂದ ಯೋಗ ಬೆರೆತುಕೊಂಡಿದೆ. ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಬಲ ತುಂಬುವುದೇ ಯೋಗವಾಗಿದೆ. ಎಲ್ಲರೂ ದಿನಾಲು ಅರ್ಧ ಗಂಟೆ ಸಮಯವನ್ನು ಯೋಗಕ್ಕಾಗಿ ಮೀಸಲಿಡುವ ಮೂಲಕ ಶರೀರ ಮತ್ತು ಮನಸ್ಸನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಗುತ್ತದೆ. ಯೋಗವನ್ನು ಎಲ್ಲ ಶಾಲೆಗಳಲ್ಲಿ ಪ್ರಾರಂಭಿಸಲು ಯೋಚಿಸಲಾಗಿದ್ದು, ಎಲ್ಲ ಶಾಲೆಗಳಲ್ಲಿ ಯೋಗ ತರಬೇತಿ ನೀಡಲು ಸೂಚಿಸಲಾಗಿದೆ ಎಂದರು.
ಶಾಸಕ ದತ್ತಾತ್ರೇಯ ಸಿ. ಪಾಟೀಲ ರೇವೂರ ಮಾತನಾಡಿ, ದೇಶದ ಪ್ರಧಾನಮಂತ್ರಿಗಳು ಯೋಗಾಭ್ಯಾಸಕ್ಕೆ ಹೆಚ್ಚು ಮಹತ್ವ ನೀಡಿದ್ದರಿಂದ ದೇಶದಾದ್ಯಂತ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ. ವಿಶ್ವದ 160ಕ್ಕಿಂತ ಹೆಚ್ಚು ದೇಶಗಳಲ್ಲಿ ಯೋಗಾಭ್ಯಾಸ ರೂಢಿಸಿಕೊಂಡು ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಚರಿಸಲಾಗುತ್ತಿದೆ. ಪ್ರತಿನಿತ್ಯ ಜೀವನದಲ್ಲಿ ಯೋಗ ಅಳವಡಿಸಿಕೊಂಡು ಎಲ್ಲರೂ ಆರೋಗ್ಯವಂತರಾಗಬೇಕೆಂದು ತಿಳಿಸಿದರು.
ಬೆಂಗಳೂರು ಜಿಂದಾಲ ಸಂಸ್ಥೆಯ ಅಕ್ಯೂಪಂಕ್ಚರ್ ಮುಖ್ಯಸ್ಥ ಡಾ. ಗಿರೀಶ ಪಾಟೀಲ ಅವರು ಯೋಗದ ಪ್ರಾತ್ಯಕ್ಷಿಕೆ ನೀಡಿದರು. ಮೊದಲಿಗೆ ಕುತ್ತಿಗೆ, ಭುಜ, ಮೊಣಕಾಲು ಸಡಲಿಸುವ ಕ್ರಿಯೆ ತಿಳಿಸಿದರು. ನಂತರ ನಿಂತು ಮಾಡುವ ಆಸನಗಳಾದ ತಾಡಾಸನ, ವೃಕ್ಷಾಸನ, ಪಾದಹಸ್ತಾಸನ, ಅರ್ಧಚಕ್ರಾಸನ, ತ್ರಿಕೋನಾಸನ. ಕುಳಿತು ಮಾಡುವ ಆಸನಗಳಾದ ಭದ್ರಾಸನ, ವಜ್ರಾಸನ, ಅರ್ದವೃಷ್ಠಾಸನ, ವೃಷ್ಠಾಸನ, ಶಶಾಂಕಾಸನ, ಉತ್ತಾನ ಮಂಡೂಕಾಸನ, ವಕ್ರಾಸನ. ಮಲಗಿ ಮಾಡುವ ಆಸನಗಳಾದ ಮಕರಾಸನ, ಭುಜಂಗಾಸನ, ಶಲಭಾಸನ, ಸೇತುಬಂಧಾಸನ, ಉತ್ತಾನಪಾದಾಸನ, ಪವನ ಮುಕ್ತಾಸನ ಹಾಗೂ ಶವಾಸನದ ವಿವರಣೆ ನೀಡುವ ಮೂಲಕ ಯೋಗಾಭ್ಯಾಸದ ಮಾಡಿಸಿದರು.
