ಶೀರ್ಷಿಕೆ : news and photo Date: 2-6-2018
ಲಿಂಕ್ : news and photo Date: 2-6-2018
news and photo Date: 2-6-2018
ರೆಡ್‍ಕ್ರಾಸ್ ಸಂಸ್ಥೆಗೆ ಕಂದಾಯ ವಸತಿ ಗೃಹ ಬಳಕೆಗೆ ಅನುಮತಿ
********************************************************
ಕಲಬುರಗಿ,ಜೂ.02.(ಕ.ವಾ.)-ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಕಲಬುರಗಿ ಜಿಲ್ಲಾ ಶಾಖೆ ಇನ್ನು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುವ ಹಾಗೆ ರಾಜಾಪುರ ಪ್ರದೇಶದ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಪಕ್ಕದಲ್ಲಿರುವ ಕಂದಾಯ ವಸತಿ ಗೃಹವನ್ನು ಬಳಕೆ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದರು.
ಅವರು ಶನಿವಾರ ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಕಲಬುರಗಿ ಜಿಲ್ಲಾ ಶಾಖೆ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ರೆಡ್‍ಕ್ರಾಸ್ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯಮಟ್ಟದಲ್ಲಿ ಕಲಬುರಗಿ ಜಿಲ್ಲಾ ರೆಡ್‍ಕ್ರಾಸ್ ಸಂಸ್ಥೆಗೆ ಸತತವಾಗಿ ಮೂರು ವರ್ಷಗಳು ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಪ್ರಶಸ್ತಿ ದೊರೆತಿದೆ. ರೆಡ್‍ಕ್ರಾಸ್ ಸಂಸ್ಥೆ ಕೈಗೊಳ್ಳುವ ಮಾನವೀಯ ಕಾರ್ಯಕ್ರಮಗಳ ಜೊತೆಗೆ ಯುವ ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡಲ್ಲಿ ಅನುಕೂಲವಾಗುವುದು. ಈ ನಿಟ್ಟಿನಲ್ಲಿ ಎಲ್ಲ ಕಾಲೇಜುಗಳಲ್ಲಿ ದಾಖಲಾಗುವ ಯುವ ಜನಾಂಗವು ಕಡ್ಡಾಯವಾಗಿ ರೆಡ್ ಕ್ರಾಸ್ ಸಂಸ್ಥೆಯ ಸದಸ್ಯತ್ವ ಪಡೆದು ಸಕ್ರಿಯವಾಗಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕೆಂದು ಆದೇಶ ಹೊರಡಿಸಲಾಗುವುದು. ಜಿಲ್ಲೆಯಲ್ಲಿ ಯಾವುದೇ ವಿಪತ್ತು ಸಂಭವಿಸಿದಾಗ ಯುವಕರು ಹಾಗೂ ಸಂಘಟನೆಗಳು ನೆರವಿಗೆ ಧಾವಿಸಿದರೆ ದೊಡ್ಡ ವಿಪತ್ತುಗಳನ್ನು ಸಹ ಸುಲಭವಾಗಿ ನಿಭಾಯಿಸಬಹುದಾಗಿದೆ ಎಂದರು.
ರೆಡ್‍ಕ್ರಾಸ್ ಸಂಸ್ಥೆಯಲ್ಲಿ ಯುವಕರು ಮತ್ತು ಸಂಘ ಸಂಸ್ಥೆಗಳು ನೆರವಾಗುವುದರಿಂದ ಸಾಮಾಜಿಕ ಸೇವೆ ಮಾಡಲು ಅನುಕೂಲವಾಗುವುದು. ಇತ್ತೀಚಿನ ದಿನಗಳಲ್ಲಿ ರಕ್ತದಾನಕ್ಕೆ ಯುವಕರು ಮುಂದೆ ಬರುತ್ತಿಲ್ಲ. ಕಾಲೇಜುಗಳಲ್ಲಿ ರೆಡ್‍ಕ್ರಾಸ್ ಸಂಸ್ಥೆಯಿಂದ ಜಾಗೃತಿ ಮೂಡಿಸುವ ಮೂಲಕ ರಕ್ತ ಸಂಗ್ರಹ ಮಾಡಬೇಕು. ಜಗತ್ತಿಗೆ ಇಂದು ಮಾರಕವಾಗಿರುವ ನಿಫಾ ವೈರಸ್ ರೋಗದ ಕುರಿತು ಹಾಗೂ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ರೆಡ್‍ಕ್ರಾಸ್ ಸಂಸ್ಥೆಯೊಂದಿಗೆ ಯುವ ಜನತೆ ಮತ್ತು ಸಂಘ ಸಂಸ್ಥೆಗಳು ಜೊತೆಗೂಡಿ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ ಎಂದು ತಿಳಿಸಿದರು.
ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ರಾಜ್ಯ ಶಾಖೆಯ ಉಪ ಸಭಾಪತಿ ಅಪ್ಪಾರಾವ ಅಕ್ಕೋಣಿ ಪ್ರಾಸ್ತಾವಿಕವಾಗಿ ಮಾತನಾಡಿ, ರೆಡ್‍ಕ್ರಾಸ್ ಸಂಸ್ಥೆ ಕಲಬುರಗಿ ಜಿಲ್ಲಾ ಶಾಖೆಗೆ 2017-18ನೇ ಸಾಲಿನಲ್ಲಿ ರಾಜ್ಯದಲ್ಲಿ ಉತ್ತಮ ಸಾಧನೆಗೆ ಪ್ರಥಮ ಬಹುಮಾನ ಲಭಿಸಿದೆ. 2016-17ನೇ ಸಾಲಿನಲ್ಲಿ ಜ್ಯೂನಿಯರ್ ರೆಡ್‍ಕ್ರಾಸ್ ಪರೀಕ್ಷೆಗೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಹಾಜರಾದ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸುಮಾರು 1680 ಜನರಿಗೆ ಪ್ರಥಮ ಚಿಕಿತ್ಸೆ ನೀಡಿದ್ದಕ್ಕಾಗಿ ರಾಜ್ಯದಲ್ಲಿ ಕಲಬುರಗಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ರೆಡ್‍ಕ್ರಾಸ್ ಸಂಸ್ಥೆ ವತಿಯಿಂದ ರಕ್ತ ಮತ್ತು ಕಣ್ಣಿನ ಬ್ಯಾಂಕ್ ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ. ಕಡಿಮೆ ದರದಲ್ಲಿ ಕನ್ನಡಕಗಳು ದೊರೆಯುವ ಹಾಗೆ ಆಪ್ಟಿಕಲ್ ಸೆಂಟರ್ ಪ್ರಾರಂಭಿಸುವ ಯೋಜನೆ ಸಹಿತ ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಲಬುರಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ. ಬಸವರಾಜ ಗುದಗೆ, ಕಲಬುರಗಿ ತಾಜ್‍ಸುಲ್ತಾನಪುರ ಕೆ.ಎಸ್.ಆರ್.ಪಿ. ಕಮಾಂಡೆಂಟ್ ಬಸವರಾಜ ಜಿಳ್ಳೆ, ಜಿಲ್ಲಾ ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ರವೀಂದ್ರ ಶಾಬಾದಿ, ಉಪ ಸಭಾಪತಿ ಅರುಣಕುಮಾರ ಲೋಯಾ, ಗೌರವ ಕೋಶಾಧ್ಯಕ್ಷ ಭಾಗ್ಯಲಕ್ಷ್ಮೀ ಎಂ., ಕಾರ್ಯಕ್ರಮ ಸಂಯೋಜಕ ಸಿದ್ರಾಮಪ್ಪ ಬಮನಾಳಕರ ಮತ್ತಿತರರು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾ ರೆಡ್‍ಕ್ರಾಸ್ ಸಂಸ್ಥೆಗೆ ರಾಜ್ಯಪಾಲರು ನೀಡಿದ ಪ್ರಥಮ ಬಹುಮಾನದ ಪ್ರಶಸ್ತಿ ಫಲಕವನ್ನು ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ರೆಡ್‍ಕ್ರಾಸ್ ಸಂಸ್ಥೆಯೊಂದಿಗೆ ಉತ್ತಮ ಸೇವೆ ಸಲ್ಲಿಸಿದ ಕಲಬುರಗಿ ತಾಜ್‍ಸುಲ್ತಾನಪುರ ಕೆ.ಎಸ್.ಆರ್.ಪಿ. ಕಮಾಂಡೆಂಟ್ ಬಸವರಾಜ ಜಿಳ್ಳೆ, ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಹರಿ ದೇಶಪಾಂಡೆ, ಮಹಾಗಾಂವ ಕ್ರಾಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಜಯಕಿಶನ್ ಠಾಕೂರ ಅವರನ್ನು ಸನ್ಮಾನಿಸಲಾಯಿತು. ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ಪ್ರಥಮ ಚಿಕಿತ್ಸೆ ತರಬೇತಿ ಪಡೆದವರಿಗೆ ಪ್ರಮಾಣಪತ್ರ ವಿತರಿಸಲಾಯಿತು. ನಾಲ್ಕು ಜನ ಚಾಲಕರಿಗೆ ಪ್ರಥಮ ಚಿಕಿತ್ಸೆ ಕಿಟ್ ವಿತರಿಸಲಾಯಿತು.

