ಶೀರ್ಷಿಕೆ : ಕೊಪ್ಪಳ ಜಿಲ್ಲೆಯಲ್ಲಿ 130 ಮಿ.ಮೀ. ಉತ್ತಮ ಮಳೆ : 2.5 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ
ಲಿಂಕ್ : ಕೊಪ್ಪಳ ಜಿಲ್ಲೆಯಲ್ಲಿ 130 ಮಿ.ಮೀ. ಉತ್ತಮ ಮಳೆ : 2.5 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ
ಕೊಪ್ಪಳ ಜಿಲ್ಲೆಯಲ್ಲಿ 130 ಮಿ.ಮೀ. ಉತ್ತಮ ಮಳೆ : 2.5 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ
ಕೊಪ್ಪಳ ಜೂ. 04 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಈ ವರ್ಷ ಮುಂಗಾರು ಪ್ರಾರಂಭಕ್ಕೂ ಮುನ್ನವೇ ಉತ್ತಮ ಮಳೆಯಾಗಿದ್ದು ರೈತರು ಕೃಷಿ ಚಟುವಟಿಕೆಯತ್ತ ಮುಖ ಮಾಡಿದ್ದಾರೆ. ಪ್ರಸಕ್ತ ವರ್ಷದ ಜನವರಿ ಯಿಂದ ಜೂನ್ 03 ರವರೆಗೆ ಜಿಲ್ಲೆಯಲ್ಲಿ ಸರಾಸರಿ 130 ಮಿ.ಮೀ. ಮಳೆಯಾಗಿದ್ದು, 2. 52 ಲಕ್ಷ ಹೆಕ್ಟೇರ್ ನಷ್ಟು ಬಿತ್ತನೆಯ ಗುರಿ ಹೊಂದಲಾಗಿದೆ.
ಮಳೆ ಪ್ರಮಾಣ :
*****ಕೊಪ್ಪಳ ಜಿಲ್ಲೆಯಲ್ಲಿ ವಾಡಿಕೆಯಂತೆ 2018 ರ ಜನವರಿ 01 ರಿಂದ ಈವರಗೆ ಸರಾಸರಿ 90 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ 130 ಮಿ.ಮೀ. ನಷ್ಟು ಉತ್ತಮ ಮಳೆಯಾಗಿದೆ. ಹೀಗಾಗಿ ಶೇ. 43 ರಷ್ಟು ಹೆಚ್ಚು ಮಳೆಯಾಗಿದೆ. ಈ ಪೈಕಿ ಕೊಪ್ಪಳ ತಾಲೂಕಿನಲ್ಲಿ ಅತಿ ಹೆಚ್ಚು 171. 7 ಮಿ.ಮೀ. ಮಳೆಯಾಗಿದ್ದು, ಗಂಗಾವತಿ ತಾಲೂಕಿನಲ್ಲಿ 91. 6 ಮಿ.ಮೀ. ಮಳೆಯಾಗಿದೆ.
ಗಂಗಾವತಿ ತಾಲೂಕಿನಲ್ಲಿ ಈ ವರ್ಷ ಜನವರಿ 01 ರಿಂದ ಈವರಗೆ 76. 5 ಮಿ.ಮೀ. ಮಳೆಯ ಬದಲಿಗೆ 91. 6 ಮಿ.ಮೀ. ನಷ್ಟು ಮಳೆಯಾಗಿದ್ದು, ಶೇ. 20 ರಷ್ಟು ಹೆಚ್ಚು ಮಳೆಯಾಗಿದೆ. ತಾಲೂಕಿನ ಗಂಗಾವತಿ ಹೋಬಳಿಯಲ್ಲಿ ಅತಿ ಹೆಚ್ಚು 147. 9 ಮಿ.ಮೀ. ಮಳೆಯಾಗಿದ್ದು, ನವಲಿ ಹೋಬಳಿಯಲ್ಲಿ ಅತಿ ಕಡಿಮೆ ಅಂದರೆ 63. 5 ಮಿ.ಮೀ. ಮಳೆಯಾಗಿದೆ. ಉಳಿದಂತೆ ಹುಲಿಹೈದರ-81. 9 ಮಿ.ಮೀ., ಕನಕಗಿರಿ-109. 1 ಮಿ.ಮಿ ., ಕಾರಟಗಿ- 83. 5, ಮರಳಿ- 116. 2 ಮಿ.ಮೀ. ಸಿದ್ದಾಪುರ- 71. ಮಿ.ಮೀ. ಹಾಗೂ ವೆಂಕಟಗಿರಿ ಹೋಬಳಿಯಲ್ಲಿ 85.7 ಮಿ.ಮೀ. ಮಳೆಯಾಗಿದೆ.