ಯೋಗಾಭ್ಯಾಸದ ಜೊತೆಗೆ ಕಪಾಲಭಾತಿ, ಪ್ರಣಾಯಾಮದಲ್ಲಿ ನಾಡಿ ಶೋಧನ, ಅನುಲೋಮ-ವಿಲೋಮ, ಶೀತಲಿ ಪ್ರಣಾಯಾಮ ಹಾಗೂ ಭ್ರಮರಿ ಪ್ರಾಣಾಯಾಮದ ಜೊತೆಗೆ ಧ್ಯಾನವನ್ನು ಸಹಿತ ರೂಢಿ ಮಾಡಿಸಿದರು.
ಯೋಗಾಭ್ಯಾಸದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಮಹಾಪೌರ ಶರಣಕುಮಾರ ಮೋದಿ, ಜಿಲ್ಲಾ ಆಯುಷ್ ಅಧಿಕಾರಿ ಡಾ. ನಾಗರತ್ನ ಚಿಮ್ಮಲಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಾಧವರಾವ ಕೆ. ಪಾಟೀಲ, ಬ್ರಹ್ಮಕುಮಾರಿಸ್ ಕಲಬುರಗಿ ವಲಯ ಮುಖ್ಯಸ್ಥೆ ರಾಜಯೋಗಿನಿ ಬಿ.ಕೆ. ವಿಜಯಾ ದಿದಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಾಂತಗೌಡ, ಶಿಷ್ಠಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ, ವ್ಯಾಸ ಯುನಿವರ್ಸಿಟಿಯ ಶಂಕರ, ಯೋಗ ಕೇಂದ್ರದ ಸಿದ್ದಪ್ಪ ಗುರೂಜಿ, ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ನಾಡಿಗೇರ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಅರ್ಜಿ ಆಹ್ವಾನ
************************************************
ಕಲಬುರಗಿ,ಜೂ.21.(ಕ.ವಾ.)-ಪ್ರಸಕ್ತ 2018-19ನೇ ಸಾಲಿನ ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಸಾಲ ಪಡೆಯಲು ಅರ್ಹ ಕೈಮಗ್ಗ ನೇಕಾರರಿಂದ ಅರ್ಜಿಗಳನ್ನು ಎಂದು ಕಲಬುರಗಿ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಕೈಮಗ್ಗ ನೇಕಾರರಿಗೆ ದುಡಿಮೆ ಬಂಡವಾಳ ಸಾಲ ಒದಗಿಸುವ ಯೋಜನೆಯನ್ನು ಅನುಷ್ಟಾನಗೊಳಿಸಲಾಗುತ್ತಿದೆ. ಅರ್ಹ ಕೈಮಗ್ಗ ನೇಕಾರರು ಭರ್ತಿ ಮಾಡಿದ ಅರ್ಜಿಯೊಂದಿಗೆ ಅವಶ್ಯಕ ದಾಖಲೆಗಳಾದ ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ನೀಡಿರುವ ನೇಕಾರರ ಗುರುತಿನ ಚೀಟಿ ಅಥವಾ ಆರೋಗ್ಯ ವಿಮಾ ಯೋಜನೆಯಡಿ ನೀಡಿರುವ ಆರೋಗ್ಯ ವಿಮಾ ಕಾರ್ಡ, ಚುನಾವಣಾ ಗುರುತಿನ ಚೀಟಿ, ಆಧಾರ ಕಾರ್ಡ, ನೇಕಾರರು ವಾಸಿಸುವ ಸ್ಥಳದ ಕಾರ್ಯವ್ಯಾಪ್ತಿ ಹೊಂದಿರುವ ಬ್ಯಾಂಕಿನಿಂದ ನಿರಾಕ್ಷೇಪಣಾ ಪತ್ರ/ಬೇಬಾಕಿ ಪತ್ರವನ್ನು ಅರ್ಜಿಯೊಂದಿಗೆ ಲಗತ್ತಿಸಿ ಉಪನಿರ್ದೇಶಕರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ್, ಜಿಲ್ಲಾ ಕೈಗಾರಿಕಾ ಕೇಂದ್ರ ಕಟ್ಟಡ, 1ನೇ ಮಹಡಿ, ಜೇವರ್ಗಿ ಕ್ರಾಸ್, ಎಂ.ಎಸ್.ಕೆ ಮೀಲ್ ರೋಡ ಕಲಬುರಗಿ-585102 ಕಚೇರಿಯಲ್ಲಿ ಇದೇ ಜೂನ್ 30 ರೊಳಗಾಗಿ ಸಲ್ಲಿಸಬೇಕು.