ಗೌರವಧನ ಪಡೆಯಲು ವಕ್ಫ್ ಮಂಡಳಿಯಲ್ಲಿ ಮಸೀದಿಗಳ ನೋಂದಣಿ ಕಡ್ಡಾಯ
*******************************************************************
ಕಲಬುರಗಿ,ಜೂ.02.(ಕ.ವಾ.)-ಕಲಬುರಗಿ ಜಿಲ್ಲೆಯ ಮಸೀದಿಗಳ ಪೇಶ್ ಇಮಾಮ್ ಮತ್ತು ಮೌಜನ್‍ಗಳು ಸರ್ಕಾರದಿಂದ ನೀಡಲಾಗುತ್ತಿರುವ ಗೌರವಧನ ಪಡೆಯಲು ಸಂಬಂಧಪಟ್ಟ ಮಸೀದಿಗಳನ್ನು ವಕ್ಫ್ ಮಂಡಳಿಯಲ್ಲಿ ನೋಂದಣಿ ಮಾಡುವುದು ಕಡ್ಡಾಯವಾಗಿದೆ. ಇದರ ಹಿನ್ನೆಲೆಯಲ್ಲಿ ವಕ್ಫ್ ಮಂಡಳಿಯಲ್ಲಿ ನೋಂದಣೆಯಾಗದಿರುವ ಮಸೀದಿಗಳ ಮುತ್ತವಲ್ಲಿ/ಕಮೀಟಿಯ ಅಧ್ಯಕ್ಷರು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕೆಂದು ಕಲಬುರಗಿ ಜಿಲ್ಲಾ ವಕ್ಫ್ ಅಧಿಕಾರಿಗಳು ತಿಳಿಸಿದ್ದಾರೆ.
ವಕ್ಫ್ ಮಂಡಳಿಯಲ್ಲಿ ನೋಂದಣೆಯಾಗದಿರುವ ಮಸೀದಿಗಳಿಗೆ ಸಂಬಂಧಪಟ್ಟ ದಾಖಲಾತಿಗಳನ್ನು ಕಲಬುರಗಿ ಜಿಲ್ಲಾ ವಕ್ಫ್ ಕಚೇರಿಗೆ ಸಲ್ಲಿಸಿ, ವಕ್ಫ್ ಮಂಡಳಿಯಲ್ಲಿ ನೋಂದಣಿ ಮಾಡಿಕೊಳ್ಳುವುದರ ಮೂಲಕ ತಮ್ಮ ಮಸೀದಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೇಶ್ ಇಮಾಮ್ ಮತ್ತು ಮೌಜನರವರಿಗೆ ಸರ್ಕಾರದಿಂದ ನೀಡಲಾಗುತ್ತಿರುವ ಗೌರವಧನವನ್ನು ಸದುಪಯೋಗ ಪಡೆಯಬಹುದಾಗಿದೆ.
ಕಲಬುರಗಿ ಜಿಲ್ಲೆಯಲ್ಲಿರುವ ವಕ್ಫ್ ನೋಂದಾಯಿತ ಸಂಸ್ಥೆಗಳ (ದರ್ಗಾ, ಮಸೀದಿ, ಖಬ್ರಸ್ಥಾನ, ಆಶೂರಖನಾ, ಖಾನಖಾ, ಈದ್ಗಾ, ಛಿಲ್ಲಾ, ತಕಿಯಾ ಮುಂತಾದವು) ಮುತ್ತವಲ್ಲಿ / ಕಮೀಟಿಯ ಅಧ್ಯಕ್ಷರಿಗೆ ವಕ್ಫ್ ಆಸ್ತಿಯ ಸಂರಕ್ಷಣೆಯ ಹಿತದೃಷ್ಠಿಯಿಂದ ತಮ್ಮ ತಮ್ಮ ವಕ್ಫ್ ಸಂಸ್ಥೆಗೆ ಸಂಬಂಧಿಸಿದ ಆಸ್ತಿಗಳ ಕಂದಾಯ ದಾಖಲೆ (ಪಹಣಿ ಪತ್ರಿಕೆ) / ಖಾತಾ ನಕಲುಗಳನ್ನು 2018ರ ಜೂನ್ 15 ರೊಳಗಾಗಿ ಕಲಬುರಗಿ ಜಿಲ್ಲಾ ವಕ್ಫ್ ಕಚÉೀರಿ ಕಡ್ಡಾಯವಾಗಿ ಸಲ್ಲಿಸಬೇಕು. ಒಂದು ವೇಳೆ ಈ ದಾಖಲೆಗಳು ಸಂಸ್ಥೆಯ ಹೆಸರಿನಲ್ಲಿ ಇಲ್ಲದಿದ್ದಲ್ಲಿ ತ್ವರಿತವಾಗಿ ಸಂಸ್ಥೆಯ ಹೆಸರಿನಲ್ಲಿ ಕ್ರಮಬದ್ಧಗೊಳಿಸಿ ನಿಗದಿತ ದಿನಾಂಕದೊಳಗಾಗಿ ಕಚೇರಿಗೆ ಸಲ್ಲಿಸಬೇಕೆಂದು ಅವರು ತಿಳಿಸಿದ್ದಾರೆ.

ಸಹಾಯಧನ ಪಡೆಯಲು ರೈತ ಫಲಾನುಭವಿಗಳಿಂದ ಅರ್ಜಿ ಆಹ್ವಾನ
**********************************************************
ಕಲಬುರಗಿ,ಜೂ.02.(ಕ.ವಾ.)-ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ 2018-19ನೇ ಸಾಲಿಗೆ ವಿವಿಧ ತೋಟಗಾರಿಕೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗಿದೆ. ಇದಕ್ಕಾಗಿ ಆಸಕ್ತಿಯುಳ್ಳ ಜಿಲ್ಲೆಯ ಅರ್ಹ ರೈತ ಫಲಾನುಭವಿ/ಸಂಘ ಸಂಸ್ಥೆಗಳಿಂದ ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ (ಜಿ.ಪಂ.) ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.
ಬಾಳೆ ಹೊಸ ಪ್ರದೇಶ ವಿಸ್ತರಣೆ, ಹೈಬ್ರಿಡ್ ತರಕಾರಿ ಪ್ರದೇಶ ವಿಸ್ತರಣೆ, ಸಮುದಾಯ ಕೆರೆ, ಕೃಷಿಹೊಂಡ, ಪಕ್ಷಿ ನಿರೋಧಕ ಬಲೆ, ಹಸಿರು ಮನೆ ಹಾಗೂ ನೆರಳು ಪರದೆ ಘಟಕ, ಪ್ಲಾಸ್ಟಿಕ್ ಹೊದಿಕೆ, 20ಕ್ಕೂ ಕಡಿಮೆ ಅಶ್ವಶಕ್ತಿ ವರೆಗಿನ ಟ್ರ್ಯಾಕ್ಟರ್, ಪಾಲಿಹೌಸ್, ಪ್ರಾಥಮಿಕ ಸಂಸ್ಸರಣೆ ಘಟಕ/ ಒಣದ್ರಾಕ್ಷಿಘಟಕ, ಹಣ್ಣು ಮಾಗಿಸುವ ಘಟಕ, ಈರುಳ್ಳಿ ಶೇಖರಣಾ ಗೋದಾಮು, ಗ್ರಾಮೀಣ ಮಾರುಕಟ್ಟೆ/ಅಪನಿ ಮಂಡಿ, ರಿಟೇಲ್ ಮಾರುಕಟ್ಟೆ ಘಟಕಗಳಿಗೆ ಸಹಾಯಧನವನ್ನು ನೀಡಲಾಗುವುದು.