ಕೊಪ್ಪಳ ತಾಲೂಕಿನಲ್ಲಿ ಇದೇ ಅವಧಿಯಲ್ಲಿ 92. 8 ಮಿ.ಮೀ. ವಾಡಿಕೆ ಮಳೆಯ ಬದಲಿಗೆ 171. 7 ಮಿ.ಮೀ. ಮಳೆಯಾಗಿದ್ದು, ಶೇ. 85 ರಷ್ಟು ಹೆಚ್ಚು ಮಳೆ ಸುರಿದಿದೆ. ಹಿಟ್ನಾಳ ಹೋಬಳಿಯಲ್ಲಿ ಅತಿ ಹೆಚ್ಚು 223. 8 ಮಿ.ಮೀ. ಮಳೆಯಾಗಿದೆ. ಉಳಿದಂತೆ ಇರಕಲ್ಲಗಡ ಹೋಬಳಿಯಲ್ಲಿ 143. 7 ಮಿ.ಮೀ. ಮಳೆಯಾಗಿದೆ. ಅಳವಂಡಿ-170. 1 ಮಿ.ಮೀ., ಕೊಪ್ಪಳ- 170. 2 ಮಿ.ಮೀ. ಮಳೆಯಾಗಿದೆ.
ಕುಷ್ಟಗಿ ತಾಲೂಕಿನಲ್ಲಿ 100. 2 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಇಲ್ಲಿ 99 ಮಿ.ಮೀ. ಮಾತ್ರ ಮಳೆಯಾಗಿದ್ದು, ಶೇ. 01 ರಷ್ಟು ಮಾತ್ರ ಕೊರತೆ ಕಂಡುಬಂದಿದೆ. ಹನಮನಾಳ ಹೋಬಳಿಯಲ್ಲಿ ಅತಿ ಹೆಚ್ಚು 111. 8 ಮಿ.ಮೀ. ಮಳೆಯಾಗಿದ್ದು, ತಾವರಗೇರಾ- 87. 4 ಮಿ.ಮೀ., ಕುಷ್ಟಗಿ- 89. 8, ಹನಮಸಾಗರ- 110. 8 ಮಿ.ಮೀ. ಮಳೆಯಾಗಿದೆ.
ಯಲಬುರ್ಗಾ ತಾಲೂಕಿನಲ್ಲಿ 91. 9 ಮಿ.ಮೀ. ವಾಡಿಕೆ ಮಳೆ ಬದಲಿಗೆ 152. 5 ಮಿ.ಮೀ. ಮಳೆಯಾಗಿದ್ದು, ಶೇ. 66 ರಷ್ಟು ಹೆಚ್ಚು ಮಳೆಯಾಗಿದೆ. ಕುಕನೂರು ಹೋಬಳಿಯಲ್ಲಿ ಅತಿ ಹೆಚ್ಚು ಅಂದರೆ 197 ಮಿ.ಮೀ. ಮಳೆಯಾಗಿದ್ದು, ಉಳಿದಂತೆ ಯಲಬುರ್ಗಾ- 157.5, ಹಿರೇವಂಕಲಕುಂಟಾ- 102. 5, ಮಂಗಳೂರ ಹೋಬಳಿಯಲ್ಲಿ 123. 9 ಮಿ.ಮೀ. ಮಳೆಯಾಗಿದೆ.
ಬಿತ್ತನೆ ಶುರು :
******ಜಿಲ್ಲೆಯಲ್ಲಿ ಈ ವರ್ಷ ಉತ್ತಮ ಮಳೆಯ ಭರವಸೆ ಮೂಡುತ್ತಿದ್ದು, ರೈತರು ಉತ್ತಮ ಬೆಳೆ ಬೆಳೆದು, ಒಳ್ಳೆಯ ಲಾಭ ಕಂಡುಕೊಳ್ಳುವ ಆಶಾಭಾವನೆ ಹೊಂದಿದ್ದಾರೆ. ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಒಟ್ಟು 252500 ಹೆಕ್ಟೇರ್ ಬಿತ್ತನೆಯ ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲಿ ಏಕದಳ ಬೆಳೆಗಳು- 145700 ಹೆ. ಬಿತ್ತನೆ ಗುರಿ ಇದ್ದು, ದ್ವಿದಳ ಬೆಳೆಗಳು- 50000 ಹೆ., ಎಣ್ಣೆಕಾಳು- 50800 ಹೆ., ವಾಣಿಜ್ಯ ಬೆಳೆ- 6000 ಸೇರಿದಂತೆ ಒಟ್ಟು 252500 ಹೆ. ಬಿತ್ತನೆ ಗುರಿ ಹೊಂದಲಾಗಿದೆ.