ಕೈಮಗ್ಗ ಮತ್ತು ಜವಳಿ ಇಲಾಖೆಯ ಅಧಿಕಾರಿಗಳು ಮತ್ತು ಬ್ಯಾಂಕ್ ಅಧಿಕಾರಿಗಳ ಜಂಟಿ ಸ್ಥಳ ಪರಿಶೀಲನೆ ನಂತರ ಅರ್ಹ ನೇಕಾರರಿಗೆ ಸಾಲವನ್ನು ಒದಗಿಸಲಾಗುತ್ತಿದ್ದು, ಈ ಯೋಜನೆಯಡಿ ಸೌಲಭ್ಯ ಪಡೆಯಲು ಫಲಾನುಭವಿಗಳನ್ನು ಅರ್ಹತೆಯ ಆಧಾರದ ಮೇಲೆ ಜಿಲ್ಲೆಗೆ ನಿಗದಿಪಡಿಸಿರುವ ಗುರಿಯ ಮಿತಿಗೆ ಒಳಪಟ್ಟು ಆಯ್ಕೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-278629ನ್ನು ಸಂಪರ್ಕಿಸಬಹುದಾಗಿದೆ. ಜಿಲ್ಲೆಯ ಕೈಮಗ್ಗ ನೇಕಾರರು ಹೆಚ್ಚಿನ ಸಂಖ್ಯೆಯಲ್ಲಿ ಈ ಯೋಜನೆಯ ಪ್ರಯೋಜನವನ್ನು ಪಡೆಯಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕುಟುಂಬ ನ್ಯಾಯಾಲಯದಲ್ಲಿ ನೈರ್ಮಲ್ಯ ಸೇವೆ ಪಡೆಯಲು ಟೆಂಡರ್ ಆಹ್ವಾನ
*******************************************************************
ಕಲಬುರಗಿ,ಜೂ.21.(ಕ.ವಾ.)-ಕಲಬುರಗಿ ಕುಟುಂಬ ನ್ಯಾಯಾಲಯದಲ್ಲಿ ನೈರ್ಮಲ್ಯ ಮತ್ತು ಸ್ವಚ್ಛತೆ ಸೇವೆಯನ್ನು ನಿರ್ವಹಿಸಲು ಅರ್ಹ ಹೊರಗುತ್ತಿಗೆ ಏಜೆನ್ಸಿಯವರಿಂದ ಟೆಂಡರ್ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಕುಟುಂಬ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶರಾದ ಆರ್.ಕೆ. ತಾಳಿಕೋಟಿ ಅವರು ತಿಳಿಸಿದ್ದಾರೆ.