ಜಿಲ್ಲೆಯಲ್ಲಿ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ವಿವಿಧ ತೋಟಗಾರಿಕೆ ಕಾರ್ಯಕ್ರಮಗಳನ್ನು ವಿವಿಧ ತಾಲೂಕುಗಳ ಸಾಮಥ್ರ್ಯ ಹಾಗೂ ಅವಕಾಶಗಳಿಗನುಗುಣವಾಗಿ ಹಮ್ಮಿಕೊಳ್ಳಲಾಗಿದೆ. ಹೊಸ ಪ್ರದೇಶ ವಿಸ್ತರಣೆ ಹೊರತುಪಡಿಸಿ ಎಲ್ಲ ಕಾರ್ಯಕ್ರಮಗಳು ಪ್ರಸ್ತಾವನೆ ಆಧಾರಿತವಾಗಿದ್ದು, ಆಸಕ್ತಿಯುಳ್ಳ ಅರ್ಹ ಫಲಾನುಭವಿಗಳು/ ಸಂಘ ಸಂಸ್ಥೆಗಳು ಸಂಬಂಧಿಸಿದ ತಾಲೂಕಿನ ಹಿರಿಯ/ ಸಹಾಯಕ ತೋಟಗಾರಿಕೆ ನಿರ್ದೇಶಕರುಗಳ ಮೂಲಕ ಕಲಬುರಗಿ ಜಿಲ್ಲಾ ತೋಟಗಾರಿಕೆ ಉಪನಿರ್ದೇಶಕರಿಗೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು.
ಮೊದಲ ಬಂದವರಿಗೆ ಆದ್ಯತೆ ಮೇರೆಗೆ ಅರ್ಹತಾ ಮಾನದಂಡಗಳ ಮೇರೆಗೆ ಜಿಲ್ಲೆಗೆ ನಿಗದಿಪಡಿಸಿದ ಭೌತಿಕ ಮತ್ತು ಆರ್ಥಿಕ ಗುರಿಗಳಿಗೆ ಸೀಮಿತಗೊಳಿಸಿ ಚಾಲ್ತಿಯಲ್ಲಿರುವ ಮಾರ್ಗಸೂಚಿಗಳನ್ವಯ ಪರಿಗಣಿಸಲಾಗುವುದು. ತೋಟಗಾರಿಕೆಯ ಸಮಗ್ರ ಅಭಿವೃದ್ಧಿ ಪೂರಕವಾದಂತೆ ಕೋಯ್ಲೋತ್ತರ,. ಸಂಸ್ಸರಣೆ, ಮೌಲ್ಯವರ್ಧನೆ ಪ್ರಸ್ತಾವನೆಗಳನ್ನು ಇಚ್ಛೆಯುಳ್ಳ ಸಂಘ/ಸಂಸ್ಥೆಗಳು ಪ್ರಸ್ತಾವನೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಹಿರಿಯ, ಸಹಾಯಕ ತೋಟಗಾರಿಕೆ ನಿರ್ದೇಶಕರಿಗೆ ಸಂಪರ್ಕಿಸಬೇಕೆಂದು ಅವರು ತಿಳಿಸಿದ್ದಾರೆ.

ಜೂನ್ 5ರಂದು ಪ್ಲಾಸ್ಟಿಕ್ ಸಂಗ್ರಹಣೆ ಸ್ಪರ್ಧೆ: ಹೆಸರು ನೋಂದಾಯಿಸಲು ಸೂಚನೆ
**********************************************************************
ಕಲಬುರಗಿ,ಜೂ.02.(ಕ.ವಾ.)-ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕಲಬುರಗಿ ಮಹಾನಗರ ಪಾಲಿಕೆಯಿಂದ ಪರಿಸರ ಸಂರಕ್ಷಣೆ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಜೂನ್ 5ರಂದು ಪ್ಲಾಸ್ಟಿಕ್ ಸಂಗ್ರಹಣೆ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ರಘುನಂದನಮೂರ್ತಿ ತಿಳಿಸಿದ್ದಾರೆ.
ಈ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವ ನಗರದಲ್ಲಿನ ಆಸಕ್ತ ಸಾರ್ವಜನಿಕರು ತಂಡ ರಚಿಸಿಕೊಂಡು ಕಲಬುರಗಿ ಮಹಾನಗರ ಪಾಲಿಕೆಯ ಪರಿಸರ ಶಾಖೆಯಲ್ಲಿ ತಮ್ಮ ಹೆಸರು ನೊಂದಾಯಿಸಿಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ಜೂನ್ 13ರಂದು ಹಳೆಯ ಟೈರ್-ಟ್ಯೂಬ್‍ಗಳ ಬಹಿರಂಗ ಹರಾಜು
********************************************************
ಕಲಬುರಗಿ,ಜೂ.02.(ಕ.ವಾ.)-ಕಲಬುರಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿರುವ ವಿವಿಧ ನಮೂನೆಯ ಹಳೆಯ ಟೈರ್, ಟ್ಯೂಬ್ ಮತ್ತು ಬಿಡಿಭಾಗಗಳನ್ನು ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಜೂನ್ 13ರಂದು ಬೆಳಿಗ್ಗೆ 11 ಗಂಟೆಗೆ ಬಹಿರಂಗ ಹರಾಜಿನ ಮೂಲಕ ವಿಲೇವಾರಿ ಮಾಡಲಾಗುವುದೆಂದು ಹೆÀಚ್ಚುವರಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಇಚ್ಛೆಯುಳ್ಳ ಏಜೆನ್ಸಿಯವರು ಮೇಲ್ಕಂಡ ದಿನದಂದು ಹರಾಜಿನಲ್ಲಿ ಭಾಗವಹಿಸಿ ಹಳೆಯ ಟೈರ್, ಟ್ಯೂಬ್ ಮತ್ತು ಬಿಡಿಭಾಗಗಳನ್ನು ಖರೀದಿಸಬಹುದಾಗಿದೆ. ಈ ಕುರಿತು ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ರೂಂ. ನಂಬರ್ 10, ಅಭಿಲೇಖಾಲಯ ಸಂಕಲನದ ವಿಷಯ ನಿರ್ವಾಹಕರನ್ನು ಹಾಗೂ ದೂರವಾಣಿ ಸಂಖ್ಯೆ 08472-278605ನ್ನು ಸಂಪರ್ಕಿಸಲು ಕೋರಿದೆ.

ಜೂನ್ 13ರಂದು ಅನುಪಯುಕ್ತ ವಾಹನಗಳ ಬಹಿರಂಗ ಹರಾಜು
********************************************************
ಕಲಬುರಗಿ,ಜೂ.02.(ಕ.ವಾ.)-ಕಲಬುರಗಿಯ ಜಿಲ್ಲೆಯ ವಿವಿಧ 14 ಇಲಾಖೆಗಳ ದುರಸ್ತಿ ಮಾಡಲಾರದ ಒಟ್ಟು 32 ಅನುಪಯುಕ್ತ ವಾಹನಗಳನ್ನು ಜೂನ್ 13 ರಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಟೆಂಡರ್-ಕಂ-ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಹರಾಜು ಮಾಡುವ ಇಲಾಖೆಗಳ ವಾಹನಗಳ ವಿವರ ಇಂತಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಲಬುರಗಿ-10 ವಾಹನಗಳು, ಕಾರ್ಯದರ್ಶಿಗಳು ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕಲಬುರಗಿ-02 ವಾಹನಗಳು, ಜಿಲ್ಲಾಧಿಕಾರಿಗಳ ಕಚೇರಿ ಕಲಬುರಗಿ-01 ವಾಹನ, ಯೋಜನಾ ವ್ಯವಸ್ಥಾಪಕರು ನಿರ್ಮಿತಿ ಕೇಂದ್ರ ಕಲಬುರಗಿ-01 ವಾಹನ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಾದೇಶಿಕ ಅರಣ್ಯ ವಿಭಾಗ ಕಲಬುರಗಿ-01 ವಾಹನ, ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕು ಪಂಚಾಯಿತಿ ಚಿಂಚೋಳಿ-01 ವಾಹನ, ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತರು ಕಲಬುರಗಿ-02 ವಾಹನಗಳು, ಪ್ರಾದೇಶಿಕ ಆಯುಕ್ತರು ಕಲಬುರಗಿ ವಿಭಾಗ ಕಲಬುರಗಿ-01 ವಾಹನ, ಜಿಲ್ಲಾ ಶಸ್ತ್ರಜ್ಞರು ಹಾಗೂ ಅಧೀಕ್ಷಕರು ಜಿಲ್ಲಾ ಆಸ್ಪತ್ರೆ ಕಲಬುರಗಿ-01 ವಾಹನ, ಜಂಟಿ ನಿರ್ದೇಶಕರು ಕೃಷಿ ಇಲಾಖೆ ಕಲಬುರಗಿ-02 ವಾಹನಗಳು, ಜಿಲ್ಲಾ ಕೇಂದ್ರ ಕಾರಾಗೃಹ ಕಲಬುರಗಿ-04 ವಾಹನಗಳು, ತಹಶೀಲ್ದಾರರು ಆಳಂದ-01 ವಾಹನ, ಅಬಕಾರಿ ಉಪ ಆಯುಕ್ತರ ಕಚೇರಿ ಕಲಬುರಗಿ-04 ವಾಹನಗಳು, ಜಿಲ್ಲಾ ನ್ಯಾಯಾಲಯ ಕಲಬುರಗಿ-01 ವಾಹನಗಳನ್ನು ಹರಾಜು ಮಾಡಲಾಗುವುದು.