ಕೊಪ್ಪಳ ತಾಲೂಕಿನಲ್ಲಿ ಏಕದಳ ಬೆಳೆಗಳು- 37575 ಹೆ. ಬಿತ್ತನೆ ಗುರಿ ಇದ್ದು, ದ್ವಿದಳ ಬೆಳೆಗಳು- 10050 ಹೆ., ಎಣ್ಣೆಕಾಳು- 14350 ಹೆ., ವಾಣಿಜ್ಯ ಬೆಳೆ- 2450 ಸೇರಿದಂತೆ ಒಟ್ಟು 64425 ಹೆ. ಬಿತ್ತನೆ ಗುರಿ ಹೊಂದಲಾಗಿದೆ.
ಕುಷ್ಟಗಿ ತಾಲೂಕಿನಲ್ಲಿ ಏಕದಳ ಬೆಳೆಗಳು- 34875 ಹೆ. ಬಿತ್ತನೆ ಗುರಿ ಇದ್ದು, ದ್ವಿದಳ ಬೆಳೆಗಳು- 17150 ಹೆ., ಎಣ್ಣೆಕಾಳು- 14350 ಹೆ., ವಾಣಿಜ್ಯ ಬೆಳೆ- 1200 ಸೇರಿದಂತೆ ಒಟ್ಟು 67575 ಹೆ. ಬಿತ್ತನೆ ಗುರಿ ಹೊಂದಲಾಗಿದೆ.
ಯಲಬುರ್ಗಾ ತಾಲೂಕಿನಲ್ಲಿ ಏಕದಳ ಬೆಳೆಗಳು-23475 ಹೆ. ಬಿತ್ತನೆ ಗುರಿ ಇದ್ದು, ದ್ವಿದಳ ಬೆಳೆಗಳು- 17150 ಹೆ., ಎಣ್ಣೆಕಾಳು- 16750 ಹೆ., ವಾಣಿಜ್ಯ ಬೆಳೆ- 1070 ಸೇರಿದಂತೆ ಒಟ್ಟು 56445 ಹೆ. ಬಿತ್ತನೆ ಗುರಿ ಹೊಂದಲಾಗಿದೆ.
ಗಂಗಾವತಿ ತಾಲೂಕಿನಲ್ಲಿ ಏಕದಳ ಬೆಳೆಗಳು-49775 ಹೆ. ಬಿತ್ತನೆ ಗುರಿ ಇದ್ದು, ದ್ವಿದಳ ಬೆಳೆಗಳು- 7650 ಹೆ., ಎಣ್ಣೆಕಾಳು- 5350 ಹೆ., ವಾಣಿಜ್ಯ ಬೆಳೆ- 1280 ಸೇರಿದಂತೆ ಒಟ್ಟು 64055 ಹೆ. ಬಿತ್ತನೆ ಗುರಿ ಹೊಂದಲಾಗಿದೆ. ಈ ಪೈಕಿ ತುಂಗಭದ್ರಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿ 35000 ಹೆ. ಬಿತ್ತನೆ ಪ್ರದೇಶವಿದ್ದು, ತುಂಗಭದ್ರಾ ಜಲಾಶಯದಿಂದ ಬಿಡುವ ನೀರನ್ನೇ ಇಲ್ಲಿನ ರೈತರು ಅವಲಂಬಿಸಿದ್ದಾರೆ.
ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆಯಾಗುತ್ತಿದ್ದು, ರೈತರು ಈಗಷ್ಟೇ ಕೃಷಿ ಚಟುವಟಿಕೆಯಲ್ಲಿ ಉತ್ಸಾಹದಿಂದ ತೊಡಗಿಸಿಕೊಂಡಿದ್ದಾರೆ. ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜ, ಗೊಬ್ಬರದ ಯಾವುದೇ ಕೊರತೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಕೊಪ್ಪಳ ಜಿಲ್ಲೆಯಲ್ಲಿ 130 ಮಿ.ಮೀ. ಉತ್ತಮ ಮಳೆ : 2.5 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ
ಎಲ್ಲಾ ಲೇಖನಗಳು ಆಗಿದೆ ಕೊಪ್ಪಳ ಜಿಲ್ಲೆಯಲ್ಲಿ 130 ಮಿ.ಮೀ. ಉತ್ತಮ ಮಳೆ : 2.5 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ 130 ಮಿ.ಮೀ. ಉತ್ತಮ ಮಳೆ : 2.5 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಲಿಂಕ್ ವಿಳಾಸ https://dekalungi.blogspot.com/2018/06/130-25.html
0 Response to "ಕೊಪ್ಪಳ ಜಿಲ್ಲೆಯಲ್ಲಿ 130 ಮಿ.ಮೀ. ಉತ್ತಮ ಮಳೆ : 2.5 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ"
ಕಾಮೆಂಟ್ ಪೋಸ್ಟ್ ಮಾಡಿ