ಟೆಂಡರ್ ಅರ್ಜಿಯನ್ನು ಭರ್ತಿ ಮಾಡಿ ಅದರೊಂದಿಗೆ ಇ.ಎಂ.ಡಿ 10,000 ರೂ. ಡಿಮ್ಯಾಂಡ್ ಡ್ರಾಫ್ಟ್‍ನ್ನು ಡಿಸ್ಟಿಕ್ಟ್ ಜಡ್ಜ್, ಫ್ಯಾಮಿಲಿ ಕೋರ್ಟ ಕಲಬುರಗಿ ಇವರ ಹೆಸರಿನಲ್ಲಿ ಪಡೆದು ಸಲ್ಲಿಸಬೇಕು. ನಿಗದಿತ ನಮೂನೆಯ ಅರ್ಜಿಯನ್ನು ಜಿಲ್ಲಾ ನ್ಯಾಯಾಲಯದ hಣಣಠಿ://eಛಿouಡಿಣs.gov.iಟಿ/ಞಚಿಟಚಿbuಡಿಚಿgi ವೆಬ್‍ಸೈಟ್‍ದಿಂದ ಪಡೆದು ಭರ್ತಿ ಮಾಡಿ ಇದೇ ಜೂನ್ 29ರ ಸಂಜೆ 5 ಗಂಟೆಯೊಳಗಾಗಿ ಸಲ್ಲಿಸಬೇಕು. ಟೆಂಡರಿನ ವಿವರ, ಷರತ್ತು, ನಿಬಂಧನೆ ಹಾಗೂ ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿಯ ಜಿಲ್ಲಾ ಕುಟುಂಬ ನ್ಯಾಯಾಲಯದ ಕಚೇರಿಯನ್ನು ಸಂಪರ್ಕಿಸಲು ಕೋರಿದೆ.
ಗುಂಡಗುರ್ತಿ: ರಾಣಿ ಚನ್ನಮ್ಮ ವಸತಿ ಶಾಲೆ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
ಕಲಬುರಗಿ,ಜೂ.21.(ಕ.ವಾ.)-ಚಿತ್ತಾಪುರ ತಾಲ್ಲೂಕಿನ ಗುಂಡಗುರ್ತಿಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ(ಆಂಗ್ಲ ಮಾಧ್ಯಮ)ಯಲ್ಲಿ 2018-19 ನೇ ಸಾಲಿಗೆ 7,8,9 ಮತ್ತು 10ನೇ ತರಗತಿಯಲ್ಲಿ ಖಾಲಿಯಿರುವ ಸೀಟುಗಳನ್ನು ಪರೀಕ್ಷೆ ಮೂಲಕ ಭರ್ತಿ ಮಾಡಿಕೊಳ್ಳಲು ಅರ್ಹ ವಿದ್ಯಾರ್ಥಿನಿಯರಿಂದ ಅರ್ಜಿ ಆಹ್ವಾನಿಸಿದೆ.
ಅರ್ಜಿಗಳನ್ನು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಿಂದ ಪಡೆದು ಭರ್ತಿ ಮಾಡಿ ಜೂನ್ 28ರೊಳಗೆ ಸಲ್ಲಿಸಬೇಕು. ಜೂನ್ 29 ರಂದು ಪ್ರವೇಶ ಪರೀಕ್ಷೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಗುಂಡುಗುರ್ತಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲ ಸುರೇಶ ಆಲ್ದಾರ್ಥಿ ಅವರ ಮೊಬೈಲ್ ಸಂಖ್ಯೆ 9741182727ನ್ನು ಸಂಪರ್ಕಿಸಲು ಕೋರಲಾಗಿದೆ.