ಇಚ್ಛೆವುಳ್ಳ ಟೆಂಡರ್‍ದಾರರು ಮತ್ತು ಬಿಡ್‍ದಾರರು ಹರಾಜು ಮಾಡುವ ನಿರುಪಯುಕ್ತ ವಾಹನಗಳನ್ನು ಸಂಬಂಧಪಟ್ಟ ಕಚೇರಿಗಳಲ್ಲಿ ಕಚೇರಿ ವೇಳೆಯಲ್ಲಿ ನೋಡಬಹುದಾಗಿದೆ. ಆಯಾ ಇಲಾಖೆಗಳ ಕಚೇರಿಗಳಲ್ಲಿರುವ ಈ ವಾಹನಗಳು ಯಾವ ಸ್ಥಿತಿಯಲ್ಲಿವೆಯೋ ಅದೇ ಸ್ಥಿತಿಯಲ್ಲಿ ಹರಾಜು ಮಾಡಲಾಗುವುದು. ಬಂದ ಮಾಡಿದ ಟೆಂಡರ್ ಲಕೋಟೆಯನ್ನು ಕಲಬುರಗಿ ಮಿನಿ ವಿಧಾನ ಸೌಧದಲ್ಲಿರುವ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಜೂನ್ 12ರಂದು ಸಂಜೆ 5 ಗಂಟೆಯೊಳಗಾಗಿ ಸಲ್ಲಿಸಬೇಕು. ಆಸಕ್ತ ಸಾರ್ವಜನಿಕರು ಈ ಹರಾಜಿನಲ್ಲಿ ಭಾಗವಹಿಸಿ ಈ ವಾಹನಗಳನ್ನು ಖರೀದಿಸಬಹುದಾಗಿದೆ. ಹರಾಜಿನ ಷರತ್ತು ಮತÀ್ತು ನಿಬಂಧನೆಗಳಿಗಾಗಿ ಹಾಗೂ ಹೆಚ್ಚಿನ ವಿವರಗಳಿಗಾಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಅಭಿಲೇಖಾಲಯ ಶಾಖೆಯನÀ್ನು ಸಂಪರ್ಕಿಸಲು ಕೋರಲಾಗಿದೆ.

ಜೂನ್ 4ರಂದು ವಿಶ್ವದ ಅದ್ಭುತ ಹರಳುಗಳ ಸಂಚಾರಿ ವಸ್ತು ಪ್ರದರ್ಶನ ಉದ್ಘಾಟನೆ
***********************************************************************
ಕಲಬುರಗಿ,ಜೂ.02.(ಕ.ವಾ.)-ಕಲಬುರಗಿ ಜಿಲ್ಲಾ ವಿಜ್ಞಾನ ಕೇಂದ್ರದಿಂದ ವಿಶ್ವದ ಅದ್ಭುತ ಹರಳುಗಳ ಸಂಚಾರಿ ವಸ್ತು ಪ್ರದರ್ಶದ ಉದ್ಘಾಟನಾ ಸಮಾರಂಭವನ್ನು ಜೂನ್ 4 ರಂದು ಬೆಳಿಗ್ಗೆ 11.15 ಗಂಟೆಗೆ ಕಲಬುರಗಿ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಏರ್ಪಡಿಸಲಾಗಿದೆ ಎಂದು ಜಿಲ್ಲಾ ವಿಜ್ಞಾನ ಅಧಿಕಾರಿ ಸಿ.ಎನ್.ಲಕ್ಷ್ಮೀನಾರಾಯಣ ತಿಳಿಸಿದ್ದಾರೆ.
ಕಲಬುರಗಿ ಭೌತಶಾಸ್ತ್ರ ವಿಭಾಗದ ನಿವೃತ್ತ ಪ್ರೊಫೇಸರ್ ಬಿ.ಕೆ. ಚಳಗೇರಿ ಅವರು ಈ ಸಂಚಾರಿ ವಸ್ತು ಪ್ರದರ್ಶನವನ್ನು ಉದ್ಘಾಟಿಸುವರು. ಗುಲಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ಹಾಗೂ ಭೌತಶಾಸ್ತ್ರ ಸಂಶೋಧನಾ ಕೇಂದ್ರದ ಪ್ರೊಫೇಸರ್ ವಿವೇಕಾನಂದ ಎಸ್.ಜಾಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಈ ಸಂಚಾರಿ ವಸ್ತು ಪ್ರದರ್ಶನವು ಪಿಯು, ಡಿಗ್ರಿ ಹಾಗೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ ಎಂದು ಅವರು ತಿಳಿಸಿದ್ದಾರೆ.

ಜೂನ್ 5ರಂದು ವಿಶ್ವ ಪರಿಸರ ದಿನಾಚರಣೆ
*************************************
ಕಲಬುರಗಿ,ಜೂ.02.(ಕ.ವಾ.)-ಕಲಬುರಗಿ ಜಿಲ್ಲಾ ವಿಜ್ಞಾನ ಕೇಂದ್ರದಿಂದ ವಿಶ್ವ ಪರಿಸರ ದಿನಾಚರಣೆಯನ್ನು ಜೂನ್ 5 ರಂದು ಬೆಳಿಗ್ಗೆ 10.30 ಗಂಟೆಗೆ ಕಲಬುರಗಿ ಜಿಲ್ಲಾ ವಿಜ್ಞಾನ ಕೇಂದ್ರದ ಆಡಿಟೋರಿಯಂನಲ್ಲಿ ಏರ್ಪಡಿಸಲಾಗಿದೆ ಎಂದು ಜಿಲ್ಲಾ ವಿಜ್ಞಾನ ಅಧಿಕಾರಿ ಸಿ.ಎನ್.ಲಕ್ಷ್ಮೀನಾರಾಯಣ ತಿಳಿಸಿದ್ದಾರೆ.
ಗುಲಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ಹಾಗೂ ಜೈವಿಕ ತಂತ್ರಜ್ಞಾನ ಸಂಶೋಧನಾ ಕೇಂದ್ರದ ಪ್ರೊಫೇಸರ್ ರಮೇಶ ಎಲ್. ಲಂಡನ್‍ಕರ್ ಕಾರ್ಯಕ್ರಮವನ್ನು ಉದ್ಘಾಟಿಸುವರು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕಲಬುರಗಿ ಪ್ರಾದೇಶಿಕ ಕೇಂದ್ರದ ಹಿರಿಯ ಪರಿಸರ ಅಧಿಕಾರಿ ವೆಂಕಟೇಶ್ವರ ಹಾಗೂ ಪರಿಸರ ಅಧಿಕಾರಿ ಡಿ. ದಿವಾಕರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಪ್ಲಾಸ್ಟಿಕ್ ಮಾಲಿನ್ಯ ಹಿಮ್ಮೆಟ್ಟಿಸಿ ವಿಶ್ವ ಪರಿಸರ ದಿನಾಚರಣೆಯ ಘೋಷ ವಾಕ್ಯವಾಗಿದೆ.
ಪರಿಸರ ದಿನಾಚರಣೆ ಅಂಗವಾಗಿ ಜೂನ್ 5ರಂದು ಬೆಳಿಗ್ಗೆ 11 ಗಂಟೆಗೆ ಡ್ರಾಯಿಂಗ್ ಆಂಡ್ ಪೇಂಟಿಂಗ್ ಸ್ಪರ್ಧೆ, ಜೂನ್ 6ರಂದು ಬೆಳಿಗ್ಗೆ 11 ಗಂಟೆಗೆ ‘ಪ್ಲಾಸ್ಟಿಕ್ ಒಂದು ವರವೇ, ಶಾಪವೇ’? ಎಂಬ ವಿಷಯ ಕುರಿತು ನಿಬಂಧ ಸ್ಪರ್ಧೆ, ಅಂದು ಮಧ್ಯಾಹ್ನ 12.15 ಗಂಟೆಗೆ ಪರಿಸರದ ಮತ್ತು ಜೀವಿ ಪರಿಸ್ಥಿತಿ ಶಾಸ್ತ್ರದ ಕುರಿತು ರಸಪ್ರಶ್ನೆ ಕಾರ್ಯಕ್ರಮ, ಜೂನ್ 7ರಂದು ಬೆಳಿಗ್ಗೆ 11 ಗಂಟೆಗೆ ‘ಪ್ಲಾಸ್ಟಿಕ್ ಮಾಲಿನ್ಯ ಹಿಮ್ಮೆಟ್ಟಿಸಿ’ ಎಂಬ ವಿಷಯ ಕುರಿತು ಭಾಷಣ ಸ್ಪರ್ಧೆ, ಜೂನ್ 8ರಂದು ಬೆಳಿಗ್ಗೆ 11.30 ಗಂಟೆಗೆ ಬಹುಮಾನ ವಿತರಣೆ ಮತ್ತು ಸಮಾರೋಪ ಸಮಾರಂಭ, ಅಂದು ಮಧ್ಯಾಹ್ನ 12.30 ಗಂಟೆಗೆ ಪರಿಸರದ ಕುರಿತು ಮುಕ್ತ ರಸಪ್ರಶ್ನೆ ಕಾರ್ಯಕ್ರಮ ನಡೆಯಲಿದೆ.

