ಶೀರ್ಷಿಕೆ : ಯುವತಿ ಅಪಹಣ ಶಂಕೆ : ಪತ್ತೆಗೆ ಸಹಕರಿಸಲು ಮನವಿ
ಲಿಂಕ್ : ಯುವತಿ ಅಪಹಣ ಶಂಕೆ : ಪತ್ತೆಗೆ ಸಹಕರಿಸಲು ಮನವಿ
ಯುವತಿ ಅಪಹಣ ಶಂಕೆ : ಪತ್ತೆಗೆ ಸಹಕರಿಸಲು ಮನವಿ

ಕೊಪ್ಪಳ ಜೂ. 25 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕಿನ ಶಿವಪೂರ ಗ್ರಾಮದ ಶಿಲ್ಪ (16) ತಾಯಿ ನಾಗವ್ವ ಮುಂಡರಗಿ ಎಂಬ ಯುವತಿ ಮಾರ್ಚ್. 23 ರಂದು ಅಪಹರಣಕ್ಕೊಳಗಾಗಿದ್ದು, ಪತ್ತೆಗೆ ಸಹಕರಿಸುವಂತೆ ಮುನಿರಾಬಾದ್ ಪೆÇಲೀಸ್ ಠಾಣೆಯ ಪೆÇಲೀಸ್ ಸಬ್ ಇನ್ಸಪೆಕ್ಟರ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಶಿಲ್ಪ (16) ತಾಯಿ ನಾಗವ್ವ ಮುಂಡರಗಿ ಎಂಬ ಯುವತಿ ಮಾರ್ಚ್. 23 ರಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ತಮ್ಮ ಹೂವಿನ ತೋಟಕ್ಕೆ ಹೋಗಿದ್ದ ಸಮಯದಲ್ಲಿ ಆರೋಪಿತನಾದ ಶಿವಪೂರ ಗ್ರಾಮದ ಸಿದ್ದಪ್ಪ @ ಸಿದ್ದು ತಂದೆ ಮೂಕಪ್ಪ ಶೆಲ್ಯೂಡಿ ಇವನು ಯುವತಿಗೆ ಪುಸಲಾಯಿಸಿ ಅಪಹರಣ ಮಾಡಿಕೊಂಡು ಹೋಗಿರುತ್ತಾನೆ ಎಂದು ಯುವತಿಯ ತಾಯಿ ನಾಗವ್ವ ಮುಂಡರಗಿ ಅವರು ಮುನಿರಾಬಾದ ಪೆÇಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಪಹರಣಕ್ಕೊಳಗಾದ ಯುವತಿಯ ಚಹರೆ ವಿವರ ಇಂತಿದೆ, ಹೆಸರು : ಶಿಲ್ಪ ತಾಯಿ ನಾಗವ್ವ ಮುಂಡರಗಿ (16), ಎತ್ತರ 4.5 ಅಡಿ, ತಳ್ಳನೆಯ ಮೈಕಟ್ಟು, ಕೆಂಪನೆಯ ಮೈಬಣ್ಣ ಹೊಂದಿದ್ದಾಳೆ. ಅಪಹರಣಕ್ಕೊಳಗಾದ ಅರಿಶಿನ ಬಣ್ಣದ ಚೂಡಿ ಧರಿಸಿದ್ದು, ಕನ್ನಡ ಭಾಷೆಯನ್ನು ಮಾತನಾಡುತ್ತಾಳೆ.
ಈ ಯುವತಿಯ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ಕೊಪ್ಪಳ ಎಸ್.ಪಿ ಕಛೇರಿ ದೂ.ಸಂ 08539-230111, ಕೊಪ್ಪಳ ಡಿ.ಎಸ್.ಪಿ ದೂ.ಸಂ 08539-230432, ಮೊ.ಸಂ-9480803720, ಸಿ.ಪಿ.ಐ ಕೊಪ್ಪಳ ಗ್ರಾಮೀಣ ದೂ.ಸಂ 08539-222433, ಮೊ.ಸಂ-9480803731 ಹಾಗೂ ಪಿ.ಎಸ್.ಐ ಮುನಿರಾಬಾದ ದೂ.ಸಂ 08539-270333, ಮೊ.ಸಂ-9480803748, ಇಲ್ಲಿಗೆ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.
ಹೀಗಾಗಿ ಲೇಖನಗಳು ಯುವತಿ ಅಪಹಣ ಶಂಕೆ : ಪತ್ತೆಗೆ ಸಹಕರಿಸಲು ಮನವಿ
ಎಲ್ಲಾ ಲೇಖನಗಳು ಆಗಿದೆ ಯುವತಿ ಅಪಹಣ ಶಂಕೆ : ಪತ್ತೆಗೆ ಸಹಕರಿಸಲು ಮನವಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಯುವತಿ ಅಪಹಣ ಶಂಕೆ : ಪತ್ತೆಗೆ ಸಹಕರಿಸಲು ಮನವಿ ಲಿಂಕ್ ವಿಳಾಸ https://dekalungi.blogspot.com/2018/06/blog-post_24.html
0 Response to "ಯುವತಿ ಅಪಹಣ ಶಂಕೆ : ಪತ್ತೆಗೆ ಸಹಕರಿಸಲು ಮನವಿ"
ಕಾಮೆಂಟ್ ಪೋಸ್ಟ್ ಮಾಡಿ