ಐಟಿಐ ಪ್ರವೇಶಕ್ಕಾಗಿ ದಾಖಲಾತಿ ಪರಿಶೀಲನೆ ಅವಧಿ ವಿಸ್ತರಣೆ
*****************************************************
ಕಲಬುರಗಿ,ಜೂ.21.(ಕ.ವಾ.)-ಪ್ರಸಕ್ತ 2018-19ನೇ ಸಾಲಿಗೆ ಸರ್ಕಾರಿ ಹಾಗೂ ಅನುದಾನಿತ ಖಾಸಗಿ ಐಟಿಐಗಳಲ್ಲಿ ಪ್ರವೇಶಕ್ಕೆ ಸಂಬಂಧಿಸಿದಂತೆ ದಾಖಲಾತಿ ಪರಿಶೀಲನೆಗಾಗಿ ಅಭ್ಯರ್ಥಿಗಳಿಗೆ ಮೊಬೈಲ್ ಸಂದೇಶ ಬಾರದೇ ಇರುವ ಮತ್ತು ಪರಿಶೀಲನೆ ಮಾಡಿಕೊಳ್ಳದೇ ಇರುವ ಅಭ್ಯರ್ಥಿಗಳು ಸಮೀಪದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ) ತೆರಳಿ ದಾಖಲಾತಿ ಪರಿಶೀಲನೆಗಾಗಿ ಜೂನ್ 22ರವರೆಗೆ ಅವಧಿ ವಿಸ್ತರಿಸಲಾಗಿದೆ ಎಂದು (ಪುರುಷ) ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಎಸ್.ಎನ್. ಪಂಚಾಳ ತಿಳಿಸಿದ್ದಾರೆ.
ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಈಗಾಗಲೇ 2018ರ ಮೇ 13ರಿಂದ 18ರವರೆಗೆ ದಾಖಲಾತಿ ಪರಿಶೀಲಿಸಿಕೊಳ್ಳಲು ಎಸ್.ಎಂ.ಎಸ್. ಮೂಲಕ ನೋಂದಾಯಿಸಿರುವ ಮೊಬೈಲ್‍ಗೆ ಸಂದೇಶ ರವಾನಿಸಲಾಗಿತ್ತು. ಮೊಬೈಲ್ ಸಂದೇಶ ಬಾರದೇ ಇರುವ ಮತ್ತು ಪರಿಶೀಲನೆ ಮಾಡಿಕೊಳ್ಳದೇ ಇರುವ ಅಭ್ಯರ್ಥಿಗಳು ದಾಖಲಾತಿಗಳನ್ನು ಪರಿಶೀಲನೆ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಪುರುಷ) ವನ್ನು ಹಾಗೂ ದೂರವಾಣಿ ಸಂಖ್ಯೆ 08472-278611ನ್ನು ಸಂಪರ್ಕಿಸಲು ಕೋರಲಾಗಿದೆ.

ಜೂನ್ 27ರಂದು ಬೆಂಗಳೂರಿನಲ್ಲಿ ಕರಕುಶಲ ಪ್ರದರ್ಶನ-ಮಾರಾಟ ಮೇಳ
***************************************************************
ಕಲಬುರಗಿ,ಜೂ.21.(ಕ.ವಾ.)-ಬುಡಕಟ್ಟು ಜನರು ಉತ್ಪಾದಿಸುವ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಇದೇ ಜೂನ್ 27ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಬೆಂಗಳೂರಿನ ಇನ್ಸ್‍ಸ್ಟಿಟ್ಯೂಟ್ ಆಫ್ ಇಂಜಿನಿಯರ್ (ಇಂಡಿಯಾ), ಕರ್ನಾಟಕ ಸ್ಟೇಟ್ ಸೆಂಟರ್, ನಂ.3, ಡಾ.ಬಿ.ಆರ್. ಅಂಬೇಡ್ಕರ ವಿಧಿ (ಇಂಡಿಯನ್ ಎಕ್ಸ್‍ಪ್ರೆಸ್ ಬಿಲ್ಡಿಂಗ್ ಎದುರುಗಡೆ) ಬೆಂಗಳೂರು-560001 ಇಲ್ಲಿ ಏರ್ಪಡಿಸಲಾಗಿದೆ.