ಜೂನ್ 15ರೊಳಗಾಗಿ ಅಭ್ಯರ್ಥಿಗಳು ಖರ್ಚು ವೆಚ್ಚದ ವಿವರ ನೀಡಲು ಸೂಚನೆ
******************************************************************
ಕಲಬುರಗಿ,ಜೂ.02.(ಕ.ವಾ.)-ಕರ್ನಾಟಕ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ ಎಲ್ಲ ಅಭ್ಯರ್ಥಿಗಳು ಇದೇ ಜೂನ್ 15ರೊಳಗಾಗಿ ಚುನಾವಣೆಗೆ ಖರ್ಚು ಮಾಡಿರುವ ಖರ್ಚು ವೆಚ್ಚಗಳ ಅಂತಿಮ ವರದಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದರು.
ಅವರು ಶನಿವಾರ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿಧಾನಸಭಾ ಚುನಾವಣೆ ಸ್ಪರ್ಧಿಸಿದ ಅಭ್ಯರ್ಥಿಗಳು, ಸಹಾಯಕ ವೆಚ್ಚ ಅಧಿಕಾರಿಗಳು ಹಾಗೂ ಲೆಕ್ಕಪತ್ರ ತಂಡದವರಿಗೆ ಖರ್ಚು ವೆಚ್ಚಗಳ ಮಾಹಿತಿ ನೀಡಲು ಕರೆದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ವಿಧಾನಸಭಾ ಚುನಾವಣೆಯ ಮತ ಎಣಿಕೆ ಮುಕ್ತಾಯಗೊಂಡು ಒಂದು ತಿಂಗಳೊಳಗಾಗಿ ಅಭ್ಯರ್ಥಿಗಳು ಮಾಡಿರುವ ಖರ್ಚು ವೆಚ್ಚಗಳ ಅಂತಿಮ ವರದಿಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ಸಕಾಲದಲ್ಲಿ ಖರ್ಚು ವೆಚ್ಚದ ಮಾಹಿತಿ ಸಲ್ಲಿಸದಿದ್ದಲ್ಲಿ ಅಭ್ಯರ್ಥಿಗಳನ್ನು ಅನರ್ಹಗೊಳಿಸಲು ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಲಾಗುವುದು ಎಂದರು.
ಜಿಲ್ಲಾ ಪಂಚಾಯಿತಿಯ ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ ಚುನಾವಣಾ ಖರ್ಚು ವೆಚ್ಚಗಳ ದಾಖಲಾತಿ ಕುರಿತು ಪಿಪಿಟಿ ಮೂಲಕ ವಿವರಿಸಿ ಅಭ್ಯರ್ಥಿಗಳು ಚುನಾವಣೆಗಾಗಿ ಕೈಗೊಂಡಿರುವ ಖರ್ಚು ವೆಚ್ಚಗಳ ಓಚರ ಮತ್ತು ಬಿಲ್ಲುಗಳನ್ನು ಸಂಗ್ರಹಿಸಿಡಬೇಕು. ಓಚರ ಮತ್ತು ಬಿಲ್ಲುಗಳ ಮೇಲೆ ಅಭ್ಯರ್ಥಿಗಳು ಸಹಿ ಮಾಡಿ ಸಲ್ಲಿಸಬೇಕು. ಚುನಾವಣಾ ವೆಚ್ಚಕ್ಕಾಗಿ ತೆರೆದ ಬ್ಯಾಂಕ್ ಖಾತೆಯ ವಿವರ ಪಟ್ಟಿಯನ್ನು ದೃಢೀಕರಿಸಿ ಸಲ್ಲಿಸಬೇಕು. 20 ಸಾವಿರಕ್ಕಿಂತ ಹಚ್ಚಿನ ಹಣವನ್ನು ಒಂದೇ ವ್ಯಕ್ತಿಗೆ ನಗದು ರೂಪದಲ್ಲಿ ಸಂದಾಯ ಮಾಡಿರಬಾರದು ಎಂದು ವಿವರಿಸಿದರು.
ಅಭ್ಯರ್ಥಿಗಳು ಚುನಾವಣಾ ಖರ್ಚು ವೆಚ್ಚ ನಮೂದಿಸಿರುವ ಬಿಳಿ ಪುಸ್ತಕದಂತೆ ಒಟ್ಟು 9 ಅನುಸೂಚಿಗಳನ್ನು ಭರ್ತಿ ಮಾಡಿ ಸಲ್ಲಿಸಬೇಕು. 10 ಲಕ್ಷ ರೂ. ವೆಚ್ಚ ಮಾಡಿದ್ದರೆ ಅದನ್ನು 100ರೂ.ಗಳ ಛಾಪಾ ಕಾಗದದ (ಬಾಂಡ್) ಮೇಲೆ ಖರ್ಚು ವೆಚ್ಚದ ಮಾಹಿತಿ ನೀಡಬೇಕು. 10 ಲಕ್ಷ ರೂ.ಗಿಂತ ಹೆಚ್ಚಿನ ಮುಂದಿನ ಪ್ರತಿ 10 ಲಕ್ಷ ರೂ.ಗಳಿಗೆ 100ರೂ.ಗಳಂತೆ ಛಾಪಾ ಕಾಗದದ ಮೇಲೆ ಮಾಹಿತಿ ನೀಡಬೇಕು. ಅನುಸೂಚಿ 7ರಲ್ಲಿ ಅಭ್ಯರ್ಥಿಯು ತನ್ನ ಸ್ವಂತ ಹಣ ಚುನಾವಣೆಗಾಗಿ ಖರ್ಚು ಮಾಡಿರುವುದು, ಅನುಸೂಚಿ 8ರಲ್ಲಿ ಪಕ್ಷದಿಂದ ಪಡೆದ ಅಥವಾ ಖರ್ಚು ಮಾಡಿದ ಹಣದ ವಿವರ ಹಾಗೂ ಅನುಸೂಚಿ 9ರಲ್ಲಿ ಇತರರಿಂದ ಪಡೆದ ಹಣದ ವಿವರ ಸಲ್ಲಿಸಬೇಕು. ಈ ಮೂರು ಅನುಸೂಚಿಗಳ ಮೊತ್ತವು ಅಭ್ಯರ್ಥಿಯ ಬ್ಯಾಂಕ್ ಖಾತೆಯಲ್ಲಿರುವ ಒಟ್ಟು ಮೊತ್ತಕ್ಕೆ ತಾಳೆಯಾಗಬೇಕು ಎಂದು ವಿವರಿಸಿದರು.
ಸಭೆಯಲ್ಲಿ ವಿವಿಧ ಪಕ್ಷಗಳಿಗೆ ಸಂಬಂಧಿಸಿದ ಅಭ್ಯರ್ಥಿಗಳ ಏಜೆಂಟರು, ಲೆಕ್ಕಪತ್ರ ತಂಡದ ಮುಖ್ಯಸ್ಥರು ಪಾಲ್ಗೊಂಡಿದ್ದರು.

ಸಮಗ್ರ ಕೃಷಿ ಅಭಿಯಾನ ಯಶಸ್ವಿಗೊಳಿಸಲು ಸೂಚನೆ
************************************************
ಕಲಬುರಗಿ,ಜೂ.02.(ಕ.ವಾ.)-ಜಿಲ್ಲೆಯಾದ್ಯಂತ ರೈತರಿಗೆ ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳ ಮಾಹಿತಿ ನೀಡಲು ಜೂನ್ 4ರಿಂದ ಹಮ್ಮಿಕೊಂಡಿರುವ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಸೂಚಿಸಿದರು.
ಅವರು ಶನಿವಾರ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹೋಬಳಿ ಮಟ್ಟದ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮ ರೂಪರೇಷೆಗಳ ಕುರಿತು ಚರ್ಚಿಸಲು ಕರೆದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಈ ಅಭಿಯಾನದಲ್ಲಿ ರೈತರಿಗೆ ಕೃಷಿ, ಕೃಷಿಯೇತರ ಚಟುವಟಿಕೆ, ಬೆಳೆ ವಿಮೆ, ಕೃಷಿ ಸಾಲ ಬಗ್ಗೆ ವಿವರ ಮಾಹಿತಿಯನ್ನು ತಲುಪಿಸಬೇಕು. ಕೃಷಿ ಇಲಾಖೆಯಿಂದ ಕರಪತ್ರಗಳನ್ನು ಮುದ್ರಿಸಿ ಎಲ್ಲ ರೈತರಿಗೆ ತಲುಪುವ ಹಾಗೆ ನೋಡಿಕೊಳ್ಳಬೇಕು ಎಂದರು.

