ಐಎಎಸ್/ಕೆಎಎಸ್ ಕೋಚಿಂಗ್ ಸೆಂಟರ್ ಮಂಜೂರಾತಿಗೆ ಪ್ರಾಮಾಣೀಕ ಯತ್ನ- ರಾಘವೇಂದ್ರ ಹಿಟ್ನಾಳ

ಐಎಎಸ್/ಕೆಎಎಸ್ ಕೋಚಿಂಗ್ ಸೆಂಟರ್ ಮಂಜೂರಾತಿಗೆ ಪ್ರಾಮಾಣೀಕ ಯತ್ನ- ರಾಘವೇಂದ್ರ ಹಿಟ್ನಾಳ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಐಎಎಸ್/ಕೆಎಎಸ್ ಕೋಚಿಂಗ್ ಸೆಂಟರ್ ಮಂಜೂರಾತಿಗೆ ಪ್ರಾಮಾಣೀಕ ಯತ್ನ- ರಾಘವೇಂದ್ರ ಹಿಟ್ನಾಳ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಐಎಎಸ್/ಕೆಎಎಸ್ ಕೋಚಿಂಗ್ ಸೆಂಟರ್ ಮಂಜೂರಾತಿಗೆ ಪ್ರಾಮಾಣೀಕ ಯತ್ನ- ರಾಘವೇಂದ್ರ ಹಿಟ್ನಾಳ
ಲಿಂಕ್ : ಐಎಎಸ್/ಕೆಎಎಸ್ ಕೋಚಿಂಗ್ ಸೆಂಟರ್ ಮಂಜೂರಾತಿಗೆ ಪ್ರಾಮಾಣೀಕ ಯತ್ನ- ರಾಘವೇಂದ್ರ ಹಿಟ್ನಾಳ

ಓದಿ


ಐಎಎಸ್/ಕೆಎಎಸ್ ಕೋಚಿಂಗ್ ಸೆಂಟರ್ ಮಂಜೂರಾತಿಗೆ ಪ್ರಾಮಾಣೀಕ ಯತ್ನ- ರಾಘವೇಂದ್ರ ಹಿಟ್ನಾಳ

ಕೊಪ್ಪಳ ಜೂ. 25 (ಕರ್ನಾಟಕ ವಾರ್ತೆ): ಶೈಕ್ಷಣಿಕವಾಗಿ ಹಿಂದುಳಿದಿರುವ ಕೊಪ್ಪಳ ಜಿಲ್ಲೆಯ ಯುವ ಪೀಳಿಗೆಯ ಭವಿಷ್ಯ ಉತ್ತಮ ಪಡಿಸುವ ನಿಟ್ಟಿನಲ್ಲಿ ಕೊಪ್ಪಳಕ್ಕೆ ಐಎಎಸ್/ಕೆಎಎಸ್ ನಂತಹ ಉನ್ನತ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವಂತಹ ಕೋಚಿಂಗ್ ಸೆಂಟರ್ ಮಂಜೂರಾತಿಗೆ ಪ್ರಾಮಾಣಿಕ ಯತ್ನ ಮಾಡಲಾಗುವುದು ಎಂದು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಹೇಳಿದರು.

     ಕೊಪ್ಪಳ ನಗರದಲ್ಲಿ ನೂತನವಾಗಿ 02 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಕಟ್ಟಡವನ್ನು ಸೋಮವಾರದಂದು ಉದ್ಘಾಟಿಸಿ ಅವರು ಮಾತನಾಡಿದರು.