ಕಲಬುರಗಿ ಜಿಲ್ಲೆಯಲ್ಲಿನ ಪರಿಶಿಷ್ಟ ಪಂಗಡದ ಕರಕುಶಲ ಕರ್ಮಿಗಳು ಉತ್ಪನ್ನಗಳೊಂದಿಗೆ ಜೂನ್ 27ರಂದು ಜರುಗುವ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಭಾಗವಹಿಸಬಹುದಾಗಿದೆ ಎಂದು ಎಂದು ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯುವ ವಿಜ್ಞಾನಿ ಪ್ರಶಸ್ತಿ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
**********************************************
ಕಲಬುರಗಿ,ಜೂ.21.(ಕ.ವಾ.)-ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು 2017-18ನೇ ಸಾಲಿನ ಯುವ ವಿಜ್ಞಾನಿ ಪ್ರಾಶಸ್ತಿಗಾಗಿ 9 ರಿಂದ 12ನೇ ತರಗತಿಗಳಲ್ಲಿ ಓದುತ್ತಿರುವ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಸಲ್ಲಿಕೆ ದಿನಾಂಕವನ್ನು ಜೂನ್ 30ರವರೆಗೆ ವಿಸ್ತರಿಸಲಾಗಿದೆ ಎಂದು ಗೌರವ ಕಾರ್ಯದರ್ಶಿ ಗಿರೀಶ ಬಿ. ಕಡ್ಲೇವಾಡ ಅವರು ತಿಳಿಸಿದ್ದಾರೆ.
ಈ ಯೋಜನೆಯಲ್ಲಿ ಭಾಗವಹಿಸಲು ಇಚ್ಛಿಸುವ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೇಂದ್ರ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ವೆಬ್‍ಸೈಟ್ ತಿತಿತಿ.ಞಡಿvಠಿ.oಡಿg ಅಥವಾ ವಾಟ್ಸಪ್ ಸಂಖ್ಯೆ 9483549159 ದಿಂದ ಅರ್ಜಿ ಹಾಗೂ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ.
ಅಭ್ಯರ್ಥಿಗಳು ಅವಶ್ಯಕ ದಾಖಲಾತಿಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು. ಅರ್ಜಿಯ ಒಂದು ಪ್ರತಿಯನ್ನು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೇಂದ್ರ ಕಚೇರಿಗೆ ಸಲ್ಲಿಸಬೇಕು. ಜಿಲ್ಲಾ ಮಟ್ಟದ ಸ್ಪರ್ಧೆಯನ್ನು ಜುಲೈ 7ಕ್ಕೆ ಮುಂದೂಡಲಾಗಿದೆ. ರಾಜ್ಯಮಟ್ಟದ ಸ್ಪರ್ಧೆಯು ಜುಲೈ ಮೂರನೇ ವಾರದಲ್ಲಿ 3 ದಿನಗಳ ಕಾಲ ಬಾಗಲಕೋಟೆಯಲ್ಲಿ ಜರುಗಲಿದೆ. ಖ್ಯಾತ ವಿಜ್ಞಾನಿಗಳು ವಿದ್ಯಾರ್ಥಿಯೊಂದಿಗೆ ಸಂವಾದ ನಡೆಸುವರು. ಆಸಕ್ತ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತ ಕಚೇರಿ ದೂರವಾಣಿ ಸಂಖ್ಯೆ 080-26718939, ಮೊಬೈಲ್ ಸಂಖ್ಯೆ 9483549159, 9008442557, 9449530245ಗಳನ್ನು ಸಂಪರ್ಕಿಸಲು ಕೋರಲಾಗಿದೆ.

ಹೀಗಾಗಿ ಲೇಖನಗಳು news and photo Date: 21-6-2018
ಎಲ್ಲಾ ಲೇಖನಗಳು ಆಗಿದೆ news and photo Date: 21-6-2018 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ news and photo Date: 21-6-2018 ಲಿಂಕ್ ವಿಳಾಸ https://dekalungi.blogspot.com/2018/06/news-and-photo-date-21-6-2018.html

0 Response to "news and photo Date: 21-6-2018"
ಕಾಮೆಂಟ್ ಪೋಸ್ಟ್ ಮಾಡಿ