ಗ್ರಾಮೀಣ ಪ್ರದೇಶದ ರೈತರಿಗೆ ವ್ಯವಸಾಯ ಸೇವಾ ಸಹಕಾರ ಸಂಘಗಳ ಮೂಲಕ ರಸಗೊಬ್ಬರ ದೊರಕಿಸಲು ಅನುಕೂಲವಾಗುವ ಹಾಗೆಯೆ ಪಿ.ಓ.ಎಸ್. ಯಂತ್ರ ಹೊಂದಿರುವ ಹಾಗೂ ನವೀಕರಣ ಹೊಂದಿರುವ ಸಂಘಗಳನ್ನು ಗುರುತಿಸಿ ಅವುಗಳಿಗೆ ಸಮೀಪದ 2 ರಿಂದ 3 ವ್ಯವಸಾಯ ಸೇವಾ ಸಹಕಾರ ಸಂಘಗಳನ್ನು ಜೋಡಿಸಿದ್ದಲ್ಲಿ ರೈತರಿಗೆ ಅನುಕೂಲವಾಗುವುದು. ಜಿಲ್ಲೆಯಲ್ಲಿರುವ ಖಾಸಗಿ ರಸಗೊಬ್ಬರ ಡೀಲರ್‍ಗಳು ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರಗಳ ದಾಸ್ತಾನು ಮಾಡಿಕೊಳ್ಳಬೇಕೆಂದು ತಿಳಿಸಿದರು.
ಜಂಟಿ ಕೃಷಿ ನಿರ್ದೇಶಕ ರಿತೇಂದ್ರನಾಥ ಸುಗೂರ ಮಾತನಾಡಿ, ಜೂನ್ 4, 5 ಮತ್ತು 6ರಂದು ಪ್ರಥಮ ಹಂತವಾಗಿ 17 ಹೋಬಳಿಗಳಲ್ಲಿ ಹಾಗೂ ದ್ವಿತೀಯ ಹಂತವಾಗಿ ಜೂನ್ 7 ರಿಂದ 9ರವರೆಗೆ 15 ಹೋಬಳಿಗಳಲ್ಲಿ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಅಭಿಯಾನದ ಮೊದಲ ಮತ್ತು ಎರಡನೇ ದಿನ ಗ್ರಾಮ ಪಂಚಾಯಿತಿಗಳಲ್ಲಿ ಸಮಗ್ರ ಕೃಷಿ ಮಾಹಿತಿ ಘಟಕದೊಂದಿಗೆ ರೈತರಿಗೆ ಇಲಾಖಾ ಸೌಲಭ್ಯಗಳ ಕುರಿತು ಮಾಹಿತಿ, ಕೃಷಿ ತಾಂತ್ರಿಕತೆಗಳ ಅಳವಡಿಕೆ ಕುರಿತು ಪ್ರಾತ್ಯಕ್ಷಿಕೆ ಮತ್ತು ರೈತರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಲಾಗುವುದು. ಮೂರನೇ ದಿನ ಹೋಬಳಿ ಕೇಂದ್ರ ಸ್ಥಾನದಲ್ಲಿ ಕೃಷಿ ವಸ್ತು ಪ್ರದರ್ಶನ ಮತ್ತು ವಿಜ್ಞಾನಿಗಳೊಂದಿಗೆ ರೈತರ ಸಂವಾದ ನಡೆಸಲಾಗುವುದು ಎಂದು ವಿವರಿಸಿದರು.
ಪ್ರಥಮ ಹಂತವಾಗಿ ಅಫಜಲಪುರ ತಾಲೂಕಿನ ಅಫಜಲಪುರ ಮತ್ತು ಆತನೂರ ರೈತ ಸಂಪರ್ಕ ಕೇಂದ್ರ, ಆಳಂದ ತಾಲೂಕಿನ ಆಳಂದ ಮತ್ತು ನಿಂಬರಗಾ ರೈತ ಸಂಪರ್ಕ ಕೇಂದ್ರ, ಚಿಂಚೋಳಿ ತಾಲೂಕಿನ ಚಿಂಚೋಳಿ ಮತ್ತು ಚಿಮ್ಮನಚೋಡ ರೈತ ಸಂಪರ್ಕ ಕೇಂದ್ರ, ಚಿತ್ತಾಪುರ ತಾಲೂಕಿನ ಚಿತ್ತಾಪುರ, ನಾಲವಾರ, ಶಹಾಬಾದ ರೈತ ಸಂಪರ್ಕ ಕೇಂದ್ರ, ಕಲಬುರಗಿ ತಾಲೂಕಿನ ಕಲಬುರಗಿ, ಪಟ್ಟಣ, ಮಹಾಗಾಂವ ರೈತ ಸಂಪರ್ಕ ಕೇಂದ್ರ, ಜೇವರ್ಗಿ ತಾಲೂಕಿನ ಜೇವರ್ಗಿ, ಅಂದೋಲಾ, ಇಜೇರಿ ರೈತ ಸಂಪರ್ಕ ಕೇಂದ್ರ ಹಾಗೂ ಸೇಡಂ ತಾಲೂಕಿನ ಸೇಡಂ ಮತ್ತು ಮುಧೋಳ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮ ಜರುಗಿಸಲಾಗುವುದು. ಇದಕ್ಕಾಗಿ ಒಟ್ಟು 17 ವಾಹನಗಳನ್ನು ಸಿದ್ಧಪಡಿಸಲಾಗಿದ್ದು, ವಾಹನಗಳು ಎಲ್ಲ ಗ್ರಾಮಗಳಿಗೆ ಸಂಚರಿಸಿ ಮಾಹಿತಿ ನೀಡುವುದು ಎಂದರು.
ಸಭೆಯಲ್ಲಿ ಕೃಷಿ ಇಲಾಖೆ ಉಪ ನಿರ್ದೇಶಕ ಸಮದ್ ಪಟೇಲ್, ಉಪನಿರ್ದೇಶಕ ಬಾಲರಾಜ, ರೇಷ್ಮೆ ಇಲಾಖೆಯ ಉಪನಿರ್ದೇಶಕ ಉಪ್ಪಾರ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸುವರ್ಣಾ ಬಿ ಯದ್ಲಾಪುರ, ರಸಗೊಬ್ಬರ ಉತ್ಪಾದಕರು, ಮಾರಾಟಗಾರರು ಪಾಲ್ಗೊಂಡಿದ್ದರು.

ಹೆಸರು ಬೀಜದ ಸಮರ್ಪಕ ದಾಸ್ತಾನು ಮಾಡಿಕೊಳ್ಳಲು ಸೂಚನೆ
*****************************************************
ಕಲಬುರಗಿ,ಜೂ.02.(ಕ.ವಾ.)-ಕಲಬುರಗಿ ಜಿಲ್ಲೆಯಾದ್ಯಂತ ಜೂನ್ 4ರಿಂದ ಮಳೆ ಬರುವ ಸಂಭವಗಳಿವೆ. ಒಳ್ಳೆಯ ಮಳೆ ಬಂದಲ್ಲಿ ರೈತರು ಹೆಸರು ಬಿತ್ತುವರು. ಕಾರಣ ಜಿಲ್ಲೆಯಲ್ಲಿ ಹೆಸರು ಬೀಜದ ಸಮರ್ಪಕ ದಾಸ್ತಾನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಸೂಚಿಸಿದರು.
ಅವರು ಶನಿವಾರ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹೋಬಳಿ ಮಟ್ಟದ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮ ರೂಪರೇಷೆಗಳ ಕುರಿತು ಚರ್ಚಿಸಲು ಕರೆದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಹೆಸರು ಬೆಳೆಗೆ ಅವಶ್ಯಕವಿರುವ ರಸಗೊಬ್ಬರ ಸಹಿತ ದಾಸ್ತಾನು ಮಾಡಿಕೊಳ್ಳುವಂತೆ ತಿಳಿಸಿದರು.