     ಶೈಕ್ಷಣಿಕವಾಗಿ ಹಿಂದುಳಿದಿರುವ ಕೊಪ್ಪಳ ಜಿಲ್ಲೆಗೆ ಸರ್ಕಾರದಿಂದ ಹಲವು ಶಿಕ್ಷಣ ಸಂಸ್ಥೆಗಳನ್ನು ಮಂಜೂರು ಮಾಡಿಸಲಾಗಿದೆ.  ಈಗಾಗಲೆ ಕೊಪ್ಪಳದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು, ಪಿ.ಜಿ. ಸೆಂಟರ್ ಅಲ್ಲದೆ ಸಮೀಪದ ತಳಕಲ್‍ನಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜನ್ನು ಮಂಜೂರು ಮಾಡಿಸುವ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರ ಹಲವು ಕೊಡುಗೆಗಳನ್ನು ನೀಡಿದೆ.  ಕೊಪ್ಪಳ ಜಿಲ್ಲೆಯ ಯುವ ಜನರಿಗೆ ಐಎಎಸ್, ಕೆಎಎಸ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತಮ ತರಬೇತಿ ನೀಡುವ ವ್ಯವಸ್ಥೆ ಸದ್ಯ ಇಲ್ಲ.  ಸರ್ಕಾರದಿಂದಲೇ ಇಂತಹ ಕೋಚಿಂಗ್ ಸೆಂಟರ್ ಅನ್ನು ಕೊಪ್ಪಳದಲ್ಲಿ ಪ್ರಾರಂಭಿಸಲು ಸರ್ಕಾರದ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.  ಸದ್ಯ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಕಟ್ಟಡಕ್ಕೆ ಇನ್ನಷ್ಟು ಕೊಠಡಿಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಈಗಾಗಲೆ ಯೋಜಿಸಲಾಗಿದ್ದು, ಇನ್ನೂ ಒಂದು ಕೋಟಿ ರೂ. ಗಳ ಅನುದಾನದಡಿ ಕಾಲೇಜಿಗೆ ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಿ, ವಿದ್ಯಾರ್ಥಿನಿಯರಿಗೆ ಅನುಕೂಲ ಮಾಡಿಕೊಡಲಾಗುವುದು.  ಜಿಲ್ಲೆಯ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉತ್ತಮ ಫಲಿತಾಂಶವನ್ನು ತಂದು, ರಾಜ್ಯಕ್ಕೆ ಕೀರ್ತಿ ತರುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಹೇಳಿದರು.
     ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಹೆಚ್.ಎಸ್. ಪಾಟೀಲ್, ಕಾಲೇಜಿನ ಡಾ. ಪ್ರಭುರಾಜ ನಾಯಕ್, ಪ್ರಾಚಾರ್ಯರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
 


ಹೀಗಾಗಿ ಲೇಖನಗಳು ಐಎಎಸ್/ಕೆಎಎಸ್ ಕೋಚಿಂಗ್ ಸೆಂಟರ್ ಮಂಜೂರಾತಿಗೆ ಪ್ರಾಮಾಣೀಕ ಯತ್ನ- ರಾಘವೇಂದ್ರ ಹಿಟ್ನಾಳ

ಎಲ್ಲಾ ಲೇಖನಗಳು ಆಗಿದೆ ಐಎಎಸ್/ಕೆಎಎಸ್ ಕೋಚಿಂಗ್ ಸೆಂಟರ್ ಮಂಜೂರಾತಿಗೆ ಪ್ರಾಮಾಣೀಕ ಯತ್ನ- ರಾಘವೇಂದ್ರ ಹಿಟ್ನಾಳ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಐಎಎಸ್/ಕೆಎಎಸ್ ಕೋಚಿಂಗ್ ಸೆಂಟರ್ ಮಂಜೂರಾತಿಗೆ ಪ್ರಾಮಾಣೀಕ ಯತ್ನ- ರಾಘವೇಂದ್ರ ಹಿಟ್ನಾಳ ಲಿಂಕ್ ವಿಳಾಸ https://dekalungi.blogspot.com/2018/06/blog-post_91.html

Subscribe to receive free email updates:

0 Response to "ಐಎಎಸ್/ಕೆಎಎಸ್ ಕೋಚಿಂಗ್ ಸೆಂಟರ್ ಮಂಜೂರಾತಿಗೆ ಪ್ರಾಮಾಣೀಕ ಯತ್ನ- ರಾಘವೇಂದ್ರ ಹಿಟ್ನಾಳ"

ಕಾಮೆಂಟ್‌‌ ಪೋಸ್ಟ್‌ ಮಾಡಿ