ಈ ವರ್ಷ 22 ಬೆಳೆಗಳಿಗೆ ಬೆಳೆ ವಿಮೆ ಅವಕಾಶ ಕಲ್ಪಿಸಲಾಗಿದೆ. ಬೆಳೆ ವಿಮೆಗೆ ಯುನಿವರ್ಸಲ್ ಸೊಂಪೊ ಜನರಲ್ ಇನ್ಸುರೆನ್ಸ್ ಕಂಪನಿ ಗುರುತಿಸಲಾಗಿದ್ದು, ಈ ಕಂಪನಿಯ ಪ್ರತಿನಿಧಿಗಳು ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ತಮ್ಮ ಕಚೇರಿಯನ್ನು ಪ್ರಾರಂಭಿಸಿ ಕಡ್ಡಾಯವಾಗಿ ಕಚೇರಿಯಲ್ಲಿ ವಿಮಾ ಕಂಪನಿ ಪ್ರತಿನಿಧಿಗಳು ಇರುವ ಹಾಗೆ ನೋಡಿಕೊಳ್ಳಬೇಕು. ಬೆಳೆ ವಿಮೆ ನೋಂದಣಿಗೆ ಜುಲೈ 31 ಕೊನೆಯ ದಿನವಾಗಿದ್ದು, ಎಲ್ಲ ರೈತರು ಬೆಳೆ ವಿಮೆ ಮಾಡಿಸಿಕೊಳ್ಳಬೇಕು. ಬೆಳೆ ವಿಮೆ ಕಂಪನಿಯವರು ತಮ್ಮ ಕಚೇರಿಯಲ್ಲಿ ಹಾಜರಿದ್ದು, ರೈತರಿಗೆ ಸ್ಪಂದಿಸಬೇಕು. ರೈತರ ದೂರುಗಳಿಗೆ ಪರಿಹಾರ ನೀಡಬೇಕು. ಜಿಲ್ಲೆಯ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ವಿಮೆ ವಿಮಾ ದಾಖಲೀಕರಣ ಮಾಡಲಾಗುತ್ತಿದ್ದು, ಕಂಪನಿಯ ಪ್ರತಿನಿಧಿಗಳು ಹಾಜರಿದ್ದು, ಬೆಳೆ ವಿಮೆ ಅರ್ಜಿ ನಮೂನೆ ಭರ್ತಿ ಮಾಡಿಕೊಂಡು ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸೂಚಿಸಿದರು.
ಜಂಟಿ ಕೃಷಿ ನಿರ್ದೇಶಕ ರಿತೇಂದ್ರನಾಥ ಸುಗೂರ ಮಾತನಾಡಿ, ಕಲಬುರಗಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಒಟ್ಟು 6.72 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. ಈ ಪೈಕಿ ತೊಗರಿ 4.37 ಲಕ್ಷ ಹೆಕ್ಟೇರ್, ಉದ್ದು 27800 ಹೆಕ್ಟೇರ್, ಹೆಸರು 47000 ಹೆಕ್ಟೇರ್, ಸೋಯಾಬಿನ್ 15500 ಹೆಕ್ಟೇರ್ ಗುರಿ ಹೊಂದಲಾಗಿದೆ. ಇದಕ್ಕನುಗುಣವಾಗಿ ಒಟ್ಟು 82108.5 ಕ್ವಿಂಟಲ್ ಬೀಜದ ಬೇಡಿಕೆ ಇದೆ. 43742.5 ಕ್ವಿಂಟಲ್ ತೊಗರಿ, 2780 ಕ್ವಿಂಟಲ್ ಉದ್ದು, 4700 ಕ್ವಿಂಟಲ್ ಹೆಸರು ಹಾಗೂ 20000 ಕ್ವಿಂಟಲ್ ಸೋಯಾಬಿನ್ ಬೀಜಗಳ ಬೇಡಿಕೆ ಇದೆ. ಈಗಾಗಲೇ ರೈತ ಸಂಪರ್ಕ ಕೇಂದ್ರದಲ್ಲಿ ಬೀಜ ಮತ್ತು ರಸಗೊಬ್ಬರಗಳ ಸಮರ್ಪಕ ದಾಸ್ತಾನು ಮಾಡಲಾಗಿದೆ. ಇನ್ನೂ ಹೆಚ್ಚಿನ ಬೇಡಿಕೆಗೆ ಅನುಗುಣವಾಗಿ ಬೀಜ ಮತ್ತು ರಸಗೊಬ್ಬರಗಳ ಪೂರೈಕೆ ಮಾಡಲಾಗುವುದು ಎಂದು ತಿಳಿಸಿದರು.
ಕಳೆದ ವರ್ಷಕ್ಕಿಂತಲೂ ಒಂದು ಲಕ್ಷ ಹೆಕ್ಟೇರ್ ಈ ವರ್ಷ ತೊಗರಿ ಕ್ಷೇತ್ರ ಹೆಚ್ಚಾಗಿದೆ. ಬೆಳೆ ಬೀಜ ಕಟ್ಟುವ ಅಥವಾ ಬೆಳೆ ಕಟಾವಿಗೆ ಬರುವ ಸಂದರ್ಭದಲ್ಲಿ ಸೂರ್ಯಕಾಂತಿ ಬೆಳೆಗೆ ರೋಗ ಬಾಧೆ ಕಂಡು ಬರುತ್ತಿರುವುದರಿಂದ ಸೂರ್ಯಕಾಂತಿ ಬಿತ್ತನೆ ಕ್ಷೇತ್ರ ಕಳೆದ ವರ್ಷಕ್ಕಿಂತ ಕಡಿಮೆಯಾಗಿದೆ ಎಂದರು.

ಪ್ರಧಾನಮಂತ್ರಿ ಆವಾಸ್ ಯೋಜನೆ(ಗ್ರಾ): ಸರ್ವೇ ಕಾರ್ಯ ಆರಂಭ
**********************************************************
ಕಲಬುರಗಿ,ಜೂ.02.(ಕ.ವಾ.)- ಪ್ರಧಾನಮಂತ್ರಿ ಆವಾಸ್ ಯೋಜನೆ(ಗ್ರಾ) ಅಡಿಯಲ್ಲಿ ಫಲಾನುಭವಿಗಳಿಗೆ ವಸತಿ ಸೌಕರ್ಯ ಕಲ್ಪಿಸುವ ಸಂಬಂಧ ಕೇಂದ್ರ ಸರ್ಕಾರದಿಂದ ನೀಡಲಾದ ಫಲಾನುಭವಿಗಳ ಪಟ್ಟಿಯಲ್ಲಿ ಬಹಳಷ್ಟು ಗ್ರಾಮ ಪಂಚಾಯತಿಗಳ ಫಲಾನುಭವಿಗಳು ಕೈಬಿಟ್ಟಿದ್ದು, ಹೊಸದಾಗಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವಂತೆ ಸರ್ಕಾರ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಅರ್ಹರನ್ನು ಪಟ್ಟಿಯಲ್ಲಿ ಸೇರಿಸಲು ಸರ್ವೇ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಕಲಬುರಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೋರ್ಲಪಾಟಿ ತಿಳಿಸಿದ್ದಾರೆ.
2011ರ ಸಾಮಾಜಿಕ ಆರ್ಥಿಕ ಜಾತಿ ಜನಗಣತಿ ಆಧಾರದನ್ವಯ ಗ್ರಾಮೀಣ ಪ್ರದೇಶದಲ್ಲಿ ವಸತಿ ರಹಿತರ ಹಾಗೂ ನಿವೇಶನ ರಹಿತ ನಿವಾಸಿಗಳಿಗೆ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಆವಾಸ್ ಯೋಜನೆ (ಗ್ರಾ) ಅಡಿಯಲ್ಲಿ ಕೇಂದ್ರ ಸರ್ಕಾರ ನೀಡುವ ಪಟ್ಟಿಯಂತೆ ಫಲಾನುಭವಿಗಳಿಗೆ ವಸತಿ ಸೌಕರ್ಯ ನೀಡಬೇಕಾಗಿರುತ್ತದೆ.
ಈ ಸಂಬಂಧ ಕೇಂದ್ರ ಸರ್ಕಾರದಿಂದ ನೀಡಲಾದ ಫಲಾನುಭವಿಗಳ ಪಟ್ಟಿಯಲ್ಲಿ ಬಹಳಷ್ಟು ಗ್ರಾಮ ಪಂಚಾಯತಿಗಳ ಫಲಾನುಭವಿಗಳು ಕೈಬಿಟ್ಟಿದ್ದು, ಹೊಸದಾಗಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆÀ ಬಂದಿರುತ್ತದೆ. ಈ ನಿಟ್ಟಿನಲ್ಲಿ ಅರ್ಹರನ್ನು ಆಯ್ಕೆ ಮಾಡಿ ರಾಜೀವ ಗಾಂಧಿ ವಸತಿ ನಿಗಮಕ್ಕೆ ಡಾಟಾ ಟಪಲೋಡ್ ಮಾಡಬೇಕಾಗಿದ್ದು, ಈ ಕುರಿತು ಅಗತ್ಯ ಕ್ರಮ ವಹಿಸಲು ಎಲ್ಲಾ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಪಿ.ಡಿ.ಓ.ಗಳಿಗೆ ನಿರ್ದೇಶನ ನೀಡಲಾಗಿದೆ. ಪಟ್ಟಿಯಲ್ಲಿ ಕೈಬಿಟ್ಟಿರುವಂತಹ ಅರ್ಹ ಫಲಾನುಭವಿಗಳು ಇದ್ದಲ್ಲಿ ಅಂತಹವರು ಸಂಬಂಧಿಸಿದ ಪಿ.ಡಿ.ಓ.ಗಳಿಗೆ ಸಂಪರ್ಕಿಸುವಂತೆ ಕಲಬುರಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೋರ್ಲಪಾಟಿ ತಿಳಿಸಿದ್ದಾರೆ.
ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಫಲಾನುಭವಿಗಳು ಕೆಳಕಂಡಂತೆ ಅರ್ಹತೆ ಹೊಂದುವುದು ಕಡ್ಡಾಯವಾಗಿರುತ್ತದೆ:- ಅರ್ಜಿದಾರರು ಕಡ್ಡಾಯವಾಗಿ ಮಹಿಳೆಯಾಗಿರಬೇಕು (ವಿವಾಹಿತ ಅಥವಾ ಏಕ ಮಹಿಳಾ ಒಡೆತನದ ಗೃಹಣಿ), ಮಾಜಿ ಯೋಧರು, ವಿಧುರರು, ಅಂಗವಿಕಲರು ಹಾಗೂ ಹಿರಿಯ ನಾಗರಿಕರಾಗಿದ್ದಲ್ಲಿ ಪುರುಷರು ಸಹ ಅರ್ಹರಾಗಿರುತ್ತಾರೆ. ಅರ್ಜಿದಾರರ ಕುಟುಂಬವು ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದಿದ್ದು, ಬಡತನ ರೇಖೆಗಿಂತ ಕೆಳಗಿರಬೇಕು. ಸಾಮಾಜಿಕ ಆರ್ಥಿಕ ಜಾತಿ ಜನಗಣತಿ 2011ರ ಸಮೀಕ್ಷೆಯಂತೆ ವಸತಿ ರಹಿತರು, ಶೂನ್ಯ ಕೋಣೆ, ಒಂದು ಕೋಣೆ, ಎರಡು ಕೋಣೆಯೊಂದಿಗೆ ಕಚ್ಚಾ ಗೋಡೆ ಅಥವಾ ಕಚ್ಚಾ ಛಾವಣಿ ಹೊಂದಿದವರು ಅರ್ಹರಾಗಿರುತ್ತಾರೆ.
ಅರ್ಜಿದಾರರು ಅಥವಾ ಕುಟುಂಬದ ಯಾವುದೇ ಸದಸ್ಯರ ಹೆಸರಿನಲ್ಲಿ ಕರ್ನಾಟಕದ ಯಾವುದೇ ಭಾಗದಲ್ಲಿ ಸ್ವಂತ ಮನೆಯನ್ನು ಹೊಂದಿರಬಾರದು. ಶಿಥಿಲಗೊಂಡ ಮನೆ ಅಥವಾ ಗುಡಿಸಲಿನಲ್ಲಿ ವಾಸಿಸುತ್ತಿರುವವರು ಅರ್ಹರು. ಅರ್ಜಿದಾರರು ಸ್ವಂತ ನಿವೇಶನ ಹೊಂದಿದ್ದು, ನಿವೇಶನಕ್ಕೆ ಸಂಬಂಧಿಸಿದಂತೆ ಖಾತೆ ಹೊಂದಿರಬೇಕು. (ಪಾರಂಪರಿಕ ಅರಣ್ಯ ಹಕ್ಕುಗಳ ಕಾಯ್ದೆಯನ್ವಯ ಜಿಲ್ಲಾ ಸಮಿತಿಯಿಂದ ನೀಡಲಾದ ಹಕ್ಕುಪತ್ರ ಪಡೆದಿದ್ದಲ್ಲಿ ವಸತಿ ಸೌಕರ್ಯ ಪಡೆಯಲು ಪರಿಗಣಿಸಬಹುದಾಗಿದೆ). ಬೇರೆ ಯಾವುದೇ ಯೋಜನೆ, ಇಲಾಖೆಯಿಂದ ಈಗಾಗಲೇ ವಸತಿ ಸೌಲಭ್ಯ ಪಡೆದಿರಬಾರದು ಎಂದು ಅವರು ತಿಳಿಸಿದ್ದಾರೆ.

ಜೂನ್ 3ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
*********************************************
ಕಲಬುರಗಿ,ಜೂ.02.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗದಿಂದ 11ಕೆ.ವಿ. ದೇವಿನಗರ, 11ಕೆ.ವಿ. ಟಿ.ವಿ. ಸ್ಟೇಶನ್, 11ಕೆ.ವಿ. ಜೇವರ್ಗಿ ಕಾಲೋನಿ ಫೀಡರ್‍ಗಳ ಮೇಲೆ ತುರ್ತು ನಿರ್ವಹಣಾ ಕಾರ್ಯ ಕೈಗೆತ್ತಿಕೊಂಡಿರುವ ಪ್ರಯುಕ್ತ ಜೂನ್ 3ರಂದು ಬೆಳಗಿನ 10ರಿಂದ ಸಂಜೆ 4ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸದರಿ ಕೇಂದ್ರದ ಮೇಲೆ ಬರುವ ಫೀಡರ್ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.
11 ಕೆ.ವಿ. ದೇವಿ ನಗರ ಫೀಡರ್: ದೇವಿ ನಗರ, ಸಂತೋಷ ಕಾಲೋನಿ, ಖಾದ್ರಿ ಚೌಕ್, ನಬಿ ಕಾಲೋನಿ, ಚಿಂಚೋಳಿ ಲೇಔಟ್, ಜಾಫರಾಬಾದ, ಪ್ರಭುದೇವ ನಗರ, ಮಾಳೇವಾಡಿ, ಜೆ.ಆರ್. ನಗರ, ಶೇಖ್ ನಗರ, ವಿಶ್ವರಾಥÀ್ಯ ಕಾಲೋನಿ, ಮಲ್ಲಿಕಾರ್ಜುನ ದೇವಸ್ಥಾನ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
11ಕೆ.ವಿ. ಟಿ.ವಿ.ಸ್ಟೇಶನ ಫೀಡರ್: ಮುನಿಂ ಸಂಘ, ಕಾಕಡೆ ಚೌಕ್À, ರಾಮನಗರ, ರೇವಣಸಿದ್ದೇಶ್ವರ ಕಾಲೋನಿ, ಕೆ.ಕೆ. ನಗರ, ಶಿವಾಜಿ ನಗರ ಮತ್ತು ಭವಾನಿ ನಗರ.
11 ಕೆ.ವಿ ಜೇವರ್ಗಿ ಕಾಲೋನಿ ಫೀಡರ್: ಅಂಬಿಕಾ ನಗರ, ಪಿ ಆ್ಯಂಡ್ ಟಿ ಕ್ವಾರ್ಟರ್ಸ್, ಜೀವನ ಪ್ರಕಾಶ ಶಾಲೆ, ಕಾರ್ಪೋರೇಶನ್ ಲೇಔಟ್, ನ್ಯೂ ಮಾಕಾ ಲೇಔಟ್, ಪವಾರ ಲೇಔಟ್, ಶ್ರೀನಗರ, ಸಂತೋಷ ಕಾಲೋನಿ, ಶ್ರೀ.ಹರಿಕೃಷ್ಣ ನಗರ ವರ್ಗಿಸ್ ಅಪಾರ್ಟ್‍ಮೆಂಟ್, ಉದನೂರ ರಸ್ತೆ, ಮಾಣಿಕ ಪ್ರಭು ಕಾಲೋನಿ , ವೀರಭದ್ರೇಶ್ವರ ಕಾಲೋನಿ, ಜಯತೀರ್ಥ ಕಲ್ಯಾಣ ಮಂಟಪ, ಬಿದ್ದಾಪುರ ಕಾಲೋನಿ, ಹೈಕೋರ್ಟ್, ಸಿರಸಗಿ ಮಡ್ಡಿ ಮತ್ತು ಕೋಬ್ರಾ ಕಾಲೋನಿ, ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.

ಹೀಗಾಗಿ ಲೇಖನಗಳು news and photo Date: 2-6-2018
ಎಲ್ಲಾ ಲೇಖನಗಳು ಆಗಿದೆ news and photo Date: 2-6-2018 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ news and photo Date: 2-6-2018 ಲಿಂಕ್ ವಿಳಾಸ https://dekalungi.blogspot.com/2018/06/news-and-photo-date-2-6-2018.html
0 Response to "news and photo Date: 2-6-2018"
ಕಾಮೆಂಟ್ ಪೋಸ್ಟ್ ಮಾಡಿ